ದೈನಂದಿನ ಅಪರಾದ ವರದಿ.
ದಿನಾಂಕ 21.03.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
3
|
ಮನೆ ಕಳವು ಪ್ರಕರಣ
|
:
|
2
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
2
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
2
|
ಇತರ ಪ್ರಕರಣ
|
:
|
3
|
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಯಲ್ಲಪ್ಪ ಇವರ ಮಗನಾದ ನಾಗಪ್ಪ 25 ವರ್ಷ ಈತನು ದಿನಾಂಕ: 12-3-2015 ರಂದು ಆತನ ಹೆಂಡತಿ ನಾಗಮ್ಮಳ ತವರು ಮನೆಯಾದ ಶಿರೂರಿಗೆ ಬಿಟ್ಟು ಬರಲು ಹೋಗಿ ದಿನಾಂಕ; 14-3-2015 ರಂದು ಅಲ್ಲಿಂದ ವಾಪಾಸು ಕುಳಾಯಿಗೆ ಹೋಗುತ್ತೇನೆಂದು ಹೇಳಿ ಬಂದಿದ್ದು, ಆದರೆ ಈ ತನಕ ಕುಳಾಯಿಯ ಮನೆಗೆ ಬಾರದೇ ಕಾಣೆಯಾಗಿದ್ದು, ಆತನ ಮೊಬೈಲ್ ದೂರವಾಣಿ ಸ್ವೀಚ್ ಆಪ್ ಆಗಿದ್ದು, ಆತನು ಮಂಗಳೂರು ಲಾಲ್‌ಬಾಗ್‌ನ ಪಬ್ಬಾಸ್ ನಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯೊಂದಿಗೆ ಹೋಗಿರುವುದಾಗಿ ಸಂಶಯ ಇರುವುದಾಗಿ, ಕಾಣೆಯಾದ ನಾಗಪ್ಪನ ಚಹರೆ ಹೆಸರು: ನಾಗಪ್ಪ, ವಯಸ್ಸು 25 ವರ್ಷ, ಸಾಧಾರಣ ಶರೀರ, ಎಣ್ಣೆ ಕಪ್ಪು ಮೈ ಬಣ್ಣ . ಕಪ್ಪು ಪ್ಯಾಂಟ್, ನೀಲಿ ಟಿ ಶರ್ಟ್ ಧರಿಸಿದ್ದು, ತುಳು ಕನ್ನಡ, ಹಿಂದಿ ಬಾಷೆ ಮಾತನಾಡುತ್ತಾನೆ. ದಪ್ಪ ಮೀಸೆ ಕೈಯಲ್ಲಿ ಹಚ್ಚೆ ಇರುತ್ತದೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-03-2015 ರಂದು ಪಿರ್ಯಾದಿದಾರರಾದ ಅಬ್ದುಲ್ ಖಾದರ್ (ಪ್ರಾಯ 50 ವರ್ಷ) ರವರು ಹಳೆಯಂಗಡಿ ಗ್ರಾಮದ ಕದಿಕೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ , ಸುಮಾರು 14-00 ಗಂಟೆ ಸಮಯಕ್ಕೆ ವಾಪಾಸ್ ಮನೆಗೆ ಹೋಗುವರೇ ಮಸೀದಿ ಬಳಿಯಲ್ಲಿಯೇ ರಸ್ತೆಯಲ್ಲಿರುವಾಗ ಆರೋಪಿ ಮೊಯಿದಿನ್ ಎಂಬಾತನು ಕಾಲರ್ ಹಿಡಿದು ಅವಾಚ್ಯವಾಗಿ ಬೈದಿದ್ದು, ಅದೇ ಸಮಯ ಇನ್ನೋರ್ವ ಆರೋಪಿ ಅಬ್ದುಲ್ಲಾ ಎಂಬಾತನು ಅಲ್ಲೇ ಇದ್ದ ಮರದ ಕೋಲಿನಿಂದ ಪಿರ್ಯಾದಿದಾರರ ಎಡಭುಜಕ್ಕೆ, ಸೊಂಟಕ್ಕೆ ಹಲ್ಲೆ ನಡೆಸಿದ್ದು, ಮೊಯಿದಿನ್ ಕೂಡಾ ಕೈಯಿಂದ ಹೊಡೆದಿರುತ್ತಾನೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 20/03/2015 ರಂದು ಬೆಳಿಗ್ಗೆ 06-40 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ರಾಮ್ ರಾವ್ ರವರು ಅಶ್ವತ್ಥಪುರದಲ್ಲಿರುವ ಶ್ರೀರಾಮ ಕ್ಯಾಂಟಿನ್ ಅಂಗಡಿಯ ಬಾಗಿಲನ್ನು ತೆರೆಯಲು ಬರುತ್ತಿದ್ದಾಗ ಆರೋಪಿ ಚಂದ್ರು ಎಂಬಾತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಬೆನ್ನಿನ ಎಡಬದಿಗೆ ಕೈಯಿಂದ ಬಲವಾಗಿ ಹೊಡೆದು ಕುತ್ತಿಗೆಯಲ್ಲಿದ್ದ ಬೆಳ್ಳಿಯ ಸರವನ್ನು ತುಂಡು ಮಾಡಿದಲ್ಲದೇ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹಾಗೂ ಸದ್ರಿಯವರ ಹೆಂಡತಿಗೂ ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.03.2015 ರಂದು ಸಮಯ ಸುಮಾರು ಬೆಳಿಗ್ಗೆ 11.15 ಗಂಟೆಗೆ ಸ್ಕೂಟರ್ ನಂಬ್ರ KA19-EC-4004 ನ್ನು ಅದರ ಸವಾರ ಹಂಪನಕಟ್ಟೆ ಕಡೆಯಿಂದ ಎ ಬಿ ಶೆಟ್ಟಿ ವೃತ್ತದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಟೌನ್ ಬಳಿ ತಲುಪುತ್ತಿದ್ದಂತೆ ಟೌನ್ ಹಾಲ್ ಎದುರು ರಸ್ತೆ ದಾಟುತ್ತಿದ್ದ ಫಿರ್ಯಾದುದಾರರಾದ ಶ್ರೀ ವೀರಪ್ಪ ಅರ್ಕಾಚಾರಿ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಕಾಂಕ್ರಿಟು ರಸ್ತೆಗೆ ಬಿದ್ದು ಬಲ ಕೋಲು ಕಾಲಿಗೆ ರಕ್ತ ಗಾಯ , ಬಲ ಕೈ ಮೊಣ ಗಂಟಿಗೆ ಗುದ್ದಿದ ನೋವು, ಸೊಂಟಕ್ಕೆ ಹಾಗೂ ತಲೆಗೆ ಗುದ್ದಿದ ನೋವು ಉಂಟಾಗಿ ಕೆಎಂಸಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕೊಳಂಬೆ ಗ್ರಾಮದ, ಬೈಲು ಬಿಡು ಎಂಬಲ್ಲಿರುವ ಬೈಲು ಮನೆಯಲ್ಲಿರುವ ಒಂದು ಕೋಣೆಯಲ್ಲಿ ಬೈಲುಬೀಡಿಗೆ ಸಂಬಂದಿಸಿದ ಬಬ್ಬುಸ್ವಾಮಿ ದೈವಸ್ಥಾನದ ಆಭರಣದ ಭಂಡಾರವನ್ನು ಕೋಲ ಮುಗಿದ ಬಳಿಕ ದಿನಾಂಕ:30-03-2014ರಂದು ಆಭರಣಗಳನ್ನೆಲ್ಲಾ ಮರದ ಪೆಟ್ಟಿಗೆಯಲ್ಲಿಟ್ಟು ಅದರ ವಿವರಗಳುಲ್ಲ ಚೀಟಿಯಲ್ಲಿ ಬರೆದು ಆ ಪೆಟ್ಟಿಗೆಯೊಳಗೆ ಇಟ್ಟು ಬೀಗ ಹಾಕಿ ಹೋದವರು ದಿನಾಂಕ:21-03-2015ರಂದು ನಡೆಲಿರುವ ಕೋಲಕ್ಕೆ ಆಭರಣಗಳನ್ನು ತೆಗೆಯಲೆಂದು ಬಂದು ಬೀಗ ತೆರೆಯಲು ಪ್ರಯತ್ನಿಸಿದಾಗ ಬಿಗ ಓಪನ್ ಆಗದೆ ಇದ್ದುದರಿಂದ ಬೀಗವನ್ನು ಲಾಕ್ ಮಾಡಿ ಒಂದು ವರ್ಷವಾಗಿರುವುದರಿಂದ ಬೀಗ ತುಕ್ಕು ಹಿಡಿದಿರಬಹುದೆಂದು ತಿಳಿದು ಬೀಗವನ್ನು ಮುರಿದು ತೆರೆದು ಒಳಹೋಗಿ ಆಭರಣಗಳನ್ನಿಟ್ಟಿದ್ದ ಮರದ ಪೆಟ್ಟಿಗೆಯ ಕೀಯನ್ನು ತೆಗೆದು ಪೆಟ್ಟಿಗೆಯನ್ನು ತೆರೆಯಲೆಂದು ನೋಡಿದಾಗ ಯಾರೋ ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಒಳಹೋಗಿ ಆಭರಣಗಳನ್ನಿಟ್ಟಿದ್ದ ಮರದ ಪೆಟ್ಟಿಗೆಯ ಬೀಗವನ್ನು ಮುರಿದ ಕಳ್ಳರು ಸುಮಾರು 2,30,000 ರೂಪಾಯಿ ಬೆಲೆಯ ಸುಮಾರು 37.300 ಗ್ರಾಂ ಚಿನ್ನದ ಆಭರಣಗಳನ್ನು ಮತ್ತು ಸುಮಾರು 1 ಕೆಜಿ 260 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿ, ಹೊರ ಬಂದವರು ಅದೇ ರೀತಿಯ ಬೇರೆ ಬೀಗವನ್ನು ಬಾಗಿಲಿಗೆ ಹಾಕಿಕೊಂಡು ಹೋಗಿರುವುದಾಗಿದೆ.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಲಾಯನಲ್ ಥೋಮಸ್ ಪಿರೇರಾ ರವರ ತಂಗಿ ತನ್ನ ಗಂಡ ಸುನೀಲ್ ಮೊಂತೆರೋ ಹಾಗೂ ಅತ್ತೆ-ಮಾವ ಇವರುಗಳು ನೀಡುತ್ತಿದ್ದ ಮಾನಸಿಕ ಕಿರುಕುಳವನ್ನು ಸಹಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:20-03-2015 ರಂದು ರಾತ್ರಿ 9-30 ಗಂಟೆಗೆ ತನ್ನ ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಮೃತ ಪಟ್ಟಿರುತ್ತಾರೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಗೃಹಿಣಿಯು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿದ್ದು, ಸುಮಾರು 5 ವರ್ಷಗಳ ಹಿಂದೆ ಆರೋಪಿತನಾದ ಸ್ವೇತನ್ ಕುಮಾರ್ ಎಂಬವನ ಪರಿಚಯವಾಗಿ ಆರೋಪಿತನು ಫಿರ್ಯಾದಿಯನ್ನು ಪ್ರೇಮಿಸಿ ದಿನಾಂಕ 11-12-2012 ರಂದು ಮಂಗಳೂರು ನೊಂದಾಣಿ ಅಧಿಕಾರಿಯವರ ಮುಂದೆ ವಿವಾಹ ನೊಂದಾಣಿ ಮಾಡಿಸಿ ಫಿರ್ಯಾದಿಯನ್ನು ತಾಯಿ ಮನೆಯಲ್ಲಿ ಬಿಟ್ಟು, ನಂತರದ ದಿನಗಳಲ್ಲಿ ಬೇರೆ ಬೇರೆ ಹೊಟೇಲ್ ಲಾಡ್ಜ್ ಗಳಲ್ಲಿ ಫಿರ್ಯಾದಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ತನ್ನ ಮನೆಯಾದ ಬೆಳ್ತಂಗಡಿಯಿಂದ ಕರೆದುಕೊಂಡು ಹೋಗದೆ ಇದ್ದುದನ್ನು ಕಂಡ ಫಿರ್ಯಾದಿಯ ಮನೆಯವರು ಈ ಬಗ್ಗೆ ವಿಚಾರಿಸಿ ಕೊಂಡದಕ್ಕೆ, ಆರೋಪಿತನು ಫಿರ್ಯಾದಿಯನ್ನು ಕರೆದುಕೊಂಡು ಆರ್ಯಸಮಾಜದಲ್ಲಿ ದಿನಾಂಕ 22-01-2015 ರಂದು ಹಿಂದು ಸಂಪ್ರದಾಯದಂತೆ ಮದುವೆಯಾಗಿ ತನ್ನ ಊರಾದ ಬೆಳ್ತಂಗಡಿಗೆ ಕರೆದುಕೊಂಡು ಹೋಗಿ ಬಾಡಿಗೆ ಮನೆಯಲ್ಲಿ ಸುಮರು 2 ತಿಂಗಳ ಕಾಲ ಇದ್ದು, ದಿನಾಂಕ 12-03-2015 ರಂದು ಬೆಳಿಗ್ಗೆ 06-00 ಗಂಟೆಗೆ ಆರೋಪಿಯು ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮನೆಗೆ ಬಾರದೇ ಇದ್ದುದರಿಂದ ಫಿರ್ಯಾದಿಯು ಆತನ ಮೊಬೈಲ್ಗೆ ಫೋನ್ ಮಾಡಿದಾಗ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗವುದಾಗಿ ತಿಳಿಸಿದ್ದು, ತದ ನಂತರ ಮೊಬೈಲ್ಗೂ ಸಿಗದೇ ಇದ್ದುದರಿಂದ ಆರೋಪಿಯು ಕೆಲಸ ಮಾಡುತ್ತಿದ್ದ ಶೋ ರೂಂ ಬಳಿ ವಿಚಾರಿಸಿದಾಗ ಆರೋಪಿಯು ನಾಪತ್ತೆಯಾಗಿರುವ ವಿಚಾರ ತಿಳಿದು ಫಿರ್ಯಾದಿಯು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಫಿರ್ಯಾದಿಯು ಆರೋಪಿತನ ಮನೆಯಾದ ಕುಂಪಲ ಎಂಬಲ್ಲಿಗೆ ದಿನಾಂಕ 13-03-2015 ರಂದು ಸಂಜೆ 05-00 ಗಂಟೆಗೆ ಆರೋಪಿಯ ತಾಯಿ ಶ್ರೀಮತಿ ಸುಕನ್ಯರವರು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಅವಹೇಳನ ಮಾಡಿ, ನಡಿ ಇಲ್ಲಿಂದ ಎಂದು ದಬಾಯಿಸಿದ್ದು, ಸಂಬಂಧಿಕರಾದ ವಿನೋದ ಮತ್ತು ವಾರಿಜರವರು ಜೀವ ಬೆದರಿಕೆ ಒಡ್ಡಿ ಫಿರ್ಯಾದಿಗೆ ವಂಚಿಸಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-03-2015 ರಂದು ಉಳ್ಳಾಲ ಪೊಲೀಸು ಠಾಣಾ ಪೊಲೀಸು ಉಪ ನಿರೀಕ್ಷಕಿ ಭಾರತಿ ಜಿ. ರವರಿಗೆ ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ದೇವಿಪುರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜೂಜಾಟ ನಡೆಯುತಿದೆ ಎಂದು ದೊರೆತ ಖಚಿತ ಮಾಹಿತಿಯಂತೆ ಪೊಲೀಸು ಉಪ ನಿರೀಕ್ಷಕಿ ಭಾರತಿ ಜಿ. ರವರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ 15-30 ಗಂಟೆ ಸಮಯಕ್ಕೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದಾಗ ಜೋನ್ ಡಿ'ಸೋಜಾ, ಸದಾಶಿವ, ನಾಗೇಶ್ ಪೂಜಾರಿ, ನಾರಾಯಣ ಹೆಗ್ಡೆ, ಚಂದ್ರಹಾಸ, ಬಾಬು, ಹರೀಶ್ ಶೆಟ್ಟಿ, ಅಜೀತ್ ಎಂಬ ಎಂಟು ಮಂದಿ ಆರೋಪಿತರು ಎರಡು ಕೋಳಿಗಳ ಕಾಲಿಗೆ ಚಿಕ್ಕ ಹರಿತವಾದ ಕತ್ತಿಯನ್ನು ಕಟ್ಟಿ ಅವುಗಳನ್ನು ಪರಸ್ಪರ ಕಾದಾಟಕ್ಕೆ ಬಿಟ್ಟು, ಅದರ ಸುತ್ತಲೂ ನಿಂತು ಹಣವನ್ನು ಕೋಳಿಗಳ ಮೇಲೆ ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು, ಆರೋಪಿತರು ಜೂಜಾಟಕ್ಕೆ ತಂದ ವಿವಿಧ ಜಾತಿಯ 7 ಕೋಳಿ ಇದರ ಅಂದಾಜು ಮೌಲ್ಯ ರೂಪಾಯಿ 1400/-, ಆರೋಪಿತರು ಜೂಜಾಟಕ್ಕೆ ಬಳಸಿದ ನಗದು ಹಣ 18,500/- ಮತ್ತು ಎರಡು ಸಣ್ಣ ಕತ್ತಿಗಳನ್ನು ಪಂಚರ ಸಮಕ್ಷಮದಲ್ಲಿ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು, ನಂತರ ಠಾಣೆಗೆ ಬಂದು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2015 ರಂದು ರಾತ್ರಿ ಸಮಯ ಸುಮಾರು 07-55 ಗಂಟೆಯ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಅರಬಿ ಕುಂಞ ರವರು ಮಂಗಳೂರು ತಾಲೂಕಿನ ತಲಪಾಡಿ .ರೋಡ್ ನಿಂದ ಮನೆಯ ಸಾಮಗ್ರಿಗಳನ್ನು ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಒಂದು ದ್ವಿಚಕ್ರ ವಾಹನ ನಂಬ್ರ ಕೆಎ-19-ಇಎಫ್-3956 ನೇಯ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಕಾಲುಗಳಿಗೆ, ಕೈಗಳಿಗೆ ಮತ್ತು ತಲೆಗೆ ರಕ್ತ ಗಾಯವಾಗಿರುತ್ತದೆ ಕೂಡಲೇ ಅಲ್ಲಿ ಸೇರಿದ ಜನರು ಮತ್ತು ಇತರರು ಸೇರಿ ಪಿರ್ಯಾದುದಾರರನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದಾಗಿದೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.02.2015 ರಂದು ಬೆಳಿಗ್ಗೆ 06:15 ಗಂಟೆ ಸಮಯಕ್ಕೆ ಲೀಯೋ ಪಿರೇರಾ ಎಂಬವರು ತನ್ನ ಮನೆಯಿಂದ ಮಂಗಳೂರಿಗೆ ಟೈಲರಿಂಗ್ ಕೆಲಸಕ್ಕೆಂದು ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದುದರಿಂದ ಅವರ ಹೆಂಡತಿ ಟೈಲರ್ ಅಂಗಡಿಗೆ ಹೋಗಿ ವಿಚಾರಿಸಿದಲ್ಲಿ ಎರಡು ವಾರಗಳಿಂದ ಕೆಲಸಕ್ಕೆ ರಜೆ ಹಾಕಿರುವ ವಿಚಾರ ತಿಳಿದು ಬಂದಿದ್ದು, ಲೀಯೋ ಪಿರೇರಾರ ಬಗ್ಗೆ ಎಲ್ಲಾ ಕಡೆಗಳಲ್ಲಿ ವಿಚಾರಿಸಿದರೂ ಇದುವರೆಗೂ ಪತ್ತೆಯಾಗದೇ ಕಾಣೆಯಾಗಿದ್ದು, ಸದ್ರಿ ಲಿಯೋ ಪಿರೇರಾ ರವರಿಗೆ ಕುಡಿತದ ಹವ್ಯಾಸವಿದ್ದು, ಯಾವುದೋ ಮನಸ್ಸಿನ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಿಂದ ಹೋಗಿ ಕಾಣೆಯಾಗಿರಬಹುದಾಗಿ ಹೆಂಡತಿ ಪಿರ್ಯಾದಿ ನೀಡಿದ್ದು, ಕಾಣೆಯಾದ ಗಂಡಸಿನ ಚಹರೆ ವಿವರ: 1. ಹೆಸರು : ಲೀಯೋ ಪಿರೇರಾ, 2. ಪ್ರಾಯ : ಸುಮಾರು 57 ವರ್ಷ, 3. ಉಡುಪು : ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದ ಫುಲ್ ಸ್ಲೀವ್ ಶರ್ಟ್ ಮತ್ತು ಕುತ್ತಿಗೆಯಲ್ಲಿ ಜಪಸರ ಧರಿಸಿರುತ್ತಾರೆ., 4. ಮಾತನಾಡುವ ಭಾಷೆ: ಕೊಂಕಣಿ, ತುಳು, ಕನ್ನಡ, ಮಲೆಯಾಳಿ, ತಮಿಳು ಮತ್ತು ಹಿಂದಿ, 5. ಮೈಕಟ್ಟು : ಗೋದಿ ಮೈ ಬಣ್ಣ, ಸಪೂರ ಶರೀರ.
12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರದೀಪ್ ರವರು 2-3 ತಿಂಗಳಿನಿಂದ ಮಂಗಳೂರಿನ ಉಲಾಯಿಬೆಟ್ಟು ಎಂಬಲ್ಲಿರುವ ಇಸಾಕ್ ಎಂಬವರಿಗೆ ಸೇರಿದ ಹೊಯ್ಗೆ ದಕ್ಕೆಯಲ್ಲಿ ಗುರುಪುರ ನದಿಯಿಂದ ಹೊಯ್ಗೆ ತೆಗೆಯುವ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ: 20.03.2015 ರಂದು ಪಿರ್ಯಾದಿದಾರರಿಗೆ ಕೆಲಸವಿಲ್ಲದೇ ಇದ್ದುದರಿಂದ ಸಂಜೆ ತನ್ನ ಸ್ನೇಹಿತರೊಂದಿಗೆ ಗುರುಪುರ ಕೈಕಂಬಕ್ಕೆ ಹೋಗಿ ಅಲ್ಲಿ ಕೆಲಸ ಮುಗಿಸಿ ವಾಪಾಸು ತನ್ನ ಸ್ನೇಹಿತರೊಂದಿಗೆ ತನ್ನ ರೂಮಿನ ಕಡೆಗೆ ಬರುತ್ತಾ ರಾತ್ರಿ ಸುಮಾರು 8.00 ಗಂಟೆಗೆ ಪರಾರಿ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಎದುದುಗಡೆಯಿಂದ ಗುಂಪು ಕಟ್ಟಿಕೊಂಡು ಬಂದ 5 ಜನ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಯಾವುದೋ ಪಿರ್ಯಾದಿದಾರರಿಗೆ ಅರ್ಥವಾಗದ ಭಾಷೆಯಲ್ಲಿ ಏನೇನೋ ಹೇಳುತ್ತಿದ್ದಂತೆ ಸದ್ರಿ ಗುಂಪಿನಲ್ಲಿದ್ದ 5 ಜನರ ಪೈಕಿ ಇಬ್ಬರು ಅವರ ಕೈಯಲ್ಲಿದ್ದ ತೆಂಗಿನ ಸೋಗೆಯ ತುಂಡಿನಿಂದ ಪಿರ್ಯಾದಿದಾರರ ತಲೆಗೆ, ಭುಜಕ್ಕೆ, ಕಾಲಿಗೆ, ಏಕಾಏಕಿಯಾಗಿ ಹೊಡೆದಿದ್ದು ಉಳಿದ ಮೂವರು ಕೈಗಳಿಂದ ಪಿರ್ಯಾದಿದಾರರ ಮೈ ಕೈಗೆಲ್ಲಾ ಹೊಡೆದುದರಿಂದ ಪಿರ್ಯಾದಿದಾರರಿಗೆ ತಲೆತಿರುಗಿದಂತಾಗಿ ಅಲ್ಲಿಯೇ ರಸ್ತೆಯಲ್ಲಿ ಬಿದ್ದುದರಿಂದ ಆರೋಪಿಗಳು ಪಿರ್ಯಾದಿದಾರರನ್ನು ಬಿಟ್ಟು ಹೋಗಿರುತ್ತಾರೆ.
rose day gift
ReplyDeletered rose day
7 feb rose day
rose day greetings
world rose day
date of rose day
rose day cards
valentines day rose
valentine rose day
rose day msgs
national rose day
rose day wallpapers