ದೈನಂದಿನ ಅಪರಾದ ವರದಿ.
ದಿನಾಂಕ 11.03.2015 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
4
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
7
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
2
|
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 10-03-2015 ರಂದು ಪಿರ್ಯಾದಿದಾರರಾದ ಶ್ರೀ ಎಂ.ವಿ. ಮ್ಯಾಥ್ಯು ರವರು ತನ್ನ ಬಾಬ್ತು ಕಾರು ನಂಬ್ರ ಕೆ.ಎ-19-ಎಂ.ಇ.8494 ನೇದರಲ್ಲಿ ತನ್ನ ಮಕ್ಕಳಾದ ಫೆಬಿನ್ ಮ್ಯಾಥ್ಯು ಹಾಗೂ ಜೀರ್ ಜೆ ಮ್ಯಾಥ್ಯುರವರನ್ನು ಕುಳ್ಳಿರಿಸಿಕೊಂಡು ಮಂಗಳೂರು ನಗರದ ಕರಂಗಲ್‌ಪಾಡಿಯಿಂದ ಜೈಲ್ ರೋಡ್‌ನಿಂದಾಗಿ ಲಾಲ್‌ಬಾಗ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸಂಜೆ 6:30 ಗಂಟೆಗೆ ಕೋರಿರೊಟ್ಟಿ ಜಂಕ್ಷನ್‌ನ ಡಿವೈಡರ್ ಬಳಿ ತಲುಪಿ ನಿಲ್ಲಿಸಿದ್ದಾಗ, ಪಿವಿ.ಎಸ್ ಕಡೆಯಿಂದ ಲಾಲ್‌ಬಾಗ್ ಕಡೆಗೆ ಸಿಟಿಬಸ್ ನಂಬ್ರ ಕೆ.ಎ-19-ಸಿ-7576 ನೇದನ್ನು ಅದರ ಚಾಲಕ ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೇರೊಂದು ವಾಹನವನ್ನು ಓವರ್‌ಟೇಕ್ ಮಾಡುವಾಗ ರಸ್ತೆಯ ಡಿವೈಡರ್ನ ಬಳಿ ನಿಲ್ಲಿಸಿದ್ದ ಪಿರ್ಯಾದಿದಾರರ ಕಾರಿನ ಮುಂಭಾಗದ ಬಂಪರ್ಗೆ ಡಿಕ್ಕಿ ಹೊಡೆದು ಜಖಂಗೊಳಿಸಿರುತ್ತಾರೆ.
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-15 ರಂದು ಸಂಜೆ 7-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಸಂದೀಪ್ ಪೂಜಾರಿ ರವರು ತಮ್ಮ ಬಾಬ್ತು ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂಬ್ರ ಕೆಎ-19-ಇಕೆ-4567 ನೇದನ್ನು ಇಡ್ಯಾ ಗ್ರಾಮದ ಸುರತ್ಕಲ್ ಹಳೇ ಪೊಲೀಸ್ ಸ್ಟೇಷನ್ ಬಳಿ ನಿಲ್ಲಿಸಿ ಕೆಲಸದ ನಿಮಿತ್ತ ಮುಡಿಪು ಕಡೆಗೆ ಹೋಗಿ ದಿನಾಂಕ: 07-03-15 ರಂದು ಬೆಳಿಗ್ಗೆ 06-45 ಗಂಟೆ ಸಮಯಕ್ಕೆ ವಾಪಾಸು ಸುರತ್ಕಲ್ ಗೆ ಬಂದು ನೋಡಿದಾಗ ಪಿರ್ಯಾದಿದಾರರು ನಿಲ್ಲಿಸಿದ ಮೋಟಾರ್ ಸೈಕಲ್ ಸದ್ರಿ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳವಾದ ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ಸುಮಾರು 45,000/- ರೂಪಾಯಿ ಆಗಬಹುದು.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕು. ಸಾರಾ ನಾಯಕ್ ಯವರು ಒರಿಸ್ಸಾ ಪುಯಿಪಲ್ಲಾ ಗ್ರಾಮದವರಾಗಿದ್ದು, ಅವರ ತಂದೆಯವರು ಮೃತ ಪಟ್ಟ ನಂತರ ಅಕ್ಕನ ಮನೆಯಾದ ಮಂಗಳೂರು ನಗರದ ಯೂನಿಟಿ ಆಸ್ಪತ್ರೆಯ ಪಕ್ಕದ ಪಿರ್ಯಾದಿಯವರ ಅಕ್ಕನ ಮನೆಗೆ ಬಾವ ಲಕ್ಷ್ಮಣ ರವರ ಜೊತೆಗೆ ಅವರ ತಾಯಿ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದು, ದಿನಾಂಕ 05-11-2014 ರಂದು ಲಕ್ಷ್ಮಣನು ಆರೋಪಿ ಹಸೈನಾರ್ ರವರ ಜೊತೆ ಪಿರ್ಯಾದಿಯವರನ್ನು ಕೇರಳಕ್ಕೆ ಮನೆ ಕೆಲಸಕ್ಕೆ ಹೋಗುವಂತೆ ಒತ್ತಾಯವಾಗಿ ಕಳುಹಿಸಿಕೊಟ್ಟಿದ್ದು, ಕೇರಳ ರಾಜ್ಯದ ಕೋಜಿಕೋಡ್ ಬಳಿ ತಲುಪಿದಾಗ ಪೊಲೀಸರು ವಿಚಾರಣೆ ನಡೆಸಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದು, ತಕ್ಷೀರು ಸ್ಥಳದ ಆಧಾರದ ಮೇಲೆ ಮೇಲಾಧಿಕಾರಿಯವರ ಆದೇಶದಂತೆ ಕೇರಳ ರಾಜ್ಯದ ಕೋಝಿಕೋಡ್ ನ ರೈಲ್ವೇ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡು ಬಂದದ್ದನ್ನು ಪ್ರಕರಣ ದಾಖಲಿಸಿರುವುದಾಗಿದೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/03/2015 ರಂಧು ಸಮಯ ಸುಮಾರು ಬೆಳಗ್ಗೆ 9:30 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಲಲಿತ ರವರು ಸಹಸವಾರಳಾಗಿ ಮತ್ತು ಅವರ ಮಗ ಸುಚೇತನ್ ಸವಾರನಾಗಿ KA-19-EG-9150 ನೆ ನಂಬ್ರದ ಹೀರೊ ಫ್ರೆಜರ್ ದ್ವಿಚಕ್ರ ವಾಹನದಲ್ಲಿ ಜೆಪ್ಪಿನಮೊಗರಿನಿಂದ ಮಂಗಳಾದೇವಿ ಕಡೆಗೆ ಬರುತ್ತಿರುವಾಗ ಮೊರ್ಗನ್ಸಗೇಟ್ ರೆಲ್ವೆ ಗೇಟ್ ಬಳಿ ತಲುಪಿದಾಗ 3 ಚಕ್ರದ ಗೂಡ್ಸ ಟೆಂಪೋ ನಂಬ್ರ KA-19-C-5968 ನೇ ನಂಬ್ರದ ವಾಹನದ ಚಾಲಕನು ಮಂಗಳಾದೇವಿ ಕಡೆಯಿಂದ ಜೆಪ್ಪಿನಮೊಗರು ಕಡೆಗೆ (ಮಹಾಕಾಳಿಪಡ್ಡು) ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟೆಗೆ ಗುದ್ದಿದ ನೋವು ಉಂಟಾಗಿರುತ್ತದೆ ಮತ್ತು ಫಿರ್ಯಾದುದಾರರ ಮಗ ಸುಚೇತನನ ಬಲಕೈಯ ರಿಂಗ್ ಬೆರಳಿಗೆ ಭಾಗ ಆದ ರೀತಿಯ ರಕ್ತಗಾಯವಾಗಿರುತ್ತದೆ ಮತ್ತು ಕೈ ಕಾಲುಗಳಿಗೆ ತರಚಿದ ಗಾಯವಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಅಪಘಾತ ಪಡಿಸಿದ ಗೂಂಡ್ಸ ಟೆಂಪೋ ಚಾಲಕ ವಾಹನ ಅಪಘಾತ ಪಡಿಸಿದ ನಂತರ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿರುತ್ತಾನೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-03-2015 ರಂದು ಬೆಳಿಗ್ಗೆ 07.40 ಗಂಟೆಗೆ ಪಿರ್ಯಾದುದಾರರಾದ ಶ್ರೀ ರಂಜಿತ್ ರವರು ತಮ್ಮ ಬಾಬ್ತು ಬೈಕು ನಂಬ್ರ ಕೆಎ19-ಇಕೆ-7187 ರಲ್ಲಿ ಸವಾರರಾಗಿ, ತನ್ನ ತಾಯಿ ಶ್ಯಾಮಲಾರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಿಜೈ ಕಡೆಯಿಂದ ನಂತೂರು ಕಡೆಗೆ ಬರುತ್ತಾ ಕೆಪಿಟಿ ಬಳಿ ತಲುಪುತ್ತಿದ್ದಂತೆ ಕಾರು ನಂಬ್ರ ಕೆಎ19 ಎಂಸಿ 4871 ಚಾಲಕಿಯು ಬೊಂದೆಲ್ ಕಡೆಯಿಂದ ಕೆಪಿಟಿ ಕಡೆಗೆ ಅತೀ ವೇಗ ಮತ್ತು ಅಜಾಗರೂಖತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಮತ್ತು ಅವರ ತಾಯಿ ಬೈಕು ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಎಡಕಾಲಿನ ಪಾದಕ್ಕೆ ಗುದ್ದಿದ ರಕ್ತ ಗಾಯ ಮತ್ತು ಬಲಕಾಲಿನ ಪಾದಕ್ಕೆ ತರಚಿದ ರಕ್ತಗಾಯ ಉಂಟಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ ಮತ್ತು ಪಿರ್ಯಾದುದಾರರ ತಾಯಿ ಶ್ಯಾಮಲಾ ರವರಿಗೆ ಎಡಕಾಲಿನ ಪಾದಕ್ಕೆ ಗುದ್ದಿದ ನೋವು ಉಂಟಾಗಿ ಹೊರ ರೋಗಿಯಾಗಿ ಚಿಕೆತ್ಸೆ ಪಡೆದುಕೊಂಡಿರುತ್ತಾರೆ.
6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-03-2015 ರಂದು ಪಿರ್ಯಾದಿದಾರರಾದ ಶರ್ವಾಣಿ ರವರು ಕೆಲಸ ಮುಗಿಸಿ ಹಳೆಯಂಗಡಿಯಿಂದ ಕೆ ಎ 19 ಡಿ 8629ನೇ ನಂಬ್ರದ ಆಟೋ ರಿಕ್ಷಾವನ್ನು ಅಂದರೆ ಹಳೆಯಂಗಡಿ ಕಡೆಯಿಂದ ಮುಲ್ಕಿ ಕಡೆಗೆ ಬಾಡಿಗೆ ಮಾಡಿಕೊಂಡು ಮನೆಗೆ ಹೋಗುತ್ತಿರುವಾಗ ರಾ ಹೇ 66ರ ಸಾಗ್ ಎಂಬಲ್ಲಿ ತಲುಪಿದಾಗ ಅವರ ಹಿಂದಿನಿಂದ ಕೆ ಎ 20 ಡಿ 3921ನೇ ನಂಬ್ರದ ಎಪಿಎಮ್ ಹೆಸರಿನ ಬಸ್ಸನ್ನು ಅದರ ಚಾಲಕನಾದ ಸುರೇಶ್ ಎಂಬವವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ರಿಕ್ಷಾ ಮಗುಚಿ ಬಿದ್ದು ಅದರಲ್ಲಿದ್ದ ರಿಕ್ಷಾ ಚಾಲಕರಾದ ಚಂದ್ರಶೇಖರ್ರವರ ತಲೆ ಎಡ ಭುಜಕ್ಕೆ ಗುದ್ದಿದಾಗ ರಕ್ತ ಗಾಯವಾಗಿದ್ದು ಪಿರ್ಯಾದಿರಾರರಾದ ಶರ್ವಾಣಿರವರ ಎಡಗೈ ಭಜಕ್ಕೆ ಮೂಳೆ ಮುರಿತದ ಗಾಯವಾಗಿರುತ್ತದೆ. ಚಿಕ್ಸಿತ್ಸೆಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಾರರಾದ ಶ್ರೀ ಮುದಕಪ್ಪ ರವರು KSRTC ಬಸ್ ನಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 10-3-2015 ರಂದು ಬೆಳಿಗ್ಗೆ 6-00 ಗಂಟೆಗೆ ಸುಬ್ರಹ್ಮಣ್ಯದಿಂದ ಬಸ್ ನಂಬ್ರ KA 19 F 2197 ರಲ್ಲಿ ಉಪ್ಪಿನಂಗಡಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಬರುತ್ತಿರುವಾಗ ಬಸ್ಸಿನಲ್ಲಿ ಪ್ರಯಾಣಿಕರಿದ್ದು, ಅದರಲ್ಲಿ ಕೆಲವು ಕಾಲೇಜು ವಿಧ್ಯಾರ್ಥಿಗಳು ಇದ್ದರು, ಮಂಗಳೂರು ಜ್ಯೋತಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಮುಂದೆ ಹೋಗುತ್ತಿದ್ದ ಸಮಯ ಇಬ್ಬರು ವಿಧ್ಯಾರ್ಥಿಗಳು ಬಸ್ಸಿನ ಹಿಂಬದಿಯಿಂದ ಓಡಿ ಬಂದು ಬಸ್ಸಿನ ಳಗಡೆ ಬಂದಾಗ ಫಿರ್ಯಾದುದಾರರು ಯಾಕೆ ಹೀಗೆ ಅವಸರದಲ್ಲಿ ಬಸ್ಸಿಗೆ ಹತ್ತುತ್ತಿರಿ ಎಂದು ಕೇಳಿದಾಗ ನಾವುಗಳು ಹೀಗೆ ಬಸ್ಸಿಗೆ ಹತ್ತುವುದು ಎಂದು ತಿಳಿಸಿರುತ್ತಾರೆ. ಬಸ್ಸು ಪೊಲೀಸ್ ಕಮಿಷನರ್ ಎದುರು ಇರುವ ಚರ್ಚ್ ನ ಎದುರುಗಡೆ ನಿಂತಾಗ ಜ್ಯೋತಿ ಬಸ್ ನಿಲ್ದಾಣದಲ್ಲಿ ಚಾಲನೆಯಲ್ಲಿರುವ ಬಸ್ಸಿಗೆ ಹತ್ತಿದ ಓರ್ವ ವಿಧ್ಯಾರ್ಥಿಯು ಫಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಫಿರ್ಯಾದುದಾರರ ಸಮವಸ್ತ್ರ ಹಿಡಿದು ಹರಿದು ಹಾಕಿ ಅತನ ಕೈಯಲ್ಲಿದ್ದ ಬ್ಲೇಡಿನಿಂದ ಎಡಕೈಯಲ್ಲಿ ರಕ್ತಗಾಯ ಗೊಳಿಸಿರುತ್ತಾನೆ. ಆಗ ಸಮಯ ಬೆಳಿಗ್ಗೆ 8-55 ಗಂಟೆ ಆಗಿರುತ್ತದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 10-3-2015 ರಂದು ಸಂಜೆ 5-10 ಗಂಟೆಯ ಸುಮಾರಿಗೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ 2ನೇ ಕೊಲ್ಯ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಬಳಿ ಇರುವ ತನು ಸ್ಟುಡಿಯೋದ ಹೊರಗೆ ಫಿರ್ಯಾದಿದಾರರಾದ ಶ್ರೀ ತನುಂಜಯ ರಾವ್ ರವರು ನಿಂತು ಕೊಂಡಿರುವ ಸಮಯದಲ್ಲಿ ಆರೋಪಿ ದಿನೇಶ್ ನಾಯಕ್ ರವರು ಫಿರ್ಯಾದಿದಾರರ ಕೈ ಹಿಡಿದು ತಡೆದು ನಿಲ್ಲಿಸಿ ಸುಮಾರು 3 ತಿಂಗಳ ಹಿಂದೆ ಪೊಟೋಗ್ರಾಫರ್ ಸಂಘಟನೆಯ ಬಗ್ಗೆ ವಾಟ್ಸ್ ಅಪ್ ನಲ್ಲಿ ಸಂಘಟನೆಯ ಸದಸ್ಯರಿಗೆ ದಿನೇಶ್ ನಾಯಕ್ ರವರು ಅವಾಚ್ಯವಾಗಿ ಬೈದು ನಿಂದಿಸಿದ ಮಾಹಿತಿಯನ್ನು ಬಿತ್ತಿರಿಸಿ ಈ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾಧ್ಯಕ್ಷರ ಸಮಕ್ಷಮದಲ್ಲಿ ತೊಕ್ಕೊಟಿನ ಕ್ಲಿಕ್ ಹಾಲ್‌ನಲ್ಲಿ ಉಳ್ಳಾಲ ಪರಿಸರದ ಛಾಯಗ್ರಾಹಕರು ದಿನೇಶ್ ನಾಯಕ್ ರವರನ್ನು ಕರೆದು ವಿಚಾರಿಸಿದಂತೆ ದಿನೇಶ್ ನಾಯಕ್ ರವರು ತನ್ನ ತಪ್ಪಿನ ಬಗ್ಗೆ ಕ್ಷಮೆ ಕೇಳಿದಂತೆ ಸಮಸ್ಯೆ ಬಗೆಹರಿದಿರುವುದನ್ನು ಫಿರ್ಯಾದಿದಾರರು ತನ್ನ ಮೊಬೈಲ್ ಪೋನ್‌ನಲ್ಲಿ ಚಿತ್ರೀಕರಿಸಿರುವ ಕ್ಲಿಪ್ಪಿಂಗ್ಸ್ ತನಗೆ ಕೊಡಬೇಕು ಎಂದು ಹೇಳಿ ನೀನು ಆ ವೀಡಿಯೋ ಕ್ಲಿಪ್ಪಿಂಗ್ಸ್ ಯಾಕೆ ತೆಗೆದದ್ದು, ಒಳ್ಳೆ ಮಾತಿನಲ್ಲಿ ಆ ಕ್ಲಿಪ್ಪಿಂಗ್ಸ್ ನನಗೆ ಕೊಡು ಇಲ್ಲವಾದಲ್ಲಿ ನಿನ್ನನ್ನು ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಫಿರ್ಯಾದಿಯ ಕೆನ್ನೆಗೆ ಹೊಡೆದು, ದೂಡಿದ್ದು, ಈ ಘಟನೆಯ ಬಗ್ಗೆ ಫಿರ್ಯಾದಿಯ ಸ್ಟುಡಿಯೋದಲ್ಲಿ ಕೆಲಸ ಮಾಡುವ ನಿಖಿಲ್ ಎಂಬಾತನು ಆತನ ಮೊಬೈಲ್ ಪೋನ್‌ನಲ್ಲಿ ಚಿತ್ರೀಕರಿಸುತ್ತಿದ್ದುದನ್ನು ಕಂಡು ದಿನೇಶ್ ನಾಯಕ್ನು ನಿಖಿಲ್ನ ಮೊಬೈಲ್ಗೆ ಹೊಡೆದು ಆತನನ್ನು ದೂಡಿ ಆತನ ಕೈಯಲ್ಲಿದ್ದ ಮೊಬೈಲ್ ಪೋನನ್ನು ಕೆಳಗೆ ಬೀಳಿಸಿದನು. ನಂತರ ಫಿರ್ಯಾದಿದಾರರು ತನ್ನ ಸ್ಟುಡಿಯೋದ ಒಳಗೆ ಹೋದಾಗ ದಿನೇಶ್ ನಾಯಕ್ನು ಸ್ಟುಡಿಯೋದ ಒಳಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿಯನ್ನು ಉದ್ದೇಶಿಸಿ ನೀನು ಆ ಕ್ಲಿಪ್ಪಿಂಗ್ಸ್ ಕೊಡದಿದ್ದರೆ ನಿನ್ನ ಕಂಪ್ಯೂಟರ್ ಒಡೆದು ಹಾಕುತ್ತೇನೆ. ಮತ್ತು ನಿನ್ನ ಮನೆಗೆ ಬಂದು ಹೊಡೆಯುತ್ತೇನೆ. ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 10-3-2015 ರಂದು ಸಂಜೆ 5-10 ಗಂಟೆಯ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ದಿನೇಶ್ ನಾಯಕ ರವರು ತನ್ನ ಸ್ನೇಹಿತ ವೀಡಿಯೋಗ್ರಾಫರ್ ಗುರುರಾಜ್ ಶೆಟ್ಟಿಯವರನ್ನು ಭೇಟಿ ಮಾಡಿ ಹಿಂದಿರುಗುತ್ತಾ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಕೊಲ್ಯ ಜಂಕ್ಷನ್ನಲ್ಲಿ ಪೊಟೊಗ್ರಫಿ ಸ್ಟುಡಿಯೋ ಮಾಲಕ ತನುರಾವ್ ಎಂಬಾತ ಫಿರ್ಯಾದಿದಾರರನ್ನು ದುರುಗುಟ್ಟಿ ನೋಡಿದನ್ನು ಫಿರ್ಯಾದಿದಾರರು ಕೇಳಿದಾಗ ಆರೋಪಿ ತನುರಾವ್ ಫಿರ್ಯಾದಿಯನ್ನು ಸ್ಟುಡಿಯೋ ಬಳಿ ಕರೆದು ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಆಗ ಫಿರ್ಯಾದಿದಾರರು ಆರೋಪಿ ತನುರಾವ್ನ ಜೊತೆ ಮಾತಿಗಿಳಿದಾಗ ಆತನ ಕೆಲಸದ ಕ್ಯಾಮರಮೆನ್ ಮೊಬೈಲ್ ಪೋನ್‌ನಿಂದ ಚಿತ್ರೀಕರಣ ನಡೆಸಿದ್ದನ್ನು ಫಿರ್ಯಾದಿದಾರರು ಆಕ್ಷೇಪ ವ್ಯಕ್ತಪಡಿಸಿ ತನ್ನ ಹೀರೋ ಹೋಂಡಾ ಬೈಕ್ನಲ್ಲಿ ಹೊರಟ ಸಮಯದಲ್ಲಿ ಆರೋಪಿಗಳಾದ ತನುರಾವ್ ಮತ್ತು ಆತನ ಕೆಮರಾಮೆನ್ ಏಕಾಏಕಿ ಫಿರ್ಯಾದಿಯನ್ನು ತಡೆದು ನಿಲ್ಲಿಸಿ ಕೈಯಿಂದ ಎದೆಗೆ ಮತ್ತು ಕುತ್ತಿಗೆ ಹಿಸುಕಿ ಕಾಲಿನಿಂದ ತುಳಿದು ಲೈಟ್ ಅಳವಡಿಸುವ ಕಬ್ಬಿಣದ ಸ್ಟಾಂಡ್ನಿಂದ ಹಲ್ಲೆಗೆ ಮುಂದಾದಾಗ ಫಿರ್ಯಾದಿದಾರರು ಬೈಕಿನಲ್ಲಿ ಹೊರಟು ಹೋಗಿದ್ದು, ಆರೋಪಿಗಳಿಂದ ತನಗೆ ಜೀವ ಬೆದರಿಕೆ ಇರುವುದಾಗಿಯೂ, ಬಳಿಕ ಫಿರ್ಯಾದಿದಾರರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-03-2015 ರಂದು ಬೆಳಿಗ್ಗೆ 09:10 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಸಮದ್ ರವರು ಬಲ್ಮಠ ರೋಡ್ ನ ಬಸ್ ನಿಲ್ದಾಣದ ಬಳಿ ಸ್ಟೇಟ್ ಬ್ಯಾಂಕ್ ಗೆ ಬರಲು ಕೆ.ಎ.19 ಎಫ್ 2197 ನೇ ನಂಬ್ರದ ಸುಬ್ರಮಣ್ಯನಿಂದ ಸ್ಟೇಟ್ ಬ್ಯಾಂಕ್ ಗೆ ಬರುವ ಕೆ.ಎಸ್.ಆರ್.ಟಿ.ಸಿ. ಬಸ್ ನ್ನು ಹತ್ತುತ್ತಿರುವಾಗ ಬಸ್ಸಿನ ನಿರ್ವಾಹಕ ನಿಮಗೆ ಬೇರೆ ಬಸ್ಸು ಇಲ್ಲವೇ ಧರ್ಮಕ್ಕೆ ಈ ಬಸ್ ನಲ್ಲಿ ಯಾಕೆ ಬರುತ್ತೀರಿ ಎಂದು ತಡೆದು ನಿಲ್ಲಿಸಿ, ಅವಾಚ್ಯ ಶಬ್ದದಿಂದ ಬೈದು, ಕೈಯಿಂದ ಹೊಡೆದು, ದೂಡಿ ಹಾಕಿದ ಪರಿಣಾಮ ಎಡ ಮೊಣ ಕೈಗೆ ಗುದ್ದಿದ ಗಾಯವಾಗಿದ್ದು, ಮುಂದಕ್ಕೆ ತನ್ನ ಬಸ್ ನಲ್ಲಿ ಬಂದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ.
11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿಶ್ವನಾಥ್ ಶೆಟ್ಟಿ ರವರು ಭಾರತೀಯ ಮಜ್ದೂರು ಸಂಘದ ರಾಜ್ಯಾಧ್ಯಕ್ಷರಾಗಿದ್ದು, ದಿನಾಂಕ 05-03-2015 ರಂದು ಸಂಘಕ್ಕೆ ಸಂಬಂಧಿಸಿದ ಯೂನಿಯನ್ ಗಳಿಂದ ವಸೂಲಾದ ಸದಸ್ಯತಾ ಶುಲ್ಕ ರೂ 42,185/- ನ್ನು ಕಚೇರಿಯ ಮೇಜಿನ ಡ್ರಾವರ್ ನಲ್ಲಿಟ್ಟು ಬೀಗ ಹಾಕಿದ್ದು, ಅದೇ ದಿನ ತುರ್ತು ಕರ್ತವ್ಯದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಬಳಿಕ ಪ್ರತಿನಿತ್ಯ ಕಛೇರಿ ತೆರೆದು ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 09-03-2015 ರಂದು ಸಂಜೆ 7:00 ಗಂಟೆಗೆ ಕಚೇರಿಗೆ ಬೀಗ ಹಾಕಿ ಹೋಗಿದ್ದು ದಿನಾಂಕ 10-03-2015 ರಂದು ಬೆಳಿಗ್ಗೆ 10:00 ಗಂಟೆಗೆ ಕಚೇರಿಗೆ ಜಿಲ್ಲಾಧ್ಯಕ್ಷ ನಾರಾಯಣ್ ಶೆಟ್ಟಿ ಯವರು ಕಚೇರಿ ತೆರೆಯಲು ಬಂದಾಗ ಕಚೇರಿಯ ಎದುರು ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದಿದ್ದು, ಕಚೇರಿ ಒಳಗಡೆ ಇದ್ದ ಟೇಬಲ್ ಗಳ ಡ್ರಾವರ್ ಕಪಾಟುಗಳನ್ನು ತೆರೆದಿದ್ದು ಕಂಡು ಬಂದಿದ್ದಲ್ಲದೇ , ಪಿರ್ಯಾದಿಯ ಕಚೇರಿ ಬಾಗಿಲ ಬೀಗ ಜಖಂಗೊಳಿಸಿ, ಒಳಪ್ರವೇಶಿಸಿದ ಕಳ್ಳರು ಮೇಜಿನ ಡ್ರಾವರ್ ಬೀಗ ಮುರಿದು ಒಳಗಡೆ ಇರಿಸಿದ್ದ ನಗದು ಹಣ ರೂ 42,185/- ನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಚೇರಿಯಲ್ಲಿ ಕಳವು ಆದ ಬಗ್ಗೆ ಸಂಸ್ಥೆಗೆ ಸಂಬಂಧಿಸಿದ ಪದಾಧಿಕಾರಿಗಳಲ್ಲಿ ಚರ್ಚಿಸಿ ತಡವಾಗಿ ಪಿರ್ಯಾದಿ ನೀಡಿದ್ದಾಗಿದೆ.
12.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-03-2015 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷರಾದ ಶ್ರೀ ಚಲುವರಾಜು ಬಿ. ರವರಿಗೆ ದೊರೆತ ಖಚಿತ ವರ್ತಮಾನದಂತೆ ಮಂಗಳೂರು ನಗರದ ಲೋವರ್ ಕಾರ್ ಸ್ಟ್ರೀಟ್ ಮೋಚುಗಲ್ಲಿ ಎಂಬಲ್ಲಿ ಕೆಎ-19-ಈಜೆ-4867 ನೇ ನಂಬ್ರ ಕೆಂಪು ಬಣ್ಣದ ಸ್ಕೂಟರ್ ನಲ್ಲಿ ಒಬ್ಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಾನೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ತಾಲೂಕು ದಂಡಾಧಿಕಾರಿ ಮತ್ತು ಠಾಣಾ ಸಿಬ್ಬಂಧಿದಾರರ ಜೊತೆ ಸ್ಥಳಕ್ಕೆ ಹೋಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಮ್ಮದ್ ಹನೀಫ್ ಎಂಬಾತನನ್ನು ದಸ್ತಗಿರಿ ಮಾಡಿ ಶೋಧನೆ ನಡೆಸಿದಾಗ ಆತನ ಬಳಿ 1 ಕೆ.ಜಿ 290 ಗ್ರಾಂ ತೂಕದ ಗಾಂಜಾ, ಸ್ಕೂಟರ್ , ಮೊಬೈಲ್ ಮತ್ತು 200 ರೂಪಾಯಿ ನಗದನ್ನು ಸ್ವಾಧೀನಪಡಿಸಲಾಗಿದೆ.
13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09.03.2014 ರಂದು ಸಂಜೆ ಸಮಯ 7.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಶ್ವತರಾಜ್ ರವರು ತನ್ನ ಬಾಬ್ತು ಪಲ್ಸರ್ ಮೋಟಾರ್ ಸೈಕಲ್ ನಂಬ್ರ KA19EM1093 ನೇದನ್ನು ಚಲಾಯಿಸಿಕೊಂಡು ಮಂಗಳೂರು ಕಡೆಯಿಂದ ಕೆ.ಸಿ ರೋಡ್ ಕಡೆಗೆ ಹೋಗುತ್ತಾ ನೇತ್ರಾವತಿ ಸೇತುವೆ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದುಗಡೆಯಿಂದ ಬಸ್ಸ್ ಒಂದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌ನ ಬಲಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಮೋಟಾರ್ ಸೈಕಲ್ ಸಮೇತಾ ಡಾಮರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕೈಗೆ ಗುದ್ದಿದನೋವು, ಸೊಂಟಕ್ಕೆ ಗುದ್ದಿದ ನೋವು, ಎಡ ತೊಡೆಗೆ ಚರ್ಮಕಿತ್ತು ಹೋದ ಗಾಯ ಹಾಗೂ ಸೊಂಟಕ್ಕೆ, ಬೆನ್ನಿಗೆ, ರಕ್ತಗಾಯ, ಮುಖಕ್ಕೆ ತರಚಿದ ಗಾಯ ಉಂಟಾಗಿದ್ದು ಅಪಘಾತ ಮಾಡಿದ ಬಸ್ಸು ನಂಬ್ರ KA19B0105 ಹಾಗೂ ಚಾಲಕನ ಹೆಸರು ಗಣೇಶ್ ಪಿ ಆಗಿರುತ್ತದೆ.
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09.03.2015 ರಂದು ಪಿರ್ಯಾದಿದಾರರಾದ ಶ್ರೀಮತಿ ಸಹನಾ ರಜನಿಕಾಂತ್ ರವರು ತನ್ನ ಗಂಡನೊಂದಿಗೆ ಕೆಲಸ ಮುಗಿಸಿ ವಾಪಾಸು ಮನೆ ಕಡೆಗೆ KA19EM2565 ನೇ ನಂಬ್ರದ ಬುಲೆಟ್ ಮೋಟಾರ್ ನೈಕಲ್‌ನಲ್ಲಿ ಹೋಗುತ್ತಾ ಪಂಪ್ವೆಲ್ನಿಂದ ತೊಕ್ಕೊಟ್ಟು ಕಡೆಗೆ ರಾಹೆ-66 ನೇ ರಸ್ತೆಯಲ್ಲಿ ಸಂಜೆ ಸುಮಾರು 5.00 ಗಂಟೆಗೆ ಎಕ್ಕೂರು ಸೇತುವೆ ಬಳಿ ತಲುಪಿದಾಗ ಎದುರಿನಿಂದ ಹೋಗುತ್ತಿದ್ದ ಕಾರೊಂದನ್ನು ಅದರ ಚಾಲಕ ಬ್ರೇಕ್ ಹಾಕಿ ನಿಲ್ಲಿಸಿದಾಗ ಪಿರ್ಯಾದಿದಾರರ ಗಂಡನು ನಿರ್ಲಕ್ಷ್ಯತನದಿಂದ ಒಮ್ಮೆಲೇ ಬೈಕ್ಗೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಲಬದಿಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಪಾದದ ಬಳಿ ರಕ್ತಗಾಯ ಮತ್ತು ಎಡಕಾಲಿಗೆ ಗುದ್ದಿದ ನೋವುಂಟಾಗಿರುತ್ತದೆ.
15.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10.03.2015 ರಂದು ಸಂಜೆ ಸುಮಾರು 5.00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಸುಷ್ಮಾ ರವರು ಮತ್ತು ಅವರ ಜೊತೆ ಕೆಲಸ ಮಾಡುವ ತಾಯವ್ವ ಎಂಬುವವರು ತಾವು ಕೆಲಸ ಮಾಡುವ ಪಡೀಲ್ ನಲ್ಲಿರುವ ಪ್ರಿವೇರಾ ಬಿಲ್ಡಿಂಗ್ ನ ಎದುರುಗಡೆ ರಸ್ತೆಯನ್ನು ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಬಿ.ಸಿ ರೋಡ್ ಕಡೆಗೆ KA-19 N-1241 ನೇ ಅಂಬಾಸಿಡರ್ ಕಾರಿನ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರೊಂದಿಗೆ ರಸ್ತೆ ದಾಟುತ್ತಿದ್ದ ತಾಯವ್ವ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯವ್ವರವರು ಡಾಂಬಾರು ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗುದ್ದಿದ ನೋವು ಹಾಗೂ ಮುಖಕ್ಕೆ ಕೈಕಾಲುಗಳಿಗೆ ರಕ್ತ ಗಾಯ ಹಾಗೂ ಗುದ್ದಿದ ನೋವು ಉಂಟಾಗಿದ್ದು ಅಪಘಾತ ಮಾಡಿದ ಸದ್ರಿ ಕಾರಿನ ಚಾಲಕನನ್ನು ವಿಚಾರಿಸಲಾಗಿ ಆತನ ಹೆಸರು ಯಶವಂತ ಎಂಬುದಾಗಿ ತಿಳಿಸಿ ನಂತರ ಸದ್ರಿ ಚಾಲಕನು ಅಪಘಾತಕ್ಕಿಡಾದ ತಾಯವ್ವನನ್ನು ಅದೇ ಕಾರಿನಲ್ಲಿ ಮಂಗಳೂರಿನ A.J ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯಾಧಿಕಾರಿಯವರು ತಾಯವ್ವ ನನ್ನು ಒಳರೋಗಿಯಾಗಿ ದಾಖಲುಮಾಡಿಕೊಂಡಿದ್ದಾಗಿದೆ.
No comments:
Post a Comment