ದಿನಾಂಕ 06-03-2015 ರಂದು ಸಂಜೆ 6:30 ಗಂಟೆಗೆ ಮಂಗಳೂರು ನಗರದ ಬಿಜೈ ಬಟ್ಟಗುಡ್ಡೆ ಎಂಬಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಬೆಟ್ಟಿಂಗ್ ಪಾಲ್ಗೊಂಡಿದ್ದ ಸಂದೀಪ್ ಶೆಟ್ಟಿ, ಪ್ರಾಯ 26 ವರ್ಷ, ವಾಸ: ಬಟ್ಟಗುಡ್ಡ, ಬಿಜೈ, ಮಂಗಳೂರು ಮತ್ತು ಪ್ರಕಾಶ್, ಪ್ರಾಯ 30 ವರ್ಷ, ಬಟ್ಟಗುಡ್ಡ, ಬಿಜೈ, ಮಂಗಳೂರು ಎಂಬವರನ್ನು ವಶಕ್ಕೆ ಪಡೆದು ಅವರಿಂದ ಬೆಟ್ಟಿಂಗ್ ಗೆ ಉಪಯೋಗಿಸಿದ ಒಂದು ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳು ಹಾಗೂ ನಗದು ರೂ. 52,000/- ನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸ್ ಆಯುಕ್ತರಾದ ಎಸ್. ಮುರುಗನ್ IPS, ಮಂಗಳೂರು ನಗರ ಮತ್ತು ಮಾನ್ಯ ಪೊಲೀಸ್ ಉಪ ಆಯುಕ್ತರಾದ ಶ್ರೀ ಕೆ. ಸಂತೋಷ್ ಬಾಬು IPS (ಕಾನೂನು ಮತ್ತು ಶಿಸ್ತು ವಿಭಾಗ), ಶ್ರೀ ವಿಷ್ಣುವರ್ಧನ್ (ಅಪರಾಧ ವಿಭಾಗ), ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕೆ. ತಿಲಕಚಂದ್ರ, ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ರವಿಕುಮಾರ್ ಹಾಗೂ ಉರ್ವಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರವೀಶ್ ನಾಯ್ಕ್, ಮತ್ತು ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ.
Friday, March 6, 2015
CRICKET BETTING : TWO HELD
Subscribe to:
Post Comments (Atom)
No comments:
Post a Comment