ದೈನಂದಿನ ಅಪರಾದ ವರದಿ.
ದಿನಾಂಕ 05.03.2015 ರ 14:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
1
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
1
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
1
|
ರಸ್ತೆ ಅಪಘಾತ ಪ್ರಕರಣ
|
:
|
7
|
ವಂಚನೆ ಪ್ರಕರಣ
|
:
|
1
|
ಮನುಷ್ಯ ಕಾಣೆ ಪ್ರಕರಣ
|
:
|
2
|
ಇತರ ಪ್ರಕರಣ
|
:
|
4
|
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸ್ವಾತಿ ಮಲ್ಯ ರವರ 18 ವರ್ಷ ಪ್ರಾಯದ ಮಗ ಭರತ್ ಮಲ್ಯ ಎಂಬಾತನು ದಿನಾಂಕ 03-03-2015ರಂದು ಬೆಳಿಗ್ಗೆ 11-00 ಗಂಟೆ ಸಮಯಕ್ಕೆ ಕೆನರಾ ಕಾಲೇಜಿಗೆ ಹೋಗಿ, ದ್ವೀತಿಯ ಪಿ.ಯು.ಸಿ.ಪರೀಕ್ಷೆಯ ಪ್ರವೇಶ ಪತ್ರ ತರಲು ಹೋದಾತನು ಕಾಲೇಜಿಗೂ ಹೋಗದೇ ವಾಪಾಸ್ಸು ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ.
3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 22-02-2015 ರಂದು ಪಿರ್ಯಾದಿದಾರರಾದ ಶ್ರೀ ಸಂತೋಷ್ ಕುಮಾರ್ ರವರು ತಾನು ಚಾಲಕನಾಗಿ ಕೆಲಸ ಮಾಡುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ರವರ ಕಾರು ನಂಬ್ರ ಕೆ.ಎ-19-ಎಂ.ಎ-5399 ನೇದನ್ನು ಮಂಗಳೂರು ನಗರದ ಮಣ್ಣಗುಡ್ಡ ಶಾಲೆಯ ಬಳಿ ರಸ್ತೆಯ ತೀರಾ ಬದಿಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಿಮಿತ್ತ ನಿಲ್ಲಿಸಿದ್ದು, ಸಮಯ ಸುಮಾರು 10:00 ಗಂಟೆಗೆ ಮಣ್ಣಗುಡ್ಡ ಗುರ್ಜಿ ಜಂಕ್ಷನ್ ಕಡೆಯಿಂದ ಬಳ್ಳಾಲ್‌ಬಾಗ್ ಕಡೆಗೆ ಕಾರ್ನಂಬ್ರ ಕೆ.ಎ-19-ಎಂ.ಇ-8240 ನೇ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಬಲಬದಿ ಜಖಂಗೊಂಡಿರುತ್ತದೆ. ಸದ್ರಿ ಅಪಘಾತ ಎಸಗಿದ ಕಾರಿನ ಮಾಲಕರಾದ ಸೂರ್ಯ ನಾರಾಯಣ ಐತಾಳ್ರವರು ಪಿರ್ಯಾದಿದಾರರ ಕಾರಿಗೆ ಉಂಟಾದ ನಷ್ಟವನ್ನು ಭರಿಸುವುದಾಗಿ ತಿಳಿಸಿದ್ದು, ಆದರೆ ಈ ವರೆಗೂ ನಷ್ಟವನ್ನು ಭರಿಸದೇ ಇರುವುದರಿಂದ ತಡವಾಗಿ ದೂರು ನೀಡಿರುವುದಾಗಿದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-03-2015 ರಂದು ಬೆಳಿಗ್ಗೆ 08-00 ಗಂಟೆಗೆ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ಟಿ.ಎಂ. ಹನೀಫ್ ರವರು ಚೊಕ್ಕಬೆಟ್ಟು ಸಲಾಪಿ ಮಸೀದಿಯ ಮದರಸ ಮತ್ತು ಶಾಲೆಯ ಕೀ ಕೊಡಲು ಹೋಗುತ್ತಿರುವಾಗ ಅವರ ಪರಿಚಯದ ಸಿದ್ದಿಕ್, ಅಮೀರ್ ನಝ್ರಾನಾ, ಹುಸೇನ್ ಕಮರಾಡಿ, ಮಸ್ನೂನ್, ಅಬ್ದುಲ್ ಸಲಾಂ ಕಾಟಿಪಳ್ಳ ಎಂಬವರು ಸದ್ರಿ ಮಸೀದಿಯ ಕಂಪೌಂಡ್ ಹತ್ತಿ ಅವರ ದಾರ್ಮಿಕ ಕಾರ್ಯಕ್ರಮದ ಬ್ಯಾನರನ್ನು ಕಂಪೌಂಡ್ ಗೆ ತಾಗಿರುವ ವಿದ್ಯುತ್ ಕಂಬಕ್ಕೆ ಹಾಕುತ್ತಿರುವಾಗ ಪಿರ್ಯಾದಿದಾರರು ಅವರಲ್ಲಿ ಹೊಸದಾಗಿ ಪೈಂಟಿಂಗ್ ಮಾಡಿದ ಕಂಪೌಂಡ್ ನ್ನು ಹಾಳು ಮಾಡಬೇಡಿ ಎಂದಾಗ ಸಿದ್ದೀಕ್ ಎಂಬವನು ಪಿರ್ಯಾದಿದಾರರನ್ನು ತಡೆದು ನಿನ್ನ ತಂದೆಯ ಮಸೀದಿಯ ಎಂದು ಹೇಳಿದಾಗ, ಉಳಿದ ಅರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವ ಉದ್ದೇಶದಿಂದ ರಾಡಿನಿಂದ ಕಾಲಿಗೆ ಹಾಗೂ ಕಲ್ಲಿನಿಂದ ತಲೆಗೆ, ಕೈಯಿಂದ ಸೊಂಟಕ್ಕೆ, ಬೆನ್ನಿಗೆ ಹಲ್ಲೆ ಮಾಡಿದ್ದು ಬಿಡಿಸಲು ಬಂದ ಮಸೀದಿಯ ಧರ್ಮ ಗುರುಗಳಾದ ಅಬ್ದುಲ್ ಮಜೀದ್ ಯಾನೆ ಮಹಮ್ಮದ್ ಹನೀಪ್ ಎಂಬವರಿಗೂ ಕೂಡ ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-03-2015 ರಂದು ಪಿರ್ಯಾದಿದಾರರಾದ ಶ್ರೀ ಸಿದ್ದೀಕ್ ರವರು ಅವರ ಸ್ನೇಹಿತ ಕೆ ವಿ ಹುಸೇನ್ ರವರೊಂದಿಗೆ ಅಹ್ಲೆ ಹದೀಸ್ ವತಿಯಿಂದ ನಡೆಸುವ ರಕ್ತದಾನ ಶಿಬಿರದ ಬ್ಯಾನರನ್ನು ಚೊಕ್ಕಬೆಟ್ಟಿನ ಸಲಾಪಿ ಮಸೀದಿ ಎದುರು ವಿದ್ಯುತ್ ಕಂಬಕ್ಕೆ ಏಣಿಯನ್ನು ಇಟ್ಟು ಹಾಕುತ್ತಿರುವಾಗ ಬೆಳಿಗ್ಗೆ ಸುಮಾರು 8-00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಪರಿಚಯದ ಆರೋಪಿಗಳು ಅವರ ಬಳಿಗೆ ಬಂದು ಬ್ಯಾನರ್ ಹಾಕಬಾರದಾಗಿ ಹೇಳಿ ಏಣಿಯನ್ನು ಎಳದಾಡಿದ ಸಮಯ ಅವರೊಳಗೆ ದೂಟಾಟವಾಗಿ ಆರೋಪಿಗಳು ಪಿರ್ಯಾದಿದಾರರಿಗೆ ಮತ್ತು ಕೆ ವಿ ಹುಸೇನ್ ರವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದ ಪರಿಣಾಮ ಪಿಯಾದಿದಾರರ ಬಲ ಕಾಲಿನ ಮೊಣಗಂಟಿಗೆ, ಸೊಂಟಕ್ಕೆ ಒಳ ನೋವು ಆಗಿರುತ್ತದೆ.
6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03.03.2015 ರಂದು ಫಿರ್ಯಾದಿದಾರರಾದ ಶ್ರೀ ಶೈಲೇಶ್ ರವರು ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುವರೇ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮಂಗಳಾ ಬಾರ್ ಎಂಡ್ ರೆಸ್ಟೋರೆಂಟ್ ಎದುರುಗಡೆ ವಾಹನಕ್ಕಾಗಿ ಕಚ್ಚಾ ರಸ್ತೆಯಲ್ಲಿ ನಿಂತು ಕಾಯುತ್ತಿರುವಾಗ ರಾತ್ರಿ ಸುಮಾರು 9:30 ಗಂಟೆಗೆ ಬೊಲೆರೋ ಪಿಕಪ್ ವಾಹನ ನಂಬ್ರ ಕೆಎ-19ಡಿ-7719 ನೇಯದನ್ನು ಅದರ ಚಾಲಕ ಸುಂದರ ಎಂಬಾನತು ಮುಡಿಪು ಚರ್ಚ್ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್ ನಂಬ್ರ ಕೆಎ-19ಇಜಿ-5663 ನ್ನು ಓವರ್‌ಟೇಕ್ ಮಾಡಿ ಬೊಲೆರೋ ಬೈಕ್ಗೆ ತಾಗಿ ಬಳಿಕ ವಾಹನಕ್ಕಾಗಿ ಕಾಯುತ್ತಿದ್ದ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಪಕ್ಕೆಲುಬಿಗೆ ಗುದ್ದಿದ ಗಾಯ, ಬೆನ್ನು ಮೂಲೆಗೆ ಗುದ್ದಿದ ಗಾಯ, ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು, ಆರೋಪಿ ಬೊಲೇರೋ ಪಿಕಪ್ ವಾಹನದ ಚಾಲಕನು ವಾಹನವನ್ನು ನಿಲ್ಲಿಸಿ ಫಿರ್ಯಾದಿದಾರರನ್ನು ಚಿಕಿತ್ಸೆಗೆ ಒಳಪಡಿಸದೇ ಅಲ್ಲದೇ ಪೊಲೀಸರಿಗೆ ಕೂಡಾ ಮಾಹಿತಿ ನೀಡದೇ ಪರಾರಿಯಾಗಿರುತ್ತಾನೆ. ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
7.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರಾದ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರು ಸಿಬ್ಬಂದಿಗಳ ಜೊತೆಯಲ್ಲಿ ಗಸ್ತಿನಲ್ಲಿರುವಾಗ ಕಿನ್ನಿಗೋಳಿ ಎಂಬಲ್ಲಿ ಮಟ್ಕಾ ಜೂಜಾಟದ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಸಿ ಇಲಾಖಾ ಜೀಪಿನಲ್ಲಿ ಸಂಜೆ 16:00 ರ ವೇಳೆಗೆ ಕಿನ್ನಿಗೋಳಿ ಮಾರ್ಕೆಟ್ ಬಳಿ ಹೋದಾಗ ಅಲ್ಲಿ ಕೆಲವು ಜನರು ಸೇರಿದ್ದು ಒಬ್ಬ ವ್ಯಕ್ತಿಯು ಚೀಟಿಯಲ್ಲಿ ಬರೆಯುತ್ತಿದ್ದು ಇಬ್ಬರು ವ್ಯಕ್ತಿಗಳು ನಂಬ್ರವನ್ನು ಆತನಿಗೆ ಹೇಳುತ್ತಿದ್ದು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಜೀಪನ್ನು ಹತ್ತಿರ ಹೋಗಿ ನಿಲ್ಲಿಸಿದಾಗ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದ ಆರೋಪಿ ಶ್ರೀನಿವಾಸ ಗುಜರನ್ ಎಂಬಾತನನ್ನು ಪ್ರಶ್ನಿಸಲಾಗಿ ಇವರು ಸಾರ್ವಜನಿಕರಿಂದ ಮಟ್ಕಾ ಜೂಜಾಟಕ್ಕೆ ಹಣವನ್ನು ಸಂಗ್ರಹಿಸುತ್ತಿರುವುದಾಗಿಯೂ ಸೊನ್ನೆ ಸಂಖ್ಯೆಯಿಂದ 99 ಸಂಖ್ಯೆ ಯವರೆಗೆ ಯಾವುದಾದರೂ ಒಂದು ರೂಪಾಯಿ ಹಾಕಿದಲ್ಲಿ ಸದ್ರಿ ನಂಬ್ರ ಡ್ರಾ ಆದಲ್ಲಿ ಒಂದು ರೂಪಾಯಿಗೆ 70/-ರೂ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಆತನನ್ನು ದಸ್ತಗಿರಿ ಮಾಡಿ ಅರೋಪಿಯ ವಶದಲ್ಲಿದ್ದ ನಗದು ಹಣ ರೂ 750/- ಹಾಗೂ ಒಂದು ಪೆನ್ , ಮಟ್ಕಾ ನಂಬರ್ ನ ಚೀಟಿಯನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾದೀನಪಡಿಸಿಕೊಂಡು, ಅರೋಪಿತನು ಹಣವನ್ನು ಪಣವಾಗಿಟ್ಟು ಆಡುವ ಮಟ್ಕಾ ಜೂಜಾಟಕ್ಕೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದುದರಿಂದ ಅರೋಪಿತನ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ.
8.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವೈಲೆಟ್ ಪೆರೇರಾ ರವರು ಮಂಗಳೂರಿಯನ್ ಡಾಟ್ ಕಾಮ್ ವೆಬ್ ಸೈಟಿನಲ್ಲಿ ದಿನಾಂಕ 03.03.2015 ರಂದು ಸಾದ್ವಿ ಬಾಲಿಕ ಬಗ್ಗೆ ವರದಿ ಪ್ರಕಟಿಸಿದ್ದು ಹಾಗೂ ಮಂಗಳೂರಿಯನ್ ಡಾಟ್ ಕಾಮ್ ಫೇಸ್ ಬುಕ್ ನ ಪೇಜ್ ನಲ್ಲಿ ಹಾಕಲಾಗಿತ್ತು. ಈ ವರದಿಯ ಬಗ್ಗೆ ಸೂರಜ್ ಶೆಟ್ಟಿ , ಕಾರ್ತಿಕ್ ಶೆಟ್ಟಿ, ವಿಜಯರಾಜ್ ಎಂಬವರು ಫೇಸ್ ಬಕ್ ಪೇಜ್ ನಲ್ಲಿ ಹಾಕಿ ಈ ಬಗ್ಗೆ ಪಿರ್ಯಾದಿದಾರರಿಗೆ ಅವಹೇಳನಕಾರಿ ಕಾಮೆಂಟ್ಸ್ ಗಳನ್ನು ಮಾಡಿದ್ದು ಇದರಿಂದ ಪಿರ್ಯಾದಿದಾರರ ಮಾನಸಿಕ ನೆಮ್ಮದಿಗೆ ತೊಂದರೆ ಮಾಡಿರುವುದಾಗಿದೆ.
9.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪೌಲ್ ಗೋವಿಯಸ್ ರವರ ಮನೆಯ ಮೊಬೈಲ್ ದೂರವಾಣಿಗೆ ದಿನಾಂಕ 28-2-2015 ರಂದು ಸಂಜೆ 5-14 ಗಂಟೆಯಿಂದ ರಾತ್ರಿ 8-30 ಗಂಟೆಯ ವರೇಗೆ ಪಿರ್ಯಾದಿದಾರರ ಮಗನಾದ ಡೋಲ್ಫಿ ಗೋವಿಯಸ್ ಎಂಬವನು ಮೊಬೈಲ್ ದೂರವಾಣಿಯಿಂದ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮಿಬ್ಬರ ಹೆಣಗಳನ್ನು ಬಿಳಿಸುತ್ತೇನೆ. ನನ್ನ ಸಮಾನುಗಳನ್ನು ಮೊದಲಿದ್ದ ಜಾಗದಲ್ಲಿ ಇಡಬೇಕು ಇಲ್ಲವಾದರೆ ನಿಮ್ಮ ಹೆಣ ಬಿಳಿಸುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.
10.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.03.2015 ರಂದು ಸಮಯ ಸುಮಾರು ಬೆಳಿಗ್ಗೆ 11.15 ಗಂಟೆಗೆ ಪಿರ್ಯಾದುದಾರರಾದ ಶ್ರೀ ನೊಲನ್ ಸಿಕ್ವೇರಾ ರವರು ತಮ್ಮ ತಾಯಿಯ ಬಾಬ್ತು ಕಾರು ನಂಬ್ರ ಕೆಎ64-ಎಂ-1691 ರಲ್ಲಿ ಚಾಲಕರಾಗಿದ್ದುಕೊಂಡು ಬಲ್ಮಠ ಕಡೆಯಿಂದ ಜ್ಯೊತಿ ಕಡೆಗೆ ಹೋಗುವರೇ ಬಲ್ಮಠ ವೃತ್ತದ ಬಳಿ ತಲುಪುತ್ತಿದ್ದಂತೆ, ಪಿರ್ಯಾದುದಾರರ ಬಲಬದಿಯಲ್ಲಿ ಬರುತ್ತಿದ್ದ ಬಸ್ಸು ನಂಬ್ರ ಕೆಎ19-ಸಿ-9649 ನ್ನು ಅದರ ಚಾಲಕರು ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೇ ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಕಾರಿನ ಬಲಭಾಗದ ಎರಡೂ ಬಾಗಿಲುಗಳು ಹಾಗೂ ಬಲಭಾಗದ ಸೈಡ್ ಮಿರರ್ ಜಖಂ ಆಗಿರುತ್ತದೆ. ಮತ್ತು ಈ ಅಪಘಾತದಿಂದ ಜನರಿಗೆ ಯಾವುದೇ ತರಹದ ಗಾಯಗಳಾಗಿರುವುದಿಲ್ಲ.
11.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-03-2015 ರಂದು ಬೆಳಿಗ್ಗೆ 08.00 ಗಂಟೆಗೆ ಬಸ್ಸು ನಂಬ್ರ ಕೆ ಎ 19 ಬಿ 9667 ಅನ್ನು ಅದರ ಚಾಲಕ ಪ್ರೇಮನಾಥ ಎಂಬಾತನು ಕಟೀಲು ಕಡೆಯಿಂದ ಬಜಪೆ ಬಸ್ಸು ನಿಲ್ದಾಣಕ್ಕೆ ಬಸ್ಸನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು. ಬಸ್ಸು ನಿಲ್ದಾಣದ ಬಳಿ ತಲುಪುವಾಗ ಬಸ್ಸು ನಿಲ್ದಾಣದ ಬಳಿ ಇರುವ ಅಯ್ಯಂಗಾರ್ ಬೆಕರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ದರ್ಶನ್ ಎಂಬವರಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಕೆಳಗೆ ಬಿದ್ದಾಗ ಬಸ್ಸಿನ ಮುಂಭಾಗದ ಬಲಬದಿಯ ಚಕ್ರ ಕಾಲುಗಳು ದರ್ಶನ್ ನ ಕಾಲುಗಳ ಮೇಲೆ ಹರಿದು ಗಂಬೀರ ಸ್ವರುಪದ ರಕ್ತ ಗಾಯ ಹಾಗೂ ಬಲಕೈಗೆ ಕೂಡ ರಕ್ತ ಗಾಯ ಉಂಟಾಗಿ .ಗಾಯಾಳು ಎ ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
12.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-03-2015 ರಂದು ಪಿರ್ಯಾದಿದಾರರಾದ ಶ್ರೀ ಕೆ ಕೃಷ್ಣಮೂರ್ತಿ ಆಚಾರ್ಯರ ರವರು ತನ್ನ ಚಿಕ್ಕಮ್ಮ ಶ್ರೀಮತಿ ಇಂದಿರಾರೊಂದಿಗೆ ಹಳೆಯಂಗಡಿಯಲ್ಲಿ ನಡೆಯುವ ಸಂಭಂದಿಕರ ಮದುವೆಗೆ ಹೋಗಲು ಕೂಳಾಯಿ ವಿದ್ಯಾನಗರದಿಂದ ಮದ್ಯಾಹ್ನ 12:00 ಗಂಟೆಗೆ ರಾ.ಹೆ 66 ನ್ನು ದಾಟಲು ಹೊನ್ನಕಟ್ಟೆ ಜಂಕ್ಷನ್ ನಲ್ಲಿ ರಸ್ತೆ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಕೆ ಎ 20 ಸಿ 4794 ನೇ ನಂಬ್ರದ ಈಚರ್ ಟೆಂಪೂ ಅದರ ಚಾಲಕನಾದ ಹರೀಶ್ ಎಂಬವವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಶ್ರೀಮತಿ ಇಂದಿರಾರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಎ ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
13.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04-03-2015 ರಂದು ಫಿರ್ಯಾದಿದಾರರಾದ ಶ್ರೀ ರಾಜೇಶ್ ಶೆಟ್ಟಿ ರವರು ಮಂಗಳೂರಿನಲ್ಲಿರುವ ಸಮಯ ಆರೋಪಿ ಅಮರ್ ಆಳ್ವ ಎಂಬವರು ಫಿರ್ಯಾದಿದಾರರಿಗೆ ಫೋನ್ ಮಾಡಿ ನಿನ್ನಲ್ಲಿ ಮಾತನಾಡಲು ಇದೆಯೆಂದು ತನ್ನ ಮನೆಯಾದ ಮಂಗಳೂರು ತಾಲೂಕಿನ, ಪಡುಪೆರಾರ ಗ್ರಾಮದ ಮೇಗಿನ ಊಳ್ಯ ಎಂಬಲ್ಲಿಗೆ ಬರುವಂತೆ ತಿಳಿಸಿದ್ದು, ಅದರಂತೆ ಫಿರ್ಯಾದಿದಾರರು ಸಂಜೆ 3-30 ಗಂಟೆಗೆ ಅಲ್ಲಿಗೆ ಹೋದಾಗ, ಆರೋಪಿಯು ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ , ಫಿರ್ಯಾದಿದಾರರ ಮೈಗೆ ಕೈ ಹಾಕಿ ದೂಡಿ ಹಾಕಿ ಕಾಲಿನಿಂದ ತುಳಿದು, ಕತ್ತಿಯಿಂದ ಕಡಿಯಲು ಬಂದಾಗ, ಫಿರ್ಯಾದಿದಾರರು ತಪ್ಪಿಸಿದ್ದರಿಂದ ಕತ್ತಿಯು ಫಿರ್ಯಾದಿದಾರರ ಮುಖಕ್ಕೆ ತಾಗಿದ್ದು, ಅಲ್ಲದೇ ಉರುಡಾಟ ಮಾಡಿದ ಪರಿಣಾಮ ಫಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿ ಫಿರ್ಯಾದಿದಾರರಿಗೆ ನಷ್ಟವುಂಟಾಗಿರುವುದಾಗಿದೆ.
14.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 2-3-2015 ರಂದು ಬೆಳಿಗ್ಗೆ ಸುಮಾರು 8-30 ಗಂಟೆಯ ನಂತರ ರಾತ್ರಿ ಸುಮಾರು 10-30 ಗಂಟೆಯ ಮದ್ಯೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ನೆಹರುನಗರ ಬೀಚ್ ರೋಡ್ ಮೂಡಾ ಸೈಟ್‌ನಲ್ಲಿರುವ ಫಿರ್ಯಾದಿದಾರರಾದ ಶ್ರೀ ಸೋಹನ್ ಎಂ. ರೈ ರವರ ಮನೆಯ ಹಿಂಬದಿಯ ಬಾಗಿಲನ್ನು ಯಾರೋ ಕಳ್ಳರು ಮುರಿದು ಮನೆಯ ಒಳಗೆ ಪ್ರವೇಶಿಸಿ ಎರಡು ಬೆಡ್ ರೂಮ್‌ನಲ್ಲಿದ್ದ 26 ಇಂಚಿನ 2 ಎಲ್ಇಡಿ ಟಿವಿಗಳು ಮತ್ತು ಬಾತ್‌ರೂಮ್ ಹಾಗೂ ಕಿಚನ್ ರೂಮ್‌ನ ಪಿಟ್ಟಿಂಗ್ಸ್ ಸಾಮಾಗ್ರಿಗಳು, ಅಂದಾಜು ಮೌಲ್ಯ ರೂ. 75,000/- ದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
15.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-03-2015 ರಂದು 13-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ ಪಿಲಾರ್ ಪಂಜದಾಯ ದೈವಸ್ಥಾನದ ಬಳಿ ಅನಧಿಕೃತವಾಗಿ "ಕೋಳಿ ಅಂಕ" ಜೂಜಾಟ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪಿರ್ಯಾದುದಾರರಾದ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷರಾದ ಭಾರತಿ ಜಿ. ರವರು ಸಿಬ್ಬಂದಿಗಳ ಜೊತೆ 14:30 ಗಂಟೆ ದಾಳಿ ನಡೆಸಿದಾಗ ಆರೋಪಿಗಳಾದ ಶ್ರೀಧರ ಆಳ್ವ, ರಾಘವೇಂದ್ರ, ಪ್ರಸಾದ್, ರಾಜೇಶ್ ಆಳ್ವ, ನವೀನ್ ಎಂಬವರು ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ ಪಿಲಾರ್ ಪಂಜದಾಯ ದೈವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಮತಟ್ಟಾದ ಜಾಗದಲ್ಲಿ ಕೋಳಿಗಳ ಕಾಲಿಗೆ ಚಿಕ್ಕ ಹರಿತವಾದ ಬಾಳುಕತ್ತಿಯನ್ನು ಕಟ್ಟಿ ಆ ಕೋಳಿಗಳನ್ನು ಒಂದಕ್ಕೊಂದು ಹೊಡೆದಾಡಲು ಬಿಟ್ಟು ಅದರ ಸುತ್ತಲೂ ನಿಂತುಕೊಂಡು ಒಬ್ಬರಿಗೊಬ್ಬರು ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು, ಆರೋಪಿತರು ಕೃತ್ಯಕ್ಕೆ ಬಳಸಿದ ವಿವಿಧ ನಮೂನೆಯ 07 ಹುಂಜಗಳು ಇದರ ಅಂದಾಜು ಮೌಲ್ಯ ರೂ. 1400/-, ಕೋಳಿ ಅಂಕದ ಕೋಳಿಗಳ ಕಾಲಿಗೆ ಕಟ್ಟುವ ಎರಡು ಬಾಳು ಕತ್ತಿ, ನಗದು ಹಣ ರೂ. 3040/- ಹಾಗೂ ಅಲ್ಲಿದ್ದ ವಾಹನಗಳಾದ (1) KL 14 K 460 Yamaha Bike, ಅಂದಾಜು ಮೌಲ್ಯ ರೂಪಾಯಿ 25000/- (2) KA 19 EC 8632 Doro Scooter, ಅಂದಾಜು ಮೌಲ್ಯ ರೂಪಾಯಿ 30,000/- (3) KA 19 EC 960 Hero Honda Passion, ಅಂದಾಜು ಮೌಲ್ಯ ರೂಪಾಯಿ 40,000/- (4) KA 19 H 6324 Hero Honda CD100 ಅಂದಾಜು ಮೌಲ್ಯ ರೂಪಾಯಿ 15000/- (5) KA 21 Q 205 Active Honda, ಅಂದಾಜು ಮೌಲ್ಯ ರೂಪಾಯಿ 20,000/- ಆಗಬಹುದು. ಈ ಎಲ್ಲಾ ಸ್ವತ್ತುಗಳನ್ನು ಪಂಚರ ಸಮಕ್ಷಮದಲ್ಲಿ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ 1,34,640/- ರೂಪಾಯಿಯಾಗಬಹುದು. ಆರೋಪಿತ ವಿರುದ್ದ ಪ್ರಕರಣ ದಾಖಲಿಸಿಕೊಂಡದ್ದಾಗಿದೆ.
16.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಕೋಟೆಕಾರು ಬೀರಿ ವಾಸಿ ಹುಡುಗಿಗೆ ದಿನಾಂಕ. 7-12-2014 ರಂದು ಮದುವೆ ನಿಶ್ಚಿತಾರ್ಥವಾಗಿ ಮದುವೆಯ ಕಾರ್ಯಕ್ರಮವನ್ನು ದಿನಾಂಕ. 13-4-2015 ಕ್ಕೆ ದಿನ ನಿಗದಿ ಪಡಿಸಿದ್ದು, ಅದರ ನಂತರ ಹುಡುಗ ಮತ್ತು ಹುಡುಗಿ ಇವರಿಬ್ಬರೂ ಹೆಚ್ಚಾಗಿ ಪೋನ್ನಲ್ಲಿ ಮಾತನಾಡುತ್ತಿದ್ದು, ಬಳಿಕ ಹುಡುಗಿಯು ಆತನೊಂದಿಗೆ ಪೋನ್ನಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿದ್ದಳು. ದಿನಾಂಕ 08-02-2015 ರಂದು ಮದುವೆಯಾಗುವ ಹುಡುಗ ಹಾಗೂ ಆತನ ಮನೆಯವರು ಫಿರ್ಯಾದಿದಾರರ ಮನೆಗೆ ಪೂಜೆಗೆ ಬಂದವರು ನಂತರ ಊರಿಗೆ ಹೋಗಿ ಮದುವೆ ಕಾಗದ ಪ್ರಿಂಟ್ ಮಾಡುವುದು ಬೇಡ ಎಂಬುದಾಗಿ ಫೋನ್ ಮಾಡಿರುತ್ತಾರೆ. ಈ ವಿಷಯವನ್ನು ತಿಳಿದ ನಂತರ ಹುಡುಗಿಯು ಅಪ್ಸೆಟ್ ಆಗಿ ತುಂಬಾ ಬೇಸರದಲ್ಲಿದ್ದವಳು ದಿನಾಂಕ 01-03-2015 ರಂದು ಸಂಜೆ ಸುಮಾರು 6-30 ಗಂಟೆ ಸಮಯಕ್ಕೆ ಮನೆಯ ಅಂಗಳದಲ್ಲಿ ದೀಪ ಇಟ್ಟ ಬಳಿಕ ಹುಡುಗಿಯನ್ನು ಒಳಗೆ ಹೋಗುವಂತೆ ಅಂಗಳದಲ್ಲಿ ಆಕೆಯ ಜೊತೆಯಲ್ಲಿದ್ದ ಮಾವ ಹೇಳಿದಾಗ ಮಾವನವರನ್ನು ಒಳಗಡೆ ಹೋಗಿ ನಾನು ಬರುತ್ತೇನೆಂದು ತಿಳಿಸಿದ್ದು, ನಂತರ ನೋಡುವಾಗ ಹುಡುಗಿಯು ಕಾಣೆಯಾಗಿದ್ದು. ಆಕೆಯನ್ನು ಹುಡುಕಾಡಿ ಈ ತನಕ ಪತ್ತೆಯಾಗದೇ ಇರುವುದಾಗಿದೆ.
17.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-03-2015 ರಂದು ಪಿರ್ಯಾದುದಾರರಾದ ಶ್ರೀ ರಾಜೇಶ್ @ ರಂಜಿತ್ ರವರು ತನ್ನ ಬಾಬ್ತು KA 19 Q 59 ನೇ ನಂಬ್ರದ ಆಕ್ಟಿವ್ ಹೊಂಡಾ ದ್ವಿಚಕ್ರವಾಹನದಲ್ಲಿ ಸವಾರಿ ಮಾಡಿಕೊಂಡು, ಮಂಗಳೂರು ತಾಲೂಕು, ಪೆರ್ಮನ್ನೂರು ಗ್ರಾಮದ ಎಸ್‌ಬಿಎಮ್ ಎಟಿಎಮ್ ಎದುರು ರಾ.ಹೆ. 66 ರಲ್ಲಿ ಬೆಳಿಗ್ಗೆ 09-00 ಗಂಟೆಗೆ ತಲುಪುತ್ತಿದ್ದಂತೆ ಅವರ ಹಿಂದಿನಿಂದ RJ 19 GA 5842 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಮೋಹನ್‌ರಾಮ್ ಎಂಬವರು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದನು. ಇದರಿಂದ ದ್ವಿಚಕ್ರವಾಹನ ಸಮೇತ ರಸ್ತೆಗೆ ಬಿದ್ದ ಪಿರ್ಯಾದುದಾರರ ಬಲಕೈಯು ಡಿಕ್ಕಿ ಹೊಡೆದ ಲಾರಿಯ ಚಕ್ರದಡಿಗೆ ಸಿಲುಕಿ, ಬೆರಳುಗಳಿಗೆ ಗಂಭಿರ ಸ್ವರೂಪದ ರಕ್ತಗಾಯವಾಗಿರುತ್ತದೆ. ಬಲಪಾದಕ್ಕೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಪಿರ್ಯಾದುದಾರರು ತೊಕ್ಕಟ್ಟು ಸಹರಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲುಗೊಂಡಿರುತ್ತಾರೆ.
18.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಸೈಂಟ್ ಆಲೋಶಿಯಸ್ ಪದವಿ ಪೂರ್ವ ಕಾಲೇಜಿನ ಬಯಾಲಜಿ ವಿಭಾಗದಲ್ಲಿ ಉಪಯೋಗಿಸುವರೇ ದಿನಾಂಕ 05.02.2015 ರಂದು ಡೆಲ್ ಕಂಪೆನಿಯ (Brand New Dell 3542 i3 4gb Win8.1) ಲ್ಯಾಪ್ ಟ್ಯಾಪ್ ನ್ನು ನೀಡಿದ್ದು ದಿನಾಂಕ 23.02.2015 ರಂದು ಸಂಜೆ 4.00 ಗಂಟೆ ವೇಳೆಗೆ ಬಯಾಲಜಿ ವಿಭಾಗದ ಸಿಬ್ಬಂದಿ ಅಶ್ವಿನಿ ರವರು ಲ್ಯಾಪ್ ಟಾಪ್ ನ್ನು ಕಪಾಟಿನಲ್ಲಿರಿಸಿ ಬೀಗದ ಕೀಯನ್ನು ಡ್ರಾವರ್ ನಲ್ಲಿಟ್ಟು ಹೋಗಿದ್ದು ಮರುದಿನ ದಿನಾಂಕ 24.02.2015 ರಂದು 10.30 ಗಂಟೆ ಸಮಯಕ್ಕೆ ಸಿಬ್ಬಂದಿ ಅಶ್ವಿನಿರವರು ಲ್ಯಾಪ್ ಟ್ಯಾಪ್ ಇದ್ದ ಕಪಾಟು ತೆರೆದು ನೋಡಲಾಗಿ ಲ್ಯಾಪ್ ಟ್ಯಾಪ್ ಕಾಣೆಯಾಗಿದ್ದಾಗಿ ಬಯಾಲಜಿ ವಿಭಾಗದ ಡಾ| ಮ್ಯಾಥ್ಯೂ ಥೋಮಸ್ ರವರು ನೀಡಿದ ವರದಿಯಂತೆ ಲ್ಯಾಪ್ ಟ್ಯಾಪ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸೈಂಟ್ ಆಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಮೆಲ್ವಿನ್ ಮೆಂಡೋನ್ಸಾ ವರು ಪಿರ್ಯಾದಿ ನೀಡಿರುವುದಾಗಿದೆ.
19.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರಮೇಶ ಎಮ್ ಪ್ರಭು ರವರು ಮಂಗಳೂರಿನ ಎಕ್ಕೂರಿನಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ SB ಅಕೌಂಟ್ ಖಾತೆದಾರರಾಗಿದ್ದು ಸದ್ರಿ ಬ್ಯಾಂಕ್‌ನಿಂದ ಡೆಬಿಟ್ ಕಾರ್ಡ್ ಹೊಂದಿರುತ್ತಾರೆ. ಸದ್ರಿಯವರ ಬಾಬ್ತು ಡೆಬಿಟ್ ಕಾರ್ಡ್‌ನ್ನು ಯಾರೋ ಅಪರಿಚಿತ ವ್ಯಕ್ತಿಗಳು ದಿನಾಂಕ: 02.03.2015 ರಂದು ಅಮೇಜಾನ್ ಎಂಬ ಡಾಟ್ ಕಾಂ. ಎಂಬ ಆನ್‌ಲೈನ್ ಮುಖಾಂತರ ರೂಪಾಯಿ 41,089/- ಬೆಲೆ ಬಾಳುವ ಸೊತ್ತುಗಳನ್ನು ಖರೀದಿಸಿ ಫಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ.
20.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04.03.2015 ರಂದು ಪಿರ್ಯಾದುದಾರರಾದ ಶ್ರೀ ಕೆ. ಮಾಧವ ಶೆಣೈ ರವರು ತನ್ನ ಬಾಬ್ತು KA-19-Q-3491 ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಪಂಪ್ವೆಲ್ ಕಡೆಯಿಂದ ಗೋರಿಗುಡ್ಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಗೋರಿಗುಡ್ಡ ಬಸ್ ಸ್ಟ್ಯಾಂಡ್ ಹತ್ತಿರ ರಸ್ತೆಯ ಬಲಭಾಗಕ್ಕೆ ಹೋಗಲು ಮೋಟಾರ್ ಸೈಕಲ್ಲನ್ನು ಬಲಗಡೆ ಇಂಡಿಕೇಟರ್ ಹಾಕಿ ನಿಲ್ಲಿಸಿಕೊಂಡಿರುವ ಸಮಯ ಪಿರ್ಯಾದುದಾರರ ಹಿಂದುಗಡೆಯಿಂದ ಅಂದರೆ ಪಂಪ್ವೆಲ್ ಕಡೆಯಿಂದ KA-18-P-1703ನೇ ನಂಬ್ರದ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಿಂತಿದ್ದ ಪಿರ್ಯಾದುದಾರರ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರರ ಎಡ ಕಾಲರ್ ಬೋನ್ಗೆ ಗುದ್ದಿದ ನೋವು ಹಾಗೂ ಬಲಕಾಲಿಗೆ ಗುದ್ದಿದ ನೋವುಂಟಾದವರು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ.
21.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.02.2015 ರಂದು ರಾತ್ರಿ 7.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮನೋಜ್ ರವರು ತನ್ನ ಬಾಭ್ತು ಕೆಎ-19-ಇಜಿ 5249 ನೇ YAMAHA FZ S ಮೋಟಾರ್ ಸೈಕಲ್‌ನ್ನು ಕೊಡಕ್ಕಲ್ ಭಾರತ್ ರೇಡಿಯೇಟರ್ ಗ್ಯಾರೇಜ್ ಹಿಂದುಗಡೆಯಿರುವ ಪಿರ್ಯಾದಿದಾರರು ವಾಸ್ತವ್ಯವಿರುವ ರೂಮ್‌ನ ಬಳಿ ಪಾರ್ಕ್ ಮಾಡಿದ್ದು ದಿನಾಂಕ: 26.02.2015 ರಂದು ಬೆಳಿಗ್ಗೆ 5.00 ಗಂಟೆಗೆ ಪಿರ್ಯಾದಿದಾರರು ಎದ್ದು ರೂಮ್‌ನ ಬಾಗಿಲು ತೆರೆದು ನೋಡಿದಾಗ ರೂಮ್ ಬಳಿ ಪಾರ್ಕ್ ಮಾಡಿದ್ದ ಪಿರ್ಯಾದಿದಾರರ ಮೋಟಾರ್ ಸೈಕಲ್ ಕಾಣೆಯಾಗಿದ್ದು ಸದ್ರಿ ಮೋಟಾರ್ ಸೈಕಲ್ ಬಗ್ಗೆ ಈ ವರೆಗೆ ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಸದ್ರಿ ಮೋಟಾರ್ ಸೈಕಲ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಮೋಟಾರ್ ಸೈಕಲ್‌ನ ಅಂದಾಜು ಮೌಲ್ಯ 40,000/- ಆಗಿರುವುದಾಗಿದೆ.
No comments:
Post a Comment