ದೈನಂದಿನ ಅಪರಾದ ವರದಿ.
ದಿನಾಂಕ 06.03.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
1
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
4
|
ವಂಚನೆ ಪ್ರಕರಣ
|
:
|
1
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
3
|
1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಇರ್ಷಾದ್ ಅಹಮ್ಮದ್ ಗುಲಾಮ್ ಭಗ್ವಾನ್ ರು AP- 29 V- 5669 ನೇದ ಲಾರಿ ಚಾಲಕರಾಗಿದ್ದು ತನ್ನ ಬಾಬ್ತು ಲಾರಿಯಲ್ಲಿ ದಿನಾಂಕ: 03-02-2015 ರಂದು ಜೊತೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುವ ಮೆಹಬೂಬ್ ಎಂಬವರೊಂದಿಗೆ ಚಿಕ್ಕೋಡಿಯಿಂದ ಹೊರಟು ದಿನಾಂಕ : 09-02-2015 ರಂದು ಕೇರಳದ ಕಣ್ಣೂರು ತಲುಪಿ ಅಂದು ಲಾರಿಯಲ್ಲಿದ್ದ ಸರಕನ್ನು ಅನ್ ಲೋಡ್ ಮಾಡಿ ಅಲ್ಲಿಂದ ಹೊರಟು ದಿನಾಂಕ: 10-02-2015 ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದ ಮಹಾರಾಷ್ಟ ರೋಡ್ ಲೈನ್ಸ್ ಟ್ರಾನ್ಸ್ ಪೋರ್ಟ್ ಗೆ ಬಂದು ಪಿರ್ಯಾದಿದಾರರು ಮತ್ತು ಮೆಹಬೂಬ್ ರಾತ್ರಿ ಊಟ ಮಾಡಿ ನಂತರ ಪಿರ್ಯಾದಿದಾರರು ಟ್ರಾನ್ಸ್ ಪೋರ್ಟ್ ನ ಬಳಿ ಮಲಗಿದ್ದು ಮೆಹಬೂಬನು ಲಾರಿಯಲ್ಲಿ ಮಲಗಿದ್ದು ರಾತ್ರಿ 01-30 ಗಂಟೆಗೆ ಮೂತ್ರ ವಿಸರ್ಜನೆಗೆ ಬಂದಾಗ ಪಿರ್ಯಾದಿದಾರರು ಮೆಹಬೂಬ್ ನನ್ನು ನೋಡಿದ್ದು ದಿನಾಂಕ: 11-02-2015ರ ಬೆಳಿಗ್ಗೆ 07-00 ಗಂಟೆಗೆ ನೋಡಿದಾಗ ಲಾರಿಯಲ್ಲಿ ಮಲಗಿದ್ದ ಮೆಹಬೂಬನು ಇರದೆ ಕಾಣೆಯಾಗಿರುತ್ತಾನೆ. ಈ ಬಗ್ಗೆ ಪಿರ್ಯಾದಿದಾರರು ಪಣಂಬೂರು, ಬೈಕಂಪಾಡಿ, ಸುರತ್ಕಲ್ ಮೊದಲಾದ ಕಡೆಗಳಲ್ಲಿ ಹುಡುಕಾಡಿದಲ್ಲಿ ಸಿಗದೆ ಇದ್ದು ನಂತರ ಚಿಕ್ಕೋಡಿಗೆ ಹೋಗಿ ವಿಚಾರಿಸಿದಲ್ಲಿ ಮನೆಗೂ ಹೋಗದೆ ಮೆಹಬೂಬನು ಕಾಣೆಯಾಗಿರುತ್ತಾನೆ.
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-03-2015 ರಂದು ಪಿರ್ಯಾದಿದಾರರಾದ ಶ್ರೀ ರವಿಕುಮಾರ್ ಎಸ್. ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪವಿಭಾಗ ಇವರಿಗೆ ಸುರತ್ಕಲ್ ಠಾಣಾ ಸರಹದ್ದಿನ ಕುಳಾಯಿ ಗ್ರಾಮದ ಕಾನಾ ಎಂಬಲ್ಲಿನ ಪ್ರಜಾ ಬಾಡಿ ವಕ್ಸ್ ಎಂಬ ಗ್ಯಾರೇಜ್ ಬಳಿಯ ಖಾಲಿ ಸ್ಥಳದಲ್ಲಿ ಅಕ್ರಮವಾಗಿ ಡಾಂಬರನ್ನು ದಸ್ತಾನಿರಿಸಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ 16-00 ಗಂಟೆಗೆ ದಾಳಿ ನಡೆಸಿ ಸ್ಥಳದಲ್ಲಿ ಅಕ್ರಮವಾಗಿ ದಸ್ತಾನಿರಿಸಿರುವ ಡಾಂಬಾರು ಹಾಗೂ ಅದಕ್ಕೆ ಸಂಬಂದಿಸಿದ ಸ್ವತ್ತುಗಳನ್ನು ಹಾಗೂ ಆರೋಪಿಗಳಾದ ಚಂದ್ರಶೇಖರ, ರವಿಕುಮಾರ್, ರಂಗಸ್ವಾಮಿ, ಹರಿಶಿವಪ್ರಸಾದ್, ಶಾಂತಕುಮಾರ್, ಜಗದೀಶ್, ಇಕ್ಬಾಲ್ ಎಂಬವರನ್ನು ವಶಕ್ಕೆ ಪಡೆದು ಕ್ರಮ ಜರುಗಿಸಲು ವರದಿ ನೀಡಿರುವುದಾಗಿದೆ.
3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-03-2015 ರಂದು ಪಿರ್ಯಾದಿದಾರರಾದ ಶ್ರೀ ರವಿಕುಮಾರ್ ಎಸ್. ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪವಿಭಾಗ ಇವರಿಗೆ ಸುರತ್ಕಲ್ ಠಾಣಾ ಸರಹದ್ದಿನ ಇಡ್ಯಾ ಗ್ರಾಮದ ಸುರತ್ಕಲ್ ನ ಶಾರದಾ ರಿಕ್ರಿಯೇಷನ್ ಅಸೋಷಿಯೇಶನ್ ಎಂಬ ಹೆಸರಿನ ಕಟ್ಟಡದೊಳಗೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ರಾತ್ರಿ 8-45 ಗಂಟೆಗೆ ದಾಳಿ ನಡೆಸಿ ಜುಗಾರಿ ಆಟವಾಡಲು ಉಪಯೋಗಿಸುತ್ತಿದ್ದ 74235/- ರೂ ನಗದು ಹಣ, 52 ಇಸ್ಪೀಟ್ ಎಲೆ ಮತ್ತು ಹಳೆಯ ಪೇಪರ್ ಹಾಗೂ ಜುಗಾರಿ ಆಟಾಡುತ್ತಿದ್ದ ಹರೀಶ್, ಯಾಕೂಬ್, ಹರೀಶ್, ಜನಾರ್ಧನ, ದಿಲೀಪ್, ಸತೀಶ್, ಬಾಲಕೃಷ್ಣ, ರಾಜೇಶ್, ಶಾಹೀರ್, ನಾಸೀರ್, ರವಿ, ಚಂದ್ರಶೇಖರ ಮತ್ತು ಲ್ಯಾನ್ಸಿ ಡಿ'ಸೋಜಾ ಎಂಬ ವ್ಯಕ್ತಿಗಳನ್ನು ಹಾಗೂ ಜುಗಾರಿ ಆಟವಾಡುವರೇ ಸ್ಥಳಕ್ಕೆ ಆಗಮಿಸಲು ಉಪಯೋಗಿಸಿದ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ವರದಿ ನೀಡಿರುವುದಾಗಿದೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05.03.2015 ರಂದು ಸಮಯ ಸುಮಾರು 13.35 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ರೋಶನಿ ಆರ್.ವಿ. ರವರು ತಮ್ಮ ಗಂಡನ ಬಾಬ್ತು ಕಾರು ನಂಬ್ರ ಕೆಎ19-ಎಂಡಿ-3837 ರಲ್ಲಿ ಚಾಲಕಿಯಾಗಿದ್ದುಕೊಂಡು ಚಿಲಿಂಬಿ ಕಡೆಯಿಂದ ಮೊರ್ಗಾನ್ಸ್ ಗೇಟ್ ಕಡೆಗೆ ಹೋಗುವರೇ ಕೆ ಎಸ್ ಆರ್ ಟಿ ಸಿ, ಬಿಜೈ ಬಸ್ ಸ್ಟಾಂಡ್ ಎದುರು ರಸ್ತೆಯಲ್ಲಿ ತಲುಪುತ್ತಿದ್ದಂತೆ ಹಿಂದಿನಿಂದ ಕಾರು ನಂಬ್ರ ಕೆಎ19-ಎಂಬಿ-9570 ನ್ನು ಅದರ ಚಾಲಕರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಕಾರು ಎದುರುಗಡೆ ಮುಗ್ಗರಿಸಿ ಮುಂದಿನಿಂದ ಹೋಗುತ್ತಿದ್ದ ಕಾರು ನಂಬ್ರ ಕೆಎ19-ಜೆಡ್-2316 ಕ್ಕೆ ಡಿಕ್ಕಿಯಾಗಿ ಜಖಂ ಗೊಂಡಿರುತ್ತದೆ ಮತ್ತು ಈ ಅಪಘಾತದಿಂದ ಫಿರ್ಯಾದುದಾರರ ಸೊಂಟಕ್ಕೆ ಗುದ್ದಿದ ನೋವು ಉಂಟಾಗಿ ಎ ಜೆ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕೆತ್ಸೆ ಪಡೆದುಕೊಂಡಿರುತ್ತಾರೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:01-03-2015 ರಂದು ಸಂಜೆ 4-00 ಗಂಟೆಯಿಂದ 6-00 ಗಂಟೆಯ ವೇಳೆಯಲ್ಲಿ ನಡೆದ ಹಿಂದೂ ಸಮೋಜೋತ್ಸವ ಕಾರ್ಯಕ್ರಮದಲ್ಲಿ ಸಾಧ್ವಿ ಬಾಲಿಕಾ ಸರಸ್ವತಿರವರು ತಮ್ಮ ಭಾಷಣದಲ್ಲಿ ಭಾರಿ ಉದ್ರೇಕ ಕಾರಿಯಾದ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಕೋಮು ದ್ವೇಷ ಹೆಚ್ಚಿಸಲು , ಅಶಾಂತಿಯನ್ನು ಉಂಟು ಮಾಡಲು ಮತ್ತು ಗಲಭೇ ನಡೆಸಲು ಪ್ರಚೋದನೆ ಕೊಟ್ಟಿರುತ್ತಾರೆ. ಅಲ್ಲದೇ ಭಾರತೀಯ ಸಮಾಜದಲ್ಲಿ ವಿವಿಧ ಜಾತಿ ಧರ್ಮಗಳ ಜನರು ಶಾಂತಿಯುತ ಜೀವನ ನಡೆಸುತ್ತಿರುವ ಸಂಧರ್ಭದಲ್ಲಿ ಆಪಾದಿತರು ಧರ್ಮ ನಿರಪೇಕ್ಷತೆಯ ಮೌಲ್ಯಗಳಿಗೆ ವಿರುದ್ದವಾದ ಮಾತುಗಳನ್ನು ಆಡುವ ಮೂಲಕ ಭಾರತದ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿರುತ್ತಾರೆ. ದ್ವೇಷದ ಭಾವನೆಯನ್ನು ಕೆರಳಿಸಲು ಪ್ರಚೋದನೆ ನೀಡಿರುತ್ತಾರೆ. ಇಡೀ ಪೊಲೀಸ್ ವ್ಯವಸ್ಥೆಯನ್ನು ಅವಮಾನ ಮಾಡಿರುತ್ತಾರೆ ಮತ್ತು ಅದರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿರುತ್ತಾರೆ. ಆಪಾದಿತರು ತನ್ನ ಭಾಷಣದಲ್ಲಿ ಕಿಚ್ಚಿಡುವ ಕಾನೂನು ಕೈಗೆತ್ತಿ ಕೊಳ್ಳುವ, ಹಿಂಸೆಗೆ ಪ್ರಚೋದಿಸಲು, ಸಮಾಜದಲ್ಲಿ ಗಲಭೆ , ಅಶಾಂತಿ ಉಂಟು ಮಾಡಲು ಕೋಮು ದ್ರುವೀಕರಣ ನಡೆಸಲು ಮತ್ತು ಈ ಮೂಲಕ ಅಲ್ಪ ಸಂಖ್ಯಾತರನ್ನು ಬಗ್ಗು ಬಡಿಯಲು ವ್ಯವಸ್ಥಿತ ಸಂಚಿನ ಭಾಗವಾಗಿರುತ್ತದೆ. ಅಪಾದಿತರ ಈ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದು, ಈ ಭಾಷಣವು ಹೆಚ್ಚಿನ ಮಾದ್ಯಮದಲ್ಲಿ ಪ್ರಕಟಗೊಂಡಿರುತ್ತದೆ ಎಂಬುದಾಗಿ ದ.ಕ. ಜಿಲ್ಲಾ ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಶ್ರೀ ಸುರೇಶ್ ಭಟ್ ಬಾಕ್ರಬೈಲು ರವರು ಪಿರ್ಯಾದಿ ನೀಡಿರುವುದಾಗಿದೆ.
6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-03-2015 ರಂದು ಮಧ್ಯಾಹ್ನ 01-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗೋಪಾಲ್ ರವರ ತಮ್ಮನಾದ ಶ್ರೀ ಗಂಗಾಧರ ಪೂಜಾರಿ ಎಂಬವರು ಊಟ ಮಾಡಲು ಮಂಗಳೂರಿನಿಂದ ಮನೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಾ ಬೊಂದೆಲ್ ಚರ್ಚ್ ಬಳಿ ತಲುಪಿದಾಗ ಕೆಎ- 19 ಎಸಿ- 268 ನೇ ನಂಬ್ರದ ಜೀವನ್ ಜೀತ್ ಎಂಬ ಹೆಸರಿನ ಬಸ್ಸಿನಿಂದ ಕೆಳಗೆ ಇಳಿಯುತ್ತಿರುವಾಗ ಚಾಲಕನು ಏಕಾಏಕಿ ಒಮ್ಮೆಲೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಗಂಗಾಧರ ರವರು ಆಯ ತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗುದ್ದಿದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 05-03-2015 ರಂದು ಮುಂಜಾನೆ 06-45 ಗಂಟೆಗೆ ಮೃತಪಟ್ಟಿರುತ್ತಾರೆ.
7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-02-2015 ರಂದು ಪಿರ್ಯಾದಿದರರಾದ ಶ್ರೀ ಕೆ ಪಿ ಮಹಮ್ಮದ್ ರವರು ಕಟಪಾಡಿಯಿಂದ ಸುರತ್ಕಲ್ ಗೆ ಬಸ್ಸಿನಲ್ಲಿ ಬಂದು ಸುರತ್ಕಲ್ ನಲ್ಲಿ ಇಳಿದು ಕೃಷ್ಣಪುರದ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಸಮಯ ಸುಮಾರು ರಾತ್ರಿ 09:30 ಗಂಟೆಗೆ ಕೆ ಎಲ್ 14 ಎನ್ 3267 ನೇ ನಂಬ್ರದ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಪಿರ್ಯಾದಿದಾರರಿಗೆ ಹಿಂದಿನಿಂದ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದು, ಪರಿಣಾಮ ಮಣ್ಣು ರಸ್ತೆಗೆ ಬಿದ್ದು ಬಲಕಾಲಿನ ಮೂಳೆ ಮುರಿತವಾಗಿದ್ದು ನಂತರ ಕಾರಿನವನು ಅಲ್ಲಿಂದ ಪರಾರಿಯಾಗಿರುವುದಾಗಿದೆ. ಚಿಕಿತ್ಸೆಯ ಬಗ್ಗೆ ಉಡುಪಿಯ ಟಿ ಎಮ್ ಎ ಪೈ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
8.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-03-2015 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ದುಂಡಪ್ಪ ಶಿರಹಟ್ಟಿ ರವರು ತನ್ನ ಸಹಚಾಲಕ ಈರಪ್ಪ ಎಂಬವರು ಕೆಎ- 28 ಸಿ- 1245 ನೇ ಟೆಂಪೋದಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ರಾ.ಹೆ 66 ರಲ್ಲಿ ಚಲಾಯಿಸಿಕೊಂಡು ಕೋಲ್ನಾಡು ಜಂಕ್ಷನ್ ಬಳಿ ರಸ್ತೆ ಕಾಮಗಾರಿ ನಡೆಯುತಿದ್ದ ಕಾರಣ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ಮೂಲ್ಕಿ ಕಡೆಗೆ ಹೋಗುತಿದ್ದಾಗ ಎದುರಿನಿಂದ ಕೆಎ- 17 ಬಿ- 110 ನೇ ನಂಬ್ರದ ಬಸ್ಸಿನ ಚಾಲಕ ರಮೇಶ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಬಸ್ಸನ್ನು ಚಲಾಯಿಸಿದ ಪರಿಣಾಮ ಟೆಂಪೋಗೆ ಡಿಕ್ಕಿಹೊಡೆದು ಟೆಂಫೊ ಚಾಲಕ ಈರಪ್ಪ ರವರಿಗೆ ಬಲಭುಜಕ್ಕೆ ಗಾಯವಾಗಿ ಟೆಂಪೋ ಡಿವೈಡರ್ ಮೇಲೆ ಮಗುಚಿ ಬಿದ್ದು ಮುಂದುವರಿದ ಬಸ್ಸು ಟೆಂಪೋದ ಹಿಂದಿನಿಂದ ಬರುತಿದ್ದ ಸಿಜಿ- 04 ಟಿ- 6142 ನೇ ಗ್ಯಾಸ್ ಸಿಲಿಂಡರ್ ಲೋಡಿನ ಲಾರಿಗೆ ಡಿಕ್ಕಿ ಹೊಡೆದು ಲಾರಿ ಚಾಲಕ ಮುಜೇರ್ ಅಹಮ್ಮದ್ ರವರ ಎರಡೂ ಕೈಕಾಲುಗಳಿಗೆ ಗಂಭೀರ ಗಾಯಗೊಂಡು ಲಾರಿ ಜಖಂಗೊಂಡಿರುತ್ತದೆ. ಅಪಘಾತಪಡಿಸಿದ ಬಸ್ಸಿನ ಚಾಲಕ ರಮೇಶ ಎಂಬವರಿಗೆ ಸೊಂಟ, ತಲೆ, ಕೈಗೆ ಮತ್ತು ಬಲಬದಿಯ ಎದೆಗೆ ಗಾಯವಾಗಿ, ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಪವಿತ್ರ ಎಂಬವರಿಗೆ ಕೈ, ಸೊಂಟ, ಮುಖ, ಸಿದ್ದಾರ್ಥ ಎಂಬವರಿಗೆ ಎಡಗಾಲು ಮತ್ತು ಮೈಕೈಗೆ ತರಚಿದ ರಕ್ತ ಗಾಯವಾಗಿ, ಕುಮಾರಿ ಪ್ರಸನ್ನ ಎಂಬವರಿಗೆ ಹಣೆಗೆ, ಬಲಗೈಗೆ, ಸೊಂಟ್ಕಕೆ ಗಾಯವಾಗಿ, ಅಕ್ಷತಾ ಎಂಬವರಿಗೆ ಬಲಕಿವಿ, ತಲೆಯ ಎಡಭಾಗ, ಸೊಂಟಕ್ಕೆ ಗಾಯವಾಗಿ, ಅನುಶ್ರೀ ಎಂಬವರಿಗೆ ಕೈಗೆ, ಎಡಗೆನ್ನೆಗೆ ಗಾಯವಾಗಿ ಚಿಕಿತ್ಸೆಗಾಗಿ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಮತ್ತು ಶ್ರೀಮತಿ ಮಂಜುಳಾ ಎಂಬವರಿಗೆ ಕೈಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಲಾರಿ ಚಾಲಕ ಮುಜೇರ್ ಅಹಮ್ಮದ್ ರವರು ಎ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಗೌರವ್ ಭಾಟಿಯಾ ರವರು ಬಿ.ಎ. ಕುಮಾರ್ ರವರ ಬಿಪಿಓ ಸೊಲ್ಯುಷನ್ ಎಂಬ ಸಂಸ್ಥೆಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಗುಡಿವಾಡ ಆಂಧ್ರ ಪ್ರದೇಶದ ಮುಖಾಂತರ ರೂ 1600/- ನ್ನು ಸಂದಾಯ ಮಾಡಿ ರಿಜಿಸ್ಟರ್ ಮಾಡಿಕೊಂಡು ಬಳಿಕ ಆರೋಪಿ ಸಂಸ್ಥೆಯವರು ವಹಿಸಿದ ಪ್ರಾಜೆಕ್ಟ್ ವರ್ಕನ್ನು ಪೂರೈಸಿ ಕೊಟ್ಟಿದ್ದರೂ ಆರೋಪಿ ಸಂಸ್ಥೆಯವರು ಫಿರ್ಯಾದಿದಾರರಿಗೆ ನೀಡಬೇಕಾದ ರೂ 26,600/- ಹಣವನ್ನು ನೀಡದೇ ವಂಚಿಸಿರುವುದಾಗಿದೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05.03.2015 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ನವಾಜ್ ರವರ ತಮ್ಮ ನಿಯಾಜ್ ಎಂಬುವನು ಕಣ್ಣೂರು ಮಸೀದಿಗೆ ಪ್ರಾರ್ಥನೆಗೆ ಹೋಗಿದ್ದು, ಪ್ರಾರ್ಥನೆ ಮುಗಿಸಿ ವಾಪಾಸು ಬರುವಾಗ ಬೋರುಗುಡ್ಡೆ ಮಸೀದಿ ಬಳಿ ಅವರಿಗೆ ಪರಿಚಯವಿರುವ ನೌಫಲ್ ಎಂಬುವನು ಫಿರ್ಯಾದಿದಾರರ ತಮ್ಮನಿಗೆ ತಲ್ವಾರ್ ಹಿಡಿದುಕೊಂಡು ನಿನ್ನನ್ನು ಕಡಿಲಿಕ್ಕಿದೆ (ಮುಗಿಸಿ ಬಿಡಿವುದಾಗಿ) ಎಂದು ಬೆದರಿಸಿದ ಇದನ್ನು ಕಂಡು ಫಿರ್ಯಾದಿದಾರರ ತಮ್ಮ ನಿಯಾಜ್ನು ಹೆದರಿಕೆಯಿಂದ ಓಡಿಬಂದು ಮನೆ ಕಡೆಯಿಂದ ಬರುತ್ತಿದ್ದ ಫಿರ್ಯಾದಿದಾರರಿಗೆ ವಿಷಯವನ್ನು ತಿಳಿಸಿದ್ದು ಆಗ ಫಿರ್ಯಾದಿದಾರರು ಅವರ ತಂದೆಯನ್ನು ಬೈಕಿನಲ್ಲಿ ಕುಳ್ಳರಿಸಿಕೊಂಡು ಠಾಣೆಗೆ ಈ ಬಗ್ಗೆ ದೂರು ನೀಡಲು ಬರುತ್ತೀರುವ ಸಮಯ ಕಣ್ಣೂರಿನ ಪೋಸ್ಟ್ ಆಫೀಸ್ ಬಳಿ ತಲುಪುತ್ತಿದ್ದಂತೆ ನೌಫಲ್ ಅವರ ಬಾಬ್ತು KA-19 ME-4255 ನೇ ನಂಬ್ರದ ಶಿಫ್ಟ್ ಕಾರಿನ ಬಳಿ ಅವರ ಸ್ನೇಹಿತರೊಂದಿಗೆ ನಿಂತುಕೊಂಡಿರುವುದನ್ನು ಕಂಡು ಫಿರ್ಯಾದಿದಾರರು ನೌಫಲ್ ಬಳಿ ತಮ್ಮನಿಗೆ ಬೆದರಿಕೆ ನೀಡಿದ ವಿಷಯದ ಬಗ್ಗೆ ಕೇಳಿದಾಗ ಇದಕ್ಕೆ ಪ್ರತಿಯಾಗಿ ನೌಫಲ್ನು ತನ್ನ ಕಾರಿನಲ್ಲಿದ್ದ ಬಿಯರ್ ಬಾಟಲ್‌ನಿಂದ ಫಿರ್ಯಾದಿದಾರರ ತಲೆಯ ಭಾಗಕ್ಕೆ ಹೊಡೆದುದರ ಪರಿಣಾಮ ಗಾಯವಾಗಿದ್ದು ಫಿರ್ಯಾದಿದಾರರು ಇಂಡಿಯಾನ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
No comments:
Post a Comment