ದೈನಂದಿನ ಅಪರಾದ ವರದಿ.
ದಿನಾಂಕ 30.03.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 1 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 9 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-03-2015 ರಂದು ರಾತ್ರಿ 21-45 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸಚಿನ್ ಎಂಬವರು ತನ್ನ ಜಿನಸು ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ 28-03-2015 ರಂದು ಬೆಳಿಗ್ಗೆ 07-00 ಗಂಟೆಗೆ ಮನೆಯಲ್ಲಿರುವ ಸಮಯ ಪಕ್ಕದ ಸೆಲೂನ್ ಅಂಗಡಿಯ ಶ್ರೀ ರಮೇಶ್ ಎಂಬವರು ಪೋನ್ ಕರೆ ಮಾಡಿ ನಿಮ್ಮ ಅಂಗಡಿಯ ಶಟ್ಟರ್ ಒಂದು ಕಡೆ ತೆರೆದಿದ್ದು, ಬಂದು ನೋಡಿ ಎಂದು ತಿಳಿಸಿದಾಗ ಪಿರ್ಯಾದುದಾರರು ತನ್ನ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶಟ್ಟರ್ ನ ಒಂದು ಕಡೆ ಬೀಗ ಮುರಿದಿದ್ದು, ಇನ್ನೊಂದು ಕಡೆಯ ಬೀಗವನ್ನು ಕೀ ಯ ಸಹಾಯದಿಂದ ತೆಗೆದು ನೋಡಿದಾಗ ಅಂಗಡಿಯಲ್ಲಿದ್ದ, ಚಾಕಲೇಟ್ , ಕೇಕ್ , ಜ್ಯೂಸ್ ಮತ್ತು ಇತರ ವಸ್ತುಗಳು ಕಳವಾಗಿದ್ದು, ಕಳವಾದ ಸೊತ್ತಿನ ಅಂದಾಜು ಬೆಲೆ 10,000/- ಆಗಬಹುದು.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-03-2015 ರಂದು ಮಂಗಳೂರು ತಾಲೂಕು ದೇರೆಬೈಲ್ ಗ್ರಾಮದ ಮಾಲೆಮಾರ್ ನೆಕ್ಕಿಲಗುಡ್ಡೆ ಎಂಬಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ಪ್ರಯುಕ್ತ ಆಯೋಜಿಸಲಾದ ನಾಟಕವನ್ನು ನೋಡುವರೇ ಪಿರ್ಯಾದುದಾರರಾದ ಶ್ರೀ ಲೋಹಿತ್ ರವರು ಬಂದಿದ್ದು, ಅಲ್ಲಿ ಅವರಿಗೆ ಸ್ನೇಹಿತರಾದ ಮಿಥುನ್, ರೀತು @ ರಿತೇಶ್, ಯತೀಶ್ ಎಂಬವರು ಇದ್ದರು, ರಾತ್ರಿ ಸುಮಾರು 12-30 ಗಂಟೆಗೆ ಕಾರ್ಯಕ್ರಮ ಮುಗಿದು ಎಲ್ಲ ಸಾರ್ವಜನಿಕರು ತೆರಳಿದ್ದು ಪಿರ್ಯಾದುದಾರರು ಮತ್ತು ಆತನ ಸ್ನೇಹಿತರು ಅಲ್ಲೇ ನಿಂತು ಮಾತಾನಾಡುತ್ತಿದ್ದರು, ಅಲ್ಲಿಗೆ ಕಾರ್ಯಕ್ರಮ ಆಯೋಜಿಸಿರುವ ಪ್ರಭಾಕರ್ ನೆಕ್ಕಿಲಗುಡ್ಡೆ, ನಿಶಾಂತ್ ಕಾವೂರು ಮತ್ತು ನೋಡಿ ಗುರುತಿರುವ ಮೂವರು ಬಂದರು, ಅ ಸಮಯ ರಿತೇಶ್ ಪ್ರಭಾಕರ್ ಬಳಿ ತನ್ನಿಂದ ಈ ಹಿಂದೆ ಸಾಲವಾಗಿ ಪಡೆದ ಹಣವನ್ನು ವಾಪಾಸು ನೀಡದೇ ಇದ್ದ ಬಗ್ಗೆ ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಜಗಳವಾಯಿತು, ಆಗ ಪ್ರಭಾಕರ್ ರವರು ಅಲ್ಲಿಂದ ಸ್ವಲ್ಪ ದೂರ ಹೋಗಿ ಪುನಃ ಅವರ ಬಳಿಗೆ ಬಂದು ತನ್ನ ಕೈಯಲ್ಲಿದ್ದ ತಲವಾರಿನಿಂದ ರಿತೇಶನಿಗೆ ಕಡಿದಾಗ ಜೊತೆಗಿದ್ದ ನಿಶಾಂತ್ ಕೂಡ ಆತನ ಕೈಯಲ್ಲಿದ ತಲವಾರಿನಿಂದ ಕಡಿದನು, ಅಷ್ಟರಲ್ಲಿ ಜೊತೆಯಲ್ಲಿದ್ದ ಎಲ್ಲರೂ ರಿತೇಶನಿಗೆ ಕಡಿಯಲಾರಂಭಿಸಿದಾಗ ಪಿರ್ಯಾದುದಾರರು ಮತ್ತು ಆತನ ಜೊತೆಗಿದ್ದ ಮಿಥುನ್, ಯತೀಶ್ ರವರು ಅಡ್ಡ ತಡೆದಾಗ ಅವರಿಗೂ ಕೂಡಾ ಕಡಿದ ಏಟು ಬಿತ್ತು ಪಿರ್ಯಾದುದಾರರ ಬಲ ಕೈ ತಟ್ಟಿಗೆ, ಬಲಭುಜಕ್ಕೆ, ಯತೀಶ್ ಎಂಬವರಿಗೆ ಕೈ, ಕಾಲಿಗೆ, ಮಿಥುನ್ ರವರಿಗೆ ಬೆನ್ನಿಗೆ, ಕಣ್ಣಿನ ಬದಿಗೆ, ಕುತ್ತಿಗೆಯ ಬಲ ಬದಿಗೆ ಗಾಯಗಳಾದವು, ರಿತೇಶನಿಗೆ ಹೊಟ್ಟೆಯ ಭಾಗಕ್ಕೆ ತೀವ್ರವಾದ ಗಾಯವಾಗಿದ್ದು, ಗಾಯದ ತೀವ್ರತೆ ತಾಳಲಾರದೇ ಸ್ಥಳದಲ್ಲಿಯೇ ಬಿದ್ದನು, ಇದನ್ನು ಗಮನಿಸಿದ ಹಲ್ಲೆಕೋರರು ತಮ್ಮಲ್ಲಿದ್ದ ಆಯುಧ ಸಮೇತ ಪರಾರಿಯಾಗಿದ್ದು, ರಿತೇಶ್ ಸ್ಥಳದಲ್ಲಿಯೇ ಮೃತನಾಗಿರುತ್ತಾನೆ, ಗಾಯಾಳುಗಳ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಘಟನೆಗೆ ಮೃತ ರಿತೇಶ್ ಮತ್ತು ಪ್ರಭಾಕರನ ಜೊತೆಗಿದ್ದ ಹಣದ ವ್ಯವಹಾರವೇ ಆಗಿರುತ್ತದೆ ಈ ಘಟನೆಯು ರಾತ್ರಿ ಸುಮಾರು 1-30 ಗಂಟೆಗೆ ಆಗಿರಬಹುದು.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಎ. ಬದ್ರುದ್ದೀನ್ ರವರು ತನ್ನ ಬಾಬ್ತು ಮೊಟಾರ್ ಸೈಕಲ್ ಕೆಎ19-ಇಕೆ-2004 ನೇಯದರಲ್ಲಿ ದೇರಳಕಟ್ಟೆಯಿಂದ ಮುಡಿಪು ಕಡೆಗೆ ಸವಾರಿ ಮಾಡಿಕೊಂಡು ದಿನಾಂಕ 27.03.2015 ರಂದು ಸಂಜೆ 5:45 ಗಂಟೆಗೆ ಬಂಟ್ವಾಳ ತಾಲೂಕು, ಫಜೀರು ಗ್ರಾಮದ ಕಂಬ್ಳಪದವು ದೇವಿನಗರ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಮುಡಿಪು ಕಡೆಯಿಂದ ಕೊಣಾಜೆ ಕಡೆಗೆ ಹಿರೋಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ಅದರ ಸವಾರ ಶೇಖ್ ಮುಸ್ತಾಕ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲಕ್ಕೆ ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಫಿರ್ಯಾದಿದಾರರಿಗೆ ಬಲಕೈ ನಡುಬೆರಳಿಗೆ ಬೆನ್ನಿನ ಭುಜಕ್ಕೆ ಕೀಲು ಮುರಿತದ ಗಾಯ ಹಾಗೂ ಹೊಟ್ಟೆಗೆ ಬೆನ್ನಿಗೆ ಗುದ್ದಿದ ನೋವು ಬಲಕಾಲಿನ ಮಂಡಿಗೆ ರಕ್ತಗಾಯವಾಗಿದ್ದು ಆರೋಪಿಗೆ ಬಲಕಾಲಿನ ಪಾದಕ್ಕೆ ಕೀಲು ಮುರಿದ ಗಾಉ ಸೊಂಟಕ್ಕೆ ಮತ್ತು ಬಲಕೈಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿ ಕೊಡಿಯಾಲ್ ಬೈಲು ಯೆನಪೋಯ ಆಸ್ಪತ್ರೆಯಲ್ಲಿ ಮತ್ತು ಆರೋಪಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು ಮದ್ಯಾಹ್ನ ಸುಮಾರು 12-15 ಗಂಟೆಗೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಮಂಜುನಾಥ ರವರು ಕಾರ್ನಾಡು ಸಿ.ಎಸ್.ಐ ಶಾಲೆಯಲ್ಲಿ ಕ್ಲಾಸು ಬಿಟ್ಟ ನಂತರ ಕಾರ್ನಾಡು ಗ್ರಾಮದ, ಕಾರ್ನಾಡು ಗಾಂಧಿ ಮೈದಾನದ ಬಳಿ ಇರುವಾಗ, ಅದೇ ಕ್ಲಾಸಿನ ವಿದ್ಯಾರ್ಥಿನಿ ಕೂಡಾ ಬಂದಿದ್ದು, 'ನೀನು ಕ್ಲಾಸಿನಲ್ಲಿ ಯಾಕೆ ಕೂಗಿದ್ದು' ಎಂದು ಸಮಾಧಾನ ಪಡಿಸುತ್ತಿರುವ ಸಮಯ ಸುಮಾರು 13-45ರ ವೇಳೆಗೆ 4 ಜನ ಯುವಕರು ಬಂದು, ಕೈಯಿಂದ ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಕೆಎ-19-ಎ-6061ನೇ ನಂಬ್ರದ ಆಟೋ ರಿಕ್ಷಾದಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿ ಅಪಹರಿಸಿಕೊಂಡು ಕಾರ್ನಾಡು ದರ್ಗಾದ ಬಳಿಗೆ ಹೋಗಿ , ರಿಕ್ಷಾದಿಂದ ಎಳೆದುಹಾಕಿದ್ದು, ಅದೇ ಸಮಯಕ್ಕೆ ಕೆಎ-20-ಎನ್-7277 ನೇ ಮಾರುತಿ ಕಾರಿನಲ್ಲಿ , ಹಾಗೂ ಬೈಕ್ ಸ್ಕೂಟಿರಿನಲ್ಲಿ ಬಂದ ಸುಮಾರು 20 ರಷ್ಟು ಯುವಕರು ಪಿರ್ಯಾದಿದಾರರ ಶರ್ಟ್ ಹಿಡಿದು ಕೈಯಿಂದ ತಲೆಗೆ, ಬೆನ್ನಿಗೆ, ಎದೆಗೆ ಹೊಡೆದು, ಕಾಲಿನಿಂದ ತುಳಿದು ಅವಾಚ್ಯ ಶಭ್ದಗಳಿಂದ ಬೈದು, ಹಲ್ಲೆ ನಡೆಸಿದವರಲ್ಲಿ ಪರಿಚಯವಿದ್ದು, ಅವರಲ್ಲಿ ಜಮಾಲ್, ಸಿರಾಜ್, ಶಾಹಿದ್, ರಿಫಾನ್, ಶಮೀರ್, ಅಲ್ಪಾಜ್, ರಜಾಕ್, ತೌಸಿಕ್, ಶಾಕಿರ್, ಶರೀಫ್, ಮುಸ್ತಾಫ, ತೌಸಿಫ್ ಕೊಲ್ನಾಡು ಹಾಗೂ ಗಡ್ಡ ಶರೀಫ್ ಆಗಿದ್ದು ಇತರರನ್ನು ಕೂಡಾ ನೋಡಿದರೆ ಗುರುತಿಸುವುದಾಗಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಪಿರ್ಯಾದಿದಾರರಿಗೆ ಆರೋಪಿಗಳು ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ರಿಕ್ಷಾದಲ್ಲಿ ಅಪಹರಿಸಿಕೊಂಡು ಹೋಗಿ ಕೈಯಿಂದ ಮತ್ತು ಮರದ ರೀಪಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾರೆ.
5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು ವಿದ್ಯಾರ್ಥಿನಿ ಯು ಶಾಲೆ ಬಿಟ್ಟ ಮೇಲೆ ಮದ್ಯಾಹ್ನ 13-45 ಗಂಟೆ ಸಮಯಕ್ಕೆ ಕಾರ್ನಾಡು ಗ್ರಾಮದ ಮೀನು ಮಾರ್ಕೆಟ್ ಬಳಿಯ ಜೆರಾಕ್ಸ್ ಅಂಗಡಿ ಬಳಿಯಲ್ಲಿ ಹೊರಗಡೆ ಇರುವಾಗ, ಪಿರ್ಯಾದಿದಾರರ ಶಾಲೆಯ ಕ್ಲಾಸ್ಮೇಟ್ ಹುಡುಗ ವಿದ್ಯಾರ್ಥಿನಿಯನ್ನು ಕೈಯಿಂದ ಎಳೆದು ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿ ಪ್ರವೀಣ್ ಆರ್ ಕೋಟ್ಯಾನ್ ವಾಸ: ಅಳಿಯೂರು. ಎಂಬವನು ಆತನ ಮೊಬೈಲ್ ದೂರವಾಣಿಯಿಂದ ಬ್ರೇಕಿಂಗ್ ನ್ಯೂಸ್ 'ಡಿ.ಕೆ.ರವಿ ಸಾವಿನಿಂದ ಮನನೊಂದು ಸಿ.ಎಂ.ಸಿದ್ದರಾಮಯ್ಯ ಹೃದಯಾಘಾತದಿಂದ ಅಸ್ಪತ್ರೆಯಲ್ಲಿ ನಿಧನ ಹಲವು ಗಣ್ಯರ ಸಂತಾಪ' ಎಂಬುದಾಗಿ ಸಿ.ಎಂ.ಸಿದ್ದರಾಮಯ್ಯ ರವರ ಭಾವಚಿತ್ರದ ಜೊತೆಯಲ್ಲಿ ಲೈವ್ ಪಬ್ಲಿಕ್ ಟಿವಿ ದಿನಾಂಕ 23-3-2015 ಎಂದು ಟಿವಿ ಯಲ್ಲಿ ವರದಿ ಬಂದಿದೆ ಎನ್ನುವ ರೀತಿ ಸುಳ್ಳು ವರದಿಯನ್ನು ಸೃಷ್ಠಿಸಿ ವಾಟ್ಸ್ ಅಪ್ ಮೂಲಕ ಜನರಿಗೆ ಪ್ರಚಾರ ಮಾಡಿ ಗೊಂದಲ ಉಂಟು ಮಾಡಿರುವುದಾಗಿ ಪಿರ್ಯಾದಿದಾರರಾದ ಶ್ರೀ ಸುಂದರ ಪೂಜಾರಿ ಉಪಾಧ್ಯಕ್ಷರು, ಹಿಂದುಳಿದ ವರ್ಗಗಳ ವಿಭಾಗ ಮೂಡಬಿದ್ರೆ ಎಂಬವರು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಹುಡುಗಿಯು ಪರಿಶಿಷ್ಠ ಜಾತಿಯ ಆದಿದ್ರಾವಿಡ ಜಾತಿಗೆ ಸೇರಿದವರಾಗಿದ್ದು ಪಿರ್ಯಾದುದಾರರ ಜಾತಿಯವರೇ ಆದ ಆರೋಪಿ ಅನಿಲ್ ಎಂಬಾತನು ಪಿರ್ಯಾದುದಾರರನ್ನು ಅವರ ವಾಸದ ಮನೆಯಾದ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿಂದ ವಿವಾಹವಾಗುವುದಾಗಿ ಪುಸಲಾಯಿಸಿ ಮಂಗಳೂರು ತಾಲೂಕು ಅಲಂಗಾರು ಎಂಬಲ್ಲಿಗೆ ದಿನಾಂಕ; 01-01-2015 ರಂದು ಕರೆದುಕೊಂಡು ಬಂದು ಸದ್ರಿ ದಿನ ರಾತ್ರಿ ವೇಳೆಯಿಂದ ದಿನಾಂಕ: 15-02-2015 ರ ರಾತ್ರಿ ಅವದಿಯಲ್ಲಿ ಪಿರ್ಯಾದುದಾರರಿಗೆ ಅತ್ಯಾಚಾರವೆಸಗಿರುವುದಲ್ಲದೇ ದಿನಾಂಕ: 15-02-2015 ರಂದು ಆರೋಪಿಯು ಪಿರ್ಯಾದುದಾರರಿಗೆ ಅವಾಚ್ಯ ಶಬ್ಬದಿಂದ ಬೈದು ಅವಮಾನಪಡಿಸಿ ಕೈಯಿಂದ ಬೆನ್ನಿಗೆ ಥಳಿಸಿ ವಾಸ್ತವ್ಯವಿದ್ದ ಅಲಂಗಾರು ಎಂಬಲ್ಲಿಯ ಮನೆಯಿಂದ ಹೊರಗೆ ಹಾಕಿರುವುದಾಗಿ ಆರೋಪಿಯ ಈ ಕೃತ್ಯದಿಂದ ಪಿರ್ಯಾದು ದಾರರು ಖಿನ್ನತೆಗೊಳಗಾಗಿ ತೀರಾ ನೊಂದುಕೊಂಡಿರುವುದಾಗಿದೆ.
8.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.03.2015 ರಂದು ಸಮಯ ಸುಮಾರು ಮದ್ಯಾಹ್ಣ 12.45 ಗಂಟೆಗೆ ಸ್ಕೂಟರ್ ನಂಬ್ರ KA19-EE-1635 ನ್ನು ಅದರ ಸವಾರ ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಾ ಬಿಕರ್ನಕಟ್ಟೆ ಮನೋಹರ್ ಹೋಟೆಲ್ ಎದುರು ರಸ್ತೆ ದಾಟುತ್ತಿದ್ದ ಫಿರ್ಯಾದುದಾರರಾದ ಶ್ರೀಮತಿ ಜಯಲಕ್ಷ್ಮೀ ಶೆಟ್ಟಿ (ಪ್ರಾಯ 70 ವರ್ಷ) ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ಸೊಂಟದ ಬಲಭಾಗ ಹಾಗೂ ಎದೆಯ ಬಲಭಾಗಕ್ಕೆ ಗುದ್ದಿದ ನೋವು ಉಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ.
9.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16/03/2015 ರಂದು ಸಮಯ ಸುಮಾರು 15:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಆರ್. ಎಶ್ವರಾಜ್ ರವರ ಬಾಬ್ತು ಸ್ಕೂಟರ್ ನಂಬ್ರ KA-19-EC-4959ನೇ ದರಲ್ಲಿ ಫಿರ್ಯಾದುದಾರರ ಮಗ ಸಾಯಿ ನಾರಯಣ್(22) ರವರು ಬಿಶಪ್ ವಿಕ್ಟರ್ ರಸ್ತೆಯಿಂದ ಕೆ ಎಮ್ ಸಿ ಅತ್ತಾವರ ಕಡೆಗೆ ಹೋಗುವರೇ , ಎದುರುಗಡೆಯಿಂದ ಸ್ಕೂಟರ್ ನಂಬ್ರ KL-14-N-291 ನೇ ದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸ್ಕೂಟರ್ ಅನ್ನು ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಮಗ ಸಾಯಿ ನಾರಯಣ್(22) ರವರ ಸ್ಕೂಟರಗೆ ಡಿಕ್ಕಿ ಮಾಡಿದ ಪರಿಣಾಮ ಕಾಂಕ್ರಿಟ್ ರಸ್ತೆಗೆ ಬಿದ್ದು ಪ್ರಜ್ನಾಹಿನ ಸ್ತಿತಿಯಲ್ಲಿ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿರುವುದಾಗಿದೆ.
10.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2015 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಪೆಲ್ಸಿ ಡಿಸೋಜಾ ರವರ ಮಗನಾದ ರೋಹನ್ ಡಿಸೋಜಾ ಎಂಬವರು ಸಹಸವಾರರಾಗಿ ವರ್ಜಿಲ್ ಎಂಬವರು ಸವಾರರಾಗಿ ಕೆಎ- 19 ಈಎಲ್- 7940 ನೇ ದ್ವಿಚಕ್ರ ವಾಹನವನ್ನು ಪಿರ್ಯಾದಿದಾರರ ಅಸೌಖ್ಯದಲ್ಲಿದ್ದ ಸಂಬಂದಿಕರೊಬ್ಬರು ಎ ಜೆ ಆಸ್ಪತ್ರೆಯಲ್ಲಿದ್ದವರಿಗೆ ರಕ್ತ ದಾನ ಮಾಡಲು ಕಿನ್ನಿಗೋಳಿಯಿಂದ ಹೊರಟು ಪಕ್ಷಿಕೆರೆ ಎಂಬಲ್ಲಿ ತಲುಪಿದಾಗ ನಾಯಿಯೊಂದು ಅಡ್ಡ ಬದ್ದ ಪರಿಣಾಮ ಅದನ್ನು ತಪ್ಪಿಸುವ ಪ್ರಯತ್ನದಲ್ಲಿ ಬೈಕ್ ಸಮೇತ ರಸ್ತೆಗೆ ಬಿದ್ದು ಸವಾರನಿಗೆ ಸಣ್ಣಪುಟ್ಟ ಗಾಯವಾಗಿ ಸಹಸವಾರನಾದ ರೋಹನ್ ಡಿಸೋಜಾ ರವರಿಗೆ ತಲೆಗೆ ಗುದ್ದಿದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು; ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ, ನಂತರ ಎ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಪಿರ್ಯಾದಿದಾರರು ಗಾಯಾಳು ಮಗನ ಆರೈಕೆಯಲ್ಲಿದ್ದು ಪ್ರಕರಣ ದಾಖಲಿಸುವ ಬಗ್ಗೆ ಕಾನೂನು ತಜ್ಞರಲ್ಲಿ ಅಭಿಪ್ರಾಯ ಕೇಳಿದ್ದೂ; ಅಪಘಾತಪಡಿಸಿದ ಬೈಕ್ ಸವಾರ ಠಾಣೆಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ.
11.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು ಮಧ್ಯಾಹ್ನ 13-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನೀರಜ್ ವಿ. ಕುಮಾರ್ ರವರು ಎನ್ ಎಮ್ ಪಿ ಟಿ ಆಡಳಿತ ಕಛೇರಿಯಲ್ಲಿ ಕೆಲಸ ಮುಗಿಸಿ ತನ್ನ ಜೊತೆ ರಾಜೇಶ ಎಂಬವರೊಂದಿಗೆ ಪಣಂಬೂರು ಜಂಕ್ಷನ್ ಬಳಿ ರಸ್ತೆ ದಾಟಲು ನಿಂತಿದ್ದಾಗ ಬೈಕಂಪಾಡಿ ಕಡೆಯಿಂದ ಕೆಎ- 19 ಬಿ- 6017 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಆಪಾದಿತ ಚಾಲಕ ಜೋಸೆಫ್ ಎಂಬವರು ಪಣಂಬೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ; ರಾ.ಹೆ 66 ರಲ್ಲಿ ಬಲಗಡೆಯಿಂದ ಬರುತಿದ್ದ ಟ್ಯಾಂಕರ್ ನಂಬ್ರ ಟಿ ಎನ್- 28 ಎ ಡಿ- 3468 ನೇಯದನ್ನು ಎಡಭಾಗದಲ್ಲಿ ಓವರ್ ಟೇಕ್ ಮಾಡಿಕೊಂಡು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಯಾವುದೇ ಸೂಚನೆ ನೀಡದೆ ಪಣಂಬೂರು ಜಂಕ್ಷನ್ ನಲ್ಲಿ ಏಕಾಏಕಿಯಾಗಿ ಬಲಕ್ಕೆ ತಿರುಗಿಸಿದಾಗ ರಸ್ತೆ ದಾಟಲು ನಿಂತಿದ್ದ ರಾಜೇಶ ಎಂಬವರಿಗೆ ಮತ್ತು ತನ್ನ ಬಲಭಾಗದಲ್ಲಿ ಬರುತ್ತಿದ್ದ ಟ್ಯಾಂಕರಿಗೂ ಡಿಕ್ಕಿ ಹೊಡೆದ ಪರಿಣಾಮ ರಾಜೇಶ ರವರು ರಸ್ತೆಗೆ ಬಿದ್ದು, ಎಡಗಾಲಿಗೆ ಮೂಳೆಮುರಿತದ ಗಂಭೀರ ಗಾಯವಾಗಿ ಎ ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಟ್ಯಾಂಕರನ ಮುಂಭಾಗ ಜಖಂಗೊಂಡಿರುತ್ತದೆ.
12.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2015 ರಂದು ಪಿರ್ಯಾದಿದಾರರಾದ ಶ್ರೀ ಬಿನೀಷ್ ಸಿ ದೀಪ್ ರವರು ಸಮಯ 13:00 ಗಂಟೆಗೆ ಅವರು ಕೆಲಸ ಮಾಡುವ ಕಂಪನಿಯಾದ ಜಿ4ಎಸ್ ಸೆಕ್ಯುರ್ ಕಂಪನಿಯಿಂದ ಕೆ ಎ 19 ಎಕ್ಸ್ 3410 ನೇ ನಂಬ್ರದ ಹೊಂಡ ಪ್ಲೆಝರ್ ಬೈಕಿನಲ್ಲಿ ಸವಾರಿ ಮಾಡಿಕೊಂಡು ತನ್ನ ಮನೆಯ ಕಡೆಗೆ ಹೋಗುವಾಗ ಮಾಲೆಮಾರ್ ಅಯ್ಯಪ್ಪ ದೇವಸ್ಥಾನದ ಸಮೀಪ ಗೂಡ್ಸ್ ಆಟೋ ಒಂದು ಅದರ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅವರಿದ್ದ ಬೈಕಿಗೆ ಡಿಕ್ಕಿ ಪಡಿಸಿದ್ದು ಅಲ್ಲಿಂದ ಗೂಡ್ಸ್ಆಟೋ ಚಾಲಕ ಗೂಡ್ಸ್ಆಟೋ ಸಮೇತ ಪರಾರಿಯಾಗಿದ್ದು, ಇದರ ಪರಿಣಾಮ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಮುಖದ ಎಡ ಬಾಗಕ್ಕೆ ,ಕೆನ್ನೆಗೆ ತರಚಿದ ಗಾಯವಾಗಿದ್ದು, ಬಲ ಕೈ ಮತ್ತು ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ತೆಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
13.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು ಫಿರ್ಯಾದಿದಾರರಾದ ಶ್ರೀ ಝಹೀರ್ ಅಹಮ್ಮದ್ ಖಾನ್ ರವರು ಮತ್ತು ಫಳ್ನೀರ್ ನಿವಾಸಿ ಮುಕ್ತರ್ ಅಹ್ಮದ್ ಎಂಬವರೊಂದಿಗೆ ಸೇರಿಕೊಂಡು ಸುಮಾರು 10 ವರ್ಷಗಳಿಂದ ನಗರದ ರಾವ್ & ರಾವ್ ಸರ್ಕಲ್ ನಲ್ಲಿ ಕಿಂಗ್ ಶೂಸ್ ಎಂಬ ಫೂಟ್ ವೇರ್ ಅಂಗಡಿ ಇಟ್ಟುಕೊಂಡು ಬ್ಯುಸಿನೆಸ್ ಮಾಡಿಕೊಂಡಿರುವುದಾಗಿದೆ. ವ್ಯವಹಾರ ಮಾಡಿಕೊಂಡ ಸಮಯ ಲಾಭಾಂಶದಲ್ಲಿ ಶೇಕಡಾ 70% ರಷ್ಟು ಮುಕ್ತರ್ ಅಹ್ಮದ್ ನಿಗೆ ಮತ್ತು ಉಳಿದ 30% ರಷ್ಟು ಲಾಭಾಂಶವನ್ನು ಪಿರ್ಯಾದಿದಾರರಿಗೂ ಕೊಡಬೇಕೆಂದು ನಮ್ಮಿಬ್ಬರಲ್ಲಿ ಮಾತಿನ ಒಪ್ಪಂದವಾಗಿರುತ್ತದೆ. ಆದರೆ ಮುಕ್ತರ್ ಅಹ್ಮದ್ ರವರು ಪಿರ್ಯಾದಿದಾರರಿಗೆ 23 ತಿಂಗಳಿನಿಂದ ಲಾಭಾಂಶ ನೀಡಿರುವುದಿಲ್ಲ ಆದಾ ಕಾರಣ ಪಿರ್ಯಾದಿದಾರರು ದಿನಾಂಕ 28-03-2015 ರಂದು ದೂರು ಠಾಣೆಯಲ್ಲಿ ನೀಡಿದ್ದು, ಠಾಣೆಯಲ್ಲಿ ಸಮಕ್ಷಮ ವಿಚಾರಣೆ ನಡೆಸಿರುತ್ತಾರೆ, ಈ ಸಮಸ್ಯೆಯನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಹಿಂಬರಹ ನೀಡಿ ಕಳುಹಿಸಿಕೊಟ್ಟಿರುತ್ತಾರೆ. ಬಳಿಕ ಪಿರ್ಯಾದಿದಾರರು ದಿನಾಂಕ 28.03.2015 ರಂದು ಸಂಜೆ ಸುಮಾರು 4.45 ಗಂಟೆ ಸಮಯಕ್ಕೆ ಕಿಂಗ್ ಶೂ ಅಂಗಡಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮುಕ್ತರ್ ಅಹ್ಮದ್ ನು ಅಂಗಡಿಯ ಬೀಗ ಮುರಿಯಲು ಪ್ರಯತ್ನಿಸುತ್ತಿದ್ದನು. ಆ ಸಮಯ ವಿಚಾರಿಸಲು ಹೋದಾಗ ಮುಕ್ತರ್ ಅಹ್ಮದ್ ನು ಪಿರ್ಯಾದಿದಾರರನ್ನು ತಡೆದು ತನ್ನ ಕೈಯಲ್ಲಿದ್ದ ಸುತ್ತಿಗೆಯಿಂದ ಪಿರ್ಯಾದಿದಾರರ ಕೈ ಗಂಟಿಗೆ ಮತ್ತು ಬಲಭುಜಕ್ಕೆ ಹೊಡೆದಿರುತ್ತಾನೆ. ಅಲ್ಲದೇ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾನೆ. ಕೂಡಲೇ ಪಿರ್ಯಾದಿದಾರರು ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24.03.2015 ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಿ. ಜಯ ಶೆಟ್ಟಿ ರವರು ತನ್ನ ಬಾಬ್ತು ಕೆಎ-19-ಇಜಿ-7402 ನೇದಲ್ಲಿ ಪಿರ್ಯಾದಿದಾರರು ಸವಾರರಾಗಿದ್ದುಕೊಂಡು ತನ್ನ ಮನೆ ಕಡೆಯಿಂದ ಕರ್ಬಿಸ್ಥಾನದ ಬಳಿ ಇರುವ ಶ್ರೀ ಆದಿ ಮಾಯೆ ದೇವಸ್ಥಾನದ ಕಡೆಗೆ ಹೋಗುವರೇ ಮೊಗರು ಕರ್ಬಿಸ್ಥಾನ ದ್ವಾರದ ಕಡೆ ಹೋಗಲು ಸ್ಕೂಟರಿನ ಬಲಭಾಗದ ಇಂಡಿಕೇಟರ್‌ನ್ನು ಹಾಕಿಕೊಂಡು ಕರ್ಬಿಸ್ಥಾನ ಕಡೆಗೆ ತಿರುಗಿಸುತ್ತಿರುವ ಸಮಯ ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ಮೊಗರು ಕಡೆಯಿಂದ ಮೋಟರ್ ಸೈಕಲ್ ಒಂದನ್ನು ಅದರ ಸವಾರರು ಹಿಂಬದಿ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್‌ನ ಬಲಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಂಬರು ರಸ್ತೆಗೆ ಬಿದ್ದು ಅವರ ಪಿರ್ಯಾದಿದಾರರ ಬಲಕೈಗೆ ಗುದ್ದಿದನೋವು ಹಾಗೂ, ಬಲಭಾಗದ ಸೊಂಟಕ್ಕೆ ಗುದ್ದಿದನೋವು ಹಾಗೂ ಬಲಕಾಲಿನ ಪಾದದ ಮೇಲೆ ರಕ್ತಗಾಯ ಉಂಟಾಗಿರುತ್ತದೆ, ಅಪಘಾತ ಉಂಟುಮಾಡಿದ ಮೋಟಾರ್ ಸೈಕಲ್‌ನ ನಂಬ್ರ: KA-19-W-5666 ಹಾಗೂ ಸವಾರರ ಹೆಸರು ಪರುಶುರಾಮ ಆಗಿರುತ್ತದೆ.
15.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.03.2015 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶಾಂತಾ ರವರು ಬಸ್ಸು ನಂಬ್ರ ಕೆಎ-19-ಎಇ-4993 ರಲ್ಲಿ ಪಿರ್ಯಾದಿದಾರರು ಹಾಗೂ ಅವರ ಗಂಡ ಪಕೀರಪ್ಪ ಹಾಗೂ ಅವರೊಂದಿಗೆ ಕೆಲಸ ಮಾಡುವ ನಂದಿನಿ ಹಾಗೂ ಆಕೆಯ ಮಗು ಹನುಮಂತ ರವರುಗಳೊಂದಿಗೆ ಪ್ರಯಾಣಿಕರಾಗಿ ಕುಳಿತುಕೊಂಡು ಜ್ಯೋತಿನಗರ ಕಡೆಯಿಂದ ಎಕ್ಕೂರು ಕಡೆಗೆ ಕೆಲಸದ ಬಗ್ಗೆ ಹೋಗುವರೇ ಎಕ್ಕೂರು ಬಸ್ಸು ನಿಲ್ದಾಣದ ಬಳಿ ತಲುಪುತ್ತಿದ್ದಂತೆ ವೇಗವಾಗಿ ಹೋಗುತ್ತಿದ್ದ ಬಸ್ಸಿಗೆ ಬಸ್ಸಿನ ಚಾಲಕರು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಡ್ರೈವರ್‌ನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಪಿರ್ಯಾದಿದಾರರು ಮತ್ತು ನಂದಿನಿಯವರ ಮಗ ಹನುಮಂತ ಸೀಟಿನಿಂದ ಜ್ಯಾರಿ ಬಸ್ಸಿನ ಒಳಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗುದ್ದಿದ ನೋವು ಹಾಗೂ ನಂದಿನಿಯವರ ಮಗು ಹನುಮಂತನ ಎಡಕಾಲಿನ ಮಣಿಗಂಟಿನ ಬಳಿ ಮೂಳೆ ಮುರಿತದ ಗಂಭೀರಸ್ವರೂಪದ ನೋವುಂಟಾಗಿರುತ್ತದೆ ಈ ಅಪಘಾತಕ್ಕೆ ಬಸ್ಸು ಚಾಲಕನ ಅತಿವೇಗದ ಚಾಲನೆಯೇ ಕಾರಣವಾಗಿರುತ್ತದೆ.
16.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.03.2015 ರಂದು ಬೆಳಿಗ್ಗೆ ಸಮಯ ಸುಮಾರು 4.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಯದುಕೃಷ್ಣಾ ರವರ ಗೆಳೆಯ ರತುಲ್ ಎಂಬವರು ಅವರ ಬೈಕ್ ನಂಬ್ರ: ಕೆಎಲ್-58-ಸಿ-7268 ನೇದರಲ್ಲಿ ಸವಾರರಾಗಿದ್ದುಕೊಂಡು ಪಿರ್ಯಾದಿದಾರರ ರೂಮ್ ಇರುವ ಕಣ್ಣೂರು ಕಡೆಗೆ ಬಂದು ಪಿರ್ಯಾದಿದಾರರು ಹಾಗೂ ರತುಲ್ ಉಪಾಹರ ಸೇವಿಸಲು ಮಂಗಳೂರು ಕಡೆಗೆ ಹೋಗಲು ಆತನ ಬೈಕ್ನ ಹಿಂಬದಿಯಲ್ಲಿ ಪಿರ್ಯಾದಿದಾರರು ಸಹಸವಾರನಾಗಿ ಕುಳಿತುಕೊಂಡು ರತುಲ್ ರವರು ಬೈಕನ್ನು ಚಲಾಯಿಸುತ್ತಿದ್ದು ಸಮಯ ಸುಮಾರು ಮುಂಜಾನೆ 4.50 ಗಂಟೆಗೆ ಅಶೋಕ್ ಲೈಲ್ಯಾಂಡ್‌ನ ಶೋ ರೂಂನ ಎದುರುಗಡೆ ರಸ್ತೆಯಲ್ಲಿ ತಲುಪುತ್ತಿದ್ದಂತೆ ಅವರ ಹಿಂದುಗಡೆಯಿಂದ ಲಾರಿಯೊಂದನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹಿಂಬದಿ ಸವಾರನಾಗಿ ಕುಳಿತಿದ್ದ ಬೈಕಿನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಹಾಗೂ ಬೈಕ್ ಸವಾರ ರತುಲ್ ಮೋಟಾರ್ ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈ ತಟ್ಟಿಗೆ ರಸ್ತೆಗಾಯ ಹಾಗೂ ಕುತ್ತಿಗೆಯ ಎಡಭಾಗಕ್ಕೆ ರಕ್ತಗಾಯ ಉಂಟಾಗಿದ್ದು, ಹಾಗೂ ರತುಲ್ ರವರ ತಲೆಯ ಬಲಭಾಗಕ್ಕೆ ಗಂಭೀರ ಸ್ವರೂಪದ ರಕ್ತಗಾಯ ಹಾಗೂ ಕೈ ಕಾಲುಗಳಿಗೆ ತರಚಿದ ಗಾಯ ಹಾಗೂ ಬಾಯಿಯಿಂದ ರಕ್ತ ಬರುತ್ತಿದ್ದು ಅಪಘಾತ ಮಾಡಿದ ಲಾರಿ ಚಾಲಕನು ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.
Happy Rose Day
ReplyDeleterose day images
rose day 2016
rose day pics
rose day special
rose day sms
rose day quotes
rose day messages
when is rose day
rose day wallpaper
rose day sms in hindi
rose day sayari
rose day status
rose day msg