Tuesday, March 3, 2015

Daily Crime Reports : 03-03-2015

ದೈನಂದಿನ ಅಪರಾದ ವರದಿ.
ದಿನಾಂಕ 03.03.201515:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
3
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
3






















  




1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-03-2015 ರಂದು ಮದ್ಯಾಹ್ನ 13-30 ಗಂಟೆಗೆ  ಪಿರ್ಯಾಧಿದಾರರಾದ ಶ್ರೀ ಮಹಾಂತೇಶ್ ರವರು ಬಲ್ಲಾಳಬಾಗನಿಂದ ವೇರಹೌಸ್ ಜಂಕ್ಷನ್ ಕಡೆಗೆ ಬೈಕ್ನಲ್ಲಿ ಹೋಗುತ್ತಾ ವೇರಹೌಸ್ ತಿರುವಿನಿಂದ ಸ್ವಲ್ಪ ಹಿಂದೆ ಬೈಕ್ ನಿಲ್ಲಿಸಿ ಪಾಳುಬಿದ್ದ ಸೈಟಿನ ಬದಿಯಲ್ಲಿ ಮೂತ್ರಶಂಕೆ ಮಾಡುತ್ತಿದ್ದಾಗ ಅದೇ ಬದಿಯಿಂದ ಹೆಂಗಸೊಬ್ಬಳು ಬರುತ್ತಿದ್ದುದ್ದನ್ನು ಎದುರುಗಡೆಯಿಂದ ಬರುತ್ತಿದ್ದ ನಾಲ್ಕು ಮಂದಿ ಯುವಕರು ನೋಡಿ ಅವರುಗಳು ಪಿರ್ಯಾಧಿದಾರರನ್ನು ಉದ್ದೇಶಿಸಿ ನೀನು ಸಾರ್ವಜನಿಕ ರಸ್ತೆ ಬದಿ ಹೆಂಗಸರು ನಡೆದುಕೊಂಡು ಹೋಗುತ್ತಿದ್ದಾಗ ಅಶ್ಲೀಲದಿಂದ ಮೂತ್ರಶಂಕೆ ಮಾಡುತ್ತಿದ್ದಿಯಲ್ಲ ನಿನಗೆ ತಿಳುವಳಿಕೆ ಇಲ್ಲವೋ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದಾಗ ಅವರೊಳಗೆ ಮಾತುಕತೆಯಾಗಿ ಆ ನಾಲ್ವರು ಪಿರ್ಯಾಧಿದಾರರಿಗೆ ಹೊಡೆಯಲು ಮುಂದಾದಾಗ ಹೆದರಿದ ಪಿರ್ಯಾಧಿದಾರರು ಪಾಳುಬಿದ್ದ ಕಂಪೌಂಡಿನೊಳಗಡೆ ಜಿಗಿದು ಓಡಿಹೋದವರನ್ನು ಹಿಂಬಾಲಿಸಿ ನಾಲ್ವರು ಪಿರ್ಯಾಧಿದಾರರನ್ನು ಬಾಳೆ ಗಿಡಗಳ ಮಧ್ಯಕ್ಕೆ ದೂಡುಹಾಕಿ ಕೈಗಳಿಂದ ಕೆನ್ನೆಗೆ ಹೋಡೆದುದ್ದಲ್ಲದೆ ಅಲ್ಲಿಯೆ ಇದ್ದ ಕಬ್ಬಿಣದ ರಾಡ್ನಿಂದ ಪಿರ್ಯಾಧಿದಾರರ ಎಡಕೋಲು ಕಾಲಿಗೆ ಎಡಕೈ ಅಂಗೈಗೆ ಹೊಡೆದು ರಕ್ತಗಾಯವುಂಟು ಮಾಡಿರುವುದಾಗಿದೆ.

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 02-03-2015 ರಂದು  ಪಿರ್ಯಾದಿದಾರರಾದ  ಶ್ರೀ ಪ್ರಶಾಂತ್ಕುಮಾರ್ ಜೆಪ್ಪುರವರು ತಮ್ಮ ಬಾಬ್ತು ಕಾರು ನಂಬ್ರ ಕೆ.-19-ಎಂ.ಸಿ-3553 ನೇದನ್ನು ಮಂಗಳೂರು ನಗರದ  ಬಲ್ಮಠಕ್ಕೆ ಹೋಗಲೆಂದು ಕ್ಲಾಕ್ಟವರ್ನಿಂದಾಗಿ ಹಂಪನ್ಕಟ್ಟೆ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಾ ಸಮಯ ಮದ್ಯಾಹ್ನ 1:30 ಗಂಟೆಗೆ ಕೆ.ಬಿಕಟ್ಟೆ ಬಳಿ ಪೊಲೀಸ್ಸಿಗ್ನಲ್ಕಂಡು ನಿಲ್ಲಿಸಿದ್ದಾಗ, ಅವರ ಹಿಂದುಗಡೆಯಿಂದ ಅಂದರೆ ಕ್ಲಾಕ್ಟವರ್ಕಡೆಯಿಂದ ಹಂಪನ್ಕಟ್ಟೆ ಕಡೆಗೆ ಕಾರು ನಂಬ್ರ ಕೆ.-19-ಎಂ,.ಡಿ-5887  ನೇದನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣ ಜಖಂ ಉಂಟಾಗಿರುತ್ತದೆ.

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರಿತೇಶ್ ಕೊಟ್ಟಾರಿ ರವರ ಹಿಂದೂ ಜಾಗರಣಾ ವೇದಿಕೆ ಸಮಿತಿಯ ವತಿಯಿಂದ ಕೊಣಾಜೆ ಗ್ರಾಮ ಪಂಚಾಯತ್ನಿಂದ ಅನುಮತಿ ಪಡೆದು, ಮಂಗಳೂರು ತಾಲೂಕು, ಕೊಣಾಜೆ ಗ್ರಾಮದ ಕೊಣಾಜೆ ಪದವು ಜಂಕ್ಷನ್ಎಂಬಲ್ಲಿ ಮಂಗಳೂರಿನಲ್ಲಿ ನಡೆಯುವ ಹಿಂದೂ ಸಮಾಜೋತ್ಸವಕ್ಕೆ ಶುಭ ಕೋರುವ ಬಗ್ಗೆ ಹಾಕಿದ್ದ ಕಟೌಟನ್ನು ದಿನಾಂಕ 27.02.2015 ರ ರಾತ್ರಿ 10:00 ಗಂಟೆಯಿಂದ 28.02.2015 ರ ಬೆಳಿಗ್ಗೆ 06:00 ಗಂಟೆಯ ಮಧ್ಯೆ ಯಾರೋ ಕಿಡಿಗೇಡಿಗಳು ವಿರೂಪಗೊಳಿಸಿ ಹಾನಿ ಮಾಡಿರುತ್ತಾರೆ. ಈ ಬಗ್ಗೆ ನೀಡಿದ ದೂರಿನಂತೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಹರೀಶ್ಚಂದ್ರ ಶೆಟ್ಟಿಗಾರ್ ರವರು ಅಧ್ಯಕ್ಷರಾಗಿರುವ ಗೋಪಾಲಕೃಷ್ಣ ಭಜನಾ ಮಂದಿರದ ವತಿಯಿಂದ ಕೊಣಾಜೆ ಗ್ರಾಮ ಪಂಚಾಯತ್ನಿಂದ ಅನುಮತಿ ಪಡೆದು, ಮಂಗಳೂರು ತಾಲೂಕು, ಕೊಣಾಜೆ ಗ್ರಾಮದ ಮಂಗಳೂರು ವಿಶ್ವ ವಿದ್ಯಾನಿಲಯ ಕ್ರಾಸ್ಬಳಿ ಮಂಗಳೂರಿನಲ್ಲಿ ನಡೆಯುವ ಹಿಂದೂ ಸಮಾಜೋತ್ಸವಕ್ಕೆ ಶುಭ ಕೋರುವ ಬಗ್ಗೆ ಹಾಕಿದ್ದ ಕಟೌಟನ್ನು ದಿನಾಂಕ 27.02.2015 ರ ರಾತ್ರಿ 9:00 ಗಂಟೆಯಿಂದ 28.02.2015 ರ ಬೆಳಿಗ್ಗೆ 06:00 ಗಂಟೆಯ ಮಧ್ಯೆ ಯಾರೋ ಕಿಡಿಗೇಡಿಗಳು ವಿರೂಪಗೊಳಿಸಿ ಹಾನಿ ಮಾಡಿರುತ್ತಾರೆ. ಈ ಬಗ್ಗೆ ನೀಡಿದ ದೂರಿನಂತೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-03.-2015 ರಂದು ರಾತ್ರಿ 9-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಮೆಲ್ವಿನ್ ಪತ್ರಾವೋ ರವರು ತನ್ನ ತಾಯಿಯ ಮನೆಗೆ ಹೋಗುವಾಗ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಅತಿಥಿ ಬಾರ್ ಬಳಿಯಲ್ಲಿ ಅಪರಿಚಿತ 4-5 ಜನರು ಪಿರ್ಯಾದಿದಾರರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ದೂಡಿ ಹೊಡೆದು ಹಲ್ಲೆ ನಡೆಸಿದ್ದು , ಆ ಸಮಯ ಗಲಾಟೆ ತಡೆಯಲು ಬಂದಿರುವ ಪಿರ್ಯಾದಿದಾರರ ಅಣ್ಣ ಓಸ್ವಾಲ್ಡ್ ಪತ್ರಾವೊ ರವರಿಗೆ ಕೂಡಾ ಹೊಡೆದಿರುತ್ತಾರೆ.

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕೆಲವು ದಿನಗಳಿಂದ ಶ್ರೀರಾಮ ಎಡಿಪಡಿತ್ತಾಯ ಎಂಬ ಯುವಕನು ಫೇಸ್ ಬುಕ್ ನಲ್ಲಿ ಯೇಸುಕ್ರಿಸ್ತರ ಕುರಿತು ಹಾಗೂ ಕ್ರೈಸ್ತ ಧರ್ಮದ ಮೂಲ ಸಿದ್ದಾಂತಗಳ ಮೇಲೆ ಹಲ್ಲೆ ಮಾಡುವಂತಹ ಹೇಳಿಕೆಗಳನ್ನು ಬರೆದು ಕ್ರೈಸ್ತ ಧರ್ಮಕ್ಕೆ ಭಾರತೀಯ ಸಹ ಬಾಳ್ವೆಯ ಪರಂಪರೆಗೆ ಹಾಗೂ ಸರ್ವ ಸ್ವೀಕರಣಾ ಭಾವದ ಹಿಂದೂ ಧರ್ಮಕ್ಕೆ ಅಪಾರ ಅನ್ಯಾಯ ಮಾಡಿ, ಕರ್ನಾಟಕದ ಘನತೆ ಗೌರವಕ್ಕೆ ಧಕ್ಕೆಯಾಗುವಂತೆ, ಭಾರತದ ಸಂವಿಧಾನದ ಮೂಲತತ್ವಗಳಿಗೆ ಹಾನಿಯಾಗುವಂತೆ ಪ್ರಕಟಿಸಿ, ಸಮಾಜದ ಶಾಂತಿ ಸುವ್ಯವಸ್ಥೆಗೆ ಅಪಾರ ಹಾನಿಯಾಗುವ ಸಾಧ್ಯತೆಗಳಿರುತ್ತದೆ ಎಂಬುದಾಗಿ ಫಾ. ವಿಲಿಯಂ ಮೆನೇಜಸ್ ರವರು ಪಿರ್ಯಾದಿ ನೀಡಿರುವುದಾಗಿದೆ.

7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-2-2015 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಅರಿಸ್ ರವರು ತನ್ನ ಮಿತ್ರನಾದ ಅಬ್ದುಲ್ ರಹೀಮ್ ಎಂಬವರ ಕೆಎ-19-ಇಎಲ್ -2919 ನಂಬ್ರದ ಬ್ಯೆಕ್ ನಲ್ಲಿ ಹಿಂಬದಿ ಸವಾರನಾಗಿದ್ದು ರಹೀಮ್ ರವರು ಸವಾರರಾಗಿದ್ದ ರಹೀಮ್ರವರು ಸವಾರರಾಗಿ ವಿದೇಶಕ್ಕೆ ಹೋಗುವ ಮಿತ್ರರೊಬ್ಬರನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಲು ಸೂರಿಂಜೆ-ಎಕ್ಕಾರು ರಸ್ತೆಯಲ್ಲಿ ಹೋಗುತ್ತಾ ಸಂಜೆ 06-30 ಗಂಟೆಗೆ ದೇಲಂತಬೆಟ್ಟು ಶಾಲೆಯಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಸವಾರ ರಹೀಮ್ ರವರು ಮೋಟಾರ್ ಸೈಕಲ ನ್ನು ನಿರ್ಲಕ್ಷತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಬ್ಯೆಕ್ ಸಮೇತ ರಸ್ತೆಗೆ ಬಿದ್ದು ಅಪಘಾತಕ್ಕಿಡಾದ ಪರಿಣಾಮದಲ್ಲಿ ಸವಾರ ರಿಬ್ಬರು ರಸ್ತೆಗೆ ಬಿದ್ದು ಅವರ ಪೈಕಿ ಪಿರ್ಯಾದಿದಾರರ ಎಡಕೈಗೆ ಮೂಳೆ ಮುರಿತದ ಗಾಯವಾಗಿದ್ದು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ.

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-03-2015 ರಂದು ಫಿರ್ಯಾದಿದಾರರಾದ ಶ್ರೀ ಹರ್ಷಿತ್ ಪಕಳ ರವರು ಬೆಳಿಗ್ಗೆ ಮನೆಯಿಂದ ಹೊರಟು ತಲಪಾಡಿ ದೇವಿಪುರ ದೇವಸ್ಥಾನದ ಜಾತ್ರೆಗೆ ಹೋಗಿದ್ದು, ಕಾರ್ಯಕ್ರಮ ನೋಡಿ ವಾಪಾಸು ಮನೆಗೆ  ದೇವಸ್ಥಾನದ ಎದುರುಗಡೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದಿನಾಂಕ 02-03-2015 ರಂದು ರಾತ್ರಿ 00-15 ಗಂಟೆಗೆ ಎದುರುಗಡೆಯಿಂದ ಒಂದು ಕಾರು ಅತೀ ವೇಗ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿದಾರರ ಬಲ ಕಾಲಿನ ಪಾದಕ್ಕೆ ಗುದ್ದಿದ ಗಾಯವಾಗಿರುತ್ತದೆ. ಫಿರ್ಯಾದಿದಾರರಿಗೆ ಅಪಘಾತ ನಡೆಸಿದ ಕಾರಿನ ಚಾಲಕನು ಕಾರನ್ನು ನಿಲ್ಲಿಸದೇ ಹಾಗೂ ಪೊಲೀಸರಿಗೆ ಮಾಹಿತಿಯನ್ನು ನೀಡದೆ ಪರಾರಿಯಾಗಿರುತ್ತಾನೆಫಿರ್ಯಾದಿದಾರರ ಅಣ್ಣನಾದ ಅಶ್ವಿತ್ನು 108 ಆಂಬ್ಯುಲೆನ್ಸ್ಗೆ ಕರೆ ಮಾಡಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲುಮಾಡಿರುವುದಾಗಿದೆ. ಕಾರಿನ ಚಾಲಕನನ್ನು ನೋಡಿ ಪರಿಚಯವಿದ್ದು, ಆತನ ಹೆಸರು ಸೂರಜ್ ಎಂಬುದಾಗಿರುತ್ತದೆ.

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ದಿಲನ್ಮ್ಯಾಥ್ಯೂರವರು ಮಂಗಳೂರು ತಾಲೂಕು, ಪೆರ್ಮನ್ನೂರು ಗ್ರಾಮದ ಪಂಡಿತ್ಹೌಸ್ಎಂಬಲ್ಲಿ ದಿಲಿಮಾ ಹೌಸ್ಎಂಬ ಮನೆಯಲ್ಲಿ ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿದ್ದು, ದಿನಾಂಕ 02-03-2015 ರಂದು ಪಿರ್ಯಾದುದಾರರ ತಂದೆ-ತಾಯಿ ಕೆಲಸಕ್ಕೆಂದು ಹೊರಹೋಗಿದ್ದು, ಸಂಜೆ ಸಮಯ  ಸುಮಾರು 5-00 ಗಂಟೆಗೆ ಪಿರ್ಯಾದುದಾರರು ಮತ್ತು ಅವರ 10 ವರ್ಷ ಪ್ರಾಯದ ತಮ್ಮ ದಿಲ್ಸನ್ಅಖಿಲ್ಮ್ಯಾಥ್ಯೂರವರು ಮನೆಯಲ್ಲಿದ್ದಾಗ ಪ್ರಾನ್ಸಿಸ್ಡಿಸೋಜಾ ಮತ್ತು ಅವರ ಹೆಂಡತಿ ಶ್ರೀಮತಿ ಸುನಿತಾ ಡಿಸೋಜಾರವರು ಪಿರ್ಯಾದುದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿದ್ದು, ಆ ಪೈಕಿ ಪ್ರಾನ್ಸಿಸ್ಡಿಸೋಜಾ ನೇರವಾಗಿ ಚಪ್ಪಲಿ ಹಾಕಿಕೊಂಡು ಪಿರ್ಯಾದುದಾರರ ಮನೆಯೊಳಗೆ ಪ್ರವೇಶ ಮಾಡಿದ್ದನ್ನು ಕಂಡು ಪಿರ್ಯಾದುದಾರರು ಪ್ರಾನ್ಸಿಸ್ಡಿಸೋಜಾರಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ಪ್ರಾನ್ಸಿಸ್ಡಿಸೋಜಾ ಪಿರ್ಯಾದಿಯದನ್ನು ಉದ್ದೇಶಿಸಿ "ಭಾರಿ ಮಾತನಾಡುತ್ತೀಯ, ನಿನ್ನ ಅಪ್ಪ ಅಮ್ಮ ಎಲ್ಲಿದ್ದಾರೆ ನಮ್ಮ ಚಿನ್ನವನ್ನು ಕೊಡದೇ ಅವರು ಎಲ್ಲಿದ್ದಾರೆ, ಅವರನ್ನು ಕೊಂದು ಹಾಕುತ್ತೇನೆ" ಎಂದು ಅವಾಚ್ಯ ಶಬ್ದಗಳಿಂದ ಬೈದು ಹೆದರಿಸುತ್ತಿದ್ದಾಗ  ಪಿರ್ಯಾದುದಾರರು ಸಮಾಧಾನಪಡಿಸುತ್ತಿದ್ದಂತೆ, ಮನೆಯ ಒಳಗೆ ಬಾಗಿಲ ಬಳಿ ಚೇಯರ್ನಲ್ಲಿ ಕುಳಿತು ಟಿವಿ ನೋಡುತ್ತಿದ್ದ ಪಿರ್ಯಾದುದಾರರ ತಮ್ಮ  ದಿಲ್ಸನ್ಅಖಿಲ್ ಮ್ಯಾಥ್ಯೂನನ್ನು ನೋಡಿ "ನೀನು ಮೂಲೆಯಲ್ಲಿ ಕುಳಿತು ಏನು ಮಾಡುತ್ತೀ" ಎಂದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಫ್ರಾನ್ಸಿಸ್ಡಿ ಸೋಜನು ಆತನ ಕೈಯಲ್ಲಿದ್ದ ಕತ್ತಿಯಿಂದ ಒಂದೇ ಸವನೆ ದಿಲ್ಸನ್ಅಖಿಲ್ ಮ್ಯಾಥ್ಯೂನ ತಲೆಗೆ ಕಡಿದನು. ಆಗ ಆತನು  ಕೈಯನ್ನು ಮೇಲಕ್ಕೆತ್ತಿದಾಗ ಆತನ ಕೈಗೆ, ಕೈ ಬೆರಳಿಗೆ ಕಡಿದು ರಕ್ತಗಾಯಗೊಳಿಸಿದನು. ಅದನ್ನು ನೋಡಿ  ಪಿರ್ಯಾದುದಾರರು ಬೊಬ್ಬೆ ಹಾಕಿ ತಮ್ಮನ ರಕ್ಷಣೆಗೆ ಹೋದಾಗ ಫ್ರಾನ್ಸಿಸ್ಡಿ ಸೋಜನು ಪಿರ್ಯಾದಿಯನ್ನು ಉದ್ದೇಶಿಸಿ "ನಿನ್ನನ್ನು ಕೂಡಾ ಕೊಲ್ಲುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿ ಆತನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿಯ ತಲೆಗೆ ಕಡಿಯಲು ಬಂದಾಗ ಪಿರ್ಯಾದಿಯು ತನ್ನ ಎಡ ಕೈಯನ್ನು ಅಡ್ಡ ಹಿಡಿದಾಗ ಆ ಕತ್ತಿಯ ಪೆಟ್ಟು  ಪಿರ್ಯಾದಿಯ ಕೈಗೆ ತಾಗಿ ರಕ್ತ ಗಾಯವಾಯಿತು. ಫ್ರಾನ್ಸಿಸ್ಡಿ ಸೋಜನು ಪಿರ್ಯಾದುದಾರರನ್ನು ಮತ್ತು ಅವರ ತಮ್ಮನನ್ನು ಕೊಂದು ಹಾಕುತ್ತಾರೆ ಎಂದು ಹೆದರಿ ಹಾಗೂ  ನೋವಿನಿಂದ  ಜೋರಾಗಿ ಬೊಬ್ಬೆ ಹಾಕಿದ್ದನ್ನು ಕೇಳಿಸಿಕೊಂಡು ಮನೆ ಮಾಲಿಕರಾದ ಮಾರ್ಕ್ದಿಲಿಮ ರವರು ಓಡಿಕೊಂಡು ಬಂದಾಗ ಫ್ರಾನ್ಸಿಸ್ಡಿ ಸೋಜನು ಪಿರ್ಯಾದಿಯನ್ನು ಮತ್ತು ಅವರ ತಮ್ಮನ್ನು ಉದ್ದೇಶಿಸಿ ಮುಂದಕ್ಕೆ ನಿಮ್ಮನ್ನೆಲ್ಲಾ ಕೊಂದು ಹಾಕದೆ ಬಿಡುವುದಿಲ್ಲ ಎಂದು ಬೆದರಿಸಿ ಮನೆಯಿಂದ ಹೊರಗೆ ಹೋದವನು ಹೊರಗೆ ಇದ್ದ ಆತನ ಹೆಂಡತಿ ಸುನಿತ ಡಿ ಸೋಜರೊಂದಿಗೆ ಓಡಿ ಹೋಗಿರುತ್ತಾರೆ. ಈ ಘಟನೆಗೆ ಪಿರ್ಯಾದುದಾರರ ತಾಯಿ ಸುಮಾರು 2 ವರ್ಷಗಳ ಹಿಂದೆ ಸುನಿತ ಡಿಸೋಜಾರವರಿಂದ  ಚಿನ್ನವನ್ನು ಪಡೆದು ಅದನ್ನು ಅಡವು ಇಟ್ಟು 15,000/- ರೂಪಾಯಿ ಪಡೆದು ರೂಪಾಯಿ 8000/- ಹಣವನ್ನು ಸುನಿತಾ ಡಿಸೋಜಾರವರ ಮಗ ರೋಯಲ್ಡಿಸೋಜಾರವರಿಗೆ ನೀಡಿರುತ್ತಾರೆ. ಇದೀಗ ಪಿರ್ಯಾದುದಾರರ ತಾಯಿ ಅಡವಿಗೆ ಇಟ್ಟ ಸುನೀತಾ ಡಿಸೋಜಾರವರ ಚಿನ್ನವನ್ನು ಬಿಡಿಸಿಕೊಟ್ಟಿರುವುದಿಲ್ಲವೆಂದು ದ್ವೇಷಗೊಂಡು ಅರೋಪಿಗಳು ಈ ಕೃತ್ಯ ಮಾಡಿರುವುದಾಗಿದೆ. ತೀವ್ರವಾಗಿ ಗಾಯಗೊಂಡ ಪಿರ್ಯಾದುದಾರರ ತಮ್ಮ ದೇರಳಕಟ್ಟೆ ಯೆನೆಪೋಯ ಮೆಡಿಕಲ್ಕಾಲೇಜು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾನೆ. ಪಿರ್ಯಾದುದಾರರು ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-03-2015 ರಂದು  ಸುಮಾರು 13.00 ಗಂಟೆಗೆ ಬಲ್ಮಠ ರಸ್ತೆಯ ರೂಪ ಹೋಟೇಲಿನ 5 ನೇ ಮಹಡಿಯ ರೂಮ್ ನಂಬ್ರ 502 ರಲ್ಲಿ ರೂಮ್ ಕ್ಲಿನಿಂಗ್ ಕರ್ತವ್ಯ ನಿರ್ವಹಿಸಿಕೊಂಡಿದ್ದ ಶ್ರೀಮತಿ  ಸುಮಿತ್ರಾರವರು ಮಹಿಳಾ ಕೆಲಸಗಾರರ ಪರ ಚರ್ಚೆ ನಡೆಸುತ್ತಿದ್ದರಿಂದ ಅದೇ ಹೋಟೇಲಿನ ರೂಮ್ ಬಾಯ್ ಆಗಿರುವ ಆರೋಪಿ ಸುನೀಲ ಎಂಬಾತ ಪಿರ್ಯಾದುದಾರರಾದ ಶ್ರೀಮತಿ ಸುಮಿತ್ರ ರವರನ್ನು ಅಡ್ಡ ಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ ಬಲವಾಗಿ ಹೊಡೆದು ಜೀವ ಬೆದರಿಕೆ ನೀಡಿದ್ದಾಗಿದೆ.

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀ ಎಂ. ಶಿವಪ್ಪ ಸುವರ್ಣ ರವರು ಶ್ರೀ ಅನಂತ ಪದ್ಮನಾಭ ದೇವಸ್ಥಾನ  ಪೆದಮಲೆ  ಮಾಣೂರು ನೀರುಮಾರ್ಗ ಇದರ ಆಡಳಿತ ಮೊಕ್ತೇಸರರಾಗಿರುತ್ತಾರೆದಿನಾಂಕ: 01.03.2015 ರಂದು  ದೇವಸ್ಥಾನದ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಭಟ್‌‌‌ ರವರು ದೇವಸ್ಥಾನದ ಪೂಜೆ ಮುಗಿಸಿ ರಾತ್ರಿ ಸುಮಾರು 9.00 ಗಂಟೆಗೆ  ದೇವಸ್ಥಾನದ ಬಾಗಿಲುಗಳನ್ನು ಮುಚ್ಚಿ ಬೀಗಭದ್ರಪಡಿಸಿ ಹೋಗಿದ್ದು ದಿನಾಂಕ: 02.03.2015 ರಂದು ಬೆಳಿಗ್ಗೆ 6.00 ಗಂಟೆಗೆ  ಅರ್ಚಕರು ಬಂದು ದೇವಸ್ಥಾನದ ಮುಂಭಾಗಿಲು ತೆರೆದು ಒಳಗಡೆ ನೋಡಿದಾಗ ದೇವಸ್ಥಾನದ ಉತ್ತರ ದಿಕ್ಕಿನಲ್ಲಿರುವ ಬಾಗಿಲು ತೆರೆದಿದ್ದು  ನೋಡಲಾಗಿ ದೇವಸ್ಥಾನದ ಸುತ್ತು ಪೌಳಿಯ ಒಂದೆರಡು ಹೆಂಚು ತೆಗೆದಿದ್ದು ಯಾರೋ ಕಳ್ಳರು ದೇವಸ್ಥಾನದ ಒಳಗಡೆ ಪ್ರವೇಶಿಸಿ  ದೇವಸ್ಥಾನದ ಒಳಗಡೆ ಇದ್ದ ಒಟ್ಟು 6 ಕಾಣಿಕೆ ಡಬ್ಬಿಗಳಲ್ಲಿ ಇದ್ದ ಅಂದಾಜು ರೂ 1500 ರೂಪಾಯಿ  ಹಾಗೂ  ಹಿತ್ತಾಳೆಯ ಗಿಂಡಲ್‌‌-1, ತಾಮ್ರದ ಕೊಡಪಾನ-3, ಹಿತ್ತಾಳೆ ತೋಪು-4, ಹಿತ್ತಾಳೆ ಸೌಟು-4, ಹಿತ್ತಾಳೆ ಕಲಶ, ಹಿತ್ತಾಳೆ ಹರಿವಾಣ10, ದೀವಟಿಗೆ ಕೇಟ್ಲ್‌-1, ಸಾಲು ದೀಪ-1, ಕಾಲು ದೀಪ 5,  ತಾಮ್ರದ ಸವುಟು-3  ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 11500 ಆಗಬಹುದು.

No comments:

Post a Comment