Thursday, March 26, 2015

MEETING :

ಉರ್ವ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ನಡೆದ ಮೊಹಲ್ಲಾ ಸಭೆಯ ಮಾಹಿತಿ ವಿವರ

* * *

ದಿನಾಂಕ 22-03-15 ರಂದು 18.00 ಗಂಟೆಗೆ  ಉರ್ವ ಪೊಲೀಸ್ ಠಾಣಾ  ವ್ಯಾಪ್ತಿಯ ಬಿಜೈ ನ ಫೆಲಿಸಿಟಿ ಅಪಾರ್ಟ್ ಮೆಂಟ್ ನ ವರಾಂಡದಲ್ಲಿ  ಮೊಹಲ್ಲಾ ಸಭೆಯನ್ನು ನಡೆಸಲಾಗಿರುತ್ತದೆ. ಈ ಸಭೆಯಲ್ಲಿ ಉರ್ವ ಪೊಲೀಸ್ ಠಾಣಾ ಸರಹದ್ದಿನ 3ನೇ ಗ್ರಾಮಗಸ್ತಿನಲ್ಲಿ ಬರುವ ಸದಸ್ಯರು ಹಾಜರಿದ್ದು ಈ ಸಭೆಯಲ್ಲಿ 21  ಜನ ಗ್ರಾಮಸ್ಥರು ಪಾಲ್ಗೊಂಡಿರುತ್ತಾರೆ. ಈ ಸಭೆಯಲ್ಲಿ ಸೇರಿದ್ದ ಗ್ರಾಮಸ್ಥರಿಗೆ ಕುಂದು ಕೊರತೆಗಳ ಬಗ್ಗೆ ವಿಚಾರಿಸಲಾಗಿ, ಅವರು ಇತ್ತೀಚಿನ ದಿನಗಳಲ್ಲಿ ಬಿಜೈ, ಸಂಕೈಗುಡ್ಡೆ, ಬಟ್ಟಗುಡ್ಡ ಪರಿಸರಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ , ಮಧ್ಯ ರಾತ್ರಿ ಪೋಲಿ ಹುಡುಗರು ಕುಡಿದು ದಾರಿಯಲ್ಲಿ ಹೋಗುವವರಿಗೆ ತೊಂದರೆಕೊಡುವ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಪೊಲೀಸ್ ಇಲಾಖೆಯವರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡಬೇಕಾಗಿ ಮನವಿ ಮಾಡಿದರು. ಈ ಬಗ್ಗೆ ಹೆಚ್ಚು  ರಾತ್ರಿ ಗಸ್ತು ಸಂಚಾರ ವ್ಯವಸ್ಥೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಸೂಕ್ತ ಭದ್ರತೆಯನ್ನು ನೀಡಲಾಗುವುದು ಎಂದು ಇಲಾಖಾ ವತಿಯಿಂದ ತಿಳಿಸಲಾಯಿತು. ಅಲ್ಲದೇ  ಅವರಿಗೆ ಈ ರೀತಿಯ ಘಟನೆಗಳು ಕಂಡುಬಂದರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ ಗೆ ಅಥವಾ ಉರ್ವಾ ಠಾಣೆಗೆ ಕರೆಮಾಡುವಂತೆ ತಿಳಿಸಿ ಠಾಣೆಯ ದೂರವಾಣಿ ಸಂಖ್ಯೆಯನ್ನು ನೀಡಲಾಯಿತು,.  ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಹಾಗೂ ಅವರಿಗೆ ಠಾಣಾ ಪಿ.ಐ ಮತ್ತು ಪಿ.ಎಸ್.ಐ(ಕಾ.ಸು) ರವರ ದೂರವಾಣಿ ನಂಬ್ರವನ್ನು ಕೊಟ್ಟು, ಯಾವುದೇ ವಿಶೇಷತೆಗಳು ಕಂಡು ಬಂದಲ್ಲಿ ಸದ್ರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಯಿತು.

 

ಮೂರನೇ ಗ್ರಾಮಗಸ್ತಿನಲ್ಲಿ ನಡೆಸಲಾದ ಮೊಹಲ್ಲಾ ಸಭೆಯ ಭಾವಚಿತ್ರ

 

 

No comments:

Post a Comment