Friday, March 13, 2015

Daily Crime Reports : 13-03-2015

ದೈನಂದಿನ ಅಪರಾದ ವರದಿ.
ದಿನಾಂಕ 13.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
1
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
2
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
1
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕೆನರಾ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಕಾಮರ್ಸ್ನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಅಕ್ಷತ್ ಕಾಲೇಜಿಗೆ ಸರಿಯಾಗಿ ಹೋಗದೇ ಆಟವಾಡಿಕೊಂಡು ಸಂಜೆ ಮನೆಗೆ ಬರುತ್ತಿದ್ದನು. ಈ ಬಗ್ಗೆ ಆತನಿಗೆ ಪಾಲಕರು ಬುದ್ದಿವಾದ ಹೇಳಿದ್ದು ದಿನಾಂಕ 10-03-2015 ರಂದು ಕಾಲೇಜಿಗೆ ಹೋಗದೇ ಮನೆಯಲ್ಲಿದ್ದು  ಸಂಜೆ ಸುಮಾರು 3-00 ಗಂಟೆಗೆ ಮನೆಯಲ್ಲಿ ನೋಡಿದಾಗ ಆತನು ಇರಲಿಲ್ಲ. ಆತನು ರಾತ್ರಿ ವೇಳೆ ಮನೆಗೆ ಬರಬಹುದೆಂದು ನಂಬಿ ರಾತ್ರಿಯಾದರೂ ಮನೆಗೆ ಬಾರದೇ ಇದ್ದು, ದಿನಾಂಕ 11-03-2015 ರಂದು ಸಂಬಂಧಿಕರಲ್ಲಿ ಪರಿಚಯಸ್ಥರಲ್ಲಿ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ.
 
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಲೀಲಾ ರವರು ಮಂಗಳೂರು ನಗರದ ಕುಂಜತ್ ಬೈಲ್ ಗ್ರಾಮದ ಅತ್ರಬೈಲ್ ಎಂಬಲ್ಲಿ S NO 20/5 ರಲ್ಲಿ 21 ಸೆಂಟ್ಸ್ ಸ್ಥಳ ಹೊಂದಿದ್ದು, ಸದ್ರಿ ಸ್ಥಳದಲ್ಲಿ ತೆಂಗಿನ ಮರ, ಹಲಸಿನ ಮರ, ಮಾವಿನ ಮರ, ತಾಳೆ ಮರ,ಗಳಿದ್ದು ಅವುಗಳನ್ನು ದಿನಾಂಕ 01.01.2015  ರಂದು ಸಂಜೆ ಸುಮಾರು 7.30 ಗಂಟೆಗೆ ಆರೋಪಿಗಳಾದ ಮೊಹಮ್ಮದ್ ಇತರ 27 ಮಂದಿ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ  ಮೋಟಾರ್ ಸೈಕಲ್ ಗಳಲ್ಲಿ ಮತ್ತು ಕಾರಿನಲ್ಲಿ ಬಂದು ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಕೈಗಳಲ್ಲಿ ರಾಡ್ ಕತ್ತಿ ಮುಂತಾದ ಮಾರಾಕಾಯುಧಗಳನ್ನು ಹಿಡಿದುಕೊಂಡು ಪಿರ್ಯಾದುದಾರರಿಗೆ ಮತ್ತು ಅವರ ಮಕ್ಕಳಿಗೆ ಜೀವ ಬೆದರಿಕೆ ಒಡ್ಡಿರುವುದಲ್ಲದೇ ಮರಗಳನ್ನು ಯಾವುದೇ ಕಾನೂನು  ರೀತ್ಯಾ ಅನುಮತಿ ಬಲತ್ಕಾರವಾಗಿ ಕಡಿದುದಲ್ಲದೇ ನದಿಗೆ ಅಡ್ಡವಾಗಿ ಹಾಕಿದ ಕಲ್ಲುಗಳನ್ನು ದೂಡಿ ಹಾಕಿ ಸುಮಾರು 4-5 ಲಕ್ಷ ಗಳ ನಷ್ಟವನ್ನುಂಟು ಮಾಡಿರುವುದಾಗಿದೆ.
 
3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-03-2015 ರಂದು ಪಿರ್ಯಾದಿದಾರರಾದ ಶ್ರೀ ಯಶವಂತ್ ರವರು ಮನೆಯಿಂದ ತನ್ನ ಬಾಬ್ತು ಕೆ. 19 ಇಸಿ 9147 ನೇಯ ಮೋಟಾರು ಸೈಕಲಿನಲ್ಲಿ ಹೊರಟು ಕೊಂಪದವು ಗ್ರಾಮದ ಮಂಜನಕಟ್ಟೆ ಎಂಬಲ್ಲಿಗೆ ತಲುಪಿದಾಗ ಸಮಯ ಸುಮಾರು 8-30 ಗಂಟೆಗೆ ಮುಚ್ಚೂರು ಕಡೆಯಿಂದ ಬರುತ್ತಿದ್ದ ಮೋಟಾರು ಸೈಕಲ್ ನಂ- ಕೆ. 19 ಇಜೆ 6821 ನೇಯದನ್ನು ಅದರ ಸವಾರನು ತನ್ನ ಮುಂದಿನಿಂದ ಹೋಗುವ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಮಾಡಿ ಪಿರ್ಯಾದುದಾರರ ಬಲಕಾಲಿನ ಪಾದಕ್ಕೆ ಮೂಳೆಮುರಿತದ ಗಾಯವಾಗಿದ್ದು ಕೆ. 19 ಇಜೆ 6821 ನೇ ಮೋಟಾರು ಸೈಕಲ ಸವಾರನಿಗೂ ಗಾಯಗಳಾಗಿದ್ದು ಮಂಗಳೂರು ಫಾದರಮುಲ್ಲರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-02-2015 ರಂದು ಬೆಳಿಗ್ಗೆ 08-20 ಗಂಟೆಯಿಂದ 16-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ  ಕಂಕನಾಡಿ ಪಾದರ್ ಮುಲ್ಲರ್ ಆಸ್ಪತ್ರೆಯ ಕ್ಯಾಂಟಿನ್ ಬಳಿ ಬೆಸ್ ಮೆಂಟ್ ನಲ್ಲಿ ದ್ಚಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಪಿರ್ಯಾದಿದಾರರಾದ ಶ್ರೀ ಡೆನಿಯಲ್ ಡೇಸಾ ರವರ ಆರ್. ಸಿ. ಮಾಲಕತ್ವದ 2014ನೇ ಮೊಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 49000/- ಬೆಲೆ ಬಾಳುವ KA 19 EL 2054  ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು  ಕಳವಾದ ದ್ಚಿಚಕ್ರ ವಾಹನದ ಸೀಟ್ ಕೆಳಭಾಗದಲ್ಲಿರುವ ಟೂಲ್ಸ್ ಬಾಕ್ಸ್ ನಲ್ಲಿ ದ್ಚಿಚಕ್ರ ವಾಹನಕ್ಕೆ ಸಂಬಂಧಿಸಿದ R.C., D.L, ಹಾಗೂ INSURANCE  ಇವುಗಳ ಮೂಲ ಪ್ರತಿಗಳು ಕೂಡ ಇರುತ್ತದೆ. ಕಳವಾದ ವಾಹನವನ್ನು ಹುಡುಕಾಡಿದಲ್ಲಿ  ಪತ್ತೆಯಾಗಿರುವುದಿಲ್ಲ.
 
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-03-2015 ರಂದು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಮುತಾಲಿಫ್ ರವರು ಫಾರೂಕ್‌‌ ಮತ್ತು ಇಬ್ರಾಹಿಂ ರವರೊಂದಿಗೆ ಅವರ ಭಾವ ಅಫೀಜ್‌‌ ಎಂಬಾತನ ಕೇಸಿನ ವಿಚಾರಣೆಯ ಬಗ್ಗೆ  ಮಾನ್ಯ 3 ನೇ ಜೆಎಂಎಫ್ಸಿ ನ್ಯಾಯಾಲಯ ಮಂಗಳೂರಿಗೆ ಬಂದಿದ್ದು, ಬೇರೆ ಪ್ರಕರಣದಲ್ಲಿ ನ್ಯಾಯಾಂಗ ಬಂದನದಲ್ಲಿರುವ ಮುಸ್ತಾಕ್‌‌, ಜಿಯಾ, ಹನೀಪ್ಮತ್ತು ಪೈಜಲ್‌‌ ಎಂಬವರನ್ನು ಪೊಲೀಸರು ಬೆಂಗಾವಲಿನಲ್ಲಿ ಆಫೀಜ್ನು ಶಾಮೀಲಾಗಿರುವ ಕೇಸಿನ ವಿಚಾರಣೆಯ ಬಗ್ಗೆ ಮಾನ್ಯ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಗಿದ ಬಳಿಕ ಮಧ್ಯಾಹ್ನ ಸುಮಾರು 1-00 ಗಂಟೆಗೆ ಪಿರ್ಯಾದಿದಾರರು ಹಾಗೂ ಆತನ ಆಫೀಜ್‌‌, ಫಾರೂಕ್‌‌ ಹಾಗೂ ಇಬ್ರಾಹಿಂ ರವರು ಕೋರ್ಟ್ನಿಂದ ವಾಪಾಸು ಮನೆಗೆ ಹೋಗಲು ಕೋರ್ಟ್ರಸ್ತೆಯ ಹಿಲ್‌‌ಟಾಪ್ಬಿಲ್ಡಿಂಗ್ನ ಬಳಿ ನಡೆದುಕೊಂಡು ಬರುತ್ತಿದ್ದಾಗ ಪೊಲೀಸು ಬೆಂಗಾವಲಿನಲ್ಲಿದ್ದ ಮುಸ್ತಾಕ್‌‌, ಜಿಯಾ, ಹನೀಪ್ಮತ್ತು ಪೈಜಲ್‌‌ ರವರನ್ನು ನೋಡಲು ಬಂದಿದ್ದ ಕುದ್ರೋಳಿಯ ಇರ್ಪಾನ್‌‌, ಜಲೀಲ್, ಸಿನಾನ್ಮತ್ತು ಇನೂಸ್‌‌ ಹಾಗೂ ಇತರರು ಒಟ್ಟು ಸೇರಿ ಸಮಾನ ಉದ್ದೇಶದಿಂದ ಪಿರ್ಯಾದಿದಾರರು ಹಾಗೂ ಅವರೊಂದಿಗೆ ಇದ್ದವರನ್ನು  ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ ಕುದ್ರೋಳಿಯ ಇರ್ಪಾನ್‌‌, ಜಲೀಲ್, ಸಿನಾನ್ಮತ್ತು ಇನೂಸ್‌‌ ಹಾಗೂ ಇತರರು  ಅವರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿರುವುದಾಗಿದೆ.
 
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09.03.2015 ರಂದು  ಸಂಜೆ 3.00 ಗಂಟೆಗೆ ಕಂಕನಾಡಿ ರೈಲ್ವೆ ಸ್ಟೇಶನ್ಬಳಿ ಬಚ್ಚು ಸ್ವಾಮಿ ಕಟ್ಟೆಯ ಹತ್ತೀರ ಫಿರ್ಯಾದಿದಾರರಾದ ಶ್ರೀ ನಿಲಯ್ಯ ರವರು ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಅಂಗಳದಲ್ಲಿ ಅವರ ಬಾಬ್ತು KA-19 R-7841 HERO  HONDA SPLENDAR PLUS ಕಪ್ಪು ಬಣ್ಣದ  ಬೈಕನ್ನು ನಿಲ್ಲಿಸಿ ಮನೆಯ ಕಾಮಗಾರಿಯನ್ನು ನೋಡುತ್ತಾ ಮನೆಯ ಹಿಂಬದಿ ಕಡೆಗೆ ಹೋಗಿದ್ದು ಸ್ವಲ್ಪ ಸಮಯ ಅಂದರೆ ಸುಮಾರು 3.30 ಗಂಟೆಗೆ ವಾಪಸು ಬಂದು  ಬೈಕ್ಇಟ್ಟ ಅಂಗಳವನ್ನು ನೋಡಿದಾಗ ಬೈಕ್ ಕಾಣೆಯಾಗಿರುತ್ತದೆ. ಫಿರ್ಯಾದಿದಾರರು ಅವರ ಮನೆಯವರಲ್ಲಿ ಹಾಗೂ ಆಸುಪಾಸಿನವರಲ್ಲಿ  ವಿಷಯ ತಿಳಿಸಿ ಈ ತನಕ ಹುಡುಕಾಡಿದ್ದಲ್ಲಿ ಪತ್ತೆಯಾಗಿರುವುದಿಲ್ಲಾ ಸದ್ರಿ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳುವಾದ ಬೈಕ್ನ ಅಂದಾಜು ಮೌಲ್ಯ 16.000 ರೂ . ಆಗಿರುತ್ತದೆ.
 
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10.03.2015 ರಂದು ರಾತ್ರಿ ಸುಮಾರು 8.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಘುನಾಥ್ ರವರು ಅಡ್ಯಾರು ಸಹ್ಯಾದ್ರಿ ಕಾಲೇಜಿನ ಎದುರುಗಡೆ ರಸ್ತೆಯಲ್ಲಿ  ರಸ್ತೆ ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಬಿ.ಸಿ ರೋಡ್‌‌ ಕಡೆಗೆ ಕೆಎ-19-ಇಇ-9722 ನೇ ಆಕ್ಟಿವಾ ಸ್ಕೂಟರನ್ನು ಅದರ ಸವಾರ ಶಿವಾನಂದ ಬೆಳ್ಚಡ ರವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ  ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಡಾಮರು ರಸ್ತೆಗೆ ಬಿದ್ದು ಅವರ ಸೊಂಟದ ಎಡಭಾಗಕ್ಕೆ ಹಾಗೂ ಎಡಕೋಲುಕಾಲಿಗೆ  ಗುದ್ದಿದ ನೋವು ಉಂಟಾಗಿರುತ್ತದೆ ಹಾಗೂ ಎರಡು ಕೈಗಳ ಮೊಣಗಂಟಿಗೆ  ತರಚಿದ ಗಾಯ ಉಂಟಾಗಿರುತ್ತದೆ.
 
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕರುಣಾಕರ ರವರ ಅಣ್ಣ ಮಾಧವ(44 ವರ್ಷಇವರು ಅಡ್ಯಾರು ಮುಗುಳಿ ಎಂಬಲ್ಲಿ ಅವರ ಪತ್ನಿ ರೇಣುಕಾ ಎಂಬವರ ಜೊತೆಯಲ್ಲಿ ವಾಸ್ತವ್ಯ ಇದ್ದು ಟೈಲರ್‌‌ ವೃತ್ತಿಯನ್ನು ಮಾಡಿಕೊಂಡಿರುತ್ತಾರೆ ದಿನಾಂಕ: 08.03.2015 ರಂದು ಮಾಧವ ರವರು ಮಧ್ಯಾಹ್ನ ಊಟ ಮಾಡಿ ಮನೆಯಿಂದ ಹೋದವರು ರಾತ್ರಿ 1.00 ಗಂಟೆಗೆ ಮನೆಗೆ ಬಂದು  ಬಾಗಿಲು ಬಡಿದಾಗ ಪಿರ್ಯಾದಿದಾರರ ಅತ್ತಿಗೆ ರೇಣುಕಾ ರವರು ಬಾಗಿಲು ತೆರೆದಾಗ ಮಾಧವ ರವರು ಬಾಗಿಲು ಬಳಿಯೆ  ಕುಸಿದು ಬಿದ್ದರು ಅವರ ಕೈಯಲ್ಲಿ ರಕ್ತ ಸೋರುತ್ತಿತ್ತು  ಆಗ ರೇಣುಕಾ ರವರಲ್ಲಿ ಮಾಧವ ರವರು ತನ್ನನ್ನು ಅಡ್ಯಾರ್‌‌ನಲ್ಲಿ ಕಾರಿನಲ್ಲಿ ಬಂದು  ಕೆಲವು ಜನ ಕರೆದುಕೊಂಡು ಹೋಗಿ ಕಣ್ಣೂರು ಕೊಡಕ್ಕಲ್‌‌ ಎಂಬಲ್ಲಿ ತನಗೆ ಹೊಡೆದಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಲ್ಲಿ ಹಾಗೂ ಪಿರ್ಯಾದಿದಾರರ ಅತ್ತಿಗೆಯವರಲ್ಲಿ  ತಿಳಿಸಿದ್ದು ದಿನಾಂಕ: 09.03.2015 ರಂದು ಬೆಳಿಗ್ಗೆ ಮಾಧವ ರವರನ್ನು ರೇಣುಕಾ  ರವರು ಮಂಗಳೂರಿನ ವೆನ್ಲಾಕ್‌‌ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು ಅಲ್ಲಿಂದ ಅದೇ ದಿನ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ  ಪಿರ್ಯಾದಿದಾರರು ತಿಳಿಸಿದ ನಂತರ ರೇಣುಕಾ ರವರೇ ದಾಖಲಿಸಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಂತೆ ದಿನಾಂಕ: 12.03.2015 ರಂದು ಪೂರ್ವಾಹ್ನ 11.10 ಗಂಟೆಗೆ ಮಾಧವ ರವರು ಮೃತಪಟ್ಟಿರುತ್ತಾರೆ. ಪಿರ್ಯಾದಿದಾರರ ಅಣ್ಣ  ಮಾಧವ ಮತ್ತು ಅತ್ತಿಗೆಯ ದೂರ ಸಂಬಂಧಿ ರಘುರಾಮ ಎಂಬವರ ಮಧ್ಯೆ  ಜಾಗದ ತಕರಾರು ಇದೆ, ಹಾಗೂ ಕೆಲವು ದಿನಗಳ ಹಿಂದೆ ಅಡ್ಯಾರಿನಲ್ಲಿ ಮರಳು ಮಾಫಿಯಾದವರು ಅಡ್ಯಾರಿನ ಮಾಹಿತಿಹಕ್ಕು ಕಾರ್ಯಕರ್ತ ತ್ಯಾಂಪಣ್ಣ ಶೆಟ್ಟಿಯವರ ಮೇಲೆ ಹಲ್ಲೆ ನಡೆಸಲಾಗಿದ್ದು ಆ ಸಮಯ ತ್ಯಾಂಪಣ್ಣ ಶೆಟ್ಟಿಯವರಿಗೆ ಆಸ್ಪತ್ರೆಯಲ್ಲಿ ಅವರ ಆರೈಕೆ ಮಾಡಿದ್ದರು ಈ ಹಿನ್ನೆಯಲ್ಲಿ  ಪಿರ್ಯಾದಿದಾರರ ಅಣ್ಣ ಮಾಧವರವರನ್ನು ದ್ವೇಷದಿಂದ ಕೊಲೆಮಾಡಿದ್ದಾರೆ ಎಂಬ ಅನುಮಾನ ಇರುತ್ತದೆ.

No comments:

Post a Comment