Thursday, March 12, 2015

Daily Crime Reports : 12-03-2015

ದೈನಂದಿನ ಅಪರಾದ ವರದಿ.
ದಿನಾಂಕ 12.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
1
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
1




























1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-03-2015 ರಂದು 15-00 ಗಂಟೆಯಿಂದ ದಿನಾಂಕ 11-03-2015 17-00 ಗಂಟೆಯ ಮಧ್ಯೆ ಅವಧಿಯಲ್ಲಿ ಪಿರ್ಯಾದಿದಾರರಾದ ಶ್ರೀ ಅಬೂಬಕ್ಕರ್ ರವರ ಅಣ್ಣನಾದ ಅಬ್ದುಲ್ ಖಾದರ್ ರವರ ಬಾಬ್ತು ಹಳೆಯಂಗಡಿ ಗ್ರಾಮದ ಸಾಗು ಎಂಬಲ್ಲಿರುವ ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಒಡೆದು ಮನೆಯೊಳಗೆ ಪ್ರವೇಶಿಸಿ ಮನೆಯೊಳಗಿನ ಬಟ್ಟೆಬರೆ ಹಾಗೂ ಇತರ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳವಿಗೆ ಪ್ರಯತ್ನಿಸಿದ್ದುಯಾವುದೇ ಸೊತ್ತುಗಳು ಕಳ್ಳತನವಾಗಿರುವುದಿಲ್ಲ.

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06-03-2015 23-00 ಗಂಟೆಯಿಂದ ದಿನಾಂಕ: 07-03-2015ರ ಬೆಳಿಗ್ಗೆ 06-00 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಅವಿಲ್ ಮೆಲ್ರಾಯ್ ಲೋಬೋ ರವರು ಬಾಡಿಗೆ ಮನೆಯಲ್ಲಿ ವಾಸವಿರುವ ಮಂಗಳೂರು ನಗರದ ಬಿಕರ್ನಕಟ್ಟೆಯಲ್ಲಿರುವ ಹಳೇ ಪೊಲೀಸ್ ಠಾಣೆಯ ಬಳಿ ಇರುವ ಎವೆರೆಸ್ಟ್ ಡಿ'ಸೋಜ ಎಂಬವರ ಮನೆಯ ಕಂಪೌಂಡ್ ನ ಒಳಗೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರ ಬಾಬ್ತು KA 18EA 1726 ನೇ ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ 2014ನೇ ಮೊಡೆಲಿನ ಅಂದಾಜು ಮೌಲ್ಯ ರೂ. 68,079/- ಬೆಲೆ ಬಾಳುವ Yamaha Fz ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾದಿದಾರರು ಕಳವಾದ ದಿನದಿಂದ ಇಲ್ಲಿಯವರೆಗೆ ಸದ್ರಿ ದ್ವಿ-ಚಕ್ರ ವಾಹನವನ್ನು ಸುತ್ತಮುತ್ತ ಹುಡುಕಾಡಿ ಪತ್ತೆಯಾಗದೇ ಇದ್ದು ಹಾಗೂ ಪಿರ್ಯಾದಿದಾರರು ಅಗತ್ಯ ಕೆಲಸದ ನಿಮಿತ್ತ ಚಿಕ್ಕಮಗಳೂರಿಗೆ ತೆರಳಿದ್ದುದರಿಂದ ತಡವಾಗಿ ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ.

3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-03-2015 ರಂದು ಮದ್ಯಾಹ್ನ 13-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರೋಕಿ ಜಿ ಲೋಬೊರವರು ತಾನು ಕೆಲಸ ಮಾಡುವ ಕಿನ್ನಿಗೋಳಿ ಐಕಳದ ಪೊಂಪೈ ಕಾಲೇಜಿನಿಂದ ಮೂರು ಕಾವೇರಿಗೆ ಹೋಗಿ ಬರಲು ದಾಮಸ್ ಕಟ್ಟೆ-ಮೂರುಕಾವೇರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಕಾಲೇಜಿನಿಂದ 200 ಮೀಟರ್ ದೂರ ಮುಂದಕ್ಕೆ  ಸಮಯ ಸುಮಾರು 13-02 ಗಂಟೆಗೆ ತಲುಪಿದಾಗ ದಾಮಸ್ ಕಟ್ಟೆ ಕಡೆಯಿಂದ ಮೂರು ಕಾವೇರಿ ಕಡೆಗೆ ಮಾರುತಿ ಓಮ್ನಿ ಕಾರೊಂದನ್ನು ಅದರ ಚಾಲಕ ಅತೀ ವೇಗ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ರಸ್ತೆಯ ಬಲಬದಿ ತನ್ನ ಮುಂದಿನಿಂದ ಹೋಗುತಿದ್ದ ಕುಮಾರಿ ಮಮತಾ, ಅಕ್ಷತಾ ಹಾಗೂ ತೇಜಸ್ವಿನಿ ರವರಗೆ ಡಿಕ್ಕಿಪಡಿಸಿದ್ದು, ಈ ಅಪಘಾತದಿಂದ ಕುಮಾರಿ ಮಮತಾ ರವರ ತಲೆಗೆ, ಅಕ್ಷತಾ ರವರ ಕೈಗೆ ಹಾಗೂ ತೇಜಸ್ವಿನಿಯವರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿ ಅವರ ಪೈಕಿ ಮಮತಾ ಹಾಗೂ ಅಕ್ಷತಾ ರವರಿಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಕಾರು ಚಾಲಕ ಪರಾರಿಯಾಗಿರುವುದಾಗಿದೆ.

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪುತ್ತೂರಿನ ಸಂತ ವಿಕ್ಟರ್ಸ್ ಬಾಲಿಕಾ ಪ್ರೌಡ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಪುತ್ತೂರಿನ ಹಾಸ್ಟೆಲಿನಲ್ಲಿ ತಂಗುತ್ತಿದ್ದು, ದಿನಾಂಕ 27-02-2015 ರಂದು ಅಸೌಖ್ಯದಿಂದ ಮಂಗಳೂರು ಊರಿಗೆ ಬಂದಿದ್ದವಳನ್ನು, ಗುಣಮುಖಳಾದ ಬಳಿಕ  ವಾಪಾಸು ಪುತ್ತೂರಿಗೆ ಕಳುಹಿಸಿಕೊಡಲು ದಿನಾಂಕ 07-03-2015 ರಂದು ಮದ್ಯಾಹ್ನ 1-30 ಗಂಟೆಯ ಸಮಯಕ್ಕೆ ಮಂಗಳೂರು ಸರ್ವಿಸ್ ಬಸ್ ನಿಲ್ದಾಣದಿಂದ ಪುತ್ತೂರು ಕಡೆಗೆ ಹೋಗುವ  ಖಾಸಾಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯನ್ನು ದೊಡ್ಡಮ್ಮನ ಮಗಳು ಕುಳ್ಳಿರಿಸಿದ್ದು, ವಿದ್ಯಾರ್ಥಿನಿ ಪುತ್ತೂರಿನ ಹಾಸ್ಟೇಲ್ ಗೆ ತಲುಪದೇ, ವಾಪಾಸು ಮನೆಗೂ ಬಾರದೇ ಇದ್ದು, ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಸಮಯ ವಿದ್ಯಾರ್ಥಿನಿಗೆ ಪರಿಚಯಗೊಂಡ ಸೊರಬದ ರಾಜೇಶ್ ಎಂಬಾತನು ಅಪಹರಿಸಿಕೊಂಡು ಹೋಗಿರುವ ಸಂಶಯ ಇರುತ್ತದೆ.

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-03-2015 ರಂದು 20-00 ಗಂಟೆಯಿಂದ ದಿನಾಂಕ 11-03-2015ರಂದು ಬೆಳಿಗ್ಗೆ 08-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದಲ್ಲಿರುವ ಗಾಸಾಗ್ರಾಂಡಾ ಬಳಿಯಲ್ಲಿರುವ ಖಾಲಿ ಜಾಗದಲ್ಲಿ ಪಾರ್ಕ್ ಮಾಡಲಾಗಿದ್ದ ಪಿರ್ಯಾದಿದಾರರಾದ ಶ್ರೀ ಅಕ್ಷೀತ್ ಎ. ರವರ ವಾರೀಸುದಾರಿಕೆಯ ಎರಡು ಜೆ.ಸಿ.ಬಿ. ಹಾಗೂ 8 ಟಿಪ್ಪರ್ ಗಳಿಗೆ ಅಳವಡಿಸಲಾಗಿದ್ದ ಒಟ್ಟು 10  ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬ್ಯಾಟರಿಗಳ ಒಟ್ಟು ಅಂದಾಜು ಮೌಲ್ಯ 1,10,000/- ರೂಪಾಯಿ ಆಗಬಹುದು.

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 11-3-2015 ರಂದು ಸಂಜೆಯ ಹೊತ್ತಿಗೆ ಫಿರ್ಯಾದಿದಾರರಾದ ಶ್ರೀ ಎಡ್ವಿನ್ ರಾಹುಲ್ ಡಿ'ಸೋಜಾ ರವರು ತನ್ನ ಸ್ನೇಹಿತ ಕಾರ್ತಿಕ್ಎಂಬಾತನಿಗೆ ಕಾಲಿಗೆ ಆದ ಗಾಯಕ್ಕೆ ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿ ಅಲ್ಲಿಂದ ರಾಹುಲ್ನು ಕಾರ್ತಿಕ್ಎಂಬಾತನನ್ನು ಮೋಟಾರು ಸೈಕಲಿನಲ್ಲಿ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ತೊಕ್ಕೊಟಿನಿಂದ ಕುಂಪಲ ಕಡೆಗೆ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ ಸುಮಾರು 8-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಕುಂಪಲ ಬಾಲಕೃಷ್ಣ ಮಂದಿರದ ಬಳಿ ಮೋಟಾರು ಸೈಕಲ್ ಸ್ಕಿಡ್ಆಗಿ ರಾಹುಲ್ಮತ್ತು ಕಾರ್ತಿಕ್ಮೋಟಾರು ಸೈಕಲಿನೊಂದಿಗೆ ಬಿದ್ದಾಗ ಅಲ್ಲಿಗೆ ಜಯರಾಜ್ ಎಂಬವರು ಬಂದು ರಾಹುಲ್ಗೆ ಮೋಟಾರು ಸೈಕಲ್ ಸರಿಯಾಗಿ ಸವಾರಿ ಮಾಡಲು ಆಗುವುದಿಲ್ಲವೆ ಎಂದು ಜೋರು ಮಾಡಿದ್ದು, ನಂತರ ಫಿರ್ಯಾದಿದಾರರು ಮತ್ತು ಕಾರ್ತಿಕ್ ಮೋಟಾರು ಸೈಕಲನ್ನು ಎತ್ತಿ ಅಲ್ಲಿಂದ ಹೊರಟು ಹೋಗುವಷ್ಟರಲ್ಲಿ ಜಯರಾಜ್ರವರು ರಾಹುಲ್ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ರಾಹುಲ್ನ ಶರ್ಟಿನ ಕಾಲರ್ ಹಿಡಿದು ಕೈಯಿಂದ ಮುಖಕ್ಕೆ ಹೊಡೆದು ಮುಂದೆ ಈ ರೀತಿ ಮೋಟಾರು ಸೈಕಲ್ಜೋರಾಗಿ ಸವಾರಿ ಮಾಡಿದರೆ ಜಾಗ್ರತೆ ಎಂದು ಜೋರು ಮಾಡಿರುತ್ತಾರೆ.

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 11-3-2015 ರಂದು ರಾತ್ರಿ ಸುಮಾರು 9-30 ಗಂಟೆಯ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಜಯಪ್ರಸಾದ್ ರವರು ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಮೂರುಕಟ್ಟೆ ಕುಂಪಲ ಜೆ.ಪಿ.ನಿಲಯ ಎಂಬ ತನ್ನ ವಾಸದ ಮನೆಯಲ್ಲಿರುವ ಸಮಯ ಆರೋಪಿಗಳಾದ ಕಿರಣ್‌, ಪಚ್ಚು @ ಪ್ರಸಾದ್, ರಾಹುಲ್ಮತ್ತಿತರರು ತಲವಾರು ಮತ್ತು ಮರದ ಸೋಂಟೆಗಳನ್ನು ಹಿಡಿದು ಅಕ್ರಮ ಕೂಟ ಸೇರಿಕೊಂಡು ಫಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿಯನ್ನು ಉದ್ದೇಶಿಸಿ ನೀನು ಕುಂಪಲದಲ್ಲಿ ಬಾರೀ ದೊಡ್ಡ ಜನನಾ, ನಮ್ಮ ಸ್ನೇಹಿತರಿಗೆ ನೀನು ಬಾರೀ ಜೋರು ಮಾಡುತ್ತೀಯ ಎಂದು ಬೇಡದ ಮಾತುಗಳಿಂದ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಫಿರ್ಯಾದಿದಾರರ ಬೆನ್ನಿಗೆ, ಮುಖಕ್ಕೆ ಹೊಡೆದು, ಗುದ್ದಿ, ಕಾಲಿನಿಂದ ತುಳಿದು ನೋವುಂಟು ಮಾಡಿದಾಗ ಫಿರ್ಯಾದಿದಾರರು ಬೊಬ್ಬೆ ಹಾಕಿದ್ದನ್ನು ಕೇಳಿ ಆರೋಪಿಗಳ ಪೈಕಿ ಒಬ್ಬಾತನು ತನ್ನ ಕೈಯಲ್ಲಿದ್ದ ತಲವಾರನ್ನು ಎತ್ತಿ ಫಿರ್ಯಾದಿಯನ್ನು ಉದ್ದೇಶಿಸಿ ಬಾರೀ ಬೊಬ್ಬೆ ಹಾಕುತ್ತೀಯ, ನಿನ್ನನ್ನು ಕಡಿದು ಕೊಲೆ ಮಾಡುತ್ತೇನೆ ಎಂದು ಹೇಳಿ ಆತನ ಕೈಯಲ್ಲಿದ್ದ ತಲವಾರನ್ನು ಎತ್ತಿ ಫಿರ್ಯಾದಿದಾರರ ತಲೆಗೆ ಕಡಿಯಲು ಬಂದಾಗ ಫಿರ್ಯಾದಿದಾರರು ಹೆದರಿ ಹೊರಗೆ ಓಡಿಕೊಂಡು ಹೋಗಿದ್ದು, ಆಗ ಫಿರ್ಯಾದಿದಾರರ ಮನೆಯವರು ಜೋರಾಗಿ ಬೊಬ್ಬೆ ಹಾಕಿದ್ದನ್ನು ಕೇಳಿ ಆಸುಪಾಸಿನವರು ಬರುವುದನ್ನು ಕಂಡು ಆರೋಪಿಗಳು ಫಿರ್ಯಾದಿಯನ್ನು ಉದ್ದೇಶಿಸಿ ಮುಂದಕ್ಕೆ ಕೊಲೆ ಮಾಡದೆ ಬಿಡುವುದಿಲ್ಲ, ನಿನ್ನ ವರ್ಕ್ಶಾಪ್ನ್ನು ತೆರೆದರೆ ಜಾಗ್ರತೆ ಎಂದು ಬೆದರಿಸಿ ಅವರ ಕೈಯಲ್ಲಿದ್ದ ತಲವಾರು ಮತ್ತು ಮರದ ಸೋಂಟೆಗಳನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿರುತ್ತಾರೆ.

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10.03.2015 ರಂದು ಮದ್ಯಾಹ್ನ ಸುಮಾರು  1.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಇಬ್ರಾಹಿಂ ರವರು ಜೆಪ್ಪಿನಮೊಗರು ಕಡೆಯಿಂದ ಮೊರ್ನಾಮಿ ಕಡೆಗೆ ಹೋಗುವರೇ ಮಹಾಕಾಳಿ ಪಡ್ಪುವಿನ ರಾಜರಾಜೇಶ್ವರಿ ಗ್ಯಾರೇಜಿನ ಎದುರುಗಡೆ ತಲುಪುತ್ತಿದ್ದಂತೆ ಮುಗೇರು ಕಡೆಯಿಂದ KA-19 C-8512 ನೇ ಆಟೋರಿಕ್ಷವೊಂದನ್ನು ಅದರ  ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಮಣ್ಣಿನ ರಸ್ತೆಗೆ ಬಿದ್ದ ಫಿರ್ಯಾದಿದಾರರ ಮೂಗಿಗೆ ಹಾಗೂ ಎಡಭುಜಕ್ಕೆ  ಗುದ್ದಿದ ನೋವು ಉಂಟಾಗಿದ್ದು ಅಪಘಾತ ಮಾಡಿದ ಸದ್ರಿ ಚಾಲಕನು ಅಪಘಾತಕ್ಕಿಡಾದ ಫಿರ್ಯಾದಿದಾರರನ್ನು  ದೇರಳಕಟ್ಟೆಯ ಎನಪೋಯಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ  ಪರೀಕ್ಷಿಸಿದ ವೈದ್ಯಾಧಿಕಾರಿಯವರು ಫಿರ್ಯಾದಿದಾರರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ.

No comments:

Post a Comment