ದೈನಂದಿನ ಅಪರಾದ ವರದಿ.
ದಿನಾಂಕ 25.03.2015 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
1
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
3
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
7
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
4
|
1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿಜಯ ಕುಮಾರ್ ರವರು ಕೆ ಎ 32 ಎ 4062 ನೇ ಲಾರಿಯ ಚಾಲಕರಾಗಿದ್ದು, ದಿನಾಂಕ 16-03-2015 ರಂದು ತ್ರಿತಾಂಡದಿಂದ ತಮ್ಮದೆ ಊರಿನವರಾದ ಹಾಗೂ ಸಂಬಂಧಿಯಾದ ರಾಜು ನಾಮದೇವ ರಾಠೋಡ್ ಎಂಬುವರನ್ನು ಕ್ಲೀನರ್ ಆಗಿ ಕರೆದುಕೊಂಡು ಹೊರಟು ದಿನಾಂಕ 17-03-2015 ರಂದು ತುಮಕೂರಿಗೆ ತೆರಳಿ ನಂತರ ಅಲ್ಲಿಂದ ದಿನಾಂಕ 18-03-2015 ರಂದು ಹೊರಟು ಅದೇ ದಿನ ರಾತ್ರಿ ಕುಮಟಾ ತಲುಪಿ, ನಂತರ ಅಲ್ಲಿಂದ ದಿನಾಂಕ 19-03-2015 ರಂದು ಬೆಳಿಗ್ಗೆ ಹೊರಟು ರಾತ್ರಿ ಮಂಗಳೂರು ತಲುಪಿ ಪಣಂಬೂರಿನ ನಂದನೇಶ್ವರ ದೇವಸ್ಥಾನದ ಬಳಿ ಇರುವ ಇಂಡಿಯನ್ಸ್ ಕಾರ್ಗೋ ಕ್ಯಾರಿಯರ್ಸ್ ಕಂಪನಿಯ ಆಫೀಸ್ ಬಳಿ ಬಂದು ಲಾರಿ ಲೋಡ್ ಮಾಡುವರೆ ಅಲ್ಲಿಯೇ ನಿಲ್ಲಿಸಿ ಉಳಿದುಕೊಂಡಿದ್ದು. ದಿನಾಂಕ 21-03-2015 ರಂದು ರಾತ್ರಿ ಸುಮಾರು 10.00 ಗಂಟೆಗೆ ಊಟ ಮಾಡಿ ಅವರಿಬ್ಬರೂ ಲಾರಿಯಲ್ಲಿಯೇ ಮಲಗಿದ್ದು, ಮರುದಿನ ಅಂದರೆ ದಿನಾಂಕ 22-03-2015 ರಂದು ಬೆಳಿಗ್ಗೆ 07.30 ಗಂಟೆಗೆ ಪಿರ್ಯಾದಿದಾರರು ರಾಜು ನಾಮದೇವ್ ರಾಠೋಡ್ ನನ್ನು ಎಬ್ಬಿಸಲು ನೋಡಿದಾಗ ಆತನು ಲಾರಿಯಲ್ಲಿ ಇಲ್ಲದೆ ಇದ್ದು. ಈ ಬಗ್ಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಡಿದರೂ ಆತನು ಈವರೆಗೆ ಕಾಣದೆ ಪತ್ತೆಯಾಗಿರುವುದಿಲ್ಲ. ಆತನ ಮನೆಯವರಿಗೂ ಪೋನ್ ಮಾಡಿ ಆತನ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಅಲ್ಲಿಗೂ ಹೋಗದೆ ಆತನು ಕಾಣೆಯಾಗಿರುವುದಾಗಿದೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/03/2015 ರಂದು ಕಾವೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಉಮೇಶ್ ಕುಮಾರ್ ಎಂ.ಎನ್ ರವರು ಠಾಣೆಯಲ್ಲಿರುವ ಸಮಯ ರಾತ್ರಿ 9-45 ಗಂಟೆಗೆ ಐದು ಜನ ಅಪರಿಚಿತ ವ್ಯಕ್ತಿಗಳು ಆಕಾಶಭವನ ಪರಪ್ಪಾದೆ ಕೋರೆ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಮೋಟಾರು ಸೈಕಲ್ ಮತ್ತು ಕಲ್ಲುಗಳನ್ನು ಇಟ್ಟು ಹೋಗಿ ಬರುವ ವಾಹನಗಳನ್ನು ನಿಲ್ಲಿಸಿ ದರೋಡೆ ಅಥವಾ ಸುಲಿಗೆಯಂತಹ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಠಾಣೆಯಿಂದ ಹೊರಟು ರಾತ್ರಿ 10-15 ಗಂಟೆಗೆ ಮಂಗಳೂರು ತಾಲೂಕು ದೇರೆಬೈಲ್ ಗ್ರಾಮದ ಆಕಾಶಭವನ ಪರಪ್ಪಾದೆ ಎಂಬಲ್ಲಿಗೆ ತಲುಪಿದಾಗ ರಸ್ತೆಯಲ್ಲಿ ಐದು ಜನ ವ್ಯಕ್ತಿಗಳಿರುವುದನ್ನು ಕಂಡು ಇಲಾಖಾ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಸುತ್ತುವರಿದಾಗ ಇಬ್ಬರು ತಪ್ಪಿಸಿಕೊಂಡಿದ್ದು ಮೂವರನ್ನು ಹಿಡಿದು ಆ ಸ್ಥಳದಲ್ಲಿ ನಿಂತುಕೊಂಡಿರುವ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದು, ಯಾವುದೋ ಬೇವಾರಂಟ್ ತಕ್ಷೀರು, ದರೋಡೆ ಸುಲಿಗೆಯಂತಹ ಕೃತ್ಯ ನಡೆಸಲು ರಸ್ತೆಯಲ್ಲಿ ಹೊಂಚು ಹಾಕಿರುವುದಾಗಿ ದೃಢಪಟ್ಟದ್ದರಿಂದ ದೀಕ್ಷಿತ್ ಶೆಟ್ಟಿ, ಪ್ರವೀಣ್, ಕೃಷ್ಣ ಎಂಬವರನ್ನು ವಶಕ್ಕೆ ತೆಗೆದುಕೊಂಡು ಅವರ ಬಳಿ ಇದ್ದ KA 19 ED 2357 ಕೆಂಪು ಮೋಟಾರು ಮೋಟಾರು ಸೈಕಲ್, ಮಾರಕಾಯುಧವಾದ 3 ತಲವಾರುಗಳನ್ನು ಪಂಚರ ಸಮಕ್ಷಮ ಮಹಜರು ತಯಾರಿಸಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-03-2015 ರಂದು ಪಿರ್ಯಾದುದಾರರಾದ ಶ್ರೀ ಅರಾಫತ್ ರವರು ಮಂಗಳೂರು ತಾಲೂಕು ಮೂಡುಶೆಡ್ಡೆ ಗ್ರಾಮದ ಮೂಡುಶೆಡ್ಡೆ ಜುಮ್ಮಾ ಮಸೀದಿಗೆ ನಮಾಜ್ ಮಾಡುವರೇ ಮೂಡುಶೆಡ್ಡೆ ಮಸೀದಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಸೀದಿಯ ಕಂಪೌಂಡ್ ಗೇಟ್ ಬಳಿ ರಾತ್ರಿ ಸುಮಾರು 11-15 ಗಂಟೆಗೆ ತಲುಪಿದಾಗ ಶಿವನಗರ ಕಡೆಯಿಂದ 2 ಬೈಕಿನಲ್ಲಿ ಬಂದ ಪಿರ್ಯಾದುದಾರರ ಪರಿಚಯದ ವಿಜಿತ್, ವಸಂತ್, ಜೀವನ್ ಎಂಬವರು ಬೈಕನ್ನು ನಿಲ್ಲಿಸಿ, ವಿಜಿತ್ ಎಂಬಾತನು ಬೈಕಿನಲ್ಲಿಯೇ ಕುಳಿತು ಪಿರ್ಯಾದುದಾರರನ್ನು ಉದ್ದೇಶಿಸಿ ನೀನು ಇಲ್ಲಿ ಏನು ಮಾಡುವುದು. ಇಷ್ಟು ರಾತ್ರಿ, ಇದು ನಮ್ಮ ಏರಿಯಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ನಂತರ ಹಿಂಬದಿ ಕುಳಿತ್ತಿದ್ದ ವಸಂತನಲ್ಲಿ 'ಅವನಿಗೆ ಹೊಡೆ ಅವನನ್ನು ಬಿಡಬೇಡ' ಎಂದು ಹೇಳಿದಾಗ ವಸಂತನು ಬೈಕಿನಿಂದ ಇಳಿದು ಪಿರ್ಯಾದುದಾರರ ಕೆನ್ನೆಗೆ ಕೈಯಿಂದ ಹೊಡೆದನು. ನಂತರ ವಿಜಿತ್ ನು 'ಅವನನ್ನು ಬಿಡಬೇಡ ಕತ್ತಿಯಿಂದ ಕಡೆದು ಕೊಲ್ಲು ಎಂದು ಹೇಳಿದಾಗ ವಸಂತನು ಪಿರ್ಯಾದುದಾರರನ್ನು ಕೊಲ್ಲುವ ಉದ್ದೇಶದಿಂದ ಕೈಯಲ್ಲಿದ್ದ ಕತ್ತಿಯಿಂದ ರಭಸವಾಗಿ ಬೀಸಿದಾಗ ಕತ್ತಿಯಿಂದ ಹೊಡೆದ ಪೆಟ್ಟು ಪಿರ್ಯಾದುದಾರರ ಕುತ್ತಿಗೆಯ ಹಿಂಭಾಗದ ಕೆಳಗೆ ತಾಗಿ ರಕ್ತ ಗಾಯವಾಗಿರುತ್ತದೆ. ಕೂಡಲೇ ಮಸೀದಿಯ ಒಳಗೆ ಹೋಗಿ ಗೆಳೆಯ ಅಲ್ತಾಪ್ ಎಂಬವರಿಗೆ ಪೋನ್ ಕರೆ ಮಾಡಿ ಬರ ಹೇಳಿ, ಅಲ್ತಾಪ್ ಕೂಡಲೇ ಬಂದು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.03.2015 ರಂದು ರಾತ್ರಿ ಸುಮಾರು 8:50 ಗಂಟೆ ಸಮಯಕ್ಕೆ ಆರೋಪಿಗಳು ಫಿರ್ಯಾದಿದಾರರಾದ ಶ್ರೀಮತಿ ಜೆನೆಟ್ ಡಿ'ಸೋಜಾ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ 1ನೇ ವಿಲ್ಫ್ರೆಡ್ ಕೈಯಲ್ಲಿದ್ದ ಕಬ್ಬಿಣದ ಚೈನಿನಿಂದ ಫಿರ್ಯಾದಿದಾರರ ಕುತ್ತಿಗೆಗೆ ಹೊಡೆದು, ಆರೋಪಿ 2ನೇ ರಾಜೇಶನು ಫಿರ್ಯಾದಿದಾರರ ಕೂದಲನ್ನು ಹಿಡಿದು ಎಳೆದುದನ್ನು ಕಂಡು ಫಿರ್ಯಾದಿದಾರರ ಗಂಡ ಬೊಬ್ಬೆ ಹೊಡೆದಾಗ, ಆರೋಪಿಗಳು ಮನೆಯಿಂದ ಹೊರಗೆ ಹೋಗುತ್ತಾ ಜೀವ ಬೆದರಿಕೆ ಒಡ್ಡಿರುತ್ತಾರೆ. ಗಾಯಾಳು ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಫಿರ್ಯಾದಿದಾರರ ವಾಸಿಸುತ್ತಿದ್ದ ಮನೆಯು ಅವರ ತಂದೆಯ ಹೆಸರಿನಿಂದ ಫಿರ್ಯಾದಿದಾರರ ಹೆಸರಿಗೆ ವರ್ಗಾವಣೆಗೊಂಡಿದ್ದು ಇದರಿಂದ ಅಸಮಾಧಾನ ಹೊಂದಿದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿದೆ.
5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23.03.2015 ರಂದು 19.30 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಅಂಬಿಕಾ ಸ್ಟೋರ್ ಬಳಿಯಲ್ಲಿ ಆರೋಪಿ ವಿಧ್ಯುತ್ ಸ್ಟ್ರೀಟ್ ಲೈಟ್ ಬೆಳಕಿನ ಸಹಾಯದಿಂದ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಹಣವನ್ನು ಸಂಗ್ರಹಿಸುತ್ತಿದ್ದವನನ್ನು ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರು ಹಾಗೂ ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಆರೋಪಿಗಳಾದ ಬಸವರಾಜ್ ಎಂಬವರನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 3,100/- ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಬಿಳಿ ಹಾಳೆ -1, ಮಟ್ಕಾ ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ಪೆನ್ನು-1, ಮೊಬೈಲ್ ಪೋನ್ -1 ಇವುಗಳನ್ನು ಪಂಚರ ಸಮಕ್ಷಮ ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡು, ಅರೋಪಿಯು ಮಟ್ಕಾ ಜೂಜಾಟಕ್ಕಾಗಿ ಹಣವನ್ನು ಸಂಗ್ರಹಿಸಿ ಆರೋಪಿ ರಮೇಶ್ ಪ್ರಾಯ 46 ವರ್ಷ ತಂದೆ ರಾಜು ಪೂಜಾರಿ ವಾಸ ಜನನಿ ನಿವಾಸ ಕಾರ್ನಾಡು ಬೈಪಾಸ್ ಕಾರ್ನಾಡು ಗ್ರಾಮ ಮಂಗಳೂರು ತಾಲೂಕು ಎಂಬಾತನಿಗೆ ನೀಡುತ್ತಿರುವುದಾಗಿ ಸಾರಂಶವಾಗಿರುತ್ತದೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2015 ರಂದು ಸಮಯ ಮದ್ಯಾಹ್ನ 12-00 ರಿಂದ 12-30 ಗಂಟೆಯ ಮದ್ಯೆ ಅವಧಿಯಲ್ಲಿ ಪಿರ್ಯಾದಿದಾರರಾದ ಗೃಹಿಣಿ ಅವರ ಮನೆಯಲ್ಲಿ ವಾಸವಿರುವ ಸಂಬಂಧಿಯವರಾದ ಹೆಂಗಸೊಂದಿಗೆ ಕದ್ರಿ ಕೈಬಟ್ಟಲಿನ ಮನೆಯ ಕಾಂಪೌಂಡ್ ಒಳಗೆ ಇದ್ದಾಗ ಸದ್ರಿ ಸಮಯದಲ್ಲಿ ಪಿರ್ಯಾದಿಯವರ ಜಮೀನಿನ ಬೇಲಿಯನ್ನು ಕಿತ್ತೆಸೆಯಲಾಗಿದ್ದು, ಪಿರ್ಯಾದಿ ಮತ್ತು ಅವರ ಸಂಬಂಧಿ ಹೆಂಗಸು ಅವರ ಜಮೀನಿನಲ್ಲಿ ನಿಂತು ವೀಕ್ಷಿಸುತ್ತಿದ್ದಾಗ, ಆ ಸಮಯದಲ್ಲಿ ಪಿರ್ಯಾದಿಯವರ ಜಮೀನಿಗೆ ಮರಿಯನ್ ಪ್ರಾಜೆಕ್ಟ್ ಪ್ರೈ.ಲಿಮಿಟೆಡ್ ನ ಸಿಬ್ಬಂದಿ ಯಾದ ಅನಿರುದ್ದ್ ಎಂಬವರು ಬಂದು ಪಿರ್ಯಾದಿ ಮತ್ತು ಅವರ ಸಂಬಂಧಿ ಹೆಂಗಸನ್ನು ದುರುಗುಟ್ಟಿಕೊಂಡು ನೋಡುತ್ತಾ ಸದ್ರಿಯವರುಗಳನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯನ್ನು ಹಾಕಿರುತ್ತಾರೆ.
7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/03/2015 ರಂದು ಸಮಯ ಸುಮಾರು ರಾತ್ರಿ 20:15 ಗಂಟೆಗೆ ಫಿರ್ಯಾದುದಾರರಾದ ಶ್ರೀ ಸುರೇಶ್ ಕುಮಾರ್ ಜೋಗಿ ರವರು ತಮ್ಮ ಬಾಬ್ತು ಸ್ಕೂಟರ್ ನಂಬ್ರ KA-19-U-7125 ನೇ ದರರಲ್ಲಿ ಸವಾರನಾಗಿದ್ದುಕೊಂಡು ಹಿಂಬದಿ ಸವಾರಳಾಗಿ ಅವರ ಹೆಂಡತಿ ಢಾ ಸುಂದರಿ ಅವರನ್ನು ಕುಳ್ಳಿರಿಸಿಕೊಂಡು ಲೇಡಿಗೋಷನ್ ಆಸ್ಪತ್ರೆಯ ಕಡೆಯಿಂದ ತಮ್ಮ ಮನೆಗೆ ಬರುವರೇ ಬಜೈ ಈಡನ್ ಪ್ಯಾರಾಡೈಸ್ ಕಟ್ಟಡದ ಎದುರು ತಲುಪಿದಾಗ ಫಿರ್ಯಾದುದಾರರ ಸ್ಕೂಟರ್ ಗೆ ಸುಮೋ ಜೀಪು ನಂಬ್ರ KA-19-D-6505 ನೇ ದನ್ನು ಅದರ ಚಾಲಕ ಎಡದಿಂದ ಯಾವುದೆ ಸಿಗ್ನಲ್ ನೀಡದೇ ಡಿವೈಡರ್ ತೆರವು ಜಾಗಕ್ಕೆ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಸ್ಕೂಟರಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಮತ್ತು ಅವರ ಹೆಂಡತಿ ಕಾಂಕ್ರಿಟ್ ರಸ್ತೆಗೆ ಬಿದ್ದು ಫಿರ್ಯಾದುದಾರರ ಬಲಕಾಲಿಗೆ ರಕ್ತಗಾಯ ಮತ್ತು ಅವರ ಹೆಂಡತಿಗೆ ಮೂಗು ಮತ್ತು ಬಾಯಿಗೆ ರಕ್ತಗಾಯವಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.
8.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23/03/2015 ರಂದು ಸಮಯ ಸುಮಾರು ಬೆಳಗ್ಗೆ 8:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಹೆರಾಲ್ಡ್ ಮನೋಜ್ ಕುಮಾರ್ ರವರು ತಮ್ಮ ಬಾಬ್ತು ಮೋಟರ್ ಸೈಕಲ್ ನಂಬ್ರ KA-19-EE-6339 ನೇ ದರಲ್ಲಿ ಸವಾರನಾಗಿದ್ದು ಹಿಂಬದಿ ಸವಾರಳಾಗಿ ಅವರ ಪತ್ನಿ ಜೆನೆಟ್ ಜಯಲತಾ ಅವರನ್ನು ಕುಳ್ಳಿರಿಸಿಕೊಂಢು ನಂತೂರು ಕಡೆಯಿಂದ ಪಂಪವೆಲ್ ಕಡೆಗೆ ಹೋಗುವರೆ ಪಂಪವೆಲ್ ಬಳಿಯ ಕರ್ನಾಟಕ ಬ್ಯಾಂಕಿನ ಎದುರುಗಡೆ ರಸ್ತೆಯಲ್ಲಿ ತಲುಪುತ್ತಿದ್ದಂತೆ ನಂತೂರು ಕಡೆಯಿಂದ ಹೊಸ ನೊಂದಣಿ ಸಂಖ್ಯೆ ಆಗದ ಕಾರೊಂದನ್ನು ಅದರ ಚಾಲಕಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಬೈಕಿನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಹಾಗೂ ಅವರ ಪತ್ನಿ ಜೆನೆಟ್ ಜಯಲತ ಅವರು ಮೋಟರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಫಿರ್ಯಾದುದಾರರ ಬಲಕಾಲಿನ ಪಾದಕ್ಕೆ ರಕ್ತಗಾಯ ಹಾಗೂ ಬಲಭುಜಕ್ಕೆ ಗುದ್ದಿದ ನೋವು ಉಂಟಾಗಿ ಮತ್ತು ಫಿರ್ಯಾದುದಾರರ ಪತ್ನಿಗೆ ತಲೆಗೆ ಮತ್ತು ಸೊಂಟಕ್ಕೆ ಗುದ್ದಿದ ನೋವು ಉಂಟಾಗಿರುತ್ತದೆ.
9.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18/03/2015 ರಂದು ಸಮಯ ಸುಮಾರು ಬೆಳಗ್ಗೆ 11:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಚಿದಾನಂದ ರವರು ವೆನಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಎದುರುಗಡೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಫಿರ್ಯಾದುದಾರರ ಹಿಂದುಗಡೆಯಿಂದ ಅಂದರೆ ಹಂಪನಕಟ್ಟೆ ಕಡೆಯಿಂದ ರೆಲ್ವೆ ಸ್ಟೇಷನ್ ಕಡೆಗೆ ಹೋಗುವ ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಬೈಕು ನಂಬ್ರ KA-19-EL-6454 ನೇ ದರ ಸವಾರ ಬೈಕನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರ ಬಲಭುಜಕ್ಕೆ ಗುದ್ದಿದ ನೋವು ಉಂಟಾಗಿರುತ್ತದೆ.
10.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-03-2015ರಂದು ಪಿರ್ಯಾಧಿದಾರರಾದ ಶ್ರೀಮತಿ ಮಂಜುಳ ರವರ ಗಂಡ ರಾಘವೇಂದ್ರ (ಪ್ರಾಯ 59 ವರ್ಷ) ರವರು ಸುರತ್ಕಲ್ ಸ್ಟೇಟ್ ಬ್ಯಾಂಕ್ ಎ.ಟಿ.ಎಮ್ ನಿಂದ ಹಣ ತೆಗೆಯುವರೇ ಎನ್.ಹೆಚ್-66ನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ರಸ್ತೆ ದಾಟುತಿದ್ದ ಸಮಯ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-19 ಎಕ್ಸ್ 2746 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ರಾಘವೇಂದ್ರರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ತಲೆಗೆ ಗುದ್ದಿದ ಗಾಯವಾಗಿ ಬಲ ಕೈಗೆ ತರಚಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ.
11.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-03-15ರಂದು ಬೆಳಿಗ್ಗೆ 09:15 ಗಂಟೆ ಸಮಯಕ್ಕೆ ಉಳ್ಳಂಜೆ ಬಸ್ಸು ನಿಲ್ದಾಣದ ಬಳಿ ಪಿರ್ಯಾಧಿದಾರರಾದ ಶ್ರೀಧರ ರಾವ್ ರವರ ಚಿಕ್ಕಪ್ಪ ನಾರಯಣ ರಾವ್ ಎಂಬವರು ಕಟೀಲಿನಿಂದ ಕಿನ್ನಿಗೋಳಿಗೆ ಹೋಗುವ ಕೆಎ-19-ಎಎ-169 ನಂಬ್ರದ ಬಸ್ಸನ್ನು ಹತ್ತುವರೇ ಬಸ್ಸಿನ ಬಳಿಗೆ ಹೋದಾಗ ಬಸ್ಸು ಚಾಲಕನು ಒಮ್ಮೆಲೆ ಬಸ್ಸನ್ನು ಮುಂದಕ್ಕೆ ಚಲಾಯಿಸಿದಾಗ ಬಸ್ಸು ಹತ್ತುವ ಪ್ರಯತ್ನದಲ್ಲಿದ್ದಾಗ ನಾರಾಯಣ ರಾವ್ ರವರಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು, ಎಡ ಕಾಲಿನ ಪಾದಕ್ಕೆ ಗಂಭೀರ ಗಾಯವಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ.
12.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-03-2015ರಂದು ಪಿರ್ಯಾಧಿದಾರರಾದ ಶ್ರೀ ಅಬ್ದುಲ್ ಜಬ್ಬಾರ್ ರವರ ತಂದೆಯವರಾದ ಅಬೂಬಕ್ಕರ್ ಎಂ,ಹೆಚ್ ರವರು ಅವರ ಪತ್ನಿಯಾದ ನಬೀಸಾ ಎಂಬವರೊಂದಿಗೆ ಕಾರ್ಕಳದಿಂದ ಕೃಷ್ಣಾಪುರಕ್ಕೆ ಹೋಗುವರೇ ಮೋಟಾರು ಸೈಕಲು ನಂಬ್ರ ಕೆಎ-20 ಇಎಫ್ 6215ನೇದರಲ್ಲಿ ಅಬೂಬಕ್ಕರ್ ಸವಾರರಾಗಿ ನಬೀಸಾರವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಎನ್.ಹೆಚ್-66ರಲ್ಲಿ ಬರುತ್ತಾ ಸಂಜೆ 4:40 ಗಂಟೆಗೆ ಕೆ.ಆರ್.ಇ.ಸಿ ಬಳಿ ತಲುಪುಪಿದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-20-ಎಎ-8655 ನಂಬ್ರದ ಬಸ್ಸನ್ನು ಅದರ ಚಾಲಕ ಆನಂದ ಎಂಬವರು ನಿರ್ಲಕಲ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಅಬೂಬಕ್ಕರ್ ರವರ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಬೂಬಕ್ಕರ್ ರವರಿಗೆ ಕೈಗೆ, ಕಾಲಿಗೆ ಮತ್ತು ನಬೀಸಾರವರಿಗೆ ಮುಖಕ್ಕೆ, ಕಿವಿಗೆ, ಹಣೆಗೆ ರಕ್ತ ಗಾಯವಾಗಿರುತ್ತದೆ. ಅಪಘಾತ ಪಡಿಸಿದ ಬಸ್ಸನ್ನು ಅದರ ಚಾಲಕ ಬಸ್ಸನ್ನು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿರುವುದಾಗಿದೆ.
13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 16-3-2015 ರಂದು ರಾತ್ರಿ 9-00 ಗಂಟೆಯಿಂದ 17-3-2015 ರಂದು ಬೆಳಿಗ್ಗೆ 5-45 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ತೊಕ್ಕೊಟು ಕಲ್ಲಾಪು ಖತೀಜಾ ಮಹಲ್ ಅಪಾರ್ಟ್‌ಮೆಂಟ್ ಎಂಬ ಕಟ್ಟಡದ ನೆಲ ಅಂತಸ್ತಿನ ಪಾರ್ಕಿಂಗ್ ಸ್ಥಳದಲ್ಲಿ ಫಿರ್ಯಾದಿದಾರರಾದ ಶ್ರೀ ಉಮ್ಮರ್ ಫಾರೂಕ್ ರವರು ಪಾರ್ಕ್ ಮಾಡಿದ ಕೆಎ-19-ಇಡಿ-3853 ನೇ ಬಜಾಜ್ ಪಲ್ಸರ್ 150 ಡಿಟಿಎಸ್ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲನ್ನು ಈ ತನಕ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಕಳವಾದ ಮೋಟಾರು ಸೈಕಲ್ ನ ಮೌಲ್ಯ 46,000/- ಆಗಿರುತ್ತದೆ.
14.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-03-2015 ರಂದು ರಾತ್ರಿ ಸುಮಾರು 10-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ತಲಪಾಡಿ ಗ್ರಾಮದ ನಾರ್ಲ ಪಡೀಲ್ ಎಂಬಲ್ಲಿ ಫಿರ್ಯಾದಿದಾರರಾದ ಗೃಹಿಣಿಯು ಮನೆಯಲ್ಲಿರುವ ಸಮಯ ಆರೋಪಿಗಳಾದ ಪ್ರಶಾಂತ್ ಶೆಟ್ಟಿ ಹಾಗೂ ಇನ್ನೊಬ್ಬ ಅರುಣ ಎಂಬಾತನು ಕೆಎ-19-ಡಿ-2212 ನೇ ನಂಬ್ರದ ಟಾಟಾ ಇಂಡಿಗೋ ಕಾರಿನಲ್ಲಿ ಬಂದು ಫಿರ್ಯಾದಿದಾರರ ಮನೆಯೊಳಗಡೆ ಅಕ್ರಮ ಪ್ರವೇಶಿಸಿ ಫಿರ್ಯಾದಿದಾರರನ್ನುದ್ದೇಶಿಸಿ ನಿಮಗೆ ಚಿಕ್ಕಿ ತಯಾರಿಸಲು ಲೈಸನ್ಸ್ ಇದೆಯೇ ಎಂದು ಕೇಳಿ ಫಿರ್ಯಾದಿದಾರರನ್ನು ಹೆದರಿಸಿ, ಈ ಸಮಯ ಮಾತಿಗೆ ಮಾತು ಬೆಳೆದು ಆರೋಪಿ ಪ್ರಶಾಂತ್ ಶೆಟ್ಟಿಯು ಫಿರ್ಯಾದಿದಾರರ ಮೈದುನನ ಮುಖಕ್ಕೆ ಹೊಡೆದು ದೂಡಿ ಹಾಕಿದಾಗ ಅವರ ತಲೆಯು ಗೋಡೆಗೆ ಬಡಿದು ಗಾಯವಾಗಿರುವುದಲ್ಲದೆ ಫಿರ್ಯಾದಿದಾರರಿಗೆ ಆರೋಪಿಯು ಕೈಯಿಂದ ಹೊಡೆದು ಮೈಮೇಲೆ ಕೈ ಹಾಕಿ ಮಾನಭಂಗ ಮಾಡಿರುವುದಲ್ಲದೆ ಜೀವ ಬೆದರಿಕೆ ಒಡ್ಡಿ, ಫಿರ್ಯಾದಿದಾರರ ಮಾವನಿಗೆ ಕೂಡಾ ಹಲ್ಲೆ ಮಾಡಿರುತ್ತಾರೆ.
15.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-03-2015 ರಂದು ರಾತ್ರಿ ಸುಮಾರು 09-30 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಪ್ರಶಾಂತ್ ಕೆ.ಎನ್. ರವರು ಕೆಎ-19-ಡಿ-2212 ನೇ ನಂಬ್ರದ ಕಾರಿನಲ್ಲಿ ಚಾಲಕ ಅರುಣ್ ಮತ್ತು ದಿನೇಶ್ ರವರೊಂದಿಗೆ ತಲಪಾಡಿ ಗ್ರಾಮದ ನಾರ್ಲ ಪಡೀಲ್ ಎಂಬಲ್ಲಿ ಶಕ್ತಿ ಎಂಬವರ ಮನೆಗೆ ವ್ಯವಹಾರದ ನಿಮಿತ್ತ ಮಾತನಾಡಲು ಹೋಗಿದ್ದು, ಈ ಸಮಯ ಆರೋಪಿ ಶಕ್ತಿ ಮತ್ತು ಆತನ ಜೊತೆಗಿದ್ದ ಸುಮಾರು 20 ಜನ ಸೇರಿಕೊಂಡು ಫಿರ್ಯಾದಿದಾರರನ್ನುದ್ದೇಶಿಸಿ ನೀನು ಬಾರಿ ಚಿಕ್ಕಿಯ ಬಗ್ಗೆ ಮಾತನಾಡುತ್ತಿಯಾ ಎಂಬುದಾಗಿ ಅವಾಚ್ಯ ಶಬ್ದದಿಂದ ಬೈದು ಫಿರ್ಯಾದಿದಾರರ ಎಡ ಕಣ್ಣಿನ ಬಳಿಗೆ ಮತ್ತು ಬಲ ಕಿವಿಗೆ ಹೊಡೆದು ನೋವು ಉಂಟು ಮಾಡಿದ್ದಲ್ಲದೆ ಆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯು ಫಿರ್ಯಾದಿದಾರರ ಕುತ್ತಿಗೆಯಲ್ಲಿ ಧರಿಸಿದ್ದ ಚಿನ್ನದ ಚೈನ್ನ್ನು ಹಿಡಿದೆಳೆದು ಫಿರ್ಯಾದಿದಾರರ ಮುಖಕ್ಕೆ ಬಿಸಾಡಿದ್ದು, ಕಾರಿನ ಚಾಲಕ ಅರುಣ್ರವರಿಗೂ ಕೂಡಾ ಕೈಯಿಂದ ಹೊಡೆದಿದ್ದು, ಈ ಜಾಗಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವುದಲ್ಲದೆ ಗಲಾಟೆಯ ವೇಳೆ ಫಿರ್ಯಾದಿದಾರರು ಧರಿಸಿದ್ದ ಚಿನ್ನದ ಬ್ರಾಸ್ಲೈಟ್, ಚಿನ್ನದ ರೋಪ್ ಚೈನ್, ರಾಡೋ ವಾಚ್ ಬಿದ್ದಿದ್ದು, ಇವುಗಳನ್ನು ಹಲ್ಲೆ ನಡೆಸಿದ ವ್ಯಕ್ತಿಗಳು ತೆಗೆದುಕೊಂಡಿರುವ ಸಾಧ್ಯತೆ ಇರುವುದಾಗಿ ದೂರು ನೀಡಿರುವುದಾಗಿದೆ.
16.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ರಾಜೇಂದ್ರ.ಬಿ. ಪಿಎಸ್ಐ ಉಳ್ಳಾಲ ಠಾಣೆ ರವರು ಸಿಬ್ಬಂದಿಯವರುಗಳನ್ನು ಮತ್ತು ಪಂಚಾಯತುದಾರರನ್ನು ಜೊತೆಯಲ್ಲಿ ಇಲಾಖಾ ಜೀಪಿನಲ್ಲಿ ಕರೆದುಕೊಂಡು ಅಕ್ರಮವಾಗಿ ಮದ್ಯವನ್ನು ತಯಾರಿಸಲು ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಸ್ಪಿರಿಟನ್ನು ದಾಸ್ತಾನು ಮಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಸ್ಥಳವಾದ ಮಂಗಳೂರು ತಾಲೂಕು ಕಿನ್ಯಾ ಗ್ರಾಮದ ಕಿನ್ಯ ಸಾಂತ್ಯ ಪದವು ಎಂಬಲ್ಲಿಗೆ ದಿನಾಂಕ. 23-3-2015 ರಂದು ಮದ್ಯಾಹ್ನ 1-45 ಗಂಟೆಗೆ ದಾಳಿ ನಡೆಸಿದಾಗ ಸದ್ರಿ ಸ್ಥಳದಲ್ಲಿದ್ದ ಇದ್ದ ಒಬ್ಬ ವ್ಯಕ್ತಿಯು ಓಡಿ ತಲೆಮರೆಸಿಕೊಂಡಿದ್ದು, ನಂತರ ಸದ್ರಿ ಸ್ಥಳದಲ್ಲಿ ದೊರೆತ ಅಕ್ರಮವಾಗಿ ಮದ್ಯವನ್ನು ತಯಾರಿಸಲು ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿರುವ ಸ್ಪಿರಿಟ್ ಅಂದರೆ ಸುಮಾರು ರೂ.10,500/- ಬೆಲೆಬಾಳುವ ತಲಾ 35 ಲೀಟರ್ ನಷ್ಟು ಅಕ್ರಮ ಸ್ಪಿರಿಟ್ ತುಂಬಿಸಿದ್ದ ಐದು ಬಿಳಿ ಪ್ಲಾಸ್ಟಿಕ್ ಕ್ಯಾನ್‌ಗಳು ಮತ್ತು ತಲಾ 30 ಲೀಟರ್ ನಷ್ಟು ಅಕ್ರಮ ಸ್ಪಿರಿಟ್ ತುಂಬಿಸಿದ್ದ ಎರಡು ಬಿಳಿ ಪ್ಲಾಸ್ಟಿಕ್ ಕ್ಯಾನ್‌ಗಳು ಹೀಗೇ ಒಟ್ಟು 235 ಲೀಟರ್ ಅಕ್ರಮ ಸ್ಪಿರಿಟ್ ಮತ್ತು ಈ ಕ್ಯಾನ್ನ ಮೇಲೆ ಹಾಸಿರುವ ಹಳೇಯ ಗೋಣಿಯನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿದೆ.
17.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21.03.2015 ರಂದು ಪಿರ್ಯಾದುದಾರರಾದ ಶ್ರೀ ಮಹಮ್ಮದ್ ರಿಯಾಜ್ ರವರು ಅವರ ಗೆಳೆಯ ನೌಫಾಲ್ ಎಂಬವವರ ಬಾಬ್ತು KA-19-ME-5968 ನೇ ನಂಬ್ರದ ಕಾರಿನಲ್ಲಿ ಅಬ್ದುಲ್ ಮುನೀಮ್, ನೌಫಾಲ್, ಅಸ್ಲಾಂ ಹಾಗೂ ಮರ್ಜೂಕ ಎಂಬವರೊಂದಿಗೆ ಪ್ರಯಾಣಿಸುತ್ತಾ ಸದ್ರಿ ಕಾರನ್ನು ಅಬ್ದುಲ್ ಮುನೀಮ್ ಎಂಬವರು ಮಂಗಳೂರು ಕಡೆಯಿಂದ ಕಣ್ಣೂರು ಕಡೆಗೆ ಚಲಯಿಸಿಕೊಂಡು ಹೋಗುತ್ತಾ ಮುಂಜಾನೆ ಸುಮಾರು 00:30 ಗಂಟೆ ಸಮಯಕ್ಕೆ ಕೊಡಕ್ಕಲ್ BMW ಶೋ ರೂಂ ಎದುರುಗಡೆ ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಸದ್ರಿ ಕಾರು ಚಾಲಕ ಅಬ್ದುಲ್ ಮುನೀಮ್ ರವರು ಕಾರಿಗೆ ಎಕಾಏಕಿ ಬ್ರೇಕ್ ಹಾಕಿದ ಪರಿಣಾಮ ಕಾರು ಸ್ಕಿಡ್ ಆಗಿ ರಸ್ತೆಯ ವಿಭಾಜಕಕ್ಕೆ ಢಿಕ್ಕಿ ಹೊಡೆದು ಕಾರಿನೊಳಗಿದ್ದ ಪಿರ್ಯಾದುದಾರರ ಎಡಕೈಗೆ ಗಂಭೀರ ಸ್ವರೂಪದ ಮೂಳೆ ಮುರಿತದ ಗುದ್ದಿದ ನೋವು, ಮುಖಕ್ಕೆ ರಕ್ತ ಗಾಯ ಹಾಗೂ ಕೈಕಾಲುಗಳಿಗೆ ತರಚಿದ ಗಾಯ ಆರೋಪಿ ಕಾರು ಚಾಲಕ ಅಬ್ದುಲ್ ಮುನೀರ್ ರವರ ಬಲಕೈ ತಟ್ಟಿಗೆ ಹಾಗೂ ಬಲಭುಜದ ಕಾಲರ್ ಬೋನಿನ ಬಳಿ ಗುದ್ದಿದ ನೋವು, ನೌಫಾಲ್ ರವರ ಹಣೆಗೆ ಮುಖಕ್ಕೆ ರಕ್ತ ಗಾಯ, ಬಲಕೈಗೆ ಗುದ್ದಿದ ನೋವು ಹಾಗೂ ಅಸ್ಲಾಂ ರವರ ಹಣೆಗೆ ತರಚಿದ ಗಾಯಗೊಂಡಿರುವುದಲ್ಲದೇ ಅಪಘಾತಕ್ಕೀಡಾದ ಕಾರು ಸಂಪೂರ್ಣ ಜಖಂಗೊಂಡಿರುವುದಾಗಿದೆ.
No comments:
Post a Comment