ದೈನಂದಿನ ಅಪರಾದ ವರದಿ.
ದಿನಾಂಕ 29.03.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
2
|
ರಸ್ತೆ ಅಪಘಾತ ಪ್ರಕರಣ
|
:
|
4
|
ವಂಚನೆ ಪ್ರಕರಣ
|
:
|
3
|
ಮನುಷ್ಯ ಕಾಣೆ ಪ್ರಕರಣ
|
:
|
2
|
ಇತರ ಪ್ರಕರಣ
|
:
|
1
|
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಹುಡುಗಿಯು ಸುಮಾರು 9 ತಿಂಗಳಲ್ಲಿ ಮದುವೆಗೆ ಗಂಡು ಹುಡುಕುತ್ತಿರುವಾಗ್ಗೆ ಭಾರತ್ ಮ್ಯಾಟ್ರಿಮನಿಯಲ್ ಎಂಬ ವೆಬ್ ಸೈಟ್ ಮೂಲಕ ಡಾ/ ಸುರೇಶ್ ಕುಮಾರ ಎಂಬ ಸರ್ಕಾರಿ ವೈದ್ಯ ಪರಿಚಯವಾಗಿ ಆತನ ಮೊದಲ ಹೆಂಡತಿ ಡೈವೊರ್ಸ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದು ಅದನ್ನು ಹುಡುಗಿಯು ಒಪ್ಪಿ ಮದುವೆ ಬಗ್ಗೆ ಪ್ರಸ್ತಾಪ ಕಳುಹಿಸಿದ್ದು ನಂತರ ಇಬ್ಬರೂ ಮೊಬೈಲ್ ಫೋನ್ ಮೂಲಕ ಮಾತಾಡುತ್ತ ಸುರೇಶನು ಬೆಂಗಳೂರಿಗೆ ಬಂದಾಗ ಇಬ್ಬರೂ ನೋಡಿ ಪರಸ್ಪರ ಮಾತಾಡಿ ಮದುವೆಗೆ ಒಪ್ಪಿಕೊಂಡಿದ್ದು ದಿನಾಂಕ-12-08-2014ರಂದು ಸುರೇಶ ಕುಮಾರನು ಹುಡುಗಿಯನ್ನು ಆತನು ಎಂ.ಡಿ. ವಿದ್ಯಾಭ್ಯಾಸ ಮಾಡುತ್ತಿರುವ ಮಂಗಳೂರಿನ ಫಾದರ್ ಮುಲ್ಲರ್ ಎಂಬ ಕಾಲೇಜಿನ ಬಳಿ ಇರುವ ಆತನ ಮನೆಗೆ ಕರೆಸಿಕೊಂಡು ಬಲಾತ್ಕಾರವಾಗಿ ಅತ್ಯಾಚಾರವೆಸಗಿ ಯಾವುದೋ ಮಾತ್ರೆಯನ್ನು ಸೇವಿಸಲು ಕೊಟ್ಟಿದ್ದು, ಅಲ್ಲದೆ ಆತನ ಮೊದಲ ಹೆಂಡತಿ ವಿಚ್ಛೇದನವಾದರೂ ಇಬ್ಬರೂ ಜೊತೆಯಲ್ಲೇ ವಾಸಿಸುತ್ತಿದ್ದುದನ್ನು ನಾನು ನೋಡಿ ಸುರೇಶನೊಂದಿಗೆ ಜಗಳವಾಡಿ ಈ ಬಗ್ಗೆ ಕೇಳಿದ್ದಕ್ಕೆ ಸುರೇಶಕುಮಾರನು ನಾನು ನಿನ್ನನ್ನು ಮದುವೆಯಾಗುವುದಿಲ್ಲವೆಂದು, ನಾನು ಇದೇ ರೀತಿ ಬೇಕಾದಷ್ಟು ಹುಡುಗಿಯರಿಗೆ ಮಾಡಿರುತ್ತೇನೆಂದು ತಿಳಿಸಿದ್ದು ನಾನು ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಸಮಯದಲ್ಲಿ ಅಲ್ಲಿಯೂ ಸುರೇಶನು ನಾನು ನಿನ್ನನ್ನು ಮದುವೆಯಾಗುವುದಿಲ್ಲ, ಒಂದು ಲಕ್ಷ ಹಣ ಕೊಡುತ್ತೇನೆ, ತೆಗೆದುಕೋ ಇಲ್ಲವಾದರೆ ನೀನೇನಾದರೂ ಪೋಲೀಸ್ ಕಂಪ್ಲೆಂಟ್ ಅಂತ ಹೋದಲ್ಲಿ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ರೌಡಿಗಳನ್ನು ಬಿಟ್ಟು ಕೊಲೆ ಮಾಡಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೆಂಗಳೂರು ಮಹಾಲಕ್ಷ್ಮಿ ಲೇ ಜೌಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತಕ್ಷೀರು ಸ್ಥಳಧ ಆಧಾರದ ಮೇಲೆ ಮೇಲಾಧಿಕಾರಿಗಳ ಆದೇಶದಂತೆ ಬೆಂಗಳೂರು ಮಹಾಲಕ್ಷ್ಮಿ ಲೇ ಜೌಟ್ ಪೊಲೀಸ್ ಠಾಣೆಯಿಂದ ಮಂಗಳೂರು ಮಹಿಳಾ ಠಾಣೆಗೆ ವರ್ಗಾವಣೆಯಾಗಿ ಬಂದಿರುವುದಾಗಿದೆ.
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿಜಯ್ ಕುಮಾರ್ ಠಾಕೂರ್ ರವರು ಬಡಗಿ ವೃತ್ತಿಯವರಾಗಿದ್ದು ತಾನು ವ್ಯಾಸ್ತವ್ಯವಿರುವ ಮನೆಯ ಸಮೀಪದ ಸುನೀಲ್ ಎಂಬವರು ಆರೋಪಿತರಾದ ಅಸ್ತವೆಲ್, ದುರ್ಗಾ @ ಪವನ್ ಕುಮಾರ್ ಉಪಾಧ್ಯ, ಮಂಥಷ್ಯ ಎಂಬವರನ್ನು ಪಿರ್ಯಾದಿದಾರರಿಗೆ ಪರಿಚಯಿಸಿ ಆರೋಪಿತರ ಬಾಬ್ತು ಗ್ರಾಹಕರ ಮನೆಯ ಇಂಟಿರಿಯರ್ ಕಾರ್ಪೆಂಟರಿ ಕೆಲಸ ಇದ್ದು ಅದನ್ನು ಪಿರ್ಯಾದಿದಾರರಿಗೆ ಕೊಡಿಸುವುದಾಗಿ ದಿನಾಂಕ 26-06-2014 ರಂದು ಆರೋಪಿತರ ಸಂಸ್ಥೆಯಲ್ಲಿ ಮಾತುಕತೆ ನಡೆಸಿ ಕೆಲಸದ ವಿವರಗಳ ಪಟ್ಟಿಯನ್ನು ತಯಾರಿಸಿ ಈ ಪಟ್ಟಿಗೆ ಪಿರ್ಯಾದಿದಾರರು ಹಾಗೂ ಆರೋಪಿತರು ಸಹಿ ಮಾಡಿದ್ದು ಈ ವರ್ಕ್ ಆರ್ಡರ್‌ನ ಪ್ರಕಾರ ಪಿರ್ಯಾದಿದಾರರು ಆರೋಪಿತರು ತೋರಿಸಿದಂತೆ ಕಾಸರ್ಗೋಡಿನ ಶ್ರೀ ಮಹಮ್ಮದ್ ಗುನಿ ಎಂಬವರ ಸೈಟ್ನಲ್ಲಿ ಬಡಗಿ ಕೆಲಸ ಮಾಡಿದ್ದು ಈ ಬಗ್ಗೆ ಒಟ್ಟು 6,79,904/- ಮಜೂರಿಯು ಪಿರ್ಯಾದಿದಾರರಿಗೆ ತಗಲಿದ್ದು ಈ ಪೈಕಿ 3,00,000/-ನ್ನು ನೀಡಿ ಉಳಿದ 3,79904/- ರೂಪಾಯಿಯನ್ನು ಆರೋಪಿತರು ಪಿರ್ಯಾದಿದಾರರಿಗೆ ಕೊಡದೆ ನಂಬಿಸಿ ಮೋಸ ಮಾಡಿದ್ದು ಈ ಹಣವನ್ನು ಆರೋಪಿತರೊಡನೆ ಕೇಳಿದಾಗ ಪಿರ್ಯಾದಿದಾರರಿಗೆ "ನಿನ್ನನ್ನು ಮಂಗಳೂರಿನಲ್ಲಿ ಇರಲು ಬಿಡುವುದಿಲ್ಲ " ಎಂಬುದಾಗಿ ಬೆದರಿಕೆ ಹಾಕಿರುವುದಾಗಿದೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27.03.2015 ರಂದು ಸಂಜೆ ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಐಕ್ ರವರಿಗೆ ದೊರೆತ ಖಚಿತ ವರ್ತಮಾನದಂತೆ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಮಂಗಳೂರು ತಾಲೂಕು ಕವತ್ತಾರ್ ಗ್ರಾಮದ ಕೊರಗಜ್ಜ ಕಟ್ಟೆಯ ಬಳಿ 16.30 ಗಂಟೆಗೆ ದಾಳಿ ನಡೆಸಿ ಕೋಳಿ ಅಂಕಕ್ಕೆ ಬಳಸಿದ್ದ 5 ಕೋಳಿ, 2 ಬಾಲು ಕತ್ತಿ , ಬಾಲು ಕತ್ತಿ ಕಟ್ಟಲು ಉಪಯೋಗಿಸಿದ ನೂಲು ಹಾಗೂ ಕೋಳಿ ಅಂಕ ಜೂಜಾಟಕ್ಕೆ ಬಳಸಿದ್ದ ನಗದು ಹಣ ರೂ 1,700/-ನ್ನು ಸ್ವಾದೀನಪಡಿಸಿ ಆರೋಪಿಗಳಾದ 1. ಅಬ್ಬಾಸ್, 2. ರಿಯಾಜ್, 3. ಭಾಸ್ಕರ, 4. ವಿನಯ ಕುಮಾರ್, 5. ನಿತ್ಯಾನಂದ @ ಅಣ್ಣು, 6. ಪಿ. ಖಾಸಿಂ, ಎಂಬವರುಗಳನ್ನು ದಸ್ತಗಿರಿ ಮಾಡಿ ಸೊತ್ತು ಸಮೇತ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾಗಿದೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17.03.2015 ರಂದು 8:30 ಗಂಟೆಗೆ ಆಳ್ವಾಸ್ ಸಿಟಿ ಹಾಸ್ಟೇಲ್ನಿಂದ ದರ್ಶನ್ HB ಎಂಬ ಪ್ರಥಮ ವರ್ಷದ BBM ವಿದ್ಯಾರ್ಧಿಯು ಕಾಲೇಜಿಗೆ ಹಾಸ್ಟೇಲ್ನಿಂದ ಹೋದವನು ಕಾಲೇಜಿಗೂ ಹೋಗದೆ ಮರಳಿ ಹಾಸ್ಟೇಲ್‌ಗೆ ಬಾರದೆ, ಆತನ ಮನೆಗೂ ಹೋಗದೇ ಕಾಣೆಯಾಗಿರುತ್ತಾನೆ. ಕಾಣೆಯಾದ ವಿದ್ಯಾರ್ಧಿ ದರ್ಶನ್ HB ಯ ವಿವರ : ಹೆಸರು : ದರ್ಶನ್ ಹೆಚ್‌ಬಿ, ಹುಟ್ಟಿದ ದಿನಾಂಕ 26.08.1996, ಪ್ರಾಯ 18 ರಿಂದ 19, ಬಣ್ಣ : ಕಪ್ಪು, ಎತ್ತರ : 5'1, ಬಾಷೆ : ಕನ್ನಡ . ಇಂಗ್ಲೀಷ್ , ಕನ್ನಡಕ ಧರಿಸಿರುತ್ತಾನೆ. ಹೋಗುವಾಗ ನೀಲಿ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿರುತ್ತಾನೆ, ಆತನ ಮನೆ ವಿಳಾಸ : ದರ್ಶನ್‌ಹೆಚ್ ಬಿ ತಂದೆ: ಬೋರೆಗೌಡ, 5ನೇ ಕ್ರಾಸ್, 8ನೇ ಬ್ಲಾಕ್, ವಿಜಯ ನಗರ, ಬೆಂಗಳೂರು ಆಗಿರುತ್ತದೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿ ಹೆಂಗಸು ಮಂಗಳೂರು ನಗರದ ಕೊಲಾಸೋ ಆಸ್ಪತ್ರೆಯ ಹಾಸ್ಟೇಲ್ ನಲ್ಲಿ ವಾರ್ಡ್ ನ್ ಆಗಿ ಕೆಲಸ ಮಾಡಿ ಕೊಂಡಿರುವುದಾಗಿದೆ. ಸುಮಾರು 1 ವರ್ಷದ ಹಿಂದೆ ಆಸ್ಪತ್ರೆಯ ಹಾಸ್ಟೇಲ್ ನ ಗ್ರೈಂಡರ್ ರಿಪೇರಿ ಕೆಲಸಕ್ಕೆ ಬಂದಿದ್ದ ಕೊಂಚಾಡಿ ನಿವಾಸಿ ಭರತ್ ಎಂಬವನನ್ನು ಪರಿಚಯವಾಗಿದ್ದು, ಪಿರ್ಯಾದಿದಾರರ ಮೊಬೈಲ್ ನಂಬರ್ ಕೂಡಾ ಪಡೆದುಕೊಂಡಿರುತ್ತಾನೆ. ಏನಾದರೂ ಕೆಲಸವಿದ್ದಾಗ ಆತನೊಂದಿಗೆ ಪಿರ್ಯಾದಿಯವರು ಮೊಬೈಲ್ ನಲ್ಲಿ ಸಂಪರ್ಕಿಸಿದ್ದು, ಇದೇ ಸಲುಗೆಯನ್ನು ಆತನು ದುರುಪಯೋಗಪಡಿಸಿ ಪಿರ್ಯಾದಿಯವರಿಗೆ ಆತನ ಮೊಬೈಲ್ ನಿಂದ ಪಿರ್ಯಾದಿಯವರ ಮೊಬೈಲ್ ನಂಬರ್ ಗೆ ನಿರಂತರ ಪೋನ್ ಕರೆ ಮಾಡಿ ಅಕ್ರಮ ಸಂಪರ್ಕಕ್ಕೆ ಒತ್ತಾಯಿಸಿ, ಮಾನಸಿಕ ನೆಮ್ಮದಿಗೆ ಅಡ್ಡಿಪಡಿಸಿ, ಮಾನಸಿಕವಾಗಿ ಹಿಂಸೆ ನೀಡಿರುವುದಾಗಿದೆ.
6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-02-2015 ರಂದು ಕೆ ಎ 19 ಡಿ 3905ನೇ ನಂಬ್ರದ ಕಂಟೆನರ್ ನಲ್ಲಿ ಪಣಂಬೂರ್ ಎನ್ ಎಮ್ ಪಿ ಟಿ ಯಿಂದ ಪ್ಯಾಕೇಜ್ ನಂ- 1/14 ,ಸಾಲ್ವಂಟ್ ಫೀಲ್ಟರ್ ಅನ್ನು ಹೇರಿಕೊಂಡು ಎಸ್ ಈ ಜೆಡ್ ನಲ್ಲಿರುವ ಜೆ ಬಿ ಎಫ್ ಕಂಪನಿಗೆ ಕೊಂಡು ಹೋಗುವ ಸಲುವಾಗಿ ಕುದರೆ ಮುಖ ಬೈಕಂಪಾಡಿ ರಸ್ತೆಯಲ್ಲಿ ಹೋಗುತ್ತಾ ಅದರ ಚಾಲಕನಾದ ನಿಶ್ಚಲ್ ರವರು ರುಚಿ ಸೋಯ ಕಂಪನಿಯ ಬಳಿ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಮುಂದಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಸಲುವಾಗಿ ಏಕಾಏಕಿ ತಿರುಗಿಸಿದಾಗ ಸದ್ರಿ ಕಂಟೆನರ್ ರಸ್ತೆಗೆ ಉರುಳಿ ಬಿದ್ದು ಅದರಲ್ಲಿದ್ದ ಸ್ವತ್ತುಗಳು ಜಖಂಗೊಂಡಿರುವುದಾಗಿಯು ಈ ವಸ್ತುಗಳು ಪುನಃ ಕಂಪನಿಗೆ ಕಳುಹಿಸಬೇಕಾಗಿರುವುದರಿಂದ ಈ ದೂರು ನೀಡಲು ವಿಳಂಬವಾಗಿರುವುದಾಗಿ ಶ್ರೀ ಡಿ.ಕೆ. ನವಾಲ್ಕರ್ ರವರು ದೂರು ನೀಡಿರುವುದಾಗಿದೆ.
7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-02-2015 ರಂದು ಕೆ ಎ 19 ಡಿ 3098ನೇ ನಂಬ್ರದ ಟ್ರೆಲರ್ ನಲ್ಲಿ ಪಣಂಬೂರ್ ಎನ್ ಎಮ್ ಪಿ ಟಿ ಯಿಂದ ಪ್ಯಾಕೇಜ್ ನಂ12/14 ಫ್ರಜರ್ ಫೀಲ್ಟರ್ ಅನ್ನು ಹೇರಿಕೊಂಡು ಎಸ್ ಈ ಜೆಡ್ ನಲ್ಲಿರುವ ಜೆ ಬಿ ಎಫ್ ಕಂಪನಿಗೆ ಕೊಂಡು ಹೋಗುವ ಸಲುವಾಗಿ ಕುದುರೆ ಮುಖ ಬೈಕಂಪಾಡಿ ರಸ್ತೆಯಲ್ಲಿ ಹೋಗುತ್ತಾ ಸದ್ರಿ ವಾಹನದ ಟೈರ್ ಪಂಚರ್ ಆಗಿ ರುಚಿ ಸೋಯ ಕಂಪನಿ ಬಳಿ ನಿಲ್ಲಿಸಿದ್ದು ಅದರಲ್ಲಿದ್ದ ಮೇಲ್ಕಾಣಿಸಿದ ವಸ್ತುವನ್ನು ಬೇರೊಂದು ವಾಹನಕ್ಕೆ ಲೋಡ್ ಮಾಡುವರೇ ಸಂಜೆ 05:00 ಗಂಟೆಗೆ ಅದರ ಚಾಲಕನಾದ ಈ ಸುಂದರ್ ರಾಜ್ ರವರು ನಿರ್ಲಕ್ಷತನದಿಂದ ಸ್ವಲ್ಪ ಮುಂದಕ್ಕೆ ಚಲಾಯಿಸಿದ ಪರಿಣಾಮ ವಾಹನದಲ್ಲಿದ್ದ ಮೇಲ್ಕಾಣಿಸಿದ ವಸ್ತು ರಸ್ತೆಗೆ ಉರುಳಿ ಬಿದ್ದು ಜಖಂಗೊಂಡಿರುವುದಾಗಿಯು ಈ ವಸ್ತುವನ್ನು ಪುನಃ ಕಂಪನಿಗೆ ಕಳುಹಿಸಬೇಕಾಗಿರುವುದರಿಂದ ವಿಮಾ ಕಂಪನಿಯಲ್ಲಿ ಚರ್ಚಸಿ, ಈ ದೂರು ನೀಡಲು ವಿಳಂಬವಾಗಿರುವುದಾಗಿ ಶ್ರೀ ಡಿ.ಕೆ. ನವಾಲ್ಕರ್ ರವರು ದೂರು ನೀಡಿರುವುದಾಗಿದೆ.
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-3-2015 ರಂದು ಸಮಯ ಸುಮಾರು 12-00 ಗಂಟೆಗೆ ಫಿರ್ಯಾದುದಾರರಾದ ಶ್ರೀ ವಸಂತ್ ರವರು ತನ್ನ ತಂದೆ ಸುಂದರ, ಪ್ರಾಯ 48 ವರ್ಷ ಎಂಬವರನ್ನು ಅಸೌಖ್ಯದ ನಿಮಿತ್ತ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ವೈದ್ಯರು ಚಿಕಿತ್ಸೆ ನೀಡಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ನಂತರ ರಾತ್ರಿ ಸುಮಾರು 1-00 ಗಂಟೆಯ ವೇಳೆಗೆ ಸುಂದರ ರವರು ಮೂತ್ರ ಶಂಕೆಗೆ ಹೋಗಿದ್ದರು. ಆ ಸಮಯ ಫಿರ್ಯಾದುದಾರರು ಗಾಡ ನಿದ್ರೆಯಲ್ಲಿದ್ದು, ಸ್ವಲ್ಪ ಸಮಯದ ಬಳಿ ಸೆಕ್ಯೂರಿಟಿ ಗಾರ್ಡ್ ರವರು ಫಿರ್ಯಾದುದಾರರಿಗೆ ತನ್ನ ತಂದೆಯವರು ಇಲ್ಲವೆಂದು ತಿಳಿಸಿರುತ್ತಾರೆ. ನಂತರ ಫಿರ್ಯಾದುದಾರರು ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಅಬ್ದುಲ್ ಖಲೀಲ್ ಎಂ. ರವರು ಉಳ್ಳಾಲ ಬಂಡಿಕೊಟ್ಯ ನಿವಾಸಿ ರೋಹನ್ ಶೈಲೇಶ್ ಡಿಸೋಜ ಎಂಬಾತನು ಪರಿಚಯಸ್ತನಾಗಿದ್ದು ಮತ್ತು ಆತನ ಸ್ನೇಹಿತನಾದ ಡೇವಿಡ್ ಕ್ಲಿಂಟನ್ ವೇಗಸ್, ನೀಶಾ ರೋಷನ್, ಅಬ್ದುಲ್ ಲತೀಫ್ ಎಂಬುವವರು ದಿನಾಂಕ 02-02-2015 ರಂದು ಸಂಜೆ ಸಮಯ ಸುಮಾರು 05-00 ಗಂಟೆಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯ ಎದುರುಗಡೆಯಲ್ಲಿ ಪಿರ್ಯಾದುದಾರರ ಬಾಬ್ತು ಇನ್ನೋವಾ ಕಾರ್ ನಂಬ್ರ ಕೆಎ-23-ಎಂ-7400 ನೇಯ ಕಾರನ್ನು ತನಗೆ ಅಗತ್ಯವಾಗಿ ಮೈಸೂರಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಲಿರುವುದರಿಂದ ನಾಲ್ಕು ದಿನದ ಮಟ್ಟಿಗೆ ನಿನ್ನ ಕಾರನ್ನು ನನಗೆ ಕೊಡು ಎಂದು ಕೇಳಿಕೊಂಡ ಮೇರೆಗೆ ಪಿರ್ಯಾದುದಾರರು ಕಾರನ್ನು, ನೊಂದಣಿ ಪತ್ರ ಹಾಗೂ ವಿಮಾ ಪತ್ರದ ನಕಲು ಪ್ರತಿಯನ್ನು ನೀಡಿದ್ದು ಕಾರನ್ನು ವಾಪಾಸು ನೀಡದೇ ಇರುವುದರಿಂದ ಅವರ ದೂರವಾಣಿಗೆ ಕರೆ ಮಾಡಿದಾಗ ಐದು ದಿವಸ ಬಿಟ್ಟು ಕೊಡುತ್ತೇನೆ, ಹತ್ತು ದಿವಸ ಬಿಟ್ಟು ಕೊಡುತ್ತೇನೆ ಎಂದು ಹೇಳಿ ನಂತರ ಪಿರ್ಯಾದುದಾರರ ಸ್ನೇಹಿತರು ಒಂದು ಮಾಹಿತಿಯನ್ನು ನೀಡಿದ್ದು ತನ್ನ ಮತ್ತು ತನ್ನ ಸ್ನೇಹಿತರ ಕಾರುಗಳನ್ನು ಮೈಸೂರಿನಲ್ಲಿರುವ ನದೀಮ್ ಎಂಬಾತನಿಗೆ ಇವರೆಲ್ಲರೂ ಸೇರಿಕೊಂಡು ಕಾರನ್ನು ಅಡವಿಟ್ಟು ಆತನಿಂದ ಸುಮಾರು 2,50,000 ರೂ. ಹಣವನ್ನು ಪಡೆದುಕೊಂಡು ಪಿರ್ಯಾದುದಾರರಿಗೆ ಮತ್ತು ಸ್ನೇಹಿತರ ಕಾರುಗಳನ್ನು ವಾಪಾಸು ಹಿಂದಿರುಗಿಸದೇ ಪಿರ್ಯಾದುದಾರರಿಗೆ ನಂಬಿಕೆ ದ್ರೋಹವನ್ನುಂಟು ಮಾಡಿರುತ್ತಾರೆ.
10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರಾಕೇಶ್ ಕೆ. ರವರು ಕಳೆದ ವರ್ಷ ಅಗಸ್ಟ್ ತಿಂಗಳಿನಲ್ಲಿ ಮಂಗಳೂರು ಬಲ್ಮಠ ರಸ್ತೆಯ Beauty Plaza , 3rd Floor , Hampanakatte ಇದರ ಮಾಲಕರಾದ ಪುರುಷೋತ್ತಮ ಎಂಬವರು ಹೊರ ದೇಶದಲ್ಲಿ ಕೆಲಸ ಕೊಡಿಸುವುದಾಗಿ ಅಂತರ್ಜಾಲದಲ್ಲಿ ಜಾಹೀರಾತು ಹೊರಡಿಸಿದ್ದನ್ನು ನೋಡಿದ್ದು, ಅದರಂತೆ ಪಿರ್ಯಾದಿದಾರರು ಮತ್ತು ಗೆಳೆಯರಾದ ವಿಘ್ನೇಶ್ ರವರು ಶೈನ್ ವೇ ಆಸೋಸಿಯೇಟ್ಸ್ ಸಂಸ್ಥೆಗೆ ಹೋಗಿ ಪುರುಷೋತ್ತಮ ಅವರನ್ನು ಭೇಟಿ ಮಾಡಿದಾಗ ಅವರು ಕತಾರ್ ದೇಶಕ್ಕೆ ವೀಸಾ ಮಾಡಿ ಕೊಡುವುದಾಗಿ ತಿಳಿಸಿದರು. ಹಾಗೆಯೇ ಪಿರ್ಯಾದಿದಾರರು ಮತ್ತು ವಿಘ್ನೇಶ್ ಮತ್ತು ಇತರರು ತಮ್ಮ ಪಾಸ್ಫೋರ್ಟ್ನ್ನು ಅವರಿಗೆ ಕೊಟ್ಟಿರುತ್ತೇವೆ. ಅವರು ತಿಳಿಸಿದಂತೆ ಪಿರ್ಯಾದಿದಾರರು ದಿನಾಂಕ 23-08-2014 ರಂದು ರೂ. 25,000/- ವನ್ನು ಚೆಕ್ ಮುಖಾಂತರ ಮುರುಷೋತ್ತಮ ರವರಿಗೆ ಪಾವತಿ ಮಾಡಿರುತ್ತಾರೆ. ಪಿರ್ಯಾದಿದಾರರಂತೆಯೇ ವಿಘ್ನೇಶ್ ಮತ್ತು ಇತರರು ಸಹಾ ಹಣವನ್ನು ಪುರುಷೋತ್ತಮ ರವರಿಗೆ ಪಾವತಿ ಮಾಡಿರುತ್ತಾರೆ, ಕೆಲವು ದಿನಗಳ ಬಳಿಕ ಪಿರ್ಯಾದಿದಾರರ ಪಾಸ್ ಪೋರ್ಟ್ ಅನ್ನು ಅಂಚೆ ಮೂಲಕ ಪಿರ್ಯಾದಿದಾರರಿಗೆ ಕಳುಹಿಸಿದ್ದು, ಇಲ್ಲಿಯ ತನಕ ಹಣ ಮರುಪಾವತಿಸದೇ ಹಾಗೂ ಕೆಲಸದ ಬಗ್ಗೆ ವೀಸಾ ಕೊಡಿಸದೇ ಇತರರಿಗೂ ನಂಬಿಸಿ ಮೋಸ ಮಾಡಿರುವುದಾಗಿದೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.03.2015 ರಂದು ಮಧ್ಯಾಹ್ನ ಸುಮಾರು 3.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಮಂತ ಶೆಟ್ಟಿ ರವರು ಅವರ ಅಣ್ಣನ ಬಾಬ್ತು ಮೋಟಾರ್ ಸೈಕಲ್ ನಂಬ್ರ: KA19X9719 ನೇ ದನ್ನು ಚಲಾಯಿಸಿಕೊಂಡು ಮಂಗಳೂರು ಕಡೆಯಿಂದ ಫರಂಗಿಪೇಟೆ ಕಡೆಗೆ ಹೋಗುವರೇ ಅರ್ಕುಳ ಯಶಸ್ವಿ ಹಾಲ್‌ನ ಸ್ವಲ್ಪ ಮುಂದೆ ಹೋಗುತ್ತಿರುವಾಗ ಫರಂಗಿಪೇಟೆ ಕಡೆಯಿಂದ ಅರ್ಕುಳ ದ್ವಾರದ ಕಡೆಗೆ ಮೋಟಾರ್ ಸೈಕಲ್ ಒಂದನ್ನು ಅದರ ಸವಾರರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ಮದ್ಯ ಇರುವ ಡಿವೈಡರ್ ತಿರುವು ಜಾಗದಲ್ಲಿ ಆಚೆ ಈಚೆ ನೋಡದೇ ಬೈಕನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಂಬರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡ ಕೋಲು ಕಾಲಿಗೆ ಗಂಭೀರ ಸ್ವರೂಪದ ಮೂಳೆ ಮುರಿತದ ನೋವು ಹಾಗೂ ಎಡಕೈ ಮೊಣಗಂಟಿಗೆ ತರಚಿದ ಗಾಯ ಮತ್ತು ತಲೆಗೆ ಗುದ್ದಿದ ನೊವು ಉಂಟಾಗಿರುತ್ತದೆ, ಅಪಘಾತ ಮಾಡಿದ ಬೈಕ್ ನಂಬ್ರ KA19EC552 ಆಗಿದ್ದು ಸವಾರರ ಹೆಸರು ಮಹಮ್ಮದ್ ಶರೀಫ್ ಆಗಿರುತ್ತದೆ.
12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕುಲಶೇಖರ ಶಾಖೆ-1 ರ ವ್ಯಾಪ್ತಿಯಲ್ಲಿ ಬರುವ ನಾಗೂರಿ ಎಂಬಲ್ಲಿ ದಿನಾಂಕ: 26.03.2015 ರಂದು ರಾತ್ರಿ 10.10 ಗಂಟೆಗೆ ಲಾರಿ ನಂಬ್ರ ಕೆಎ-21-8395 ನೇಯದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ಅಳವಡಿಸಿರುವ ಮೆಸ್ಕಾಂ ಸಂಸ್ಥೆಯ ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಿದ್ಯುತ್ ಕಂಬಗಳು ತುಂಡಾಗಿ ಮೆಸ್ಕಾಂ ಸಂಸ್ಥೆಗೆ ಸುಮಾರು 58, 874 ರೂಪಾಯಿ ನಷ್ಟವುಂಟಾಗಿರುತ್ತದೆ ಎಂಬುದಾಗಿ ಮೆಸ್ಕಾಂ ನ ಕುಲಶೇಖರ ದ ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ಗಣೇಶ್ ಕುಂದರ್ ಎಂಬವರು ದೂರು ನೀಡಿರುವುದಾಗಿದೆ.
Happy Rose Day
ReplyDeleterose day images
rose day 2016
rose day pics
rose day special
rose day sms
rose day quotes
rose day messages
when is rose day
rose day wallpaper
rose day sms in hindi
rose day sayari
rose day status
rose day msg