Friday, March 27, 2015

Daily Crime Reports : 26-03-2015

ದೈನಂದಿನ ಅಪರಾದ ವರದಿ.
ದಿನಾಂಕ 26.03.201510:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
3
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
0






















  





1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ  ಶ್ರೀಮತಿ ಕಸ್ತೂರಿ ಎಂಬುವರು ಶೇಷಪ್ಪ ಎಂ.ಕೆ. ಎಂಬುವರನ್ನು ಮದುವೆಯಾಗಿ ಸುಮಾರು 46 ವರ್ಷವಾಗಿರುತ್ತದೆ. ಪಿರ್ಯಾದಿದಾರರಿಗೆ 5 ಜನ ಮಕ್ಕಳಿದ್ದುಅವರಲ್ಲಿ ಒಬ್ಬ ಮಗಳು ಅಂಗವಿಕಲೆಯಾಗಿದ್ದು, ಉಳಿದ ಮಕ್ಕಳು ಮದುವೆಯಾಗಿ ಬೇರೆ ಬೇರೆ ವಾಸವಾಗಿರುತ್ತಾರೆ. ಪಿರ್ಯಾದಿದಾರರು ತನ್ನ ಗಂಡ ಅಂಗವಿಕಲೆಯ ಮಗಳೊಂದಿಗೆ ವಾಸವಾಗಿರುತ್ತಾರೆ. ದಿನಾಂಕ 24-03-2015 ರಂದು ರಾತ್ರಿ 10.00 ಗಂಟೆಗೆ ಮನೆಗೆ ಬಂದು ಮಕ್ಕಳು ಹಣ ಕೊಡುವುದಿಲ್ಲವೆಂದು ಹೇಳಿ, ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ದೂಡಿ ಹಾಕಿದ್ದು, ಇದರಿಂದ ಪಿರ್ಯಾದಿದಾರರಿಗೆ ಬಲ ಕೈಗೆ ನೋವು ಉಂಟಾಗಿರುತ್ತದೆ. ಅಲ್ಲದೇ ನನಗೆ ಚಿಕಿತ್ಸೆಗೆ ಹಣ ಕೊಟ್ಟಿರುವುದಿಲ್ಲ ಎಂಬುದಾಗಿ ದೂರು ನೀಡಿರುವುದಾಗಿದೆ.

2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24/25-03-2015 ರಂದು ರಾತ್ರಿ ವೇಳೆ ಮಣ್ಣಗುಡ್ಡೆಯ ಕೂಳೂರು ಫೆರ್ರಿ ರಸ್ತೆಯ ಎಡ ಬದಿ ಇರುವ ಹಾಂಡಾ ಮ್ಯಾಟ್ರಿಕ್ಸ್‌‌ ವರ್ಕ್ಶಾಪ್ನ ಜಗಲಿಯಲ್ಲಿ ಮಲಗಿದ ನಾಗರಾಜ ಪ್ರಭು (34) ಎಂಬಾತನ ತಲೆಯ ಎಡ ಭಾಗಕ್ಕೆ ಯಾರೋ ಅಪರಿಚಿತನು ಯಾವುದೋ ದುರುದ್ದೇಶದಿಂದ ಸುಮಾರು 1 ಚದರ ಅಡಿ ಗಾತ್ರದ ಕಗ್ಗಲ್ಲನ್ನು ಎತ್ತಿ ಹಾಕಿ ಗಾಯಪಡಿಸಿ, ಕೊಲ್ಲಲು ಪ್ರಯತ್ನಿಸಿರುವುದಾಗಿದೆ.

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 25.03.2015 ರಂದು ಮಧ್ಯಾಹ್ನ 12.30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಗುರುವ ರವರು ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯ ಬಳಿ ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ  ರಾವ್ & ರಾವ್ ಕ್ಲಾಕ್ ಟವರ್   ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ  ರಾವ್ & ರಾವ್ ಜಂಕ್ಷನ್ ಕಡೆಯಿಂದ  ಕ್ಲಾಕ್ ಟವರ್ ಕಡೆಗೆ  ದೋಸ್ತ್ ಗೂಡ್ಸ್ ಟೆಂಪೋ ಕೆಎ.20.ಡಿ.0671ನೇದನ್ನು ಅದರ ಚಾಲಕ ಆಶಿಪ್ ಎಂಬವರು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲ ಕಾಲಿನ ಕೋಲು ಕಾಲಿನಲ್ಲಿ ಮೂಳೆ ಮುರಿತದ ಗಾಯವಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.

4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-03-2015 ರಂದು ಪಿರ್ಯಾದುದಾರರಾದ ಶ್ರೀ ಚಿತ್ತರಂಜನ್ ತನ್ನ ಸ್ನೇಹಿತನಾದ ಶಶಾಂಕ್ ರವರೊಂದಿಗೆ ಮೋಟಾರು ಸೈಕಲ್ನಲ್ಲಿ ಕೊಟ್ಟಾರಚೌಕಿಗೆ ಪೆಟ್ರೋಲ್ ಹಾಕಲು ಹೋಗುತ್ತಾ, ರಾತ್ರಿ ಸುಮಾರು 20-30 ಗಂಟೆಗೆ ನಂದನಪುರ ನಾಗನಕಟ್ಟೆ ಬಳಿ ತಲುಪುವಾಗ ಪಿರ್ಯಾದುದಾರರ ಪರಿಚಯದ ಮಿಥುನ್, ಸುದೀಪ್, ಪ್ರದೀಪ್, ಪ್ರತಾಪ್ ಎಂಬವರು ಮೋಟಾರು ಸೈಕಲ್ ನ್ನು ತಡೆದು ನಿಲ್ಲಿಸಿ, ನಿಮಗೆ ತುಂಬಾ ಅಹಂಕಾರ ಉಂಟು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ, ಚೂರಿಯಂತಹಾ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಫಿರ್ಯಾಧುದಾರರನ್ನು ಮತ್ತು ಶಶಾಂಕ್ ರವರನ್ನು ಮೋಟಾರು ಸೈಕಲ್ ನಿಂದ ಎಳೆದು ನೆಲಕ್ಕೆ ಬೀಳಿಸಿ ಕೈಯಿಂದ ಮತ್ತು ಕಾಲಿನಿಂದ ತುಳಿದು ತಲೆಗೆ ರಕ್ತ ಗಾಯವನ್ನುಂಟು ಮಾಡಿದ್ದು, ಪಿರ್ಯಾದುದಾರರು ಮತ್ತು ಶಶಾಂಕ್ ರವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ.

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-03-2015 ರಂದು 19-15 ಗಂಟೆಯಿಂದ ದಿನಾಂಕ 25-03-2015 ರಂದು ಬೆಳಿಗ್ಗೆ 10-00 ಗಂಟೆಯ ಮಧ್ಯ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ವಲೆನ್ಸಿಯಾದಲ್ಲಿರುವ ಇನ್ ಲ್ಯಾಂಡ್ ರೆಸಿಡೆನ್ಸಿ ಬಿಲ್ಡಿಂಗ್ ನ ಗ್ರೌಂಡ್ ಫ್ಲೋರ್ ನಲ್ಲಿರುವ ಜಸ್ಟ್ ಫಾರ್ ಯು ಎಂಬ ಹೆಸರಿನ  ಫಿರ್ಯಾಧಿದಾರರಾದ ಶ್ರೀಮತಿ ವಿಲ್ಮಾ ರೊಡ್ರಿಗಸ್ ರವರ ಬಾಬ್ತು ಬಟ್ಟೆ ಅಂಗಡಿಯ ಶಟರ್ ಬಾಗಿಲಿಗೆ ಹಾಕಲಾಗಿದ್ದ ಬೀಗಗಳನ್ನು ತೆರೆದು ಯಾರೋ ಕಳ್ಳರು ಅಂಗಡಿಯ ಒಳಗಡೆಯಿಂದ 2000/- ರೂ ನಗದು ಸೇರಿ ಒಟ್ಟು 2,97,541/- ರೂ ಮೌಲ್ಯದ ಬಟ್ಟೆ ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-03-2015 ರಂದು ಪಿರ್ಯಾದುದಾರರಾದ ಚಂದ್ರಕಾಂತ್ ರವರು ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಭಗವತೀ ಕ್ಷೇತ್ರಕ್ಕೆ ತೆರಳಿ ವಾಪಾಸಾಗುವ ಸಮಯ ಸುಮಾರು ರಾತ್ರಿ 01-30 ಗಂಟೆಯ ಸಮಯಕ್ಕೆ ಉಳ್ಳಾಲ ಬೈಲ್ನ ನಿವಾಸಿಯಾದ ಪ್ರಿತೇಶ್ಎಂಬುವರು ಪಿರ್ಯಾದುದಾರರ ಬಳಿ ಬಂದು ಏಕಾಏಕಿ ಪೈಟರ್ಹಿಡಿದುಕೊಂಡು ಪಿರ್ಯಾದುದಾರರ ಕೆನ್ನೆಗೆ ಮತ್ತು ತಲೆಗೆ ಬಲವಾಗಿ ಹೊಡೆದು ನಂತರ ಚಾಕು ತೋರಿಸಿ ಈ ಹಿಂದೆ ಗಲಾಟೆಯ ಸಮಯದಲ್ಲಿ ಪ್ರಿತೇಶ್ನ್ನು ಹಾಗೂ ಆತನ ಸ್ನೇಹಿತ ಕವಿತ್ನನ್ನು ಬಂದಿಸಿದಾಗ ಕವಿತ್ನ ಬೈಕನ್ನು ಪಿರ್ಯಾದುದುದಾರರ ಸಂಸ್ಥೆಯ ಓಮಿನಿ ಕಾರನಲ್ಲಿ ಪೊಲೀಸರು ಕೊಂಡುಹೋಗಿದ್ದನ್ನು ಕಂಡು ತಾನೇ ಪೊಲೀಸರಿಗೆ ವಿಷಯ ತಿಳಿಸಿರುವುದಾಗಿ ಭಾವಿಸಿರುವುದೇ ಈ ಹಲ್ಲೆಗೆ ಕಾರಣ ಎಂದು ಅವನು ತಿಳಿಸಿರುತ್ತಾನೆ ನಂತರ ಪಿರ್ಯಾದುದಾರರನ್ನು ಸ್ನೇಹಿತರು ಸೇರಿಕೊಂಡು ಸಹರಾ ಆಸ್ಪತ್ರೆ ತೊಕ್ಕೊಟ್ಟುವಿನಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.

7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-03-2015 ರಂದು ಪಿರ್ಯಾದುದಾರರಾದ ಶ್ರೀದೇವ್ ಟಿ. ಹರಿನಾಥ್ ರವರು ಸಂಜೆ ಸುಮಾರು 8-30 ಗಂಟೆಗೆ ಹೊಟೇಲ್ಮೋತಿಮಹಲ್ನಲ್ಲಿ ಔತಣಕೂಟ ಇದ್ದುದರಿಂದ ಹೊಟೇಲಿನ ಎದುರಿನ ರಸ್ತೆಯಲ್ಲಿ ತನ್ನ ಬಾಬ್ತು ಮೋಟಾರು ಸೈಕಲ್ನಂಬ್ರ ಕೆಎಲ್‌-08-ಎಕೆ-9845 ನೇ ಕಪ್ಪು ಮತ್ತು ನೀಲಿ ಕಲರಿನ ಹೀರೋ ಹೋಂಡಾ ಫ್ಯಾಶನ್ಪ್ಲಸ್ದ್ವಿಚಕ್ರ ವಾಹನವನ್ನು ಪಾರ್ಕ್ಮಾಡಿದ್ದು ಔತಣ ಕೂಟ ಮುಗಿಸಿ ರಾತ್ರಿ ಸಮಯ ಸುಮಾರು 10-45 ಗಂಟೆಗೆ ಬಂದು ನೋಡಿದಾಗ ಪಾರ್ಕ್ಮಾಡಿದ ಮೋಟಾರ್ಸೈಕಲ್ಇಲ್ಲದಿರುವುದು ಕಂಡು ಬಂತು. ನಂತರ ಸದ್ರಿ ಪರಿಸರದಲ್ಲಿ ಹುಡುಕಾಡಿದರೂ ಸಿಗದೇ ಇದ್ದು ವಾಹನವನ್ನು ತನ್ನ ಸ್ನೇಹಿತರು ಕೊಂಡು ಹೋಗಿರಬಹುದೆಂದು ಭಾವಿಸಿ ವಿಚಾರಿಸಿದಾಗ ಎಲ್ಲಿಯೂ ವಾಹನ ಪತ್ತೆಯಾಗಿರುವುದಿಲ್ಲ.

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.03.2015 ರಂದು ಪಿರ್ಯಾದುದಾರರಾದ ಶ್ರೀ ಸಂತೋಷ್ ರವರ ಬಾವನವರಾದ ಅಶೋಕ್ ಎಂಬವರು KA-19-C-921ನೇ ನಂಬ್ರದ ಆಟೋರಿಕ್ಷಾವನ್ನು ಪಂಪ್ವೆಲ್ ಕಡೆಯಿಂದ ಚಲಾಯಿಸುತ್ತಾ ನಾಗೂರಿಯ ಕೋಡಿಬೈಲ್ ಏಜನ್ಸಿಯ ಎದುರು ಭಾಗದ ರಸ್ತೆಯಲ್ಲಿ ಆಟೋರಿಕ್ಷಾಕ್ಕೆ ಸಿಗ್ನಲ್ ಹಾಕಿ ಸದ್ರಿ ರಿಕ್ಷಾವನ್ನು ರಸ್ತೆಯ ಬಲಭಾಗಕ್ಕೆ ತಿರುಗಿಸುತ್ತಿರುವಾಗ ಎದುರಿನಿಂದ ಅಂದರೆ ಪಡೀಲ್ ಕಡೆಯಿಂದ KA-19-MB-1303ನೇ ನಂಬ್ರದ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಇಮ್ರಾನ್ ಎಮ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸದ್ರಿ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಶೋಕ್ ರವರು ಆಟೋರಿಕ್ಷಾದಿಂದ ಕೆಳಗೆ ಬಿದ್ದು, ಅವರ ಎಡಕಿವಿಗೆ ರಕ್ತ ಗಾಯ ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಡಿರುವುದಾಗಿದೆ.

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25.03.2015 ರಂದು ಸುಮಾರು 5:45 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಕಿಶೋರ್ ರವರು KA-19-EH-2522ನೇ ನಂಬ್ರದ ಬುಲೆಟ್ ಬೈಕ್ನ್ನು ಇಂಡಸ್ಟ್ರಿಯಲ್ ಎಸ್ಟೇಟ್ ಎದುರುಗಡೆ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಅವರ ಎದುರುಗಡೆಯಿಂದ ಹೋಗುತ್ತಿದ್ದ KA-19-D-1465ನೇ ನಂಬ್ರದ ಲಾರಿಯನ್ನು ಅದರ ಚಾಲಕ ಒಮ್ಮೆಲೆ ಏಕಾಏಕಿ ನಿರ್ಲಕ್ಷತನದಿಂದ ರಸ್ತೆಯ ಬಲಭಾಗಕ್ಕೆ ಚಲಾಯಿಸಿ ಸದ್ರಿ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬುಲೆಟ್ ಬೈಕ್ ಜಖಂಗೊಂಡಿರುವುದಾಗಿದೆ.

No comments:

Post a Comment