Tuesday, March 10, 2015

Daily Crime Reports : 10-03-2015

ದೈನಂದಿನ ಅಪರಾದ ವರದಿ.
ದಿನಾಂಕ 10.03.201512:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
2
ರಸ್ತೆ ಅಪಘಾತ  ಪ್ರಕರಣ
:
4
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
2
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರಿನ Expert ಕಾಲೇಜಿನಲ್ಲಿ 2ನೇ ಪಿ.ಯು.ಸಿ. ಕಲಿಯುತ್ತಿದ್ದ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿ ದಿನಾಂಕ 08-03-2015 ರಂದು ಬೆಳಿಗ್ಗೆ 11-00 ಗಂಟೆಗೆ  ತಾನು ಉಳಕೊಂಡಿದ್ದ  ಪಿ.ಜಿಯಿಂದ  ಹೊರ ಹೋಗಿದ್ದು, ವಾಪಾಸ್ಸು ಬಾರದೇ ಇದ್ದು, ಅಪರಾಹ್ನ 16-30 ಗಂಟೆಯಿಂದ 17-30 ಗಂಟೆ ಮಧ್ಯೆ ಅಪರಿಚಿತ ಮೊಬೈಲ್ ನಂಬ್ರನಿಂದ ಗಜ ಎಂಬಾತ ವಿದ್ಯಾರ್ಥಿನಿಯ ತಂದೆಗೆ ಫೋನ್ ಮಾಡಿ, 'ತಾನು ಗಜ ಮಾತನಾಡುವುದು, ನಿನ್ನ ಮಗಳನ್ನು ನಾನು ಎತ್ತಾಕ್ಕೊಂಡು ಹೋಗುತ್ತಿದ್ದು, ನಿನ್ನಿಂದ ಸಾಧ್ಯವಿದ್ದರೆ ಬಿಡಿಸಕೊಳ್ಳಿ, ಅದು ಏನು ಮಾಡುತ್ತಿರೋ ಮಾಡಿಕೊಳ್ಳಿ" ಎಂತ ಬೆದರಿಸಿದ್ದು, ಆತನು ಪಿರ್ಯಾದಿದಾರರ ಮಗಳನ್ನು ಅಪಹರಿಸಿರುವುದಾಗಿದೆ.
 
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಬೈಕಂಪಾಡಿ ಗ್ರಾಮದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾ ದಲ್ಲಿರುವ ಪಿರ್ಯಾದಿದಾರರಾದ ಶ್ರೀ ಜನಕ ರವರ ಬಾಬ್ತು  ಏಕತಾ ಏಜೆನ್ಸೀಸ್ ಗೋಡೌನ್ಗೆ ದಿನಾಂಕ. 08-03-2015ರಂದು ರಾತ್ರಿ 10-00ಗಂಟೆಯಿಂದ ದಿನಾಂಕ. 09-03-2015ರ ಬೆಳಿಗ್ಗೆ 06-00ಗಂಟೆಯ ಮದ್ಯೆ ಯಾರೋ ಕಳ್ಳರು ಗೋಡೌನ್ ಗೆ ಅಳವಡಿಸಿದ ಎಕ್ಸಾಸ್ಟ್ ಫ್ಯಾನ್ನ್ನು ಕಿತ್ತು ಒಳಹೊಕ್ಕಿ ಗೋಡೌನ್ನಲ್ಲಿರಿಸಿದ ಸುಮಾರು 150000 ಬೆಲೆಯ 11 ಬ್ಯಾಗ್ಅಡಿಕೆಯನ್ನು ಕಳವುಗೈದು ಕೊಂಡು ಹೋಗಿರುವುದಾಗಿದೆ.
 
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-03-2015 ರಂದು ಮುಂಜಾನೆ 03:30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಯೇನಪೋಯಾ ಆಸ್ಪತ್ರೆಯ ಬಳಿಯಲ್ಲಿ ಕಾರು ನಂಬ್ರ ಎಂಹೆಚ್-04-ಎಸಿ-7879 ನೇದರಲ್ಲಿ ಯಾರೋ ಕಳ್ಳರು 5 ಆಡು ಮರಿಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಹಗ್ಗದಿಂದ ಕಟ್ಟಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದುದನ್ನು ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವ ಪಡೀಲ್ ಮತ್ತು ಸಿಬ್ಬಂದಿಗಳು ಬೆನ್ನಟ್ಟಿದಾಗ ಸದ್ರಿ ಕಾರಿನಲ್ಲಿದ್ದ ಆರೋಪಿಗಳು ಕಾರನ್ನು ನಿಲ್ಲಿಸಿ ಪರಾರಿಯಾಗಿರುತ್ತಾರೆ. ಕಾರಿನಲ್ಲಿದ್ದ 5 ಆಡುಗಳನ್ನು ಕಾರು ಸಮೇತ ಕಾರಿನಲ್ಲಿ ದೊರೆತ ಮೊಬೈಲ್ ಹ್ಯಾಂಡ್ಸೆಟ್, ಪರ್ಸ್‌, .ಟಿ.ಎಂ ಕಾರ್ಡ್‌, ಆಡಿನ ಕಾಲಿಗೆ ಕಟ್ಟಲು ಬಳಸಿದ ನೈಲಾನ್ ಹಗ್ಗವನ್ನು ಮುಂದಿನ ಕ್ರಮದ ಸ್ವಾಧೀನಪಡಿಸಿಕೊಳ್ಳಲಾಗಿದೆ.
 
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-03-15 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಗೃಹಿಣಿ ಕಾರ್ನಾಡು ಗ್ರಾಮದ ವನಭೋಜನದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಒಬ್ಬ ವ್ಯಕ್ತಿ ಬೈಕಿನಲ್ಲಿ ಹಿಂಬಾಲಿಸಿ ಬಂದು ಪೋನ್ ನಂಬರ್ ಕೇಳಿದ್ದು , ಅಲ್ಲದೆ ದಿನಾಂಕ 09-03-2015 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿದಾರರು ಅದೇ ದಾರಿಯಲ್ಲಿ ತನ್ನ ತಾಯಿಯೊಂದಿಗೆ ಹೋಗುವಾಗ ಅದೇ ವ್ಯಕ್ತಿಯು ಬಂದು ಗೃಹಿಣಿ ಯಲ್ಲಿ ನಗುತ್ತ, ಕಣ್ಣು ಒತ್ತಿ, ಬರುವಂತೆ ಕೈ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದು, ಕೂಡಲೆ ಪಿರ್ಯಾದಿದಾರರು ಗಂಡನಿಗೆ ಪೋನ್ ಮಾಡಿ ಸ್ಥಳಕ್ಕೆ ಕರೆಯಿಸಿ ಆ ವ್ಯಕ್ತಿಯನ್ನು ಹಿಡಿದಿಟ್ಟು ವಿಚಾರಿಸಿದಾಗ ಆತನ ಹೆಸರು ಅಸ್ಗರ್ ಎಂದು ತಿಳಿದು ಬಂದಿರುವುದಾಗಿದೆ.
 
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/03/2015 ರಂದು ಸಮಯ ಸುಮಾರು ಬೆಳಗ್ಗೆ 11:15 ಗಂಟೆಗೆ ಪಿರ್ಯಾದುದಾರರಾದ ಶ್ರೀ ಮೊಹಿನುದ್ದೀನ್ ರವರು ಮತ್ತು ಅವರ ತಾಯಿ ರಿಕ್ಷಾ ನಂಬ್ರ KA-19-D-0371 ನೇ ದರಲ್ಲಿ ಪ್ರಯಾಣಿಕರಾಗಿ ಮಂಗಳೂರು ನಗರದ ಬೆಂದೂರುವೆಲ್ ಕಡೆಯಿಂದ ಫಳ್ನಿರ್ ಕಡೆಗೆ ಬರುವರೇ ವಾಸ್ ಲೇನ ಕಲ್ಪನಾ ಅಡ್ಡ ರಸ್ತೆಯ ಬಳಿ ಬರುತ್ತಿರುವಾಗ ಯುನಿಟಿ ಆಸ್ಪತ್ರೆ ಕಡೆಯಿಂದ ಕಾರೊಂದು ಬರುತ್ತಿದ್ದು ಸದ್ರಿ ಕಾರನ್ನು ನೋಡಿ ಪಿರ್ಯಾದುದಾರರು ಕುಳೀತಿದ್ದ ಆಟೋ ರಿಕ್ಷಾದ ಚಾಲಕ  ಇಂಟರಲಾಕ್ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಏಕಾಎಕಿ ಬ್ರೆಕ್ ಹಾಕಿದ ಪರಿಣಾಮ ಪಿರ್ಯಾದುದಾರರು ಕುಳೀತಿದ್ದ ರಿಕ್ಷಾ ಮುಗುಚಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರರಿಗೆ ಬಲಕೈಯ ತೊಳಿಗೆ, ಗಂಭಿರ ಸ್ವರೂಪದ ಮೂಳೆ ಮೂರಿತದ ಗುದಿದ್ದ ಗಾಯ ಮತ್ತು ಪಿರ್ಯಾದುದಾರರ ತಾಯಿಗೆ ಎಡಕೈ ಹೆಬ್ಬೆರಳಿಗೆ ಗುದ್ದಿದ ನೋವು ಉಂಟಾಗಿ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.
 
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 9-3-2015 ರಂದು ಪಿರ್ಯಾದಾರರಾದ ಶ್ರೀ ರಾಹುಲ್ ಜಟ್ಟಣ್ಣ ರವರು ತನ್ನ ಕೆಲಸ ಮುಗಿಸಿಕೊಂಡು ಮೋಟಾರ್ ಸೈಕಲ್ ನಲ್ಲಿ ಮನೆ ಕಡೆಗೆ ಹೋಗುತ್ತಿರುವಾಗ ಸಮಯ ಸಂಜೆ 3-30 ಗಂಟೆಯ ವೇಳೆಗೆ ಪಿರ್ಯಾದಿದಾರರ ಪರಿಚಯದ ಅಭಿಜೀತ್ ಹಾಗೂ ಆತನೊಂದಿಗಿದ್ದ ಇಬ್ಬರು ವ್ಯಕ್ತಿಗಳು ಮೋಟಾರ್ ಸೈಕಲ್ ನಲ್ಲಿ ಬಂದು  ಮುಳಿಹಿತ್ಲು ಜಂಕ್ಷನ್ ನಲ್ಲಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಒಮ್ಮೆಲೇ ಅಡ್ಡ ನಿಲ್ಲಿಸಿ, ಅವರ ಬೈಕ್ ನಿಂದ ಇಳಿದು, ಅವರುಗಳ ಪೈಕಿ ಅಭಿಜೀತ್ ಎಂಬಾತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, "ಈ ಭಾರಿ ಮಲ್ಲಾ ಜನನಾ, ದಾನೇ ಸಾದೀಡ್ ಪೋನಗಾ, ಎನನ್ ತೂದು ಮಸೆಪನಾ" ಎಂದು ಅವಾಚ್ಯ ಶಬ್ದಗಳಿಂದ ಬೈದು, ಆತನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಪಿರ್ಯಾದಿದಾರರ ಹಣೆಯ ಮುಂಭಾಗಕ್ಕೆ ಹೊಡೆದಿದ್ದು, ಅಭಿಜೀತ್ ನೊಂದಿಗಿದ್ದ ಇನ್ನೋರ್ವನು ಪಿರ್ಯಾದಿದಾರರನ್ನು ಉದ್ದೇಶಿಸಿ, ದಾನೇ ಅಭಿಜೀತ್ ನ್ ಮಸೇದ್ ತೂಂಡಾ ಕೇನುನಕ್ಲು ಇಜ್ಜೇರ್ ಪಂಡ್ ದ್ ಎನ್ನಿಯಾನಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ರಸ್ತೆಯಲ್ಲಿ ಬಿದ್ದಿದ್ದ  ಒಂದು ಕಲ್ಲಿನಿಂದ ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ಹೊಡೆದನು. ಆವೇಳೆಗೆ ಇನ್ನೋರ್ವನು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು, ಮಸೇಂಡಾ ಜಾಗೃತೆ ಮರ್ಯಾದೀಡ್ ಜೀವನ ದೆಪ್ಪೆರೆ ಕಲ್ಪು ಎಂಬುದಾಗಿ ಬೈದು, "ನನ ಬಾಲ ಬಿಚ್ಚಂಡಾ ನಿನನ್ ಜೀವಸಹಿತ ಬುಡ್ಪುಜೀ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು, ಕೂಡಲೇ ಪಿರ್ಯಾದಿದಾರರು ಹೆದರಿ ಜೋರಾಗಿ ಬೊಬ್ಬೆ ಹಾಕಿದ್ದು, ಅಲ್ಲಿದ್ದ ಪಿರ್ಯಾದಿದಾರರ ಗೆಳೆಯರು ಹತ್ತಿರ ಬಂದಾಗ, ಆರೋಪಿ ಅಭಿಜೀತ್ ಹಾಗೂ ಅಪರಿಚಿತ ಇಬ್ಬರು ಅದೇ ಬೈಕ್ ನಲ್ಲಿ ಸ್ಥಳದಿಂದ  ಪರಾರಿಯಾಗಿರುತ್ತಾರೆ.
 
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 9-3-2015 ರಂದು ಮದ್ಯಾಹ್ನದ ಸಮಯದಲ್ಲಿ ಫಿರ್ಯಾದಿದಾರರಾದ ಶ್ರೀ ಅಬ್ದುಲ್ ರಹಿಮಾನ್ ರವರು ಕೆಎ-19-ಡಿ-6230 ನೇ ಅಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ದೇರಳಕಟ್ಟೆಯಿಂದ ಕೆಸಿರೋಡ್ಗೆ ಬಿಟ್ಟು ಅಲ್ಲಿಂದ ವಾಪಾಸು ತನ್ನ ಮನೆಯಾದ ಉಳ್ಳಾಲಕ್ಕೆ ರಿಕ್ಷಾವನ್ನು ಚಲಾಯಿಸಿಕೊಂಡು ಕೋಟೆಕಾರು-ಸೋಮೇಶ್ವರ ಮಾರ್ಗವಾಗಿ ಬಂದವರು ಮದ್ಯಾಹ್ನ 2-40 ಗಂಟೆಯ ಸಮಯಕ್ಕೆ ಸೋಮೇಶ್ವರ ರೈಲ್ವೇ ಗೇಟ್ತಲುಪಿದಾಗ ಅಲ್ಲಿ ಗೇಟ್ಹಾಕಿದ್ದು, ಸ್ವಲ್ಪ ಹೊತ್ತಿನಲ್ಲಿ ರೈಲು ಹೋದ ಬಳಿಕ ರೈಲ್ವೇ ಗೇಟ್ತೆರೆದಾಗ ಫಿರ್ಯಾದಿದಾರರು ತನ್ನ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಾ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಸೋಮೇಶ್ವರ ರೈಲ್ವೇ ಟ್ರಾಕ್ನ ಮದ್ಯಕ್ಕೆ ತಲುಪುತ್ತಿದ್ದಂತೆ ಫಿರ್ಯಾದಿದಾರರ ರಿಕ್ಷಾದ ಬಲಗಡೆಯಿಂದ ಕೆಎ-19-ಎಎ-6754 ನೇ ಅಟೋ ರಿಕ್ಷಾ ಕೂಡಾ ಕೋಟೆಕಾರಿನಿಂದ ಸೋಮೇಶ್ವರಕ್ಕೆ ಹೋಗುತ್ತಿದ್ದು ಆ ರಿಕ್ಷಾವನ್ನು ಅದರ ಚಾಲಕ ಒಮ್ಮೆಲೇ ಫಿರ್ಯಾದಿದಾರರ ರಿಕ್ಷಾಕ್ಕೆ ಅಡ್ಡ ತಂದು ನಿಲ್ಲಿಸಿ ಫಿರ್ಯಾದಿಯನ್ನು  ಉದ್ದೇಶಿಸಿ ಏನು ನಿನಗೆ ಅವಸರ ಎಂದು ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾದಿಯು ಆತನಲ್ಲಿ ಯಾಕೆ ತನಗೆ ಬೈಯುತ್ತೀ, ತಾನು ತನ್ನಷ್ಟಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಆರೋಪಿ ರಿಕ್ಷಾ ಚಾಲಕನು ರೈಲ್ವೇ ಟ್ರಾಕ್ನ ಬದಿಯಲ್ಲಿ ಬಿದ್ದುಕೊಂಡಿದ್ದ ಒಂದು ಕಲ್ಲನ್ನು ಹೆಕ್ಕಿ ತಂದು ಒಮ್ಮೆಲೇ ಫಿರ್ಯಾದಿಯು ಚಲಾಯಿಸುವ ಕೆಎ-19-ಡಿ-6230 ನೇ ರಿಕ್ಷಾದ ಎದುರಿನ ಗಾಜಿನ ಎಡ ಬದಿಗೆ ಹೊಡೆದು ಗಾಜು ಜಖಂಗೊಳಿಸಿ ಸುಮಾರು ರೂ. 3,500/- ನಷ್ಟ ಉಂಟು ಮಾಡಿರುವುದಾಗಿದೆ.
 
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-03-2015 ರಂದು ಪಿರ್ಯಾದುದಾರರಾದ ಶ್ರೀ ನಿತಿನ್ ಎಂ.ಡಿ. ರವರು ತನ್ನ ಬಾಬ್ತು ಮೊಟಾರ್ಸೈಕಲ್ನಂಬ್ರ ಕೆಎಲ್‌-14-ಜಿ-7422 ರಲ್ಲಿ ಮಂಗಳೂರಿನಿಂದ ಮಂಜೇಶ್ವರಕ್ಕೆ ಹೋಗುತ್ತಿರುವಾಗ ತೊಕ್ಕೊಟ್ಟು ಜಂಕ್ಷನ್ನಿಂದ ಮುಂದಕ್ಕೆ ಅಂಬಿಕಾ ರೋಡ್ಜಂಕ್ಷನ್ಬಳಿ ಸಂಜೆ 18-00 ಗಂಟೆಗೆ ತಲುಪುವಷ್ಟರಲ್ಲಿ ಅಲ್ಲಿಯೇ ಬದಿಯಲ್ಲಿ ನಿಂತಿದ್ದ ಕೆಎ-19-ಡಿ-4837ನೇ ಪಿಕ್ಅಪ್‌‌ ಗಾಡಿಯ ಚಾಲಕನು ತನ್ನ ಗಾಡಿಯನ್ನು ಒಮ್ಮೇಲೆ ಬಲಬದಿಗೆ ತಿರುಗಿಸಿದಾಗ ಪಿಕ್ಅಪ್ನ ಎದುರಿನ ಬಲಗಡೆಯ ಟೈರ್ಪಿರ್ಯಾದುದಾರರ ಕಾಲಿಗೆ ತಾಗಿದ ಪರಿಣಾಮ ಪಿರ್ಯಾದುದಾರರು ಕೆಳಗೆ ಬಿದ್ದು ಅವರ ಹಣೆಯ ಎಡಬದಿಗೆ, ಗಲ್ಲಕ್ಕೆ ರಕ್ತಗಾಯವಾಗಿದ್ದಲಲ್ಲದೇ ಎಡಕಾಲಿನ ಮೂಳೆಯು ಮುರಿತದ ಗಾಯವಾಗಿರುತ್ತದೆ.
 
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09.03.2015 ರಂದು ಪಿರ್ಯಾದುದಾರರಾದ ಶ್ರೀ ದೇವದಾಸ ಶೆಟ್ಟಿ ರವರು ಮಧ್ಯಾಹ್ನ 3:30 ಗಂಟೆ ಸಮಯಕ್ಕೆ ಪಡೀಲು ಭೈರಾಡಿ ಕೆರೆ ಬಳಿ ಪಡೀಲು ಬಸ್ಸು ನಿಲ್ದಾಣದ ಕಡೆಗೆ ಹೋಗಲು ರಸ್ತೆ ದಾಟುತ್ತಿರುವಾಗ ಕಣ್ಣೂರು ಕಡೆಯಿಂದ KA-19-X1173ನೇ ನಂಬ್ರದ ಆಕ್ಟೀವಾ ಸ್ಕೂಟರ್ನ್ನು ಅದರ ಸವಾರ ಸಂತೋಷ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮಣ್ಣು ರಸ್ತೆಗೆ ಬಿದ್ದು, ಅವರ ಎಡ ಕೋಲು ಕಾಲಿಗೆ ಗಂಭೀರ ಸ್ವರೂಪದ ಗುದ್ದಿದ ನೋವುಂಟಾದವರು ಚಿಕಿತ್ಸೆಯ ಬಗ್ಗೆ ನಗರದ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ.
 

No comments:

Post a Comment