ಕ್ರೈಸ್ತ ಪ್ರಾರ್ಥನ ಮಂದಿರ ವಿಗ್ರಹದ ಗಾಜಿಗೆ ಹಾನಿಗೊಳಿಸಿದ ಆರೋಪಿಯ ಬಂಧನ
ದಿನಾಂಕ ; 24-02-2015 ರ ರಾತ್ರಿಯ ಸಮಯದಿಂದ ದಿನಾಂಕ 25-2-2015 ರ ಬೆಳೀಗ್ಗೆ ನಡುವೆ ಮಂಗಳೂರು ತಾಲೂಕು ದೇರಳಕಟ್ಟೆ ಪನೀರ್ ಎಂಬಲ್ಲಿರುವ ವಾರದ ಒಂದು ದಿನ ಶುಕ್ರವಾರದಂದು ಸಂಜೆ ಸಮಯ ಪ್ರಾರ್ಥನೆ ನಡೆಯುವ ಸಂತ ಜೋಸೆಫ್ ವಾಜ್ ಪ್ರಾರ್ಥನಾ ಮಂದಿರದ ಹೊರ ಜಗಲಿಯಲ್ಲಿರುವ ಮಾತೆ ಮೆರ್ಸಿಯಮ್ಮನವರ ವಿಗ್ರಹದ ಸುತ್ತ ಅಳವಡಿಸಿದ್ದ ಗಾಜಿನ ಕೋನಕ್ಕೆ ಯಾರೋ ಕಿಡಿಗೇಡಿಗಳು ಚಿಕ್ಕ ಜಲ್ಲಿ ಕಲ್ಲನ್ನು ಬಿಸಾಡಿ ಗಾಜನ್ನು ತೂತು ಮಾಡಿ ಹಾನಿಗೊಳಿಸಿರುತ್ತಾರೆ. .
ಸದ್ರಿ ವಿಷಯಕ್ಕೆ ಸಂಬಂಧೀಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ; 62/2015 ಕಲಂ; 295,427 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಮಾನ್ಯ ಪೊಲೀಸ್ ಆಯುಕ್ತರ ರವರ ಅದೇಶದಂತೆ ಮುಂದಿನ ತನಿಖೆ ಕೈಗೊಂಡ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸವಿತ್ರ್ ತೇಜ್ ರವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಭಾರತಿ.ಜಿ, ರಾಜೇಂದ್ರ. ಬಿ. ಹಾಗು ಸಿಬ್ಬಂಧಿಗಳಾದ ಮೋಹನ್, ಕಮಲಾಕ್ಷ, ಲಿಂಗರಾಜ್, ಪ್ರಶಾಂತ್ , ರವಿಚಂದ್ರ ರವರುಗಳ ತನಿಖಾ ತಂಡವನ್ನು ರಚಿಸಿ ಶೀಘ್ರವಾಗಿ ಬಂಧೀಸಲು ಮಾರ್ಗದರ್ಶನವನ್ನು ನೀಡಿರುತ್ತಾರೆ.
ತನಿಖೆ ಕೈಗೊಂಡ ಅಧಿಕಾರಿಯವರು ಖಚಿತ ಮಾಹಿತಿ ಮೇರೆಗೆ ಸಂಶಯಿತ ವ್ಯಕ್ತಿ ಆನಂದ (30) ತಂದೆ: ಲಿಂಗಪ್ಪ, ವಾಸ: ಉಕ್ಕುಡ ಮಸೀದಿಯ ಬಳಿ, ಉಕ್ಕುಡ, ಕಿನ್ಯಾ ಗ್ರಾಮ, ಮಂಗಳೂರು ತಾಲೂಕು ರವರನ್ನು ವಿಚಾರಣೆಗೆ ಕರೆಯಿಸಲಾಯ್ತು. ಸತತ ವಿಚಾರಣೆಯ ಬಳಿಕ ಸಂಶಯಿತ ವ್ಯಕ್ತಿಯು ತಾನು 2 ವಾರಗಳ ಹಿಂದೆ ಸದ್ರಿ ಚರ್ಚ್‌ನಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಹೆಚ್ಚಿನ ಕೂಲಿಗಾಗಿ ಬೇರೊಂದು ಕೆಲಸಕ್ಕೆ ಹೋಗಿರುವುದಾಗಿ ತಿಳಿಸಿರುತ್ತಾನೆ. ಮುಂದುವರಿದು ತಾನು ದಿನಾಂಕ ;24-2-2015 ರಂದು ಪ್ರಾರ್ಥನಾ ಮಂದಿರದ ಎದುರು ಭಾಗದಲ್ಲಿರುವ ಸ್ಮಶಾನದಲ್ಲಿ ಮದ್ಯಪಾನ ಮಾಡಿ ಬಳಿಕ ಗ್ಲಾಸ್ ಕೋನದಲ್ಲಿರುವ ಮಾತೆ ಮೆರ್ಸಿಯಮ್ಮ ನವರ ವಿಗ್ರಹಕ್ಕೆ ಕಲ್ಲನ್ನು ಹೊಡೆದು ಹಾನಿ ಮಾಡಿರುತ್ತೇನೆ . ತಾನು ಇದನ್ನು ಕಡಿಮೆ ಕೂಲಿಯನ್ನು ನೀಡಿದ ವಿಚಾರದಲ್ಲಿ ಚರ್ಚ್‌ನವರ ಮೇಲೆ ಅಸಮಧಾನದಿಂದ ಈ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ದಿನಾಂಕ ;09-02-2015 ರಂದು ಆರೋಪಿ ಆನಂದನನ್ನು ದಸ್ತಗಿರಿ ಮಾಡಲಾಗಿದೆ. ತಕ್ಷೀರನ್ನು ಭೇದಿಸಿರುವ ತನಿಖಾ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಲಾಗಿದೆ.
No comments:
Post a Comment