Monday, March 16, 2015

Daily Crime Reports : 14-03-2015

ದೈನಂದಿನ ಅಪರಾದ ವರದಿ.
ದಿನಾಂಕ 14.03.201512:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
1
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
1
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
3
ರಸ್ತೆ ಅಪಘಾತ  ಪ್ರಕರಣ
:
5
ವಂಚನೆ ಪ್ರಕರಣ        
:
1
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
2
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಗಜಾನನ ಡಿ. ನಾಯ್ಕ್ ರವರು ಕೆಲಸ ಮಾಡುವ ಕಂಪೆನಿಯು ಮೊಬೈಲ್ ಟವರ್ ಗಳ ವೀಕ್ಷಣೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದು, ದಿನಾಂಕ 08-03-2015 ರಂದು ರಾತ್ರಿ 20-00 ಗಂಟೆಗೆ ಪಿರ್ಯಾದಿದಾರರು ಕುಳಾಯಿಯ ರೈಲ್ವೇ ಓವರ್ ಬ್ರಿಡ್ಜ್ ಬಳಿಯ ಬಿ.ಎಸ್.ಎನ್.ಎಲ್ ಮೊಬೈಲ್ ಟವರನ್ನು ಪರಿಶೀಲಿಸಿ ಹೋಗಿದ್ದು ದಿನಾಂಕ 11-03-2015 ರಂದು ಬೆಳಿಗ್ಗೆ 11-30 ಗಂಟೆಗೆ ಮತ್ತೆ ಸದ್ರಿ ಟವರ್ ವೀಕ್ಷಣೆ  ಬಗ್ಗೆ ಬಂದು ನೋಡಿದಾಗ ಸದ್ರಿ ಮೊಬೈಲ್ ಟವರಿಗೆ ಅಳವಡಿಸಿರುವ 48 ಹಮಾರಾಜ 300 .ಹೆಚ್ ಬ್ಯಾಟರಿಗಳು ಕಳವಾಗಿದ್ದು ಸದ್ರಿ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕಳವಾದ ಬ್ಯಾಟರಿಗಳ ಅಂದಾಜು ಮೌಲ್ಯ 125000/- ರೂ ಆಗಿರಬಹುದು.
 
 
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಬಂಟ್ವಾಳ ತಾಲೂಕು, ಕೈರಂಗಳ ಗ್ರಾಮದ ನಡುಪದವು ಪಿ.. ಕಾಲೇಜಿನ ಜ್ಯೂನಿಯರ್ಬಾಯ್ಸ್ಹಾಸ್ಟೇಲ್ನಲ್ಲಿ ದಿನಾಂಕ 12.03.2015 ರಂದು ಸಂಜೆ ಸುಮಾರು 7:30 ಗಂಟೆ ಸಮಯಕ್ಕೆ ಅಕ್ರಮ ಕೂಟ ಸೇರಿಕೊಂಡು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಆರೋಪಿ ವಿದ್ಯಾರ್ಥಿಗಳು ತಮಗೆ ಪೂರೈಕೆ ಮಾಡಿದ ರಾತ್ರಿ ಊಟದಲ್ಲಿ ಹಲ್ಲಿ ಬಿದ್ದಿರುತ್ತದೆ ಎಂದು ನೆಪ ಒಡ್ಡಿ ಹಾಸ್ಟೇಲಿನ ಕಿಟಕಿ ಗಾಜು, ಮೇಜು, ಕುರ್ಚಿ, ವಿದ್ಯುತ್ದೀಪ, ಫ್ಯಾನು, ಟಿ.ವಿ., ದೂರವಾಣಿ, ಕಪಾಟುಗಳು, ಬೆಡ್ಮತ್ತು ತಲೆದಿಂಬು, ಮಂಚ ಹಾಗೂ ಇನ್ನಿತರ ಸೊತ್ತುಗಳನ್ನು ಹಾನಿಗೊಳಿಸಿದ್ದು ಸುಮಾರು ರೂ. 5,00.000/- ನಷ್ಟವನ್ನುಂಟು ಮಾಡಿದ್ದು ಅಲ್ಲದೇ ಮೇಲ್ವಿಚಾರಣೆಗೆ ಹಾಕಿದ ಸಿ.ಸಿ. ಟಿ.ವಿ. ಕ್ಯಾಮೆರಾವನ್ನು ಹುಡಿ ಮಾಡಿರುತ್ತಾರೆ ಹಾಗೂ ಊಟದ ಹಾಲ್ನಲ್ಲಿ ಆಹಾರ ಪದಾರ್ಥಗಳನ್ನು ಚೆಲ್ಲಿ ಹಾನಿಯನ್ನುಂಟು ಮಾಡಿರುತ್ತಾರೆ. ಹಾಗೂ ಹಾಸ್ಟೇಲಿನ ಮೇಲ್ವಿಚಾರಣೆ ಮಾಡುವ ವಾರ್ಡನ್ರವರನ್ನು ಕೊಠಡಿಯಿಂದ ಹೊರಗೆ ಓಡಿಸಿ, ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದು ಅಲ್ಲದೇ ಅವರ ವೈಯುಕ್ತಿಕ ಸೊತ್ತನ್ನು ಕೂಡಾ ಹಾಳು ಮಾಡಿರುತ್ತಾರೆ.
 
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-12-2014 ರಂದು 14-00 ಗಂಟೆಯಿಂದ 20-12-2014 ರಂದು 15-00 ಗಂಟೆಯ ಮಧ್ಯೆ ಅವಧಿಯಲ್ಲಿ ಮಂಗಳೂರು ನಗರದ ನಂತೂರು ಪದವು ಬಳಿ ಪಿರ್ಯಾದಿದಾರರಾದ ಅಶೋಕ ಕುಮಾರ್ ರವರಿಗೆ ಸಂಬಂದಿಸಿದ ನ್ಯೂ ಹಿಮಾಲಯ ರೋಡ್ ಲೈನ್ಸ್ ನ ಪಾರ್ಕಿಂಗ್ ಬಳಿ ಬಾಡಿಗೆಗೆ ಕಾಯುತ್ತಿದ್ದ ಹರಿಯಾಣ ರಾಜ್ಯದ HR 67 - 4076ನೇ ನೊಂದಣಿ ಸಂಖ್ಯೆ ಈಚರ್ ಲಾರಿಯ ಹಿಂಬದಿ ಕ್ಯಾರಿಯರ್ ನಲ್ಲಿ ಸಹ ಚಾಲಕ ಅಶೋಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈತನು ಯಾವುದೋ ಕಾಯಿಲೆಯಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುವ ಬಗ್ಗೆ ಸಂಶಯವಿರುತ್ತದೆ. ಈ ಕುರಿತು ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುವುದಾಗಿ ನೀಡಿದ ಲಿಖಿತ ಪಿರ್ಯಾದಿನ ಮೇರೆಗೆ ಠಾಣೆಯಲ್ಲಿ ಠಾಣಾ ಯು.ಡಿ ಆರ್ ಪ್ರಕರಣ ದಾಖಲು ಮಾಡಿ ತನಿಖೆಯನ್ನು ಕೈಗೊಳ್ಳಲಾಗಿತ್ತು. ತನಿಖಾ ಕಾಲದಲ್ಲಿ ಮತ್ತು ವೈದ್ಯಾಧಿಕಾರಿಯವರ ಅಭಿಪ್ರಾಯ ವರದಿಯಿಂದ ವಾಹನದ ಚಾಲಕನಾದ ರೋತಾಸನು  ಸಹ ಚಾಲಕ ಅಶೋಕನನ್ನು ಕೊಲೆ ಮಾಡಿ ಓಡಿ ಹೋಗಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಠಾಣೆಯಲ್ಲಿ ಈಗಾಗಲೇ ದಾಖಲಾದ ಯು.ಡಿ ಆರ್ ಪ್ರಕರಣವನ್ನು ಪರಿವರ್ತಿಸಿ ಕೊಲೆ ಪ್ರಕರಣ ದಾಖಲಿಸಿರುವುದಾಗಿದೆ.
 
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಯನ್ ರಾವ್ ರವರಿಗೆ LAXMI GOLD KHAZANA Pvt Ltd,  M D,ಯವರಾದ ನಂಜುಂಡಿ ಎಂಬವರು ಬಂಗಾರದ ಆಭರಣದ ವ್ಯವಹಾರದಲ್ಲಿ ರೂಪಾಯಿ 14,00,00,000/-ವನ್ನು ಪಿರ್ಯಾದಿಯವರಿಗೆ ಕೊಡದೇ ಮೋಸ ಮಾಡಿದ್ದು, ದಿನಾಂಕ 13-03-2015 ರಂದು ಸಮಯ ಬೆಳಿಗ್ಗೆ ಸುಮಾರು 11-00 ಗಂಟೆಗೆ ಪಿರ್ಯಾದಿಯವರು ಬೆಂದೂರ್ ವೆಲ್ ಸುಮನ್ ರೆಸಿಡೆನ್ಸಿ ಬಳಿ ಇರುವಾಗ LAXMI GOLD KHAZANA Pvt Ltd,  M D,ಯವರಾದ ನಂಜುಂಡಿ ರವರು ಮೊಬೈಲ್ ದೂರವಾಣಿಯಿಂದ ಪಿರ್ಯಾದಿದಾರರ ಮೊಬೈಲ್ ಪೋನಿಗೆ ಕರೆ ಮಾಡಿ ಜೀವ ಬೆದರಿಕೆಯನ್ನು ನೀಡಿ  ಕಿರುಕುಳ ನೀಡುತ್ತಿರುವುದಾಗಿದೆ.
 
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-03-2015 ರಂದು ಸಮಯ ಸುಮಾರು ರಾತ್ರಿ 8.10 ಗಂಟೆಗೆ ಪಿರ್ಯಾದುದಾರರಾದ ಶ್ರೀ ಐವನ್ ಸಂತೋಷ್ ರವರು ಕಂಕನಾಡಿ ಸರ್ಕಲ್ ಬಳಿಯಿರುವ ಶಾಲೆ ಎದರು ರಸ್ತೆಯಲ್ಲಿ ರಸ್ತೆ ದಾಟುತ್ತಿರುವಾಗ ಕಂಕನಾಡಿ ಸರ್ಕಲ್ ಕಡೆಯಿಂದ ಮೋಟಾರ ಸೈಕಲ್ ನಂಬ್ರ ಕೆ. 19-ಇಬಿ-3259 ನೇದನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು  ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯದುದಾರರು ಕಾಂಕ್ರೀಟ ರಸ್ತೆಗೆ ಬಿದ್ದು ಹಣೆಯ ಎಡಭಾಗಕ್ಕೆ ಹಾಗೂ ಮೊಗಿಗೆ, ಎಡ ಭುಜಕ್ಕೆ ಗುದ್ದಿದತಂಹ ನೋವು ಉಂಟಾಗಿ  ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ರುತ್ತಾರೆ. ಆರೋಪಿ ಮೋಟರ್ ಸೈಕಲ್ ಸವಾರ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೆ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡದೆ ವಾಹನ ಸಮೇತ ಪರಾರಿಯಾಗಿರುತ್ತಾರೆ.
 
6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-03-2015 ರಂದು ಸಮಯ ಸುಮಾರು ಸಂಚೆ 6.00 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ರೂಪಾ ರೊಡ್ರಿಗಸ್ ರವರು  KA-19-Z-3176 ನೇದಲ್ಲಿ ಚಾಲಕರಾಗಿ ಬಲ್ಮಠ ಕಡೆಯಿಂದು ಬೆಂದೂರವೆಲ್ ಕಡೆಗೆ ಹೋಗುವರೇ ಬೆಂದೂರವೆಲ್ ಸರ್ಕಲ್ ಬಳಿ ಪಿರ್ಯಾದುದಾರರ ಹಿಂದುಗಡೆಯಿಂದ ಅಂದರೆ ಬಲ್ಮಠ ಕಡೆಯಿಂದ  ಬಸ್ಸು ನಂಬ್ರ KA19-A-8754 ನೇದನ್ನು ಅದರ ಚಾಲಕ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು  ಪಿರ್ಯಾದುದಾರರು ಚಲಾಯಿಸುತ್ತಿದ್ದ ಕಾರಿನ ಬಲಭಾಗದ ಹಿಂದಿನ ಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಬಲಭಾಗದ ಹಿಂದಿನ ಇಂಡಿಕೇಟರ್, ಬಂಪರ್ ಇತ್ಯಾದಿ  ಜಖಂ ಆಗಿರುತ್ತದೆ.ಈ ಅಪಘಾತದಿಂದ ಯಾರಿಗೂ ಗಾಯಗಳಾಗಿರುವುದಿಲ್ಲ.
 
7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13/03/2015 ರಂದು ಸಮಯ ಸುಮಾರು 18:00 ಗಂಟೆಗೆ ಒರ್ವ ಬೈಕ್ ಸವಾರನು ತನ್ನ ಬಾಬ್ತು ಬೈಕ ನಲ್ಲಿ ಇನ್ನಿಬ್ಬರು ಸಹಸವಾರರನ್ನು ಕುಳ್ಳಿರಿಸಿಕೊಂಡು ಬಲ್ಮಠ ಕಡೆಯಿಂದ ಬೆಂದೂರುವೆಲ್ ಕಡೆಗೆ ಏಕಮುಖ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದು ಸಮವಸ್ತೃದಲ್ಲಿ ಕರ್ತವ್ಯದಲ್ಲಿದ್ದ ಫಿರ್ಯಾದುದಾರರಾದ ಶ್ರೀ ಪುಟ್ಟರಾಮ ರವರು ನಿಲ್ಲಸಲು ಸೂಚಿಸಿದ್ದು ಸದ್ರಿ ಬೈಕಿನ ಸವಾರನು ಚಾಲಕನು ನಿಲ್ಲಿಸದೆ ಹೋಗಿದ್ದು ನಂತರ ನಾನು ಕರಾವಳಿ ವೃತ್ತದಲ್ಲಿರುವ ಸಿಬ್ಬಂದಿಗೆ ಹೇಳಿ ನಂತರ ನಿಲ್ಲಿಸಿ ವಿಚಾರಿಸಿದಾಗ ಸದ್ರಿ ಬೈಕ್ ಚಾಲಕನಿಗೆ ಚಾಲನಾ ಅನುಜ್ಣಾ ಪತ್ರ ಇಲ್ಲವೆಂದು ತಿಳಿಯಿತು ಸ್ಕೂಟರ್ ಹಾಗೂ ಚಾಲಕನ್ನು ಠಾಣೆಗೆ ಹಾಜರು ಪಡಿಸಿರುವುದಾಗಿದೆ.
 
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರ ಹುಡುಗಿಯು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಆರೋಪಿ ಅನಂತ್ ಕಾಮತ್ ಎಂಬಾತನು ಪಿರ್ಯಾದಿದಾರರನ್ನು ಪೀತಿಸುವುದಾಗಿ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ, ವಂಚಿಸುವ ಇರಾದೆಯಿಂದ ಮಂಗಳೂರು ತಾಲೂಕು ಮುಳೂರು ಗ್ರಾಮದ ಗುರುಪುರ ಎಂಬಲ್ಲಿರುವ ತನ್ನ ವಾಸದ ಮನೆಗೆ ಕರೆದುಕೊಂಡು ಬಂದವನು ದಿನಾಂಕ: 03/03/2015 ರಂದು ರಾತ್ರಿ ಮತ್ತು ದಿನಾಂಕ: 04/03/2015 ರಿಂದ 07/03/2015 ರ ವರೆಗೆ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಉಪಯೋಗಿಸಿಕೊಂಡಿದ್ದಲ್ಲದೇ, ಪಿರ್ಯಾದಿದಾರರು ತನ್ನನ್ನು ಮದುವೆಯಾಗುವಂತೆ ಕೇಳಿದಾಗ, ಕೈಯಿಂದ ಹೊಡೆದು ಮನೆಯಿಂದ ಹೊರಗೆ ಹಾಕಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವ ಭಯದ ಬೆದರಿಕೆ ಒಡ್ಡಿರುತ್ತಾನೆ.
 
9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:13-03-205 ರಂದು 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಂಜುನಾಥ್ ರವರು ರಾಹೆ.66 ನ್ನು ಸುರತ್ಕಲ್  ಅಗರಿ ಶೋರೂಮ್ ನ ಎದುರು  ಪೂರ್ವದ ಕಡೆಯಿಂದ ಪಶ್ಚಿಮದ ಕಡೆಗೆ  ದಾಟುತ್ತಿದ್ದಾಗ, ಸುರತ್ಕಲ್ ಜಂಕ್ಷನ್ ಕಡೆಯಿಂದ ಮಂಗಳೂರು ಕಡೆಗೆ ಕೆಎ.19.ಎಂ.ಬಿ.7521 ನೇ ನಂಬ್ರದ ಕಾರನ್ನು ಅದರ ಚಾಲಕಿ ವೀಡಾ ಪಿರೇರಾರವರು ನಿರ್ಲಕ್ಷ್ಯತನ  ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ  ಡಿಕ್ಕಿ ಪಡಿಸಿದ ಪರಿಣಾಮ, ಪಿರ್ಯಾದಿದಾರರ ಬಲಗಾಲಿಗೆ ಗುದ್ದಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಪದ್ಮಾವತಿ ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ.
 
10.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13-03-2015 ರಂದು 15-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸಂತೋಷ್ ಎಂಬವರುಕೆಎ.20.ಪಿ. 4559 ನೇ ಕಾರನ್ನು ಮಂಗಳೂರಿನಿಂದ ಪಡುಬಿದ್ರೆಗೆ ರಾಹೆ.66ರಲ್ಲಿ ಚಲಾಯಿಸುತ್ತಾ ಮುಕ್ಕ ಜಂಕ್ಷನ್ ಬಳಿ ತಲುಪಿದಾಗ, ಮುಂದಿನಿಂದ ಹೋಗುತ್ತಿದ್ದ ಕೆಎ.20.ಎಂ.ಡಿ.7488ನೇ ಕಾರನ್ನು ಅದರ ಚಾಲಕ ಸದಾನಂದ ಎಂಬವರು ಯಾವುದೇ ಸೂಚನೇ ನೀಡದೇ ಒಮ್ಮೆಲೇ ನಿಲ್ಲಿಸಿದ ಪರಿಣಾಮ, ಪಿರ್ಯಾದಿದಾರರಿಗೆ ಕಾರಿನ ಚಾಲನೆಯ ನಿಯಂತ್ರಣ ತಪ್ಪಿ, ಸದ್ರಿ ಕಾರಿಗೆ ಡಿಕ್ಕಿಯಾದ ಪರಿಣಾಮ, ಪಿರ್ಯಾದಿದಾರರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣಿ ಎಂಬವರ ಬಲಕೈಗೆ ಗುದ್ದಿದ ಗಾಯವಾಯಿತಲ್ಲದೇ, ಎರಡೂ ಕಾಲು ಜಖಂಗೊಂಡಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎಸ್.ಸಿ.ಎಸ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
 
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 13-3-2015 ರಂದು ಮದ್ಯಾಹ್ನದ ನಂತರ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಮಾಡೂರು ಶಿವಾಜಿನಗರ ಜುಮ್ಮಾ ಮಸೀದಿ ಹತ್ತಿರದ ಒಂದನೇ ಪ್ಲಾಟ್ವಾಸಿಯ ವರ್ಷದ ಮಗಳು ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಮಂಗಳೂರು ಒನ್ಶಾಲೆಯಲ್ಲಿ ನರ್ಸರಿ ವಿದ್ಯಾಬ್ಯಾಸಕ್ಕೆ ಹೋಗುತ್ತಿದ್ದು, ಸದ್ರಿ ಬಾಲಕಿಯನ್ನು ಬೆಳಿಗ್ಗೆ ಶಾಲಾ ವಾಹನದ ಚಾಲಕ ಇಮ್ರಾನ್ಕರೆದುಕೊಂಡು ಹೋಗುತ್ತಿದ್ದು, ಮದ್ಯಾಹ್ನದ ಸಮಯದಲ್ಲಿ ಸದ್ರಿ ಶಾಲೆಯ ಓಮಿನಿ ವ್ಯಾನ್ನ ಚಾಲಕ ಮಧು ಎಂಬವರು ವಾಪಾಸು ಕರೆದುಕೊಂಡು ಬರುವುದು ವಾಡಿಕೆಯಾಗಿದ್ದು, ಅದರಂತೆ ದಿನಾಂಕ. 13-3-2015 ರಂದು ಎಂದಿನಂತೆ ಸದ್ರಿ ಬಾಲಕಿ ಶಾಲೆಗೆ ಹೋಗಿ ವಾಪಾಸು ಶಾಲಾ ವಾಹನದಲ್ಲಿ ಮನೆಗೆ ಬಂದಿದ್ದು, ಮನೆಗೆ ಬಂದಾಗ ಸದ್ರಿ ಬಾಲಕಿ ಮನೆಯಲ್ಲಿ ಜೋರಾಗಿ ಕೂಗಿದ್ದು ಮಗುವಿನ ತಾಯಿ ವಿಚಾರಿಸಿದಾಗ ಒಂದೊಂದು ರೀತಿ ತಿಳಿಸಿ ನಂತರ ಶಾಲಾ ವಾಹನದ ಮಧು ಕಿರುಕುಳ ನೀಡಿದ ಬಗ್ಗೆ ತಿಳಿಸಿರುವುದಾಗಿದೆ.
 
12.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಕನಯಲಾಲ್ ಗುಪ್ತಾ ಎಂಬವರು ಹಂಪನಕಟ್ಟೆಯಲ್ಲಿ 5 ವರ್ಷಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಿ ಬಟ್ಟೆ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 13-03-2015 ರಂದು ಸಂಜೆ ಸುಮಾರು 7-30 ಗಂಟೆಗೆ ಫಿರ್ಯಾದಿದಾರರ ಅಂಗಡಿ ಎದುರು ಶೂ/ಚಪ್ಪಲ್ ಕೌಂಟರ್ ಇಟ್ಟಿದ್ದ ಇರ್ಫಾನ್ ಎಂಬಾತನು ಪಕ್ಕದ ಮೊಬೈಲ್ ಅಂಗಡಿಯ ಪಾಲುದಾರ ಹಾಗೂ ಇತರ 3-4 ಜನರನ್ನು ಕರೆದುಕೊಂಡು ಫಿರ್ಯಾದಿದಾರರ ಅಂಗಡಿಯ ಒಳಪ್ರವೇಶಿಸಿ ಕ್ಯಾಶ್ ಟೇಬಲಿನಲ್ಲಿದ್ದ ತೊಷಿಬಾ ಲ್ಯಾಪ್ ಟಾಪನ್ನು ಬಲಾತ್ಕಾರವಾಗಿ ಕಿತ್ತು ಫುಟ್ ಪಾತಿಗೆ ಎಸೆದು ಚೂರಿಯಿಂದ ಫಿರ್ಯಾದಿದಾರರ ಬಲ ಕೈಗೆ ಗಾಯಗೊಳಿಸಿ ಕಬ್ಬಿಣದ ರಾಡಿನಿಂದ ಮೂಗಿಗೆ , ಮೈ ಕೈಗೆ ಹೊಡೆದು  ಕಿಸೆಯಲ್ಲಿದ್ದ ರೂ 2,700 ಹಾಗೂ ಕ್ಯಾಶ್ ಕೌಂಟರಿನಲ್ಲಿದ್ದ ರೂ 25800/- ನ್ನು ಕಸಿದುಕೊಂಡು ಹೋಗಿರುತ್ತಾರೆಫಿರ್ಯಾದಿದಾರರಿಗೂ ಹಾಗೂ ಇರ್ಫಾನಿಗೂ ಬಾಡಿಗೆ ವಿಚಾರದಲ್ಲಿ ಮಾತುಕತೆಯಾಗಿದ್ದು, ಈ ದ್ವೇಷದಲ್ಲಿ ಆರೋಪಿತರು ಫಿರ್ಯಾದಿದಾರರಿಗೆ ಹಲ್ಲೆ ಮಾಡಿ ಅಂಗಡಿಯ ಸೊತ್ತುಗಳನ್ನು ನಾಶ ಮಾಡಿ ಒಟ್ಟು ರೂ 28,500/- ನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿದೆ.
 
13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.02.2015 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿದಾರ ಗೃಹಿಣಿಯು ಮನೆಯಲ್ಲಿದ್ದ ಸಮಯ ಅನಿತಾ ಮತ್ತು ಅಶ್ವಿನಿ ಎಂಬ ಹೆಂಗಸರು ಮನೆಯ ಹೊರೆಗೆ ನಿಂತು ಬಾಗಿಲು ತೆಗೆಯುವಂತೆ ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ  ಬೈದು ಆಗ ಆ ಹೆಂಗಸರ ಜೊತೆ ಬಂದಿದ್ದ ಫಾರೂಕ್‌, ರೋಷನ್ಹಾಗೂ  ಮತ್ತೊಬ್ಬ ಕಿಟಕಿಯ ಬಾಗಿಲು ಬಡಿದು ನಂತರ ಮನೆಯ ಎದುರಿನ ಬಾಗಿಲಿನ ಮೂಲಕ ಒಳಗೆ ಬಂದು ಅನಿತಾ ಹಾಗೂ ಅಶ್ವಿನಿ ಫಿರ್ಯಾದಿದಾರರನ್ನು ಹಿಡಿದಿಟ್ಟು, ಆಗ ಅನಿತಾ ಎಂಬುವವಳು  ಫಿರ್ಯಾದಿದಾರರನ್ನು ಅಕ್ರಮ ಎಸಗುವಂತೆ ತಿಳಿಸಿದ್ದು ಫಾರೂಕ್ ರೋಷನ್ಹಾಗೂ ಮತ್ತೊಬ್ಬ ವ್ಯಕ್ತಿ ಫಿರ್ಯಾದಿದಾರರನ್ನು ಅಕ್ರಮ ಎಸಗಿರುತ್ತಾರೆ. ಫಿರ್ಯಾದಿದಾರರು ಲೇಡಿಗೋಷನ್ಆಸ್ಪತ್ರೆಯಲ್ಲಿ ಸುಮಾರು 7 ದಿನಗಳ ಕಾಲ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.
 
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.03.2015 ರಂದು ಸಮಯ ಸುಮಾರು ಸಂಜೆ 6.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸುಧಾಕರ ಪಿ. ರವರ ತಂದೆಯವರಾದ ಪಿ.ವೆಂಕಟ ಸುಬ್ಬರಾವ್ಎಂಬುವವರು ಮನೆಯಿಂದ ಪಾಲ್ಗಟ್ಗೆ ಹೋಗುತ್ತೇನೆಂದು ತಿಳಿಸಿದ್ದು ಈವರೆಗೆ ಅವರು ಮನೆಗೆ ಬಾರದೇ ಫಿರ್ಯಾದಿದಾರರ ಸ್ವಂತ ಮನೆ ಮೈಸೂರಿಗೂ ಹೋಗದೇ ಎಲ್ಲೋ  ಕಾಣೆಯಾಗಿರುತ್ತಾರೆ. ಕಾಣೆಯಾದ  ಗಂಡಸಿನ ಚಹರೆ ವಿವರ: ಹೆಸರು: ಪಿ. ವೆಂಕಟ ಸುಬ್ಬರಾವ್ (ಪ್ರಾಯ 47), ಮೈಕಟ್ಟು: ಸಾದರಣ ಸಪೂರ ಶರೀರ ಬಣ್ಣ: ಗೋದಿ ಮೈ ಬಣ್ಣ, ಭಾಷೆ: ಕನ್ನಡ, ತೆಲಗು, ಮಲಿಯಾಳಂ, ತಮಿಳು ಬಟ್ಟೆ: ಬೂದು ಬಣ್ಣದ ಉದ್ದ ತೋಳಿನ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುವುದಾಗಿದೆ.
 
15.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಿಗೂ ಹಾಗೂ 1ನೇ ಆರೋಪಿ ಮೊಹಮ್ಮದ್ ಫಾರೂಕ್ ಎಂಬವರಿಗೂ ದಿನಾಂಕ: 01.02.2015 ರಂದು ಸಂಪ್ರದಾಯ ರೀತಿಯ ಮದುವೆಯಾಗಿದ್ದು, ಮದುವೆಯಾದ ಕೆಲವು ದಿನಗಳ ನಂತರ ಪಿರ್ಯಾದುದಾರರಿಗೆ ಅವರ ಗಂಡ, ಅತ್ತೆ, ಮಾವ ಮತ್ತು ನಾದಿನಿ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ನೀಡಿದ್ದಲ್ಲದೇ ದಿನಾಂಕ: 01.03.2015 ರಂದು ಆರೋಪಿಗಳು ಪಿರ್ಯಾದುದಾರರ ಚಿನ್ನವನ್ನು ತೆಗೆದುಕೊಂಡು ಅದೇ ದಿನ ಮಧ್ಯಾಹ್ನ 2:30 ಗಂಟೆಗೆ ಎಲ್ಲಾ ಆರೋಪಿಗಳು ಪಿರ್ಯಾದುದಾರರಿಗೆ ಹೊಡೆದು ತವರು ಮನೆಯಿಂದ ಚಿನ್ನ ತರುವಂತೆ ಕಿರುಕುಳ ನೀಡಿರುತ್ತಾರೆ.
 

No comments:

Post a Comment