Tuesday, March 31, 2015

Daily Crime Reports : 31-03-2015

ದೈನಂದಿನ ಅಪರಾದ ವರದಿ.
ದಿನಾಂಕ 31.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
1
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
3






















  




1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಅರುಣ್ ರವರು ರಿಕ್ಷಾ ಚಾಲಕರಾಗಿದ್ದು, ದಿನಾಂಕ 30-03-2015 ರಂದು 23:00 ಗಂಟೆಗೆ ಮನೆಯಲ್ಲಿ ಮಲಗಿದ್ದ ಸಮಯ ಪಿರ್ಯಾಧಿದಾರರ ಮನೆಯ ಸಮೀಪ ಇರುವ ಪಿರ್ಯಾಧಿದಾರರ ಅಕ್ಕ ವಿದ್ಯಾ ರವರ ಮನೆಯಿಂದ ರಾತ್ರಿ ಸುಮಾರು 23:45 ಗಂಟೆಗೆ ಜೋರಾಗಿ ಬೊಬ್ಬೆ ಕೇಳಿ ಪಿರ್ಯಾಧಿದಾರರು ಮನೆಯಿಂದ ಹೊರಗಡೆ ಬಂದು ನೋಡಿದಾಗ ಪಿರ್ಯಾಧಿದಾರರಿಗೆ ಗುರುತು ಪರಿಚಯವಿರುವ ಜಗ್ಗ ಯಾನೆ ತಲವಾರ ಜಗ್ಗ, ಮಹೇಶ್, ಕೀರ್ತನ್, ದೀಕ್ಷಿತ್, ರಾಜೇಶ್ ಹಾಗೂ ಮೋಹಿತ್ ಎಂಬವರು ಅಕ್ರಮ ಕೂಟ ಸೇರಿ ಮನೆ ಮುಂದೆ ಇದ್ದ ಪ್ಲಾಸ್ಟಿಕ್ ಬಕೆಟ್ಗಳನ್ನು ತಲವಾರು, ಕಬ್ಬಿಣದ ರಾಡ್ ಹಾಗೂ ಮರದ ದೊಣ್ಣೆಯಿಂದ ಹುಡಿ ಮಾಡಿ ಬಳಿಕ ಜಗ್ಗ ಯಾನೆ ತಲವಾರ ಜಗ್ಗ, ಮಹೇಶ್ ಹಾಗೂ ಕೀರ್ತನ್ ಎಂಬವರು ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿಯ ಅಕ್ಕನವರಲ್ಲಿ ಅಭಿ ಎಲ್ಲಿ? ಆತನನ್ನು ಕೊಲ್ಲದೆ ಬಿಡುವುವುದಿಲ್ಲ ಎಂದು ಬೆದರಿಸಿ ಜಗ್ಗನು ಕೈಯಲ್ಲಿದ್ದ ತಲವಾರಿನಿಂದ ಮನೆಯ ಕಿಟಕಿ ಗ್ಲಾಸಿಗೆ ಹೊಡೆದು ಜಖಂಗೊಳಿಸಿದಾಗ, ಪಿರ್ಯಾಧಿದಾರರು ಈ ಬಗ್ಗೆ ವಿಚಾರಿಸಿದಾಗ "ನೀನು ಕೇಳಲು ಯಾರು"? ಎಂದು ಅವಾಚ್ಯ ಶಬ್ದಗಳಿಂದ ಬೈದು ಜಗ್ಗನು ತಲವಾರಿನಿಂದ ಕಡಿಯಲು ಮುಂದಾದಾಗ ಪಿರ್ಯಾಧಿದಾರರು ತಪ್ಪಿಸಿದ ಪರಿಣಾಮ ಪಿರ್ಯಾಧಿದಾರರ ಬಲಕೈಯ ಅಂಗೈಗೆ ತಲವಾರಿನ ಏಟು ತಾಗಿ ರಕ್ತಗಾಯವಾಗಿರುತ್ತದೆ. ಅಲ್ಲದೆ ಜಗ್ಗನೊಂದಿಗೆ ಇದ್ದ ಇತರರು ಕೂಡಾ ಮನೆಯ ಕಿಟಕಿ ಗಾಜುಗಳಿಗೆ ಕಬ್ಬಿಣದ ರಾಡ್ ಹಾಗೂ ಮರದ ದೊಣ್ಣೆಯಿಂದ ಹೊಡೆದು ಸುಮಾರು ರೂ 15000/- ರಷ್ಟು ನಷ್ಟ ಉಂಟು ಮಾಡಿದಲ್ಲದೆ ಜಗ್ಗ ಯಾನೆ ತಲವಾರ ಜಗ್ಗನು ಇತರ ಸಹಚರರೊಂದಿಗೆ ಅಕ್ರಮ ಕೂಟ ಸೇರಿ ಮಾರಕ ಆಯುಧಗಳೊಂದಿಗೆ ಬಂದು ಪಿರ್ಯಾಧಿಯ ಅಕ್ಕನ ಮಗನಾದ ಅಭಿ ಯಾನೆ ಅಭಿಲಾಷನನ್ನು ಕೊಲ್ಲುವ ಉದ್ದೇಶದಿಂದ ಮನೆಗೆ ಬಂದು ಕೊಲೆಗೆ ಯತ್ನಿಸಿರುವುದಾಗಿದೆ. ಈ ಹಿಂದೆ ಜಗ್ಗನ ಮಗ ವರುಣನನ್ನು ಅಭಿ ಮತ್ತು ಇತರರು ಸೇರಿಕೊಂಡು ಕೊಲೆ ಮಾಡಿದ್ದು ಇದೇ ದ್ವೇಷವನ್ನು ಇಟ್ಟುಕೊಂಡು ಜಗ್ಗ ಮತ್ತು ಆತನ ಸಹಚರರು ಸೇರಿಕೊಂಡು ಈ ಕೃತ್ಯ ಮಾಡಿರುವುದಾಗಿದೆ.

2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು  ಬೊಂದೆಲ್ ಕೃಷ್ಣನಗರ ನಿವಾಸಿಯಾಗಿರುವ ಶ್ರೀ ಗೋಪಿನಾಥ ಗಟ್ಟಿ ರವರಿಗೆ ದಿನಾಂಕ 28-03-2015 ರಂದು 7-00 ಗಂಟೆಯಿಂದ 7-30 ಗಂಟೆಯ ಮಧ್ಯೆ ಮೊಬೈಲ್ ದೂರವಾಣಿಯಿಂದ ಪಿರ್ಯಾದುದಾರರ ಮೊಬೈಲ್ ದೂರವಾಣಿಗೆ ಬೆದರಿಕೆ ಸಂದೇಶಗಳು ಬಂದಿರುತ್ತದೆ, ನಂತರ ಅದೇ ದಿನ ಅದೇ ನಂಬರಿನಿಂದ 9-00 ಗಂಟೆಯಿಂದ 9-30 ಗಂಟೆಯ ಮಧ್ಯೆ ಇಂಗ್ಲೀಷ್ ಅಕ್ಷರದಲ್ಲಿ ಮೆಸೇಜ್ ಮಾಡಿ ಬೆದರಿಕೆ ಕರೆ ಮಾಡಿರುವುದಾಗಿದೆ.

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-03-2015 ರಂದು ಬೆಳಿಗ್ಗೆ ಸುಮಾರು 10-35 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹರೀಶ್ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-V-7652 ನೇದರಲ್ಲಿ ಸವಾರನಾಗಿ ಹೋಗುತ್ತಿರುವಾಗ ಬಂಟ್ವಾಳ ತಾಲೂಕು, ಫಜೀರು ಗ್ರಾಮದ ಇನ್ಫೋಸಿಸ್ ಗೇಟ್ ಬಳಿಯಲ್ಲಿ ಕಾರು KA-19-AA-8158ನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೇ ಬಲಕ್ಕೆ ತಿರುಗಿಸಿದಾಗ ಈ ಘಟನೆ ಸಂಭವಿಸಿದ್ದು, ಈ ಅಪಘಾತದಿಂದ ಮೋಟಾರ್ ಸೈಕಲ್ ಸವಾರನು ಬೈಕ್ ಸಮೇತ ರಸ್ತೆಗೆ ಬಿದ್ದು ಆತನ ಎಡ ಕೈಯ ಕೋಲು ಕೈಗೆ, ಉಂಗುರದ ಬೆರಳಿಗೆ ಗುದ್ದಿದ ರಕ್ತಗಾಯ, ಬಲಕಾಲಿನ ಕೋಲು ಕಾಲಿಗೆ  ತರಚಿದ ಗಾಯ ಹಾಗೂ ಕುತ್ತಿಗೆಯ ಬಲಭಾಗಕ್ಕೆ ಗುದ್ದಿದ ನೋವಾಗಿದ್ದು ಗಾಯಾಳು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ.

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-3-2015 ರಂದು ಪಿರ್ಯಾದಿದಾರರಾದ ಶ್ರೀ ದಿನೇಶ್ ಗೌಡ ರವರು ಕೆಲಸದ ನಿಮ್ಮಿತ  ಮೂಡಬಿದ್ರೆ ಪೇಟೆಗೆ ಬಂದು ವಾಪಾಸು  ಮನೆ ಕಡೆಗೆ ಹೋಗುವರೇ ಸ್ವರಾಜ್ಯ ಮೈದಾನದ ಬಳಿ ಬಸ್ಸ್ ಕಾಯುತ್ತಿರುವ ಸಮಯ ಮದ್ಯಾಹ್ನ 12-00 ಗಂಟೆಯ ಸಮಯ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಒಂದು  ಬೈಕಿನ ಸವಾರ  ಅತೀ ವೇಗ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿ ಕೊಂಡು ಬಂದು ಸ್ವರಾಜ್ಯ ಮೈದಾನದಿಂದ ಸ್ವಲ್ಪ ಕೆಳಗೆ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ವಿದ್ಯುತ್ಕಂಬಕ್ಕೆ ಡಿಕ್ಕಿ ಹೊಡೆದನು ಆ ಸಮಯ  ಪಿರ್ಯಾದಿಯವರು ಹಾಗೂ ಇತರರು ಅಲ್ಲಿಗೆ ಹೋಗಿ ನೋಡಿದಾಗ ಬೈಕ್ ಸವಾರ ಪರಿಚಯದ ಗಣೇಶ್ ಗೌಡ ಎಂಬವನಾಗಿದ್ದು ಆತನ ತಲೆಗೆ ಗಂಬೀರ ರಕ್ತಗಾಯವಾಗಿದ್ದು ಅಲ್ಲದೇ ಬಲ ಕಾಲಿನ ಪಾದದಲ್ಲಿ ರಕ್ತ ಗಾಯವಾಗಿರುತ್ತದೆ. ಕೂಡಲೇ ಆತನನ್ನು  ಅಲ್ಲಿ ಸೇರಿದ ಜನರು ಅರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಅಸ್ಪತ್ರೆಗೆ ಕರೆದು ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ  ಚಿಕಿತ್ಸೆಯ ಬಗ್ಗೆ 108 ಅಂಬ್ಯೂಲೆನ್ಸ್ ನಲ್ಲಿ ಮಂಗಳೂರು ಜ್ಯೋತಿ ಕೆ.ಎಂ.ಸಿ ಅಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲು ಮಾಡಲಾಗಿದೆ. ಈ ಅಪಘಾತವು ಬೈಕ್ಸವಾರ ಗಣೇಶ್ತನ್ನ ಬಾಬ್ತು  KA 19 EL 9175 ನೇ ದನ್ನು ಅತೀವೇಗ ಹಾಗೂ ನಿರ್ಲಕ್ಷತೆಯ ಚಾಲನೆಯೇ ಕಾರಣವಾಗಿರುತ್ತದೆ.

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಜೀಜ್ ನಸೀಫ್ ರವರು ಇತ್ತೀಚಿಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ, ಗಂಜಿಮಠಎಂಬಲ್ಲಿರುವ ಅಬ್ದುಲ್ ಕಾದರ್ ಎಂಬವರ ಮನೆಯನ್ನು ಬಾಡಿಗೆಗೆ ಪಡೆದುಕೂಂಡಿದ್ದು ಅದನ್ನು ದಿನಾಂಕ 30-03-2015 ರಂದು ಪಿರ್ಯಾದಿದಾರರ ಹೆಂಡತಿ ಶ್ರೀ ಮತಿ ಸಮೀನಾ ಅಜೀಜ್ ಎಂಬವರು ಸ್ವಚ್ಚ  ಮಾಡಿ ಬೆಳಗ್ಗೆ  11.00 ಗಂಟೆಗೆ  ಕಸವನ್ನು ಮನೆಯ ಪಕ್ಕದಲ್ಲಿರುವ  ಏರ್ಟೆಲ್  ಕಂಪನಿಯ ಟವರಿನ ಸಮೀಪ ಹಾಕಿ ಬೆಂಕಿ  ಹಚ್ಚಲೆಂದು  ಹೋದಾಗ ಅಲ್ಲಿ ಒಂದು ಹಳದಿ ಬಣ್ಣದ ಹಳೇಯದಾದ ಪ್ಲಾಸ್ಟಿಕ್  ತೊಟ್ಟೆಯಲ್ಲಿ  7-8 ಬಾಟಲಿಗಳನ್ನು  ಮತ್ತು ಎರಡು ತಲವಾರುಗಳನ್ನು ಪ್ಲಾಸ್ಟಿಕ್  ತೊಟ್ಟೆಯಲ್ಲಿ ಸುತ್ತಿಟ್ಟಿರುವುದನ್ನು ಕಂಡು ಪಿರ್ಯಾದಿದಾರರಿಗೆ ವಿಚಾರ ತಿಳಿಸಿದ್ದು, ರಾತ್ರಿ ಮನೆಗೆ ಬಂದ ಪಿರ್ಯಾದಿದಾರರು ಅದನ್ನು ನೋಡಿ ಯಾರೋ ಕಿಡಿಗೇಡಿಗಳು ಎಲ್ಲೋ, ಯಾವೂದೋ ದುಷ್ಕೃತ್ಯವೆಸಗುವ ಉದ್ದೇಶದಿಂದ  ಅನುಮಾನಸ್ಪದ  ರೀತಿಯಲ್ಲಿ ಸ್ಫೋಟಕವಾಗಿ  ಬಳಸಲು ಪೆಟ್ರೂಲ್ ತುಂಬಿದ ಬಾಟಲಿಗಳನ್ನು ಮತ್ತು  ತಲವಾರುಗಳನ್ನು  ತಂದಿರಿಸಿರುವುದನ್ನು  ಕಂಡು ಠಾಣೆಗೆ  ದೂರು ನೀಡಿರುವುದಾಗಿದೆ.

6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-03-2015 ರಂದು ಲಾರಿ ನಂಬ್ರ ಎಪಿ-29-ಟಿಬಿ-5932 ನೇದನ್ನು ಅದರ ಚಾಲಕ ಎನ್ ಹೆಚ್ -66 ರಲ್ಲಿ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಯಿಂದ ಸುರತ್ಕಲ್ ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಸಂಜೆ 07.30 ಗಂಟೆಗೆ ಕುಳಾಯಿ ಸುನೀಲ್ ಬಾರ್ ನಿಂದ ಸ್ವಲ್ಪ ಮುಂದೆ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಢಿಕ್ಕಿಪಡಿಸಿದ ಪರಿಣಾಮ ಅವರ ತಲೆ ಕಾಲಿಗೆ ಗಂಭೀರ ತರಹದ ಗಾಯವಾಗಿ ಫಿರ್ಯಾದಿದಾರರು ಅವರನ್ನು ಸುರತ್ಕಲ್ ಪದ್ಮವತಿ ಅಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮ್ಯತಪಟ್ಟಿರುವುದಾಗಿದೆ.

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಭರತ್ ಕುಮಾರ್ ರವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 30-03-2015 ರಂದು ಪಿರ್ಯಾದಿದಾರರು ಮಂಗಳೂರು ನಗರದ ನೆಹರು  ಮೈದಾನದಲ್ಲಿ ದಿನಾಂಕ 29-03-2015 ರಂದು ನಡೆದಿದ್ದ ರಾಮೋತ್ಸವ ಕಾರ್ಯಕ್ರಮದ  ರಾವಣ ಸಂಹಾರದ   ಬಗ್ಗೆ ಅಲ್ಲಿ  ಬಿದಿದ್ದ ಸುಡು ಮದ್ದಿನ ತ್ಯಾಜ್ಯ ಹಾಗೂ  ಇತರ ಕಸಕಡ್ಡಿಗಳನ್ನು ಸ್ವಚ್ಚ  ಮಾಡುವ ಸಲುವಾಗಿ ಸಮಯ ಬೆಳಿಗ್ಗೆ 10-15  ಗಂಟೆಯ ವೇಳೆಗೆ ಸದ್ರಿ ಸ್ಥಳಕ್ಕೆ  ಬಂದಿದ್ದು, ಸದ್ರಿ ಸ್ಥಳದಲ್ಲಿ  ಕೆಲಸದ ಉಸ್ತುವಾರಿ  ಬಗ್ಗೆ  ಗುತ್ತಿಗೆ ಆಧಾರದಲ್ಲಿ ನೇಮಿಸಿದ್ದ ಶ್ರೀಮತಿ ಶಶಿಕಲಾ  ಹಾಗೂ  ಟೆಂಪೋ ಚಾಲಕ  ಸುನೀಲ್‌  ಎಂಬವರು   ಇದ್ದು,   ಸದ್ರಿ ಸ್ಥಳದಲ್ಲಿ   ಕ್ಲೀನಿಂಗ್ಕೆಲಸವನ್ನು ಮಾಡಿಸಿಕೊಂಡಿದ್ದಾಗ, ಸದ್ರಿ ಸ್ಥಳಕ್ಕೆ ಸಮಯ 10-30 ಗಂಟೆಯ ವೇಳೆಗೆ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ಪಾಂಡೇಶ್ವರ ಶಿವನಗರದ ವಾಸಿಯಾದ ಗಣೇಶ @ ಬಬ್ಬ  ಎಂಬಾತನು ಒಮ್ಮೆಲೇ ಪಿರ್ಯಾದಿದಾರರು ಹಾಗೂ ಇತರರು ಕೆಲಸ ಮಾಡಿಕೊಂಡಿದ್ದಲ್ಲಿಗೆ ಬಂದು, ಪಿರ್ಯಾದಿದಾರರನ್ನು  ಉದ್ದೇಶಿಸಿ "ಇ ಮಲ್ಲ ಇಂಜಿನಿಯಾರ, ನಿಕ್ಕ್  ಕೂಡಾ ಬೆಲೆಗ್ಅಸಿಸ್ಟೆಂಟ್ಜನ ಬೋಡಾ" ಎಂದು ಅವಾಚ್ಯವಾಗಿ ಬೈಯ್ದಿದ್ದು, ಆ ವೇಳೆಯಲ್ಲಿ ಆತನಲ್ಲಿ ಪಿರ್ಯಾದಿದಾರರು ಯಾಕೆ ವಿನಾ ಕಾರಣ ಇಲ್ಲಿ ಬಂದು ಜಗಳಕ್ಕಿಳಿಯುತ್ತಿದ್ದಿಯಾ ಎಂದು ಕೇಳಿದಾಗ, ಆತನು ಪಿರ್ಯಾದಿದಾರರ  ಕೆಲಸದ ಸುಪರ್ವೈಸರ್ಆದ ಶ್ರೀಮತಿ ಶಶಿಕಲಾ ಇವರನ್ನು ಉದ್ದೇಶಿಸಿ "ಈಲಾ ಮಲ್ಲಾ ಇಂಜಿನಿಯರಾ ? ಎಂಬುದಾಗಿ ಬೈದು ಈ ಮೂಲು ಬೇಲೆ ಮಲ್ಪೆರೆ ಬಲ್ಲಿಎಂಬುದಾಗಿ ಆಕೆಯನ್ನು ಗದರಿಸಿ, ವಾಪಾಸು ಪಿರ್ಯಾದಿದಾರರ ಬಳಿಗೆ ಬಂದು ಪಿರ್ಯಾದಿದಾರರ ಅಂಗಿಯ ಕಾಲರ್ಪಟ್ಟಿ ಹಿಡಿದು  ಕೈಯಿಂದ  ಎಡಕೆನ್ನೆಗೆ  ಹೊಡೆದು "ನಿನನ್ಜೀವ ಸಹಿತ ಬುಡ್ಪುಜಿಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿ, ನಂತರ  ಟೆಂಪೋ  ಡ್ರೈವರ್ಬಳಿಗೆ ಹೋಗಿಅವರನ್ನು ಉದ್ದೇಶಿಸಿ, "ಮರ್ಯಾದೆಡ್ಗಾಡಿನ್ದೆಪ್ಪು" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದುಟೆಂಪೋದ ಗೇರ್ಲಿವರ್ನ್ನು ಬೆಂಡ್ಮಾಡಿನಂತರ ಟೆಂಪೋದ ವಯರ್ನ್ನು ಕಿತ್ತು  ತೆಗೆದು  ಹಾಕಿದ್ದುಇದರಿಂದ ಅಂದಾಜು ರೂಪಾಯಿ 10,000/- ನಷ್ಟವುಂಟು ಮಾಡಿರುತ್ತಾರೆಪಿರ್ಯಾದುದಾರರು ನಿರ್ವಹಿಸಿಕೊಂಡಿದ್ದ ಸರಕಾರಿ ಕರ್ತವ್ಯಕ್ಕೆ ಆರೋಪಿ ಗಣೇಶ @ ಬಬ್ಬ ತೊಂದರೆ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಗೆ ಕೈಗಳಿಂದ ಹೊಡೆದು, ಪಿರ್ಯಾದಿದಾರರ ಜತೆಗಿದ್ದ  ಕೆಲಸಗಾರರಿಗೆ  ಅವಾಚ್ಯ ಶಬ್ದಗಳಿಂದ ಬೈದು, ತೊಂದರೆ ನೀಡಿರುವುದಾಗಿದೆ.

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಯೋಗೀಶ್ ಶೆಟ್ಟಿ ರವರು ಮಂಗಳೂರು  ವೆಲನ್ಸಿಯಾ ಜೆರೋಸಾ ಹೈಸ್ಕೂಲ್ ಬಳಿ ಇರುವ ಕುನಿಲ್ ನಲಪಾಡ್ ಪ್ಯಾಲೆಸ್ ನಲ್ಲಿ ವಾಚ್ ಮೆನ್ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 30-03-2015 ರಂದು 20-45 ಗಂಟೆಗೆ ಪ್ಲಾಟಿನ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕರ್ತವ್ಯದಲ್ಲಿ ತಿರುಗಾಡುತ್ತಿದ್ದ ಸಮಯ ಆರೋಪಿಗಳಾದ ಹಫೀಝ್, ಜಲಾಲ್, ಜಸಿಂತ್ ಹಾಗೂ ಇನ್ನೋರ್ವ ಯುವಕ ಬಂದು, ಫಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ "ನೀನು ಫ್ಲಾಟಿನ ಮಾಲಕನ, ಫ್ಲಾಟನಲ್ಲಿ ರಾತ್ರಿ ಸಮಯ ತಿರುಗಾಡಬೇಡಿ ಎಂದು ಹೇಳಲು ನೀನು ಯಾರು? " ಎಂದು ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ಹಫೀಝ್ ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಫಿರ್ಯಾದುದಾರರ ಬಲ ಹಾಗೂ ಎಡ ಹಣೆಯ ಭಾಗಕ್ಕೆ ಎಡ ಕೈಯ ಮೊಣಗಂಟಿನ ಭಾಗಕ್ಕೆ, ಎಡ ತೊಡೆಯ ಭಾಗಕ್ಕೆ ಯದ್ವ ತದ್ವಾ ಹಲ್ಲೆ ಮಾಡಿರುತ್ತಾರೆ. "ಇನ್ನೊಮ್ಮೆ ನಮ್ಮ ವಿಷಯಕ್ಕೆ ಬಂದರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ" ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಆರೋಪಿಗಳು 4 ಜನರೂ ತಡ ರಾತ್ರಿ ಸಮಯದಲ್ಲಿ ಫ್ಲಾಟಿನ ವಾಹನ ಪಾರ್ಕಿಂಗ್ ಸ್ಥಳದಲ್ಲಿ ವಿನಾ ಕಾರಣ ತಿರುಗಾಡುತ್ತಿವರನ್ನು ತಿರುಗಾಡಬೇಡಿ ಎಂದು ಫಿರ್ಯಾದುದಾರರು ಹೇಳಿದ ದ್ವೇಷದಿಂದ ಆರೋಪಿಗಳು ಈ ಕೃತ್ಯ ಮಾಡಿರುವುದಾಗಿದೆ. ಈ ಬಗ್ಗೆ ಫಿರ್ಯಾದುದಾರರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 30-3-2015 ರಂದು ಫಿರ್ಯಾದಿದಾರರಾದ ಶ್ರೀ ಮೇಘರಾಜ್ ರವರು ಎಂದಿನಂತೆ ಕೆಲಸ ಬಿಟ್ಟು ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಾ ರಾತ್ರಿ ಸುಮಾರು 7-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಮೈನ್ರೋಡ್ಭಗವತೀ ಹಾರ್ಡ್ವೇರ್ ಅಂಗಡಿಯ ಬಳಿಗೆ ತಲುಪುತ್ತಿದ್ದಾಗ ಒಬ್ಬ ನೋಡಿ ಪರಿಚಯವಿರುವ ಯುವಕನು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೈದು ಬೆದರಿಸಿ ಹೋದವನು ನಂತರ ಮತ್ತೆ ಆತನು ತಿರುಗಿ ಬಂದು ಫಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿರುವುದಾಗಿದೆ.

10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಶ್ರಫ್ ರವರು ಸೆಂಟ್ರಲ್ ಮಾರ್ಕೆಟಿನಲ್ಲಿ ತರಕಾರಿ ಸಾಮಾಗ್ರಿಗಳನ್ನು ಅನ್ ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ  ದಿನಾಂಕ 30-03-2015 ರಂದು ಕೆಲಸ ಮುಗಿಸಿ ಮನೆಗೆ ಹೋಗುವರೇ ಮೈದಾನ ರಸ್ತೆಯಲ್ಲಿರುವ ಏರ್ ಲೈನ್ಸ್ ಹೊಟೇಲಿನ ಬಳಿ ತಲುಪಿದಾಗ ಸಮಯ ಸುಮಾರು ಬೆಳಿಗ್ಗೆ 5:30 ಗಂಟೆಗೆ ಫಿರ್ಯಾದಿದಾರರ ಮುಖ ಪರಿಚಯವಿರುವ ಹೆಸರು ವಿಳಾಸ ತಿಳಿಯದ 4 ಜನ ಯುವಕರು ಅಕ್ರಮವಾಗಿ ತಡೆದು ನಿಲ್ಲಿಸಿ ಫಿರ್ಯಾದಿದಾರರಲ್ಲಿ ತಂಬಾಕು ಇದೆಯಾ ಎಂದು ಕೇಳಿದ್ದು, ಅದಕ್ಕೆ ಫಿರ್ಯಾದಿದಾರರು ಇಲ್ಲ ಎಂದು ಹೇಳಿದಾಗ ಅವರಲ್ಲಿ ಇಬ್ಬರು ಫಿರ್ಯಾದಿದಾರರ ಕೈಯನ್ನು ಹಿಡಿದು, ಒಬ್ಬನು ಫಿರ್ಯಾದಿದಾರರ ಶರ್ಟಿನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಹಾಗೂ ರೂ 900/- ಕಿತ್ತುಕೊಂಡಿದ್ದು, ಇನ್ನೊಬ್ಬ ವ್ಯಕ್ತಿ ಕೈಯಿಂದ ಫಿರ್ಯಾದಿದಾರರ ಮುಖಕ್ಕೆ ಹೊಡೆದು, ಚೂರಿಯಿಂದ ಮುಖಕ್ಕೆ ತಿವಿದು ರಕ್ತ ಗಾಯಗೊಳಿಸಿದ್ದು, ಈ ಸಮಯ ಫಿರ್ಯಾದಿದಾರರು ಬೊಬ್ಬೆ ಹೊಡೆದಾಗ ಅಲ್ಲಿದ್ದ ಕೆಲವು ಜನ ಹಾಗೂ ಫಿರ್ಯಾದಿದಾರರ ತಮ್ಮ ಆಸೀಫ್ ರಿಕ್ಷಾದಲ್ಲಿ ಫಿರ್ಯಾದಿದಾರರನ್ನು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುವುದಾಗಿದೆ.

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವಿನ್ನಿ ಡಿ'ಸೋಜಾ ರವರ ಮನೆಯ ಪಕ್ಕದಲ್ಲಿ ಅವರ ತಾಯಿ ಹಿಲ್ಡಾ ಕ್ಯಾಸ್ಟಲಿನೋ ರವರ ಮನೆಯಿದ್ದು  ಪಿರ್ಯಾದಿದಾರರ ತಾಯಿಯವರು ಕಳೆದ 15 ದಿನಗಳಿಂದ ಬಜ್ಪೆಯಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದು  ಆ ಸಂದರ್ಬದಲ್ಲಿ  ಪಿರ್ಯಾದಿದಾರರು ಮನೆ ನೋಡಿಕೊಳ್ಳುತ್ತಿದ್ದು ದಿನಾಂಕ: 29.03.2015 ರಂದು ಸಂಜೆ 07.00 ಗಂಟೆಗೆ ಮನೆಯ ಕೆಲಸದ ಹೆಂಗಸು ಬಂದು ಕೆಲಸ ಮುಗಿಸಿ ಅವರು ಮನೆಗೆ ಬೀಗ ಹಾಕಿ  ಹೋಗಿದ್ದು ದಿನಾಂಕ: 29.03.2015 ರಾತ್ರಿ ಸಮಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿರುವುದು ಈ ದಿನ ದಿನಾಂಕ: 30.03.2015 ರಂದು ಬೆ: 9.00ಗಂಟೆಗೆ  ಪಿರ್ಯಾದಿದಾರರು ನೋಡಿದಾಗ ತಿಳಿದು ಬಂತು ನಂತರ ಮನೆಯೊಳಗೆ ಹೋಗಿ ನೋಡಲಾಗಿ ಪಿರ್ಯಾದಿದಾರರ ತಾಯಿಯ ಬಾಬ್ತು ಒಂದುವರೆ ಪವನ್‌‌ ತೂಕದ ಸುಮಾರು 20000/- ರೂಪಾಯಿ ಬೆಲೆಬಾಳುವ ಚಿನ್ನದ ನೆಕ್ಲೇಸ್‌‌  ಹಾಗೂ ಇತರ ದಾಖಲಾತಿಗಳು ಕಳವಾಗಿರುವುದಾಗಿದೆ.

1 comment: