ನಂಬ್ರ: ಸಿ.ಆರ್.ಎಂ(ಸಂ)/ 09 /ಮಂ.ನ/2015 ಪೊಲೀಸು ಆಯುಕ್ತರ ಕಚೇರಿ
ಮಂಗಳೂರು ನಗರ, ಮಂಗಳೂರು
ದಿನಾಂಕ: 07-03-2015.
ಅಧಿಸೂಚನೆ
ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪ ವಿಭಾಗರವರ ವರದಿಯನ್ನು ಪರಿಶೀಲಿಸಲಾಗಿದೆ. ಬಂಟ್ವಾಳ ತಾಲೂಕು ನರಿಂಗಾನ-ತೌಡುಗೋಳಿ ರಸ್ತೆಯ ಕಿ.ಮೀ 1.00 ರಲ್ಲಿ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿ ಮುಕ್ತಾಯದ ತನಕ ಸಾರ್ವಜನಿಕ ಹಿತದೃಷ್ಠಿಯಿಂದ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಬೇಕಾದ ಅವಶ್ಯಕ ಇರುವುದು ಮನಗಂಡು, ಎಸ್. ಮುರುಗನ್. ಐ.ಪಿ.ಎಸ್, ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟೇಟ್, ಮಂಗಳೂರು ನಗರ ಆದ ನಾನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221 ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಯ ಸಮಯ ದಿನಾಂಕ 07-03-2015 ರಿಂದ ಜ್ಯಾರಿಗೆ ಬರುವಂತೆ ರಸ್ತೆ ಸಂಚಾರದಲ್ಲಿ ಈ ಕೆಳಗಿನಂತೆ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಆದೇಶಿಸಿರುತ್ತೇನೆ.
ದಿನಾಂಕ 07-03-2015 ರಿಂದ ನರಿಂಗಾನ-ತೌಡುಗೋಳಿ ರಸ್ತೆಯ ಕಿ.ಮೀ 1.00 ರ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಯ ಮುಕ್ತಾಯ ತನಕ ನರಿಂಗಾನ-ತೌಡುಗೋಳಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂದಿಸಲಾಗಿದ್ದು, ಪರ್ಯಾಯವಾಗಿ ಸದರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮಂಗಲಾಂತಿ-ತೌಡುಗೋಳಿ ಮಾರ್ಗವಾಗಿ ಸಂಚರಿಸುವುದು
ಈ ಅಧಿಸೂಚನೆಯು ದಿನಾಂಕ 07-03-2015 ರಿಂದ ಕಾಮಗಾರಿಯ ಮುಕ್ತಾಯದ ತನಕ ಊರ್ಜಿತದಲ್ಲಿದೆ.
ಈ ಆದೇಶದನ್ವಯ ಸದ್ರಿ ರಸ್ತೆಯಲ್ಲಿ ಅವಶ್ಯವುಳ್ಳ ಸೂಕ್ತ ಮಾರ್ಕಿಂಗ್ ಮತ್ತು ಸೂಚನಾ ಫಲಕಗಳನ್ನು ಲೋಕೋಪಯೋಗಿ ಇಲಾಖೆಯ ಸಹಯೋಗದೊಂದಿಗೆ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣಕ್ಕೆ ಸೂಕ್ತ ಸಿಬ್ಬಂದಿಗಳನ್ನು ನಿಯೋಜಿಸಿ ಈ ಆದೇಶ ಅನುಷ್ಠಾನಗೊಳಿಸಲು ಸಹಾಯಕ ಪೊಲೀಸು ಆಯುಕ್ತರು, ಮಂಗಳೂರು ದಕ್ಷಿಣ ಉಪ ವಿಭಾಗ, ಮಂಗಳೂರು ನಗರ ಇವರು ಅಧಿಕಾರವುಳ್ಳವರಾಗಿರುತ್ತಾರೆ.
ಈ ಅಧಿಸೂಚನೆಯನ್ನು ದಿನಾಂಕ: 07-03-2015 ರಂದು ನನ್ನ ಸ್ವ ಹಸ್ತ ಸಹಿ ಹಾಗೂ ಮುದ್ರೆಯೊಂದಿಗೆ ಹೊರಡಿಸಿರುತ್ತೇನೆ.
ಸಹಿ/-
(ಎಸ್. ಮುರುಗನ್)
ಪೊಲೀಸು ಆಯುಕ್ತರು
ಮಂಗಳೂರು ನಗರ
No comments:
Post a Comment