Monday, March 9, 2015

Daily Crime Reports : 08-03-2015

ದೈನಂದಿನ ಅಪರಾದ ವರದಿ.
ದಿನಾಂಕ 08.03.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
2
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
0
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
1




























1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.03.2015 ರಂದು ರಾತ್ರಿ ಸುಮಾರು 10:15 ಗಂಟೆಗೆ ಮಂಗಳೂರು ತಾಲೂಕು, ಬೆಳ್ಮ ಗ್ರಾಮದ, ದೇರಳಕಟ್ಟೆ ರಿಕ್ಷಾ ಪಾರ್ಕ್ ಬಳಿ ಆರೋಪಿ ರಿಯಾಜ್ ಎಂಬಾತನು ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ರಿಜ್ವಾನ್ ರವರ ರಿಕ್ಷಾಕ್ಕೆ ತನ್ನ ರಿಕ್ಷಾವನ್ನು ಅಡ್ಡ ನಿಲ್ಲಿಸಿ, ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಸಣ್ಣ ಚೂರಿಯಿಂದ ಫಿರ್ಯಾದಿದಾರರ ಎಡಬದಿ ಕಿಬ್ಬೊಟ್ಟೆಗೆ ತಿವಿದು ಗಾಯಗೊಳಿಸಿ, ತನ್ನ ರಿಕ್ಷಾದೊಂದಿಗೆ ಅಲ್ಲಿಂದ ಹೋಗಿರುತ್ತಾನೆ. ಗಾಯಾಳು ಫಿರ್ಯಾದಿದಾರರನ್ನು ಅವರ ಅಣ್ಣ ಮುಸ್ತಾಫಾ ಹಾಗೂ ಇತರರು ಸೇರಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ, ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಈ ತಕ್ಷೀರಿಗೆ ಕಾರಣವೇನೆಂದರೆ, ಆರೋಪಿಯು ತನ್ನ ಆಟೋರಿಕ್ಷಾವನ್ನು ರಿಕ್ಷಾ ಪಾರ್ಕ್ ನ ಮುಂಭಾಗದಲ್ಲಿ ನಿಲ್ಲಿಸಿ ಸುಮ್ಮನೇ ಕುಳಿತ್ತಿದ್ದು, ಇದನ್ನು ಫಿರ್ಯಾದಿದಾರರು ಪ್ರಶ್ನಿಸಿ ನಿನ್ನ ರಿಕ್ಷಾವನ್ನು ಮುಂದೆ ಇಡು ಎಂದು ಹೇಳಿದ ಕಾರಣಕ್ಕೆ ಆರೋಪಿಯು ದ್ವೇಷಗೊಂಡು ಈ ಕೃತ್ಯ ಎಸಗಿರುವುದಾಗಿದೆ.

2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ  ಶ್ರೀ ಡಾನ್ ಫೆರ್ನಾಂಡಿಸ್ ರವರು ಠಾಣೆಗೆ 2014ನೇ ಆಗಸ್ಟ್ ತಿಂಗಳಿನಿಂದ ಹಳೆಯಂಗಡಿ ಗ್ರಾಮದ ರಾಮನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇದ್ದು, ಅವರೊಂದಿಗೆ ಅವರ ಸ್ನೇಹಿತ ನವೀನ್ ಎಂಬಾತನು ಕೂಡಾ ಮನೆಗೆ ಬಂದು ಹೋಗುತ್ತಿದ್ದುದಿನಾಂಕ 06-03-2015 ರಂದು ಪಿರ್ಯಾದಿದಾರರು  ರಾತ್ರಿ 8-00 ಗಂಟೆಗೆ ಮನೆಗೆ ಬೀಗ ಹಾಕಿ ಉಚ್ಚಿಲದಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಬಳಿಕ ರಾತ್ರಿ 02-00 ಗಂಟೆಗೆ ಮನೆಗೆ ಹೋದಾಗ ಮನೆಯಲ್ಲಿ ನವೀನನ್ನು ಮನೆಯ ಬಾಗಿಲಿನ ಬೀಗವನ್ನು ಒಡೆದು ಒಳಹೊಕ್ಕಿದ್ದು, ಪಿರ್ಯಾದಿದಾರರನ್ನು ನೋಡಿ ಓಡಿ ಹೋಗಿರುತ್ತಾನೆ. ನಂತರ ಪಿರ್ಯಾದಿದಾರರು  ಮನೆಯನ್ನು ಪರಿಶೀಲಿಸಲಾಗಿ ಮನೆಯೊಳಗೆ ಇಟ್ಟಿದ್ದ ಸುಮಾರು 24 ಗ್ರಾಂ ತೂಕದ ತೆಂಡುಲ್ಕರ್ ಚೈನ್ -1, ಸುಮಾರು 40 ಗ್ರಾಂ ತೂಕದ ಸ್ಪ್ರಿಂಗ್ ಚೈನ್-1, ಸುಮಾರು 40 ಗ್ರಾಂ ತೂಕದ ಡಿಜೈನ್ ಚೈನ್-1, ಸುಮಾರು 24 ಗ್ರಾಂ ತೂಕದ ರೋಪ್ ಚೈನ್-1, ಸುಮಾರು 32 ಗ್ರಾಂ ತೂಕದ ಬ್ರಾಸ್‌‌ಲೆಟ್-1, ಸುಮಾರು 6 ಗ್ರಾಂ ತೂಕದ ಬಂಗಾರದ ಉಂಗುರ -1, ಸುಮಾರು 12 ಗ್ರಾಂ ತೂಕದ ಸ್ಟೋನ್ ರಿಂಗ್ -1 , ಸುಮಾರು 6 ಗ್ರಾಂ ತೂಕದ ತವಿರೆ ಆಕೃತಿಯ ಉಂಗುರ -1, ಸುಮಾರು 6 ಗ್ರಾಂ ತೂಕದ ಉಂಗುರ-3, ಹೀಗೆ ಒಟ್ಟು 214 ಗ್ರಾಂ ತೂಕದ ಬಂಗಾರದ ಆಭರಣ ಕಳವಾಗಿದ್ದು, ಇದರ ಮೌಲ್ಯ ಸುಮಾರು 4,00,000/- ಆಗಬಹುದು. ಇದನ್ನು ಪಿರ್ಯಾದಿದಾರರ ಮನೆಗೆ ಬಂದು ಉಳಕೊಂಡು ಹೋಗುತ್ತಿದ್ದ  ನವೀನ್ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ಇರುತ್ತದೆ.

3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-03-2015 ರಂದು ಪಿರ್ಯಾದಿದಾರರಾದ ಶ್ರೀ ನವಾಜ್ ರವರು ತನ್ನ ಸ್ವಂತ ಕಾರು ನಂಬ್ರ ಕೆಎ 19 ಎಂ 8061 ನೇದರಲ್ಲಿ ಜಲೀಲ್ ಕೃಷ್ಣಾಪುರ ಮತ್ತು ಸಿದ್ದಿಕ್ ರವರು ಮಂಗಳೂರು ನೆಲ್ಲಿಕಾಯಿ ರಸ್ತೆಯಲ್ಲಿರುವ ಪಾರ್ಟಿ ಕಚೇರಿಯಿಂದ ಹೊರಟು ಬರುತ್ತಿರುವಾಗ, ಅಟೋ ರಿಕ್ಷಾ  ನಂಬ್ರ ಕೆ ಎ 19 ಸಿ 9425 ನೇ ಚಾಲಕನು   ಪಿರ್ಯಾದಿದಾರರ ಕಾರಿಗೆ ಅಡ್ಡ  ಬಂದು ವಿನಾ ಕಾರಣ ಬೈಯುತ್ತಿದ್ದನು. ನಂತರ ರೈಲ್ವೇ ನಿಲ್ದಾಣದ ರಸ್ತೆಯಲ್ಲಿ ಪಿರ್ಯಾದಿದಾರರು ಸಂಚರಿಸಿಕೊಂಡಿದ್ದಾಗ ಸೆಂಟ್ರಲ್ ರೈಲ್ವೇ ನಿಲ್ದಾಣದ ಜಂಕ್ಷನ್ನಲ್ಲಿ  ಅದೇ ಆಟೋ ರಿಕ್ಷಾ ನಂಬ್ರ ಕೆಎ 19 ಸಿ 9425 ನೇ ಚಾಲಕನು ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ " ಕಾರ್ ಡ್ ಕುಲ್ಲ್ದ್  ನಿಕುಲೆಗ್ ಬೇತೆ ಗಾಡಿ ತೋಜುಜಿ" ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು, ಅಲ್ಲಿಗೆ ಕೂಡಲೇ ನಾಲ್ಕು ಜನ ವ್ಯಕ್ತಿಗಳು ಬಂದು "ನಿಮಗೆ ಕಾರಿನಲ್ಲಿ ಸಂಚರಿಸಿದರೆ ಬೇರೆಯವರನ್ನು ಕಾಣುವುದಿಲ್ಲಎಂದು ಒಬ್ಬಾತನು ಬೈದು, ಇನ್ನೊಬ್ಬನು ಅಲ್ಲೇ ಬಿದ್ದಿದ್ದ  ಕಲ್ಲಿನಿಂದ ಪಿರ್ಯಾದಿದಾರರ ಹಣೆಯ ಭಾಗಕ್ಕೆ ಹೊಡೆದಿರುತ್ತಾನೆಮತ್ತೊಬ್ಬನು ಆತನ ಕೈಯಿಂದ ಪಂಚ್ ಮಾಡಿದ್ದು, ಇದರಿಂದ ಪಿರ್ಯಾದಿದಾರರ ಮೂಗಿನಲ್ಲಿ ರಕ್ತ ಬರಲು ಪ್ರಾರಂಭಿಸಿತು. ನಂತರ  ನಾಲ್ಕೂ ಜನರೂ ಸೇರಿಕೊಂಡು ಪಿರ್ಯಾದಿದಾರರಿಗೆ ಕೈಗಳಿಂದ ಪಿರ್ಯಾದಿದಾರರ ಮುಖಕ್ಕೆ, ಬೆನ್ನಿಗೆ ಗುದ್ದಿರುತ್ತಾರೆ. ನಂತರ ರಿಕ್ಷಾ ಚಾಲಕನು "ಇನ್ನು ಮುಂದೆ  ರೈಲ್ವೆ ನಿಲ್ದಾಣಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ" ಎಂದು ಜೀವ ಬೆದರಿಕೆ ನೀಡಿದ್ದು, ಕೂಡಲೇ  ಪಿರ್ಯಾದುದಾರರ ಜತೆಗಿದ್ದ ಜಲೀಲ್, ಸಿದ್ದೀಕ್ ರವರ ಸಹಾಯದಿಂದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದುಕೆಎ 19 ಸಿ 9425 ನೇ ಆಟೋ ಚಾಲಕನು ವಿನಾ ಕಾರಣ  ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ  ಶಬ್ದಗಳಿಂದ ಬೈದು, ಇತರರನ್ನು ಸೇರಿಸಿಕೊಂಡು ಕಲ್ಲಿನಿಂದ, ಕೈಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿರುವುದಾಗಿದೆ.

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-03-2015 ರಂದು ಫಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ ಶೆಟ್ಟಿ ರವರಿಗೆ ಮಂಗಳೂರು ದಕ್ಷಿಣ ಠಾಣಾ ಸರಹದ್ದಿನ ಪಾಂಡೇಶ್ವರ ಶಿವನಗರ ಎಂಬಲ್ಲಿರುವ ವಿಶ್ವಾಸ್ ಜುಪೀಟರ್ ಅಪಾರ್ಟ್ ಮೆಂಟ್ ನ 3 ನೇ ಮಹಡಿಯ 302 ನೇ ಮನೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲದ ದಂದೆ ನಡೆಸುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಬಾತ್ಮಿಯನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ರವರಿಗೆ ವರದಿ ಮಾಡಿ ಅವರಿಂದ ಧಾಳಿ ನಡೆಸುವ ಬಗ್ಗೆ ಶೋದನಾ ವಾರಂಟನ್ನು ಪಡೆದುಕೊಂಡು ಮತ್ತು ಸಿಸಿಬಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಸ್ಥಳಕ್ಕೆ 16-50 ಗಂಟೆ ಸಮಯಕ್ಕೆ ಪಂಚರ ಜೊತೆ ಧಾಳಿ ನಡೆಸಿದಲ್ಲಿ ಆರೋಪಿಗಳಾದ 1. ವಿಶಾಲ್ ಲೋಬೋ 2. ಸೋಹನ್ 3. ಯತಿನ್ ರಾವ್ ಹಾಗೂ ಅಮಿತ್ ಕುಮಾರ್ ಎಂಬವರು ವಿಶ್ವಕಪ್ ಏಕದಿನ ಕ್ರಿಕೆಟ್ ಆಟಗಳಲ್ಲಿ ಭಾಗವಹಿಸುವ ತಂಡಗಳ ಮೇಲೆ ಹಣವನ್ನು ಪಣವಾಗಿ ಸಂಗ್ರಹಿಸಿಕೊಂಡು ಮೊಬೈಲ್ ಮತ್ತು ಲ್ಯಾಪ್ ಟಾಪ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಬೆಟ್ಟಿಂಗ್ ದಂದೆಯನ್ನು ನಡೆಸುತ್ತಾ ಕೆಲವು ಗಿರಾಕಿಗಳಿಗೆ ಬೆಟ್ಟಿಂಗ್ ಹಣವನ್ನು ಕೊಡದೇ ವಂಚನೇ ಮಾಡುವ ಜಾಲ ಕೂಡಾ ತಿಳಿದು ಬಂದಿರುವುದರಿಂದ ಬೆಟ್ಟಿಂಗ್ ಬಗ್ಗೆ ಬಳಸಿದ ಲ್ಯಾಪ್ ಟಾಪ್, ಮೊಬೈಲ್ ಕಾಗದ ಪತ್ರಗಳನ್ನು ಮತ್ತು ನಗದು ಹಣ ರೂ 38,340/- ನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡು, ದಸ್ತಗಿರಿ ಮಾಡಿದ ಆರೋಪಿಗಳ ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿ ಸುರೇಶ್ ಮತ್ತು ಸ್ವಸ್ತಿಕ್ ಎಂಬವರ ವಿರುದ್ದ  ಸೂಕ್ತ ಕಾನೂನು ಕ್ರಮಕ್ಕೆ ವರದಿ ನೀಡಿರುವುದಾಗಿದೆ.

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕಃ 04-03-2015 ರಂದು 01-40 ಗಂಟೆಗೆ ಜೆ.ಬಿ.ಎಫ್ ಪೆಟ್ರೊ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪೂರ್ವ ಬದಿಯಲ್ಲಿ ನಾಯಿ ಬೊಗಳುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿಗಳು ಅಲ್ಲಿಗೆ ಹೋಗಿ ನೋಡಿದಾಗ ಕಂಪೌಂಡ್ ತಂತಿ ಬೇಲಿಯ ಹೊರಗೆ ರಸ್ತೆಯ ಇನ್ನೊಂದು ಪಕ್ಕದ ಇಳಿಜಾರಿನಲ್ಲಿ ಯಾರೋ ಓಡುವುದು ಕಂಡುಬಂದಿದ್ದು. ಬೇಲಿಯ ಪಕ್ಕದಲ್ಲಿರಿಸಿದ ತಾಮ್ರದ ವಯರ್ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದು ಡ್ರಮ್ ನಿಂದ ತುಂಡು ಮಾಡಿದ ಕೇಬಲ್ ವಯರನ್ನು ಆರೋಪಿಗಳು ಇಳಿಜಾರಿನಲ್ಲಿ ಎಳೆದುಕೊಂಡು ಪರಾರಿಯಾಗಿರುತ್ತಾರೆ. ಕಳವಾದ ಕೇಬಲ್ ವಯರ್ 64 ಮೀಟರ್ ಉದ್ದವಿದ್ದು . ಅಂದಾಜು ಮೌಲ್ಯ ತಿಳಿದುಬಂದಿರುವುದಿಲ್ಲ ಎಂಬುದಾಗಿ ಅಶೋಕ್ ಜೈನ್ ರವರು ದೂರು ನೀಡಿರುವುದಾಗಿದೆ.

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 6-3-2015 ರಂದು ಬೆಳಿಗ್ಗೆ 09-00 ಗಂಟೆಯಿಂದ ಸಂಜೆ 5-00 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಬೈಲು ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ರವೀಂದ್ರ ಉಳ್ಳಾಲ ರವರ ಮನೆಯ ಜಾಗದಲ್ಲಿದ್ದ ತೆಂಗಿನ ಮರದಿಂದ ಸುಮಾರು 3,000/- ಬೆಲೆ ಬಾಳುವ ಸುಮಾರು 100 ತೆಂಗಿನ ಕಾಯಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಲಕ್ಷ್ಮೀಕಾಂತ್ ರವರು ತನ್ನ ಬಾಭ್ತು KA-19-EM-1619 ನೇ FZ S ಮೋಟಾರ್‌‌ ಸೈಕಲನ್ನು ಅಡ್ಯಾರು ಕೋಡಿಮಜಲು ಎಂಬಲ್ಲಿ ವಿವೇಕಾನಂದರವರ   ಮನೆಯ  ಪಕ್ಕದಲ್ಲಿ ದಿನಾಂಕ: 04.03.2015 ರಂದು ರಾತ್ರಿ 8.00 ಗಂಟೆಗೆ ನಿಲ್ಲಿಸಿ ಮನೆಗೆ ಹೋಗಿದ್ದು ದಿನಾಂಕ: 05.03.2015 ರಂದು ಬೆಳಿಗ್ಗೆ 9.00 ಗಂಟೆಗೆ  ಪಿರ್ಯಾದಿದಾರರು ಬೈಕ್‌‌ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಬೈಕ್‌‌‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು  ಎಲ್ಲಾ ಸದ್ರಿ  ಮೋಟಾರ್‌‌ ಸೈಕಲ್‌‌ನ ಪತ್ತೆಯ ಬಗ್ಗೆ  ಹುಡುಕಾಡಿದ್ದು  ಪತ್ತೆಯಾಗಿರುವುದಿಲ್ಲ ಸದ್ರಿ ಮೋಟಾರ್‌‌ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು  ಕಳವಾದ ಮೋಟಾರ್‌‌‌ ಸೈಕಲ್‌‌ನ ಅಂದಾಜು ಮೌಲ್ಯ 45000 ಆಗಬಹುದು.

No comments:

Post a Comment