ದೈನಂದಿನ ಅಪರಾದ ವರದಿ.
ದಿನಾಂಕ 02.03.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
0
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
3
|
2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮೊಹಮ್ಮದ್ ಶರೀಫ್ ಕೆ. ರವರಿಗೆ ದಿನಾಂಕ 01-03-2015 ರಂದು ಸಂಜೆ ಸಮಯ 4-00 ಗಂಟೆಗೆ ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಬಳಿಯಲ್ಲಿ ಓರ್ವನು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದನೆಂದು ಬಂದ ಖಚಿತ ವರ್ತಮಾನದಂತೆ, ಠಾಣೆಯಿಂದ ಪಂಚರನ್ನು ಜತೆಯಲ್ಲಿ ಕರೆದುಕೊಂಡು ಹೊರಟು, ಸ್ಥಳಕ್ಕೆ ಸಮಯ ಸಂಜೆ 4-20 ಗಂಟೆಗೆ ತಲುಪಿ ಪರಿಶೀಲಿಸಲಾಗಿ, ಮೋರ್ಗನ್ಸ್ ಗೇಟ್ ಬಳಿಯ ಐ.ಹೆಚ್.ಪ್ರುಟ್ಸ್ ಅಂಗಡಿಯ ಎದುರುಗಡೆ ಇರುವ ಚರಂಡಿಯಲ್ಲಿ ಮದ್ಯವನ್ನು ಇರಿಸಿಕೊಂಡು ಮಾರಾಟ ಮಾಡುತ್ತಿದ್ದು, ಸದ್ರಿ ಸ್ಥಳದಿಂದ ಸ್ಥಳದಲ್ಲಿ ಆರೋಪಿ ಸುನೀಲ್ ಕುಮಾರ್ [22] ಈತನನ್ನು ವಶಕ್ಕೆ ಪಡೆದು ಆತನಿಂದ 4 ಗೋಣಿಚೀಲ ಹಾಗೂ 3 ರಟ್ಟಿನ ಬಾಕ್ಸ್ ನಲ್ಲಿ ಇರಿಸಿದ್ದ 1) OLD TAVERN Whisky 180 ML ಒಟ್ಟು 41 ಪ್ಯಾಕೇಟು. 2) DIRECTORS SPECIAL WHISKY 180 ML – 30 ಪ್ಯಾಕೇಟ್ 3) BOSS Black & Gold WHISKY 180 ML ನ ಒಟ್ಟು 21 ಬಾಟ್ಲಿಗಳು 4) IMPERIAL BLUE WHISKY 180 ML ನ 10 ಬಾಟ್ಲಿಗಳು 5) Prestige whisky 180 ML ನ 48 ಬಾಟ್ಲಿಗಳು 6) BOSS Black & Gold WHISKY 180 ML ನ 48 ಬಾಟ್ಲಿಗಳು 7) Prestige whisky 180 ML ನ ಬಾಟ್ಲಿಗಳು ಹಾಗೂ ಆರೋಪಿತನ ಕಿಸೆಯಲ್ಲಿದ್ದ ರೂಪಾಯಿ 1730/- ನಗದು ಹಣವನ್ನು ಹಾಗೂ ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತಿನ ಮೌಲ್ಯ ಒಟ್ಟು ರೂಪಾಯಿ 12,000/- ಆಗಬಹುದು. ಆರೋಪಿ ಸುನಿಲ್ ಕುಮಾರ್ ಯಾವುದೇ ಪರವಾನಿಗೆ ಇಲ್ಲದೇ, ದಿನಾಂಕ 01-03-2015 ರಂದು ಮದ್ಯ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳ ಆದೇಶ ಇದ್ದರೂ, ಇದನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಾಡಿರುವುದಾಗಿದೆ.
3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಸೊಮೇಶ್ವರ ಗ್ರಾಮದ ಕುಂಪಲ ಬೈಪಾಸ್ ಬಳಿ ಇರುವ ನೂರಾನಿ ಜುಮ್ಮಾ ಮಸೀದಿಗೆ ದಿನಾಂಕ 25-02-2015 ರಂದು ರಾತ್ರಿ ಸಮಯ ಸುಮಾರು 23-20 ಗಂಟೆಗೆ ಯಾರೋ ಕಿಡಿಗೇಡಿ ಯುವಕರು ಕಲ್ಲೆಸೆದು ಮಸೀದಿಯ ಗಾಜನ್ನು ಪುಡಿಮಾಡಿ ತಲ್ವಾರ್ ಹಿಡಿದು ದಾಂದಲೆ ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಫಿರ್ಯಾದಿಯನ್ನು ನೀಡಲು ಮಸೀದಿಯ ಕಮಿಟಿಯವರಲ್ಲಿ ಚರ್ಚಿಸಿ ದೂರು ನೀಡಲು ನಿರ್ಧರಿಸಿ ಪಿರ್ಯಾದಿದಾರರಾದ ಶ್ರೀ ಸಲೀಂ ರವರು ತಡವಾಗಿ ದೂರು ನೀಡಿರುವುದಾಗಿದೆ.
Apply online BPCL Management Trainee Application form
ReplyDeleteGet SSC CGL Tier I Answer Keys 2017