ದೈನಂದಿನ ಅಪರಾದ ವರದಿ.
ದಿನಾಂಕ 22.03.2015 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
1
|
ರಸ್ತೆ ಅಪಘಾತ ಪ್ರಕರಣ
|
:
|
1
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
1
|
1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.03.2015 ರಂದು ಪಿರ್ಯಾದಿದಾರರಾದ ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರು ಇಲಾಖಾ ಜೀಪು ಕೆಎ-19-ಜಿ-513 ನೇದರಲ್ಲಿ ತೆರಳಿ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಕೊಕ್ಕರೆ ಕಲ್ಲು ಪೆಟ್ರೋಲ್ ಪಂಪ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಸಂಜೆ ಸಮಯ 17.15 ಗಂಟೆ ಸುಮಾರಿಗೆ ಹಳೆಯಂಗಡಿ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲನ್ನು ನಿಲ್ಲಿಸುವರೇ ಸಿಬ್ಬಂದಿಯವರಿಗೆ ಸೂಚನೆಯನ್ನು ನೀಡಿದಾಗ ಮೋಟಾರ್ ಸೈಕಲ್ ಸವಾರರಿಬ್ಬರು ಮೋಟಾರ್ ಸೈಕಲನ್ನು ಮೆಲ್ಲನೆ ನಿಲ್ಲಿಸಿದಂತೆ ಮಾಡಿ ನಂತರ ಒಮ್ಮೆಲೇ ಮುಂದೆ ಕೊಂಡು ಹೋದಾಗ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಸುಮಾರು 100 ಅಡಿಯಷ್ಟು ಮುಂದಕ್ಕೆ ಬೆನ್ನಟ್ಟಿ ಹೋಗಿ ಮೋಟಾರ್ ಸೈಕಲ್ ಸವಾರರಿಬ್ಬರನ್ನು ಮೋಟಾರ್ ಸೈಕಲ್ ಸಮೇತ ನಿಲ್ಲಿಸಿ ಸದ್ರಿ ಇಬ್ಬರ ಹೆಸರು, ವಿಳಾಸ ಕೇಳಲಾಗಿ ಮೋಟಾರ್ ಸೈಕಲ್ ಸವಾರನ ಹೆಸರು ಶಂಕರ ಪ್ರಾಯ 34 ವರ್ಷ ತಂದೆ ದಿವಂಗತ ಜವರೇ ಗೌಡ ವಾಸ ಎನ್ ಬಿಂಡೇನಾಹಳ್ಳಿ, ಚೆನ್ನರಾಯಪಟ್ನ ತಾಲೂಕು ಹಾಸನ ಜಿಲ್ಲೆ ಎಂದು ತಿಳಿಸಿರುತ್ತಾರೆ. ಸಹ ಸವಾರನ ಹೆಸರು ಕೇಳಲಾಗಿ ಪ್ರಕಾಶ್ @ ಪಕೀರ ಪ್ರಾಯ 32 ವರ್ಷ ತಂದೆ ಶಿವಪ್ಪ ವಾಸ ಗುಳದಳ್ಳಿ ಹರಿಹರ ತಾಲೂಕು ದಾವಣಗೆರೆ ಎಂದು ತಿಳಿಸಿರುತ್ತಾನೆ. ಮೋಟಾರ್ ಸೈಕಲ್ ನ್ನು ಪರಿಶೀಲಿಸಿ ನೋಡಲಾಗಿ ಹಿರೋ ಹೋಂಡಾ ಕಂಪೆನಿಯ ಕಪ್ಪು ಬಣ್ಣದ ಸ್ಪೆಂಡರ್ ಮೋಟಾರ್ ಸೈಕಲ್ ಆಗಿದ್ದು ಇದರ ಎದುರಿನ ನಂಬರ್ ಪ್ಲೇಟ್ ತರಚಿ ಹೋಗಿದ್ದು, ಹಿಂಭಾಗದ ನಂಬರ್ ಪ್ಲೇಟನ್ನು ಪರಿಶೀಲಿಸಿದ್ದಲ್ಲಿ ಸದ್ರಿ ನಂಬರ್ ಪ್ಲೇಟ್ ಕೂಡಾ ಉಜ್ಜಿದಂತೆ ಕಂಡು ಬಂದಿದ್ದು ಸರಿಯಾಗಿ ಪರಿಶೀಲಿಸಿ ನೋಡಲಾಗಿ KA 19 R 7841 ಎಂದು ಆಗಿರುತ್ತದೆ. ಇದರ ಇಂಜಿನ್ ನಂಬ್ರ ಪರಿಶೀಲಿಸಿ ನೋಡಲಾಗಿ 03K15E01600 ಆಗಿದ್ದು, ಚಾಸಿಸ್ ನಂಬ್ರ 03L16F01191 ಆಗಿರುತ್ತದೆ. ಸದ್ರಿ ಮೋಟಾರ್ ಸೈಕಲ್ ನ ದಾಖಲಾತಿಯನ್ನು ಸವಾರನಲ್ಲಿ ಕೇಳಿದಾಗ ತಡವರಿಸಿ ಒಮ್ಮೆ ಮನೆಯಲ್ಲಿ ಇರುವುದಾಗಿಯೂ ಇನ್ನೊಮ್ಮೆ ದಾಖಲಾತಿ ಇಲ್ಲವೆಂದು ತಿಳಿಸಿದ್ದು, ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಸದ್ರಿ ಮೋಟಾರ್ ಸೈಕಲನ್ನು ಕಳೆದ 2015 ನೇ ಇಸವಿಯ ಮಾರ್ಚ್ ತಿಂಗಳಲ್ಲಿ ಮಂಗಳೂರು ಕಂಕನಾಡಿಯ ರೈಲ್ವೆ ನಿಲ್ದಾಣದ ಬಳಿ ಕೋರ್ದಬ್ಬು ದೈವಸ್ಥಾನದ ಪಕ್ಕ ನಿಲ್ಲಿಸಿದ್ದನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಆರೋಪಿತರನ್ನು ಸ್ಥಳದಲ್ಲಿ 18-30 ರ ವೇಳೆಗೆ ದಸ್ತಗಿರಿ ಮಾಡಿ ಕಳವಿಗೆ ಸಂಬಂಧಪಟ್ಟ ಮೋಟಾರ್ ಸೈಕಲ್ KA 19 R 7841 ನೇದನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡಿದ್ದಾಗಿದೆ.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:21-03-2015 ರಂದು ಸಂಜೆ 06-35 ಪಿರ್ಯಾದಿದಾರರಾದ ಶ್ರೀ ಎಸ್.ಎಚ್.ಭಜಂತ್ರಿ ಪೊಲೀಸ್ ನಿರೀಕ್ಷಕರು (ಅಪರಾಧ ಪತ್ತೆ ವಿಭಾಗ) ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ವ್ಯಾಪ್ತಿಯ ಕದ್ರಿ ಸ್ಮಶಾಣದಲ್ಲಿ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಸದರಿ ಸ್ಥಳಕ್ಕೆ ಪಂಚರು ಹಾಗೂ ಠಾಣಾ ಸಿಬ್ಬಂದಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ 18-45 ಗಂಟೆಗೆ ಸದ್ರಿ ಸ್ಳಳಕ್ಕೆ ತಲುಪಿದಾಗ ಹಣವನ್ನು ಪಣವಾಗಿ ಇಟ್ಟು ಅಂದರ್ ಬಾಹರ್ ಎಂಬ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸುತ್ತುವರಿದು 3 ಜನರನ್ನು ಹಿಡಿದಿದ್ದು ಒರ್ವ ವ್ಯಕ್ತಿಯು ಪರಾರಿಯಾಗಿದ್ದು ಅವರ ಹೆಸರು ಕೇಳಲಾಗಿ ರಾಜೇಶ್ ಎಂಬುದಾಗಿ ತಿಳಿಸಿದದ್ದು, ಸದ್ರಿ ಅಲ್ಲಿರುವವರನ್ನು ಅಂದರ್ ಬಾಹರ್ ಎಂಬ ಅದೃಷ್ಟ ದ ಆಟವಾಡುತ್ತಿದ್ದ ಬಗ್ಗೆ ಅವರಿಗೆ ತಪ್ಪನ್ನು ತಿಳಿಯಪಡಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಜುಗಾರಿ ಆಟಕ್ಕೆ ಉಪಯೋಫಗಿಸಲಾದ್ ಸೊತ್ತುಗಳ ಸಮೇತ ಅವರ ಹೆಸರು ವಿಳಸಗಳನ್ನು ಪಡೆದುಕೊಂಡು 3 ಜನ ಆಪಾದಿತರಾದ ಆನಂದ, ರಾಜೇಶ್, ಭಾಸ್ಕರ್ ಎಂಬವರನ್ನು ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟವಾಡಿ ಅಪರಾಧವೆಸಗಿರುವುದರಿಂದ ವರದಿಯನ್ನು ತಯಾರಿಸಿ ಮುಂದಿನ ಕ್ರಮದ ಬಗ್ಗೆ ಪ್ರಕರಣ ದಾಖಲು ಮಾಡಿರುವುದಾಗಿದೆ.
3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಗೋಕುಲ್ ಪ್ರಾಯ 45 ವರ್ಷ ಎಂಬವರು ಸುಮಾರು 7 ವರ್ಷಗಳಿಂದ ಚಿಟ್ ಫಂಡ್ ನಡೆಸುತ್ತಿದ್ದು, ದಿನಾಂಕ 14-03-2015 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಮನೆಯಾದ ಮಂಗಳೂರು ಜೆಪ್ಪು ಗುಜ್ಜರಕೆರೆ ಯಿಂದ ಚಿಟ್ ಫಂಡ್ ನ ಹಣ ವಸೂಲಿ ಮಾಡಲು ಹೋದವರು ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಸಂಬಂಧಿಕರ ಮನೆ ಹಾಗೂ ಮಂಗಳೂರು ನಗರದ ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 20-3-2015 ರಂದು ಗೃಹಿಣಿಯು ತನ್ನ ಬಾವ ಮತ್ತು ಮಗಳ ಜೊತೆ ಮಗಳಿಗೆ ಬಟ್ಟೆ ಖರೀದಿ ಮಾಡಲು ಮಂಗಳೂರಿಗೆ ಬಾವ ರವರು ಚಲಾಯಿಸುತ್ತಿದ್ದ ಅವರ ಕಾರಿನಲ್ಲಿ ಮದ್ಯಾಹ್ನ ಹೋದವರು ಅಲ್ಲಿ ಬಟ್ಟೆ ಬರೆಗಳನ್ನು ಖರೀದಿ ಮಾಡಿಕೊಂಡು ಮಂಗಳೂರಿನಿಂದ ವಾಪಾಸು ಅದೇ ಕಾರಿನಲ್ಲಿ ಮನೆಯ ಕಡೆಗೆ ಬರುತ್ತಾ ಮದ್ಯಾಹ್ನ 13-19 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪು ಜಂಕ್ಷನ್ ತಲುಪುವಾಗ್ಗೆ ಗೃಹಿಣಿಯ ಮೊಬೈಲ್ ದೂರವಾಣಿಗೆ ನೇಯದಕ್ಕೆ ಅಪರಿಚಿತ ಮೊಬೈಲ್ ದೂರವಾಣಿಯಿಂದ ಸುರೇಶ ಎಂದು ಹೆಸರನ್ನು ಸೂಚಿಸಿದ ವ್ಯಕ್ತಿಯು ಫಿರ್ಯಾದಿ ಗೃಹಿಣಿಗೆ ಕರೆ ಮಾಡಿ ಫಿರ್ಯಾದಿದಾರರಲ್ಲಿ ಅಸಹ್ಯಕವಾಗಿ ಹಾಗೂ ಅಶ್ಲೀಲವಾಗಿ ಮಾತಾಡಿ ಮಾನ ಹಾನಿ ಮಾಡಿರುತ್ತಾನೆ. ಮತ್ತು ಫಿರ್ಯಾದಿದಾರರ ಅಕ್ಕಳಿಗೆ ಕೂಡಾ ಬೇಡದ ಮಾತುಗಳಿಂದ ಮಾತಾಡಿರುತ್ತಾನೆ. ಇದೇ ವ್ಯಕ್ತಿಯು ದಿನಾಂಕ. 19-3-2015 ರಂದು ಕೂಡಾ ಫಿರ್ಯಾದಿದಾರರ ಮೊಬೈಲಿಗೆ ಕರೆ ಮಾಡಿ ಫೈನಾನ್ಸ್ ಹಣ ಬೇಕಾ ಎಂದು ವಿನಾ ಕಾರಣ ಕರೆ ಮಾಡಿ ತೊಂದರೆ ಮಾಡಿರುತ್ತಾನೆ.
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.03.2015 ರಂದು ಸಂಜೆ 4.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಫ್ರಾನ್ಸಿಸ್ ಇ. ಪಿರೇರಾ ರವರು ತನ್ನ ಬಾಬ್ತು ಕೆಎ19-ಕೆ-2529 ನೇ ಮೋಟಾರ್ ಸೈಕಲ್‌ನಲ್ಲಿ ಪತ್ನಿ ಬೆನೆಡಿಕ್ಟಾ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ನಾಗೂರಿ ಚರ್ಚ್ ಕಡೆಯಿಂದ ತನ್ನ ಮನೆಯಾದ ಕಂಕನಾಡಿ ರೆಡ್ ಬಿಲ್ಡಿಂಗ್ ಲೇನ್ ಕಡೆಗೆ ಬರುವರೇ ರೆಡ್ ಬಿಲ್ಡಿಂಗ್‌ನ ಸ್ವಲ್ಪ ಹಿಂದೆ ಬರುತ್ತಿರುವಾಗ ಪಿರ್ಯಾದಿದದಾರರ ಹಿಂದುಗಡೆಯಿಂದ ಅಂದರೆ ನಾಗೂರಿ ಚರ್ಚ್ ಕಡೆಯಿಂದ ಹೊಸ ಕಾರು ತಾತ್ಕಾಲಿಕ ನೊಂದಣಿ ಸಂಖ್ಯೆ KA-19-TC/20 ನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬೈಕಿನ ಬಲಭಾಗಕ್ಕೆ ಒರೆಸಿಕೊಂಡು ಹೋದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಪತ್ನಿ ಬೆನೆಡಿಕ್ಟಾ ರವರು ಬೈಕ್ ಸಮೇತ ಬಿದ್ದು ಪಿರ್ಯಾದಿದಾರರ ಬಲಮೊಣಕೈ ಗಂಟಿಗೆ ರಕ್ತಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ ತರಚಿದ ಗಾಯ ಉಂಟಾಗಿದ್ದು ಮತ್ತು ಅವರ ಪತ್ನಿ ಬೆನೆಡಿಕ್ಟಾ ರವರ ಮುಖದ ಬಲಭಾಗಕ್ಕೆ ರಕ್ತಗಾಯ ಹಾಗೂ ತಲೆಗೆ ಗಂಭೀರ ಸ್ವರೂಪದ ಗುದ್ದಿದನೋವು ಮತ್ತು ಎಡಕಣ್ಣಿನ ಬಳಿ ಗುದ್ದಿದ ನೋವುಂಟಾಗಿರುತ್ತದೆ.
Happy Rose Day
ReplyDeleterose day images
rose day 2016
rose day pics
rose day special
rose day sms
rose day quotes
rose day messages
when is rose day
rose day wallpaper
rose day sms in hindi
rose day sayari
rose day status
rose day msg