ದೈನಂದಿನ ಅಪರಾದ ವರದಿ.
ದಿನಾಂಕ 09.03.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
1
|
ರಸ್ತೆ ಅಪಘಾತ ಪ್ರಕರಣ
|
:
|
3
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
3
|
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 08.03.2015 ರಂದು ಪಿರ್ಯಾದಿದಾರರಾದ ಶ್ರೀ ಅರುಣ್ ರವರು ತನ್ನ ಮನೆಯಾದ ಬಳ್ಳಾಲ್ಬಾಗ್ನಲ್ಲಿರುವ ಅಶ್ವಿನಿ ಅಪಾರ್ಟ್ಮೆಂಟ್ನಲ್ಲಿರುವ ಸಮಯ ಸಂಜೆ 4.30 ಗಂಟೆಗೆ ಮನೆಯ ಬಳಿ ಬಳ್ಳಾಲ್ ಭಾಗ್ ಕಡೆಯಿಂದ ಮಣ್ಣಗುಡ್ಡೆ ಕಡೆಗೆ ಹಾದುಹೋಗುವ ಸಾರ್ವಜನಿಕ ರಸ್ತೆಯಲ್ಲಿ ವಾಹನ ಅಪಘಾತ ಉಂಟಾದ ಶಬ್ದ ಕೇಳಿ ಮನೆಯ ಹೊರಗೆ ಬಂದು ನೋಡಲಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಪಿರ್ಯಾದಿದಾರರ ಆಕ್ಟೀವಾ ಹೋಂಡಾ ಸ್ಕೂಟರ್ ನಂಬ್ರ ಕೆಎ.13.ಎಕ್ಸ್ 9588ನೇದಕ್ಕೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದ್ದು ಅಲ್ಲೇ ಪಕ್ಕದಲ್ಲಿ ಮಹಿಳೆಗೆ ಒಬ್ಬರು ಗಾಯಗೊಂಡು ಬೊಬ್ಬೆ ಹಾಕುತ್ತಿರುವುದನ್ನು ನೋಡಿ ವಿಚಾರಿಸಲಾಗಿ ಬಳ್ಳಾಲ್ ಭಾಗ್ ಕಡೆಯಿಂದ ಮಣ್ಣಗುಡ್ಡೆ ಕಡೆಗೆ ಆಟೋ ರಿಕ್ಷಾ ನಂಬ್ರ ಕೆಎ. 19 ಡಿ. 6539ನೇದನ್ನು ಅದರ ಚಾಲಕ ಇಸಾಕಿ ಎಂಬವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ಪಾರ್ಕ್ ಮಾಡಿದ್ದ ಆಕ್ಟೀವಾ ಹೋಂಡಾಕ್ಕೆ ಡಿಕ್ಕಿಹೊಡೆದಿದ್ದು, ಪರಿಣಾಮ ಸದ್ರಿ ಸ್ಕೂಟರ್ ಅಲ್ಲಿಯೇ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಮಲಾಕ್ಷಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು, ಬಲ ಕೈಗೆ, ಬಲಕಾಲಿಗೆ, ತುಟಿಗೆ ಗಾಯವಾಗಿ ಚಿತ್ಸೆಯ ಬಗ್ಗೆ ನಗರದ ಉಳ್ಳಾಲ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-03-2015 ರಂದು ಹೊಸಬೆಟ್ಟು ಮೀನುಗಾರರ ಸಹಕಾರ ಸಂಘದ ನಿರ್ದೇಶಕ ಮಂಡಳಿಯ ಆಯ್ಕೆ ಬಗ್ಗೆ ಚುನಾವಣೆಯು ಹೊಸಬೆಟ್ಟು ಸಾಗರ ನಿಧಿ ಕಟ್ಟಡದಲ್ಲಿ ನಡೆಯುತ್ತಿದ್ದು ಈ ಚುನಾವಣೆಯಲ್ಲಿ ನಿಂತಿರುವ ಅಭ್ಯರ್ಥಿಗಳ ಪೈಕಿ ಪಿರ್ಯಾದಿದಾರರಾದ ಶ್ರೀ ಹರೀಶ್ ಕೊಟ್ಯಾನ್ ರವರು ಕೂಡಾ ಒಬ್ಬರಾಗಿರುತ್ತಾರೆ. ದಿನಾಂಕ 08-03-2015 ರಂದು ಸಂಜೆ 3-00 ಗಂಟೆ ಸಮಯಕ್ಕೆ ಗ್ರಾಮದ ಶಾಂತರಾಮ ಬಂಗೇರಾ ಎಂಬವರು ಮತ ಹಾಕುವ ಜನರನ್ನು ಮತಗಟ್ಟೆ ಸ್ಥಳ ತನಕ ತಂದು ಅವರ ಅಭ್ಯರ್ಥಿಗೆ ಮತ ಹಾಕುವಂತೆ ಒತ್ತಾಯಿಸುತ್ತಿದ್ದವರನ್ನು ಪಿರ್ಯಾದಿದಾರರು ಆಕ್ಷೇಪಿಸಿದ್ದು, ಶಾಂತರಾಮ ಬಂಗೇರಾರವರು ಪಿರ್ಯಾದಿದಾರರನ್ನು ದೂಡಿದಾಗ ಅವರ ಜೊತೆಯಲ್ಲಿದ್ದ ದೇವದಾಸ್ ಶ್ರೀಯಾನ್, ಪುರುಷೋತ್ತಮ ಕಾಂಚನ್, ಸಚಿನ್ ಪುತ್ರನ್, ಯಶವಂತ ಶ್ರೀಯಾನ್, ಸಂದೀಪ್ ಪೈಂಟರ್ ಎಂಬವರುಗಳು ಪಿರ್ಯಾದಿದಾರರನ್ನು ಸುತ್ತುವರಿದು ಅವರ ಪೈಕಿ ದೇವದಾಸ್ ಎಂಬವರು ಸೋಡಾ ಬಾಟಲಿಯಿಂದ ಪಿರ್ಯಾದಿ ತಲೆಗೆ ಹೊಡೆದು ರಕ್ತ ಗಾಯಗೊಳಿಸಿದ್ದು ಆ ಸಮಯ ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಅಲ್ಲಿ ಜನ ಸೇರುವುದನ್ನು ಕಂಡು ಎಲ್ಲಾ ಆರೋಪಿಗಳು ಅಲ್ಲಿಂದ ಹೋಗಿದ್ದು ಹೋಗುವ ಸಮಯ ದೇವದಾಸ್ ಶ್ರೀಯಾನ್ ಎಂಬವರು ಪಿರ್ಯಾದಿಗೆ ಜೀವ ಬೆದರಿಗೆ ಹಾಕಿ ಹೋಗಿರುವುದಾಗಿದೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-03-2015 ರಂದು ಮಧ್ಯಾಹ್ನ 13:35 ಗಂಟೆಗೆ ಮಂಗಳೂರು ತಾಲೂಕು ಪಾವೂರು ಗ್ರಾಮದ ಕಿಲ್ಲೂರು ಪಡ್ಡಾಯಿ ಎಂಬಲ್ಲಿ ಪಿರ್ಯಾದಿದಾರರಾದ ವಿದ್ಯಾರ್ಥಿನಿಯು ಕಾಲೇಜು ಮುಗಿಸಿಕೊಂಡು ಮನೆ ಕಡೆ ನಡೆದುಕೊಂಡು ಹೋಗುತ್ತಿರುವಾಗ ಬೋನ ಎಂಬವರ ಮನೆಯ ಬಳಿ ದಾರಿಯಲ್ಲಿ ಯಾರೋ ಓರ್ವ ಅಪರಿಚಿತ ಯುವಕನು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದು, "ಎಕ್ಸಾಮ್ ಆಯಿತ ಬೇಗ ಬಂದದ್ದ" ಎಂದು ಕೇಳಿ ಆತನ ಪ್ಯಾಂಟ್ ನ ಜಿಪ್ಪನ್ನು ಜಾರಿಸಿ ಅಸಭ್ಯವಾಗಿ ವರ್ತಿಸಿ ಪಿರ್ಯಾದಿದಾರರಾದ ವಿದ್ಯಾರ್ಥಿನಿಯನ್ನು ಚುಡಾಯಿಸಿರುವುದಾಗಿದೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪರಮೇಶ್ವರ ರವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ 08-03-2015 ರ ಬೆಳಿಗ್ಗೆ 04:00 ಗಂಟೆ ಸಮಯಕ್ಕೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ವೈನ್ ಪಾರ್ಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸ್ಥಳದಲ್ಲಿ ವಿದ್ಯುತ್ ಬೆಳಕಿನಲ್ಲಿ ಆರೋಪಿಗಳಾದ ಮೋಹನ್ 2) ಹರೀಶ್, 3) ಲೋಹಿತ್ ಮತ್ತು 4) ರಾಜೇಶ್ ಮತ್ತು ಇನ್ನೊಬ್ಬ ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ತಳ್ಳಾಡಿಕೊಂಡು ಕೂಗಾಡಿ ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿಗೆ ಭಂಗವುಂಟಾಗುವಂತೆ ನಡೆದುಕೊಂಡಿದ್ದು ಸಿಬ್ಬಂದಿಗಳ ಸಹಾಯದಿಂದ ನಾಲ್ಕು ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ಒಬ್ಬ ಓಡಿ ಹೋಗಿರುತ್ತಾನೆ. ಸದ್ರಿಯವರು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿಗೆ ಭಂಗವುಂಟಾಗುವಂತೆ ನಡೆದುಕೊಂಡಿರುವುದರಿಂದ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿರುವುದಾಗಿದೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08-03-2015 ರಂದು 10-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಫೀಕ್ ಕೆ.ಎಂ., ಪೊಲೀಸ್ ಉಪನಿರೀಕ್ಷಕರು, ಮಂಗಳೂರು ಪೂರ್ವ ಪೊಲೀಸ್ ಠಾಣೆ ರವರು ಇಲಾಖಾ ಜೀಪು ನಂ ಕೆಎ.19 ಜಿ 240 ನೇದರಲ್ಲಿ ಜೀಪು ಚಾಲಕ ಮತ್ತು ಸಿಬ್ಬಂಧಿಗಳ ಜೊತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕದ್ರಿ ಸಶ್ಮಾನ ಬಳಿಯಲ್ಲಿ ಅಂದರ್ ಬಾಹರ್ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದಂತೆ ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ 11-10 ಗಂಟೆಗೆ ಸದ್ರಿ ಸ್ಧಳಕ್ಕೆ ತಲುಪಿದಾಗ ಹಣವನ್ನು ಪಣವಾಗಿ ಇಟ್ಟು ಅಂದರ್ ಬಾಹರ್ ಎಂಬ ಜುಗಾರಿ ಆಟವಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸುತ್ತುವರಿದು 3 ಜನರನ್ನು ಹಿಡಿದು ಅಂದರ್ ಬಾಹರ್ ಎಂಬ ಅದೃಷ್ಟದ ಆಟವಾಡುತ್ತಿದ್ದ ಬಗ್ಗೆ ಅವರಿಗೆ ತಪ್ಪನ್ನು ತಿಳಿಯಪಡಿಸಿದದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಜುಗಾರಿ ಆಟವಾಡುತ್ತಿದ್ದವರನ್ನು ವಿಚಾರಿಸಿ ಹೆಸರು ವಿಳಾಸಸ ಪಡೆದುಕೊಂಡು 3 ಜನ ಆಪಾದಿತರಾದ 1. ರಾಜೇಶ್, ಕಂಬ್ಳ ಕ್ರಾಸ್ ಬರ್ಕೆ, 2. ಚೇತನ, ಕೊಡಿಯಾಲ್ ಬೈಲ್, 3. ತಿಲಕ, ನಿಯರ್ ಕದ್ರಿ ಟೆಂಪಲ್, ಕದ್ರಿ ರವರು ಸಾರ್ವಜನಿಕ ಸ್ಧಳದಲ್ಲಿ ಅಂದರ್ ಬಾಹರ್ ಜುಗಾರಿ ಆಟವಾಡಿ ಅಪರಾಧವೆಸಗಿರುವುದರಿಂದ ಪ್ರಕರಣ ದಾಖಲಿಸಿರುವುದಾಗಿದೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-2015 ರಂದು ರಾತ್ರಿ 21-30 ಗಂಟೆ ಸಮಯಕ್ಕೆ ಫಿರ್ಯಾದುದಾರರಾದ ಡಾ. ಪ್ರಮೀತ್ ಪ್ರೇಮಜಿ ಟಿ. ರವರು ಮನೆಯ ಒಳಗಡೆ ಇರುವಾಗ ದೂರವಾಣಿ ಕರೆಯೊಂದು ಬಂದಾಗ ಮನೆಯ ಹೊರಗಡೆ ಬಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಬೈಕಿನ ಮೇಲೆ ಕುಳಿತು ಮಾತನಾಡುತ್ತಿದ್ದಾಗ ಆರೋಪಿಗಳಾದ ಹೇಮಂತ್ ಹಾಗೂ ವಿಜಯ್ ಎಂಬವರುಗಳು KA 19 ME 7999 ಫಾರ್ಚುನರ್ ಕಾರಿನಲ್ಲಿ ಬಂದು ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ "ನಿನಗೆ ರಸ್ತೆಯಲ್ಲಿ ಏನು ಕೆಲಸ" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮುಖಕ್ಕೆ ತಲೆಗೆ ಕೈಗಳಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಆ ಸಮಯ ಬೇರೆ ವಾಹನಗಳು ಬರುವುದನ್ನು ಕಂಡು ಆರೋಪಿಗಳು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಫಿರ್ಯಾದುದಾರರಿಗೆ ಪ್ರಜ್ಞೆ ತಪ್ಪಿರುವುದರಿಂದ ದೂರು ನೀಡುವರೇ ತಡವಾಗಿರುತ್ತದೆ.
7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-03-2015 ರಂದು ಬೆಳಿಗ್ಗೆ ಪಿರ್ಯಾಧಿದಾರರಾದ ಶ್ರೀ ರಮೇಶ್ ರವರು ಮನೆಯಿಂದ ಕೆಲಸಕ್ಕೆ ಹೊರಟಿದ್ದು ಪಣಂಬೂರು ಬಳಿ ನಡೆಯುತ್ತಿದ್ದ ತಮ್ಮ ಕುಲದೈವವಾದ ಮುಗೇರರ ಕೋಲವನ್ನು ನೋಡಿ ಬಳಿಕ ಕೆಲಸದ ಕಡೆಗೆ ಬರಲು ಪಣಂಬೂರು ಜಂಕ್ಷನ್ ನಿಂದ ಕೆಎ-19-ಸಿ-8789 ನೇ ನಂಬ್ರದ ಬಸ್ಸಿನಲ್ಲಿ ಕೃಷ್ಣಪುರ ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 07-20 ಗಂಟೆಗೆ ರಾ ಹೆ. 66 ರಲ್ಲಿ ಕುಳಾಯಿ ಹೊನ್ನಕಟ್ಟೆ ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾಧಿದಾರರು ಪ್ರಯಾಣಿಸುತ್ತಿದ್ದ ಬಸ್ಸಿನ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಗ್ಯಾಸ್ ಟ್ಯಾಂಕರ್ ನಂಬ್ರ ಕೆಎ-01-ಎಎ-2347 ನೇಯದನ್ನು ಅದರ ಚಾಲಕ ಲಕ್ಷ್ಮಣ ರವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ನಮ್ಮ ಬಸ್ಸಿನ ಹಿಂಬದಿಗೆ ಢಿಕ್ಕಿ ಪರಿಣಾಮ ಬಸ್ಸಿನೊಳಗೆ ತಳ್ಳಲ್ಪಟ್ಟು ಬಸ್ಸಿನ ಮಧ್ಯದ ರಾಡು ಗುದ್ದಿದ ಪರಿಣಾಮ ಹಣೆಗೆ ತಲೆಗೆ. ಗುದ್ದಿದ ಹಾಗೂ ರಕ್ತ ಗಾಯಾವಾಗಿದ್ದು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಗಾಯಾವಾಗಿರುತದೆ. ಗಾಯಾಳುಗಳು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮವತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾರುವುದಾಗಿದೆ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 8-3-15 ರಂದು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ರವಿಕುಮಾರ್ ಎಸ್. ರವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ದಿನಾಂಕ 9-03-15 ರಂದು ಬೆಳಿಗ್ಗೆ ಸಮಯ ಸುಮಾರು 03-00 ಗಂಟೆಗೆ ಕೆಂಜಾರು ಗ್ರಾಮದ ಪೇಜಾವರ ಪಡ್ಪು ಎಂಬಲ್ಲಿ ನೇಮೋತ್ಸವ ನಡೆಯುತ್ತಿದ್ದಲ್ಲಿ ತಲುಪಿದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 8-10 ಜನರು ಹಣವನ್ನು ಪಣವನ್ನಾಗಿಟ್ಟು ಅಕ್ರಮವಾಗಿ "ಉಳಾಯಿ-ಪಿದಾಯಿ" ಎಂಬ ಅದೃಷ್ಟದ ಆಟವನ್ನು ಆಡುತ್ತಿದ್ದುದನ್ನು ಕಂಡು ದಾಳಿ ಮಾಡಿ ಇಬ್ಬರು ಆರೋಪಿಗಳಾದ ಮುನೀರ್, ಸಂದೀಪ್ ಪೂಜಾರಿ ಎಂಬವರುಗಳನ್ನು ಮತ್ತು ಆಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆಗಳನ್ನು ಹಾಗೂ ನಗದು ರೂ 5625/- ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಬಜ್ಪೆ ಠಾಣೆಗೆ ತಂದು ಹಾಜರುಪಡಿಸಿದ್ದಾಗಿದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-03-2015 ರಂದು ಸಂಜೆ 17-45 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ನವೀನ್ ಕುಮಾರ್ ರವರು ಗುರುಪ್ರಸಾದ್ ಎಂಬವರನ್ನು ತನ್ನ ಮೋಟಾರ್ ಸೈಕಲ್ ಕೆಎ-19-ಇಜಿ-8207 ನೇದರಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ರಾ.ಹೆ. 66 ರಲ್ಲಿ ತಲಪಾಡಿ ಕಡೆಗೆ ಹೋಗುತ್ತಿರುವಾಗ ಕೋಟೆಕಾರು ಗ್ರಾಮದ ಅಡ್ಕ ದುರ್ಗಾಂಬ ಗ್ಯಾರೇಜ್ ಎದುರುಗಡೆ ಹೋಗುತ್ತಿದ್ದ ಬುಲೆಟ್ ಗ್ಯಾಸ್ ಟ್ಯಾಂಕರ್ ಕೆಎ-01-ಎಎ- 4425 ನೇದರ ಚಾಲಕನು ಮುಂದೆ ಹೋಗುವಂತೆ ಸಿಗ್ನಲ್ ನೀಡಿದ ಮೇರೆಗೆ ಬಲಬದಿಯಿಂದ ಮುಂದೆ ಹೋಗುತ್ತಿರುವಾಗ ಗ್ಯಾಸ್ಟ್ಯಾಂಕರ್ನ ಚಾಲಕನು ಒಮ್ಮೆಲೇ ನಿರ್ಲಕ್ಷ್ಯತನದಿಂದ ಬಲಕ್ಕೆ ತಿರುಗಿಸಿದ್ದರಿಂದ ಬಲಭಾಗದ ಮಧ್ಯದ ಚಕ್ರ ಬೈಕಿಗೆ ತಾಗಿದ್ದು, ಪರಿಣಾಮವಾಗಿ ಫಿರ್ಯಾದಿದಾರರ ಬಲಕಡೆಗೆ ಬಿದ್ದಿದ್ದು ಸಹಸವಾರ ಗುರುಪ್ರಸಾದ್ನು ಎಡಗಡೆಗೆ ಬಿದ್ದಿದ್ದು, ಫಿರ್ಯಾದಿದಾರರು ಎದ್ದು ನೋಡಲಾಗಿ ಟ್ಯಾಂಕರ್‌ನ ಚಕ್ರವು ಗುರುಪ್ರಸಾದ್ನ ತೊಡೆಯ ಮೇಲೆ ಹಾದು ಹೋಗಿ ನಿಂತಿದ್ದು, ಪಿರ್ಯಾದಿದಾರರಿಗೆ ಎಡ ಭುಜ, ಎಡ ಕೈಗೆ ಗಾಯವಾಗಿದ್ದು, ಆರೋಪಿಯ ಅತೀ ವೇಗ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿರುತ್ತದೆ.
No comments:
Post a Comment