ದಿನಾಂಕ: 08-03-2015 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್, ಪಿಎಸ್ಐ ಶ್ರೀ ಎಸ್.ಹೆಚ್. ಭಜಂತ್ರಿ ಮತ್ತು ಸಿಬ್ಬಂದಿಗಳು ಮಂಗಳೂರು ಪೂರ್ವ ಪೊಲೀಸ್ ಠಾಣಾ ಮೊ.ನಂ.34/2015 ಕಲಂ: 341, 504, 506, 427 ಜೊತೆಗೆ 34 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿ
1) ಪ್ರೇಮ್ ಡಿ'ಸೋಜ ಪ್ರಾಯ:18 ವರ್ಷ, ತಂದೆ: ರೊನಾಲ್ಡ್ ಡಿ'ಸೋಜ, ವಾಸ: ಲಿಲ್ಲಿ ಕಂಪೌಂಡ್, ಬಿಜೈ ಚರ್ಚ್ ರಸ್ತೆ, ಬಿಜೈ, ಮಂಗಳೂರು,
ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ ವೇಳೆ ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ನ ಬಗ್ಗೆ ವಿಚಾರಿಸಿದಾಗ ತಾನು ಈ ಹಿಂದೆ ಫೆಬ್ರವರಿ ತಿಂಗಳ ಒಂದು ದಿನ ತಾನು ತನ್ನ ಸ್ನೇಹಿತರುಗಳ ಜೊತೆ ಸೇರಿಕೊಂಡು ಮರೋಳಿಯಲ್ಲಿರುವ ಮೊಬೈಲ್ ರೀಚಾರ್ಜ್ ಅಂಗಡಿಯ ಬಾಗಿಲಿನ ಶಟರ್ ಮುರಿದು ಕಳವು ಮಾಡಿದ ಸೊತ್ತುಗಳ ಪೈಕಿ ಈ ಮೊಬೈಲ್ ಕೂಡಾ ಒಂದು ಎಂದು ಹಾಜರುಪಡಿಸಿದನ್ನು ಪರಿಶೀಲಿಸಲಾಗಿ ಇದು ನೋಕಿಯೋ ಎಕ್ಷ್1 ಮಾಡೆಲ್ ನ ಕಪ್ಪು ಬಣ್ಣದ ಮೊಬೈಲ್ ಪೋನ್ ಆಗಿದ್ದು, ಈ ಸೊತ್ತನ್ನು ಮಂಗಳೂರು ಗ್ರಾಮಾಂತರ ಠಾಣಾ ಮೊ.ನಂ.84/15 ಕಲ: 457, 380 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಳ್ಳಲಾಯಿತು. ಹಾಗೂ ಕುಲಶೇಖರ ಕೈಕಂಬ ಕಡೆಗಳಲ್ಲಿ ನಡೆಸಿದ ಕಳ್ಳತನಗಳಲ್ಲಿ ಕೂಡಾ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಂತೆ ಅದೇ ದಿನ
1) ಸವಿನ್ ಪ್ರಾಯ: 18 ವರ್ಷ, ತಂದೆ: ಲೋಕೇಶ್, ವಾಸ: ಕೊಡ್ಲಿಂಗಾಣ ಮನೆ, ಕಟ್ಟೆಮಾಡು ಅಂಚೆ, ಮೂರ್ನಾಡು ಗ್ರಾಮ, ಮಡಿಕೇರಿ, ಕೊಡಗು ಜಿಲ್ಲೆ.
ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ್ದು ಸದ್ರಿಯವರುಗಳ ಸ್ವ-ಇಚ್ಛಾ ಹೇಳಿಕೆಯ ಆಧಾರದ ಮೇರೆಗೆ ದಿನಾಂಕ: 09-03-2015ರಂದು ಬೆಳಿಗ್ಗೆ 09-15 ಗಂಟೆ ಸುಮಾರಿಗೆ ಸದ್ರಿಯವರುಗಳು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಮನೆಯನ್ನು ತೋರಿಸಿಕೊಟ್ಟಂತೆ ಕಾನೂನು ಸಂಘರ್ಷಕ್ಕೆ ಒಳಗಾದ 3 ಜನ ಬಾಲಕರುಗಳನ್ನು ದಸ್ತಗಿರಿ ಮಾಡಿ ಅವರ ಪಾಲಕರಿಗೆ ದಸ್ತಗಿರಿ ಬಗ್ಗೆ ಮಾಹಿತಿ ನೀಡಿ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ಹಾಜರುಪಡಿಸಿದ ಕಳವು ಮಾಡಿದ ಸೊತ್ತುಗಳಾದ
1. ಕಪ್ಪು ಬಣ್ಣದ ಸಿ.ಪಿ.ಯು-1, ಸ್ಯಾಮ್ಸಂಗ್ ಕಂಪನಿಯ ಬಿಳಿ ಫ್ರೇಮ್ ಇರುವ ಕಪ್ಪು ಬಣ್ಣದ ಮೊನಿಟರ್-1, Logitech ಕಂಪನಿಯ ಕಪ್ಪು ಬಣ್ಣದ ಕೀ-ಬೋರ್ಡ್ -1, Logitech ಕಂಪನಿಯ ಕಪ್ಪು ಬಣ್ಣದ ಮೌಸ್-1, Odessey ಕಂಪನಿಯ ಕಪ್ಪು ಹಾಗೂ ಬಿಳಿ ಬಣ್ಣದ ಹೆಡ್ ಸೆಟ್-1, ಇವುಗಳ ಒಟ್ಟು ಅಂದಾಜು ಮೌಲ್ಯ ರೂ. 10,000/- ಆಗಬಹುದು,
2. Nikon ಕಂಪನಿಯ ಕಪ್ಪು ಬಣ್ಣದ ಕೆಮರಾ-1, ಇದರ ಅಂದಾಜು ಮೌಲ್ಯ ರೂ. 32,000/- ಆಗಬಹುದು.
3. 25 ರೂ ಬೆಲೆ ಬಾಳುವ Vodafone ಕಂಪನಿಯ ರೀಚಾರ್ಜ್ ಕೂಪನ್ -1,
4. 24 ರೂ. ಬೆಲೆ ಬಾಳುವ Docomo ಕಂಪನಿಯ ರೀಚಾರ್ಜ್ ಕೂಪನ್ -9,
5. 8 ರೂ. ಬೆಲೆ ಬಾಳುವ Docomo ಕಂಪನಿಯ ರೀಚಾರ್ಜ್ ಕೂಪನ್-32,
ಇವುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿ-ಚಕ್ರ ವಾಹನಗಳಾದ KA 19 EK 1570 ನೇ ನಂಬ್ರದ ಸುಮಾರು 45,000/- ರೂ ಬೆಲೆ ಬಾಳುವ ಬಜಾಜ್ ಪಲ್ಸರ್-200, ಹಾಗೂ KA 19 EC 4291 ನೇ ನಂಬ್ರದ ಸುಮಾರು 30,000/- ರೂ ಬೆಲೆ ಬಾಳುವ ಹೋಂಡಾ ಕಂಪನಿಯ ಡಿಯೋ ಬಿ.ಎಸ್.111 -1 ಇವುಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣಾ ಮೊ.ನಂ. 35/2015 ಕಲಂ: 457, 380 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮನೆಯಿಂದ ಪಂಚರ ಸಮಕ್ಷಮ ಸೊತ್ತು ಸ್ವಾಧೀನತಾ ಮಹಜರು ಮುಖೇನ ವಶಪಡಿಸಿಕೊಂಡು ಠಾಣೆಗೆ ತಂದು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗಿರುತ್ತದೆ.
ನಂತರ ದಿನಾಂಕ: 09-03-2015 ರಂದು ಪ್ರೇಮ್ ಡಿ'ಸೋಜ ಮತ್ತು ಸವಿನ್ ಎಂಬವರನ್ನು ಮಾನ್ಯ 2ನೇ ಸಿ.ಜೆ.ಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ದಿನಾಂಕ 16-03-2015 ರವರೆಗೆ ನ್ಯಾಯಾಂಗ ಬಂದನವನ್ನು ವಿಧಿಸಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರುಗಳನ್ನು ಬಾಲ ನ್ಯಾಯ ಮಂಡಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಸದ್ರಿಯವರುಗಳನ್ನು ಅವರ ಹೆತ್ತವರ ಸುಪರ್ದಿ ಗೆ ಮಾನ್ಯ ನ್ಯಾಯಾಲಯವು ಬಿಟ್ಟಿರುತ್ತದೆ. ಈ ಪ್ರಕರಣದಲ್ಲಿ ಇನ್ನು ಕೆಲವರು ಕೂಡಾ ಭಾಗಿಯಾಗಿದ್ದು ಅವರುಗಳ ದಸ್ತಗಿರಿಗೆ ಬಾಕಿ ಇರುತ್ತದೆ.
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಎಸ್. ಮುರುಗನ್ I.P.S. ರವರ ವಿಶೇಷ ಮುತುವರ್ಜಿಯ ನಿರ್ದೇಶನದಂತೆ ಪೊಲೀಸ್ ಉಪ ಆಯುಕ್ತರುಗಳಾದ ಕೆ. ಸಂತೋಷ್ ಬಾಬು I.P.S. ಮತ್ತು ಶ್ರೀ ಎನ್. ವಿಷ್ಣುವರ್ಧನ ರವರ ಮತ್ತು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ತಿಲಕಚಂದ್ರ ರವರ ಮಾರ್ಗದರ್ಶನದಂತೆ ಪತ್ತೆ ಹಚ್ಚಿದ್ದು ತನಿಖೆ ನಡೆಸಲಾಗುತ್ತಿದೆ.
No comments:
Post a Comment