ದೈನಂದಿನ ಅಪರಾದ ವರದಿ.
ದಿನಾಂಕ 01.03.2015 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
1
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
2
|
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28-02-2015 ರಂದು ಪಿರ್ಯಾದಿದಾರರಾದ ಮಂಗಳೂರು ಪೂರ್ವ ಪೊಲೀಸ್ ಠಾಣಾ ಸಹಾಯಕ ಉಪಪೊಲೀಸ್ ನಿರೀಕ್ಷಕರಾದ ರಮೇಶ್ ಹಾಗೂ ಪಿಸಿ-471 ನೇಯವರು ಪಿಸಿಆರ್ ಕರ್ತವ್ಯದಲ್ಲಿರುವಾಗ ಸಂಜೆ ಸಮಯ 18-15 ಗಂಟೆಗೆ ನಂತೂರು ಜಂಕ್ಷನ್ ತಲುಪಿದಾಗ ಕೊರಬ್ದು ದೈವಸ್ಥಾನದ ಎದುರು ಬಸ್ಸು ನಂಬ್ರ KA-19 C-6287 & KA-19 AD-5977ಸಿಟಿ ಬಸ್ಸುಗಳೆರಡ ಚಾಲಕರು ಸಾರ್ವಜನಿಕ ರಸ್ತೆಯಲ್ಲಿ ಬಸ್ಸುಗಳನ್ನು ಅಡ್ಡ ನಿಲ್ಲಿಸಿ ವಾಹನ ಸಂಚಾರಕ್ಕೆ ತಡೆಯನ್ನುಂಟು ಮಾಡಿ ಸಾರ್ವಜನಿಕರೆದುರು, ಸಾರ್ವಜನಿಕರ ನೆಮ್ಮದಿಗೆ ಉಪದ್ರವವಾಗುವ ರೀತಿಯಲ್ಲಿ ಹೊಡೆದಾಡುತ್ತಿದ್ದುದ್ದನ್ನು ಕಂಡು ಪಿರ್ಯಾದಿದಾರರು ಇಬ್ಬರು ಬಸ್ಸಿನ ಚಾಲಕ ಹಾಗೂ ಬಸ್ಸಿನ ಸಮೇತ ವಶಕ್ಕೆ ಪಡೆದು ಹೆಸರು ವಿಳಾಸ ವಿಚಾರಸಲಾಗಿ KA-19 C-6287 ನೆ ಬಸ್ಸಿನ ಚಾಲಕ ಫಾರೂಕ್, ನಿರ್ವಾಹಕ ಇಮ್ತೀಯಾಜ್ ಎಂಬುದಾಗಿ ಹಾಗೂ KA-19 AD-5977 ನೇ ಜಯಶ್ರೀ ಬಸ್ಸಿನ ಚಾಲಕ ಪುರಂದರ, ನಿರ್ವಾಹಕ ಪ್ರಸಾದ್ ಎಂದು ತಿಳಿಸಿದ್ದು, ಮುಂದಿನ ಕ್ರಮದ ಬಗ್ಗೆ ಠಾಣೆಗೆ ಕರೆದುಕೊಂಡು ಬಂದು ಸದ್ರಿ ಬಸ್ಸಿನ ಚಾಲಕರನ್ನು ಹಾಜರುಪಡಿಸಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.02.2015ರಂದು ಸಂಜೆ ಸುಮಾರು 7.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಯತೀಶ್ ಯಾದವ್ ರವರು ತನ್ನ ಬಾಬ್ತು ಕೆಎ-19-ಇಎಫ್ –1198 ನೇ ಮೋಟಾರು ಸೈಕಲ್ ನ್ನು ಚಲಾಯಿಸಿಕೊಂಡು ಮೂಡಬಿದ್ರೆಯಿಂದ ಹೋಗುತ್ತಾ ಮೂಡಬಿದ್ರೆ ಗಾಂಧಿನಗರ ಎಂಬಲ್ಲಿ ಧನಲಕ್ಷ್ಮೀ ಕ್ಯಾಶ್ಯೂ ಪ್ಯಾಕ್ಟರಿಗೆ ಹೋಗುವರೇ ಮೋಟಾರ್ ಸೈಕಲಿನ ಇಂಡಿಕೇಟರನ್ನು ಹಾಕಿ ಬಲಕ್ಕೆ ತಿರುಗಿ ಪ್ಯಾಕ್ಟರಿಗೆ ಹೋಗುವ ಮಣ್ಣು ರಸ್ತೆಗೆ ಬಂದಾಗ ಹಿಂದಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ರಿಜಿಸ್ಟೇಷನ್ ನಂಬರ್ ಆಗದ ಹೊಸ ಮೋಟಾರು ಸೈಕಲ್ ನ್ನು ಅದರ ಸವಾರ ಹೇಮಚಂದ್ರ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೋ ಒಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಮಾಡಿದ್ದು, ಇದರಿಂದ ಪಿರ್ಯಾದಿದಾರರಿಗೆ ತಲೆಯ ಹಿಂದುಗಡೆ, ಬಲ ಸೊಂಟದ ಬಳಿಗೆ , ಬಲಕಾಲಿನ ಪಾದಕ್ಕೆ ಗಾಯಗೊಂಡು ಆರೋಪಿ ಹೇಮಚಂದ್ರನಿಗೂ ಕೂಡಾ ಬಲಕಣ್ಣಿನ ಬಳಿ, ಎಡಕೈಗೆ ಜಖಂಗೊಂಡಿದ್ದು ಪಿರ್ಯಾದಿಯು ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಪಿಯು ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಈ ಅಪಘಾತದಿಂದ ಮೋಟಾರು ಸೈಕಲ್ ಗಳು ಜಖಂಗೊಂಡಿರುವುದಾಗಿದೆ.
No comments:
Post a Comment