ನಂಬ್ರ: ಸಿ.ಆರ್.ಎಂ(ಸಂಚಾರ)/ 08 /ಸಿಓಪಿ/2015
ಪೊಲೀಸು ಆಯುಕ್ತರ ಕಚೇರಿ
ಮಂಗಳೂರು ನಗರ, ಮಂಗಳೂರು
ದಿನಾಂಕ: 27 -02-2015.
ಅಧಿಸೂಚನೆ
ವಿಶ್ವ ಹಿಂದೂ ಪರಿಷತ್ತಿನ ಸ್ವರ್ಣ ಮಹೋತ್ಸವದ ಅಂಗವಾಗಿ ದಿನಾಂಕ: 01-03-2015 ರಂದು ಮಂಗಳೂರು ನಗರದ ನೆಹರು ಮೈದಾನದಲ್ಲಿ 'ಹಿಂದೂ ಸಮಾಜೋತ್ಸವ' ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದ ಸಮಯ ನಗರದಲ್ಲಿ ಜನಸಂದಣಿ ಹಾಗೂ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಂಚಾರ ಸುವ್ಯವಸ್ಥೆ ಬಂದೋಬಸ್ತ್ ನಿರ್ವಹಣೆಯ ಬಗ್ಗೆ, ವಾಹನ ಸಂಚಾರದಲ್ಲಿ ಮಾರ್ಪಾಡುಗಳನ್ನು ಮಾಡಬೇಕಾಗಿ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪವಿಭಾಗ ರವರು ಕೋರಿರುತ್ತಾರೆ.
ಅಂತೆಯೇ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ನೆಹರು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರುವ ಸಾಧ್ಯತೆ ಇರುವುದರಿಂದ ವಾಹನಗಳ ಸುಗಮ ಸಂಚಾರದ ಹಿತದೃಷ್ಠಿಯಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಎಸ್. ಮುರುಗನ್, ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್, ಮಂಗಳೂರು ನಗರ ಆದ ನಾನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಗೆ ಸೂಚಿಸಿರುವಂತೆ ವಾಹನ ಸಂಚಾರದಲ್ಲಿ ತಾತ್ಕಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಆದೇಶಿಸಿರುತ್ತೇನೆ.
1. ನೆಹರೂ ಮೈದಾನ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ದಿನಾಂಕ : 01-03-2015 ರಂದು ಬೆಳಿಗ್ಗೆ 10-00 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ತನಕ ಎಲ್ಲಾ ತರಹದ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ.
2. ಸೆಕ್ಟರ್ -1: ಉಡುಪಿ-ಸುರತ್ಕಲ್ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ತರಹದ ವಾಹನಗಳು ಕೊಟ್ಟಾರ ಚೌಕಿ-ಲೇಡಿಹಿಲ್ – ಲಾಲ್ ಬಾಗ್ - ಪಿ.ವಿ.ಎಸ್ ನಿಂದಾಗಿ ಬಂಟ್ಸ್ ಹಾಸ್ಟೆಲ್ಗೆ ಬಂದು ಜನರನ್ನು ಇಳಿಸಿ ರಾಮಕೃಷ್ಣ ಕಾಲೇಜಿನ ಮೈದಾನದಲ್ಲಿ ಅಥವಾ ಸಿ. ವಿ. ನಾಯಕ್ ಹಾಲ್ನ ಮೈದಾನದಲ್ಲಿ ಪಾರ್ಕ್ ಮಾಡುವುದು.
3. ಸೆಕ್ಟರ್ -2 : ಮೂಡುಬಿದಿರೆ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ತರಹದ ವಾಹನಗಳು ನಂತೂರು ವೃತ್ತ - ಮಲ್ಲಿಕಟ್ಟೆ ಮೂಲಕ ಬಂಟ್ಸ್ ಹಾಸ್ಟೆಲ್ಗೆ ಬಂದು ಜನರನ್ನು ಇಳಿಸಿ, ರಾಮಕೃಷ್ಣ ಕಾಲೇಜಿನ ಮೈದಾನದಲ್ಲಿ ಅಥವಾ ಸಿ. ವಿ. ನಾಯಕ್ ಹಾಲ್ನ ಮೈದಾನದಲ್ಲಿ ಅಥವಾ ಪದುವಾ ಹೈಸ್ಕೂಲ್ ಮೈದಾನದಲ್ಲಿ ಪಾರ್ಕ್ ಮಾಡುವುದು.
4. ಸೆಕ್ಟರ್-3: ಬಂಟ್ವಾಳ-ಕಾಸರಗೋಡು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ತರಹದ ವಾಹನಗಳು ಪಂಪ್ವೆಲ್ ನಿಂದ ಕಂಕನಾಡಿ-ಕರಾವಳಿ ವೃತ್ತ-ಬೆಂದೂರ್ವೆಲ್-ಹಾರ್ಟಿ ಕಲ್ಚರ್ ಜಂಕ್ಷನ್-ಎಸ್.ಸಿ.ಎಸ್-ಬಲ್ಮಠ ಜಂಕ್ಷನ್ ಗೆ ಬಂದು ಜನರನ್ನು ಇಳಿಸಿ ಬೆಂದೂರುವೆಲ್-ಕರಾವಳಿ ವೃತ್ತ - ಕಂಕನಾಡಿ-ವೆಲೆನ್ಸಿಯಾ -ಕೋಟಿ ಚೆನ್ನಯ್ಯ ವೃತ್ತದ ಮೂಲಕ ಬಂದು ವಾಮನ್ ನಾಯಕ್ ಮೈದಾನದಲ್ಲಿ ಅಥವಾ ಮಂಗಳಾದೇವಿ ಮೂಲಕ ಬಂದು ಎಮ್ಮೆಕೆರೆ ಮೈದಾನದಲ್ಲಿ ಪಾರ್ಕ್ ಮಾಡುವುದು ಅಥವಾ ಮಹಾಕಾಳಿಪಡ್ಪು - ಜೆಪ್ಪಿನಮೊಗೆರು ಮೂಲಕ ನಗರದಿಂದ ಹೊರಗೆ ಹೋಗುವುದು.
5. ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣಕ್ಕೆ ಪಂಪ್ವೆಲ್ ಕಡೆಯಿಂದ ಬರುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ನಂತೂರು-ಕೆಪಿಟಿ-ಕುಂಟಿಕಾನ-ಬಾಳಿಗ ಸ್ಟೋರ್ ಮೂಲಕ ಬಸ್ ನಿಲ್ದಾಣಕ್ಕೆ ಬಂದು, ಅದೇ ಮಾರ್ಗದ ಮೂಲಕ ಹೊರ ಹೋಗುವುದು.
6. ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಉಡುಪಿ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಉಳಿದ ಎಲ್ಲಾ ವಾಹನಗಳು ಲೇಡಿಹಿಲ್ - ಗೋಕರ್ಣನಾಥೇಶ್ವರ ದೇವಸ್ಥಾನ ರಸ್ತೆ ಮೂಲಕ ಲೋವರ್ ಕಾರ್ ಸ್ಟ್ರೀಟ್ ಮತ್ತು ಅಜೀಜುದ್ದೀನ್ ರಸ್ತೆಯ ಮೂಲಕ ಬಂದು ಲೇಡಿಗೋಷನ್ - ಹಂಪನಕಟ್ಟೆ -ಕೆ. ಎಸ್. ರಾವ್ ರಸ್ತೆಯ ಮೂಲಕ ಹೊರ ಹೋಗುವುದು.
7. ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ನಂತೂರು, ಪಂಪ್ವೆಲ್ ಕಡೆಗಳಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಉಳಿದ ಎಲ್ಲಾ ವಾಹನಗಳು ಕಂಕನಾಡಿ-ವೆಲೆನ್ಸಿಯಾ-ಮಂಗಳಾದೇವಿ-ರೋಜಾರಿಯೋ-ಹ್ಯಾಮಿಲ್ಟನ್ ಮೂಲಕ ಬಂದು ಲೇಡಿಗೋಷನ್-ಹಂಪನಕಟ್ಟ-ಕೆ.ಎಸ್. ರಾವ್ ರಸ್ತೆಯ ಮೂಲಕ ಹೊರ ಹೋಗುವುದು.
ನಗರ ಸಾರಿಗೆ, ಸರ್ವಿಸ್ ಬಸ್ಸುಗಳು ಮತ್ತು ಇತರ ವಾಹನಗಳಿಗೆ, ಜನದಟ್ಟಣೆ ಮತ್ತು ವಾಹನದಟ್ಟಣೆ ಅನುಸರಿಸಿ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಈ ನಿರ್ಬಂಧನೆಗಳು ಪೊಲೀಸ್ ವಾಹನಗಳು ಹಾಗೂ ಇತರೆ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ.
ಈ ತಾತ್ಕಾಲಿಕ ಅಧಿಸೂಚನೆಯು ದಿನಾಂಕ : 01-03-2015 ರಂದು ಬೆಳಿಗ್ಗೆ 10-00 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ತನಕ ಊರ್ಜಿತದಲ್ಲಿರುತ್ತದೆ.
ಈ ಆದೇಶದನ್ವಯ ಸದ್ರಿ ರಸ್ತೆಯಲ್ಲಿ ಅವಶ್ಯವುಳ್ಳ ಸೂಕ್ತ ಮಾರ್ಕಿಂಗ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸಹಾಯಕ ಪೊಲೀಸು ಆಯುಕ್ತರು, ಮಂಗಳೂರು ಸಂಚಾರ ಉಪ ವಿಭಾಗ, ಮಂಗಳೂರು ನಗರ ಇವರು ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 166 ರ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.
ಈ ಅಧಿಸೂಚನೆಯನ್ನು ದಿನಾಂಕ: 27- 02-2015 ರಂದು ನನ್ನ ಸ್ವ ಹಸ್ತ ಸಹಿ ಹಾಗೂ ಮುದ್ರೆಯೊಂದಿಗೆ ಹೊರಡಿಸಿರುತ್ತೇನೆ.
ಸಹಿ/-
(ಎಸ್. ಮುರುಗನ್)
ಪೊಲೀಸು ಆಯುಕ್ತರು ಹಾಗೂ
ಅಡಿಷನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್
ಮಂಗಳೂರು ನಗರ
No comments:
Post a Comment