ದೈನಂದಿನ ಅಪರಾದ ವರದಿ.
ದಿನಾಂಕ 21.02.2015 ರ 13:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವಿಜಯಲಕ್ಷ್ಮೀ ರವರ ಮಗ 12 ವರ್ಷ ಪ್ರಾಯದ ಚೇತನ್ ಎಂಬವರು ದಿನಾಂಕ 20-02-2015 ರಂದು ಬೆಳಿಗ್ಗೆ 09-00 ಗಂಟೆಗೆ ಮನೆಯಿಂದ ಹೊರಟು ಹೋದವನು ಶಾಲೆಗೂ ಹೋಗದೇ ಮರಳಿ ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ. ಕಾಣೆಯಾದ ಚೇತನ್ ರವರ ಚಹರೆಃ ಗೋದಿ ಮೈಬಣ್ಣ, 4 ಅಡಿ 8 ಇಂಚು ಎತ್ತರ, ಉರುಟು ಮುಖ, ಕನ್ನಡ ತುಳು ಬಾಷೆ ಮಾತನಾಡುತ್ತಿದ್ದು ಪ್ಯಾಂಟ್ ಶರ್ಟ್ ಧರಿಸಿರುತ್ತಾನೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.02.2015 ರಂದು ಪಿರ್ಯಾದುದಾರರಾದ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವ್ ಪಡೀಲ್ ರವರು ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ, ಕಾಯರ್ ಗೋಳಿ ಕ್ರಾಸ್ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಸುಮಾರು 18-00 ಗಂಟೆಗೆ ಕೊಣಾಜೆ ಕಡೆಯಿಂದ ಬರುತ್ತಿದ್ದ ಲಾರಿ ನಂಬ್ರ ಕೆಎ-19-ಬಿ-6979ನೇದನ್ನು ಪರಿಶೀಲಿಸಿಲಾಗಿ ಒಂದನೇ ಆರೋಪಿ ಬಶೀರ್ ಎಂಬವರು ಮರಳನ್ನು ಪಾವೂರಿನ ನೇತ್ರಾವತಿ ನದಿಯಿಂದ ಕಳವು ಮಾಡಿ ಲಾರಿಯಲ್ಲಿ ತುಂಬಿಸಿ ಎರಡನೇ ಆರೋಪಿ ಕುಮಾರ್ ಕಣ್ಣನ್ ನಾಯ್ಡು ಎಂಬವರ ಮುಖಾಂತರ ಕರ್ನಾಟಕ ಸರಕಾರಕ್ಕೆ ಸೂಕ್ತ ರಾಜಧನವನ್ನು ಪಾವತಿಸದೆ ಅನಧೀಕೃತವಾಗಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಅಧಿಕ ಲಾಭ ಪಡೆಯುವ ಉದ್ದೇಶದಿಂಧ ಹೊರ ಜಿಲ್ಲೆಗೆ ಹೊರ ಯಾ ರಾಜ್ಯ ಸಾಗಾಟ ಮಾಡತ್ತಿದ್ದುದ್ದನ್ನು ಪತ್ತೆ ಹಚ್ಚಿ ಮಹಜರು ಮೂಲಕ ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ವರದಿ ಸಮೇತ ಠಾಣೆಗೆ ಹಾಜರುಪಡಿಸಿರುವುದಾಗಿದೆ. ಲಾರಿ ಮತ್ತು ಅದರಲ್ಲಿದ್ದ ಮರಳಿನ ಅಂದಾಜು ಮೌಲ್ಯ 10,25,000/- ಆಗಬಹುದು.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಜೀವ್ ಕುಮಾರ್ ರವರು Guard India Pvt Ltd, ನಲ್ಲಿ ಸುಮಾರು ಒಂದು ತಿಂಗಳಿನಿಂದ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 20-02-2015 ರಂದು ರಾತ್ರಿ ಡ್ಯೂಟಿ ಇದ್ದ ಕಾರಣ ಕುಂಟಿಕಾನ ಬಳಿಯ ಬಾರೇಬೈಲ್ ಬಳಿ ಇರುವ ಕಂಪೆನಿಯವರು ನೀಡಿದ ರೂಮಿನಲ್ಲಿ ಹಗಲು ವಿಶ್ರಾಂತಿ ಪಡೆಯುತ್ತಿದ್ದಾಗ ಸಮಯ ಮದ್ಯಾಹ್ನ 13-00 ಗಂಟೆಗೆ ಕಂಪೆನಿಯ ಸೆಕ್ಯೂರಿಟಿ ಗಾರ್ಡ್ ಗಳಾದ ದಿನೇಶ ಮತ್ತು ಸುಶೀಲ್ ಎಂಬವರು ಅಲ್ಲಿಗೆ ಬಂದು ದಿನೇಶನು ಸೆಕ್ಯೂರಿಟಿ ಡ್ಯೂಟಿಯನ್ನು ಸರಿಯಾಗಿ ಮಾಡದೇ ಇದ್ದ ವಿಚಾರವನ್ನು ಪಿರ್ಯಾದಿಯವರು ತಮ್ಮ ಕಂಪೆನಿಗೆ ತಿಳಿಸಿದ್ದಾರೆ ಎಂಬ ವಿಚಾರದಲ್ಲಿ ಪಿರ್ಯಾದಿಯವರೊಂದಿಗೆ ಗಲಾಟೆ ಮಾಡಿ ಅವಾಚ್ಯ ಶಬ್ದದಿಂದ ಬೈದು ನಿಂದಿಸಿ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ ರೂಮಿನಲ್ಲಿದ್ದ ಚಾಕುವಿನಿಂದ ಪಿರ್ಯಾದಿಯವರ ತಲೆಗೆ ಹಲ್ಲೆ ನಡೆಸಿದ ಪರಿಣಾಮ ತಲೆಯ ಎಡಬಾಗಕ್ಕೆ ಗಾಯವಾಗಿರುವುದ್ದಲ್ಲದೆ, ಜೊತೆಯಲ್ಲಿದ್ದ ಸುಶೀಲ್ ನು ರೂಮಿನಲ್ಲಿದ್ದ ಕಬ್ಬಿಣದ ಕುರ್ಚಿಯಿಂದ ಪಿರ್ಯಾದಿಯವರಿಗೆ ಹಲ್ಲೆ ನಡೆಸಿ ನಂತರ ಇಬ್ಬರೂ ಸೇರಿ ಪಿರ್ಯಾದಿಯವರನ್ನು ಉದ್ದೇಶಿಸಿ ಮುಂದಕ್ಕೆ ಜೀವ ಸಹಿತ ನಿನ್ನನ್ನು ಬದುಕಲು ಬಿಡುವುದಿಲ್ಲವೆಂದು ಜೀವ ಬೆದರಿಕೆಯನ್ನು ಹಾಕಿರುತ್ತಾರೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19.02.2015 ರಂದು ಸಂಜೆ 7.45 ಗಂಟೆಗೆ ಗೂಡ್ಸ್ ಟೆಂಪೋ ನಂಬ್ರ KA19-D-201 ನ್ನು ಅದರ ಚಾಲಕ ನಂತೂರು ಕಡೆಯಿಂದ ಪಂಪ್ ವೆಲ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕರ್ನಾಟಕ ಬ್ಯಾಂಕ್ ಎದುರು ರಸ್ತೆ ದಾಟುತ್ತಿದ್ದ ಫಿರ್ಯಾದುದಾರರಾದ ಶ್ರೀ ರುಕ್ಕಪ್ಪ ಡಿ. ಪೂಜಾರಿ ರವರು ಮತ್ತು ಅವರ ಪತ್ನಿ ವಿದ್ಯಾ ರವರಿಗೆ ಡಿಕ್ಕಿ ಮಾಡಿದ ಪರಿಣಾಮ, ಫಿರ್ಯಾದುದಾರರ ಪತ್ನಿ ವಿದ್ಯಾರವರ ತಲೆಯ ಎಡಭಾಗಕ್ಕೆ, ಹಾಗೂ ತಲೆಯ ಬಲಭಾಗದ ಹಿಂಬಾಗಕ್ಕೆ ರಕ್ತಗಾಯ ಮತ್ತು ಕೈ ಕಾಲುಗಳಿಗೆ ತರಚಿದ ಗಾಯ ಉಂಟಾಗಿ ಪಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ. ಮತ್ತು ಫಿರ್ಯಾದುದಾರರಿಗೆ ಎಡ ಕೈ ಮೊಣಗಂಟಿಗೆ ತರಚಿದ ಗಾಯ ಉಂಟಾಗಿದ್ದರಿಂದ ಯಾವುದೇ ಚಿಕೆತ್ಸೆ ಪಡೆದುಕೊಂಡಿರುವುದಿಲ್ಲ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಟೌನ್ ಹಾಲ್ ಬಳಿ ದಿನಾಂಕ 20.02.2015 ರಂದು 15.05 ಗಂಟೆಗೆ ಕೆ ಎ 19-ಎಎ-4085 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ದಾಮೋದರ್ ಶೆಟ್ಟಿಗಾರ್ ಎಂಬಾತನು ಹಂಪನಕಟ್ಟೆ ಕಡೆಯಿಂದ ಎ ಬಿ ಶೆಟ್ಟಿ ಸರ್ಕಲ್ ಕಡೆಗೆ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಪ್ಪು ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಅಪ್ಪು ರವರ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ರಕ್ತ ಗಾಯ ತಲೆಗೆ ತರಚಿದ ಗಾಯವಾಗಿದ್ದು ,ಗಾಯಾಳು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಾಲಾಗಿರುತ್ತಾರೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-02-2015 ರಂದು ಸಂಜೆ 4-30 ಗಂಟೆಗೆ ಪಿರ್ಯಾದುದಾರರರಾದ ಶ್ರೀ ಮಂಜುನಾಥ ಎಂಬವರು ತಾನು ಚಲಾಯಿಸುತ್ತಿದ್ದ ಬಸ್ ನಂಬ್ರ ಕೆಎ 19 ಸಿ 867 ನೇದರಲ್ಲಿ ಮೂರು ಕಾವೇರಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮಂಗಳೂರು ತಾಲೂಕು ಕೊಂಡೆಮೂಲೆ ಗ್ರಾಮದ ಕಟೀಲು ಚರ್ಚ್ ಬಳಿ ತಲಪಿದಾಗ ಅವರ ಎದುರಿನಿಂದ ಅಂದರೆ ಕಟೀಲು ಕಡೆಯಿಂದ ಮೂರು ಕಾವೇರಿ ಕಡೆಗೆ ಮಿನಿ ಬಸ್ ನಂಬ್ರ ಕೆಎ 06 ಡಿ 0307 ನೇದನ್ನು ಅದರ ಚಾಲಕನು ತನ್ನ ಮಿನಿ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದುದಾರರ ಬಾಬ್ತು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರಿಗೆ ಮತ್ತು ಅವರು ಚಲಾಯಿಸುತ್ತಿದ್ದ ಬಸ್ಸು ಮತ್ತು ಮಿನಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-02-2015 ರಂದು ಮಧ್ಯಾಹ್ನ 12-00 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಸುದೇಶ್ ಕುಮಾರ್ ರವರು ಮಂಗಳೂರು ತಾಲೂಕು ಕೋಟೆಕಾರ್ ಗ್ರಾಮದ ಮಡ್ಯಾರ್ ಎಂಬಲ್ಲಿ ಮಂಗಳೂರಿನಿಂದ ಮಡ್ಯಾರ್ ಕಡೆಗೆ ತನ್ನ ಬಾಬ್ತು ಮೋಟಾರ್ ಮೋಟಾರ್ ಸೈಕಲ್‌ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ್ಗೆ ಕೋಟೆಕಾರ್ ಗ್ರಾಮದ ಪರಾಶಕ್ತಿ ದೇವಸ್ಥಾನದಿಂದ ದಾಟಿ ಮುಂದೆ ಹೋದಂತೆ ಮಾಡೂರು ಪಂಚಮಿ ಗ್ಯಾಸ್ ಏಜೆನ್ಶಿ ಯವರ ಗೋಡಾನಿಗೆ ಹೋಗುವ ತಿರುವಿನ ಬಳಿ ತಲುಪುವಾಗ್ಗೆ ಕೋಟೆಕಾರ್‌ನಿಂಧ ಮಾಡೂರು ಕಡೆಗೆ ಬಂದ ಮೋಟಾರ್ ಸೈಕಲ್‌ನಲ್ಲಿ ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ ಮಾಡೂರು ಕಡೆಯಿಂದ ಕೋಟೆಕಾರ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ಸವಾರನಿಗೆ ಒಮ್ಮೆಲೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದರು, ಫಿರ್ಯಾದಿದಾರರು ನೋಡಲು ಗಾಯಗೊಂಡವರು ಸಂಬಂಧಿ ಹಾಗೂ ನೆರೆಯ ವಾಸಿ ಧನುಷ ಎಂಬುವವರಾಗಿದ್ದು ಧನುಷ್ರವರ ಬಲಗೈ ಮತ್ತು ಬಲಕಾಲಿನ ಮೂಳೆ ಮುರಿತ ಗಾಯ ಎಡಗಾಲಿಗೆ ರಕ್ತಗಾಯ ಉಂಟಾಗಿರುತ್ತದೆ. ಧನುಷ್‌ರವರ ಮೋಟಾರ್ ಸೈಕಲ್ ನಂಬ್ರ ಕೆಎ 19 ಇಎಲ್ 4758 ಆಗಿದ್ದು ಡಿಕ್ಕಿ ಮಾಡಿದ ಮೋಟಾರು ಸೈಕಲ್ ನಂಬ್ರ ಕೆಎ 19 ವ್ಹಿ 2992 ಆಗಿದ್ದು ಈ ಮೋಟಾರ್ ಸೈಕಲ್ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿರುತ್ತಾನೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 1-3-2015 ರಂದು ಮಂಗಳೂರು ನೆಹರೂ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಪ್ರಚಾರಾರ್ಥವಾಗಿ ವಿಶ್ವ ಹಿಂದೂ ಪರಿಷತ್ ರವರು ನೀಡಿರುವ ಬ್ಯಾನರನ್ನು ಅದಕ್ಕೆ ಭಗವದ್ವಜ ಕಟ್ಟಿ ಫಿರ್ಯಾದಿದಾರರಾದ ಹಿಂದೂ ಜಾಗರಣೆ ವೇದಿಕೆ ಪಿಲಾರ್ ಯುನಿಟ್ ನ ಕಾರ್ಯದರ್ಶಿ ರವರಾದ ಶ್ರೀ ಜಿತೇಶ್ ರವರು ಮತ್ತು ಇತರ ಕಾರ್ಯಕರ್ತರು ಸೇರಿಕೊಂಡು ಸೋಮೇಶ್ವರ ಗ್ರಾಮದ ಪಿಲಾರು ದಾರಂದಬಾಗಿಲು ಸಾರ್ವಜನಿಕ ಸ್ಥಳದಲ್ಲಿ ಹಾಕಿದ್ದ ಬ್ಯಾನರನ್ನು ಮತ್ತು ಭಗವದ್ವಜವನ್ನು ದಿನಾಂಕ. 19-2-2015 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ. 20-2-2015 ರಂದು ಬೆಳಿಗ್ಗೆ 07-45 ಗಂಟೆಯ ಮದ್ಯಾವಧಿಯಲ್ಲಿ ಯಾರೋ ದುಷ್ಕರ್ಮಿಗಳು ನಾಶಪಡಿಸಿ ಸುಮಾರು 1,000/- ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.02.2015 ರಂದು ಸಮಯ ಸುಮಾರು ಬೆಳಿಗ್ಗೆ 11.30 ಗಂಟೆಯ ವೇಳೆಗೆ ಫಿರ್ಯಾದಿದಾರರಾದ ಶ್ರೀ ರಮೇಶ್ ಬಿ.ಪಿ. ರವರು ತಮ್ಮ ಮನೆಯಾದ ಪೇರ್ಲಗುರಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ ಇನ್‌ಲ್ಯಾಂಡ್ ಕಟ್ಟಡದ ಎದುರು ಕಡೆ ರಸ್ತೆಯಲ್ಲಿ ರಸ್ತೆ ದಾಟುತ್ತಿರುವಾಗ ಪದವಿನಂಗಡಿ ಕಡೆಯಿಂದ KA-19 G-643 ರ ಕಾರಿನ ಚಾಲಕ ಧನಂಜಯ ಎಂಬುವವರು ತಮ್ಮ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದಿದ್ದರಿಂದ ಬಲ ಕೈಗೆ ಹಾಗೂ ಎದೆಯ ಬಲಭಾಗಕ್ಕೆ ಗುದ್ದಿದ ನೋವು ಉಂಟಾಗಿದ್ದು , ಫಿರ್ಯಾದಿದಾರರನ್ನು ಅಪಘಾತ ಮಾಡಿದ ಸದ್ರಿ ಕಾರಿನ ಚಾಲಕರಾದ ಧನಂಜಯ ಅವರು ಮಂಗಳೂರಿನ ತೇಜಸ್ವಿನ ಆಸ್ಪತ್ರೆಗೆ ದಾಖಲಿಸಿದ್ದು ಫಿರ್ಯಾದಿದಾರರು ಒಳರೋಗಿಯಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
No comments:
Post a Comment