ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ನಡೆದ ಸಭೆ
* * *
ದಿನಾಂಕ 14-02-2015 ರಂದು ಮಂಗಳೂರು ಪೂರ್ವ ಠಾಣಾ ಸರಹದ್ದಿನ ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಾಗೂ ಶ್ರೀರಾಮ ಸೇನೆಯ ಪ್ರಮುಖರನ್ನು ಠಾಣೆಗೆ ಬರಮಾಡಿಕೊಂಡು ದಿನಾಂಕ 01.03.2015 ರಂದು ನೆಹರು ಮೈದಾನದಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಬಗ್ಗೆ ಸಭೆಯನ್ನು ದಿನಾಂಕ 14-02-15 ರಂದು ಸಾಯಂಕಾಲ 5.00 ಗಂಟೆಯಿಂದ 6.00 ಗಂಟೆಯ ವರೆಗೆ ನಡೆಸಲಾಯಿತು ಸಭೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಶರಣ್ ಪಂಪ್ವೆಲ್, ಜಿತೇಂದ್ರ ಕೊಟ್ಟಾರಿ, ಕುಮಾರ್ ಮಾಲೆಮಾರ್, ಪ್ರಮೋದ್ ಪಂಪ್ವೆಲ್, ಶಿವಾನಂದ ಮೆಂಡನ್, ವಿಜಯ್ ಪುತ್ರನ್ ಹಿಂದೂ ಸಂಘಟನೆಯ ನಾಯಕರುಗಳು ಭಾಗವಹಿಸಿರುತ್ತಾರೆ. ಸಭೆಯಲ್ಲಿ ಹಿಂದೂ ಸಮಾಜೋತ್ಸವ ಕಛೇರಿಗೆ ಸಿ.ಸಿ.ಕೆಮಾರಾ ಅಳವಡಿಸಲು, ಕಾರ್ಯಕ್ರಮದ ಭದ್ರತೆಯ ಬಗ್ಗೆಯೂ, ಎಲ್ಲಾ ಸಂದರ್ಭಗಳಲ್ಲಿಯೂ ಶಾಂತಿ ಸಾಮರಸ್ಯ ಕಾಪಾಡುವಂತೆ ತಿಳಿಸಲಾಯಿತು.
ಸಭೆಯ ಫೋಟೋ
No comments:
Post a Comment