Monday, February 9, 2015

Daily Crime Reports : 08-02-2015

ದೈನಂದಿನ ಅಪರಾದ ವರದಿ.
ದಿನಾಂಕ 08.02.201508:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
5
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
2
ಇತರ ಪ್ರಕರಣ
:
0
 
 
 
 
 
 
 
 
 
 
 
 
 
 
 
 
 
 
 
 
 
 

1.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  06.02.2015  ರಂದು  ರಾತ್ರಿ  9:30  ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸುಜಯ್ ಶೆಟ್ಟಿ ರವರು, ಸಹ ಸವಾರ  ಸದಾಶಿವ  ಶೆಟ್ಟಿ  ಎಂಬಾತನನ್ನು  ಮೋಟಾರು  ಸೈಕಲ್ನಂಬ್ರ  ಕೆಎ 21 ಎಲ್‌ 7142  ನೇರಲ್ಲಿ ಸಹ  ಸವಾರನಾಗಿ  ಕುಳ್ಳಿರಿಸಿಕೊಂಡು  ಕಟೀಲಿನಿಂದ ಬೆಳ್ತಂಗಡಿ  ಕಡೆಗೆ ಹೋಗುತ್ತಾ ಮೂಡಬಿದ್ರೆ SN ಪಾಲಿಟೆಕ್ನಿಕ್‌‌  ಕಾಲೇಜಿನ  ಎದುರು  ತಲುಪುವಾಗ  ಎದುರಿನಿಂದ ಅಂದರೆ  ಬೆಳ್ತಂಗಡಿಯಿಂದ ಮೂಡಬಿದ್ರೆ ಕಡೆಗೆ ಬರುತ್ತಿದ್ದ  ಕೆಎ 20 ಕೆ 5786 ನೇ  ಮೋಟಾರು  ಸೈಕಲ್‌  ಸವಾರ ಸಹ ಸವಾರನನ್ನು  ಕುಳ್ಳಿರಿಸಿಕೊಂಡು  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿ  ಪಿರ್ಯಾದಿದಾರರ  ಮೋಟಾರು  ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮ  ಪಿರ್ಯಾದಿ ಹಾಗೂ  ಸಹ  ಸವಾರ  ರಸ್ತೆಗೆ ಬಿದ್ದುಪಿರ್ಯಾದಿಯ  ಬಲಕಾಲಿಗೆ ರಕ್ತಗಾಯ , ಬಲಕೈಯ  ಮಣಿಗಂಟಿಗೆ ಗುದ್ದಿದ ಜಖಂ, ಎಡಕಾಲಿನ  ಮೊಣಗಂಟಿಗೆ ಹಾಗೂ  ಗದ್ದಕ್ಕೆ  ತರಚಿದ ಗಾಯವಾಗಿದ್ದು, ಸಹ ಸವಾರ  ಸದಾಶಿವ  ಶೆಟ್ಟಿಗೆ ಎಡ ಕೈಯ  ತಟ್ಟಿಗೆ, ಎಡ ಕೈಯ  ಹುಬ್ಬಿನ  ಮೇಲೆ, ಬಲ ಕೋಲು ಕಾಲಿಗೆ, ತುಟಿಗೆ ರಕ್ತ ಗಾಯವಾಗಿದ್ದು, ಚಿಕಿತ್ಸೆಯ  ಬಗ್ಗೆ ಮಂಗಳೂರು  ತೇಜಸ್ವೀನಿ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿದ್ದುಅಲ್ಲದೆಅಪಘಾತಪಡಿಸಿದ ಕೆಎ 20 ಕೆ 5786 ನೇ  ಮೋಟಾರು  ಸೈಕಲ್ಸವಾರ  ಹಾಗೂ  ಸವಾರ ಗಾಯಗೊಂಡಿರುವುದಾಗಿದೆ.
 
2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  05.02.2015 ರಂದು  ಪಿರ್ಯಾದಿದಾರರಾದ ಶ್ರೀ ಭೋಜಾ ರವರು ಸಂಜೆ ಕೆಲಸ ಮುಗಿಸಿ  ಮನೆಗೆ ಬಂದಿದ್ದುರಾತ್ರಿ  9:00  ಗಂಟೆಗೆ ಮನೆಯಲ್ಲಿರುವಾಗ  ನೆರೆಮನೆಯ  ಹರೀಶ್‌  ಮತ್ತು  ರವಿ  ಎಂಬವರು  ಪಿರ್ಯಾದಿಯ  ಮನೆಯ  ಅಂಗಳಕ್ಕೆ  ಅಕ್ರಮ  ಪ್ರವೇಶ ಮಾಡಿ ಪಿರ್ಯಾದಿಯನ್ನು ಕರೆದಾಗ  ಪಿರ್ಯಾದಿಯು  ಮನೆಯ  ಅಂಗಳಕ್ಕೆ ಬಂದಿದ್ದುಆ ಸಮಯ  ಹರೀಶ್ನು  ಪಿರ್ಯಾದಿಯನ್ನು  ಉದ್ದೇಶಿಸಿ  "ನೀನು  ಅಡಿಕೆ ಕಳವು  ಮಾಡಿದ ಬಗ್ಗೆ ಎಲ್ಲರಲ್ಲಿ  ಹೇಳಿಕೊಂಡು  ಬಂದಿದ್ದಿಯಾ" ಎಂದು  ಹೇಳಿ  ಕೈಯಲ್ಲಿದ್ದ ಮರದ ಸೊಂಟೆಯಿಂದ ಪಿರ್ಯಾದಿಯ ಎಡಕಾಲಿಗೆ ಹೊಡೆದಿದ್ದುಆ ಸಮಯ ಅಲ್ಲಿದ್ದ ರವಿಯು  ಕೂಡಾ  ಪಿರ್ಯಾದಿಯ  ಕೆನ್ನೆಗೆ ಕೈಯಿಂದ ಹೊಡೆದು ನಂತರ ಇಬ್ಬರು  ಪಿರ್ಯಾದಿಯನ್ನು  ಉದ್ದೇಶಿಸಿ  ಇನ್ನು  ಮುಂದೆ ನಮ್ಮ  ವಿಚಾರದಲ್ಲಿ  ಅಪ ಪ್ರಚಾರ ಮಾಡಿದರೆ ನಿನ್ನನ್ನು  ಜೀವ  ಸಹಿತ  ಬಿಡುವುದಿಲ್ಲ  ಎಂದು  ಜೀವ  ಬೆದರಿಕೆ ಒಡ್ಡಿದ್ದುಪಿರ್ಯಾದಿಯು  ದಿನಾಂಕ 06.02.2015 ರಂದು ಮೂಡಬಿದ್ರೆ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ  ಪಡೆದು  ಹೆಚ್ಚಿನ  ಚಿಕಿತ್ಸೆ  ಬಗ್ಗೆ ಮಂಗಳೂರು  ವೆನ್ಲಾಕ್ಆಸ್ಪತ್ರೆಗೆ ದಾಖಲಾಗಿರುವುದಾಗಿದೆಆರೋಪಿಗಳು  ಅಡಿಕೆ ಕಳವು  ಮಾಡಿರುವುದಾಗಿ ಪಿರ್ಯಾದಿಯು  ಎಲ್ಲರಲ್ಲಿ  ಹೇಳಿ ಅಪ ಪ್ರಚಾರ ಮಾಡಿದ ಬಗ್ಗೆ ಕೋಪಗೊಂಡ  ಆರೋಪಿಗಳು    ಕೃತ್ಯ  ಮಾಡಿರುವುದಾಗಿದೆ.   
 
3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-02-2015 ರಂದು ರಾತ್ರಿ 09-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗೌರಿಶಂಕರ್ ಪಾಟೀಲ್ ರವರು ತನ್ನ ಬಾಬ್ತು AP- 16 TY- 8177 ನೇ  ಲಾರಿಯನ್ನು ಬೈಕಂಪಾಡಿಯಿಂದ ಹೊರಟು ಧಾರವಾಡದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸುರತ್ಕಲ್ ತಲುಪಿದಾಗ ಕಾರ್ಪೋರೇಶನ್ ಕಟ್ಟಡದ ಎದುರಿನ ರಾ.ಹೆ  66 ರಲ್ಲಿ ತನ್ನ ಲಾರಿ ಕೆಟ್ಟುಹೋದ ಕಾರಣಕ್ಕಾಗಿ ರಿಪೇರಿಗಾಗಿ ರಸ್ತೆಯ ತೀರಾ ಎಡಬದಿಗೆ ನಿಲ್ಲಿಸಿ, ಲಾರಿ ನಿಂತ ಬಗ್ಗೆ ಸಿಗ್ನಲ್ ಲೈಟ್ ಹಾಕಿ ರಿಪೇರಿ ಮಾಡಿಸುತ್ತಿರುವಾಗ ಹಿಂದಿನಿಂದ ಅಂದರೆ ಸುರತ್ಕಲ್ ಕಡೆಯಿಂದ KA- 19 EJ- 0481 ನೇ ದ್ವಿಚಕ್ರ ವಾಹನವನ್ನು ಅದರ ಸವಾರರಾದ ಫೈಜಲ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಿಪೇರಿಗಾಗಿ ನಿಂತಿದ್ದರೂ, ಗಮನಿಸದೆ ಲಾರಿಯ ಹಿಂದುಗಡೆ ಬಾಡಿಗೆ ಡಿಕ್ಕಿಹೊಡೆದ ಪರಿಣಾಮ ದ್ವಿಚಕ್ರ ವಾಹನವು ಲಾರಿಯ ಬಾಡಿಯ ಅಡಿ ಭಾಗಕ್ಕೆ ಹೊಕ್ಕು ದ್ವಿಚಕ್ರ ವಾಹನವು ಜಖಂಗೊಂಡು ಸವಾರನು ತನ್ನ ತಲೆಗೆ, ಹಣೆಗೆ ಮತ್ತು ಕೈಕಾಲಿಗೆ ಗಂಭೀರ ರೀತಿಯಲ್ಲಿ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
 
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03/02/2015 ರಂದು ಪಿರ್ಯಾದಿದಾರರಾದ ಶ್ರೀಮತಿ ಫೆಲ್ಸಿ ಪಿಂಟೋ ರವರು ತನ್ನ ತಂಗಿ ತೆರೆಸಾ ಪಿಂಟೋ ರವರೊಂದಿಗೆ ಬಂಟ್ವಾಳದಲ್ಲಿನ ತನ್ನ ತಂಗಿಯ ಮನೆಗೆ ಹೋಗಿದ್ದು ದಿನಾಂಕ:06/02/2015 ರಂದು ಬಂಟ್ವಾಳದಿಂದ  ತನ್ನ ತಂಗಿಯನ್ನು ಕರೆದುಕೊಂಡು ಸ್ಟೇಟ್ ಬ್ಯಾಂಕ್ ನಲ್ಲಿ ಬಸ್ಸಿನಿಂದ ಇಳಿದು ತನ್ನ ತಂಗಿಯೊಂದಿಗೆ ಎಕ್ಕಾರಿಗೆ ಬರುವಾಗ ಬಸ್ಸನ್ನು ಸಂಜೆ 06-00 ಗಂಟೆಗೆ ಹತ್ತಿದ್ದು, ಫಿರ್ಯಾದಿದಾರರಿಗೆ ಬಾಯಾರಿಕೆಯಾಗಿ ಸದ್ರಿಯವರು ಬಸ್ಸಿನಿಂದ ಇಳಿದು ಅಂಗಡಿಗೆ ಹೋಗಿ ಜ್ಯೂಸ್ ಬಾಟಲಿ ತೆಗೆದುಕೊಂಡು ಬಸ್ಸು ನಿಂತ ಸ್ಥಳಕ್ಕೆ ಬಂದಾಗ ಬಸ್ಸು ಅಲ್ಲಿಂದ ಹೋಗಿದ್ದು, ಫಿರ್ಯಾದಿದಾರರು ಇನ್ನೊಂದು ಬಸ್ಸಿನಲ್ಲಿ ತನ್ನ ಮನೆಗೆ ಬಂದಾಗ ತನ್ನ ತಂಗಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದವರ ಚಹರೆಯ ವಿವರ ಈ ಕೆಳಗಿನಂತಿದೆ 1)ಹೆಸರು-ತೆರೆಸಾ ಪಿಂಟೋ ಪ್ರಾಯ- 58 ವರ್ಷ 2)ಎತ್ತರ-5 ಅಡಿ 2 ಇಂಚು, ಸಾದಾರಣ ಮೈಕಟ್ಟು, 3)ಬಣ್ಣ-ಗೋದಿ ಮೈಬಣ್ಣ, 4)ಧರಿಸಿರುವ ಬಟ್ಟೆ-ಕಂದು ಬಣ್ಣದ ಗೌನ್, 5)ಮಾತನಾಡುವ ಬಾಷೆ - ತುಳು, ಕನ್ನಡ.ಕ್ರಿಶ್ಚಿಯನ್, 6)ಮಾನಸಿಕ ಅಸ್ವಸ್ಥಳು.
 
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-02-2015 ರಂದು ಪಿರ್ಯಾದುದಾರರಾದ ಶ್ರೀ ಸಿ.ಹೆಚ್. ಮುಸ್ತಾಫಾ ರವರು ಮಂಗಳೂರು ತಾಲೂಕು, ತಪಲಾಡಿ ಗ್ರಾಮದ ಶ್ರೀ. ದುರ್ಗಾ ಟ್ರಾನ್ಸ್ಪೋರ್ಟ್ ಕಛೇರಿ ಬಳಿ ರಸ್ತೆ ಬದಿಯಲ್ಲಿ 13-30 ಗಂಟೆ ಸಮಯಕ್ಕೆ ನಿಂತಿದ್ದಾಗ ಮಂಗಳೂರು ಕಡೆಯಿಂದ ಮಂಜೇಶ್ವರ ಕಡೆಗೆ KA 19 K 6170 ನೇ ನಂಬ್ರದ ದ್ವಿಚಕ್ರವಾಹನವನ್ನು ಅದರ ಸವಾರ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಹೊಡೆದಿರುತ್ತಾನೆ. ಈ ಅಪಘಾತದಿಂದ ಪಿರ್ಯಾದುದಾರರ ಎಡಕಾಲಿನ ಕೋಲು ಕಾಲಿಗೆ ತಲೆಯ ಹಿಂಬದಿ ಕೈಯ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ. ಗಾಯಾಳು ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
 
6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅಬ್ದುಲ್ ರಹೀಂ ರವರು ಮಂಗಳೂರಿನ ಆಸುಪಾಸಿನಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಫಿರ್ಯಾದಿದಾರರ ತಮ್ಮನಾದ ಮಹಮ್ಮದ್ ಷರೀಫ್ ತಂದೆ: ಹುಸೈನಬ್ಬ ವಾಸ: ಡೋರ್ ನಂಬ್ರ 8-13-935 ಸಾಜ್ನಿ ಕಂಪೌಂಡ್, ಕುದ್ರೋಳಿ ಮಂಗಳೂರು ಈತನು ಪ್ರಸ್ತುತ  ಕುದ್ರೋಳಿಯ ಬಾಡಿಗೆ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು ಧಕ್ಕೆಯಲ್ಲಿ ಮೀನಿನ ವ್ಯಾಪಾರ ಮಾಡಿಕೊಂಡಿರುವುದಾಗಿದೆ, ಈತನು ದಿನಾಂಕ 06.02.2015 ರಂದು ಸಂಜೆ ಸುಮಾರು 4.30 ಗಂಟೆ ಸಮಯಕ್ಕೆ ಗ್ಯಾಸ್ ನ್ನು ತರುತ್ತೇನೆಂದು ತನ್ನ ಹೆಂಡತಿಯಲ್ಲಿ ಹೇಳಿ ಕುದ್ರೋಳಿಯ ಬಾಡಿಗೆ ಮನೆಯಿಂದ ಹೋಗಿದ್ದು. ವಾಪಾಸ್ಸು ಮನೆಗೆ ಬರಲಿಲ್ಲ ಎಂಬುದಾಗಿ ತಮ್ಮನ ಹೆಂಡತಿ ತಿಳಿಸಿದ ಮೇರೆಗೆ ತಕ್ಷಣ ಪಿರ್ಯಾದಿದಾರರು ಮನೆಗೆ ಹೋಗಿ ವಿಚಾರ ತಿಳಿದು ಸ್ನೇಹಿತರಲ್ಲಿ ವಿಚಾರಿಸಿ ಮತ್ತು ಕುದ್ರೋಳಿ, ಕಂಡತ್ ಪಳ್ಳಿ, ಬಂದರು, ಮೊದಲಾದ ಕಡೆಗಳಲ್ಲಿ ಹುಡುಕಿದರೂ ಇಷ್ಟರವರೆಗೆ ಪತ್ತೆಯಾಗಿರುವುದಿಲ್ಲ. ಕಾಣೆಯಾದ ವ್ಯಕ್ತಿಯ ಚಹರೆ: ಹೆಸರು: ಮಹಮ್ಮದ್ ಷರೀಫ್, ಎತ್ತರ 5'6" ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ತೆಳು ಗಡ್ಡ, ವಿದ್ಯಾಭ್ಯಾಸ: 5 ನೇ ತರಗತಿ, ಕನ್ನಡ, ತುಳು, ಉರ್ದು, ಬ್ಯಾರಿ  ಭಾಷೆ ಮಾತನಾಡುತ್ತಾನೆ. ಕಪ್ಪು ಮತ್ತು ಬಿಳಿ ಗೆರೆಗಳಿರುವ ಟೀಷರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
 
7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮಂಜುನಾಥ ಸಾನು ರವರು ಭವಂತಿ ರಸ್ತೆಯಲ್ಲಿ ಗುಲಾಬ್ ಜ್ಯುವೆಲ್ಲರಿ ಎಂಬ ಹೆಸರಿನ ಜ್ಯುವೆಲ್ಲರಿ ಅಂಗಡಿಯನ್ನು ಸುಮಾರು 10 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದು, ಪ್ರತಿನಿತ್ಯ ಬೆಳಿಗ್ಗೆ 10-15 ಗಂಟೆಗೆ ಅಂಗಡಿ ತೆರೆದು ವ್ಯವಹಾರ ಮಾಡುತ್ತಾ ಮದ್ಯಾಹ್ನ ಸುಮಾರು 2-00 ಗಂಟೆಗೆ ಅಂಗಡಿ ಬಂದ್ ಮಾಡಿ ಊಟಕ್ಕೆ ಹೋಗಿ ಸಂಜೆ ಸುಮಾರು 4-00 ಗಂಟೆಗೆ ವಾಪಾಸು ಅಂಗಡಿ ತೆರೆದು ವ್ಯವಹಾರ ಮಾಡುವುದು ವಾಡಿಕೆಯಾಗಿದೆ. ದಿನಾಂಕ 07-02-2015 ರಂದು ಬೆಳಿಗ್ಗೆ ಅಂಗಡಿ ತೆರೆದು ವ್ಯಾಪಾರ ಮಾಡಿ ಮದ್ಯಾಹ್ನ 2-00 ಗಂಟೆಗೆ ಚಿನ್ನಾಭರಣಗಳನ್ನು ಶೋಕೇಸ್  ಡಿಸ್ಪ್ಲೇ ನಲ್ಲಿ  ಹಾಗೇ ಬಿಟ್ಟು   ಅಂಗಡಿ ಬಂದ್ ಮಾಡಿ ಊಟಕ್ಕೆ ಮನೆಗೆ ಹೋಗಿದ್ದು, ಸಂಜೆ ಸುಮಾರು 4-15 ಗಂಟೆಗೆ ವಾಪಾಸು ಅಂಗಡಿಯ ಬೀಗ ತೆರೆದು ನೋಡಿದಾಗ ಅಂಗಡಿಯೊಳಗಿದ್ದ ಶೋಕೇಸ್ನ ಎಲ್ಲಾ ಡಿಸ್ ಪ್ಲೇ ನಲ್ಲಿ ಇಟ್ಟಿದ್ದ ವಿವಿಧ ರೀತಿಯ ಎಲ್ಲಾ ಆಭರಣಗಳು ಕಳವು ಆಗಿದ್ದು, ಅಂಗಡಿಯೊಳಗೆ ಪರಿಶೀಲಿಸಲಾಗಿ ಚಿನ್ನಾಭರಣಗಳನ್ನು ಇಡುವ ಲಾಕರ್ನ ಹಿಂಭಾಗದ ಕಲ್ಲು ಮಣ್ಣಿನ  ಗೋಡೆಯಲ್ಲಿ  ರಂದ್ರ ಕೊರೆದು, ಶೋಕೇಶ್ನ ಡಿಸ್ಪ್ಲೇ ನಲ್ಲಿ ವ್ಯಾಪಾರದ ಸಲುವಾಗಿ ಇಟ್ಟಿರುವ ವಿವಿಧ ರೀತಿಯ ಸುಮಾರು 40,00,000/- ಮೌಲ್ಯದಕೆ.ಜೆ 800 ಗ್ರಾಂ ತೂಕದ 916 ಹಾಲ್ ಮಾರ್ಕಿನ ಚಿನ್ನಾಭರಣಗಳನ್ನು ಹಾಗೂ ವ್ಯಾಪಾರವಾದ ರೂ. 3000/- ವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಮದ್ಯಾಹ್ನ ಅಂಗಡಿ ಬಂದ್ ಮಾಡಿ ಹೋಗುವ ಸಮಯ ಅಂಗಡಿಯೊಳಗಿರುವ ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ನಿಲುಗಡೆ ಮಾಡಿ ಹೋಗಿದ್ದು, ಇದರೊಂದಿಗೆ ಸಿ.ಸಿ ಕ್ಯಾಮರಾ ಕೂಡಾ ಬಂದ್ ಆಗಿರುತ್ತದೆ.
 
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಬದ್ರುನ್ನೀಸಾ ರವರು ಸಬೀನಾ ಬಾನು ಎಂಬವರ ಜೊತೆಯಲ್ಲಿ ಎಂದಿನಂತೆ ಕೆಲಸಕ್ಕೆ ಹೋಗುವರೇ ದಿನಾಂಕ 07.02.2015 ರಂದು ಬೆಳಿಗ್ಗೆ ಸುಮಾರು 8.15 ಗಂಟೆಗೆ ಬಜಾಲನ ಕರಿಬೊಟ್ಟು  ಎಂಬಲ್ಲಿ ಕೆಎ-19-ಸಿ-2109 ನೇ ಬಸ್ಸಿಗೆ  ಸಬೀನಾ ಬಾನು  ಎಂಬವರು ಮೊದಲಿಗೆ ಹತ್ತಿ ನಂತರ ಪಿರ್ಯಾದಿದಾರರು ಹತ್ತುತ್ತಿದ್ದಾಗ ಬಸ್ಸ್ ನ  ಚಾಲಕ ನಿರ್ವಾಹಕನ ಸೂಚನೆಯನ್ನು ಕಾಯದೆ ಒಮ್ಮೇಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಸಬೀನಾ ಬಾನು ಮತ್ತು ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದುದರಿಂದ ಸಬೀನಾರವರ ತಲೆಯ ಹಿಂಬಾಗಕ್ಕೆ ಗುದ್ದಿದ ನೋವು, ಹಾಗೂ ಫಿರ್ಯಾದಿದಾರರಿಗೆ ತಲೆಗೆ ರಕ್ತಗಾಯ, ಬಲಕೈಗೆ ರಕ್ತಗಾಯ ಉಂಟಾಗಿರುತ್ತದೆ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಬಸ್ಸನ ನಿರ್ವಾಹಕ ಮತ್ತು ಅಲ್ಲಿನ ಜನರು ಒಂದು ಅಟೋ ರಿಕ್ಷಾದಲ್ಲಿ ಹೈಲ್ಯಾಂಡ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈಧ್ಯಾದಿಕಾರಿಯವರು ಪರಿಕ್ಷೀಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.
 
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.02.2015 ರಂದು ಪಿರ್ಯಾದುದಾರರಾದ ಶ್ರೀ ಸಮೀರ್ ರವರು ತನ್ನ ಗೆಳೆಯ ರಹೀಮ್ಅಲಿ ಮೊಹಿದಿನ್ರವರ ಬಾಪ್ತು ನೋಂಧಣಿ ಸಂಖ್ಯೆ ಆಗದ ಹೊಸ ಬೈಕ್ ( ENGINE NO: PDZCED 92884 CHASIS NO:MD2AZZFZIECD96928) ನಲ್ಲಿ ರಹೀಮ್ಅಲಿ ಮೊಹಿದಿನ್ರವರನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಉಳ್ಳಾಲ ಕಡೆಗೆ ರಾ.ಹೆ. ರಸ್ತೆಯಲ್ಲಿ ಚಲಾಯಿಸುತ್ತಾ ಸದ್ರಿ ಬೈಕ್ಬೆಳಗ್ಗೆ 11.00 ಗಂಟೆಗೆ ಜಪ್ಪಿನಮೊಗರು ಗೀತಾ ಗ್ಯಾರೆಜ್ ಎದುರುಗಡೆ ತಲುಪಿದಾಗ  KA-14-TA-2937 ನೇ ಟ್ರ್ಯಾಕ್ಟರ್ಚಾಲಕನು ಮಂಗಳೂರು ಕಡೆಯಿಂದ ಉಳ್ಳಾಲ ಕಡೆಗೆ ಅತಿ ವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದುದಾರರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಹಿಂಬದಿ ಸವಾರ ಬೈಕ್ಸಮೆತ ರಸ್ತೆಗೆ ಮಗುಚಿ ಬಿದ್ದು ಆ ಪರಿಣಾಮ ಪಿರ್ಯಾದುದಾರರ ಕೈ ಕಾಲುಗಳಿಗೆ ಗುದ್ದಿದ ನೋವು ಹಾಗು ಹಿಂಬದಿ ಸವಾರರ ಎಡಕಾಲಿನ ಮೊಣಗಂಟಿಗೆ ಗುದ್ದಿದ ನೋವು, ಪಾದಕ್ಕೆ ತರಚಿದ ಗಾಯ ಮತ್ತು ಎಡಕೆನ್ನೆಗೆ ತರಚಿದ ಗಾಯ ಆಗಿದ್ದು ಗಾಯಗೊಂಡ ಹಿಂಬದಿ ಸವಾರ ಇಂಡಿಯಾನ ಆಸ್ಪತ್ರಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

No comments:

Post a Comment