Monday, February 16, 2015

MEETING :

ಮೂಡುಬಿದ್ರೆ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿನ ಬ್ಯಾಂಕ್ ಭದ್ರತೆ ಬಗ್ಗೆ  ನಡೆಸಿದ ಸಭೆ
                                                    * * *

         ದಿನಾಂಕ 13-02-15 ರಂದು 16.30 ಗಂಟೆಗೆ  ಮೂಡುಬಿದ್ರೆ ಸಹಕಾರಿ ಬ್ಯಾಂಕ್ ನ ಮಿಟಿಂಗ್ ಹಾಲಿನಲ್ಲಿ ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಲ್ಲಾ ಬ್ಯಾಂಕ್ ಮ್ಯಾನೆಜರ್ ಗಳ ಸಭೆ ಯನ್ನು ಮೂಡುಬಿದ್ರೆ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತ್ರತ್ವದಲ್ಲಿ  ನಡೆಸಿದ್ದು, ಈ ಸಭೆಯಲ್ಲಿ  ಸುಮಾರು 18 ಬ್ಯಾಂಕಿನ ಬ್ಯಾಂಕ್ ಮ್ಯಾನೆಜರ್ /ಅಧಿಕಾರಿಗಳು ಹಾಜರಿದ್ದರು. ಈ ಸಭೆಯಲ್ಲಿ ಹಾಜರಿದ್ದವರಲ್ಲರಿಗೂ ಸ್ವಾಗತಿಸಿ ಬ್ಯಾಂಕ್ ಗಳ ಭದ್ರತೆ  ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಎಲ್ಲಾ ಬ್ಯಾಂಕ್ ನವರಿಗೂ ಕಟ್ಟಡ ಭದ್ರತೆ ಬಗ್ಗೆ ಸೆಕ್ಯೂರಿಟ್ ಗಾರ್ಡ ನೇಮಿಸಲು ಮತ್ತು ಸಿಸಿ ಟಿವಿ ಅಳವಡಿಸಲು  ಹಾಗೂ ಸೈರನ್ ಅಳವಡಿಸಲು ಸೂಚಿಸಲಾಯಿತು. ಅಲ್ಲದೇ ಡಬಲ್ ಲಾಕರ್ ವ್ಯವಸ್ಥೆ ಹಾಗೂ ತುರ್ತು ಸಂದರ್ಭ ಬೇಕಾಗುವ ವ್ಯವ್ಯಸ್ಥೆಗಳ ಬಗ್ಗೆ ಚರ್ಚಿಸಲಾಯಿತು. ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಯಾವುದೇ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಕೋರಿಕೊಳ್ಳಲಾಗಿದೆ.

                   ಸಭೆಯ ಪೋಟೋ



No comments:

Post a Comment