Monday, February 23, 2015

MEETING :

ಉರ್ವ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ನಡೆದ ಮೊಹಲ್ಲಾ ಸಭೆಯ ಮಾಹಿತಿ ವಿವರ

* * *

 

ದಿನಾಂಕ 19-02-15 ರಂದು 18.00 ಗಂಟೆಗೆ  ಉರ್ವ ಪೊಲೀಸ್ ಠಾಣಾ  ವ್ಯಾಪ್ತಿಯ  ಚಿಲಿಂಬಿ ಗುಡ್ಡೆಯ ಶ್ರೀರಾಮಾಂಜನೇಯ ಯುವಕ ಮಂಡಲದಲ್ಲಿ ಮೊಹಲ್ಲಾ ಸಭೆಯನ್ನು ನಡೆಸಿ, ಈ ಸಭೆಗೆ ಯುವಕ ಮಂಡಲದ ಸದಸ್ಯರು ಹಾಗೂ ಗ್ರಾಮಸ್ತರು ಹಾಜರಿದ್ದು ಈ ಸಭೆಯನ್ನು  ಉರ್ವ ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಕರುಣಾಕರ್ ರವರ  ನೇತ್ರತ್ವದಲ್ಲಿ ನಡೆಸಿದ್ದು, ಈ ಸಭೆಯಲ್ಲಿ ಸದಸ್ಯರು ಹಾಗೂ ಗ್ರಾಮಸ್ತರು ಸೇರಿದಂತೆ 29  ಜನರು ಹಾಜರಿದ್ದರು. ಈ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ರಾತ್ರಿ ವೇಳೆಯಲ್ಲಿ ಪೋಲಿ ಹುಡುಗರ ಸಮಸ್ಯೆ, ಬೀದಿ ದೀಪದ ಸಮಸ್ಯೆ ಅಲ್ಲದೆ ಇತ್ತಿಚಿನ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ದರೋಡೆ, ಕಳ್ಳತನದ ಬಗ್ಗೆ ಚರ್ಚಿಸಲಾಯಿತು. ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಯಾವುದೇ ಗಾಳಿ ಮಾತಿಗೆ ಕಿವಿ ಕೊಡದೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಕೋರಿಕೊಳ್ಳಲಾಗಿದೆ.

 

ಸಭೆಯ ಪೋಟೋ

 

No comments:

Post a Comment