ದೈನಂದಿನ ಅಪರಾದ ವರದಿ.
ದಿನಾಂಕ 25.02.2015 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
1
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
1
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
3
|
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-02-2015ರಂದು ಪಿರ್ಯಾದಿದಾರರ ಮಗಳು 26 ವರ್ಷದ ಪ್ರಾಯದವಳು ಮನೆಯಿಂದ ಹೊರಹೋದಾಕೆ ವಾಪಸ್ಸು ಮನೆಗೆ ಬಾರದೇ ಇದ್ದು, ಈ ಬಗ್ಗೆ ದಿನಾಂಕ 20-02-2015ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಠಾಣಾಧಿಕಾರಿಯವರಿಗೆ ದೂರು ನೀಡಿದ್ದು, ಈ ಬಗ್ಗೆ ಸದ್ರಿ ಠಾಣಾಧಿಕಾರಿಯವರು ಆಕೆಯನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಆಕೆ ತಾನು ಓರ್ವನೊಡನೆ ವಿವಾಹವಾಗುವುದಾಗಿ ತಿಳಿಸಿ ಮನೆಗೆ ಬರುವುದಾಗಿ ಹೇಳಿ ಹೋದಾಗ ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ.
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಮೀರ್ ಹನಮಂತ್ ಅಶ್ರೀಟ್ ರವರ ಮನೆಯಾದ ಮಂಗಳೂರು ತಾಲೂಕು ಕೋಡಿಕಲ್ ಆಲಗುಡ್ಡೆ ಜಾನೇಟ್ ಕಾಟೇಜ್ ಎಂಬಲ್ಲಿ ಯಾರೋ ಅಪರಿಚಿತರು ದಿನಾಂಕ 22-02-2015 ರಂದು ಪಿರ್ಯಾದಿಯ ಮನೆಯ ಹೊರಗಡೆ ಖಾಲಿ ಜಾಗದಲ್ಲಿ ಇಟ್ಟಿದ್ದ ಹಳೆಯ ಟಯರಿಗೆ ಬೆಂಕಿ ಹಚ್ಚಿ ನಷ್ಟ ಉಂಟು ಮಾಡಿದಲ್ಲದೇ, ಈ ಮೊದಲು ಕೂಡಾ ಪಿರ್ಯಾದಿಗೆ ನೌಕರಿ ಕೊಡುವ ವಿಚಾರದಲ್ಲಿ ಮೋಸ ಮಾಡಿದ್ದಿರಿ ಎಂದು ಆರೋಪಿಸಿ ಮೊಬೈಲ್ ಮೂಲಕ ಜೀವ ಬೆದರಿಕೆ ಹಾಕಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಫಾ. ಇಗ್ನೇಷಿಯಸ್ ಡಿ'ಕೊಸ್ತಾ ರವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ, ಸ್ವೀವನ್ ಡಿಸೋಜ ಎಂಬಾತನು ದಿನಾಂಕ 03.02.2015 ರಂದು ಪಿರ್ಯಾದಿಯರ ಮನೆಯಲ್ಲಿ ಸಂಜೆ ಸುಮಾರು 4:00 ಗಂಟೆಗೆ ಬೈಕ್‌ನ ಕೀಯನ್ನು ತೆಗೆದುಕೊಂಡು ಹೋಗ ಬೇಡ ಎಂದು ತಿಳಿಸಿದ್ದರೂ ಆತನು ಕೀಯನ್ನು ತೆಗೆದುಕೊಂಡಾಗ ಪಿರ್ಯಾದಿಯವರು ಆತನಿಂದ ಕೀಯನ್ನು ಪಡೆದುಕೊಳ್ಳಲು ಬಂದು ಕೈ ಹಿಡಿದಾಗ, ಆತನು ಕೈ ಕೊಸರಿಕೊಂಡು, ಪಿರ್ಯಾದಿಯನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದದಿಂದ ಬೈದು ಕೈಯಿಂದ ತಳ್ಳಿದ್ದು, ಪಿರ್ಯಾದಿಯವರು ನೆಲಕ್ಕೆ ಬಿದ್ದ ಪರಿಣಾಮ ಸೊಂಟಕ್ಕೆ ಗುದ್ದಿದ ನೋವು, ಎಡಕಾಲಿನ ಮೊಣಗಂಟಿಗೆ ನೋವು ಅಗಿದ್ದು, ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-02-2015 ರಂದು ರಾತ್ರಿ 8-00 ಗಂಟೆಗೆ ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಗಂಜೀಮಠ ಕೈಗಾರಿಕಾ ಪ್ರದೇಶದ ರಸ್ತೆಯ ಯುನಿಟೆಕ್ ವರ್ಕ ಶಾಫಿನ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಸಂತ ಪುಜಾರಿ ಎಂಬವರು ಅವರ ಬಾಬ್ತು ಕೆಎ 19 ಎಕ್ಸ್ 9581 ರ ಪಲ್ಸಾರ್ ಬೈಕಿನಲ್ಲಿ ಮಳಲಿ ಕ್ರಾಸ್ ನಿಂದ ಗಂಜೀಮಠ ಪೇಟೆಗೆ ಚಲಾಯಿಸಿಕೊಂಡು ಹೋಗುವಾಗ ಎದುರುಗಡೆಯಿಂದ ಅಂದರೆ ಗಂಜೀಮಠ ಪೇಟೆಯಿಂದ ಮಳಲಿ ಕ್ರಾಸ್ ಕಡೆಯಿಂದ ಬೈಕ್ ನಂ KA-19-EM-4340 ಅದರ ಸವಾರನು ಅತಿವೇಗ ಹಾಗೂ ಆಜಾಗರೂಕತೆಯಿಂದ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದುದರ ಪರಿಣಾಮ ಪಿರ್ಯಾಧಿದಾರರಾದ ಶ್ರೀ ಶೇಖರ್ ಪೂಜಾರಿ ರವರ ತಮ್ಮನಾದ ವಸಂತ ಪೂಜಾರಿ ಎಂಬವರಿಗೆ ತಲೆಯ ಮುಂಭಾಗಕ್ಕೆ ತೀವೃ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ. ಫಝ್ಲತ್ಭಾನು ಎಂಬವರಿಗೆ ದಿನಾಂಕ. 15-9-2011 ರಂದು ಮಂಗಳೂರು ಅಶೋಕ್ನಗರ ಹೊಯಿಗೆ ಬೈಲ್ ವಾಸಿ ಸಾಧಿಕ್.ಎಚ್.ಎ ಎಂಬವರ ಜೊತೆ ತೊಕ್ಕೊಟು ಕ್ಲಿಕ್ ಹಾಲ್‌ನಲ್ಲಿ ಗುರುಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಫಿರ್ಯಾದಿಯ ಮನೆಯವರು ಮದುಮಗನಿಗೆ ಒಂದೂವರೆ ಲಕ್ಷ ನಗದು ಹಣ ಮತ್ತು 10 ಪವನ್ ಚಿನ್ನ ಕೊಟ್ಟಿರುತ್ತಾರೆ. ಮದುವೆಯಾಗಿ ಎರಡು ತಿಂಗಳ ನಂತರ ಫಿರ್ಯದಿದಾರಳಿಗೆ ಅಡುಗೆ ಮಾಡಲು ಬರುತ್ತಿಲ್ಲ ಎಂದು ಆಕೆಯ ಗಂಡ ಬೈಯ್ದು ಕಿರಿಕಿರಿ ಮಾಡಿ ಆಕೆಯನ್ನು ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದರು. ನಂತರ ಈ ವಿಚಾರದಲ್ಲಿ ಎರಡೂ ಕಡೆಯವರ ಹಿರಿಯವರು ರಾಜಿ ಮಾತುಕತೆ ನಡೆಸಿ ನಂತರ ಫಿರ್ಯಾದಿದಾರರನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದು, ನಂತರ ಒಂದು ದಿನ ಫಿರ್ಯಾದಿದಾರರ ಗಂಡ ಸಾಧಿಕ್.ಎಚ್.ಎ. ಈತನು ಫಿರ್ಯಾದಿದಾರರಿಗೆ ಬೆಲ್ಟ್ನಲ್ಲಿ ಹೊಡೆದು ಉಂಟಾದ ಗಾಯಕ್ಕೆ ಮನೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ಫಿರ್ಯಾದಿ ಮತ್ತು ಆಕೆಯ ಗಂಡ ಕೊಂಚಾಡಿ ಬಳಿಕ ಮಂಜನಾಡಿಯಲ್ಲಿ ಮನೆ ಮಾಡಿ ವಾಸವಾಗಿದ್ದರು. ಹೀಗೇ ಫಿರ್ಯಾದಿಯ ಗಂಡ ಫಿರ್ಯಾದಿಗೆ ಆಗಾಗ ಕಿರಿಕಿರಿ ಮಾಡುತ್ತಿದ್ದರು. ಫಿರ್ಯಾದಿಯ ಸಂಸಾರ ಜೀವನದಲ್ಲಿ ಉಂಟಾದ ವಿರಸದ ಕುರಿತು ಅವರ ಹಿರಿಯವರು ಕೆಲವು ಬಾರಿ ರಾಜಿ ಮಾತುಕತೆ ನಡೆಸಿ ಸರಿಪಡಿಸಿದ್ದರೂ. ಆಕೆಯ ಗಂಡ ಫಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಕೊಡುತ್ತಿದ್ದರು. ಮತ್ತು ಆಕೆಯ ಗಂಡ ನಂತರ ಶಾಂತಿಭಾಗ್ ಎಂಬಲ್ಲಿ ಬಾಡಿಗೆ ಮನೆ ಮಾಡಿ ಆಕೆಯನ್ನು ಅಲ್ಲಿಗೆ ಕರೆಸಿ ಸಂಸಾರ ಜೀವನದ ಸಮಯದಲ್ಲಿ ಫಿರ್ಯಾದಿಯನ್ನು ಮನೆಯ ಒಳಗೆ ಕೂರಿಸಿ ಹೊರಗೆ ಬೀಗ ಹಾಕಿ ಆಕೆಯ ಗಂಡ ಹೊರಗೆ ಹೋಗುತ್ತಿದ್ದುದಲ್ಲದೆ ಫಿರ್ಯಾದಿದಾರರಿಗೆ ಆಕೆಯ ಗಂಡ ಸಾದಿಕ್.ಎಚ್.ಎ ಎಂಬಾತನು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿರುವುದಾಗಿದೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರಕಾಶ್ ಪಿಲಿಕೂರು ರವರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದೇವಿಪುರ ತಲಪಾಡಿ ಇದರ ಬ್ರಹ್ಮಕಲಶೋತ್ಸವದ ಕಾರ್ಯಕರ್ತರಾಗಿದ್ದು, ದಿನಾಂಕ 23-02-2015 ರಿಂದ 05-03-2015 ರವರೆಗೆ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಿರುವುದರಿಂದ ದೇವಸ್ಥಾನದ ವತಿಯಿಂದ ಹಾಗೂ ಯುವ ಸಂಗಮ (ರೀ) ಪಿಲಿಕೂರೂ ಇವರ ವತಿಯಿಂದ, ಫಲಾಹ್ ಶಾಲೆಯ ಹತ್ತಿರ ರಸ್ತೆಯಲ್ಲಿ ಬಿದಿರಿನಿಂದ ಸ್ವಾಗತ ದ್ವಾರವನ್ನು ತಲಪಾಡಿ ಗ್ರಾಮ ಪಂಚಾಯಿತಿಯಿಂದ ಅನುಮತಿಯನ್ನು ಪಡೆದುಕೊಂಡು ನಿರ್ಮಿಸಿದ್ದು ದಿನಾಕ 24-02-2015 ರಂದು ರಾತ್ರಿ ಸಮಯ ಸುಮಾರು 23.00 ಗಂಟೆಯಿಂದ 23.15 ಗಂಟೆಯ ಮಧ್ಯಾವದಿಯಲ್ಲಿ ಯಾರೋ ದುಷ್ಕರ್ಮಿಗಳು ದ್ವಾರದ ಎಡಬದಿಗೆ ಬೆಂಕಿಯನ್ನು ಕೊಟ್ಟು ಸುಟ್ಟುಹಾಕಿದ್ದು, ಪರಿಣಾಮ ಸುಮಾರು 20,000 ರೂ. ನಷ್ಟ ಉಂಟಾಗಿರುತ್ತದೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10.02.2015 ರಂದು ಸಂಜೆ 6:00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ವಿನೋದ್ ಕುಮಾರ್ ರು ತನ್ನ ಬಾಬ್ತು KA-19-EL-9955ನೇ ನಂಬ್ರದ ಬಜಾಜ್ ಪಲ್ಸಾರ್ ಮೋಟಾರ್ ಸೈಕಲ್ಲನ್ನು ಎಕ್ಕೂರು ಗೋರಿಗುಡ್ಡೆಯಲ್ಲಿರುವ ಸುರಭಿ ಆರ್ಕೆಡ್ನ ಮುಂದೆ ಪಾರ್ಕ್ ಮಾಡಿ ತನ್ನ ಮನೆಗೆ ಹೋದವರು ದಿನಾಂಕ: 11.02.2015 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದು ನೋಡಿದಾಗ ಮೋಟಾರ್ ಸೈಕಲ್ ಕಾಣಿಸದೇ ಇದ್ದು, ಈ ಬಗ್ಗೆ ನೆರೆಕರೆಯವರಲ್ಲಿ ಮತ್ತು ಅವರ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದರೂ ಈವರೆಗೂ ಸದ್ರಿ ಮೋಟಾರ್ ಸೈಕಲ್ ಪತ್ತೆಯಾಗದೇ ಇದ್ದು, ಯಾರೋ ಕಳ್ಳರು ಸದ್ರಿ ಮೋಟಾರ್ ಸೈಕಲ್ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
No comments:
Post a Comment