Monday, February 2, 2015

Daily Crime Reports : 31-01-2015

ದೈನಂದಿನ ಅಪರಾದ ವರದಿ.
ದಿನಾಂಕ 31.01.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
4
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
2





























1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಹರೀಶ್ ಎಂ. ಶೆಟ್ಟಿ ರವರು ಮಂಗಳೂರು ಮಹಾನಗರ ಪಾಲಿಕೆಯ 16 ನೇ ಬಂಗ್ರ ಕೂಳೂರು ವಾರ್ಡ್ ನ ಸದಸ್ಯ ರಾಗಿದ್ದು ದಿನಾಂಕ 29-01-2015 ರಂದು ರಾತ್ರಿ ವೇಳೆಯಲ್ಲಿ ತಮ್ಮ ವಾಸ್ತವ್ಯದ ಮನೆಯಾದ ಹರಿ ನಿವಾಸ ಕೋಡಿಕಲ್ ಎಂಬಲ್ಲಿ ಮಲಗಿದ್ದಾಗ ಮನೆಯ ಹಂಚಿಗೆ ಕಲ್ಲು ಬಿದ್ದ ಶಬ್ದ ಕೇಳಿ ಪಿರ್ಯಾದಿ ಹೊರಗೆ ಬಂದು ಲೈಟ್ ಹಾಕಿ ನೋಡಿದಾಗ ಪರಿಚಯದ ಕೋಡಿಕಲ್ ನಿವಾಸಿ ಸುಧೀರ್ ಎಂಬವನು ಪಿರ್ಯಾದಿಯ ಮನೆಯ ಕಂಪೌಂಡಿನ ಒಳಗಡೆ ಅಕ್ರಮ ಪ್ರವೇಶ ಮಾಡಿದ್ದು ಪಿರ್ಯಾದಿ ಆತನಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ಬಂದದನ್ನು ಅಕ್ಷೇಪಿಸಿದಾಗ ಪಿರ್ಯಾದಿಯನ್ನು ಕಂಡು ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಕಲ್ಲನ್ನು ಮನೆಗೆ ಎಸೆದಿದ್ದು ಇದರಿಂದ ಪಿರ್ಯಾದಿ ಮನಯ ಹಂಚು ಪುಡಿಯಾಗಿರುತ್ತದೆ. ಮನೆಯವರೆಲ್ಲ ಹೊರಗೆ ಬಂದದ್ದನ್ನು ಕಂಡು ಆರೋಪಿತನು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಪಿರ್ಯಾದಿ ಕಾರ್ಪರೇಟರ್ಆಗಿದ್ದು, ಸಮಾಜ ಸೇವೆಯಲ್ಲಿ ತೊಡಗಿರುವ ಕಾರಣ ಯಾವುದೋ ಉದ್ದೇಶದಿಂದ ಆಪಾದಿತ ಈ ಕೃತ್ಯ ಎಸಗಿದ್ದು, ಆಪಾದಿತನ ಈ ಕೃತ್ಯದಿಂದ ಮನೆಗೆ ಹಾನಿಯಾಗಿರುವುದಾಗಿದೆ.

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-01-2015 ರಂದು ಪಿರ್ಯಾದಿದಾರರಾದ ಶ್ರೀಮತಿ ರೆಹನಾ ರವರು ಬೆಳಿಗ್ಗೆ ತನ್ನ ಮಗಳನ್ನು ಕಸಬಾ ಬೆಂಗ್ರೆಯ ಶಾಲೆಗೆ ಬಿಡಲು ಹೋಗುತ್ತಿದ್ದ ಸಮಯ ಅವರ ಗಂಡ ನವಾಜ ರವರು ದಾರಿಯಲ್ಲಿ ಸಿಕ್ಕಿದ್ದು ತಾನು ಅವರಲ್ಲಿ ಈ ಮೊದಲು ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘಕ್ಕೆ ಒಳಪಟ್ಟ ಕಿಲೇರಿಯಾ ಮಹಿಳಾ ಸಂಘದಿಂದ ತೆಗೆದುಕೊಟ್ಟಿರುವ 65,000/- ರೂಪಾಯಿ ಸಾಲದ ಕಂತುಕಟ್ಟಲು ಬಾಕಿ ಇದೆ ಅದನ್ನು ಕಟ್ಟಿ. ಸಂಘದವರು ಸಾಲ ಕೇಳಲು ತನ್ನ ತಾಯಿ ಮನೆಗೆ ಬರುತ್ತಾರೆ ಎಂಬುದಾಗಿ ಹೇಳಿದ್ದು ಅದನ್ನು ಕೇಳಿದ ಪಿರ್ಯಾದಿಯ ಗಂಡ ನವಾಜ ರವರು ಕೇಳದ ರೀತಿಯಲ್ಲಿ ಹೊರಟು ಹೋಗಿದ್ದು ನಂತರ ಅದೇ ದಿನ 11-00 ಗಂಟೆಗೆ ಪಿರ್ಯಾದಿದಾರರು ತನ್ನ ತಾಯಿಯ ಮನೆಯಲ್ಲಿದ್ದ ಸಮಯ ಪಿರ್ಯಾದಿಯ ಗಂಡ ನವಾಜ ಮತ್ತು ಅವರ ಅಣ್ಣ ಇಸ್ಮಾಯಿಲ್ ರವರು ಮನೆಯ ಒಳಗಡೆ ಬಂದು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, "ನೀನು ರಸ್ತೆ ಬದಿ ಹಣ ಕೇಳಿ ನನ್ನ ಮಾನ ಹರಾಜು ಮಾಡುತ್ತಿಯಾ?. ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ" ಎಂಬುದಾಗಿ ಹೆದರಿಸಿ ಮನೆಯ ಹೊರಗಡೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ  ಪಿರ್ಯಾದಿಯ ತಲೆಗೆ, ಕೆನ್ನೆಗೆ ಬಲ ಕಣ್ಣಿಗೆ ಹೊಡೆದು ತಲೆಯ ಕೂದಲನ್ನು ಹಿಡಿದು ನೆಲಕ್ಕೆ ಜಜ್ಜಿ ದೂಡಿಹಾಕಿ ಕೆಳಗೆ ಬಿದ್ದ ಪಿರ್ಯಾದಿಯ ಹೊಟ್ಟೆಗೆ ಬಲವಾಗಿ ತುಳಿದು ನೋವು ಉಂಟು ಮಾಡಿದಲ್ಲದೆ ಅವರ ಜೊತೆಯಲ್ಲಿದ್ದ ಅವರ ಅಣ್ಣ ಇಸ್ಮಾಯಿಲ್ ರವರು ಕೂಡಾ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿದ್ದು ಪಿರ್ಯಾದಿದಾರರು ನೋವಿನಿಂದ ಬೊಬ್ಬೆ ಹೊಡೆಯುವುದನ್ನು ಕೇಳಿ ಸ್ಥಳಕ್ಕೆ ಬರುತ್ತಿದ್ದ  ಪಿರ್ಯಾದಿಯ ತಾಯಿ ಮತ್ತು  ತಂಗಿ ಸಾಜೀದಾ ರವರನ್ನು ಕಂಡು ಪಿರ್ಯಾದಿಯ ಗಂಡ ಮತ್ತು ಅವರ ಅಣ್ಣ ಇಸ್ಮಾಯಿಲ್ ರವರು ಅವರು ಬಂದಿದ್ದ ಆಟೋ ರಿಕ್ಷಾದಲ್ಲಿ ಹೊರಟು ಹೋಗಿದಲ್ಲದೆ. ದಿನಾಂಕ 28-01-2015 ರಂದು ಪಿರ್ಯಾದಿಯ ಅಣ್ಣ ಹ್ಯಾರಿಸ್ ರವರು ದಾರಿಯಲ್ಲಿ ಬರುತ್ತಿರುವರನ್ನು ನಿಲ್ಲಿಸಿ "ನಿನ್ನನ್ನು ಮತ್ತು ನಿನ್ನ ತಂಗಿಯನ್ನು ಕೊಲ್ಲದೆ ಬಿಡುವುದಿಲ್ಲ" ಎಂಬುದಾಗಿ ಬೆದರಿಕೆ ಒಡ್ಡಿರುತ್ತಾರೆ.

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 30.01.2015 ರಂದು ಮಂಗಳೂರು ನಗರದ ಕೃಷ್ಣ ಭವನ ವೃತ್ತ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಮುನು ಸ್ವಾಮಿ ರವರು ನಡೆದುಕೊಂಡು ಬರುತ್ತಿರುವ ಸಮಯ ಬೆಳಿಗ್ಗೆ 11.15 ಗಂಟೆಗೆ ಆರೋಪಿ ಮೋಟಾರು ಸೈಕಲ್ ಸವಾರ ಮೋಟಾರ್ ಸೈಕಲ್ ನಂಬ್ರ  ಕೆಎ.19.ಎಸ್ 2343ನೇದನ್ನು ನಗರದ ಸ್ಟೇಟ್ ಬ್ಯಾಂಕ್ - ಹಂಪನಕಟ್ಟೆ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು  ಬಲ ಕಾಲಿನ ತೊಡೆಯಲ್ಲಿ ಮೂಳೆ ಮುರಿತದ ಗಂಭೀರ ತರಹದ ಗಾಯವಾಗಿ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30.01.2015 ರಂದು ಪಿರ್ಯಾದಿದಾರರಾದ ಶ್ರೀ ಮುಝಾಂಬಿಲ್ ರವರು ಮನೆಯಿಂದ 8.30 ಗಂಟೆಗೆ 3ಎ ರೋಶನ್ ಬಸ್ಸಿನಲ್ಲಿ ಮಂಗಳೂರಿಗೆ ಹೊರಟು ಮಂಗಳೂರು ನಗರದ ಜ್ಯೋತಿ ನಂದಿಕೂರು ಲ್ಯಾಬಿನ ಎದುರುಗಡೆ ತಲುಪಿದಾಗ ಮುಝಾಂಬಿಲ್ ಮತ್ತು ಇತರರಿಗೆ ಬಸ್ಸಿನಲ್ಲಿ ಹುಡುಗಿಯರನ್ನು ಚುಡಾಯಿಯಿಸುವ ವಿಷಯದಲ್ಲಿ ಮಾತುಕತೆಯಾಗಿದ್ದು ಆ ಸಮಯ ಆರೋಪಿಗಳು ಜೊತೆ ಸೇರಿಕೊಂಡು ಮುಝಾಂಬಿಲ್ ರವರನ್ನು ಬಸ್ಸಿನಿಂದ ದೂಡಿ ಕೆಳಗೆ ಹಾಕಿ, ತಡೆದು ನಿಲ್ಲಿಸಿ, ಕೈಯಿಂದ ಶರೀರದ ಭಾಗಗಳಿಗೆ ಹೊಡೆದು, ಕಾಲಿನಿಂದ ಒದ್ದು ಹಲ್ಲೆ ನಡೆಸಿ ನಂತರ ಚೂರಿಯಿಂದ ತಿವಿದು ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ.

5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-01-2015  ರಂದು ದೊರೆತ ಖಚಿತ ವರ್ತಮಾನದ ಮೇರೆಗೆ ಫಿರ್ಯಾಧಿದಾರರಾದ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ರವಿಕುಮಾರ್ ರವರು ಅವರ ಸಿಬ್ಬಂಧಿಗಳೊಂದಿಗೆ ಮತ್ತು ಪಂಚರೊಂದಿಗೆ  ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ  ಗ್ರಾಮದ ಕಾನಾ ಎಂಬಲ್ಲಿನ ಪ್ರಜಾ ಬಾಡಿ ವಕ್ಸ್ ಎಂಬ ಗ್ಯಾರೇಜ್ ಬಳಿಯ ಖಾಲಿ ಸ್ಥಳದಲ್ಲಿನ ಶೆಡ್ ನ ಬಳಿಗೆ 13:30  ಗಂಟೆಗೆ  ಜೀಪು ನಿಲ್ಲಿಸಲಾಗಿ ಸದ್ರಿ  ಶೆಡ್ ನ ಒಳಗಡೆಯಿಂದ ಇಬ್ಬರು ಪ್ರಾಯ ಸುಮಾರು 24 ರಿಂದ 26 ವರ್ಷದ ಗಂಡಸಿಬ್ಬರು ತಮ್ಮನು ನೋಡಿ ಓಡಿ ಹೋಗಿದ್ದುಸದ್ರಿ ಶೆಡ್ ನ ಪೂರ್ವ ದಿಕ್ಕಿನ ಗೋಡೆಯ ಬಳಿ ಸುಮಾರು 17 ಖಾಲಿ ಡಾಂಬಾರು ಬ್ಯಾರೇಲ್ ಗಳಿದ್ದು, ಅದರ ಮುಂಬಾಗದಲ್ಲಿ ಮುಚ್ಚಳ ಅಳವಡಿಸಿದ  ಒಂದು ಬ್ಯಾರೇಲ್ ಇದ್ದು, ಅದನ್ನು ನೋಡಲಾಗಿಅದರಲ್ಲಿ ಅರ್ಧದಷ್ಟು ಡಾಂಬಾರು ಇರುವುದು ಕಂಡು ಬಂತ್ತು, ಸದ್ರಿ ಶೆಡ್ ನ ಅಸುಪಾಸಿನ ಸುತ್ತು ಸಿಬ್ಬಂಧಿಗಳೊಂದಿಗೆ ಜಾಲಾಡಿಸಿ ನೋಡಲಾಗಿ ಯಾರು ಕೂಡ ಸಿಗದೇ ಇದ್ದು, ಸದ್ರಿ ಸ್ಥಳದಲ್ಲಿ ಓಡಿ ಹೋದ ಆರೋಫಿಗಳು ಅಕ್ರಮವಾಗಿ ಅವಶ್ಯಕ ವಸ್ತುವಾದ ಡಾಂಬಾರುಗಳನ್ನು ಬ್ಯಾರೆಲ್ ಗಳಲ್ಲಿ ತುಂಬಿಸಿ, ಮಾರಾಟ  ಮಾಡಲು  ದಸ್ತಾನಿರಿಸಿದ್ದಾಗಿ ಕಂಡು ಬಂದಿರುತ್ತದೆ . ಸದ್ರಿ ಶೆಡ್ ನೊಳಗಡೆ ಬ್ಯಾರೇಲ್ ಗಳನ್ನು ವಾಹನಗಳಿಗೆ ಲೋಡ್ ಮಾಡಲು ಅಳವಡಿಸುವ ಕಬ್ಬಿಣದ ಚಾನಲ್ ಗಳು -2  ಬ್ಯಾರೆಲ್ ಗಳ ಮುಚ್ಚಳಗಳು -17,  ಮುಚ್ಚಳ ಅಳವಡಿಸುವ ಸಲಕರಣೆ-1. ಡಾಂಬಾರು ಇಳಿಸುವ ತಗಡಿನ ಸಲಕರಣೆ-2   ಇರುತ್ತದೆ. ಸದ್ರಿ ಸ್ಥಳದಲ್ಲಿ ಯಾರೋ ಆರೋಪಿಗಳು  ಯಾವುದೇ ದಾಖಲಾತಿಗಳು ಇಲ್ಲದೇ ಜನರಿಗೆ ಅವಶ್ಯಕವಾದ ಡಾಂಬರುಗಳನ್ನು ಮಾರಾಟ ಮಾಡಲು  ಅಕ್ರಮವಾಗಿ ಶೇಖರಣೆ ಮಾಡಿರುವುದು  ಕಂಡು ಬಂದಿರುವುದಾಗಿದೆ.

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.01.2015 ರಂದು ರಾತ್ರಿ 19.30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ರವರ ಮನೆಯ ಎದುರು ಬೆಳುವಾಯಿ ಅಳಿಯೂರು ರಸ್ತೆಯಲ್ಲಿ  KA-20-EC- 8983 ನೇ ಮೋಟಾರು ಸೈಕಲ್ ಸವಾರ  ರಾಜೇಂದ್ರ ಪ್ರಾಯ: 28 ಎಂಬಾತನು ಅತೀವೇಗ ಮತ್ತು ನಿರ್ಲಕ್ಷತನದಿಂದ ಮೋಟಾರು ಸೈಕಲನ್ನು ಚಲಾಯಿಸಿ ರಸ್ತೆ ದಾಟುವ ವ್ಯಕ್ತಿಯನ್ನು ನೋಡಿ ಒಮ್ಮೆಲೇ ಬ್ರೇಕ್ ಹಾಕಿ ಬೈಕ್  ಸಮೇತ  ರಸ್ತೆಗೆ ಬಿದ್ದು, ತಲೆಗೆ ಗಾಯವಾಗಿ  ಪ್ರಜ್ಷಾಹೀನ ನಾದವನನ್ನು ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಳಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

7.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.01.2015 ರಂದು ಸಂಜೆ 6:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹೇಶ್ ಕುಮಾರ್ ಕೆ. ರವರು ತಮ್ಮ ಬಾಬ್ತು ಮಾರುತಿ ಓಮ್ನಿಕಾರ್ನಂಬ್ರ ಕೆಎ-03ಬಿ-9503 ನೇಯದನ್ನು ಬಂಟ್ವಾಳ ತಾಲೂಕು, ಕೈರಂಗಳ ಗ್ರಾಮದ ದೇವಿನಗರ ಎಂಬಲ್ಲಿ ನಿಲ್ಲಿಸಿ ತನ್ನ ಅಣ್ಣನ ಮನೆಗೆ ಹೋಗಿದ್ದು ವಾಪಾಸು ಸಂಜೆ 7:30 ಗಂಟೆಗೆ ಬಂದು ನೋಡಿದಾಗ ಮಾರುತಿ ಓಮ್ನಿ ಕಾರು ಅಲ್ಲಿ ಇಲ್ಲದೇ ಇದ್ದು, ಸದ್ರಿ ಕಾರನ್ನು ಯಾರೋ ಕಳ್ಳರು ದಿನಾಂಕ 29.01.2015 ರಂದು ಸಂಜೆ 6:00 ಗಂಟೆಯಿಂದ ಸಂಜೆ 7:30 ಗಂಟೆಯ ಮಧ್ಯೆ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮಾರುತಿ ಓಮ್ನಿ ಕಾರಿನ ಅಂದಾಜು ಮೌಲ್ಯ ರೂ, 75,000/- ಆಗಬಹುದು.

8.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  30-01-2015 ರಂದು ಮುಲ್ಕಿ ಲಿಂಗಪ್ಪಯ್ಯಕಾಡಿನಲ್ಲಿ ಕೆಲಸ ಮಾಡುವರೇ ತನ್ನ ಕೆಲಸದ ರೈಟರ್ ಆದ  ನಾಗರಾಜರವರೊಂದಿಗೆ ಅವರ ಬಾಬ್ತು  ಕೆಎ.20-ಎಕ್ಸ್ 5860 ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ನಾಗರಾಜರವರು ಸವಾರನಾಗಿಯು ಪಿರ್ಯಾದಿದಾರರಾದ ಶ್ರೀ ಶಂಭುಲಿಂಗಾ ಸಹಸವಾರನಾಗಿ ಕುಳಿತುಕೊಂಡು ಹೊರಟು ಎನ್ ಹೆಚ್ 66 ರಲ್ಲಿ ಬರುತ್ತಾ ಬೆಳ್ಳಿಗ್ಗೆ 08.35 ಗಂಟೆಗೆ ಮೂಲ್ಕಿ ಯಿಂದ ಸ್ವಲ್ಪ ಮುಂದೆ ಕೊಕ್ಕರೆಕಲ್ಲ ಬಳಿ ತಲಿಪಿದಾಗ ಸವಾರ ನಾಗರಾಜರವರು ಮೋಟಾರ್ ಸ್ಯೆಕಲನ್ನು ನಿರ್ಲಕ್ಷತನದಿಂದ ಮಾನವಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಮುಂದಿನಿಂದ ಹೋಗುತ್ತಿದ್ದ ಬಸ್ ಕೆಎ.20-ಸಿ-9133 ನೇದಕ್ಕೆ ಹಿಂದಿನಿಂದ ಢಿಕ್ಕಿಪಡಿಸಿದ್ದು ನಾವುಗಳು ಈ ಅಪಘಾತದಿಂದ ಬ್ಯೆಕ್ ಸಮೇತ ರಸ್ತಗೆ ಬಿದ್ದು ನನ್ನ ಹಣೆ ಎಡಕ್ಯೆ ಹೆಬ್ಬೆರಳು ರಕ್ತ ಗಾಯವಾಗಿದ್ದು ಬೈಕ್ ಸವಾರ ನಾಗರಾಜರವರರ ಬಲಗಾಲಿಗೆ ಗುದ್ದಿದ ಗಾಯವಾಗಿರುತ್ತದೆ ಚಿಕಿತ್ಸೆಯ ಬಗ್ಗೆ ಶೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-1-2015 ರಂದು ಸಂಜೆ 05.00 ಗಂಟೆಗೆ ಶೆಟ್ಟಿ ಐ.ಕ್ರೀಮ್ ಕುಳಾಯಿ ಬಸ್ ಸ್ಡಾಂಡ್ ಬಳಿ ಪಿರ್ಯಾದಿದಾರರಾದ ವತ್ಸಲಾ ರವರು ನಡೆದು ಕೊಂಡು ಹೋಗುತ್ತಿದ್ದಾಗ ಮಂಗಳೂರು ನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ದ್ವಿ-ಚಕ್ರ ವಾಹನ ನಂಬ್ರ ಕೆಎ.20 ಇಡಿ -6158 ಅದರ ಸವಾರ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿಹೊಡೆದ ಪರೀಣಾಮ ಪಿರ್ಯಾದಿ ವತ್ಸಲಾರವರ ಬಲಗಾಲಿಗೆ ಗಾಯವಾಗಿದ್ದು ಸದ್ರಿಯವರು ಸ್ದಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಗುಣವಾಗದೇ ಇದ್ದುದರಿಂದ ದಿನಾಂಕ 30-1-2015 ರಂದು ಸುರತ್ಕಲ್ ಪದ್ಮವತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಮತ್ತು ಆರೋಪಿ ವಾಹನ ಸವಾರ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:29.01.2015 ರಂದು ಫಿರ್ಯಾದಿದಾರರಾದ ಶ್ರೀ ಶರತ್ ರವರು ತನ್ನ ಸ್ನೇಹಿತ ಗಣೇಶ್ ನು ಕರೆದಿದ್ದ ಮೇರೆಗೆ ಆತನ ಮನೆಗೆ ಹೋಗಿದ್ದು ಆ ವೇಳೆ ಗಣೇಶ್ನ ಬಾಬ್ತು ಬಾಡಿಗೆ ಕೋಣೆಯಲ್ಲಿದ್ದ ಸುಮಿತ್ರ ಎಂಬವಳು ತನ್ನ ಮಕ್ಕಳಿಗೆ ಬೈಯುತ್ತಿದ್ದರಿಂದ ಗಣೇಶ್ನು ಆಕೆಯ ಕೋಣೆಯ ಬಾಗಿಲು ತಟ್ಟಿ ನೀವು ಈ ರೀತಿ ಬೊಬ್ಬೆ ಹಾಕುದಾದ್ರೆ ಮನೆ ಖಾಲಿ ಮಾಡಿ ಎಂದು ಹೇಳಿದಾಗ ಫಿರ್ಯಾದಿದಾರರು ಆಕೆಯಿಂದ ಪಡೆದುಕೊಂಡಿದ್ದ ಅಡ್ವಾನ್ಸ್‌‌ನ್ನು ಹಿಂದಕ್ಕೆ ಕೊಡು ಎಂದು ಹೇಳಿದ್ದಕ್ಕೆ ರಾತ್ರಿ 9.30 ಗಂಟೆ ಸುಮಾರಿಗೆ ಗಣೇಶ್ನು ಫಿರ್ಯಾದಿದಾರರನ್ನು ಉದ್ದೇಶಿಸಿ ಆವಾಚ್ಯ ಶಬ್ದಗಳಿಂದ ಬೈದು ಮರದ ರೀಪಿನಿಂದ ಫಿರ್ಯದಿದಾರರ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿದ್ದು ಫಿರ್ಯದಿದಾರರು ಸರಕಾರಿ ವೆನ್ಲಾಕ್ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

No comments:

Post a Comment