Tuesday, February 10, 2015

Daily Crime Reports : 10-02-2015

ದೈನಂದಿನ ಅಪರಾದ ವರದಿ.
ದಿನಾಂಕ 10.02.201512:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
1
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
2
 
 
 
 
 
 
 
 
 
 
 
 
 
 
 
 
 
 
 
 
 
 





1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 09.02.2015 ರಂದು ಪಿರ್ಯಾದಿದಾರರಾದ ಉಷಾ ರವರು ಮತ್ತು ಅವರ ತಾಯಿ ಶ್ರೀಮತಿ ನಳಿನಿಯವರು ಮಂಗಳೂರು ನಗರದ  ಜಿ ಹೆಚ್ ಎಸ್ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ನಡೆದುಕೊಂಡು ಹೋಗಿ  ಮೋಹಿನಿ ವಿಲಾಸ  ಹೋಟೇಲ್ ಎದುರುಗಡೆ ರಸ್ತೆ ದಾಟಿ ತೀರಾ ಎಡ ಬದಿಗೆ ತಲುಪಿದ ಸಮಯ ಬೆಳಿಗ್ಗೆ  08.15 ಗಂಟೆಗೆ ಮೋಟಾರು  ಸೈಕಲ್ ನಂಬ್ರ ಕೆಎ.19.ವೈ.4492ನೇದನ್ನು ಅದರ ಸವಾರ  ಕೆ ಬಿ ವೃತ್ತದ ಕಡೆಯಿಂದ  ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ಇದ್ದ ಅವರ ತಾಯಿ ಶ್ರೀಮತಿ ನಳಿನಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು  ತಲೆಯ ಬಲಭಾಗದ ಹಿಂಭಾಗಕ್ಕೆ ಗುದ್ದಿದ ನಮೂನೆ ಗಾಯ ಮತ್ತು ಕೈಗೆ ಹಾಗೂ ಕಾಲಿಗೆ ರಕ್ತ ಬರುವ ತರಚಿದ ಗಾಯವಾದವರು ಮೊದಲಿಗೆ ತಾರ ಕ್ಲಿನಿಕಿಗೆ ಹೋಗಿದ್ದು ನಂತರ  ಹೆಚ್ಚಿನ ಚಿಕಿತ್ಸೆ ಬಗ್ಗೆ ನಗರದ ಸರಕಾರಿ ವೆನ್ಲಾಕ್  ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
 
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-02-2015 ರಂದು ತೋಟಾ ಬೆಂಗ್ರೆ ಫೇರಿಯ ಬಳಿ ಸಾಗರಕಿರಣ ರಾಣಿ ಬಲೆ ಟೆಂಟ್ ಕಟ್ಟಡದ ಬಳಿ ಸಂಜೆ 18-00 ಗಂಟೆಗೆ ಅಪರಿಚಿತ ಗಂಡಸಿನ ಮೃತ ದೇಹವು ಫೇರಳೆ ಮರದ ಬುಡದಲ್ಲಿ ಬಿದ್ದ ಸ್ಥಿತಿಯಲ್ಲಿ ಹೊರಳಾಡಿ ಬಿದ್ದು ಮೃತಪಟ್ಟಂತೆ ಕಂಡು ಪಿರ್ಯಾದಿದಾರರಾದ ಶ್ರೀ ಶೇಖರ್ ಸುವರ್ಣ ರವರು ನೀಡಿದ ದೂರಿನಂತೆ ಪಣಂಬೂರು ಠಾಣೆಯಲ್ಲಿ ಯು.ಡಿ.ಆರ್ 06/15 ಕಲಂ 174 ಸಿ.ಆರ್.ಪಿ.ಸಿ. ಪ್ರಕರಣ ದಾಖಲಾಗಿತ್ತು. ನಂತರ ಫಿರ್ಯಾದಿದಾರರಿಗೆ ಮೃತನು ತೋಟಾ ಬೆಂಗ್ರೆಯ ನಿವಾಸಿ ಅಮಿತ ಕೋಟ್ಯಾನ್ ರವರ ಜೊತೆಯಲ್ಲಿ 4 ದಿನಗಳಿಂದ ಮೀನುಗಾರಿಕೆ ಕೆಲಸ ಮಾಡುತ್ತಿದ್ದಾತನು ಅಮಿತ ಕೋಟ್ಯಾನ್ ನ ಪತ್ನಿ ಬಟ್ಟೆ ತೊಳೆಯುವಾಗ, ಮೀನು ಮಾರುತ್ತಿದ್ದ ಸಮಯದಲ್ಲಿ ಆಕೆಯನ್ನು ಅಶ್ಲೀಲವಾಗಿ ನೋಡುತ್ತಿದ್ದು ಕೆಲವೂ ಬಾರಿ ಎದುರುಗಡೆ ಹೋಗುತ್ತಿದ್ದು ಇದರಿಂದ ರೋಶಗೊಂಡ ಅಮಿತ ಕೋಟ್ಯಾನ್ ಆತನಿಗೆ ಮೀನುಗಾರಿಕೆ ಮಾಡಿದ ಸಂಬಂಳದ ಹಣವನ್ನು ನೀಡದೆ ಫ್ರಾನ್ಸಿಸ್ ಫ್ರಾಂಕ್ @ ಬೆಂಡ್ ನ ಜೊತೆ ಸೇರಿ ದಿನಾಂಕ 03-02-2015 ರಂದು ಸಂಜೆ 4-00 ಗಂಟೆಗೆ ಅಮಿತ್ ಕೋಟ್ಯಾನ್ ಮನೆಯ ಹಿಂಬದಿಯ ರೂಂನಲ್ಲಿ ದೋಣಿ ಎಳೆಯುವ ರೋಪಿನಿಂದ ಆತನ ಬೆನ್ನಿಗೆ ಸಿಕ್ಕಾಪಟ್ಟೆ ಹೊಡೆದು ಬಳಿಕ ಆತನನ್ನು ಆಪಾಧಿತರು ಎಳೆದುಕೊಂಡು ಹೋಗಿ ಅದೇ ದಿನ ಸಂಜೆ 5-00 ಗಂಟೆಗೆ ಸಾಗರಕಿರಣ ರಾಣಿಬಲೆ ಟೆಂಟಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿದ್ದ ಪೇರಳೆ ಮರದ ಬುಡದಲ್ಲಿ ಚೂಪು ಚೂಪಾದ ಪೇರಳೆ ಮರದ ಕೊರಳುಗಳ ಮೇಲೆ ಎತ್ತಿಹಾಕಿ ಅತ್ತಿತ ಎಳೆದು ಹಾಕಿ ಮರಳಿ ಎತ್ತಿಹಾಕಿ ಕೊಲೆಗೈದು ಆತನು ಮೃತ ಪಟ್ಟ ವಿಚಾರ ತಿಳಿದು ಅವರುಗಳಿಬ್ಬರು ಅಲ್ಲಿಂದ ಪರಾರಿಯಾಗಿ ಮೀನು ಹಿಡಿಯುವರೆ ಹೋಗಿರುವುದಾಗಿ ಅವರುಗಳು ಹೊಡೆದು ಕೊಲೆ ಮಾಡಿರುವುದನ್ನು ಪ್ರತ್ಯಕ್ಷವಾಗಿ ನೋಡಿದ ಸಾಕ್ಷೀದಾರರುಗಳು ಮತ್ತು ಇತರರು ಮೀನುಗಾರಿಗೆ ಹೋಗಿದ್ದವರು ದಿನಾಂಕ 09-02-2015 ರಂದು ಬಂದವರು ಫಿರ್ಯಾದಿದಾರರಿಗೆ ವಿಷಯ ತಿಳಿಸಿರುವುದಾಗಿ ಮೃತಪಟ್ಟ ವ್ಯಕ್ತಿಯು ಅಮಿತ ಕೋಟ್ಯಾನ್ ನ ದೋಣಿಯಲ್ಲಿ ಮೀನುಗಾರಿಕಾ ಕೆಲಸವನ್ನು ಮಾಡಿಕೊಂಡಿದ್ದ ಅಂಥೋನಿ ಎಂಬುದಾಗಿ ಕರೆಯುತ್ತಿರುವುದಾಗಿ ತಿಳಿದು ಬಂದಿರುವುದಾಗಿದೆ.
 
3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  09-02-2015 ರಂದು ಪಿರ್ಯಾದಿದಾರರಾದ ಶ್ರೀ ಬಾಲಕೃಷ್ಣ ಶೆಟ್ಟಿ ರವರು ತನ್ನ ಬಾಬ್ತು ಕಾರು ನಂಬ್ರ ಕೆ ಎ 19 ಎಂ ಸಿ 122ನೇದನ್ನು ಮಂಗಳೂರು ನಗರದ ಹಂಪನ ಕಟ್ಟೆ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಚಲಾಯಿಸಿಕೊಂಡು ಬಂದು ವೃತ್ತ ಬಳಸಿ ಪುನ: ಹಂಪನ ಕಟ್ಟೆ ಕಡೆಗೆ ಹೋಗುತ್ತಿರುವ ಸಮಯ ಸುಮಾರು 12:15 ಗಂಟೆಗೆ ಟಿಪ್ಪರ್ ಲಾರಿ ನಂಬ್ರ ಕೆಎ20 7080 ನೇದನ್ನು ಅದರ ಚಾಲಕ ರಾವ್ &ರಾವ್ - ಕ್ಲಾಕ್ ಟವರ್ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಕಾರಿನ ಎಡ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎಡ ಬದಿ ಜಖಂ ಗೊಂಡಿರುತ್ತದೆ.
 
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಶಹನಾಝ್ ಬೆಗಂ ರವರ ಬಾಬ್ತು ಮಂಗಳೂರು ತಾಲೂಕು ಬೆಳುವಾಯಿ ಗ್ರಾಮದ ಖಂಡಿಗ ದರ್ಖಾಸು ಎಂಬಲ್ಲಿರುವ ಕಟ್ಟಡದಲ್ಲಿನ ಮನೆ ನಂ 4(7-6) ರಲ್ಲಿ ಬಾಡಿಗೆ ನೆಲೆಯಲ್ಲಿ ವಾಸವಾಗಿದ್ದ ಆರೋಪಿ ಸೈಯ್ಯದ್ ನೂರ್ ಜಾನ್ ತನ್ನ ಮನೆಯೊಳಗೆ ಗ್ಯಾಸ್ ಗೀಸರ್ ನ್ನು ಉಪಯೋಗಿಸುತ್ತಿದ್ದು, ಸದ್ರಿ ಗ್ಯಾಸ್ ಗೀಸರ್ ನಿಂದ ಗ್ಯಾಸ್ ಲೀಕೇಜ್ ಆಗುತ್ತಿದ್ದ ವಿಷಯ ತಿಳಿದಿದ್ದರೂ ರಿಪೇರಿ ಮಾಡದೇ ನಿರ್ಲಕ್ಷ್ಯತೆ ವಹಿಸಿ ದಿನಾಂಕ 08-02-15 ರಂದು ಬೆಳಿಗ್ಗೆ 08.00 ಗಂಟೆ ಸಮಯಕ್ಕೆ ಗೀಸರ್ ಸ್ವಿಚ್ ಹಾಕಿದಾಗ ಲೀಕೇಜ್ ನ ಕಾರಣ ಗೀಸರ್ ಸ್ಪೋಟಿಸಿದ ಪರಿಣಾಮ ಆರೋಪಿ ಹಾಗೂ ಆರೋಪಿ ಪತ್ನಿ ನಾಝಿಮಾ ಹಾಗೂ ಮಗು ಜೋಯ ಸುಟ್ಟ ಗಾಯಕ್ಕೆ ಒಳಗಾಗಿರುವುದಲ್ಲದೇ ಕಟ್ಟಡದ ಗೋಡೆ ಬಿರುಕು ಬಿಟ್ಟಿರುವುದಲ್ಲದೇ ಮನೆಯ ಒಳಗೆ ಇದ್ದ ಸೊತ್ತುಗಳು ಹಾಳಾಗಿ ಸುಮಾರು 5,00,000/- ನಷ್ಟ ಉಂಟಾಗಿದ್ದು, ಇದಕ್ಕೆ ಆರೋಪಿ ನಿರ್ಲಕ್ಷ ವರ್ತನೆಯೇ ಕಾರಣವಾಗಿರುತ್ತದೆ.
 
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  08.02.2015 ರಂದು  ಸಮಯ  ಸುಮಾರು  ಸಂಜೆ:3:45  ಗಂಟೆ ವೇಳೆಗೆ  ಪುತ್ತಿಗೆ ಗ್ರಾಮದ  ಹಂಡೇಲು  ಸುತ್ತು  ಎಂಬಲ್ಲಿ  ಪಿರ್ಯಾದಿದಾರರಾದ ಶ್ರೀ ದೀಪಕ್ ಕೊಡವ ರವರ  ಬಾಬ್ತು ಕೆಎ 19 ಎಂಇ 5722 ನೇ ಕಾರಿನಲ್ಲಿ   ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ  ಹಂಡೇಲು  ಸುತ್ತಿ  ಎಂಬಲ್ಲಿಗೆ ತಲುಪಿದಾಗ  ಮಂಗಳೂರು  ಕಡೆಯಿಂದ ಮೂಡಬಿದ್ರೆ ಕಡೆಗೆ ಬಂದ ಕೆ. 19 ಎಎ 5786 ನೇ  407  ಟೆಂಪೋವನ್ನು  ಅದರ  ಚಾಲಕ  ಅತೀ  ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದುಕಾರಿಗೆ ಡಿಕ್ಕಿ  ಹೊಡೆದ ಪರಿಣಾಮ  ಕಾರಿನ  ಬಲ ಬದಿಯ  ಬಂಪರ್‌, ಬೋನೆಟ್‌, ಟಯರ್ಗ್ಲಾಸ್‌, ಬಲಬದಿಯ  ಡೋರ್‌,  ಹೆಡ್‌  ಲೈಟ್‌, ಸೈಡ್ಮಿರರ್ಜಖಂಗೊಂಡಿರುವುದಲ್ಲದೆ, ಟೆಂಪೋ ಕೂಡಾ ಜಖಂಗೊಂಡಿದ್ದು, ಪಿರ್ಯಾದಿದಾರರಿಗೆ  ಗುದ್ದಿದ ನಮೂನೆಯ  ನೊವುಂಟಾಗಿದೆ.
 
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮೂಡಬಿದ್ರೆ ಆಳ್ವಾಸ್ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಪಿಸಿಎಂಬಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎನ್ಲಕ್ಷ್ಮೀ ಪನಿಂದ್ರ ಎಂಬವನು ದಿನಾಂಕ : 08-02-2015 ರಂದು ಮಧ್ಯಾಹ್ನ ಸುಮಾರು 2-00 ಗಂಟೆಗೆ ಆಳ್ವಾಸ್ ಕಾಲೇಜಿನ ನೀಲಗಿರಿ ಹಾಸ್ಟೇಲ್ನಿಂದ ರಿಂಗ್ ವರ್ಮ್ಚಿಕಿತ್ಸೆ ಬಗ್ಗೆ ಹೊರಗಡೆ ಹೋದವನು ವಾಪಾಸ್ ಹಾಸ್ಟೇಲ್ಗೆ ಬಾರದೇ ತನ್ನ ಮನೆಯಾದ ಗಂಗಾವತಿಗೆ ಹೋಗದೇ ಕಾಣೆಯಾಗಿರುತ್ತಾನೆಂದು ಆತನು ಮೊದಲ ಹಂತದ ಪರೀಕ್ಷೆಯಲ್ಲಿ ನಾಲ್ಕು ವಿಷಯದಲ್ಲಿ ಅನುತ್ತೀರ್ಣನಾದ ಕಾರಣ ಬೇಸರದಿಂದ ಹಾಸ್ಟೇಲ್ ಬಿಟ್ಟು ಹೋಗಿ ಕಾಣೆಯಾಗಲು ಕಾರಣವಾಗಿರುತ್ತದೆಂದು ವಿದ್ಯಾರ್ಥಿಯ ತಂದೆ ಶ್ರೀ ಎನ್ರಮೇಶ್ ಎಂಬವರು ದೂರು ನೀಡಿರುವುದಾಗಿದೆ.
 
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಮಹಮ್ಮದ್ ಫಯಾಜ್ ರವರು ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರುವ ಶ್ರೀಮಾನ್ಯು.ಟಿ ಖಾದರ್ ರವರ ಮಿಡಿಯಾ ಕೊ ಆರ್ಡಿನೇಟರ್ಆಗಿ ಕೆಲಸ ಮಾಡಿಕೊಂಡಿದ್ದು, ಇವರು ತನ್ನ ಖಾಸಗಿ ವ್ಯವಹಾರದ ಬಗ್ಗೆ ಮಂಗಳೂರಿನ ಮಿಲಾಗ್ರಿಸ್ ಸೆಂಟರ್ ಕಟ್ಟಡದ 3 ನೇ ಮಹಡಿಯಲ್ಲಿ ಕಚೇರಿಯನ್ನು ಹೊಂದಿದ್ದು, ಇವರಿಗೆ ಡೊಕೊಮೊ ಸಿಮ್ ಹೊಂದಿರುವ ಸಿಮ್ ನಂಬ್ರದ  ಐ ಫಾನ್‌ 5 ಎಸ್ ಮೊಡೆಲ್ಮೊಬೈಲ್ ಫೋನು ಇರುತ್ತದೆ. ಅದರಂತೆ ಇವರು ತನ್ನ ಕಚೇರಿಯಲ್ಲಿದ್ದವರು ತನ್ನ ಮೊಬೈಲ್ಪೋನ್ನಲ್ಲಿ ದಿನಾಂಕ. 9-2-2015 ರಂದು ಫೇಸ್ ಬುಕ್ ನ್ನು ಓಪನ್ ಮಾಡಿ ನೋಡುತ್ತಿರುವ ಸಮಯ  ಯು.ಟಿ. ಖಾದರ್ ಎಂಬ ಹೆಸರಿನಲ್ಲಿ ಅಶ್ಲೀಲ ವಾಗಿ ಇರುವ ಮಹಿಳೆಯೊಬ್ಬಳ ಫೋಟೊವನ್ನು ಪ್ರದೀಪ್ ಕುಮಾರ್ ಎಂಬ ಹೆಸರಿನಲ್ಲಿ 03-02-2015 ರಂದು ರಾತ್ರಿ 8-51 ಕ್ಕೆ ಕುಮಾರ್ ನಾಗರಾಜ್ ಹಾಗು 14 ಜನರ ಹೆಸರಿಗೆ ಪ್ರೋಫೈಲ್ ಮಾಡಿ  ಟ್ಯಾಗ್ಮಾಡಿ ಮಾನ್ಯ ಆರೋಗ್ಯ ಸಚಿವರ ಫೇಸ್ ಬುಕ್ ಬಂದಿರುವುದು ಕಂಡು ಬಂದಿದ್ದು, ಸದ್ರಿ ವ್ಯಕ್ತಿಯು  ಫೇಸ್ ಬುಕ್ನಲ್ಲಿ  ವಿಳಾಸ ಇಲ್ಲದ ಪ್ರದೀಪ್ ಎಂಬ ಹೆಸರಿನಲ್ಲಿ ನಕಲಿ ಐಡಿ ಕ್ರಿಯೆಟ್ಮಾಡಿ ಟ್ಯಾಗ್ ಮಾಡಿ ಕರ್ನಾಟಕ ಸರಕಾರದ ಮಾನ್ಯ ಆರೋಗ್ಯ ಸಚಿವರ ಫೇಸ್ ಬುಕ್ಗೆ  share  ಮಾಡಿರುವುದಾಗಿದೆ.
 

No comments:

Post a Comment