ದೈನಂದಿನ ಅಪರಾದ ವರದಿ.
ದಿನಾಂಕ 01.02.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
4
|
ವಂಚನೆ ಪ್ರಕರಣ
|
:
|
2
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
2
|
1.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31.01.2015 ರಂದು 14.20 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಮೂಡಬಿದ್ರೆ ನಗರದ ಸಿಂಡಿಕೇಟ್ ಬ್ಯಾಂಕ್ ಬಳಿಯ ಮೂಡಬಿದ್ರೆ ಮಂಗಳೂರು ರಾ. ಹೆದ್ದಾರಿಯಲ್ಲಿ ಆರೋಪಿ ಬಸ್ ನಂಬ್ರ: KA- 19C. 8046 ನೇದರ ಚಾಲಕ ಬಸ್ಸನ್ನಯ ಮೂಡಬಿದ್ರೆಯಿಂದ – ಮಂಗಳೂರು ಕಡೆಗೆ ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ, ತನ್ನ ಮುಂದಿನಿಂದ ಹೋಗುತ್ತಿರುವ ಕಾರು ನಂಬ್ರ: KA.Z.8088 ಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು, ಕಾರಿನ ಹಿಂಬದಿಯ ಡಿಕ್ಕಿ ಬಂಪರ್ ಗೆ ಹಾನಿ ಉಂಟುಮಾಡಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:31.01.2015 ರಂದು 13.40 ಗಂಟೆಗೆ ಮಂಗಳೂರು ನಗರದ ಬಲ್ಮಠ ಹೆಣ್ಣು ಮಕ್ಕಳ ಕಾಲೇಜಿನ ಎದುರುಗಡೆ ಫಿರ್ಯಾದುದಾರರಾದ ಶ್ರೀ ಸುಂದರ್ ಆಚಾರ್ ರವರು ರಸ್ತೆ ದಾಟುತ್ತಿರುವಾಗ ಅಂಬೇಡ್ಕರ್ ಸರ್ಕಲ್ ಕಡೆಯಿಂದ ಬಲ್ಮಠ ಕಡೆಗೆ ಮೋಟರ್ ಸೈಕಲ್ ನಂಬ್ರ KA18-EB-0205ನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗಿವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಡಿಕ್ಕಿ ಮಾಡಿ ನಂತರ ಅಲ್ಲೇ ಪಾರ್ಕು ಮಾಡಿದ್ದ ಕಾರೊಂದಕ್ಕೆ ಮಾಡಿರುತ್ತಾನೆ. ಈ ಅಪಘಾತದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ತಲೆಯ ಎಡಭಾಗಕ್ಕೆ, ಎಡಕಾಲಿನ ಪಾದಕ್ಕೆ ರಕ್ತ ಗಾಯ ಮತ್ತು ಮುಖದ ಎಡಭಾಗಕ್ಕೆ ತರಚಿದ ಗಾಯ ಉಂಟಾಗಿ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ICU ನಲ್ಲಿ ದಾಖಲಾಗಿರುತ್ತಾರೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-01-2015 ರಂದು ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂಡಬಿದ್ರೆ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭ ರವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಮೂಡುಮಾರ್ನಾಡು ಗ್ರಾಮದ ಮುಗೇರ್ಕಳ ಗರಡಿ ಬಳಿ ಹಳೆಮನೆ ಕಾಡು ಹಾಡಿ ಎಂಬಲ್ಲಿ ಕೆಲವು ಜನ ಸೇರಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಜೂಜಾಟ ಆಡುತ್ತಿದ್ದಾರೆಂದು ಸಿಕ್ಕಿದ ಮಾಹಿತಿ ಬಂದಂತೆ ಸಿಬ್ಬಂದಿಯವರೊಂದಿಗೆ ಹೊರಟು 17.30 ಗಂಟೆಗೆ ಸದ್ರಿ ಜೂಜಾಟಕ್ಕೆ ದಾಳಿ ಮಾಡಿದಾಗ ಹೆಚ್ಚಿನವರು ಕಾಡು ಗುಡ್ಡೆಯಲ್ಲಿ ಓಡಿ ಹೋಗಿದ್ದು, 1)ಸುರೇಶ್ ಪೂಜಾರಿ 2) ಪ್ರಭಾಕರ ಶೆಟ್ಟಿ 3) ರವೀಂದ್ರ 4) ಸುಧಾಕರ ಕರ್ಕೇರಾ ಎಂಬವರನ್ನು ವಶಕ್ಕೆ ಪಡೆದಿದ್ದು ಓಡಿಹೋದವರು 1) ನೀಲಯ್ಯ ಭಂಡಾರಿ, 2) ಚಮ್ಮಿ ಅಲಂಗಾರು, 3) ಇನಸ್ ಬಂಗ್ಲಗುಡ್ಡೆ ಕಾರ್ಕಳ ಎಂಬುದಾಗಿ ಗುರುತಿಸಲಾಗಿದೆ ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳು ಟರ್ಪಾಲು-1, ನೊಕಿಯ ಮೊಬೈಲ್ ಫೋನ್ -3 ಮತ್ತು ನಗದು ರೂಪಾಯಿ 1600/-ನ್ನು ಹಾಗೂ ಕೆಎ-20-ಯು-3429ನೇ ಮೋಟಾರ್ ಸೈಕಲ್, ಕೆಎ-20-ವಿ-5157ನೇ ಮೋಟಾರ್ ಸೈಕಲ್, ಕೆಎ-19-ಕ್ಯೂ-797ನೇ ಮೋಟಾರ್ ಸೈಕಲ್, ಕೆಎ-20-ಈಡಿ-1604ನೇ ಮೋಟಾರ್ ಸೈಕಲ್, ಕೆಎ-20-ಎ-1695ನೇ ಅಟೋ ರಿಕ್ಷಾವನ್ನು ಮಹಜರು ಬರೆದು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.
4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-1-2015 ರಂದು ಮಧ್ಯಾಹ್ನ 14..00 ಗಂಟೆಗೆ ಪ್ರಕರಣದ ಪಿರ್ಯಾದಿದಾರರಾದ ಶ್ರೀ ಕುಮಾರ್ ಹಾಗೂ ಕೋಟ್ರೇಶ್ ಎಂಬವರು ಮಂಗಳೂರಿಗೆ ಹೋಗುವರೇ ಕೆಎ.19.ಅರ್.3860 ನೇ ನಂಬ್ರದ ಹೊಂಡಾ ಸ್ಕೂಟರ್ ನಲ್ಲಿ ಕೋಟ್ರೇಶ್ ಸವಾರರಾಗಿ ಪಿರ್ಯಾದಿದಾರರು ಹಿಂಬದಿ ಸವಾರನಾಗಿ ಮನೆಯಿಂದ ಹೊರಟು ಕಾವೂರು –ಕೂಳೂರು ರಸ್ತೆಯಲ್ಲಿ ಹೋಗುತ್ತಾ ಪಂಜಿಮೊಗೆರು ಎಂಬಲಿಗೆ ತಲುಪಿದಾಗ ಕೂಳೂರು ಕಡೆಯಿಂದ ಕಾವೂರು ಕಡೆಗೆ ಸಿಎನ್ ಎಕ್ನ್ 6065 ನಂಬ್ರದ ಲಾರಿಯನ್ನು ಅದರ ಚಾಲಕ ಪೊರುಷೋತ್ತಮ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸಹಸವಾರರಾಗಿ ಸವಾರಿ ಮಾಡಿಕೊಂಡ ಹೋಗುತ್ತಿದ್ದ ಸ್ಕೂಟರಿಗೆ ಢಿಕ್ಕಿಪಡಿಸಿದ್ದು ಈ ಆಪಘಾತದಿಂದ ಪಿರ್ಯಾದಿದಾರರು ಹಾಗೂ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಗಾಲಿಗೆ ಮೂಳೆಮುರಿತ ರಕ್ತಗಾಯವಾಗಿ ಕೋಟ್ರೇಶ್ ನ ತಲೆ ಮುಖಕ್ಕೆ ಅಲ್ಪ ಪ್ರಮಾಣದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
5.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-01-2015ರಂದು ಪಿರ್ಯಾಧಿದಾರರಾದ ಶ್ರೀ ದಾಮೋದರ ರವರು ಸಹ ಸವಾರರಾಗಿ ಅವರ ಮಿತ್ರ ಹಂಸರಾಜ್ ರವರು ಸವಾರರಾಗಿ ಮೋಟಾರು ಸೈಕಲು ನಂಬ್ರ ಕೆಎ-21-ಎಲ್-5691ನೇದರಲ್ಲಿ ಕೊಟ್ಟಾರ ಚೌಕಿಯಿಂದ ಸುರತ್ಕಲ್ ಗೆ ಕಡೆಗೆ ಎನ್.ಹೆಚ್-66ರಲ್ಲಿ ಬರುತ್ತಾ ಹೊಸಬೆಟ್ಟು ತಲುಪಿದಾಗ ಕೆಎ-19-ಎಮ್ ಇ- 6856 ನಂಬ್ರದ ಕಾರನ್ನು ಅದರ ಚಾಲಕ ದೇವೆಂದ್ರೆ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರಿದ್ದ ಮೋಟಾರು ಸೈಕಲನ್ನು ಹಿಂದಿಕ್ಕುವ ಭರದಿಂದ ಅವರ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರುಗಳು ಮೋಟಾರು ಸೈಕಲು ಸಮೇತ ರಸ್ತೆಗೆ ಬಿದ್ದು, ಪಿರ್ಯಾಧಿದಾರರ ಬಲ ಕಣ್ಣಿಗೆ, ಬಲ ಕಾಲಿಗೆ ರಕ್ತ ಗಾಯವಾಗಿದ್ದು, ಸವಾರ ಹಂಸರಾಜ್ ರವರಿಗೆ ಬಲ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕರ್ನಾಟಕ ಸರ್ಕಾರವು ಬಡಜನರಿಗೆ ಅನ್ಯಬಾಗ್ಯ ಯೋಜನೆಯಡಿಯಲ್ಲಿ ಮತ್ತು ಪಡಿತರ ಯೋಜನೆಯಡಿಯಲ್ಲಿ ಬಿಡುಗಡೆ ಮಾಡಿದ ಅಕ್ಕಿ ಮತ್ತು ಗೋಧಿಯನ್ನು ದಿನಾಂಕ 31.01.2015 ರಂದು ಯಾವುದೇ ಪರವಾನಿಯಿಲ್ಲದೇ, ತಮ್ಮ ಸ್ವಂತ ಲಾಭಕೊಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವರೇ ಕೆಎ-19-ಡಿ-7000 ನಂಬ್ರದ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವಾಹನದ ಚಾಲಕನನ್ನು ಮಂಗಳೂರು ನಗರ ಆಹಾರ ನಿರೀಕ್ಷಕರಾದ ಶ್ರೀ ವಸು ಶೆಟ್ಟಿ ರವರು ವಿಚಾರಿಸಿದಾಗ ಆತನು ತನ್ನ ಹೆಸರು ಇಮ್ತಿಯಾಜ್ (23) ತಂದೆ: ಮಹಮ್ಮದ ವಾಸ: ಆಶ್ರಯನಗರ, ವಾಮಂಜೂರು, ಮಂಗಳೂರು ಎಂದು ಸದ್ರಿ ವಾಹನದಲ್ಲಿದ್ದ ಇನ್ನೊಬ್ಬನು ತನ್ನ ಹೆಸರು ಮಹಮ್ಮದ್ ರಫೀಕ್ (40) ತಂದೆ: ಉಮರಬ್ಬ ವಾಸ: ಅಝರುದ್ದಿನ ನಗರ, ಗುರುಪುರ ಕೈಕಂಬ ಮಂಗಳೂರು ಎಂದು ತಿಳಿಸಿದ್ದು, ಸದ್ರಿಯವರುಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅನ್ಯಬಾಗ್ಯ ಯೋಜನೆಯ ಅಕ್ಕಿಯ ಬೆಲೆ ಸುಮಾರು 13.000/- ರೂಪಾಯಿ ಮತ್ತು ಗೋಧಿಯ ಬೆಲೆ 2.200/- ರೂಪಾಯಿ ಆಗಿರುತ್ತದೆ. ಹಾಗೂ ಸಾಗಾಟ ಮಾಡುವರೇ ಉಪಯೋಗಿಸಿದ ವಾಹನದ ಮೌಲ್ಯ ರೂಪಾಯಿ 2 ಲಕ್ಷ ಆಗಬಹುದು. ಸದ್ರಿ ಅಕ್ಕಿ, ಗೋಧಿ, ಮತ್ತು ಅವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಮಹಜರು ಮುಕೇನ್ ಸ್ವಾಧಿನಪಡಿಸಿ ಸದ್ರಿ ಸೊತ್ತುಗಳನ್ನು ಹಾಗೂ ಆರೋಪಿತರನ್ನು ಮುಂದಿನ ಕ್ರಮದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ಪಿಹಸ್ತಾಂತರಿಸಿರ್ಯಾದು ನೀಡಿರುವುದಾಗಿದೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ; 5.12.2013 ರಂದು ಸುಮಾರು ಬೆಳಗ್ಗೆ 10.00 ಗಂಟೆಗೆ ಫಿರ್ಯಾದಿದಾರರಾದ ಕೌಸರ್ ರವರ ಅಕ್ಕ ಝೀನ್ನತ್ ಎಂಬುವಳು ಫಿರ್ಯಾದಿದಾರರಿಂದ ಪರಿಚಯಸ್ಥರ ಮದುವೆ ಕಾರ್ಯಾಕ್ರಮಕ್ಕೆ ಹೋಗಲೇಂದು 13 ಪವನ ಚಿನ್ನಾಭರಣ ಪಡೆದಿದ್ದು ಇದುವರೆಗೂ ವಾಪಾಸು ನೀಡದೇ ಇದ್ದು ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ಹಾಜರಾಗಿ ಚಿನ್ನಾಭರಣಗಳನ್ನು ವಿವಿಧ ಫೈನಾನ್ಸ್ ಸಂಸ್ಥೆಗಳಲ್ಲಿ ಅಡವಿಟ್ಟು ಹಣವನ್ನು ಪಡೆದಿದ್ದು ಅದನ್ನು ವಾಪಾಸು ಬಿಡಿಸಿಕೊಡುತ್ತೇವೆಂದು ಹೇಳಿ ಇದುವರೆಗೂ ಚಿನ್ನಾಭರಣಗಳನ್ನು ವಾಪಾಸು ಮಾಡದೇ ಫಿರ್ಯಾದಿದಾರರಿಗೆ ನಂಬಿಕೆ ದ್ರೋಹ,ಹಾಗೂ ವಂಚನೆ ಮಾಡಿರುತ್ತಾರೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿಗಳಾದ ಜಾನ್ ಬಾಸಿಲ್ ಸಿಕ್ವೇರಾ, ಸ್ಟೀವನ್ ರಾಜೇಂದ್ರ ಸಿಕ್ವೇರಾ, ಲಝಾರಸ್ ಲೂವಿಸ್, ಶ್ರೀಮತಿ ಅವಿಲ್ಲಾ ಸೆರಾವೋ, ಫೆಲಿಕ್ಸ್ ಡಿ'ಸೋಜಾ, ಫೆಲಿಕ್ಸ್ ಸಲ್ದಾನಾ, ಮ್ಯಾನೇಜರ್ ಸಿಂಡಿಕೇಟ್ ಬ್ಯಾಂಕ್ ಕೈಕಂಬ ಬ್ರ್ಯಾಂಚ್, ಮಂಗಳೂರು ನೇಯವರುಗಳು ಫಿರ್ಯಾದಿದಾರರಾದ ಶ್ರೀ ಸ್ಟೀಫನ್ ಮೆಂಡಿಸ್ ರವರನ್ನು ವಂಚಿಸುವ ಉದ್ದೇಶದಿಂದ ಭಾರತ್ ಮಾತಾ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ಡ್ ಇದರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಿಂಡಿಕೇಟ್ ಬ್ಯಾಂಕ್ ಕೈಕಂಬ ಬ್ರ್ಯಾಂಚ್ ನಲ್ಲಿ ಸದ್ರಿ ವಿಧ್ಯಾಸಂಸ್ಥೆಯ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಶಾಲೆಯ ಫಂಡ್ನಿಂದ ಲಕ್ಷಾಂತರ ರೂಪಾಯಿಗಳನ್ನು ತೆಗೆದು ವಂಚಿಸಿರುತ್ತಾರೆ.
No comments:
Post a Comment