Monday, February 23, 2015

MEETING :

ಉರ್ವ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ನಡೆದ ಮೊಹಲ್ಲಾ ಸಭೆಯ ಮಾಹಿತಿ ವಿವರ

* * *

ದಿನಾಂಕ 22-02-15 ರಂದು 18.00 ಗಂಟೆಗೆ  ಉರ್ವ ಪೊಲೀಸ್ ಠಾಣಾ  ವ್ಯಾಪ್ತಿಯ  ಕೋಡಿಕಲ್ ಕಟ್ಟೆಯಲ್ಲಿ ಮೊಹಲ್ಲಾ ಸಭೆಯನ್ನು ನಡೆಸಲಾಗಿರುತ್ತದೆ. ಈ ಸಭೆಯಲ್ಲಿ ಉರ್ವ ಪೊಲೀಸ್ ಠಾಣಾ ಸರಹದ್ದಿನ 5ನೇ ಗ್ರಾಮಗಸ್ತಿನಲ್ಲಿ ಬರುವ ಸದಸ್ಯರು ಹಾಜರಿದ್ದು ಈ ಸಭೆಯನ್ನು  ಉರ್ವ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಹೆಚ್.ಎಂ ಪೂವಪ್ಪ ರವರ  ನೇತೃತ್ವದೊಂದಿಗೆ, ,ಪಿ.ಸಿ 2200 ನೇ ಸದಾಶಿವ ಮತ್ತು ಪಿ.ಸಿ 461 ಲೋಕೇಶ್ ರವರು ಹಾಜರಿದ್ದು, ಈ ಸಭೆಯಲ್ಲಿ 15  ಜನ ಗ್ರಾಮಸ್ಥರು ಪಾಲ್ಗೊಂಡಿರುತ್ತಾರೆ. ಈ ಸಭೆಯಲ್ಲಿ ಸೇರಿದ್ದ ಗ್ರಾಮಸ್ಥರಿಗೆ ಕುಂದು ಕೊರತೆಗಳ ಬಗ್ಗೆ ವಿಚಾರಿಸಲಾಗಿ, ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬರಲಿಲ್ಲವಾಗಿ ನಮ್ಮೊಡನೆ ಮಾಹಿತಿ ವಿನಿಮಯ ಮಾಡಿಕೊಂಡಿರುತ್ತಾರೆ. ಹಾಗೂ ಮುಂದಿನ ದಿನಗಳಲ್ಲಿ ಯಾವುದಾದರೂ ಸಮಸ್ಯೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಮಗೆ ತಿಳಿಸುವುದಾಗಿ ಹೇಳಿರುತ್ತಾರೆ. ಅವರಿಗೆ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಹಾಗೂ ಅವರಿಗೆ ಠಾಣಾ ಪಿ.ಐ ಮತ್ತು ಪಿ.ಎಸ್.ಐ(ಕಾ.ಸು) ರವರ ದೂರವಾಣಿ ನಂಬ್ರವನ್ನು ಕೊಟ್ಟು, ಯಾವುದೇ ವಿಶೇಷತೆಗಳು ಕಂಡು ಬಂದಲ್ಲಿ ಸದ್ರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಯಿತು.

 

ಐದನೇ ಗ್ರಾಮಗಸ್ತಿನಲ್ಲಿ ನಡೆಸಲಾದ ಮೊಹಲ್ಲಾ ಸಭೆಯ ಭಾವಚಿತ್ರ

 

No comments:

Post a Comment