ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತೀಯಲ್ಲಿ ಸಭೆ
ದಿನಾಂಕ 10-02-15 ರಂದು 17.30 ಗಂಟೆಗೆ ಮೂಡುಬಿದ್ರೆ ಪೇಟೆಯ ಕೋರ್ಪಸ್ ಕ್ರಿಸ್ಟಿ ಚರ್ಚ್ ನ ಸಬಾಂಗಣದಲ್ಲಿ ಚರ್ಚ್ ನ ಭದ್ರತೆ ಹಾಗು ಪರಿಸರದ ಹಾಗುಹೋಗುಗಳ ಬಗ್ಗೆ ಸಭೆಯನ್ನು ಮೂಡುಬಿದ್ರೆ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತ್ರತ್ವದಲ್ಲಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಸುಮಾರು 24 ಜನ ಗಣ್ಯರು ಹಾಜರಿದ್ದರು. ಚರ್ಚ್ ನ ಭದ್ರತೆ ಹಾಗುಹೋಗುಗಳ ಬಗ್ಗೆ ಚರ್ಚಿಸಲಾಯಿತು. ಸದ್ರಿ ಚರ್ಚ್ ಮೂಡುಬಿದ್ರೆ ಪೇಟೆಯ ರಸ್ತೆ ಬದಿಯಲ್ಲಿದ್ದು, ಚರ್ಚ್ ನ ಭದ್ರತೆ ಬಗ್ಗೆ ಸೆಕ್ಯೂರಿಟ್ ಗಾರ್ಡ ನೇಮಿಸಲು ಮತ್ತು ಸಿಸಿ ಟಿವಿ ಅಳವಡಿಸಲು ಸೂಚಿಸಲಾಯಿತು. ಅನುಮಾನಸ್ಪದ ಅಪರಿಚಿತ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಯಾವುದೇ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಕೋರಿಕೊಳ್ಳಲಾಗಿದೆ. ಜನರು ಅಲ್ಲದೇ ಅಲ್ಲಲ್ಲಿ ಕಳ್ಳತನ ಅಗುತ್ತಿರುವ ಬಗ್ಗೆ ವಿಷಯ ಪ್ರಸ್ತಾಪಿಸಿ ಯಾವುದೇ ಸಭೆ ಸಮಾರಂಭಕ್ಕೆ ಹೋಗುವಾಗ ಮನೆಯನ್ನು ಭದ್ರಪಡಿಸಿ ಹೋಗಬೇಕು ಮನೆಯನ್ನು ಖಾಲಿ ಬಿಡಬಾರದು ಅಲ್ಲದೇ ಮಹಿಳೆಯರು ಒಡವೆಗಳನ್ನು ಧರಿಸಿ ಹೋಗುವುದನ್ನು ಕಡಿಮೆ ಮಾಡಬೇಕು. ಅಲ್ಲದೇ ಅಪರಿಚಿತರು ಬೈಕ್ ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಎಚ್ಚರ ಇರುವಂತೆ ತಿಳಿಸಲು ಸೂಚಿಸಲಾಯಿತು. ಹೆಚ್ಚಿನ ಒಡೆವೆಗಳನ್ನು ಬ್ಯಾಂಕ್ ಲಾಕರ್ ನಲ್ಲಿಡುವುದು ಉತ್ತಮ ಎಂದು ತಿಳಿಸಲಾಯಿತು.
ಸಭೆಯ ಪೋಟೊ
|
No comments:
Post a Comment