ದೈನಂದಿನ ಅಪರಾದ ವರದಿ.
ದಿನಾಂಕ 07.02.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
2
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
3
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
4
|
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಸುಭಾಷ್ ಶೆಟ್ಟಿ ರವರು ಡಯಾಕಮ್ ಪ್ಲಾನ್ಮ್ ನೇ ಕಂಪೆನಿಯಲ್ಲಿ ಮೆನೆಜರ್ ಆಗಿದ್ದು, ಸದ್ರಿ ಕಂಪೆನಿಗೆ ಸೇರಿದ ಕಟ್ಟಡವು ಕೋಲ್ನಾಡು ಇಂಡಸ್ಟ್ರೀಯಲ್ ಏರಿಯಾದಲ್ಲಿ ನಿರ್ಮಾಣ ಹಂತದಲ್ಲಿ ಇರುತ್ತದೆ. ಕಟ್ಟಡದ ಹಿಂಬದಿ ಯಲ್ಲಿ ಕೆಲವು ಕಬ್ಬಿಣದ ಹಳೆಯ ಆಂಗ್ಲರ್ ಗಳನ್ನು ಕಳೆದ ಏಳು- ಎಂಟು ತಿಂಗಳ ಹಿಂದೆ ಇರಿಸಲಾಗಿದ್ದು, ಪಿರ್ಯಾಧಿದಾರರು ಸುಮಾರು ಒಂದು ತಿಂಗಳ ಹಿಂದೆ ಕಂಪೆನಿಗೆ ಬಂದು ನೋಡಿಕೊಂಡು ಹೋಗುತ್ತಿರುವುದಾಗಿದೆ. ಅದರಂತೆ ಪಿರ್ಯಾಧಿದಾರರು ದಿನಾಂಕ 05-02-2015 ರಂದು ಮದ್ಯಾಹ್ನ ಸುಮಾರು 12-00 ಗಂಟೆಗೆ ಕಂಪೆನಿಯ ಶೆಡ್ ಹಿಂಬದಿ ಗೆ ಬಂದು ನೋಡಿದಾಗ, ಕಭ್ಭಿಣದ ಆಂಗ್ಲರ್ ಗಳ ಪೈಕಿ ಸುಮಾರು 850 ಆಂಗ್ಲರ್ ಗಳು ಮತ್ತು 20 "ಸಿ' ಆಕೃತಿಯಲ್ಲಿ ಇರುವ ಕಬ್ಬಿಣದ ಚೆನೆಲ್ ಆಗಿರುವುದು ಕಂಡು ಬಂದಿದ್ದು, ಸದ್ರಿ ಕಬ್ಬಿಣದ ಆಂಗ್ಲರ್ ಗಳನ್ನು ಯಾರೋ ಕಳ್ಳರು ದಿನಾಂಕ 05-02-2015 ರಿಂದ ಒಂದು ತಿಂಗಳ ಹಿಂದೆ ಕಳವು ಮಾಡಿಕೊಂಡು ಹೋಗಿದ್ದು, ಕಳವಾಗಿರುವ ಕಬ್ಬಿಣದ ಆಂಗ್ಲರ್ ಗಳ ಒಟ್ಟು ಮೌಲ್ಯ ರೂ 1,50,000/ ರೂ( ಒಂದು ಲಕ್ಷದ ಐವತ್ತು ಸಾವಿರ) ಆಗಬಹುದು.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05.02.2015 ರಂದು ಪಿರ್ಯಾದಿದಾರರಾದ ಶ್ರಿ ರಾಜೇಶ್ ಎಂಬವರು ತನ್ನ ಸ್ನೇಹಿತರಾದ ಪ್ರವೀಣ್ ಮತ್ತು ರಘುವಿನೊಂದಿಗೆ ಅವರ ಪರಿಚಯದ ವಾಸಣ್ಣ ಎಂಬವರ ಮನೆಯಲ್ಲಿ ಮಗು ತೊಟ್ಟಿಲು ಹಾಕುವ ಕಾರ್ಯಕ್ರಮಕ್ಕೆ ಹೋಗಿದ್ದು, ಕಾರ್ಯಕ್ರಮ ಮುಗಿಸಿ ವಾಪಾಸು ರಾತ್ರಿ ಸುಮಾರು 22.00 ಗಂಟೆಯ ಸಮಯಕ್ಕೆ ತಾವು ಬಂದಿದ್ದ ಬೈಕಿನಲ್ಲಿ ಮನೆಗೆ ಬರುವ ಸಮಯ ಮಿಲ್ಲತ್ ನಗರ ಬಸ್ಸು ನಿಲ್ದಾಣ ತಲುಸಿದಾಗ ಪಿರ್ಯದಿದಾರರ ಗುರುತು ಪರಿಚಯದ ಮಿಲ್ಲತ್ ನಗರ ನಿವಾಶಿಗಳಾದ ಜಾಕೀರ್, ಖಲಂದರ್, ಆಶಿಫ್ ಮತ್ತು ಇತರರು ಏಕಾಏಕಿ ರಸ್ತೆಗೆ ಬಂದು ಬೈಕನ್ನು ತಡೆದು ನಿಲ್ಲಿಸಿ ನಿಮಗೆ ಭಾರಿ ಅಹಂಕಾರ ಉಂಟು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ನಿಮ್ಮ ಜೀವ ತೆಗೆಯುತ್ತೇವೆ ಎಂಬುದಾಗಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆಯನ್ನು ಒಡ್ಡಿ ದೊಣ್ಣೆಯಿಂದ ಮತ್ತು ಕೈಯಿಂದ ಹೊಡೆದ ಪರಿಣಾಮ ಪಿರ್ಯಾದಿದಾರರ ತಲೆಗೆ ರಕ್ತ ಬರುವ ಗಾಯ ಮತ್ತು ಎಡ ಕಾಲಿನ ತೊಡೆಗೆ ಗುದ್ದಿದ ಗಾಯವಾಗಿದ್ದು ತನ್ನ ಜೊತೆ ಇದ್ದ ಪ್ರವೀಣನಿಗೆ ತಲೆಗೆ ಹಾಗೂ ಎಡ ಕಾಲಿನ ಕೋಲು ಗುದ್ದಿದ ಮತ್ತು ತರಚಿದ ಗಾಯವಾಗಿದ್ದು ರಘುನಿಗೆ ತಲೆಗೆ ಹಾಗೂ ಎಡ ಕೈಗೆ ಗುದ್ದಿದ ಗಾಯವಾಗಿದ್ದು ನಂತರ ತನ್ನ ಅಣ್ಣನಿಗೆ ಪೋನ್ ಮಾಡಿದಾಗ ಆತನು ಬಂದು ಒಂದು ಕಾರಿನಲ್ಲಿ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದು ಅಲ್ಲಿ ವೈದ್ಯರು ನಮ್ಮನ್ನು ಪರೀಕ್ಷಿಸಿ ಹೊರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-02-2015 ರಂದು ಸಮಯ ಸುಮಾರು ಸಂಚೆ 5.50 ಗಂಟೆಗೆ ಪಿರ್ಯಾದುದಾರರಾದ ರವಿನಾ ಜೆನಿತ್ ಮೊಂತೆರೋ ರವರು ತಮ್ಮ ಬಾಬ್ತು ಸ್ಕೊಟರ್ ನಂಬ್ರ ಕೆಎ-19 ಇಇ-0037ನೇದರಲ್ಲಿ ಸವಾರರಾಗಿ ಹಾಗೂ ಕುಮಾರಿ : ಸ್ಮಿತ್ ಕ್ಯಾರೆಲ್ ಪಾಯಿಸ್ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳರಿಸಿಕೊಂಡು ಬಿಜೈ ಚರ್ಚ ಕಡೆಯಿಂದ ಪಿರ್ಯಾದುದಾರರ ಮನೆಯಾದ ಶಕ್ತಿ ನಗರಕ್ಕೆ ಹೋಗುವರೇ ಸರ್ಕ್ಯೋಟ್ ಹೌಸ್ ಜಂಕ್ಷನ್ ಬಳಿ ತಲುಪುತ್ತಿದಂತೆ ಕೆಪಿಟಿ ಕಡೆಯಿಂದ ಮೊ ಸೈಕಲ್ ನಂಬ್ರ ಕೆ.ಎ-19ಇಎ-2215 ನೇದನ್ನು ಅದರ ಸವಾರ ಹಿಂಬದಿ ಸವಾರರೊಬ್ಬರನ್ನು ಕುಳ್ಳರಿಸಿಕೊಂಡು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗಿವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಹಿಂಬದಿ ಸವಾರರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಪಿರ್ಯಾದುದಾರರಿಗೆ ಬಲಕೈಗೆ ತರಚಿದ ಗಾಯ ಹಾಗೂ ಎಡಕಾಲಿಗೆ ಮತ್ತು ಸೊಂಟಕ್ಕೆ ಗುದ್ದಿದ ಗಾಯ ಉಂಟಾಗಿದ್ದು ಹಿಂಬದಿ ಸವಾರರಾದ ಕು, ಸ್ಮಿತ ಕ್ಯಾರಲ್ ಪಾಯಿಸ್ ರವರಿಗೆ ಬಾಯಿಗೆ ಗುದ್ದಿದ ನೋವು ತುಟಿಗೆ, ಮೂಗಿಗೆ ರಕ್ತಗಾಯ ಹಾಗೂ ಎದುರಿನ ಮೆಲ್ಭಾಗದ ಹಲ್ಲು ತುಂಡಾಗಿರುತ್ತದೆ. ಮತ್ತು ಕೈಕಾಲುಗಳಿಗೆ ಗುದ್ದಿದ ನೂವು ಉಂಟಾಗಿ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಅಪಘಾತ ಮಾಡಿದ ಮೊ ಸೈಕಲ್ ಸವಾರ ಬೈಕ ಸಮೇತ ಪರಾರಿಯಾಗಿರುತ್ತಾನೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06/02/2015 ರಂದು 01.30 ಗಂಟೆಗೆ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮ ಗಂಜಿಮಠ ಜೆ.ಎಂ. ರೋಡ್ ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ಮೀರಾ ಮುನಾವರ್ ರವರ ಮನೆಯ ದನದ ಹಟ್ಟಿಯಲ್ಲಿದ್ದ 14 ದನ ಕರುಗಳ ಪೈಕಿ 5 ದನ ಕರುಗಳನ್ನು ಯಾರೋ ಕಳ್ಳರು ಹಟ್ಟಿಯ ಕಂಪೌಂಡನ್ನು ಹಾರಿ ಒಳಬಂದು ಬಾಗಿಲಿನ ಚಿಲಕವನ್ನು ಒಳಗಿನಿಂದ ತೆರೆದು ವಾಹನವೊಂದರಲ್ಲಿ ತುಂಬಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ದನಕರುಗಳ ಒಟ್ಟು ಮೌಲ್ಯ ರೂ. 15,000 ಆಗಬಹುದು.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06/02/2015 ರಂದು ಪಿರ್ಯಾದಿದಾರರಾದ ಶ್ರೀ ನಿತೇಶ್ ಎಂಬವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ: ಕೆಎ-19-ಇಎಲ್-4088 ನೇದರಲ್ಲಿ ಉದಯ ಶೆಟ್ಟಿ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೈಕಂಬ ಜಂಕ್ಷನ್ ನಿಂದ ಪೊಳಲಿ ದ್ವಾರದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಂಗಳೂರು ತಾಲ್ಲೂಕು ಕಂದಾವರ ಗ್ರಾಮದ ವಿಕಾಸ ನಗರ ಸಮೀಪ ತಲುಪುತ್ತಿದ್ದಂತೆ ರಾತ್ರಿ ಸುಮಾರು 08.40 ಗಂಟೆಗೆ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಬಸ್ಸು ನಂಬ್ರ: ಕೆಎ-19-ಎಎ-2366 ನೇ ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ನಂಬ್ರ ಕೆಎ-19-ಇಎಲ್-4088 ನೇಯದಕ್ಕೆ ಡಿಕ್ಕಿ ಹೊಡೆದುದರ ಪರಿಣಾಮ ಮೋಟಾರು ಸೈಕಲ್ ಸವಾರನಾದ ನಿತೇಶ್ ಎಂಬವರು ರಸ್ತೆಗೆ ಬಿದ್ದುದರ ಪರಿಣಾಮ ಹಣೆಗೆ ಮತ್ತು ತಲೆಗೆ ರಕ್ತ ಬರುವ ಸದಾ ಸ್ವರೂಪದ ಗಾಯವಾಗಿದ್ದು ಕೈಗೆ ಮತ್ತು ಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ. ಹಾಗೂ ಸಹ ಸವಾರನಾದ ಉದಯ ಶೆಟ್ಟಿ ಎಂಬವರು ರಸ್ತೆಯ ಬಲ ಬದಿಗೆ ಬಿದ್ದುದರಿಂದ ಬಸ್ಸಿನ ಹಿಂದಿನ ಚಕ್ರವು ಅತನ ತಲೆಯ ಮೇಲೆ ಹರಿದು ಹೋಗಿದ್ದು ಸದ್ರಿಯವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಹೀಂ ಉಚ್ಛಿಲ್ ರವರು ಸ್ವಂದನ ಟಿ.ವಿಯಲ್ಲಿ ಸಂದರ್ಶನ ನೀಡಿದ ಬಳಿಕ ಅನಾಮಧೇಯ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿದ್ದು ಕೊಲ್ಲುವ ಬೆದರಿಕೆ ನೀಡುತ್ತಿದ್ದು, ಇಂಟರ್ನೆಟ್ ಕರೆ ಮೂಲಕ ಹಲವು ಬೆದರಿಕೆ ಕರೆ ಬಂದಿದ್ದು, ದಿನಾಂಕ 05-02-2015 ರಂದು ಸಾಯಂಕಾಲ 5-03 ಗಂಟೆಗೆ ಇಂಟರ್ನೆಟ್ ಕರೆ ಮೂಲಕ ವ್ಯಕ್ತಿಯೊಬ್ಬನು ಹಿಂದಿ ಬಾರಿ ಭಾಷೆಯಲ್ಲಿ ಕೆಟ್ಟ ಶಬ್ದಗಳಿಂದ ನಿಂದಿಸಿ ಒಂದು ವಾರದೊಳಗಾಗಿ ಪಿರ್ಯಾದಿದಾರರನ್ನು ಕೊಲ್ಲುತ್ತೇನೆ ಬೆದರಿಕೆ ಹಾಕಿರುವುದಾಗಿದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-02-2015 ರಂದು 15-50 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಅರ್ಷದ್ ರವರು ತನ್ನ ಮೋಟಾರ್ ಸೈಕಲ್‌ಗೆ ಕೋಟೆಕಾರ್ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ತುಂಬಿಸಿ ಕೋಟೆಕಾರ್‌ನಿಂದ ಸೊಮೇಶ್ವರ ಮೂಲಕ ಉಳ್ಳಾಲಕ್ಕೆ ಬರುತ್ತಾ ಅಡ್ಕ ಭಗವತೀ ದೇವಸ್ಥಾನದ ಎದುರು 16-00 ಗಂಟೆಗೆ ತಲುಪುತ್ತಿದ್ದಂತೆ ಅಲ್ಲೇ ಎಡ ಬದಿಯ ಮರದ ಅಡಿಯಲ್ಲಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಕುಳಿತ್ತಿದ್ದ ಯಾರೋ ಅಪರಿಚಿತ ಬೈಕ್ ಸವಾರರಿಬ್ಬರು ಫಿರ್ಯಾದಿಯು ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವುದನ್ನು ಕಂಡು ಈ ಅಪರಿಚಿತ ಸವಾರರು ನಂಬ್ರ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ನಲ್ಲಿ ಫಿರ್ಯಾದಿಯ ಬೈಕ್ನ್ನು ಬೆನ್ನಟ್ಟಿಕೊಂಡು ಬಂದು ಫಿರ್ಯಾದಿಯನ್ನು ಕೊಲ್ಲುವ ಉದ್ದೇಶದಿಂದ ಕೈಯಲ್ಲಿದ್ದ ತಲ್ವಾರ್ನಿಂದ ಫಿರ್ಯಾದಿಯ ತಲೆಯ ಮೇಲೆ ಬೀಸಿದಾಗ ಫಿರ್ಯಾದಿದಾರರು ಬಗ್ಗಿ ತಪ್ಪಿಸಿಕೊಂಡು ಮುಂದಕ್ಕೆ ಹೋಗಿದ್ದು, ನಂತರ ಆರೋಪಿಗಳು ಎಲ್ಲೋ ಪರಾರಿಯಾಗಿರುವುದಾಗಿದೆ.
9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಯಾರೋ ಅಪರಿಚಿತ ವ್ಯಕ್ತಿ ಫಿರ್ಯಾದುದಾರರಾದ ಪೂರ್ಣಿಮಾ, ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ರವರ ಮೊಬೈಲಿಗೆ ಅಪರಿಚಿತ ಮೊಬೈಲ್ ನಂಬ್ರದಿಂದ ಕೋಮುಗಲಭೆ ದೃಶ್ಯ ಮತ್ತು ಲೋಕಸಭಾ ಸದಸ್ಯರ ಭಾವಚಿತ್ರ ಇರುವ ದೃಶ್ಯಗಳನ್ನು ವಾಟ್ಸಪ್ ಮೂಲಕ ಕಳುಹಿಸಿದ್ದು, ಅಲ್ಲದೇ ದಿನಾಂಕ 05-02-2015 ರಂದು ಅದೇ ಮೊಬೈಲಿನಿಂದ ಫಿರ್ಯಾದುದಾರರ ಮೊಬೈಲಿಗೆ ಅಶ್ಲೀಲ ವಿಡಿಯೋ ಚಿತ್ರ ಕಳುಹಿಸಿರುತ್ತಾರೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:06.02.2015 ರಂದು ಫಿರ್ಯಾದಿದಾರರಾದ ಪ್ರೊ. ಅಮೀರ್ ಹಸನ್ ಅರ್ಕುಳ ರವರು ಅವರ ಬಾಬ್ತು ಕೆಎ-19 ಎನ್-7909 ನೇ ಮಾರುತಿ ಕಾರನ್ನು ಅವರೇ ಚಲಾಯಿಸುತ್ತಾ ಪಂಪವೆಲ್ನಿಂದ ತೊಕ್ಕೊಟ್ಟು ಕಡೆಗೆ ರಾ.ಹೆ-66 ರಲ್ಲಿ ಹೋಗುತ್ತಾ ಬೆಳಿಗ್ಗೆ ಸುಮಾರು 09.00 ಗಂಟೆ ವೇಳೆಗೆ ಮಹಾಕಾಳಿ ಪಡ್ಪು ಜಂಕ್ಷನ್ನ ನೇತ್ರಾವತಿ ಬ್ರಿಡ್ಜ್ ಬಳಿ ತಲುಪಿದಾಗ ಕೆಎ-19 ಎಇ-7000 ನೇ ನಂಬ್ರದ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಪಂಪವೆಲ್ ಕಡೆಯಿಂದ ತೊಕ್ಕಟ್ಟು ಕಡೆಗೆ ಚಲಾಯಿಸುತ್ತಾ ಬಂದು ಫಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಫಿರ್ಯಾದಿದಾರರ ಕಾರಿನ ಹಿಂಬದಿ ಬಾಡಿ ಮತ್ತು ಹಿಂಬದಿ ಕನ್ನಡಿ ಜಖಂ ಆಗಿರುತ್ತದೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06.02.2015 ರಂದು ಸಂಜೆ ಸುಮಾರು 4.00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಬಾಲಚಂದ್ರ ರವರಿಗೆ ಪರಿಚಯವಿರುವ ಸತೀಶ್ @ ಸಚ್ಚು, ಪ್ರಶಾಂತ ಮತ್ತು ಇತರ ಇಬ್ಬರು ಜಪ್ಪಿನಮೋಗೆರು ಎಂಬಲ್ಲಿರುವ ಪೆಗಾಸಿಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಬಂದು ಗ್ರೀನ ಪೆವಿಲಿಯನ್ನ ಟೆಬಲ್ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಸಂಜೆ ಸುಮಾರು 5.30 ಗಂಟೆ ಸಮಯಕ್ಕೆ ಪಿರ್ಯಾದಿದಾರರಿಗೆ ಪರಿಚಯವಿರುವ ವಿಜ್ಜು@ವಿಜೇಶ್ ಎಂಬಾತನು ಕೈಯಲ್ಲಿ ಮಚ್ಚು ಕತ್ತಿ, ಹರೀಶ್ ಎಂಬಾತನು ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಬಂದು ಮೊದಲೇ ಟೆಬಲ್ನಲ್ಲಿ ಕುಳಿತುಕೊಂಡಿದ್ದ ಸತೀಶ@ಸಚ್ಚು ಎಂಬವನ ಬಳಿ ಬಂದು ಏಕಾಎಕಿಯಾಗಿ ಹರಿಶ್ನು ಆತನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಸತೀಶ್@ ಸಚ್ಚು ಎಂಬವನ ತಲೆಗೆ ಹೊಡೆದನು. ಆಗ ವಿಜ್ಜು ಎಂಬಾತನು ಆತನ ಕೈಯಲ್ಲಿದ್ದ ಮಚ್ಚು ಕತ್ತಿಯಿಂದ ಸತೀಶ್@ ಸಚ್ಚುವಿಗೆ ಹೊಡೆಯಲು ಹೋದಾಗ ಸತೀಶನು ತಡೆದದ್ದರಿಂದ ವಿಜ್ಜುವಿನ ಕೈಯಲ್ಲಿದ್ದ ಮಚ್ಚು ಕತ್ತಿ ಅಲ್ಲಿಯೇ ಕೆಳಗೆ ಬಿತ್ತು ಆಗ ವಿಜ್ಜು ಅಲ್ಲಿಯೇ ಪಕ್ಕದಲ್ಲಿದ್ದ ಸೋಡಾ ಟ್ರೇಯಿಂದ ಸೋಡಾ ಬಾಟಲಿಯನ್ನು ತೆಗೆದು ಅದರಿಂದ ಸತೀಶನಿಗೆ ಹೊಡೆದನು ಅಷ್ಟರಲ್ಲಿ ಸತೀಶನ ಜೊತೆಗಿದ್ದವರು ಹರೀಶ್ ಮತ್ತು ವಿಜುವನ್ನು ತಡೆದಾಗ ಸತೀಶನು ಕುಳಿತಲ್ಲಿಂದ ಎದ್ದು ಸೋಡಾ ಟ್ರೇಯಿಂದ ಸೋಡಾ ಬಾಟಲಿಯನ್ನು ತೆಗೆದು ಹರೀಶ್ನಿಗೆ ಹೊಡೆದಿರುತ್ತಾನೆ. ಆಗ ಹರೀಶ್ನ ಕೈಯಲ್ಲಿದ್ದ ಕಬ್ಬಿಣದ ರಾಡು ಕೆಳಗೆ ಬಿದ್ದಿದ್ದು, ಸತೀಶನು ಅದೇ ರಾಡನ್ನು ತೆಗೆದುಕೊಂಡು ಹರೀಶನಿಗೆ ಮತ್ತು ವಿಜ್ಜುವಿಗೆ ಹೊಡೆದಿರುತ್ತಾನೆ. ಆನಂತರ ಅವರುಗಳು ಪರಸ್ಪರ ಹೊಡೆದಾಡುಕೊಂಡು ಅಲ್ಲಿದ್ದ ಸೋಡಾಬಾಟಲಿ ಮತ್ತು ಗ್ಲಾಸುಗಳನ್ನು ಪರಸ್ಪರ ಬಿಸಾಡಿಕೊಂಡು ಒಡೆದು ಹಾಕಿರುತ್ತಾರೆ. ಈ ಘಟನೆಯಲ್ಲಿ ಸತೀಶ್ @ ಸಚ್ಚುವಿನ ತಲೆಗೆ ಗಂಭೀರ ರೀತಿಯ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಹರೀಶ್ ಎಂಬಾತನ ತಲೆಗೂ ಗಂಬೀರ ಸ್ವರೂಪದ ಗಾಯವಾಗಿದ್ದು, ವಿಜ್ಜುವಿಗೆ ಕೂಡ ಗಾಯವಾದಂತೆ ಕಂಡುಬರುತ್ತಿತ್ತು, ನಂತರ ಗಾಯಗೊಂಡ ಸತಿಶನನ್ನು ಆತನ ಜೊತೆಯಲ್ಲಿದ್ದವರು ಕರೆದುಕೊಂಡು ಹೋಗಿದ್ದು, ನಂತರ ವಿಜು ಎಂಬಾತನು ಅಲ್ಲಿಂದ ಹೊರಟು ಹೋಗಿರುತ್ತಾನೆ. ಗಾಯಗೊಂಡ ಹರೀಶ್ ಎಂಬಾತನನ್ನು ಪಿರ್ಯಾದುದಾರರು ಮತ್ತು ಇತರರು 108 ಅಂಬುಲೆನ್ಸನ್ನು ಕರೆಯಿಸಿ ಚಿಕಿತ್ಸೆ ಬಗ್ಗೆ ಕಳುಹಿಸಿ ಕೊಟ್ಟಿದ್ದು. ಗಾಯಾಳುಗಳ ಪೈಕಿ ಸತೀಶ್ ಮತ್ತು ಹರೀಶ್ ಎಂಬವರುಗಳು ಪಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆಯಿಂದ ಪಿರ್ಯಾದುದಾರರು ಕೆಲಸ ಮಾಡುವ ಬಾರ್ ಆ್ಯಂಡ್ ರೆಸ್ಟೋರಂಟ್‌ನ ಮಾಲಿಕರಿಗೆ ಸುಮಾರು 10,000 ರೂಪಾಯಿ ನಷ್ಟವಾಗಬಹುದು, ಇವರುಗಳು ಯಾವುದೋ ಓಂದು ಪೂರ್ವ ದ್ವೇಷದಿಂದ ಈ ರೀತಿ ಹಲ್ಲೆ ಮಾಡಿರುವುದಾಗಿ ಕಂಡು ಬರುತ್ತದೆ.
No comments:
Post a Comment