Thursday, February 26, 2015

Daily Crime Reports : 26-02-2015

ದೈನಂದಿನ ಅಪರಾದ ವರದಿ.
ದಿನಾಂಕ 26.02.201512:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
4
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
1




























1.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಎಟಿಸಿ ಟೆಲಿಕಾಂ ಟವರ್ ಕಾರ್ಪೊರೇಶನ್ ರವರು ನಿರ್ಮಿಸಿರುವ ಮೊಬೈಲ್ ಗೋಪುರವು ಜಯಂತ್ ಹಂಡೆಲ್ ಸರ್ವೆ ನಂಬ್ರ 236/1-1ಬಿ ಮಾರ್ಪಾಡಿ ಗ್ರಾಮ, ಗಾಂದಿನಗರ ಮೂಡಬಿದ್ರೆಯಲ್ಲಿ ಅಳವಡಿಸಿರುವ 24 ಬ್ಯಾಟರಿಯನ್ನು ಮೊಬೈಲ್ ಗೋಪುರ ದಿನಾಂಕ 22-02-2015 ರಂದು ಬೆಳಿಗ್ಗೆ 3.30 ಕ್ಕೆ ಕಳವು ಗೈದಿರುವುದು ಎಟಿಸಿ ಟೆಲಿಕಾಂ ಟವರ್ ಕಾರ್ಪೊರೇಶನ್ ಶ್ರೀ ದೀಪಕ್ ರವರ ಗಮನಕ್ಕೆ ಬಂದಿರುತ್ತದೆ. ಈ ಗೋಪುರದಲ್ಲಿ ಕಾವಲುಗಾರ ಮತ್ತು ಯಾವುದೇ ರೀತಿಯ ಸಿಸಿ ಕ್ಯಾಮರವನ್ನು ಅಳವಡಿಸಿರುವುದಿಲ್ಲ.

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  25.02.2015  ರಂದು  ರಾತ್ರಿ  8:30  ಗಂಟೆಗೆ KA 19 EL 3337  ನೇ  ಮೋಟಾರು  ಸೈಕಲ್‌  ಸವಾರ  ಶ್ರೀನಿವಾಸ್‌  ಕಾಮತ್‌ , ಆತನ  ಬಾಬ್ತು  ಮೋಟಾರು  ಸೈಕಲ್ನಲ್ಲಿ ಮೂಡಬಿದ್ರೆಯಿಂದಪೇಪರ್ಮಿಲ್‌‌  ಕಡೆಗೆ  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿ  ಮಂಗಳೂರು  ತಾಲೂಕು  ಪ್ರಾಂತ್ಯ  ಗ್ರಾಮದ  ಲಾಡಿ  ಎಂಬಲ್ಲಿ  ರಸ್ತೆಯ  ಎಡಬದಿಯಲ್ಲಿ  ನಡೆದುಕೊಂಡು  ಹೋಗುತ್ತಿದ್ದ  ಮೊಹಮ್ಮದ್‌  ಇರ್ಷಾದ್ನಿಗೆ ಒಮ್ಮೆಲೆ ಡಿಕ್ಕಿ ಹೊಡೆದ ಪರಿಣಾ ಮ  ಮೋಟಾರು  ಸೈಕಲ್  ಸವಾರ  ಶ್ರೀನಿವಾಸ್‌  ಕಾಮತ್ಮೋಟಾರು  ಸೈಕಲ್ನೊಂದಿಗೆ ರಸ್ತೆಗೆ ಬಿದ್ದು  ಮೂಗಿಗೆ  ಕುತ್ತಿಗೆಗೆ, ತಲೆಯ ಹಿಂದುಗಡೆ ಹಾಗೂ  ಬಲ  ಭುಜಕ್ಕೆ ಗಂಬೀರ  ಗಾಯಗೊಂಡವನನ್ನು  ಮೂಡಬಿದ್ರೆ  ಸರಕಾರಿ  ಆಸ್ಪತ್ರೆಗೆ  ತಂದು  ವೈದ್ಯರಲ್ಲಿ  ಪರೀಕ್ಷಿಸಿದಾಗ  ಆತನು  ಮೃತಪಟ್ಟಿರುವುದಾಗಿ ತಿಳಿದು  ಬಂದಿದ್ದು, ಪಾದಚಾರಿ  ಇರ್ಷಾದ್ಗೆ  ಕೂಡಾ  ಮೂಗಿಗೆ, ಹಣೆಗೆ  ರಕ್ತ ಗಾಯಗೊಂಡಿದ್ದು, ಬಲಕೋಲು ಕಾಲಿಗೆ  ಗುದ್ದಿದ ಜಖಂಗೊಂಡಿದ್ದುಮೋಟಾರು  ಸೈಕಲ್‌  ಸವಾರ  ಶ್ರೀನಿವಾಸ್‌  ಕಾಮತ್  ಅತೀ  ವೇಗ  ಹಾಗೂ  ಅಜಾಗರೂಕತೆಯ  ಚಾಲನೆಯ  ಪರಿಣಾಮ  ಬಿದ್ದು  ಗಂಭೀರ ಗಾಯಗೊಂಡು  ಮೃತಪಡಲು ಕಾರಣವಾಗಿರುತ್ತಾರೆ.

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24/02/2015 ರಂದು ಸಮಯ ಸಂಜೆ ಸುಮಾರು 17:00 ಗಂಟೆಗೆ ಮಂಗಳೂರು ನಗರದ ವೆಲೆನ್ಸಿಯಾ ಗೋರಿಗುಡ್ಡೆ ಎಂಬಲ್ಲಿ PURPULE STREET APPARTMENTS  ಎದುರುಗಡೆ ರಸ್ತೆಯಲ್ಲಿ  ಕೆ ಎ 19 ಎಎ 5550 ನೇ  ನಂಬ್ರದ ಟೆಂಪೊವನ್ನು ಅದರ ಚಾಲಕ ರಾಧಾಕೃಷ್ಣ ಎಂಬಾತನು ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಢು ಹೋಗುತ್ತಿದ್ದ ಫಿರ್ಯಾದುದಾರರಾದ ಶ್ರೀ ರವೀಂದ್ರ ಜೆ. ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದುದಾರರು ರಸ್ತೆ ಬದಿಯ ಕಂಪೌಂಡ್ ಗೋಡೆಗೆ ಬಿದ್ದು ಫಿರ್ಯಾದುದಾರರ ಸೊಂಟಕ್ಕೆ ಹಾಗೂ ಎಡ ತೊಡೆಗ ಗಂಭಿರ ಸ್ವರೂಪದ ಗುದ್ದಿದ ಮೂಳೆ ಮುರಿತದ ಗಾಯವಾಗಿದ್ದು ಗಾಯಾಳು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23/02/2015 ರಂದು 18.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮುತ್ತಪ್ಪ ರವರು ತನ್ನ ಮನೆಯಾದ ಮಂಗಳೂರು ತಾಲೂಕು ಮಳವೂರು ಗ್ರಾಮದ ಮರವೂರು ಸೇತುವೆ ಬಳಿ ಬಾಬು ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ಇರುವ ಸಮಯ ಆರೋಪಿ ಸೋಮಶೇಖರನು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್ ನಿಂದ ಹೊಡೆದು ರಕ್ತಗಾಯ ಉಂಟು ಮಾಡಿ, ಜೀವ ಬೆದರಿಕೆ ಒಡ್ಡಿರುವುದಾಗಿದೆ. ಈ ಘಟನೆಗೆ ಪಿರ್ಯಾದಿದಾರರ ಹೆಂಡತಿ ಆರೋಪಿಯ ಮನೆಯ ಕರೆಂಟ್ ಬಿಲ್ಲನ್ನು ಹರಿದು ಬಿಸಾಡಿರುತ್ತಾರೆಂದು ಸಂಶಯವೇ ಕಾರಣವಾಗಿರುತ್ತದೆ.

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24/02/2015 ರಂದು ಪಿರ್ಯಾದಿದಾರರಾದ ಶ್ರೀ ಜತೀನ್ ಬಿ.ಎ. ರವರು ತನ್ನ ಬಾಬ್ತು ಮೋ. ಸೈಕಲ್ ನಂಬ್ರ KA 14 EA 5020 ನೇದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಮಂಗಳೂರು ತಾಲೂಕು ಮುಚ್ಚೂರು ಗ್ರಾಮದ ಮುಚ್ಚೂರು ಎಂಬಲ್ಲಿ ಮಧ್ಯಾಹ್ನ ಸುಮಾರು 12.30 ಗಂಟೆ ಸಮಯಕ್ಕೆ ತಲುಪುತ್ತಿದ್ದಂತೆ ಅವರ ಎದುರಿನಿಂದ ಬರುತ್ತಿದ್ದ ಮೋ. ಸೈಕಲ್ ನಂ. KA 19 W 7724 ನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋ. ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಆರೋಪಿ ಧನ್ ರಾಜ್ ರವರು ಮೋ. ಸೈಕಲ್ ಸಮೇತ ರಸ್ತೆಗೆ ಬಿದ್ದು, ಇಬ್ಬರಿಗೂ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಫಿಲಿಫ್‌  ಡಿ ಸೋಜ ರವರು ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಪನೀರ್ಎಂಬಲ್ಲಿರುವ ಪನೀರ್ಸಂತ ಜೋಸೆಫ್ವಾಸ್ರ ಪ್ರಾರ್ಥನಾ ಮಂದಿರದ ಕಾರ್ಯದರ್ಶಿಯಾಗಿದ್ದು, ಈ ಪ್ರಾರ್ಥನಾ ಮುಂದಿನ ಬಾಗಿಲಿನ ಹೊರಗಡೆ ಜಗಲಿಯಲ್ಲಿ ಅಂದರೆ ತೆರೆದ ಸ್ಥಳದಲ್ಲಿ ಬಾಗಿಲಿನ ಬಲಬದಿಯಲ್ಲಿ ಮಾತೆ ಮರ್ಸಿಯಮ್ಮನವರ ಮೂರ್ತಿ ಗಾಜಿನ ಪ್ರೇಮ್ಒಳಗಡೆ ಇಟ್ಟಿರುತ್ತಾರೆ. ಎಡಬದಿಯಲ್ಲಿ ಸಂತ ಜೋಸೆಫ್ವಾಸ್ರವರ ಮೂರ್ತಿಯನ್ನು ಇದೇ ರೀತಿ ಇಟ್ಟಿರುತ್ತಾರೆ. ದಿನಾಂಕ 25.2.2015 ರಂದು ಬೆಳಿಗ್ಗೆ 8 ಗಂಟೆಗೆ ಪನೀರ್ಸೈಟ್ನಲ್ಲಿ ವಾಸವಾಗಿರುವ ಶ್ರೀಮತಿ. ಸ್ಟೆಲ್ಲಾ ಎಂಬ ಮಹಿಳೆ ಮನೆಯಿಂದ ಕೆಲಸಕ್ಕೆ ಇದೇ ದಾರಿಯಿಂದ ಹೋಗುವಾಗ ಮಾತೆ ಮರ್ಸಿಯಮ್ಮನವರ ಸೂಕ್ತ ಅಳವಡಿಸಿದ್ದ ಗಾಜಿನ ಪ್ರೇಮ್ತೂತು ಆಗಿರುವುದನ್ನು ಕಂಡು ಫಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ನಂತರ ಕೂಡಲೇ ಫಿರ್ಯಾದಿದಾರರು ಹಾಗೂ ಇತರರು ಬಂದು ನೋಡಿದಾಗ ಮಾತೆ ಮರ್ಸಿಯಮ್ಮನವರ ಮೂರ್ತಿಯ ಸೂಕ್ತ ಅಳವಡಿಸಿದ ಗಾಜಿನ ಪ್ರೇಮ್ಸುಮಾರು ಒಂದು ಇಂಚು ಸುತ್ತಳತೆಯಲ್ಲಿ ತೂತು ಆಗಿದ್ದು, ಚಿಕ್ಕ ಜಲ್ಲಿಕಲ್ಲು ಪ್ರೇಮ್ನ ಒಳಗಡೆ ಬಿದ್ದಿರುವುದನ್ನು ಗಮನಿಸಿರುತ್ತಾರೆ. ದಿನಾಂಕ. 24-2-2015 ರಂದು ರಾತ್ರಿ 7-00 ಗಂಟೆಯ ನಂತರದಿಂದ 25-2-2015 ರಂದು ಬೆಳಿಗ್ಗೆ 8-00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ದುಷ್ಕರ್ಮಿಯವರು ಪನೀರ್ಸಂತ ಜೋಸೆಫ್ವಾಸ್ರ ಪ್ರಾರ್ಥನಾ ಮಂದಿರದ ಹೊರಗಡೆ ಜಗಲಿನಲ್ಲಿದ್ದ ಮಾತೆ ಮರ್ಸಿಯಮ್ಮನವರ ಮೂರ್ತಿಯ ಗಾಜಿನ ಪ್ರೇಮ್ಗೆ ಚಿಕ್ಕ ಕಲ್ಲು ಬಿಸಾಡಿ ಹಾನಿ ಮಾಡಿರುತ್ತಾರೆ.

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 1-3-2015 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಬೃಹತ್ಹಿಂದೂ ಸಮಾಜೋತ್ಸವ ಮತ್ತು ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ದಿನಾಂಕ. 23-2-2015 ರಿಂದ 5-3-2015 ರ ತನಕ ನಡೆಯುತ್ತಿರುವುದರಿಂದ ಈ ಕಾರ್ಯಕ್ರಮದ ಸಲುವಾಗಿ ದಿನಾಂಕ. 25-2-2015 ರಂದು ರಾತ್ರಿ ಸಮಯದಲ್ಲಿ ಮಂಗಳೂರು ತಾಲೂಕು ತಲಪಾಡಿ ಗ್ರಾಮದ ಕೆಸಿರೋಡ್ ಜಂಕ್ಷನ್ನಲ್ಲಿ ಹಿಂದೂ ಸಮುದಾಯದ ಜನರು ಬಂಟಿಂಗ್ಸ್ಹಾಕುತ್ತಿದ್ದುದನ್ನು  ಅಲ್ಲಿನ ಕೆಲವು ಮುಸ್ಲಿಂ ಸಮುದಾಯದ ಜನರು ಆಕ್ಷೇಪಿಸಿದಾಗ ಎರಡೂ ಸಮುದಾಯದ ಜನರು ಕೈಯಲ್ಲಿ ಕಲ್ಲು ಮತ್ತು ಸೋಡಾ ಬಾಟ್ಲಿಗಳನ್ನು ಹಿಡಿದುಕೊಂಡು ಒಬ್ಬರಿಗೊಬ್ಬರು ಅವಾಚ್ಯಶಬ್ದಗಳಿಂದ ಬೈದು, ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು  ಬೆದರಿಸಿ ಹೊಡೆದಾಡಿಕೊಂಡು ಗಲಾಟೆ ನಡೆದ ಸಂದರ್ಭದಲ್ಲಿ ರಾತ್ರಿ 10-30 ಗಂಟೆಯ ಸಮಯಕ್ಕೆ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಫಿರ್ಯಾದಿದಾರರಾದ ಎಎಸ್ಐ ಮೋಹನ್ದಾಸ್‌, ಸಿಪಿಸಿ ಚಂದ್ರನಾಯಕ್‌, ಸಿಪಿಸಿ ಕಮಲಾಕ್ಷ ರವರು ಗುಂಪಿನ ಜನರನ್ನು ಚದುರಿಹೋಗುವಂತೆ ತಿಳಿ ಹೇಳಿದಾಗ ಸದ್ರಿ ಗುಂಪಿನ ಆರೋಪಿಗಳು ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರನ್ನು ಉದ್ದೇಶಿಸಿ "ಪೊಲೀಸರು ನೀವು ಯಾಕೆ ಬಂದದ್ದುನಿಮ್ಮನ್ನು ಕೊಂದು ಹಾಕುತ್ತೇವೆ ಎಂದು ಬೆದರಿಸಿ ಸೋಡಾ ಬಾಟ್ಲಿ ಮತ್ತು ಕಲ್ಲುಗಳಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ, ಆರೋಪಿಗಳು ಕಲ್ಲು ಮತ್ತು ಸೋಡಾ ಬಾಟ್ಲಿಯಿಂದ ಹೊಡೆದ ಪರಿಣಾಮ ಸಿಪಿಸಿ ಚಂದ್ರನಾಯಕ್ರವರ ಬಲ ಮೊಣ ಕಾಲಿಗೆ ಮತ್ತು ಹಿಮ್ಮಡಿಗೆ ತಾಗಿ ರಕ್ತಗಾಯವಾಗಿರುತ್ತದೆ. ಸಿಪಿಸಿ ಕಮಲಾಕ್ಷ ರವರ ಕೈ ಕಾಲಿಗೆ ಕಲ್ಲು ತಾಗಿ ಗಾಯವಾಗಿರುತ್ತದೆ ಮತ್ತು ಎಎಸ್ಐ ಮೋಹನ್ದಾಸ್ ರವರ ಬೆನ್ನಿಗೆ ಕಲ್ಲು ತಾಗಿ ಗಾಯವಾಗಿರುತ್ತದೆ. ಗಾಯಾಳುಗಳ ಪೈಕಿ ಸಿಪಿಸಿ ಚಂದ್ರನಾಯಕ್‌, ಸಿಪಿಸಿ ಕಮಲಾಕ್ಷ ರವರು ಒಳರೋಗಿಯಾಗಿಯೂ, ಎಎಸ್ಐ ಮೋಹನ್ದಾಸ್ ರವರು ಹೊರ ರೋಗಿಯಾಗಿ ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ವಿಷಯ ತಿಳಿದು ಸ್ಥಳಕ್ಕೆ ಮೇಲಾಧಿಕಾರಿಗಳು ಬಂದಾಗ ಆರೋಪಿಗಳು ಸ್ಥಳದಿಂದ ಓಡಿ ಹೋಗುವಾಗ ಒಬ್ಬರಿಗೊಬ್ಬರು ಜೀವ ಬೆದರಿಕೆ ಹಾಕಿರುತ್ತಾರೆಸದ್ರಿ ಗುಂಪಿನ ಜನರ ಪೈಕಿ ಗುರುತು ಪರಿಚಯದ 1)ಶಫಿಕ್‌ 2)ಅಸ್ಲಾಂ ಮತ್ತಿತರ ಸುಮಾರು 50 ಕ್ಕಿಂತಲೂ ಮೇಲ್ಪಟ್ಟವರಾಗಿರುತ್ತಾರೆ.

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24.02.2015 ರಂದು ಪಿರ್ಯಾದುದಾರರಾದ ಶ್ರೀ ಸುರೇಶ್ ಕುಲಾಲ್ ರವರು ಅವರ ಗೆಳೆಯ ಪ್ರವೀಣ್ ಎಂಬವರ ಬಾಬ್ತು ನೋಂದಣಿ ಸಂಖ್ಯೆಯಾಗದ ಹೊಸ ಮೋಟಾರ್ ಸೈಕಲ್ಲಿನಲ್ಲಿ ಪ್ರವೀಣ್ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಫಾದರ್ ಮುಲ್ಲರ್ ಆಸ್ಪತ್ರೆ ಕಡೆಯಿಂದ ತಮ್ಮ ಮನೆಯ ಕಡೆಗೆ ಹೋಗುತ್ತಾ ವಾಮಂಜೂರು ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದ್ದಂತೆ ಗುರುಪುರ ಕಡೆಯಿಂದ KA-19-EE-5157ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರನು ಹಿಂಬದಿ ಇಬ್ಬರು ಸವಾರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೊಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಸಹಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ತಲೆಗೆ ಗುದ್ದಿದ ನೋವು, ಬಲ ಕೋಲು ಕಾಲಿಗೆ ಮೂಳೆ ಮುರಿತದ ನೋವು, ಬಲಕಾಲಿನ ಪಾದಕ್ಕೆ ರಕ್ತ ಗಾಯ, ಎಡಕೈ ಮೊಣಗಂಟಿಗೆ ತರಚಿದ ಗಾಯ ಹಾಗೂ ಪ್ರವೀಣ್ ರವರ ಮುಖಕ್ಕೆ ಹಾಗೂ ಕೈಕಾಲುಗಳಿಗೆ ಗುದ್ದಿದ ನೋವುಂಟಾಗಿರುವುದಲ್ಲದೇ ಸದ್ರಿ ಅಪಘಾತಕ್ಕೆ KA-19-EE-5157ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರ ಹಿಂಬದಿ ಇಬ್ಬರು ಸವಾರರನ್ನು ಕುಳ್ಳಿಸಿಕೊಂಡು ಅತೀವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ಕಾರಣವಾಗಿರುವುದಾಗಿದೆ.

No comments:

Post a Comment