ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರೋಳಿ ಗ್ರಾಮದಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆ
* * *
ದಿನಾಂಕ 02.02.2015 ರಂದು 7:00 ಗಂಟೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರೋಳಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಹಾಲ್‌ನಲ್ಲಿ ಮರೋಳಿ ಗ್ರಾಮಸ್ಥರ ಸಭೆಯನ್ನು ಗ್ರಾಮಾಂತರ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ರವರ ನೇತ್ರತ್ವದಲ್ಲಿ ನಡೆಸಿದ್ದು, ಸದ್ರಿ ಸಭೆಯಲ್ಲಿ ಸುಮಾರು 50 ರಿಂದ 55 ಮಂದಿ ಗ್ರಾಮಸ್ಥರು ಹಾಜರಿದ್ದು, ಮರೋಳಿ ಪರಿಸರದಲ್ಲಿರುವ ಚರ್ಚ್ ಮತ್ತು ದೇವಸ್ಥಾನಗಳ ಭದ್ರತೆ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಭದ್ರತೆ ಬಗ್ಗೆ ಸೆಕ್ಯೂರಿಟ್ ಗಾರ್ಡ್ ನೇಮಿಸಲು ಮತ್ತು ಸಿಸಿ ಟಿವಿ ಅಳವಡಿಸಲು ಸೂಚಿಸಲಾಯಿತು. ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಯಾವುದೇ ಗಾಳಿ ಮಾತಿಗೆ ಕಿವಿ ಕೊಡದೆ, ಶಾಂತಿಯುತವಾಗಿ ವರ್ತಿಸುವಂತೆ ತಿಳಿಸಿ ಯಾವುದೇ ಉಪಯುಕ್ತ ಮಾಹಿತಿ ಇದ್ದಲ್ಲಿ ಠಾಣೆಗೆ ತಿಳಿಸುವಂತೆ ಕೋರಿಕೊಳ್ಳಲಾಗಿದೆ.
ಸಭೆಯ ಪೋಟೋ
No comments:
Post a Comment