Wednesday, February 25, 2015

MEETING :

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಭೆ

 

ದಿನಾಂಕ :21-02-2015 ರಂದು 18-30 ಗಂಟೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾಸಿಕ ಎಸ್.ಸಿ ಎಸ್ಟಿ ಸಭೆ ನಡೆಸಿದ್ದು, ಸಭೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಸಿ.ಎಸ್ಟಿ ಮುಖಂಡರುಗಳು ಬಾಗವಹಿಸಿದ್ದು, ದಕ್ಷಿಣ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು, ಉಪ ನಿರೀಕ್ಷಕರು ಹಾಜರಿದ್ದರು. ಸಭೆಯಲ್ಲಿ ಅಹವಾಲು ಆಲಿಸಲಾಗಿದ್ದು, ಸಭೆಯಲ್ಲಿ ಹಾಜರಿದ್ದ ಶ್ರೀ ಜಯರಾಜ್ ಎಂಬವರು ಮಾತನಾಡಿ ಕಾಪಿಕಾಡು ಎಂಬಲ್ಲಿ ಸಂಜೆ ವೇಳೆಯಲ್ಲಿ ಯುವತಿಯರು ಗುಂಪು ಸೇರಿ ನಿಲ್ಲುತ್ತಿರುವುದಾಗಿಯೂ, ಕಾಪಿಕಾಡು ಹಿರೋಹೋಂಡಾ ಶೋ ರೂಮಿನ ಕೆಲಸಗಾರರು ವೇಗವಾಗಿ ವಾಹನಗಳನ್ನು ಚಲಾಯಿಸಿ ಟೆಸ್ಟ್ ರೈಡ್ ಮಾಡುತ್ತಿರುವುದಾಗಿಯೂ, ತೊಕ್ಕೊಟ್ಟು ಓವರ್ ಬ್ರಿಡ್ಜ್ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ವಿನಂತಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ನಿರೀಕ್ಷಕರು ತಿಳಿಸಿರುತ್ತಾರೆ. 

 

ಸಭೆಯ ಪೋಟೋ

 

 

 

 

No comments:

Post a Comment