Sunday, February 15, 2015

Daily Crime Reports : 12-02-2015

ದೈನಂದಿನ ಅಪರಾದ ವರದಿ.
ದಿನಾಂಕ 12.02.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
4
ವಂಚನೆ ಪ್ರಕರಣ        
:
1
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
1





























1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.02.2015 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ 11.02.2015 ರ ಬೆಳಿಗ್ಗೆ 05:30 ಗಂಟೆಯ ಮಧ್ಯೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ, ಮೊಂಟೆಪದವು ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಯೋಗೀಶ್ ಆಚಾರ್ಯ ರವರ ಆರಾದ್ಯ ಎಂಬ ಜುವೆಲ್ಲರಿ ಅಂಗಡಿಯ ಶಟರನ್ನು ಯಾರೋ ಕಳ್ಳರು ತೆರೆದು ಒಳ ಪ್ರವೇಶಿಸಿ, ಕ್ಯಾಶ್ಕೌಂಟರಿನ ಶೊಕೇಸ್ನಲ್ಲಿದ್ದ ಸುಮಾರು ರೂ.1,00.000/- ಮೌಲ್ಯದ 45 ಗ್ರಾಂ ತೂಕದ  ಚಿನ್ನಾಭರಣ ಮತ್ತು ಸುಮಾರು 21,000/- ರೂ. ಮೌಲ್ಯದ 450 ಗ್ರಾಂ ತೂಕದ ಬೆಳ್ಳಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 1,21.000/- ಆಗಬಹುದು.

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/02/2015 ರಂದು ಸಮಯ ಸುಮಾರು ಮದ್ಯಾಹ್ನ 2:45 ಗಂಟೆಗೆ ಫಿರ್ಯಾದುದಾರರಾದ ಶ್ರೀ ಪ್ರಶಾಂತ್ ಶೆಟ್ಟಿ ರವರು ತನ್ನ ಗೆಳೆಯನ ಬಾಬ್ತು ಸ್ಕೂಟರ್ ನಂಬ್ರ  KA-19-EE-6869 ನೆ ದರಲ್ಲಿ ಹಿಂಬದಿ ಸವಾರನಾಗಿದ್ದುಕೊಂಡು ಮಂಗಳೂರು ನಗರದ ಸ್ಟೆಟ್ ಬ್ಯಾಂಕ್ ಕಡೆಯಿಂದ ಕರಾವಳಿ ಕಡೆಗೆ ಹೊಗುವರೇ ಬೆಂದೂರವೆಲ್ ಹತ್ತಿರದ ಸ್ಲಿಪವೆಲ್ ಬೆಡ್ ಅಂಗಡಿಯ ಎದುರುಗಡೆ ಮುಂದೆ ಹೋಗುತ್ತಿದ್ದ ಕಾರಿನ ಚಾಲಕರು ಒಮ್ಮೆಲೆ ಏಕಾಎಕಿ ಕಾರನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಫಿರ್ಯಾದುದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಸವಾರನು ವೇಗವಾಗಿ ಹೋಗುತ್ತಿದ್ದ  ಸ್ಕೂಟರಗೆ ಒಮ್ಮೆಲೆ ಬ್ರೆಕ್ ಹಾಕಿದ ಪರಿಣಾಮ ಸ್ಕೂಟರ್ ಮುಗುಚಿ ಕಾಂಕ್ರೆಟ್ ರಸ್ತೆಗೆ ಬಿದ್ದು ಜಗದೀಶ ಅವರಿಗೆ ಸಣ್ಣಪುಟ್ಟ ಗುದ್ದಿದ ಗಾಯ ಮತ್ತು ಫಿರ್ಯಾದುದಾರರಿಗೆ ಎಡಕೈಯ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿ A J ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.

3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-02-2015 ರಂದು ಪಿರ್ಯಾದಿದಾರರಾದ ಶ್ರೀ ನಾಗಪ್ಪ ರವರು ಪಣಂಬೂರು ಎನ್ ಎಂ ಪಿ ಟಿ ಯಾರ್ಡ್ ನೊಳಗೆ ಕೆಎ-48-5683 ನೇ ಲಾರಿಯಲ್ಲಿ ಪುಂಡಲೀಕ ಎಂಬ ಚಾಲಕರ ಜೊತೆ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದವರು ಕಲ್ಲಿದ್ದಲು ಲೋಡ್ ಮಾಡಿಕೊಂಡು ಬೆಳಗಾವಿಯ ಲೋಕಪುರ ಕಡೆಗೆ ಸಂಜೆ 04.30 ಗಂಟೆಗೆ ಹೊರಟು ಸದ್ರಿ ಲಾರಿಯನ್ನು ಹತ್ತುತ್ತಿದ್ದ ಸಮಯ ಲಾರಿಯ ಚಾಲಕ ಪುಂಡಲೀಕರವರು ತನ್ನ ಲಾರಿಯನ್ನು ಒಮ್ಮೆಲೇ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪರಿಣಾಮ ಪಿರ್ಯಾದಿದಾರರ ಕಂಡಕ್ಟರ್ ತನ್ನ ಲಾರಿಯ ಹಿಡಿತ ತಪ್ಪಿ ಲಾರಿಯ ಅಡಿಗೆ ಬಿದ್ದು ತನ್ನ 2 ಕಾಲುಗಳ ಮೇಲೆ ಲಾರಿಯ ಚಕ್ರ ಹರಿದು ಗಂಭೀರ ಸ್ವರೂಪದ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಗಾಗಿ ಎ.ಜೆ.ಆಸ್ಪತ್ರೆಗೆ ದಾಖಲಾಗಿದ್ದು ದಿನಾಂಕ 11-02-2015 ರಂದು ತಡವಾಗಿ ದೂರು ನೀಡಿರುವುದಾಗಿದೆ.

4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-02-2015 ರಂದು ಸಂಜೆ 07-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಸಪ್ಪ ಎಂ. ಕೆಂದೂರ ರವರು ತನ್ನ ಕೆಲಸ ಮುಗಿಸಿ ಸುರತ್ಕಲ್ ಕಡೆಯಿಂದ ತಡಂಬೈಲ್ ಬಳಿಯ ಸುಪ್ರೀಮ್ ಹಾಲ್ ನ ಹತ್ತಿರ ಬಿ ಎಸ್ ಎನ್ ಎಲ್ ಕಛೇರಿ ಎದುರಿನಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟಲು ನಿಂತಿದ್ದಾಗ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ಏಕಮುಖ ರಾ ಹೆ. 66 ರಲ್ಲಿ ಕೆ ಎಲ್ 53 ಎಫ್ 3353 ನೇ ನಂಬ್ರದ ಲಾರಿಯನ್ನು ಅದರ ಆಪಾದಿತ ಚಾಲಕ ರಿಯಾಜ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಎದುರು ರಸ್ತೆ ದಾಟುತಿದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಡಿಕ್ಕಿಹೊಡೆದ ಪರಿಣಾಮ ಸದ್ರಿ ವ್ಯಕ್ತಿಯು ಗಂಭೀರವಾಗಿ ತಲೆಗೆ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವವರನ್ನು ಅಲ್ಲಿ ಸೇರಿದ ಜನರು ಅಂಬುಲೆನ್ಸ್ ವೊಂದರಲ್ಲಿ ಚಿಕಿತ್ಸೆಗಾಗಿ ಮಂಗಳೂರು ಕಡೆಗೆ ಕೊಂಡುಹೋಗಿರುತ್ತಾರೆ. ದಾರಿ ಮದ್ಯದಲ್ಲಿ ಗಾಯಾಳು ಮೃತಪಟ್ಟಿದ್ದು, ಮೃತ ಶರೀರವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿರುತ್ತದೆ.

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-02-2015 ರಂದು ಪಿರ್ಯಾದಿದಾರರಾದ ಶ್ರೀ ಇಮ್ತಿಯಾಜ್ ರವರು ತನ್ನ ಸ್ನೇಹಿತರಾದ ಶೈದುದ್ದೀನ್, ಅನ್ವರ್ ಹುಸೈನ್, ಶಂಶುದ್ದೀನ್, ನವಾಫ್, ಉಸ್ಮಾನ್ ರವರ ಜತೆ ಕಾಲೇಜ್ ನಿಂದ ಮನೆಗೆ ಹೋಗುವರೇ ರೂಟ್ ನಂಬ್ರ 5 ಪಿಟಿಸಿ ಬಸ್ KA 19 D 5782 ನೇದರಲ್ಲಿ ಪ್ರಯಾಣಿಸುತ್ತಿರುವ ಸಮಯ ವೆಲೆನ್ಸಿಯಾ ಜಂಕ್ಷನ್ ಬಳಿ  ತಲುಪಿದಾಗ ಸಮಯ ಸುಮಾರು  16-50 ಗಂಟೆಗೆ , 4 ಜನ ಯುವಕರು ಬಸ್ಸಿಗೆ ಹತ್ತಿ ಪಿರ್ಯಾದಿದಾರರು ಕುಳಿತುಕೊಂಡಿದ್ದ ಸೀಟಿನ ಹತ್ತಿರ ಬಂದು ಹುಡುಗಿಯ ವಿಷಯದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅವರುಗಳ ಪೈಕಿ ಓರ್ವ ಪಿರ್ಯಾದಿದಾರರಿಗೆ ಪಂಚ್ ನಿಂದ ಬಲ ಕಣ್ಣಿನ ಕೆಳ ಭಾಗಕ್ಕೂ, ಇಬ್ಬರು ಅವರುಗಳ ಕೈಯಲ್ಲಿದ್ದ ಹಾಕಿ ಸ್ಟಿಕ್ ಹಾಗೂ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಬೆನ್ನಿಗೆ ಯದ್ವಾತದ್ವ ಹೊಡೆದಿರುವುದಲ್ಲದೇ, ಬಿಡಿಸಲು ಬಂದ ಪಿರ್ಯಾದಿದಾರರ ಗೆಳೆಯರಾದ ಶೈದುದ್ದೀನ್, ಅನ್ವರ್ ಹುಸೈನ್, ಶಂಶುದ್ದೀನ್, ನವಾಫ್, ಉಸ್ಮಾನ್ ರವರಿಗೆ ಹಾಕಿ ಸ್ಟಿಕ್ ಹಾಗೂ ಕಬ್ಬಿಣದ ರಾಡ್ ಗಳಿಂದ ಹೊಡೆದು ಶೈದುದ್ದೀನ್ ಹಾಗೂ ಅನ್ವರ್ ಹುಸೈನ್ ರವರಗಳನ್ನು ಬಸ್ಸಿನಲ್ಲಿ ಕೆಳಗೆ ಬೀಳಿಸಿ ಕಾಲಿನಿಂದ ತುಳಿದಿರುತ್ತಾರೆ. ಅಷ್ಟರಲ್ಲಿ ಉಳಿದ ಪ್ರಯಾಣಿಕರು ಬಂದಾಗ ಜೀವ ಬೆದರಿಕೆ ಹಾಕಿರುವುದಲ್ಲದೇ, ಇನ್ನೂ ಕೂಡಾ ಕೆಲವು ಯುವಕರು ಇದ್ದಾರೆ, ಅವರನ್ನು ಕೂಡಾ ನೋಡಿ ಕೊಳ್ಳುತ್ತೇವೆ ಎಂಬುದಾಗಿ ಹೇಳಿ ಹೋಗಿರುತ್ತಾರೆ. ಆರೋಪಿಗಳು ಹಲ್ಲೆ ಮಾಡಿರುವುದರಿಂದ ಪಿರ್ಯಾದಿದಾರರ ಬಲ ಕಣ್ಣಿನ ಕೆಳಭಾಗಕ್ಕೆ ಬೆನ್ನಿಗೆ, ಶೈದುದ್ದೀನ್ ರವರ ಎದೆಗೆ, ಬಲತೊಡೆಗೆ , ಅನ್ವರ್ ಹುಸೈನ್ ನ ಬಲ ಕಾಲಿನ ಮೊಣ ಗಂಟಿನ ಬಳಿ ಊದಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಯಲ್ಲಿ 3 ಮಂದಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂತೋಷ ಕುಮಾರ್ ಎಂಬವರು ತನ್ನಲ್ಲಿದ್ದ ವಾಹನ ನಂ ಕೆಎ 35 ಎಂ 4909 ಟಾಟ ಟೆಕೊಲಿನ್ ನ್ನು  ಚಿಕ್ಕಮಗಳೂರು ಜಿಲ್ಲೆ ಕೀರ್ತಿಕುಮಾರ್ ಎಂಬವರಿಗೆ ರೂಪಾಯಿ 3,65,000/- ಗೆ ಮಾರಾಟ ಮಾಡಿದ್ದು, ಕೀರ್ತಿಕುಮಾರ್ 2011 ಇಸವಿ ಫೆಬ್ರವರಿ ತಿಂಗಳಿನಲ್ಲಿ ಹಣ ನೀಡುವುದಾಗಿ ತಿಳಿಸಿದ್ದು, ವಿಚಾರಿಸಿದಾಗ ಜೂನ್ ತಿಂಗಳ 15 ದಿನದೊಳಗಡೆ ನೀಡುವುದಾಗಿ ಭರವಸೆ ನೀಡಿದ್ದು, ನಂತರ ಈ ವರೆಗೆ ಹಣ ನೀಡದೇ ಇದ್ದುದರಿಂದ ಪಿರ್ಯಾದಿದಾರರು 2015 ಇಸವಿ ಜನವರಿ ತಿಂಗಳಿನಲ್ಲಿ ಕೀರ್ತಿಕುಮಾರ್ ರವರು ಕಂಡು ವಿಚಾರಿಸಿದಾಗ  ಪಿರ್ಯಾಧಿದಾರರಿಂದ ಖರೀದಿಸಿದ ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಿದಿರುವುದಾಗಿ ತಿಳಿಸಿರುತ್ತಾನೆ. ಆರೋಪಿತನು ಪಿರ್ಯಾದಿದಾರರಿಂದ ವಾಹನವನ್ನು ಖರೀದಿಸಿ ಹಣನೀಡುತ್ತೇನೆ ಎಂದು ನಂಬಿಸಿ ಪಿರ್ಯಾದಿದಾರರಿಗೆ ಹಣವನ್ನು ನೀಡದೇ ನಂಬಿಸಿ ವಂಚಿನೆ ಮಾಡಿರುವುದಾಗಿದೆ.

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.02.2015 ರಂದು ರಾತ್ರಿ 11.15 ರಿಂದ 11.30 ಗಂಟೆ ವೇಳೆಗೆ ಫಿರ್ಯಾದಿದಾರರಾದ ಶ್ರೀ ಪದ್ಮನಾಭ ಬಂಗೇರಾ ಮತ್ತು ಅವರ ಪತ್ನಿ ತಮ್ಮ ಮನೆಯ ಗಾರ್ಡನ್‌‌ನಲ್ಲಿ ಚೇರ್‌‌‌ನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ಆರೋಪಿ ಸಂಪತ್ ಎಂಬವನು ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ "ಎನ್ನ ಮಿತ್ತ್‌‌ ಪೊಲೀಸ್ ಸ್ಟೇಶನಗ್ ಕಂಪ್ಲೆಂಟ್ ಕೊರ್ಪನಾ" ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರನ್ನು ಕುರ್ಚಿಯಿಂದ ದೂಡಿ ಕೆಳಗೆ ಬೀಳಿಸಿ ಪಿರ್ಯಾದಿದಾರರು ಕುಳಿತ್ತಿದ್ದ ಪೈಬರ್ ಕುರ್ಚಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದುದಲ್ಲದೇ ಎದೆಗೆ ಕಾಲಿನಿಂದ ತುಳಿದಿದರಿಂದ ಪಿರ್ಯಾದುದಾರರ ಹಣೆಗೆ ಮುಂದಲೆಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.02.2015 ರಂದು ರಾತ್ರಿ ಮಂಗಳೂರು ನಗರದ ಕಪಿತಾನಿಯೊ ಬಳಿಯ ನೇತ್ರಾವತಿ ಬಡಾವಣೆಯ ಸುಶೀಲ್ ಎಂಬ ಫಿರ್ಯಾದುದಾರರಾದ ಶ್ರೀ ಪ್ರಕಾಶನ್ ರವರ ಮಾವ ಶ್ರೀ ನಾರಾಯಣರವರ ವಾಸದ ಮನೆಯಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗದ ವರಾಂಡದ ಗ್ರೀಲ್ ತೆರೆದು ಒಳಗೆ ಪ್ರವೇಶಿಸಿ ಹಿಂದಿನ ಬಾಗಿಲಿನ ಚೀಲಕ ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯೊಳಗಿನ ಎಲ್ಲಾ ಕೋಣೆಯೊಳಗಿನ ಹಾಗೂ ಗಾಡ್ರೇಜನೊಳಗಿದ್ದ  ವಸ್ತುಗಳನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾರೆ. ಮನೆಯ ಮಾಲೀಕ ಹೊರದೇಶದಲ್ಲಿದ್ದು ಯಾವುದೇ ಕಳ್ಳತನವಾದ ಬಗ್ಗೆ ಖಚಿತವಾಗಿ ತಿಳಿಯದೆ ಇದ್ದು ತಿಳಿಯಬೇಕಾಗಿರುತ್ತದೆ.

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ತಂಪಣ್ಣ ಶೆಟ್ಟಿ ರವರು ಸಮಾಜ ಸೇವೆಯನ್ನು ಮಾಡುತ್ತಾ RT  ಕಾಯಿದೆ ಪ್ರಕಾರ ದಾಖಲೆಗಳನ್ನು ಪಡೆದುಕೊಂಡು ಬಡವರಿಗೆ ಸಹಾಯ ಮಾಡುತ್ತಿದ್ದು ಇದರಿಂದ ಸುರೇಂದ್ರ ಕಾಂಭ್ಳಿ ಎಂಬವರಿಗೆ ಪಿರ್ಯಾದಿದಾರರ ಮೇಲೆ ವೈರತ್ವವಿದ್ದಿದ್ದು ದಿನಾಂಕ 11.02.2015 ರಂದು ಬೆಳಿಗ್ಗೆ 9.15 ಗಂಟೆಗೆ ಅಡ್ಯಾರ ಕಟ್ಟೆ ಎಂಬಲ್ಲಿ ಇದ್ದಾಗ ಸಪಾರಿ ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಬಂದ ಆರೋಪಿಗಳ ಪೈಕಿ ಸುರೇಂದ್ರ ಕಾಂಬ್ಳಿಯು ಇತರ ಆರೋಪಿಗಳೊಂದಿಗೆ ಪಿರ್ಯಾದಿದಾರರನ್ನು ಉದ್ದೇಶಿಸಿ ಆಯಗ್ ಪಾಡ್ಲೇ ಆಯೇ ಬಾರೀ ರಾಪೇ ಎಂದು ಹೇಳಿದ್ದರಿಂದ ಇತರ ಆರೋಪಿಗಳು ದೊಣ್ಣೆ ಹಾಗೂ ಸೋಡಾ ಬಾಟಲಿ ಹಿಡಿದುಕೊಂಡು ಬಂದು ಪಿರ್ಯಾಧಿದಾರರಿಗೆ ಬಾಟಲಿಯಿಂದ ಹೊಡೆದುದಲ್ಲದೇ ಶೂ ಧರಿಸಿದ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದರಿಂದ ಪಿರ್ಯಾದಿದಾರರ ಎಡ ಕಣ್ಣಿನ ಮೇಲ್ಬಾಗ, ಬಲಕೈಗೆ ಗಾಯವಾಗಿದ್ದು ಎದೆ, ಕಿಬ್ಬೊಟ್ಟೆ ಕಾಲು, ಸೊಂಟಕ್ಕೆ ಗುದ್ದಿದ ನೋವಾಗಿರುತ್ತದೆ.

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.02.2015 ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿಯು ಕೆಎ-19-ಡಿ-8741 ನೇ ಲಾರಿಯನ್ನು ಬಜಾಲ್ರೈಲ್ವೆ ಗೇಟಿನ ಬಳಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದುದರಿಂದ ಸದ್ರಿ ಲಾರಿಯ ಕಂಡಕ್ಟರ ಬದಿಯ  ಬಾಗಿಲು ತೆರೆಯಲ್ಪಟ್ಟು ಬಾಗಿಲ ಬಳಿಯಲ್ಲಿ ಕುಳಿತ್ತಿದ್ದ ಎಡ್ವಿನ್ ಲಾರಿಯಿಂದ ಕೆಳಗಡೆ ಬಿದ್ದ ಪರಿಣಾಮ ಸದ್ರಿಯವರ ತಲೆಗೆ ತೀವ್ರ ಗಾಯವಾಗಿ ಪ್ರಜ್ಞಾಹೀನರಾಗಿದ್ದು, ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಫಾದರ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

No comments:

Post a Comment