ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಭೆ
* * *
ದಿನಾಂಕ 15-02-15 ರಂದು 19.30 ಗಂಟೆಗೆ ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುಚ್ಚೆಮೋಗ್ರು ಮೊಹಿದ್ದೀನ್ ಜುಮ್ಮಾ ಮಸೀದಿಯ ಅದ್ಯಕ್ಷರು ಮತ್ತು ಸರ್ವ ಸದಸ್ಯರ ಸಭೆಯನ್ನು ಮೂಡುಬಿದ್ರೆ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತ್ರತ್ವದಲ್ಲಿ ನಡೆಸಿದ್ದು, ಈ ಸಭೆಯಲಿ ಅಧ್ಯಕ್ಷರು/ಉಪಾಧ್ಯಕ್ಷರು/ಕಾರ್ಯದರ್ಶಿ, ಸದಸ್ಯರು ಸೇರಿದಂತೆ ಸುಮಾರು 17 ಜನರು ಹಾಜರಿದ್ದರು. ಈ ಸಭೆಯಲ್ಲಿ ಮಸೀದಿ ಭದ್ರತೆ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಭದ್ರತೆ ಬಗ್ಗೆ ಸೆಕ್ಯೂರಿಟ್ ಗಾರ್ಡ್ ನೇಮಿಸಲು ಮತ್ತು ಸಿಸಿ ಟಿವಿ ಅಳವಡಿಸಲು ಸೂಚಿಸಲಾಯಿತು. ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಯಾವುದೇ ಗಾಳಿ ಮಾತಿಗೆ ಕಿವಿ ಕೊಡದೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಕೋರಿಕೊಳ್ಳಲಾಗಿದೆ.
ಸಭೆಯ ಪೋಟೋ
No comments:
Post a Comment