ದೈನಂದಿನ ಅಪರಾದ ವರದಿ.
ದಿನಾಂಕ 03.02.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
1
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
4
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
0
|
2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-02-2015 ರಂದು ಬೆಳಿಗ್ಗೆ 8-30 ಗಂಟೆಯ ವೇಳೆ ಪಿರ್ಯಾದಿದಾರರಾದ ಶ್ರೀ ಶ್ರೀ ಗುರುಪ್ರಸಾದ್ ಐತಳ್ ರವರು ಮಂಗಳಾದೇವಿ ದೇವಸ್ಥಾನದ ಸಮೀಪವಿರುವ ದೇವಿಕೃಪಾ ಹಾಲ್ನ ಕಿಚನ್ನಲ್ಲಿರುವಾಗ ಪಿರ್ಯಾದಿದಾರರ ದೊಡ್ಡಮ್ಮ ಆರೋಪಿ 1 ನೇಯ ಕಮಲಾಕ್ಷಿ ರವರು ಒಮ್ಮೆಲೇ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ "ನೀನು ನಿನಗೆ ಸಂಬಂಧಿಸಿದ ಜಾಗದ ವಿಚಾರದಲ್ಲಿ ಮಾತನಾಡಿದರೆ ಜಾಗ್ರತೆ" ಎಂದು ಹೇಳಿ ಅವರ ಕೈಯಲ್ಲಿದ್ದ ನೆಲ ಒರೆಸುವ ಕಬ್ಬಿಣದ ರಾಡ್ನಿಂದ ಪಿರ್ಯಾದಿದಾರರ ತಲೆಗೆ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಹಣೆಯಲ್ಲಿ ಊದಿದ ಗಾಯವಾಗಿರುತ್ತದೆ. ಕೂಡಲೇ ಪಿರ್ಯಾದಿದಾರರ ದೊಡ್ಡಮ್ಮಳ ಮಗನಾದ ಆರೋಪಿ 2 ನೇಯ ವೆಂಕಟೇಶ್ ಐತಾಳ್ ಎಂಬವನು ಕೈಯಿಂದ ಪಿರ್ಯಾದಿದಾರರ ಎಡ ಕಿವಿಯ ಬಳಿಗೆ ಜೋರಾಗಿ ಹೊಡೆದಿರುತ್ತಾನೆ. ಈ ಹೊಡೆತದಿಂದ ಪಿರ್ಯಾದಿದಾರರು ಕುಸಿದು ಬಿದ್ದಾಗ, ಆರೋಪಿ 1 ನೇಯವರು ನೀ ನಿಲ್ಲು ಎಂದು ಹೇಳಿದ್ದು, ಆರೋಪಿ 2 ನೇಯಾತ ಪಿರ್ಯಾದಿದಾರರನ್ನು ಉದ್ದೇಶಿಸಿ " ನೀನು ನಿನಗೆ ಸಂಬಂಧಿಸಿದ ಆಸ್ತಿ ವಿಚಾರದಲ್ಲಿ ಮಾತನಾಡಿದರೆ, ನಿನ್ನನ್ನು ಪೊಲೀಸರಿಗೆ ಹಿಡಿದು ಕೊಡುತ್ತೇವೆ. ಅಲ್ಲದೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ" ಎಂಬುದಾಗಿ ಜೀವ ಬೆದರಿಕೆ ನೀಡಿರುತ್ತಾರೆ. ಈ ಘಟನೆಯ ವೇಳೆ ಅಲ್ಲೇ ಇದ್ದ ರಾಮಕೃಷ್ಣ ಮಯ್ಯ ಎಂಬವರು ಓಡಿ ಬಂದಾಗ ಆರೋಪಿಗಳು ಅಲ್ಲಿಂದ ಹೋಗಿರುತ್ತಾರೆ. ಪಿರ್ಯಾದಿದಾರರಿಗೆ ಆರೋಪಿತವರಲ್ಲಿ ಆಸ್ತಿಯಲ್ಲಿ ತನಗೆ ದೊರಕಬೇಕಾದ ಪಾಲನ್ನು ನೀಡಬೇಕೆಂದು ಈ ಮೊದಲೇ ಕೇಳಿದ್ದು, ಇದೇ ವಿಚಾರವನ್ನು ನೆಪವಾಗಿಟ್ಟುಕೊಂಡು ಈ ರೀತಿಯ ಕೃತ್ಯ ಎಸಗಿರುವುದಾಗಿದೆ. ಗಾಯಗೊಂಡ ಪಿರ್ಯಾದಿದಾರರನ್ನು ಪಿರ್ಯಾದಿದಾರರ ಬಾವನಾದ ಯೋಗೀಶ್ ಹೊಳ್ಳರವರು ಮಂಗಳಾ ಆಸ್ವತ್ರೆಗೆ ಸೇರಿಸಿದ್ದು, ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.
3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ದೇರಳಕಟ್ಟೆ ಪನೀರ್ ಎಂಬಲ್ಲಿರುವ ಸುಬೋದಿನಿ ಲೇಡಿಸ್ ಹಾಸ್ಟೇಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆ ದಿನಾಂಕ. 1-2-2015 ರಂದು ಸಂಜೆ 6-20 ಗಂಟೆಯ ನಂತರದಿಂದ ಸದ್ರಿ ಹಾಸ್ಟೇಲ್ನಿಂದ ಕಾಣೆಯಾಗಿದ್ದು, ಕಾಣೆಯಾದವರನ್ನು ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಅವರನ್ನು ಪತ್ತೆ ಹಚ್ಚಿಕೊಡುವಂತೆ ಸದ್ರಿ ಹಾಸ್ಟೇಲ್‌ನ ವಾರ್ಡ್‌ನ್ ರವರು ದಿನಾಂಕ. 2-2-2015 ರಂದು ಠಾಣೆಯಲ್ಲಿ ದೂರು ನೀಡಿರುವುದಾಗಿದೆ.
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-02-2015 ರಂದು ಸಂಜೆ 16-30 ಗಂಟೆ ಸಮಯ ಆರೋಪಿ ಕೆಎ-20-ಡಿ-318 ನೇ ಮೀನಿನ ಲಾರಿಯನ್ನು ಅದರ ಚಾಲಕನು ತೊಕ್ಕೊಟ್ಟು ಕಡೆಯಿಂದ ಕೋಟೆಕಾರು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೋಟೆಕಾರು ಅಡ್ಕ ಎಂಬಲ್ಲಿ ಫಿರ್ಯಾದಿದಾರರಾದ ಶ್ರೀ ರಮೇಶ್ ರವರು ಕೆಲಸ ಮಾಡುವ ರಶ್ಮಿ ಪ್ಯಾಬ್ರಿಕೇಶನ್ ವರ್ಕ್ ಶಾಪ್‌ನ್ನು ಎದುರುಗಡೆಯಲ್ಲಿ ರಸ್ತೆಯಲ್ಲಿ ತೀವ್ರ ಬಲಗಡೆಗೆ ತಪ್ಪು ದಾರಿಯಲ್ಲಿ ಚಲಾಯಿಸಿ ತನ್ನ ಎದುರಿನಿಂದ ಬರುತ್ತಿದ್ದ ಗುಲ್ಯನ್ ಎಂಬವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಕೆಎ-19ಇಇ-1641 ನೇದಕ್ಕೆ ಡಿಕ್ಕಿ ಹೊಡೆದುದರಿಂದ ಗುಲ್ಯನ್ ಮತ್ತು ಸಹಸವಾರ ಶಶಿಧರ ಎಂಬವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಾಗ ಶಶಿಧರ್ ರವರ ತಲೆಯ ಮೇಲಿನಿಂದ ಲಾರಿಯ ಚಕ್ರ ಹಾದು ಹೋಗಿ ತಲೆ ಅಪ್ಪಚ್ಚಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗುಲ್ಯನ್ಗೆ ಎಡ ಕೈಗೆ ಗಾಯವನ್ನುಂಟು ಮಾಡಿ ಲಾರಿಯನ್ನು ನಿಲ್ಲಿಸದೇ ಆರೋಪಿ ಚಾಲಕ ಪರಾರಿಯಾಗಿರುತ್ತಾನೆ.
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:01.02.2015 ರಂದು ಸಂಜೆ: 3.30 ಗಂಟೆ ವೇಳೆಗೆ ಫಿರ್ಯಾದಿದಾರರಾದ ರಜೀತಾ ರವರು ಅವರ ತಾಯಿ ಕಲ್ಯಾಣಿ ಹಾಗೂ ತಂಗಿ ಅಂಬಿಕಾರೋಂದಿಗೆ ಜೆಪ್ಪಿನಮೊಗರು ನೇತ್ರವಾತಿ ಬ್ರಿಡ್ಜ್ ಬಳಿ ರಸ್ತೆಯನ್ನು ದಾಟುವ ಸಮಯ ತೊಕ್ಕಟ್ಟು ಕಡೆಯಿಂದ ಕೆಎ-19-1255ನೇ ನಂಬ್ರದ ಬಿಳಿ ಬಣ್ಣದ ಆ್ಯಕ್ಟಿವಾ ಸ್ಕೂಟರ್ನ್ನು ಅದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಾಯಿ ಕಲ್ಯಾಣಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ತಾಯಿಯ ಬಲಕೈಗೆ ಮೂಳೆ ಮುರಿತದ ಗಾಯ ಸೊಂಟಕ್ಕೆ ಗುದ್ದಿದ ನೋವು ಬಲಕಾಲಿನ ಪಾದದ ಮೇಲಿನ ಗಂಟಿಗೆ ತೀವ್ರ ಸ್ವರೂಪದ ಗಾಯ ಮತ್ತು ತಲೆಗೆ ರಕ್ತಗಾಯವಾಗಿರುತ್ತದೆ. ಡಿಕ್ಕಿ ಆದ ಸ್ಕೂಟರ್ನ್ನು ಅದರ ಸವಾರನು ಚಲಾಯಿಸಿಕೊಂಡು ಪರಾರಿಯಾಗಿರುತ್ತಾನೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02.02.2015 ರಂದು ಫಿರ್ಯಾದಿದಾರರಾದ ಶ್ರೀ ಗೀರೀಶ್ ರೈ ರವರು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ: ಕೆಎ-19 ಇಎಮ್-1221 ರಲ್ಲಿ ಸವಾರಿ ಮಾಡಿಕೊಂಡು ಪಂಪವೆಲ್ ಕಡೆಯಿಂದ ವಿಟ್ಲ ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 9.00 ಗಂಟೆಗೆ ಕಪಿತಾನಿಯಾ ಶಾಲೆ ಎದರು ತಲುಪುತಿದ್ದಂತೆ ಬಂಟ್ವಾಳ ಕಡೆಯಿಂದ ಒಂದು ಕಾರನ್ನು ಕೆಎ-19 ಎಮ್‌ಎ-7638 ನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಎಡಕೈ ಮಣಿಗಂಟು ಹಾಗೂ ಎಡಕಾಲಿನ ತೊಡೆಗೆ ಗಂಬೀರ ಸ್ವರೂಪದ ಮೂಳೆ ಮುರಿತದ ಗಾಯ ಉಂಟಾಗಿರುತ್ತದೆ.
No comments:
Post a Comment