ದೈನಂದಿನ ಅಪರಾದ ವರದಿ.
ದಿನಾಂಕ 16.02.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
1
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
1
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
9
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
2
|
ಇತರ ಪ್ರಕರಣ
|
:
|
7
|
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ದೀಪಿಕಾ ಕಪೂರ್ ರವರು 2013ನೇ ಅಕ್ಟೋಬರ್ ತಿಂಗಳಲ್ಲಿ ಮಂಗಳೂರಿನ ಪ್ರೀತಿ ಅಪಾರ್ಟ್ಮೆಂಟ್ನ ತಮ್ಮ ಮನೆಯಲ್ಲಿ ಇದ್ದಾಗ ಸಂಜಯ್ ಗ್ರೋವರ್ ಎಂಬವರು ಪಿರ್ಯಾದುದಾರರ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಈ ವಿಷಯವನ್ನು ಪಿರ್ಯಾದಿದಾರರು ಸಂಜಯರ್ ಗ್ರೋವರ್ ರವರ ಪತ್ನಿಗೆ ಹಾಗೂ ಮಕ್ಕಳಿಗೆ ತಿಳಿಸಿರುತ್ತಾರೆ. ಈ ಬಗ್ಗೆ ಸದ್ರಿ ಸಂಜಯ್ ಗ್ರೋವರ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 25-12-2014ರಂದು 19-30 ಗಂಟೆಗೆ ಲಿಖಿತವಾಗಿ ದೂರು ನೀಡಿದ್ದು, ಸದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷೀರು ಸ್ಥಳದ ಆಧಾರದ ಮೇರೆಗೆ ಪ್ರಕರಣವನ್ನು ಬರ್ಕೆ ಠಾಣೆಗೆ ವರ್ಗಾವಣೆಯಾಗಿ ಬಂದಿರುವುದಾಗಿದೆ.
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪವೀತ್ರನ್ ಕೆ.ಸಿ. ರವರ ಮಗ ಸುಮಾರು 17 ವರ್ಷದ ಕೆಂದ್ರೀಯ ವಿದ್ಯಾಲಯ ನಂ 01 ಪಣಂಬೂರು ಇಲ್ಲಿ ಪಿ ಯು ಸಿ 2 ನೇ ವರ್ಷದ ವಿದ್ಯಾರ್ಥಿ ಬೆನಿಟ್ಟೊ ಪವಿತ್ರನ್ ದಿನಾಂಕ 13-02-2015 ರಂದು ಸಂಜೆ 04 ಗಂಟೆಗೆ ತನ್ನ ಮನೆಯಾದ ಪಣಂಬೂರಿನಿಂದ ಕುಂಟಿಕಾನದಲ್ಲಿರುವ ಸಿ ಫಾಲ್ ಟ್ಯೂಷನ್ ಸೆಂಟರ್ ಗೆಂದು ಹೋದವನು ಟ್ಯೂಷನ್ ಗೆ ಹೋಗದೆ ರಾತ್ರಿಯಾದರು ಮನೆಗೆ ಬಾರದೆ ಈ ವರೆಗೂ ಮನೆಯವರಿಗೆ ಯಾವುದೇ ಮಾಹಿತಿ ನೀಡದೆ ಕಾಣೆಯಾಗಿರುತ್ತಾನೆ ಮತ್ತು ಆತನನ್ನು ಎಲ್ಲಾ ಕಡೆ ಹುಡುಕಾಡಿ ದಿನಾಂಕ 14-02-2014 ರಂದು ಠಾಣೆಗೆ ಬಂದು ದೂರು ನೀಡಿದ್ದಾಗಿದೆ.
3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2015 ರಂದು ರಾತ್ರಿ 10-30 ಗಂಟೆಗೆ ಪಣಂಬೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಶ್ರೀ ಲೋಕೇಶ್ ಎ ಸಿ ರವರು ಠಾಣಾ ಸರಹದ್ದಿನಲ್ಲಿ ಇಲಾಖಾ ಜಿಪು ನಂ ಕೆ ಎ 19 ಜಿ 484 ನೇದ್ದರಲ್ಲಿ ಸಿಬ್ಬಂದಿಗಳ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ತಾಲೂಕು ತೋಕೂರು ಗ್ರಾಮದ ಹೆಚ್ ಪಿ ಸಿ ಎಲ್ ಕಾಲನಿ ಬದ್ರುದ್ದಿನ್ ಯಾನೆ ತೋಳ್ ಬದ್ರು ಎಂಬಾತನ ಮನೆಯ ಹಿಂಬದಿ ಇರುವ ಶೆಡ್ಡಿನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಎಲ್ಲಿಂದಲೋ ಅಕ್ರಮವಾಗಿ ಕದ್ದು ತಂದ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗ ಠಾಣಾ ಪಿ ಎಸ್ ಐ ಹಾಗೂ ಸಿಬ್ಬಂಧಿ ಜೊತೆಯಲ್ಲಿ ಪಂಚರೊಂದಿಗೆ ರಾತ್ರಿ 11-00 ಗಂಟೆಗೆ ದಾಳಿ ನಡೆಸಿದಾಗ ಸದ್ರಿ ಶೆಡ್ಡಿನಲ್ಲಿ ಒಟ್ಟು 8 ಜನ ರಿದ್ದು ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿದ್ದು ಉಳಿದ 6 ಮಂದಿ ಆರೋಪಿಗಳು ಪರಾರಿಯಾಗಿದ್ದು ಸದ್ರಿ ಶೆಡ್ಡನ್ನು ಪರಿಶೀಲಿಸಿದಾಗ ಆರೊಪಿಗಳು ಎಲ್ಲಿಂದಲೋ ದನಗಳನ್ನು ಕಳವು ಮಾಡಿ ಕೊಂಡು ಬಂದು ಅಕ್ರಮವಾಗಿ ದನಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಉದ್ದೆಶದಿಂದ ಕಡಿದು ಮಾಂಸ ಮಾಡುತ್ತಿರುವುದು ಕಂಡು ಬಂದಿದ್ದು ಕಡಿದು ಹಾಕಿದ ಮಾಂಸಗಳನ್ನು ಮಾರಾಟ ಮಾಡಲು ಕಂಡು ಹೋಗುವರೇ ರಿಕ್ಷಾ ನಂ ಕೆ ಎ 19 ಎಎ 5517 ನ್ನು ರಸ್ತೆ ಬದಿ ನಿಲ್ಲಿಸಿದ್ದು ಸದ್ರಿ ರಿಕ್ಷಾವನ್ನು ಹಾಗೂ ದನದ ಮಾಂಸ, ಮಾಂಸ ಮಾಡಲು ಕೊಂಡು ಹಾಕಿದ ದನಗಳು ಹಾಗೂ ಈ ಕೃತ್ಯಕ್ಕೆ ಉಪಾಯೊಗಿಸಿದ ಕತ್ತಿ ತೋಕ ಮಾಪನ ಇತ್ಯಾದಿ ಸೊತ್ತುಗಳನ್ನು ಸ್ವಾಧೀನಪಡಿಸಿದ್ದಾಗಿದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನೆಹರೂ ಚೌಹಾನ್ ರವರು ಸುಮಾರು 1 ವರ್ಷಗಳಿಂದ ಕೆ.ಇ.ಐ ಕಂಪನಿಯಲ್ಲಿ ಅಸಿಸ್ಟೇಂಟ್ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು . ಸದ್ರಿ ಕಂಪನಿಯು ಮಂಗಳೂರಿನ ಕಳವಾರಿನಲ್ಲಿರುವ ಎಮ್ ಎಸ್ ಈ ಝಡ್ ಕಂಪನಿಯ ಕಂಟ್ರಾಕ್ಟ್ ಕೆಲಸ ಮಾಡಿಕೊಂಡಿರುವುದಾಗಿದೆ. ಸದ್ರಿ ಕಾಮಗಾರಿಯ ಕೆಲಸಕ್ಕೆ ಬೇಕಾದ ಸ್ವತ್ತುಗಳನ್ನು ಇವರು ಕಳವಾರಿನ ಸೈಟಿನಲ್ಲಿ ಇಟ್ಟಿದ್ದು ಸದ್ರಿ ಸೈಟಿಗೆ ಪ್ರೈವೇಟ್ ಐ ಸೆಕ್ಯುರಿಟಿ ಕಂಪನಿಯ ಸೆಕ್ಯುರಿಟಿ ಸಿಬ್ಬಂದಿಗಳನ್ನು ನೇಮಿಸಿರುತ್ತಾರೆ. ದಿನಾಂಕ:10-02-2015 ರಂದು ಮುಂಜಾನೆ ಸುಮಾರು 2-00 ಗಂಟೆಗೆ ಸದ್ರಿ ಸೆಕ್ಯುರಿಟಿ ಕಂಪನಿಯ 3 ಮಂದಿ ಸಿಬ್ಬಂದಿಗಳು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಸಮಯ ಅಪರಿಚಿತ ಆರು ಮಂದಿ ವ್ಯಕ್ತಿಗಳು ಅವರ ಬಳಿ ಬಂದು ಅವರ ಕೈಯಲ್ಲಿದ್ದ ಕಬ್ಬಿಣದ ಪೈಪ್ ಹಾಗೂ ರಾಡ್ ಗಳನ್ನು ತೋರಿಸಿ ಬೆದರಿಸಿ ಸಕ್ಯುರಿಟಿ ಸಿಬ್ಬಂದಿಗಳ ಪೈಕಿ ಒಬ್ಬನಲ್ಲಿದ್ದ ಶಾಲ ನ್ನು ಮೂರು ವಿಭಾಗವಾಗಿ ತುಂಡರಿಸಿ ಅದರಿಂದ ಸೆಕ್ಯುರಿಟಿ ಸಿಬ್ಬಂದಿಗಳ ಕೈಗಳನ್ನು ಕಟ್ಟಿ ಸೈಟ್ ನಲ್ಲಿದ್ದ 276 ಮೀಟರ್ ಉದ್ದದ 5304 ಕೆ ಜಿ ತೂಕದ (ವೀಲ್ ಸಮೇತ) ಕಾಪರ್ ಕೇಬಲನ್ನು ಸೈಟಿಗೆ ನಂತರ ಬಂದ ಕ್ರೇನ್ ನ ಸಹಾಯದಿಂದ ಲಾರಿಯೊಂದರಲ್ಲಿ ಲೋಡ್ ಮಾಡಿ ದರೋಡೆ ಮಾಡಿಕೊಂಡು ಹೋಗಿದ್ದು. ದರೋಡೆಯಾದ ಸ್ವತ್ತಿನ ಮೌಲ್ಯ ಸುಮಾರು 15 ಲಕ್ಷ ರೂಪಾಯಿ ಆಗಿರುವುದಾಗಿದೆ.
5.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 10.02.2015 ರಂದು ಪಿರ್ಯಾದಿದಾರರಾದ ಶ್ರೀ ರಾಜೇಶ್ ರವರು ಮಂಗಳೂರು ನಗರದ ಎಸ್ ಪಿ ಸರ್ಕಲ್ ಸಾರ್ವಜನಿಕ ಕಾಂಕ್ರೀಟು ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ಸಮಯ ರಾತ್ರಿ 8.20 ಗಂಟೆಗೆ ಆರೋಪಿ ಬಸ್ಸು ಚಾಲಕ ಬಸ್ಸು ನಂಬ್ರ ಕೆಎ.19.ಬಿ 7664 ರೂಟ್ ನಂಬ್ರ 11 ಬಿ ನೇದನ್ನು ಎ. ಬಿ ಶೆಟ್ಟಿ ವೃತ್ತದ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎದೆಗೆ, ಬಲ ಭುಜಕ್ಕೆ, ಬಲ ಬೆನ್ನಿಗೆ, ಕುತ್ತಿಗೆಗೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಸದ್ರಿ ಅಪಘಾತ ಎಸಗಿದ ಬಸ್ಸಿನವರು ಈ ವರೆಗೆ ಖರ್ಚಿಗೆ ಹಣ ನೀಡುವುದಾಗಿ ತಿಳಿಸಿದ್ದು ಆದರೆ ಈಗ ಹಣ ನೀಡುವರೇ ನಿರಾಕರಿಸಿರುವುದರಿಂದ ಪಿರ್ಯಾದಿ ನೀಡಲು ತಡವಾಗಿರುತ್ತದೆ.
6.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.02.2015 ರಂದು ಸುಮಾರು ರಾತ್ರಿ 8.30ರ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಕೃಷ್ಣ ಮಡಿವಾಳಪ್ಪ ಎಂಬವರು ಹಾಗೂ ಅಜೇಯ ಭಂಢಾರಿ ಎಂಬವರು ಲಿಂಗಪ್ಪಯ್ಯ ಕಾಡು ಎಂಬಲ್ಲಿ ವಿಠಲ ಎಂಬವರ ಮನೆಯಲ್ಲಿ ಮಗುವಿನ ಹುಟ್ಟು ಹಬ್ಬದ ಕಾರ್ಯಕ್ರಮ ಮುಗಿಸಿ ವಾಪಾಸು ಹೋಗುವಾಗ ಆರೋಪಿ ಫಕೀರಪ್ಪ ಎಂಬವರು ಅವ್ಯಾಚ್ಚ ಶಬ್ದಗಳಿಂದ ಬೈದು ಕೈಯಲ್ಲಿ ಮರದ ಹಲಗೆ ಪೀಸನ್ನು ಹಿಡಿದುಕೊಂಡು ಬಂದು ಇಲ್ಲಿ ದಾರಿಯಲ್ಲಿ ಹೋದಲ್ಲಿ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲವೆಂದು ಬೆದರಿಸಿರುತ್ತಾರೆ.
7.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಸೌಪರ್ಣಿಕಾ ರವರು ಕಾರ್ನಾಡಿನ 'ದುರ್ಗಾ ಪವರ್ ಸೊಲ್ಯುಷನ್' ಎಂಬಲ್ಲಿಗೆ ಪ್ರತಿದಿನ ಕೆಲಸಕ್ಕೆ ಬಸ್ ನಲ್ಲಿ ಮುಲ್ಕಿಗೆ ಬಂದು ಕಾರ್ನಾಡಿಗೆ ನಡೆದುಕೊಂಡು ಹೋಗುತ್ತಿದ್ದು , ಸುಮಾರು 2-3 ದಿನಗಳಿಂದ ಆರೋಪಿ ಚಂದ್ರಹಾಸನು ಮುಲ್ಕಿಯಿಂದ ಕಾರ್ನಾಡಿಗೆ ನಡೆದುಕೊಂಡು ಹೋಗುವ ಸಮಯ ಹಣಕ್ಕಾಗಿ ಪೀಡಿಸುತ್ತಿದ್ದು, ದಿನಾಂಕ 14-12-2015 ರಂದು ಬೆಳಿಗ್ಗೆ ಸುಮಾರು 09-00 ಗಂಟೆಗೆ ಮುಲ್ಕಿ ಬಸ್ ಸ್ಟಾಂಡ್ ನಿಂದ ಕಾರ್ನಾಡು ಕಡೆಗೆ ಹೋಗುವಾಗ ಆರೋಪಿ ಚಂದ್ರಹಾಸನು ಪಿರ್ಯಾದಿದಾರರನ್ನು ಅಡ್ಡಕಟ್ಟಿ ಹಣಕೊಡುವಂತೆ ಪೀಡಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿರುತ್ತಾನೆ.
8.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12-02-2015ರ ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 15-02-2015ರ 18-30 ಗಂಟೆಯ ಮಧ್ಯೆ ಮಂಗಳೂರು ನಗರದ ಶಿವಭಾಗ್ 1ನೇ ಅಡ್ಡ ರಸ್ತೆಯಲ್ಲಿರುವ ಪಿರ್ಯಾದಿದಾರರಾದ ಶ್ರೀ ಕೆ. ಶಿವರಾಮ್ ರೈ ರವರ ಬಾಬ್ತು ಮನೆಯ ಎದುರಿನ ಬಾಗಿಲಿನ ಇನ್ನರ್ ಲಾಕನ್ನು ಮುರಿದು ಒಳಪ್ರವೇಶಿಸಿದ ಯಾರೋ ಕಳ್ಳರು ಮಾಸ್ಟರ್ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಕಪಾಟಿನೊಳಗಿರಿಸಿದ್ದ ವಿವಿಧ ನಮೂನೆಯ ಸುಮಾರು 26 ಗ್ರಾಂ ತೂಕವಿರುವ ಚಿನ್ನಾಭರಣ, ಬೆಳ್ಳಿಯ ನಾಣ್ಯ-4, HP ಕಂಪನಿಯ ಲ್ಯಾಪ್ ಟಾಪ್-1, ನಗದು ರೂ. 28,000/- ಮತ್ತು ಸಹಿ ಮಾಡಿದ ಖಾಲಿ ಚೆಕ್ ನ ಹಾಳೆ-1 ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ. 1,10,000/- ಆಗಬಹುದು.
9.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2015 ರಂದು ಸಮಯ ಸುಮಾರು ರಾತ್ರಿ 22-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ರಂಜಿತ್ ರವರು ತಮ್ಮ ಬಾಬ್ತು ಮೊಟಾರ ಸೈಕಲ ನಂಬ್ರ ಕೆ.ಎ-19-Y-6551ನೇದನ್ನು ಸಿಎಆರ್ ಕಚೇರಿಯಿಂದ ಮಾರಿಗುಡಿ ಬೋಳಾರ ಕಡೆಗೆ ಸವಾರಿಮಾಡಿಕೊಂಡು ಹೋಗುವರೇ ಮಾರಿಗುಡಿ ಬೋಳಾರ ಪಾದೆಕಲ್ ತಲಪುತ್ತಿದ್ದಂತೆ ಪಾದೆಕಲ್ಲು ನಿಂದ ಸ್ಟೆಂಟ್ ಬ್ಯಾಂಕ ಕಡೆಗೆ ಕಾರ್ ನಂಬ್ರ ಎಂ.ಹೆಚ್-22-ವಿ-0655 ನೇದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಮೊಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮೊಟಾರ ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರರ ಬಲಕಾಲಿನ ಮೊಣಗಂಟಿಗೆ ಗುದ್ದಿದ ತೀವ್ರ ತರದ ಗಾಯವಾಗಿರುತ್ತದೆ ಮತ್ತು ಬಲಕೈಗೆ ತರಚಿದ ಗಾಯವಾಗಿ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಈ ಅಪಘಾತ ಮಾಡಿದ ಕಾರಿನ ಚಾಲಕ ಅಪಘಾತ ಸ್ಥಳದಿಂದಕಾರು ಸಮೇತ ಪರಾರಿಯಾಗಿರುತ್ತಾನೆ.
10.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-02-2015 ರಂದು ಸಮಯ ಸುಮಾರು ಮದ್ಯಾಹ್ನ 1-15 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸಚಿನ್ ಕುಮಾರ್ ರವರು ತಮ್ಮ ಬಾಬ್ತು ಮೊಟಾರ ಸೈಕಲ್ ನಂಬ್ರ ಕೆ.ಎ-19ಇಸಿ-6362 ರಲ್ಲಿ ಸವಾರರಾಗಿ ಕೆಪಿಟಿ ಕಡೆಯಿಂದ ಬಿಜೈ ಚರ್ಚ ಕಡೆಗೆ ಹೋಗುವರೇ ಸರ್ಕ್ಯೋಟ್ ಹೌಸ ಸರ್ಕಲ್ ತಲುಪುತ್ತಿದ್ದಂತೆ ವೃಂದಾವನ ಹೋಟೆಲ್ ಕಡೆಯಿಂದ ಆಕ್ಟಿವಾ ಸ್ಕೂಟರೊಂದನ್ನು ಅದರ ಸವಾರರು ಹಿಂಬದಿ ಸವಾರರೊಬ್ಬರನ್ನು ಕುಳ್ಳರಿಸಿಕೊಂಡು ಸರ್ಕ್ಯೋಟ್ ಹೌಸ್ ಸರ್ಕಲ್ ನ್ನು ಬಳಸದೇ ವೃಂದಾವನ ಹೋಟೆಲ್ ನ ಒಳಬದಿಯಿಂದಾಗಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಮೊಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮೊಟಾರ ಸೈಕಲ್ ಸಮೇತ ಕಾಂಕ್ರಿಟ್ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರರ ಬಲ ಕಣ್ಣಿಗೆ ಮುಖಕ್ಕೆ ತರಚಿದ ರಕ್ತಗಾಯ ಹಾಗೂ ಎರಡು ಕಾಲಿನ ಮೊಣಗಂಟಿಗೆ ಗುದ್ದಿದ ನೋವು ಉಂಟಾಗಿ ಖಾಸಗಿ ಕ್ಲಿನಿಕ್ ನಲ್ಲಿ ಹೋರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ ಈ ಅಪಘಾತದಿಂದ ಎರಡು ವಾಹನಗಳು ಜಖಂಗೊಂಡಿರುವುದಾಗಿದೆ.
11.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12/02/2015 ರಂದು ಬೆಳಿಗ್ಗೆ 09.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ತುಕಾರಾಮ ದೇವಾಡಿಗ ರವರ ಮಗ ಕೌಶಿಕ್ 6 ವರ್ಷ ಎಂಬವನು ಶಾಲೆಗೆ ಹೋಗುವರೇ ತನ್ನ ಮನೆಯಾದ ಮಂಗಳೂರು ತಾಲೂಕು ಅದ್ಯಪಾಡಿ ಗ್ರಾಮದ ಅದ್ಯಪಾಡಿ ಸೈಟ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿಯೇ ಪಕ್ಕದಲ್ಲಿ ಲಾರಿ ನಂಬ್ರ KA 19 D 8415 ನಿಂತು ಕೆಂಪು ಕಲ್ಲನ್ನು ಅನ್ ಲೋಡ್ ಮಾಡುತ್ತಿದ್ದು, ಲಾರಿ ಚಾಲಕನು ಯಾವುದೇ ಮುನ್ಸೂಚನೆಯನ್ನು ನೀಡದೇ ಒಮ್ಮೆಲೇ ನಿರ್ಲಕ್ಷ್ಯತನದಿಂದ ಲಾರಿಯನ್ನು ಹಿಂದಕ್ಕೆ ಚಲಾಯಿಸಿದ ಪರಿಣಾಮ ಲಾರಿಯಲ್ಲಿದ್ದ ಒಂದು ಕೆಂಪು ಕಲ್ಲಿನ ಅರ್ಧ ತುಂಡು ಬಾಲಕ ಕೌಶಿಕ್ ನ ಮೇಲೆ ಬಿದ್ದು, ಆತನ ತಲೆಗೆ ರಕ್ತಗಾಯ ಹಾಗೂ ಪಕ್ಕೆಲುಬಿಗೆ ಜಖಂ ಆಗಿದ್ದು, ಬಾಲಕನ್ನು ಚಿಕಿತ್ಸೆ ಬಗ್ಗೆ ಬಜಪೆಯಲ್ಲಿರುವ ವೈದ್ಯರ ಬಳಿ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿರುತ್ತಾರೆ.
12.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11/02/2015 ರಂದು ರಾತ್ರಿ ವೇಳೆಯಿಂದ ದಿನಾಂಕ: 12/02/2015 ರಂದು 13.00 ಗಂಟೆ ಮಧ್ಯೆ ಮಂಗಳೂರು ತಾಲೂಕು ತೆಂಕ ಎಕ್ಕಾರು ಗ್ರಾಮದ ತೆಂಕ ಎಕ್ಕಾರು BTS ಸೈಟ್ ನಲ್ಲಿ BSNL ನವರು ಮೊಬೈಲ್ ಟವರ್ ಗೆ ಅಳವಡಿಸಿದ 400 AH 48 numbers HBL ನ 2 ಸೆಟ್ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಬ್ಯಾಟರಿಗಳ ಅಂದಾಜು ಮೌಲ್ಯ ರೂ. 1,50,000/- ಗಳಾಗಬಹುದು.
13.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಯಾರೋ ದುಷ್ಕರ್ಮಿಗಳು ಎರಡು ಸಮುದಾಯದ ನಡುವೆ ದ್ವೇಷ ಉಂಟು ಮಾಡಿ ಗಲಭೆ ಸೃಷ್ಠಿಸುವ ಉದ್ದೇಶದಿಂದ ದಿನಾಂಕ:14-02-2015 ರಂದು ರಾತ್ರಿ 9.30 ಗಂಟೆಯ ನಂತರ ದಿನಾಂಕ:15-02-2015ರ ಬೆಳಿಗ್ಗೆ 05.00 ಗಂಟೆಯ ಮಧ್ಯೆ, ಮಂಗಳೂರು ತಾಲೂಕು, ಬಜಪೆ ಗ್ರಾಮದ ಪೊರ್ಕೋಡಿ ಕ್ರಾಸ್ ಎಂಬಲ್ಲಿರುವ ಬಜ್ಪೆ ಮುಹಿಯ್ಯುದ್ದಿನ್ ಜುಮ್ಮಾ ಮಸೀದಿಯ ಆಡಳಿತಕ್ಕೊಳಪಟ್ಟ ರಹಮಾನಿಯ ಈದ್ಗಾ ಜುಮ್ಮಾ ಮಸೀದಿಯ ಪಶ್ಚಿಮ ಬದಿಯ ಗೋಡೆಗೆ ಅಳವಡಿಸಿರುವ ಕಿಟಕಿಯ ಗಾಜಿಗೆ ಕಲ್ಲೆಸೆದು ಅದನ್ನು ಪುಡಿ ಮಾಡಿ ನಷ್ಟ ಉಂಟು ಮಾಡಿರುವುದಾಗಿದೆ.
14.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15/02/2015 ರಂದು 02.20 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಹಿಂಬದಿ ಇರುವ ಸಮುದಾಯ ಭವನದ ಕಟ್ಟಡಕ್ಕೆ ಯಾರೋ ಕಿಡಿಗೇಡಿಗಳು ಎರಡು ಸಮುದಾಯದ ನಡುವೆ ದ್ವೇಷ ಉಂಟು ಮಾಡಿ ಗಲಭೆ ಸೃಷ್ಟಿಸುವ ಉದ್ದೇಶದಿಂದ ಕಲ್ಲು ಎಸೆದು ಕಿಟಕಿಗಳ ಕನ್ನಡಿಗಳನ್ನು ಹುಡಿ ಮಾಡಿ ನಷ್ಟವುಂಟು ಮಾಡಿರುತ್ತಾರೆ.
15.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14-02-2015 ರಂದು ಪಿರ್ಯಾಧಿದಾರರಾದ ಶ್ರೀ ಉದಯ್ ಬಾನ್ ರವರು ಕೆಲಸ ಮುಗಿಸಿಕೊಂಡು ತನ್ನ ಬಾಡಿಗೆ ಮನೆಯಾದ ತಡಂಬೈಲ್ ಕಡೆಗೆ ಹೋಗುವರೇ ರಾ ಹೆ 66 ರಲ್ಲಿ ಕುಳಾಯಿ ಶೆಟ್ಟಿ ಐಸ್ ಕ್ರೀಂ ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ KA -19- Z-8293 ನೇ ನಂಬ್ರದ ಕಾರನ್ನು ಅದರ ಚಾಲಕ ಸತೀಶ್ ಎಂಬುವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಢಿಕ್ಕಿ ಪಡಿಸಿದ ಪರಿಣಾಮ ಬಲ ಕೈಗೆ ಮೂಳೆ ಮುರಿತ ಮತ್ತು ತಲೆಗೆ ತರಿಚಿದ ಗಾಯವಾಗಿದ್ದು ಗಾಯಾಳು ಚಿಕಿತ್ಸೆ ಬಗ್ಗೆ ಮಂಗಳೂರು ಕೆ ಎಮ್ ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
16.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2015 ರಂದು 14-00 ಗಂಟೆಯ ಸಮಯಕ್ಕೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ರೈಲ್ವೆ ನಿಲ್ದಾಣದ ರೈಲ್ವೆ ಟ್ರಾಕ್ನಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸವಿತ್ರು ತೇಜು ಪಿ.ಡಿ. ರವರಿಗೆ ದೊರೆತ ಖಚಿತ ಮಾಹಿತಿಯಂತೆ ಮಾನ್ಯ ತಹಶೀಲ್ದಾರರು ಮತ್ತು ತಾಲೂಕು ದಂಡಾಧಿಕಾರಿಯವರು ಮತ್ತು ಮಾನ್ಯ ಎಸಿಪಿ ಮಂಗಳೂರು ದಕ್ಷಿಣ ಉಪ ವಿಭಾಗ, ಮಂಗಳೂರು ನಗರ ಹಾಗೂ ಸಿಬ್ಬಂದಿಗಳ ಜೊತೆಗೆ ಸದ್ರಿ ಸ್ಥಳಕ್ಕೆ ಹೋದಾಗ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನು ಅಂದರೆ ನೋಡಿ ಗುರುತು ಪರಿಚಯವಿರುವ ಹಿದಾಯತ್ ಎಂಬಾತನು ಓಡಿ ಹೋಗಿದ್ದು, ಮತ್ತೊಬ್ಬ ಆರೋಪಿ ಪಿ ಎಮ್ ವಿನೋದ್ @ ಮಹಮ್ಮದ್ ಮುನೀರ್ @ ಪಂಚು ಎಂಬಾತನು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಗಾಂಜಾವನ್ನು ಮಾರಾಟ ಮಾಡುವಂತೆ ಕಂಡು ಬಂದಿದ್ದು ಆತನ ವಶದಲ್ಲಿ ಸುಮಾರು 1.050 ಕಿ.ಗ್ರಾಂ ಗಾಂಜ ಹಾಗೂ ನಗದು 370/-ವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ ರೂಪಾಯಿ 10,000/- ಆಗಬಹುದು.
17.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2015 ರಂದು ಸಂಜೆ 03-15 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ತಲಪಾಡಿ ಗ್ರಾಮದ ಕೆ.ಸಿ.ರೋಡ್ ಜಂಕ್ಷನಲ್ಲಿ ಪಿರ್ಯಾದಿದಾರರಾದ ಶ್ರೀ ನವಾಜ್ ರವರು ನಿಂತುಕೊಂಡಿರುವ ಸಮಯ ತಲಪಾಡಿ ಕಡೆಯಿಂದ ಕೆ ಸಿ ರೋಡ್ ಕಡೆಗೆ ಕಾರ್ ನಂಬ್ರ ಕೆಎ-19-ಎಮ್ಸಿ-6459 ನೇಯದರ ಚಾಲಕನು ತನ್ನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಬಲಗಡೆಯ ಸೊಂಟಕ್ಕೆ, ಬಲಕಾಲಿಗೆ ಮತ್ತು ಎಡಕೈಗೆ ಮುಂತಾದ ಕಡೆಗೆ ಗಾಯ ಉಂಟಾಗಿ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ.
18.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರು ಸುಭಾಸ್ನಗರ ಅಂಜುಮಾನ್ ಮಬ್ಲಗುಲ್ ಫಲಹಾ ಮದರಸದಲ್ಲಿ ಜೋರಾಗಿ ಧ್ವನಿವರ್ಧಕ ಬಳಸುತ್ತಿರುವುದರ ಬಗ್ಗೆ ಮತ್ತು ಮದರಸದ ಬಳಿ ರಾತ್ರಿ 8-00 ರಿಂದ ರಾತ್ರಿ 11-00 ಗಂಟೆಯ ಅವಧಿಯಲ್ಲಿ ಗುಂಪುಕಟ್ಟಿಕೊಂಡು ರಸ್ತೆಯ ಬದಿಯಲ್ಲಿ ನಿಂತುಕೊಂಡು ದಾರಿಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸದ್ರಿ ಮದರಸದ ಅಧ್ಯಕ್ಷ ರಲ್ಲಿ ಮನವಿ ಮಾಡಿಕೊಳ್ಳುವ ಸಲುವಾಗಿ ಒಂದು ಸಮುದಾಯದವರು ದಿನಾಂಕ. 14-2-2015 ರಂದು ರಾತ್ರಿ 8-30 ಗಂಟೆಗೆ ಅಧ್ಯಕ್ಷರವರ ಮನೆಯ ಬಳಿಗೆ ಹೋಗಿ ಅರವರನ್ನು ಕರೆದು ಸಮಾಧಾನದಲ್ಲಿ ವಿಷಯ ತಿಳಿಸಿದಾಗ ಬಂದವರನ್ನು ಉದ್ದೇಶಿಸಿ "ನಮ್ಮ ಮದರಸದಲ್ಲಿ ಜೋರಾಗಿ ಧ್ವನಿವರ್ಧಕ ಬಳಸುತ್ತೇವೆ, ನೀವು ಏನು ಮಾಡುತ್ತೀರಿ, ನಮಗೆ ಎಲ್ಲಾ ಕಾನೂನುಗೊತ್ತಿದೆ" ಎಂದು ಹೇಳಿ ಬೇಡದ ಮಾತುಗಳಿಂದ ಬೈದು ಹೀಯಾಳಿಸಿ, ಮನವಿಗೆ ಬಂದವರನ್ನು ಉದ್ದೇಶಿಸಿ "ನೀವು ಇಲ್ಲಿಂದ ನಡಿರಿ, ಇಲ್ಲವಾದಲ್ಲಿ ನಿಮ್ಮನ್ನು ಹೊಡೆದು ಓಡಿಸುತ್ತೇವೆ" ಎಂದು ಉದ್ಧಟತನದಲ್ಲಿ ವರ್ತಿಸಿರುತ್ತಾರೆ. ಅದೇ ಹೊತ್ತಿಗೆ ನೌಫಲ್ ಮತ್ತು ಇತರರು ಅಕ್ರಮ ಕೂಟ ಸೇರಿಕೊಂಡು ಮನವಿ ಮಾಡಿಕೊಳ್ಳಲು ಬಂದವರವರ ಮೈಗೆ ಕೈ ಹಾಕಿ ಮಾನ ಹಾನಿ ಮಾಡಿದಲ್ಲದೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ನೋವುಂಟು ಮಾಡಿದಾಗ ಜೋರಾಗಿ ಬೊಬ್ಬೆ ಹಾಕಿದ್ದು, ಆಗ ಗಲಾಟೆ ಬಿಡಿಸಲು ಬಂದ ವ್ಯಕ್ತಿಯೊಬ್ಬರಿಗೆ ಅಬ್ದುಲ್ ರಹಿಮಾನ್ ಕೈಯಿಂದ ಮುಖಕ್ಕೆ ಕೈಯಿಂದ ಗುದ್ದಿ ಗಾಯಗೊಳಿಸಿ ಮುಂದಕ್ಕೆ ಬದುಕಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಘಟನೆ ನಡೆಯುವಾಗ ರಾತ್ರಿ 10-00 ರಿಂದ 10-30 ಗಂಟೆ ಆಗಬಹುದು. ಈ ತಕ್ಷೀರಿನಿಂದ ಮನವಿ ಮಾಡಿಕೊಳ್ಳಲು ಬಂದವರಲ್ಲಿ ಕೆಲವರು ರವರು ಗಾಯಗೊಂಡಿರುತ್ತಾರೆ.
19.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 14-2-2015 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನೌಶದ್ ರವರು ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರು ಸುಭಾಶ್ನಗರ ಮಸೀದಿಗೆ ನಮಾಜು ಮಾಡಲು ಹೋಗಿ ನಮಾಜು ಮುಗಿಸಿ ಹೊರಗೆ ಬರುವಷ್ಟರಲ್ಲಿ ಮಸೀದಿಯ ಹೊರಗೆ ರಸ್ತೆಯ ಬದಿಯಲ್ಲಿ ಸುಭಾಶ್ನಗರ ವಾಸಿ ಮಹಿಳೆಯೊಬ್ಬರನ್ನು ಅನಿಲ್ ಎಂಬವನು ದೂಡುತ್ತಿದ್ದಾಗ ಫಿರ್ಯಾದಿದಾರರು ಮಹಿಳೆಯನ್ನು ಅನಿಲ್ ನಿಂದ ಬಿಡಿಸುವಷ್ಟರಲ್ಲಿ ಅನಿಲ್, ಚುಮ್ಮ @ ನಿತಿನ್, ಧನು, ಯತೀಶ್, ಪ್ರಶಾಂತ್, ಮಂಜುನಾಥ, ದಿನೇಶ ಮತ್ತಿತರರು ಫಿರ್ಯಾದಿದಾರರ ಶರ್ಟಿನ ಕಾಲರ್ ಹಿಡಿದು ಎಳೆದು ಕೈಯಿಂದ ಹೊಡೆದು ಕಾಲಿನಿಂದ ತುಳಿದುದಲ್ಲದೆ, ಕೋಲಿನಿಂದ ಫಿರ್ಯಾದಿದಾರರ ಎಡ ಕಾಲಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ಆಗ ಗಲಾಟೆ ಬಿಡಿಸಲು ಬಂದ ಯಹ್ಯಾ ಆಸಿಫ್ನಿಗೆ ಕೂಡಾ ಮಂಜುನಾಥನು ಕೈಯಿಂದ ಹೊಡೆದಿದ್ದು, ಉಳಿದವರು ಆತನನ್ನು ದೂಡಿರುತ್ತಾರೆ. ಗಾಯಗೊಂಡ ಫಿರ್ಯಾದಿದಾರರು, ಮಹಿಳೆ ಮತ್ತು ಯಹ್ಯಾ ಆಸಿಫ್ ರವರು ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
20.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2015 ರಂದು ಸಂಜೆ 06-45 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕೋಟೆಕಾರ್ ಗ್ರಾಮದ 2 ನೇ ಕೋಲ್ಯ ಬಸ್ ಸ್ಟಾಪ್ ಬಳಿ ಪಿರ್ಯಾದಿದಾರರಾದ ಶ್ರೀಮತಿ ಮೋಹಿನಿ ರವರು ಮತ್ತು ಪಿರ್ಯಾದುದಾರರ ಸಹೋದರಿ ವಿಶಾಲಾಕ್ಷಿ ರವರು ಬಸ್ಗಾಗಿ ಕಾಯುತ್ತಾ ನಿಂತುಕೊಂಡಿರುವ ಸಮಯ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಕಾರ್ ನಂಬ್ರ ಕೆಎ-19-ಎಮ್‌ಇ-6127 ನೇಯದರ ಚಾಲಕನು ತನ್ನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸಹೋದರಿ ವಿಶಾಲಾಕ್ಷಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ, ಬಲಕಾಲಿಗೆ, ಮೈಕೈಗೆ ಗಂಭೀರ್ ಸ್ವರೂಪದ ರಕ್ತಗಾಯ ಉಂಟಾಗಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ. ಕಾರ್ ನಂಬ್ರ ಕೆಎ-19-ಎಮ್‌ಇ-6127 ನೇಯದರ ಚಾಲಕನು ಕಾರ್ನ್ನು ನಿಲ್ಲಿಸದೇ ಹೋಗಿರುವುದಾಗಿದೆ.
21.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 09.02.2015 ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಫಿರ್ಯಾಧಿದಾರರಾದ ಶ್ರೀ ಸಚಿನ್ ಜಿ.ಕೆ. ರವರು ತನ್ನ ಅಣ್ಣನಾದ ಸುದರ್ಶನರ ಬಾಬ್ತು ಕೆಎ-19-ಇಡಿ-2785 ನಂಬ್ರದ ಬಜಾಜ ಪಲ್ಸರ್ ಮೋಟಾರ ಸೈಕಲನ್ನು ಮಂಗಳೂರು ನಗರದ ಮರೋಳಿ ಜಯನಗರ ಬಳಿ ಇರುವ ವಸಂತ ಎಂಬವರ ವರ್ಕಶಾಫ್ ಬಳಿ ನಿಲ್ಲಿಸಿ, ವಸಂತರವರಲ್ಲಿ ತನ್ನ ಅಣ್ಣ ಮೋಟಾರ ಸೈಕಲನ್ನು ಬಂದು ತೆಗೆದುಕೊಂಡು ಹೋಗುವುದಾಗಿ ಬೈಕಿನ ಕೀಯನ್ನು ಕೊಟ್ಟು ಕುಮಟಾಕೆ ಹೋಗಿದ್ದು ದಿನಾಂಕ 10.02.2015 ರ ಬೆಳಿಗ್ಗೆ ಬಂದು ಸದ್ರಿ ಮೋಟಾರ ಸೈಕಲ್ಲು ನಿಲ್ಲಿಸಿದ ಕಡೆ ಇಲ್ಲದೇ ಇದ್ದು, ಹುಡುಕಾಡಿದಲ್ಲಿ ಈತನಕ ಪತ್ತೆಯಾಗದೇ ಇದ್ದು ಸದ್ರಿ ಮೋಟಾರ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಮೋಟಾರ ಸೈಕಲ ಬೆಲೆ ಸುಮಾರು 35,500/- ಆಗಿರುತ್ತದೆ.
22.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13.02.2015 ರಂದು ಪಿರ್ಯಾದಿದಾರರಾದ ಶ್ರೀ ಕೆ.ಆರ್. ಜಯಪ್ರಸಾದ್ ರವರು ಅವರ ಬಾಬ್ತು ಮೋಟಾರ ಸೈಕಲನಲ್ಲಿ ಗುರುಪುರ ಕೈಕಂಬದಿಂದ ಮಂಗಳೂರಿಗೆ ಬರುತ್ತಾ ಬೆಳಿಗ್ಗೆ ಸುಮಾರು 08.10 ಗಂಟೆಗೆ ಬೈತುರ್ಲಿ ಜಂಕ್ಷನ ಬಳಿ ತಲುಪಿದಾಗ ನೀರುಮಾರ್ಗ ಕಡೆಯಿಂದ ಕೆಎ-19-ಎಸಿ-4122 ನೇ ನಂಬ್ರದ ಸಿಟಿ ಬಸ್ಸ್ ನಿಲ್ಲಿಸಿದ್ದು ಪ್ರಯಾನಿಕನೊಬ್ಬನು ಮುಂದಿನ ಬಾಗಿಲಿನಿಂದ ಇಳಿಯುತ್ತಿದ್ದಂತೆ ಸದ್ರಿ ಬಸ್ಸಿನ ನಿರ್ವಾಕನು ಆತುರ ಆತುರವಾಗಿ ನಿರ್ಲಕ್ಷ್ಯತನದಿಂದ ರೈಟ್ ಎಂದು ಹೇಳಿದಾಗ ಸದ್ರಿ ಬಸ್ಸಿನ್ ಚಾಲಕ ನಿರ್ಲಕ್ಷ್ಯತನದಿಂದ ಬಸ್ಸನ್ನು ಒಮ್ಮೇಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ಪ್ರಯಾಣಿಕ ಕಾಲು ಜಾರಿ ಕೆಳಗೆ ಬಿದ್ದಿದ್ದು ಆತನ ಕಾಲ ಮೇಲೆ ಬಸ್ಸಿನ್ ಎಡ ಬದಿಯ ಹಿಂಬದಿಯ ಚಕ್ರ ಹಾದುಹೋಗಿ ಕಾಲಿಗೆ ಹಾಗೂ ಮರ್ಮಾಂಗಕ್ಕೆ ಗಂಬೀರ ಗಾಯವಾಗಿದ್ದಾತವನನ್ನು ಚಿಕಿತ್ಸೆ ಬಗ್ಗೆ ರಿಕ್ಷಾವೊಂದರಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ಮದ್ಯಾಹ್ನ 1.30 ಗಂಟೆಗೆ ಗಾಯಾಳು ಉದಯ ಎಂಬವರು ಮೃತಪಟ್ಟಿರುತ್ತಾರೆ.
23.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಪಿ. ಕುಸುಮಾಧರ ರವರ ಹೆಂಡತಿ ದಿನಾಂಕ 12.02.2015 ರಂದು ಬೆಳಿಗ್ಗೆ 7.15 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ತನ್ನ ಬ್ಯಾಗ್, ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುವುದಾಗಿಯೂ ಪಿರ್ಯಾದಿದಾರರು ಈ ತನಕ ಪ್ರಮೀಳಾರವರ ತಾಯಿ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದಲ್ಲಿ ಅಲ್ಲಿಗೂ ಹೋಗದೇ ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ ಎಂಬಿತ್ಯಾದಿ. ಚಹರೆ ಗುರುತು-- ಪ್ರಾಯ : 29 ವರ್ಷ, ಎತ್ತರ : ಸುಮಾರು 5.6 ಅಡಿ, ಮೈ ಬಣ್ಣ : ಬಿಳಿ, ಭಾಷೆ: ಕನ್ನಡ , ತುಳು ಮಾತನಾಡುತ್ತಾಳೆ. ಧರಿಸಿದ ಬಟ್ಟೆ: ಕೆಂಪು ಕಲರಿನ ಪುಶಫ ಪ್ಯಾಂಟ್ ಹಾಗೂ ಹಳದಿ ಕೆಂಪು ಮಿಶ್ರಿತ ಹೂಗಳಿರುವ ಟಾಪ, ಮುಖ: ಅಗಲವಿದ್ದು ಮುಖದಲ್ಲಿ ಮೊಡವೆ ಇರುತ್ತದೆ.
24.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12.02.2015 ರಂದು ಬೆಳಿಗ್ಗೆ 09.15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪದ್ಮನಾಭ ಟಿ. ರವರು ಬಜಾಲ್ ಪೆರ್ಲ ರೈಲ್ವೆ ಗೇಟಿನ ಬಳಿ ಬಸ್ಸಿಗಾಗಿ ಕಾಯುತ್ತಿರುವ ಸಮಯ ವೀರನಗರ ಕಡೆಯಿಂದ ಕೆಎ-19 ಇಜಿ-0850 ನಂಬ್ರದ ಮೋಟಾರ್ ಸೈಕಲ್‌ನ್ನು ಅದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಿಂತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರಿಗೆ ಎಡ ಕೈ ಮೊಣಗಂಟಿನ ಬಳಿ ತೆರಚಿದ ಗಾಯ ಸೊಂಟಕ್ಕೆ ಗುದ್ದಿದ ನೋವು ತೊಡೆ ಹಿಂಭಾಗ ತೆರಚಿದ ಗಾಯ ಉಂಟಾಗಿದ್ದು ಫಿರ್ಯಾದಿದಾರರು ವೆನ್ಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು ವೈದ್ಯರು ಅವರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು, ನಂತರ ಫಿರ್ಯಾದಿದಾರರು ಐಲ್ಯಾಂಡ್ ಆಸ್ಪತ್ರೆಗೆ ಬಂದು ಚಿಕಿತ್ಸೆಯನ್ನು ಪಡೆದಿದ್ದು ಅಲ್ಲಿ ಕೂಡ ವೈದ್ಯರು ಅವರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು ಫಿರ್ಯಾದಿದಾರರು ಮನೆಯಲ್ಲಿ ವಿಶ್ರಾಂತಿಯಲ್ಲಿ ಇರುತ್ತಾ ದಿನಾಂಕ: 14.02.2015 ರಂದು ನೋವು ಉಲ್ಬಣಗೊಂಡ ಕಾರಣ ಚಿಕಿತ್ಸೆ ಬಗ್ಗೆ ಸಿಟಿ ಆಸ್ಪತ್ರೆ ಗೆ ಬಂದಿದ್ದು ಅವರನ್ನು ಪರಿಕ್ಷಿಸಿದ ವೈದ್ಯರು ಅವರಿಗೆ ಒಳರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ.
No comments:
Post a Comment