ದೈನಂದಿನ ಅಪರಾದ ವರದಿ.
ದಿನಾಂಕ 23.02.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-02-2015 ರಂದು ಪಿರ್ಯಾದಿದಾರರಾದ ಶ್ರೀ ನೌಫಲ್ ರವರು ಮೋಟಾರು ಸೈಕಲ್ ನಂಬ್ರ ಕೆಎ 19 ಇಎಲ್ 6565 ನೇದರಲ್ಲಿ ಕಾನ ಕಡೆಯಿಂದ ಸುರತ್ಕಲ್ ಕಡೆಗೆ ಬರುತ್ತಿರುವ ಸಮಯ ಕಾನ ದೀಪಕ್ ಬಾರ್ ಬಳಿ 19-00 ಗಂಟೆಗೆ ಪಿರ್ಯಾದಿದಾರರ ಪರಿಚಯದ ಶೇಖರ್, ಪಪ್ಪು, ಬಬುಲ್ ರವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ "ಈ ಬಾರಿ ಸ್ಪೀಡ್ ಪೋಪ" ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದದಿಂದ ಬೈದು ಶೇಖರನು ಆತನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಪಿರ್ಯಾದಿದಾರರು ಬೈಕ್ ಸಮೇತ ಕೆಳಗೆ ಬಿದ್ದಿದ್ದು ಪುನಃ ಆರೋಪಿಗಳು ಹೊಡೆಯಲು ಬಂದಾಗ ಪಿರ್ಯಾದಿದಾರರು ಅವರೊಂದಿಗೆ ಉರುಡಾಟ ಮಾಡಿದ್ದು ಆ ಸಮಯ ಅಲ್ಲಿ ಜನ ಸೇರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದು ಹಲ್ಲೆಯಿಂದಾಗಿ ಪಿರ್ಯಾದಿದಾರರ ಬಲಭಾಗದ ತಲೆಗೆ ರಕ್ತದ ಗಾಯವಾಗಿರುತ್ತದೆ.
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ರಿಯಾಜ್ ರವರು ಸುರತ್ಕಲ್ ನ ಗೊಂವಿಂದದಾಸ ಕಾಲೇಜಿನಲ್ಲಿ BCA ವ್ಯಾಸಂಗ ಮಾಡಿಕೊಂಡಿದ್ದು ಪಿರ್ಯಾದಿದಾರರ ಕ್ಲಾಸಿನ ಮಹಮ್ಮದ್ ಸ್ವಾಲಿ ಪೋಟೊ ವ್ಯಾಟ್ಸಪ್ ನಲ್ಲಿ ಹರಿದಾಡಿದ್ದು ಅದರಲ್ಲಿ ಪಿರ್ಯಾದಿದಾರ ಪೋಟೊ ಬದಿಯಲ್ಲಿ ಇದ್ದುದರಿಂದ ದಿನಾಂಕ 22-02-2015 ರಂದು ಪಿರ್ಯಾದಿದಾರರ ಕ್ಲಾಸಿನ ರಿತೇಶ್ ಎಂಬವರು ಪೋನ್ ಮಾಡಿ ವ್ಯಾಟ್ಸಪ್ ವಿಚಾರವನ್ನು ಮಾತನಾಡಿ ಸರಿ ಮಾಡುವ ಎಂದು ಬಾಳ ಕಡೆಗೆ ಬರುವಂತೆ ತಿಳಿಸಿದ್ದು, ಪಿರ್ಯಾದಿದಾರರು ಅಲ್ಲಿಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದರಿಂದ ರಿತೇಶನು ಮನೆಗೆ ಬರುತ್ತೇನೆ ಎಂದು ಹೇಳಿ ಬೆಳಿಗ್ಗೆ 11-00 ಗಂಟೆಗೆ ಇಡ್ಯಾ ಗ್ರಾಮದ ಕಾನ ಸಾಲಿಯಾನ್ ಗ್ಯಾಸ್ ಬಳಿಯಿರುವ ಪಿರ್ಯಾದಿದಾರರ ಮನೆಗೆ ರಿತೇಶ್ ಮತ್ತು ವಿನೀತ್ ಎಂಬವರು ಬೈಕಿನಲ್ಲಿ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರನ್ನು ಮಾತನಾಡಿಸುತ್ತಾ ರಸ್ತೆಗೆ ಕರೆದುಕೊಂಡು ಬಂದಿದ್ದು ಆಗ ರಸ್ತೆಯಲ್ಲಿದ್ದ ಬಿಳಿ ಬಣ್ಣದ ಮಾರುತಿ 800 ಕಾರಿನಲ್ಲಿದ್ದ 5 ಜನರು ಪಿರ್ಯಾದಾರರನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದು ಕಾರಿನ ಹಿಂದೆ ರಿತೇಶ್ ಮತ್ತು ವಿನೀತ್ ರವರು ಬೈಕಿನಲ್ಲಿ ಬರುತ್ತಿದ್ದು ನಂತರ ಗಣೇಶಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಪಿಯಾದಿದಾರರನ್ನು ಕಾರಿನಿಂದ ಕೆಳಗೆ ಇಳಿಸಿ ಮಹಮ್ಮದ್ ಸ್ವಾಲಿ ಎಲ್ಲಿ ಎಂದು ಹೇಳುತ್ತಾ ರಿತೇಶ್, ವಿನೀತ್ ಮತ್ತು ಇತರ 15 ಜನರು ದ್ವೇಷದಿಂದ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಮನಬಂದಂತೆ ತಲೆಗೆ, ಕಾಲಿಗೆ, ಕೈಗಳಿಗೆ ಹೊಡೆದಿದ್ದು ಅಲ್ಲದೇ ಎದೆಗೆ ಬೂಟಿನಿಂದ ತುಳಿದು, ಪೋಟೊ ತೆಗೆದು, ಕುತ್ತಿಗೆಯ ಬಳಿ ಚೂರಿ ಹಿಡಿದು ಯಾರಿಗಾದರು ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ನಂತರ ಕಣ್ಣಿಗೆ ಬಟ್ಟೆ ಕಟ್ಟಿ ಪಿರ್ಯಾದಿದಾರರನ್ನು ಕಾರಿನಲ್ಲಿ ಕರೆದುಕೊಂಡು ಕಿನ್ನಿಗೋಳಿ ಕಡೆಗಳಲ್ಲಿ ಸುತ್ತಾಡಿಸಿದ್ದು ಬಾಯಾರಿಕೆಯಿಂದ ನೀರು ಕೇಳಿದಾಗ ಬಲವಂತವಾಗಿ ಶರಾಬು ಕುಡಿಸಿ ಮದ್ಯಾಹ್ನ 3-00 ಗಂಟೆಗೆ ಮುಕ್ಕ ಪೆಟ್ರೋಲ್ ಪಂಪ್ ನ ಹತ್ತಿರ ಇಳಿಸಿ ಹೋಗಿದ್ದು, ಹಲ್ಲೆಯಿಂದಾಗಿ ಪಿರ್ಯಾದಿದಾರರ ತಲೆಗೆ ರಕ್ತಗಾಯ, ಎರುಡು ಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯ, ತೊಡೆಗೆ ಗಾಯ, ಹೊಟ್ಟೆಗೆ, ಎದೆಗೆ, ಎರಡು ಕೈಗಳಿಗೆ, ಮುಖಕ್ಕೆ, ತುಟಿಗೆ ಗಾಯವಾಗಿರುತ್ತದೆ. ಪಿರ್ಯಾದಿದಾರರು ಮಂಗಳೂರಿನ ಹೈ ಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-02-2015 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ತಶ್ಲೀಲ್ ರವರು ಸ್ನೇಹಿತರೊಂದಿಗೆ ಕಾಟಿಪಳ್ಳ ಗ್ರಾಮದ ಕೃಷ್ಣಾಪುರ ಜೂನಿಯರ್ ಕಾಲೇಜ್ ಮೈದಾನದಲ್ಲಿ ಕ್ರಿಕೆಟ್ ಆಟ ಆಡುತ್ತಿರುವ ಸಮಯ ಸಂಜೆ 5-30 ಗಂಟೆಗೆ ಪಿರ್ಯಾದಿದಾರರು ಬ್ಯಾಟಿಂಗ್ ಮಾಡುತ್ತಿದ್ದು ಬೌಲಿಂಗ್ ಮಾಡುತ್ತಿದ್ದ ನೌಷದ್ ಎಸೆದ ಬಾಲು ವೈಡ್ ಎಂದು ಪಿರ್ಯಾದಿದಾರರು ಹೇಳಿದ್ದು ನೌಷದ್ ವೈಡ್ ಅಲ್ಲ ಎಂಬುದಾಗಿ ಹೇಳಿದ್ದು ಇದೇ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು ನಂತರ ನೌಷದ್ ನು ಆತನ ಅಣ್ಣ ಪಾರುಕ್ ನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದು ಸ್ವಲ್ಪ ಸಮಯದ ನಂತರ ಪಾರೂಕ್ ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನೌಷದ್ ನೊಂದಿಗೆ ಯಾಕೆ ಗಲಾಟೆ ಮಾಡಿದ್ದು ಎಂದು ಹೇಳಿ ಏಕಾಎಕಿ ಕೈಯಿಂದ ಎದೆಗೆ ಗುದ್ದಿ, ಕಲ್ಲನಿಂದ ತಲೆಗೆ ಹೊಡೆದಿದ್ದು, ನೌಷದನು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಕಾಲಿನಿಂದ ತುಳಿದಿರುತ್ತಾರೆ. ಇದರಿಂದ ಪಿರ್ಯಾದಿದಾರರ ತಲೆಗೆ ರಕ್ತ ಬರುವ ಗಾಯವಾಗಿದ್ದು ಅವರು ಮನೆಗೆ ತೆರಳಿ ತಂದೆಯವರಿಗೆ ವಿಷಯ ತಿಳಿಸಿ ತಂದೆಯವರ ಜೊತೆ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕೆಮ್ರಾಲ್ ಗ್ರಾಮದ ಹೊಸಕಾಡು ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ವಿಶ್ವನಾಥ್ .ಪಿ.ಶೆಟ್ಟಿಗಾರ್ ತನ್ನ ವಾಸದ ಮನೆಯಲ್ಲಿ ತನ್ನ ಕುಟುಂಬದೊಂದಿಗೆ ದಿನಾಂಕ:20/21-02-2015ರ ರಾತ್ರಿ ಮಲಗಿದ್ದ ಸಮಯದಲ್ಲಿ ಯಾರೋ ಕಳ್ಳರು ಕಿಟಕಿಯ ಮೂಲಕ ಯಾವುದೋ ಸೊತ್ತಿನ ಸಹಾಯದಿಂದ ಚಿಲಕವನ್ನು ಜಾರಿಸಿ ಮನೆಯ ಒಳಗಡೆ ಪ್ರವೇಶಿಸಿ 1). ಸುಮಾರು 7 1/2 ಪವನ್ ತೂಕದ ಕರಿಮಣಿ ಸರ -1, 2). ಸು 4 ½ ಪವನ್ ತೂಕದ ಮಲ್ಲಿಗೆ ಹೂವಿನ ಡಿಸೈನ್ ಇರುವ ಸರ – 1, 3) ಸುಮಾರು 4 ಪವನ್ ತೂಕದ 5 ಬಳೆಗಳು, 4). ಮೂರು ಜೊತೆ ಕಿವಿಯ ಆಭರಣ ಅಂದಾಜು ಸುಮಾರು 1 ½ ಪವನ್, 5). ½ ಪವನ್ ತೂಕದ ಬಂಗಾರದ ಉಂಗುರ -1, 6).ಬ್ರಾಸ್ ಲೈಟ್ -2 ಅಂದಾಜು ತೂಕ 1 ½ ಪವನ್, ಒಟ್ಟು ಮೌಲ್ಯ ಸುಮಾರು 3,00,000/-ರೂ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.02.2015 ರಂದು 15-15 ಗಂಟೆಗೆ ತಾಳಿಪಾಡಿ ಗ್ರಾಮದ ತಾಳಿಪಾಡಿ ಉಚಿತ ದಂತ ಚಿಕಿತ್ಸಾ ಚಾರಿಟೇಬಲ್ ಟ್ರಸ್ಟ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಶೇಖರ್, ಶ್ರೀನಿವಾಸ್ ಪೂಜಾರಿ, ರಾಮ ಪೂಜಾರಿ, ವಿಲ್ಫ್ರೇಡ್, ಅಶೋಕ, ವಾಸು ಪೂಜಾರಿ ಎಂಬ ಆರೋಪಿಗಳು ಅಂದರ್–ಬಾಹರ್ ಎಂಬ ಜೂಜಾಟ ಆಡುತ್ತಿದ್ದವರನ್ನು, ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರು ಸಿಬ್ಬಂದಿಗಳೊಂದಿಗೆ ಧಾಳಿ ಮಾಡಿ, ಆರೋಪಿತರು ಇಸ್ಪೀಟು ಜೂಜಾಟಕ್ಕೆ ಬಳಸಿದ್ದ ನಗದು ಹಣ 2600/- ರೂಪಾಯಿ, ಇಸ್ಪೀಟು ಎಲೆಗಳು-52, ಮತ್ತು ನೆಲಕ್ಕೆ ಹಾಸಲು ಉಪಯೋಗಿಸಿದ ಹಳೆಯ ನೈಲಾನ್ ಗೋಣಿ ಚೀಲ ಇವುಗಳನ್ನು ಸ್ವಾಧೀನಪಡಿಸಿ ಆರೋಪಿತರುಗಳನ್ನು ದಸ್ತಗಿರಿ ಮಾಡಿ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾಗಿದೆ.
6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.02.2015 ರಂದು ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಮುಸ್ತಾಫಾ ತಯ್ಯಬ್ ರವರು ತನ್ನ ತಮ್ಮ ಮೊಹಮ್ಮದ್ ತಮೀಮ್ ಎಂಬವರೊಂದಿಗೆ ತಮ್ಮ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19ಇಎಂ-0947 ನೇಯದರಲ್ಲಿ ಪೊಯ್ಯತ್ತಬೈಲ್ ಉರುಸ್ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ತಮ್ಮ ಮನೆಗೆ ಹೋಗುತ್ತಿರುವಾಗ ರಾತ್ರಿ ಸುಮಾರು 10:30 ಗಂಟೆಗೆ ಬಂಟ್ವಾಳ ತಾಲೂಕು, ನರಿಂಗಾನ ಗ್ರಾಮದ ಮೊಂಟೆಪದವು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ನಾಟೆಕಲ್ ಕಡೆಯಿಂದ ಜೀಪ್ ನಂಬ್ರ ಎಂ.ಹೆಚ್-04-8551 ನೇಯದನ್ನು ಅದರ ಚಾಲಕ ಶಮೀರ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲ ಭಾಗಕ್ಕೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮತ್ತು ತಮೀಮ್‌ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರಿಗೆ ಗುದ್ದಿದ ನೋವು ಹಾಗೂ ಮಹಮ್ಮದ್ ತಮೀಮ್‌ರವರಿಗೆ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳು ಮಹಮ್ಮದ್ ತಮೀಮ್‌ರವರನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಯೆನಪೋಯಾ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎಸ್.ಸಿ.ಎಸ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.
7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.02.2015 ರಂದು ಸಂಜೆ ಸುಮಾರು 4.45 ಗಂಟೆಗೆ ಫಿರ್ಯಾದುದಾರರಾದ ಶ್ರೀ ಪಾಲಾಕ್ಷ ರವರು ಮಾರ್ಕಟ್ ನಿಂದ ತಾನು ಕೆಲಸ ಮಾಡುವ ಮಿಲಾಗ್ರೀಸ್ನ ಬೇಕರಿ ಕಡೆಗೆ ಹೋಗುವರೇ, ವೆನ್ಲಾಕ್ ಆಸ್ಪತ್ರೆಯ ಗೇಟ್ ಬಳಿ ತಲುಪಿದಾಗ, ಪಳ್ನಿರ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಮೊಟರ್ ಸೈಕಲ್ ನಂಬ್ರ ಕೆ ಎ19-ಇ ಎಂ-5732 ನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ,ಬಲಕಾಲಿಗೆ ಗುದ್ದಿದ ನೋವು,ಉಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕೆತ್ಸೆ ಪಡೆದು,ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ.ಮೋಟಾರ್ ಸೈಕಲ್ ಸವಾರ ಅಪಘಾತ ಸ್ಥಳದಿಂದ ಮೊಟಾರ್ ಸೈಕಲ್ ಸಮೇತ ಪರಾರಿಯಾಗಿರುತ್ತಾನೆ.
8.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-02-2015 ರಂದು ಬೆಳಿಗ್ಗೆ 08-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರೋಹಿತ್ ಕುಮಾರ ಎಂಬವರು ತನ್ನ ಬಾಬ್ತು ಕಾರು ನಂಬ್ರ ಕೆ ಎ 20 ಎನ್ 8329 ನೇಯದರಲ್ಲಿ ತನ್ನ ಮಾವ ಶೇಖರ್ ಸುವರ್ಣ ರವರೊಂದಿಗೆ ಮೂಲ್ಕಿಯಿಂದ ಬಜ್ಪೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ತಾಳಿಪಾಡಿ ಗ್ರಾಮದ ಎಸ್-ಕೋಡಿ ಜಂಕ್ಷನ್ ನಿಂದ ಸ್ವಲ್ಪ ಮುಂದೆ ಕಿನ್ನಿಗೋಳಿ-ಮೂಲ್ಕಿ ರಾಜ್ಯರಸ್ತೆಯಲ್ಲಿ ಎದುರಿನಿಂದ ಮೂಲ್ಕಿ ಕಡೆಗೆ ಬರುತ್ತಿರುವ ಯಾವುದೋ ನಂಬ್ರ ತಿಳಿಯಲಾಗದ ಲಾರಿಯೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕೆ ಎ 20 ಈ ಬಿ 3880 ನೇ ದ್ವಿಚಕ್ರ ವಾಹನ ಸವಾರನಾದ ಮೊಹಮ್ಮದ್ ಅದ್ನಾನ್ ಎಂಬವರು ತೀರಾ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಎದುರಿನಲ್ಲಿದ್ದ ಫಿರ್ಯಾದಿದಾರರ ಕಾರಿಗೆ ರಸ್ತೆಯ ತೀರಾ ಬಲಬದಿಗೆ ಬಂದು ತನ್ನ ಬೈಕಿನ ನಿಯಂತ್ರಣ ತಪ್ಪಿ ಡಿಕ್ಕಿಹೊಡೆದು ಕಾರಿನ ಎದುರಿನಲ್ಲಿ ಜಖಂಗೊಂಡು ಗಾಜು ಮತ್ತು ಕಾರಿನ ಬಾಡಿಯ ಟಾಪ್ ನ ಮೇಲಿಂದ ಹಾರಿ ರಸ್ತೆಗೆ ಬಿದ್ದ ಪರಿಣಾಮ ತನ್ನ ಬಲಗಾಲು ಮತ್ತು ಮೈಕೈಗೆ ಗಂಭೀರ ರೀತಿಯ ಗಾಯಗೊಂಡಿರುತ್ತಾರೆ. ಈ ಅಪಘಾತದಿಂದ ಬೈಕ್ ಮತ್ತು ಕಾರು ಜಖಂಗೊಂಡಿರುತ್ತದೆ. ಆಪಾದಿತ ಬೈಕ್ ಸವಾರನಾದ ಗಾಯಾಳು ಮೊಹಮ್ಮದ್ ಅದ್ನಾನ್ ರವರು ಚಿಕಿತ್ಸೆಗಾಗಿ ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-02-2015 ರಂದು ಮದ್ಯಾಹ್ನ 02-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗೋವಿಂದ ಎಂಬವರು ಚೆನ್ನಕೃಷ್ಣನ್ ಎಂಬವರೊಂದಿಗೆ ಮೂಲ್ಕಿ, ಕೋಲ್ನಾಡು, ಕಾರ್ನಾಡು ಎಲ್ಲಾ ಕಡೆ ಕೋಳಿ ಮಾರಾಟ ಮಾಡಿ ವಾಪಾಸು ಮನೆಯ ಕಡೆಗೆ ಹೊರಟು ರಾ.ಹೆ 66 ರ ಕೋಲ್ನಾಡು ಎಂಬಲ್ಲಿ ರಸ್ತೆ ದಾಟುಲು ಡಿವೈಡರ್ ಬಳಿ ನಿಂತಿದ್ದಾಗ ಮೂಲ್ಕಿ ಕಡೆಯಿಂದ ಸುರತ್ಕಲ್ ಕಡೆಗೆ ಕೆ ಎ 19 ಎಮ್ 8618 ನೇ ತನ್ನ ಬಾಬ್ತು ಕಾರನ್ನು ಚಾಲಕ ಕೆ ಅಬ್ದುಲ್ಲಾ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಜೊತೆಯಿದ್ದ ಚೆನ್ನಕೃಷ್ಣನ್ ಎಂಬವರಿಗೆ ಡಿಕ್ಕಿಹೊಡೆದ ಪರಿಣಾಮ ಚೆನ್ನಕೃಷ್ಣನ್ ರವರು ರಸ್ತೆ ಬದಿಯ ಡಿವೈಡರಗೆ ಎಸೆಯಲ್ಪಟ್ಟು ತಲೆಗೆ, ಮುಖಕ್ಕೆ, ಮೈಕೈಗೆ, ಮತ್ತು ಎರಡೂ ಕಾಲುಗಳಿಗೆ ಗಂಭೀರ ರೀತಿಯಲ್ಲಿ ಗಾಯವಾಗಿ, ಚಿಕಿತ್ಸೆಗಾಗಿ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಗಾಯಾಳು ಚೆನ್ನಕೃಷ್ಣನ್ ರವರು ಮೃತಪಟ್ಟಿರುವುದಾಗಿದೆ.
10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-02-2015 ರಂದು ರಾತ್ರಿ 22-30 ಗಂಟೆಗೆ ಮಂಗಳೂರು ತಾಲೂಕು ಬಡಗ ಎಕ್ಕಾರು ಗ್ರಾಮದ ದೇವರ ಗುಡ್ಡೆ ಎಂಬಲ್ಲಿರುವ ಮನೆ ನಂಬ್ರ 4-120 ಕ್ಕೆ ಆರೋಪಿತರುಗಳಾದ ಮೀನಾಕ್ಷಿ, ಸದಾಶಿವ, ಚಂದ್ರಾವತಿ, ಬ್ರಹಸ್ಪತಿ ಮತ್ತು ಹರಿಣಾಕ್ಷಿ ಎಂಬುವರು ಹಲ್ಲೆ ಮಾಡುವ ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶಮಾಡಿ ಆರೋಪಿ ಗಳೆಲ್ಲರೂ ಪಿರ್ಯಾಧಿದಾರರಾದ ಶ್ರೀ ದೇವರಾಜ್ ಮತ್ತು ಅವರ ಹೆಂಡ್ತಿ ಲಲಿತ ಎಂಬವರನ್ನು ಮನೆಯಿಂದ ಹೊರಗೆಳೆದು ತಂದು ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದು, ಮನೆಯ ಬಾಗಿಲನ್ನು ಪಿಕ್ಕಾಸಿನಿಂದ ಮುರಿದು ಪಿರ್ಯಾಧಿದಾರರಿಗೆ ನಷ್ಟವನ್ನುಂಟು ಮಾಡಿ ಶಾಂತಿಯುತವಾಗಿ ನಿಮ್ಮನ್ನು ಜೀವನ ಮಾಡಲು ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿದೆ.
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-02-2015 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ 19-02-2015 ಬೆಳಿಗ್ಗೆ 11-00 ಗಂಟೆ ಮಧ್ಯೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪು ಜುಮ್ಮಾ ಮಸೀದಿಯ ಎದುರು ಬದಿಯ ಇರುವ ಖದೀಜ್ ಮಹಲ್ ಎಂಬ ಅಪಾರ್ಟಮೆಂಟಿನ ಕೆಳಭಾಗದಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರಾದ ಶ್ರೀ ಉಮ್ಮರ್ ಫಾರೂಕ್ ಮಿಸ್ಬಾಹಿ ರವರ ಬಾಬ್ತು KA-19-EE-2188 ನೇ ನಂಬ್ರದ ಮೋಟಾರ್ ಸೈಕಲ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್ ಸೈಕಲ್‌ನ ಅಂದಾಜು ಮೌಲ್ಯ ರೂ 45,000/- ರೂಪಾಯಿ ಆಗಬಹುದು. ಮೋಟಾರ್ ಸೈಕಲ್‌ನ ಚಾಸಿಸ್ ನಂ. MD2DHDHZZUCJ72441 ಇಂಜಿನ್ ನಂ. DHGBUJ43815, Model: 2012 ಆಗಿರುತ್ತದೆ. ಕಳವಾದ ಮೋಟಾರ್ ಸೈಕಲ್ ಬಜಾಜ್ ಕಂಪೆನಿಯ ಪಲ್ಸರ್ 150 ಸಿಸಿ ಕಪ್ಪು ಬಣ್ಣದಾಗಿರುತ್ತದೆ.
12.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಶಭಾನ ರಿಯಾಝ್ ಎಂಬವರು ಕೆಎ-19-ಎಂ.ಸಿ. -5302 ನೇ ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ಉಪಯೋಗಿಸಿಕೊಂಡಿದ್ದು, ಸದ್ರಿ ಕಾರಿಗೆ ಬ್ಯಾಂಕ್ ಲೋನ್ ಇರುತ್ತದೆ. ಕಾರನ್ನು 2013 ನೇ ಇಸವಿಯ ಜೂನ್ ತಿಂಗಳಿನಲ್ಲಿ ಸೇಲ್ ಮಾಡಿಕೊಡುವಂತೆ ಮಂಗಳೂರು ಫಳ್ನೀರಿನ ನಿವಾಸಿ ಅಶ್ರಫ್ ಎಂಬವರಿಗೆ ಮಂಗಳೂರಿನ ಮಿಲಾಗ್ರೀಸ್ ಕಾಲೇಜಿನ ಬಳಿ ಕಾರನ್ನು ನೀಡಿದ್ದು, ಅಶ್ರಫ್ ರವರು, ಕಾರಿನ ಬಾಕಿ ಲೋನನ್ನು ಕಟ್ಟಿ ಸೇಲ್ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ, ಆದರೆ ಅಶ್ರಫ್ ರವರು ತಾನು ಹೇಳಿದಂತೆ ಈ ವರೆಗೆ ಕಾರನ್ನು ಮಾರಿದ ಹಣವನ್ನಾಗಲೀ ಅಥವಾ ಕಾರನ್ನಾಗಲೀ ನೀಡದೇ ಅಲ್ಲದೇ ಕಾರಿನ ಲೋನನ್ನು ಕೂಡಾ ಕಟ್ಟದೇ ವಂಚಿಸಿರುತ್ತಾರೆ.
13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.02.2015 ರಂದು ಪಿರ್ಯಾದುದಾರರಾದ ಪ್ರತೀಮಾ ರವರು KA-19-EM-8246ನೇ ನಂಬ್ರದ ಸ್ಕೂಟರಿನಲ್ಲಿ ಪೂಜಾ ಎಂಬರನ್ನು ಹಿಂಬದಿ ಸವಾರಳನ್ನಾಗಿ ಕಳ್ಳಿರಿಸಿಕೊಂಡು ಸದ್ರಿ ಸ್ಕೂಟರನ್ನು ಪಿರ್ಯಾದುದಾರರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರು ಕಡೆಗೆ ಸವಾರಿಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 08:45 ಗಂಟೆ ಸಮಯಕ್ಕೆ ಎಕ್ಕೂರು ಫಿಷರೀಸ್ ಕಾಲೇಜು ಬಳಿ ತಲುಪಿದಾಗ KL-54-D-7020ನೇ ನಂಬ್ರದ ಕಾರನ್ನು ಅದರ ಚಾಲಕ ಪ್ರಿಜೇಶ್ ಎಂಬವರು ತೊಕ್ಕೊಟ್ಟು ಕಡೆಯಿಂದ ಪಂಪ್ವೆಲ್ ಕಡೆಗೆ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿ ಸ್ಕೂಟರಿಗೆ ಢಿಕ್ಕಿ ಹಡೆದ ಪರಿಣಾಮ ಪಿರ್ಯಾದುದಾರರು ಮತ್ತು ಸಹಸವಾರಿಣಿ ಪೂಜಾ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲಕೈಗೆ ಮೂಳೆ ಮುರಿತದ ಗಾಯ ಮತ್ತು ಬಲಕಾಲಿನ ಮೊಣಗಂಟಿಗೆ ಗುದ್ದಿದ ರಕ್ತ ಗಾಯ ಹಾಗೂ ಸಹಸವಾರಿಣಿ ಪೂಜಾ ರವರ ಬಲ ಕೈ ಭುಜಕ್ಕೆ ಮತ್ತು ಬಲಕಾಳಿನ ಮೊಣಗಂಟಿಗೆ ಗುದ್ದಿದ ತರಚಿದ ಗಾಯಗೊಂಡಿರುವುದಾಗಿದೆ.
No comments:
Post a Comment