Thursday, February 5, 2015

MEETINGS :

ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿ ಮಾಲಿಕರ ಸಭೆ

 
           ದಿನಾಂಕ 03-02-2015 ರಂದು 18.00 ಗಂಟೆಗೆ ಮೂಡುಬಿದ್ರೆ ಪೊಲೀಸ್ ಠಾಣಾ ನಿರೀಕ್ಷಕರಾದ ಅನಂತ ಪದ್ಮನಾಭ ರವರ ಉಪಸ್ಥಿತಿಯಲ್ಲಿ ಮೂಡುಬಿದ್ರೆ ಪೇಟೆಯ ಪಡಿವಾಳ್ಸ್ ಸಭಾಂಗಣದಲ್ಲಿ ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿ ಮಾಲಿಕರ ಸಭೆ ನಡೆಸಲಾಯಿತು. ಸಭೆಯಲ್ಲಿ ಕಳ್ಳತನ ಹಾಗೂ ಇನ್ನಿತರ ಅಪರಾಧ ತಡೆ ಹಾಗು ಪತ್ತೆ ಮಾಡುವ ಸಲುವಾಗಿ ಪ್ರಮುಖವಾಗಿ  ಸಿಸಿಟಿವಿ ಅಳವಡಿಸುವ ಬಗ್ಗೆ ಹಾಗು ಅನುಮಾನಸ್ಪದ ವ್ಯಕ್ತಿಗಳು ಚಿನ್ನವನ್ನು ಮಾರಾಟ ಮಾಡಲು ಬಂದಲ್ಲಿ ಮಾಹಿತಿಯನ್ನು ತಕ್ಷಣ ಠಾಣೆಗೆ ನೀಡುವಂತೆ ತಿಳಿಸಲಾಗಿರುತ್ತದೆ ಈ ಸಭೆಯಲ್ಲಿ ಸುಮಾರು 18 ಜನ ಭಾಗವಹಿಸಿರುತ್ತಾರೆ.
 
 ಸಭೆಯ ಪೋಟೋ
 
 
 * * *
 

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸಭೆ
 
           ಉಳ್ಳಾಲ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಕೆರೆಬೈಲು ಎಂಬಲ್ಲಿ ಕ್ಷುಲ್ಲಕ ವಿಷಯದಲ್ಲಿ ಸ್ಥಳೀಯ ಎರಡು ಸಮುದಾಯದವರ ನಡುವೆ ಉಂಟಾದ ವಿವಾದದ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವರೇ ದಿನಾಂಕ:29-01-2015 ರಂದು ಸಂಜೆ 5-30 ಗಂಟೆಗೆ ಠಾಣೆಯಲ್ಲಿ ಕೆರೆಬೈಲು ಆಸುಪಾಸಿನ ಗ್ರಾಮಸ್ಥರನ್ನು ಕರೆಸಿ ಶಾಂತಿ ಸಭೆ ನಡೆಸಲಾಗಿರುತ್ತದೆ. ಸಭಿಕರ ಅಭಿಪ್ರಾಯಗಳನ್ನು ಆಲಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಸಭಿಕರಿಗೆ ಸೂಕ್ತ ತಿಳುವಳಿಕೆ ನೀಡಲಾಗಿದೆ. ಸಭಿಕರ ಅಭಿಪ್ರಾಯಗಳಿಗೆ ಸಂಬಂಧಪಟ್ಟಂತೆ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ನೊಂದವರು ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಲಾಗುವುದು, ಎಂಬುದಾಗಿ ಸಭಿಕರಿಗೆ ತಿಳಿಸಲಾಯಿತು.
 
ಸಭೆಯ ಫೋಟೊ
 
 
 
* * *
 
ಕಾವೂರು ಪೊಲೀಸು ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಸಭೆ
 
               ದಿನಾಂಕ 01-02-2015 ರಂದು ಮತ್ತು ದಿನಾಂಕ 02-02-2015 ರಂದು ಠಾಣಾ  ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಬಳಿ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಶ್ರೀ ರವಿ ಕುಮಾರ್, ಕಾವೂರು ಪ್ರಭಾರ ನಿರೀಕ್ಷಕರಾದ ಶ್ರೀ ಲೋಕೇಶ್. ಎ.ಸಿ ರವರ ಉಪ ಸ್ಥಿತಿಯಲ್ಲಿ  ಕಾವೂರು ಠಾಣೆ ಪಿ.ಎಸ್.ಐ. ಉಮೇಶ್ ಕುಮಾರ್ ಎಂ.ಎನ್. ರವರು ಶಾಂತಿ ಸಭೆಯನ್ನು ನಡೆಸಿರುತ್ತಾರೆ.
 
ಸಭೆಯ ಫೋಟೊ
 
 
 


 
 
* * *
 
ಮೂಡುಬಿದ್ರೆ  ಪೊಲೀಸು ಠಾಣಾ ವ್ಯಾಪ್ತಿಯಲ್ಲಿ ಸಭೆ
 
          ದಿನಾಂಕ 27-01-15 ರಂದು 17.00  ಗಂಟೆಗೆ ತೋಡಾರು ಆದರ್ಶ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ತೋಡಾರು ಉರೂಸ್ ಸಂಬಂದ ಹಾಗೂ ಪರಿಸರ ಹಾಗುಹೋಗುಗಳ ಬಗ್ಗೆ ಸಭೆಯನ್ನು ಮೂಡುಬಿದ್ರೆ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತ್ರತ್ವದಲ್ಲಿ ಸಭೆ ನಡೆಸಲಾಯಿತು ಹಾಗೂ ದಿನಾಂಕ 30-01-15 ರಂದು 17.00  ಗಂಟೆಗೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಭದ್ರತೆ ಬಗ್ಗೆ ಹಾಗೂ ಪರಿಸರ ಹಾಗುಹೋಗುಗಳ ಬಗ್ಗೆ ಸಭೆಯನ್ನು ಮೂಡುಬಿದ್ರೆ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತ್ರತ್ವದಲ್ಲಿ ಸಭೆ ನಡೆಸಲಾಯಿತು.
 
ಸಭೆಯ ಫೋಟೊ
 
 
 


 
 

No comments:

Post a Comment