ದೈನಂದಿನ ಅಪರಾದ ವರದಿ.
ದಿನಾಂಕ 28.02.2015 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
1
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
1
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
2
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
2
|
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಶಿವರಾಮ್ ಪೂಜಾರಿ ರವರ ತಮ್ಮನಾದ ತಿಮ್ಮಪ್ಪ ಕೊಟ್ಯಾನ್ ಪ್ರಾಯ 50 ವರ್ಷ ಎಂಬವರು ಟೈಲರ್ ವೃತ್ತಿ ಮಾಡಿಕೊಂಡಿದ್ದು, ತನ್ನ ಹೆಂಡತಿ ಮನೆಯಾದ ಅಳಕೆಯಲ್ಲಿ ಉಳಕೊಳ್ಳುತ್ತಿದ್ದವರು ಅಪರೂಪಕ್ಕೆ ಕುಡಿದಾಗ ಮನೆಗೆ ಹೋಗದೆ ಇರುವ ಅಭ್ಯಾಸ ಹೊಂದಿದ್ದು, ದಿನಾಂಕ 26-02-2015 ರಂದು ರಾತ್ರಿಯಿಂದ ದಿನಾಂಕ 27-02-2015 ರ ಬೆಳಿಗ್ಗೆ 6:00 ಗಂಟೆಯ ಮಧ್ಯೆವಧಿಯಲ್ಲಿ ಮಂಗಳೂರು ನಗರದ ಬಿಜೈಯಲ್ಲಿರುವ ರೈ ಎಸ್ಟೇಟ್ ಕಛೇರಿಯ ಕಟ್ಟಡದ ಎದುರು ಭಾಗದಲ್ಲಿ ಮಲಗಿದ್ದವರನ್ನು ಯಾರೋ ದುಷ್ಕರ್ಮಿಗಳು ಯಾವುದೋ ಆಯುಧದಿಂದ ತಲೆಯ ಹಿಂಬದಿಗೆ ಹೊಡೆದು ಕೊಲೆ ಮಾಡಿರುವುದಾಗಿದೆ.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-02-2015 ರಂದು ಪಿರ್ಯಾದಿದಾರರಾದ ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷರಾದ ಶ್ರೀ ರಫೀಕ್ ಕೆ.ಎಂ. ರವರು ಸಮವಸ್ತ್ರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ರಾತ್ರಿ ಸುಮಾರು 9.30 ಗಂಟೆಗೆ ನಂತೂರು ಬಳಿ ತಲಪಿದಾಗ ಅಲ್ಲಿ ನಾಲ್ಕು ರಸ್ತೆಗಳು ವಾಹನದಿಂದ ಸಂಧಣಿ ಉಂಟಾಗಿದ್ದು, ಸುಮಾರು 100 ರಿಂದ 150 ಜನರು ಅಕ್ರಮಕೂಟ ಸೇರಿ ರಸ್ತೆಯ ಮಧ್ಯದಲ್ಲಿ ಘೋಷಣೆಗಳನ್ನು ಕೂಗುತ್ತಾ ಕುಳಿತಿದ್ದನ್ನು ನೋಡಿ ಪಿರ್ಯಾದಿದಾರರು ಸದ್ರಿ ಸ್ಧಳಕ್ಕೆ ಹೋಗಿ ತೆರವುಗೊಳಿಸಲು ಹೋದಾಗ ಅವರುಗಳು ಸಂಜೆ ನಡೆದ ಅಪಘಾತಕ್ಕೆ ಸಂಬಂದಿಸಿದಂತೆ ಉತ್ತರ ನೀಡಲು ಜಿಲ್ಲಾಧಿಕಾರಿಗಳು, ಮಂತ್ರಿಗಳು ಸ್ಥಳಕ್ಕೆ ಬರಬೇಕು ಎಂದು ಬೊಬ್ಬೆ ಹಾಕುತ್ತಾ, ಯಾವುದೇ ಸಾರ್ವಜನಿಕ ವಾಹನಗಳನ್ನು ಮುಂದಕ್ಕೆ ಹೋಗದಂತೆ ಬಿಡದೇ ರಸ್ತೆ ತಡೆಯನ್ನು ಮಾಡಿದಾಗ ಅಲ್ಲಿದ್ದವರಿಗೆ "ಈ ರೀತಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆ ತಡೆ ಮಾಡುವುದು ಸರಿಯಲ್ಲ" ಎಂದು ಕಾನೂನು ತಿಳುವಳಿಕೆ ನೀಡಿದಾಗಿಯೂ ಕೂಡಾ ಅವರು ರಸ್ತೆ ತಡೆಯ್ನನು ಮುಂದುವರಿಸಿದರು. ಜನಸಂದಣಿಯು ಹೆಚ್ಚಾಗುತ್ತಾ ಸುಮಾರು 300- 400 ಸೇರಿದ್ದು ನಂತರ ಕೂಡಲೇ ಮೇಲಾಧಿಕಾರಿಯವರಿಗೆ ನಿಸ್ತಂತು ಮೂಲಕ ಮಾಹಿತಿ ನೀಡಿದ್ದು. ಸ್ವಲ್ಪ ಸಮಯದಲ್ಲಿ ಠಾಣಾ ಪೊಲೀಸ್ ನಿರೀಕ್ಷಕರು ಕೆ.ಎಸ್.ಆರ್.ಪಿ ಸಿಬ್ಬಂದಿಯ ವಾಹನದೊಂದಿಗೆ ಸದ್ರಿ ಸ್ಧಳಕ್ಕೆ ಬಂದಾಗ ಅಲ್ಲಿ ರಸ್ತೆ ತಡೆ ಮಾಡುತ್ತಿದ್ದ ಜನರು ಚೆಲ್ಲಪಿಲ್ಲಿಯಾಗಿ ಓಡಿದ್ದು ಅದರಲ್ಲಿ ಕೆಲವರು ಎದ್ದು ಬಿದ್ದು ಓಡಿ ಹೋಗಿರುತ್ತಾರೆ. ಸಾರ್ವಜನಿಕ ರಾಷ್ಠ್ರೀಯ ಹೆದ್ದಾರಿಗೆ ಏಕಾಏಕಿಯಾಗಿ ಸುಮಾರು 30 ನಿಮಿಷಗಳ ಕಾಲ ಆಕ್ರಮ ಕೂಟ ಸೇರಿಕೊಂಡು ರಸ್ತೆಯ್ನನು ತಡೆಯುಂಟುಮಾಡಿ ಸಾರ್ವಜನಿಕ ವಾಹನ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದವರ ವಿರುದ್ದ ಕಾನೂನು ಕ್ರಮಕ್ಕೆ ಪಿರ್ಯಾದಿ ನೀಡಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/02/2015 ರಂದು ಸಮಯ ಸುಮಾರು 22:30 ಗಂಟೆಗೆ ಮಂಗಳೂರು ನಗರದ ಪಿ ವಿ ಎಸ್ ಬಳಿಯ ಟೂರ್ ಮತ್ತು ಟ್ರಾವೆಲ್ಸ ಬಳಿ ಫಿರ್ಯಾದುದಾರರಾದ ಶ್ರೀ ದಿನೇಶ್ ರವರು ಮತ್ತು ಅವರ ಗೆಳೆಯ ಗಣೇಶ ಅವರು ರಸ್ತೆ ಬದಿಯಲ್ಲಿ ನಡೆದುಕೊಂಢು ಹೊಗುತ್ತಿರುವ ಸಮಯದಲ್ಲಿ ಬಂಟ್ಸ ಹಾಸ್ಟೆಲ್ ಕಡೆಯಿಂದ ಪಿ ವಿ ಎಸ್ ವೃತ್ತದ ಕಡೆಗೆ ಬೈಕ್ ನಂಬ್ರ KA 14 EF 0310 YAMAH R15 ನೇ ದನ್ನು ಅದರ ಸವಾರ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಗೆಳೆಯ ಗಣೇಶ ಅವರಿಗೆ ಡಿಕ್ಕಿ ಮಾಡಿದ ಪರಿಣಾಮ ಗಣೇಶನ ಬಲಕಾಲಿಗೆ ಮೂಳೆ ಮುರಿತದ ಗಾಯ, ಬಲಭುಜಕ್ಕೆ, ಮುಖದ ದವಡೆಗೆ ರಕ್ತ ಗಾಯ ಮತ್ತು ತಲೆಗೆ ಗುದ್ದಿದ ಗಾಯವಾಗಿದ್ದು ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-02-2015 ರಂದು 17:05 ಗಂಟೆಗೆ ಮಂಗಳೂರು ನಗರದ ನಂತೂರು ಜಂಕ್ಷನ್‌ನಲ್ಲಿ ಕೆಎ-20-ಬಿ-8992 ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕನು ರಾಷ್ಟ್ರೀಯ ಹೆದ್ದಾರಿ 66ನೇ ರಸ್ತೆಯಲ್ಲಿ ಕೆ.ಪಿ.ಟಿ. ಕಡೆಯಿಂದ ನಂತೂರು ಕಡೆಗೆ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಂತೂರು ಜಂಕ್ಷನ್‌ನಿಂದ ಸುಮಾರು 100 ಅಡಿ ದೂರದಲ್ಲಿರುವ ರಸ್ತೆಯ ಎಡಬದಿಯಲ್ಲಿರುವ ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಪಡಿಸಿ ಮುಂದಕ್ಕೆ ಬರುತ್ತಾ ಬಲಬದಿಯಲ್ಲಿ ಹೋಗುತ್ತಿದ್ದ ಕೆಎ-20-ಪಿ-3423 ನಂಬ್ರದ ಕ್ರೇನ್ ಗೆ ಡಿಕ್ಕಿ ಪಡಿಸಿ ಮುತ್ತು ಮುಂದಕ್ಕೆ ಬಂದು ಕೆಎ-19-ಎಂಇ-5826 ನಂಬ್ರದ ಸ್ಯಾಂಟ್ರೋ ಕಾರಿನ ಎಡಬದಿಗೆ ಡಿಕ್ಕಿಪಡಿಸಿ ಮುಂದಕ್ಕೆ ಬಂದು ಎದುರಿನಿಂದ ನಂತೂರು ಜಂಕ್ಷನ್ಗೆ ಕಡೆಗೆ ಬರುತ್ತಿದ್ದ ಕೆಎ-19-ಎಂಎ-2625 ನಂಬ್ರದ ಅಲ್ಟೋ ಕಾರಿಗೆ ಡಿಕ್ಕಿ ಪಡಿಸಿ ಕಾರನ್ನು ಮುಂದಕ್ಕೆ ತಳ್ಳಿಕೊಂಡು ಮುಂದಕ್ಕೆ ಬಂದ ಪರಿಣಾಮ ಕಾರು ಎದುರಿನಿಂದ ಹೋಗುತ್ತಿದ್ದ ಕೆಎಲ್-14-ಎಂ-2582 ನಂಬ್ರದ ಮೋಟಾರು ಸೈಕಲ್ಗೆ ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಸಹಸವಾರೆಯು ರಸ್ತೆಗೆ ಬಿದ್ದಿದ್ದು, ತಳ್ಳಿಕೊಂಡು ಬಂದಂತಾದ ಅಲ್ಟೋ ಕಾರು ನಜ್ಜು ಗುಜ್ಜಾಗಿದ್ದು, ಮೋಟಾರು ಸೈಕಲಿನ ಸವಾರ ಪ್ರೀತಮ್ ಎಂಬಾತನು ಬಲಕಾಲಿಗೆ ಮೂಳೆ ಮುರಿತದ ರಕ್ತಗಾಯ ಹಾಗೂ ಸೊಂಟದ ಬದಿಯಲ್ಲಿ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಸಹಸವಾರೆ ಶ್ವೇತ ಮರಿಯ ಡಿಸೋಜಾ ರವರು ಕೂಡಾ ಗಾಯಗೊಂಡಿದ್ದು, ಪ್ರೀತಮ್ ಮತ್ತು ಶ್ವೇತಾ ಮರಿಯಾ ಡಿಸೋಜಾರವರು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಹಾಗೂ ಅಲ್ಟೋಕಾರಿನಲ್ಲಿದ್ದ ಕೃಷ್ಣ ಮತ್ತು ಅವರ ಮಗಳು ನಿಖಿತರವರು ಗಂಭೀರ ಗಾಯಗೊಂಡು ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಅಲ್ಟೋ ಕಾರಿನಲ್ಲಿದ್ದ ನಿತೇಶ್ ಮತ್ತು ವೀಣಾ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮದ್ಯೆ ಮೃತಪಟ್ಟಿರುತ್ತಾರೆ.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ವಾಸುದೇವ ರವರು ವುಮೆನ್ಸ್ ಉಳ್ಳಾಲ ಟಿ.ಸಿ. ರೋಡ್ ಇಸ್ಲಾಮಿಕ್ ಕಾಲೇಜ್ ಎದುರುಗಡೆಯಲ್ಲಿ ಕಿರಣ್ ಎಂಬುವವರ ಬಾಬ್ತು ಟೈಲರ್ ಅಂಗಡಿಯನ್ನು ಬಾಡಿಗೆಗೆ ಪಡೆದುಕೊಂಡು ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ 27/02/2015 ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದು ರಾತ್ರಿ 10-00 ಗಂಟೆಗೆ ಊಟ ಮಾಡಿ ಮಲಗಿದ್ದು ನೆರೆಕೆರೆಯ ಪರಿಚಯದವರು ನಿಮ್ಮ ಅಂಗಡಿಗೆ ಯಾರೋ ಬೆಂಕಿ ಕೊಟ್ಟಿರುತ್ತಾರೆ ಎಂದು ತಿಳಿಸಿದಂತೆ ಪಿರ್ಯಾದಿದಾರರು ಮತ್ತು ನೆರೆಕೆರೆಯವರು ಕೂಡಲೇ ಹೋಗಿ ನೋಡಿದಾಗ ಸುಮಾರು ರಾತ್ರಿ 10-30 ಗಂಟೆಗೆ ಯಾರೋ ದುಷ್ಕರ್ಮಿಗಳು ಅಂಗಡಿಯ ಎದುರುಗಡೆಯ ಬಾಗಿಲಿಗೆ ಸೀಮಿಎಣ್ಣೆ ಹಾಕಿ ಬೆಂಕಿ ಕೊಟ್ಟು ಬಾಗಿಲು ಸುಟ್ಟುಹೋಗಿದ್ದು ಮತ್ತು ಬೇರೆ ಬೇರೆ ಜನರು ಹೊಲಿಗೆಗೆ ತಂದ ಬಟ್ಟೆಗಳಿಗೆ ಬೆಂಕಿ ತಾಗಿ ಸಂಪೂರ್ಣ ಸುಟ್ಟು ಹೋಗಿದ್ದು ಇದರ ಪರಿಣಾಮ ಪಿರ್ಯಾದುದಾರರಿಗೆ ಸುಮಾರು 40,000/- ರೂ ನಷ್ಟವುಂಟಾಗಿರುತ್ತದೆ.
6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-02-2015 ರಂದು ಮಧ್ಯಾಹ್ನ ಸುಮಾರು 3.30 ಗಂಟೆಗೆ ಸಾರ್ವಜನಿಕರ ರಸ್ತೆಯಲ್ಲಿ ಪಿರ್ಯಾದಿದಾರರಾದ ಶ್ರೀ ಸುಖ್ ಪಾಲ್ ಪೊಳಲಿ ಎಂಬವರು ತನ್ನ ಬಾಬ್ತು ಕಾರಿನಲ್ಲಿ ಚಾಲಕರಾಗಿದ್ದುಕೊಂಡು ರಕ್ಷತ್ ಶೆಟ್ಟಿ, ಕಲಂದರ್, ಹರೀಶ್, ಕಿರಣ್ ತುಂಗ, ಜಗದೀಶ್ ರವರು ಪ್ರಯಾಣಿಕಾಗಿದ್ದುಕೊಂಡು ಬಂಟ್ಸ್ ಹಾಸ್ಟೇಲ್ ಕಡೆಯಿಂದ ಪಿವಿಎಸ್ ಜಂಕ್ಷನ್ ಕಡೆಗೆ ಹೋಗುತ್ತಾ ಕರಂಗಲ್ಪಾಡಿ ಬಳಿ ಇರುವ ಸೈಂಟ್ ಅಲೋಶಿಯಸ್ ಪ್ರೈಮರಿ ಶಾಲೆಯ ಮೈನ್ ಗೇಟಿನ ಎದುರು ತಲುಪುವಾಗ ಆರೋಪಿತನಾದ ವಾಚ್ ಮಾನ್ ವೇಣುಗೋಪಾಲ ಎಂಬವನು ಕಾರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರ ಕಾರನ್ನು ಮುಂದಕ್ಕೆ ಚಲಾಯಿಸುವಂತೆ ತಿಳಿಸಿ ಟ್ರಾಫಿಕ್ ಜಾಮ್ ಇದ್ದುದರಿಂದ ಪಿರ್ಯಾದಿದಾರರಿಗೆ ಕಾರನ್ನು ಮುಂದಕ್ಕೆ ಚಲಾಯಿಸಲು ಆಗದೇ ಇದ್ದು ಕಾರು ಮುಂದೆ ಹೋಗಲಿಲ್ಲ ಎಂಬ ಉದ್ದೇಶದಿಂದ ಪಿರ್ಯಾದಿದಾರರನ್ನು ಮತ್ತು ರಕ್ಷತ್ ಶೆಟ್ಟಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮತ್ತು ಅಲ್ಲೇ ಇದ್ದ ರಿಕ್ಷಾ ಚಾಲಕರೊಬ್ಬರ ಜೊತೆ ಸೇರಿ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾಗಿದೆ.
No comments:
Post a Comment