Friday, February 20, 2015

Daily Crime Report : 20-02-2015

ದೈನಂದಿನ ಅಪರಾದ ವರದಿ.

ದಿನಾಂಕ 20.02.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-03-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಮೀನುರಾಣಿ ರವರು ಆರೋಪಿ ಪ್ರೇಮ್ ರಾಜ್ ಎಂಬರೊಂದಿಗೆ ಕೇರಳದ ಕೊಲ್ಲಂನಲ್ಲಿ ರಿಜಿಸ್ಟರ್ ಮದುವೆಯಾಗಿ, ನಂತರ ಮಂಗಳೂರಿಗೆ ಅತ್ತಾವರದ ಪ್ರವಿರಾಜ್ ಕಂಪೌಂಡ್ ಬಾಬುಗುಡ್ಡೆ ಯಲ್ಲಿ ವಾಸವಾಗಿದ್ದು,  ಪಿರ್ಯಾದಿಯ ಗಂಡ ಫಿಜಾಮಾಲ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ.  ಪಿರ್ಯಾದಿದಾರರ ಗಂಡ 2 ನೇ ಆರೋಪಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಪಿರ್ಯಾದಿದಾರರ ಬಂಗಾರದ ಚೈನನ್ನು ಮುತ್ತೂಟ್ ಪೈನಾನ್ಸ್ ನಲ್ಲಿ ಅಡವಿಟ್ಟಿದ್ದಲ್ಲದೇ, ಸಂಬಂಧದ ಬಗ್ಗೆ  ಪಿರ್ಯಾದಿದಾರರು ಪ್ರಶ್ನಿಸಿದಾಗ ಕೆನ್ನೆಗೆ  ಹೊಡೆದು ತೊಂದರೆ ಮಾಡಿರುತ್ತಾರೆ. ದಿನಾಂಕ 28-01-2015 ರಂದು ಆರೋಪಿ 1 ಮತ್ತು 2 ನೇ ರವರು ಸೇರಿ  ಪಿರ್ಯಾದಿದಾರರ ತಲೆ ಕೂದಲನ್ನು ಹಿಡಿದು  ಕೈಯಿಂದ, ಕಾಲಿನಿಂದ ಹೊಡೆದು ತೊಂದರೆ ಮಾಡಿದ್ದಲ್ಲದೇ, 1 ನೇ ಆರೋಪಿಯು ವಿಷದ ಇಂಜೆಕ್ಷನ್ ಹಾಕಿ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದು, ವರದಕ್ಷಿಣೆ ತರುವಂತೆ 3 ನೇ ಕೆ.ಜಿ.ಕೆ. ನಾಯರ್, 4 ನೇಯ ಶ್ರೀಮತಿ ಚಂದ್ರಫ್ರಭಾ, 5 ನೇ ಪ್ರೇಮಕೃಷ್ಣ ಕೆ. ಆರೋಪಿಗಳು ಕುಮ್ಮಕ್ಕು ನೀಡಿರುವುದಾಗಿದೆ.

 

2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16.02.2015 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ಮಂಗಳೂರು ತಾಲೂಕು ಕೆಲೆಂಜೂರು ಗ್ರಾಮದ ಬಲವಿನ ಗುಡ್ಡೆ ಹಾಲಿನ ಡೈರಿ ಬಳಿಯಿಂದ ನಡುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹುಡುಗಿಯೊಬ್ಬಳು ನಡೆದುಕೊಂಡು ಹೋಗುತ್ತಿದ್ದ ಸಮಯ ಸುಮಾರು ಬೆಳಿಗ್ಗೆ 09.00 ಗಂಟೆಗೆ ವೆಂಕಟೇಶ್ ಮತ್ತು ಮೋಹನ್ ಎಂಬ ಹೆಸರಿನ ಯುವಕರಿಬ್ಬರು ರಸ್ತೆ ಬದಿಯಲ್ಲಿ ನಿಂತಿದ್ದವರು ಹುಡುಗಿಯನ್ನು ಕಂಡು ಅವರ ಬಳಿಗೆ ಬಂದು ನೀನು ಯಾವ ಶಾಲೆಗೆ ಹೋಗುತ್ತಿ. ನಮ್ಮ  ಜೊತೆ ಬಾ ಎಂದು ಹೇಳಿ ಅಸಭ್ಯವಾಗಿ ಮೈ ಮುಟ್ಟಿ ಕೈಯಲ್ಲಿ ಕೆನ್ನೆಯನ್ನು ಸವಾರಿ ದೌರ್ಜನ್ಯ ನಡೆಸಿದಲ್ಲದೇ ದಿನಾಂಕ 19.02.2015 ರಂದು ಸಂಜೆ ಶಾಲೆ ಬಿಡುವ ವೇಳೆಗೆ ಕೂಡ ಬಂದು ಅದೇ ರೀತಿ ತೊಂದರೆಯನ್ನು ನೀಡಿರುವುದಾಗಿದೆ.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.02.2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 19.02.2015 ಬೆಳಿಗ್ಗೆ 06:00 ಗಂಟೆಯ ಮಧ್ಯೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ ನ್ಯೂ ಪರ್ತಿಪ್ಪಾಡಿ ಮನೆ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಐ. ಸ್ಪೂರ್ತಿ ಕುಂಞ ರವರ ಬಾಬ್ತು ಗೋಡಾನ್ನಲ್ಲಿ ದಾಸ್ತಾನು ಇರಿಸಿದ ತಲಾ 40 ಕೆ.ಜಿ. ತೂಕದ 17 ಚೀಲಗಳ ಪೈಕಿ 14 ಚೀಲ ಅಡಿಕೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಅಡಿಕೆಯ ಅಂದಾಜು ಮೌಲ್ಯ ರೂ.1,00.000/- ಆಗಬಹುದು.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19.02.2015 ರಂದು ಸಮಯ ಸುಮಾರು ಬೆಳಿಗ್ಗೆ 09.30 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಬಿ.ಕೆ. ಲೋಲಾಕ್ಷಿ ರವರು ತಮ್ಮ ಬಾಬ್ತು ಕಾರು ನಂಬ್ರ KA19-MC-7640 ರಲ್ಲಿ ಚಾಲಕಿಯಾಗಿದ್ದು ಬಲ್ಮಠ ಕಡೆಯಿಂದ ನಂದಿಗುಡ್ಡೆ ಕಡೆಗೆ  ಹೋಗುವರೇ ಅತ್ತಾವರ ಆಸ್ಪತ್ರೆ ಎದುರು ತಲುಪಿದಾಗ ಎದುರಿನಿಂದ ಆಟೋರಿಕ್ಷಾ ನಂಬ್ರ KA19-A-5444  ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಮಗುಚಿ ಬಿದ್ದು  ಕಾರಿಗೆ ಬಡಿದು  ಕಾರಿನ ಬಲಭಾಗದ ಹೆಡಲೈಟ್, ಎದುರಿನ ಮಡಗಾರ್ಡ್, ರೇಡಿಯೇಟರ್, ಕೂಲೆಂಟ್ ಇತ್ಯಾದಿ ಜಖಂ ಗೊಂಡಿರುತ್ತದೆ ಮತ್ತು  ಅಪಘಾತದಿಂದ ರಿಕ್ಷಾ ಚಾಲಕ ವೆಂಕಟರಮಣ ಎಂಬುವರಿಗೆ ಗಾಯಗಳಾಗಿ ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ ಹಾಗೂ ಸಹ ಪ್ರಯಾಣಿಕರೊಬ್ಬರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ.

 

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-02-2015 ರಂದು ಪಿರ್ಯಾದಿದಾರರಾದ ಶ್ರೀ ಮನೋಹರ ಸುವರ್ಣ ರವರು ಅತ್ತಾವರದ ವಿಜೇತ ಲೈನ್ನಲ್ಲಿರುವ ತನ್ನ ಅಣ್ಣನ ನಿರ್ಮಾಣ ಹಂತದ ಮನೆಯ  ಬಳಿಯ ರಸ್ತೆಯಲ್ಲಿ ಸಮಯ ಸಂಜೆ 6-15 ಗಂಟೆಯ ವೇಳೆಗೆ  ಅಸ್ತವ್ಯಸ್ಥೆಗೊಂಡಿದ್ದ ರಸ್ತೆಯ ಇಂಟರ್ಲಾಕ್ನ್ನು ಸರಿ ಮಾಡಿಕೊಂಡಿದ್ದಾಗ, ಅಲ್ಲಿಗೆ ಬಂದ ಪಿರ್ಯಾದಿದಾರರ ಪರಿಚಯದ ಮೆಲ್ವಿನ್ಫೆರಾವೂ ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, " ರೋಡ್ರಿಪೇರಿ ಮಲ್ಪರೇ ಏರಿಯಾ" ಎಂದು ಅವಾಚ್ಯ ಶಬ್ದಗಳಿಂದ ಜೋರಾಗಿ ಪಿರ್ಯಾದಿದಾರರಲ್ಲಿ ಕೇಳಿದ್ದು,  ಆಗ ಪಿರ್ಯಾದಿದಾರರ ಆತನಲ್ಲಿ ರಸ್ತೆಯು ನಡೆದಾಡಲು ಕಷ್ಟವಾದ್ದರಿಂದ ಸ್ವಲ್ಪ ಮಟ್ಟಿಗೆ ಸರಿ ಮಾಡುತ್ತಿದ್ದೇನೆಂದು ಹೇಳಿದಾಗ ಮೆಲ್ವಿನ್ನು ಪಿರ್ಯಾದಿದಾರರ ಅಂಗಿಯ ಕಾಲರ್ಪಟ್ಟಿ ಹಿಡಿದು "ನೀನು ಸರಿ ಮಾಡುವುದಾದರೇ , ಪಕ್ಕದ ಚರಂಡಿಯನ್ನು ಕೂಡಾ ಸರಿ ಮಾಡಬೇಕು" ಎಂದು ಅವಾಚ್ಯ ಶಬ್ದಗಳಿಂದ ಪಿರ್ಯಾದಿದಾರರಲ್ಲಿ ಹೇಳಿದ್ದು, ಆಗ ಪಿರ್ಯಾದುದಾರರು ಆತನಲ್ಲಿ "ಅದು ನನ್ನ ಕೆಲಸವಲ್ಲ ಅದಕ್ಕೆ ಸಂಬಂಧಿಸಿದ ಕಾರ್ಪೋರೇಟರ್ರವರು  ಸರಿ ಮಾಡುತ್ತಾರೆ" ಎಂದು ಹೇಳಿದರು. ಆಗ ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ "ಇದು ನಿನ್ನ ಏರಿಯಾವಲ್ಲ ಇಲ್ಲಿ ಬಂದು ನೀನು ಶೋ ಮಾಡುವುದು ಬೇಡ" ಎಂದು ಹೇಳಿ ರಸ್ತೆ ಬದಿಯಲ್ಲಿದ್ದ ಕಲ್ಲಿನಿಂದ ಬಲವಾಗಿ ಹೊಡೆದು ಪಿರ್ಯಾದಿದಾರರ  ಗಲ್ಲದ ಬಳಿ ರಕ್ತಗಾಯ ಮಾಡಿರುವುದಾಗಿದೆ.  ರಸ್ತೆ ವಿಚಾರದಲ್ಲಿ ವಿನಾ ಕಾರಣ ತಗಾದೆ ಎಬ್ಬಿಸಿ ರೀತಿಯ ಹಲ್ಲೆಯಾಗಿರುವುದಾಗಿದೆ.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-02-2015 ರಂದು ಸಂಜೆ 18-30 ಗಂಟೆ ಸಮಯಕ್ಕೆ ಫಿರ್ಯಾದುದಾರರಾದ ಶ್ರೀ ಮೆಲ್ವಿನ್ ಫೆರಾವೂ ರವರ ಮನೆಗೆ ಹೋಗುವ ದಾರಿಯ ಬದಿಯಲ್ಲಿ ನೆರೆ ಮನೆಯ ಮನೋಹರ್ ಹಾಗೂ ಅವರ ತಮ್ಮ ವಿಶ್ವನಾಥ ರವರು ಕೆಲಸಗಾರರಿಂದ ರಸ್ತೆಗೆ ಇಂಟರ್ ಲಾಕ್ ಹಾಕಿಸಿ ಫಿರ್ಯಾದುದಾರರ ಮನೆಗೆ ಹೋಗುವ ನೀರಿನ ಪೈಪ್ ಬಂದ್ ಮಾಡುತ್ತಿರುವಾಗ ಫಿರ್ಯಾದುದಾರರು ಅವರ ಬಳಿಗೆ ಹೋಗಿ ಫಿರ್ಯಾದುದಾರರು "ತೋಡಿಗೆ ಯಾಕೆ ಮಣ್ಣು ಹಾಕಿದ್ದೀರಿ ಅದನ್ನು ತೆಗೆಯಿರಿ" ಎಂದು ಹೇಳಿದಾಗ ಆರೋಪಿಗಳು ಸಮಾನ ಉದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು ಇಂಟರ್ ಲಾಕ್ ತುಂಡಿನಿಂದ ಫಿರ್ಯಾದುದಾರರ ತಲೆಗೆ ಹೊಡೆದು ನಂತರ ಕೈಗಳಿಂದ ಮುಖಕ್ಕೆ ಹೊಡೆದು, ಕಾಲುಗಳಿಂದ ತುಳಿದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಫಿರ್ಯಾದುದಾರರು ನಂತರ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿರುತ್ತಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 18.02.2015 ರಂದು ರಾತ್ರಿ 8:00 ಗಂಟೆಯಿಂದ 19.02.2015 ರಂದು ಬೆಳಿಗ್ಗೆ 05:00 ಗಂಟೆಯ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದುದಾರರಾದ ಶ್ರೀ ಅಶೋಕ್ ವಿನ್ಸೆಂಟ್ ಸರಾಸನ್ ರವರ ಬಾಬ್ತು ಮಂಗಳೂರು ತಾಲೂಕಿನ ಮರೋಳಿಯಲ್ಲಿರುವ ಮೊಬೈಲ್ ರಿಚಾರ್ಜ್ ಅಂಗಡಿಯ ಶಟರ್ಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ 10,000 ರೂ ಬೆಲೆಯ 24 ಇಂಚಿನ ಮೈಕ್ರೋಮ್ಯಾಕ್ಸ್ ಕಂಪನಿಯ ಒಂದು LCD T.V, 15,000 ರೂ ಬೆಲೆಯ  H.P ಕಂಪನಿಯ ಒಂದು ಲ್ಯಾಪ್ಟಾಪ್, 3 ಪೆನ್ಡ್ರೈವ್ಗಳು, ಒಟ್ಟು 2,000 ರೂ ಬೆಲೆಯ ಸಿಮ್ ಕಾರ್ಡ್ಹೊಂದಿರುವ ಒಂದು ನೋಕಿಯಾ ಕಂಪನಿಯ ಮೊಬೈಲ್, 2 ನಂಬ್ರದ ಸಿಮ್ ಕಾರ್ಡ್ಹೊಂದಿರುವ ಒಂದು ನೋಕಿಯಾ ಕಂಪನಿಯಾ ಆಶಾ ಮೊಬೈಲ್, ಒಂದು ಚೈನಾ ಮೊಬೈಲ್ ಸೆಟ್ಹಾಗೂ ಪಿರ್ಯಾದುದಾರರು ಎಲೆಕ್ಟ್ರಿಕಲ್ಸ್ ಗೂಡ್ಸ್ ಬಾಬ್ತು ಇಟ್ಟಿದ್ದ ರೂ. 35,000 ಹಾಗೂ ಮೊಬೈಲ್ ರಿಚಾರ್ಜ್ಹಣ 3,000 ವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳವಾದ ನಗದು ಹಾಗೂ ಸೊತ್ತಿನ ಒಟ್ಟು ಮೌಲ್ಯ ರೂ. 65,000/- ಆಗಿರುವುದಾಗಿದೆ.

No comments:

Post a Comment