Monday, February 9, 2015

MEETING :

                                     ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತೀಯಲ್ಲಿ ಸಭೆ
          ದಿನಾಂಕ 30-01-15 ರಂದು 17.00 ಗಂಟೆಗೆ ಮೂಡುಬಿದ್ರೆ ಪೊಲೀಸ್ ಠಾಣಾ ನಿರೀಕ್ಷಕರಾದ ಅನಂತ ಪದ್ಮನಾಭ ರವರ ಉಪಸ್ಥಿತಿಯಲ್ಲಿ ಭದ್ರತೆ ಬಗ್ಗೆ ಇರುವೈಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ  ನಡೆಸಲಾಯಿತು. ಈ ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು  ಮುತುವರ್ಜಿ ವಹಿಸಿ ಭದ್ರತೆ ಬಗ್ಗೆ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಹಾಗೂ ರಾತ್ರಿ ಸರದಿಯಂತೆ ದೇವಸ್ಥಾನದಲ್ಲಿ ಪಹರೆ ಇರುವಂತೆ ಸೂಚಿಸಲಾಯಿತು. ಹಳ್ಳಿ ಪ್ರದೇಶವಾದ್ದಾರಿಂದ ಅನುಮಾನಸ್ಪದ ಅಪರಿಚಿತ ವ್ಯಕ್ತಿಗಳ  ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಯಾವುದೇ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಕೋರಿಕೊಳ್ಳಲಾಗಿದೆ.  ಜನರು ಅಲ್ಲದೇ ಅಲ್ಲಲ್ಲಿ ಕಳ್ಳತನ ಅಗುತ್ತಿರುವ ಬಗ್ಗೆ ವಿಷಯ ಪ್ರಸ್ತಾಪಿಸಿ  ಯಾವುದೇ ಸಬೆ ಸಮಾರಂಭಕ್ಕೆ ಹೋಗುವಾಗ ಮನೆಯನ್ನು ಭದ್ರಪಡಿಸಿ ಹೋಗಬೇಕು ಮನೆಯನ್ನು ಖಾಲಿ ಬಿಡಬಾರದು ಅಲ್ಲದೇ  ಮಹಿಳೆಯರು ಒಡವೆಗಳನ್ನು ಧರಿಸಿ ಹೋಗುವುದನ್ನು ಕಡಿಮೆ ಮಾಡಬೇಕು. ಅಲ್ಲದೇ ಅಪರಿಚಿತರು ಬೈಕ್ ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಯಿತು. ಹೆಚ್ಚಿನ ಒಡೆವೆಗಳನ್ನು ಬ್ಯಾಂಕ್ ಲಾಕರ್ನಲ್ಲಿಡುವುದು ಉತ್ತಮ ಎಂದು ತಿಳಿಸಲಾಯಿತು. ಈ ಸಭೆಯಲ್ಲಿ ಸುಮಾರು 17 ಜನ ಭಾಗವಹಿಸಿರುತ್ತಾರೆ. ಸಭೆಯನ್ನು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲಾಯಿತು.
    ಇರುವೈಲು ದೇವಸ್ಥಾನದ ಸಭಾಂಗಣದಲ್ಲಿ  ನಡೆಸಿದ ಸಭೆಯ ಪೋಟೋ
        
 
 

No comments:

Post a Comment