Wednesday, February 11, 2015

Daily Crime Reports : 11-02-2015

ದೈನಂದಿನ ಅಪರಾದ ವರದಿ.
ದಿನಾಂಕ 11.02.201512:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
1
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
1
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
1






























1.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಶಾಹೀನ್ ಮಸೂದ್ ರವರು ಮುಕ್ಕ ಶಾಖೆಯ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಹಾಗೂ ಸುರತ್ಕಲ್ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ದಿನಾಂಕ 09-02-2015 ರಂದು ಅಪರಾಹ್ನ 12-13 ಗಂಟೆಗೆ ಹಾಗೂ 12-45 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ಗೆ ಅಪರಿಚಿತ ಮೊಬೈಲ್ ನಂಬ್ರದಿಂದ ಯಾವುದೋ ಓರ್ವ ಅನಾಮದೇಯ ವ್ಯಕ್ತಿ ರಿಸರ್ವ್ ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿಯೂ ಹಾಗೂ ಬ್ಯಾಂಕಿನ ಖಾತೆಯ ಕ್ರಾಸ್ ಚೆಕ್ ಮಾಡಲು ಇರುವುದಾಗಿ ಹೇಳಿ ಪಿರ್ಯಾದಿದಾರರ ಖಾತೆಯ ಹಾಗೂ ಎ.ಟಿ.ಎಂ ನ ವಿವರ ಪಡೆದು NEFT ಮುಖಾಂತರ ಪಿರ್ಯಾದಿಯ ಕಾಪೋರೇಶನ್ ಬ್ಯಾಂಕ್ ಖಾತೆಯಿಂದ  ಸುಮಾರು 21447/- ರೂ ಹಣವನ್ನು ಮೋಸದಿಂದ ಪಡೆದಿರುವುದಾಗಿದೆ.

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27/01/2015 ರಂದು ಸಮಯ 21.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಎಂ. ಸಂತೋಷ್ ಕುಮಾರ್ ರವರು ಮಂಗಳೂರಿನ ಬೀಕಕಟ್ಟೆಯಲ್ಲಿರುವ ಫಿರ್ಯಾದಿಯ ಮನೆಯ ಹತ್ತಿರ ಇರುವಾಗ್ಗೆ ಒಂದು ಇಂಡಿಕಾ ಕಾರಿನಲ್ಲಿ ಸುಮಾರು 6 ಜನ ಆರೋಪಿಗಳು ಬಂದು ಫಿರ್ಯಾದಿಯವರ ಕುತ್ತಿಗೆ ಬಾಗಕ್ಕೆ ಚಾಕುವನ್ನು ಹಿಡಿದು ಹೆದರಿಸಿ, ಬಾಯಿಯನ್ನು ಮುಚ್ಚಿ ಎಳೆದು ಕಾರಿನೊಳಗೆ ಹಾಕಿಕೊಂಡು ಮಂಗಳೂರಿನ ಪಡೀಲ್ ಬಳಿ ಬಂದು ಆರೋಪಿಗಳು ಸಂತೋಶ್ ಕುಮಾರ್ .ಎಸ್ ರವರನ್ನು ಅಲ್ಲಿಗೆ ಬರಮಾಡಿಕೊಂಡು ನಂತರ ಒಂದು ಕಾರಿನಲ್ಲಿ ಫಿರ್ಯಾದಿಯನ್ನು ಕೂರಿಸಿಕೊಂಡು ಇನ್ನೊಂದು ಕಾರು ಹಿಂಬಾಲಿಸುತ್ತ ಮಂಗಳೂರಿನಿಂದ ಸುತ್ತಾಡಿಕೊಂಡು ಮಡಿಕೇರಿಗೆ ಬಂದು ಮಡಿಕೇರಿಯಿಂದ ಕಾಂಡನಕೊಲ್ಲಿ ಎಂಬಲ್ಲಿ ಕಾರಿನಿಂದ ಕೆಳಗೆ ದೂಡಿಹಾಕಿ ರಸ್ತೆಯಲ್ಲಿ ಕಬ್ಬಿಣದ ರಾಡಿನಿಂದ ಹೊಡೆದು ಜೇಬಿನಲ್ಲಿದ್ದ ಒಂದು ಮೊಬೈಲ್ ಹಾಗೂ 3,300 ರೂಪಾಯಿ ಹಣವನ್ನು ಕಿತ್ತುಕೊಂಡು ಫಿರ್ಯಾದಿಯ ಮೈಮೇಲಿದ್ದ ಶರ್ಟನ್ನು ಹರಿದು ಕಣ್ಣಿಗೆ ಬಾಯಿಗೆ ಕಟ್ಟಿ ಬಿಟ್ಟು, ಅಷ್ಟರಲ್ಲಿ ಆ ಮಾರ್ಗವಾಗಿ ಯಾವುದೋ ಒಂದು ವಾಹನ ಬರುತ್ತಿರುವುದನ್ನು ಆರೋಪಿಗಳು ಕಂಡು ಪರಾರಿಯಾಗಿದ್ದು, ನಂತರ ಕೆಲವು ಸಮಯದ ನಂತರ ಪುನಃ ಬಂದು ಫಿರ್ಯಾದಿಯನ್ನು ಹುಡುಕಾಡಿದಲ್ಲು ಫಿರ್ಯಾದಿ ಅವಿತು ಕುಳಿತುಕೊಂಡಿದ್ದರಿಂದ ಆರೋಪಿಗಳಿಗೆ ಪತ್ತೆಯಾಗದೆ ಹೋಗಿರುವುದಾಗಿಯೂ ಹಾಗೂ ಅಲ್ಲಿಗಾಗಿ ಬಂದ ಆಟೋಚಾಲಕ ಫಿರ್ಯಾದಿಯನ್ನು ಕರೆದುಕೊಂಡು ಬಂದು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲುಪಡಿಸಿರುವುದಾಗಿದೆ. ನಂತರ ಕೊಡಗು ಜಿಲ್ಲೆಯ ಮಡಿಕೇರಿ ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬಳಿಕ ವರ್ಗಾವಣೆಯಾಗಿ ತನಿಖೆಗೆ ಮೇಲಾಧಿಕಾರಿಯವರ ಮುಖಾಂತರ ಮಂಗಳೂರು ಪೂರ್ವ ಠಾಣೆಗೆ ಬಂದಿರುವುದಾಗಿದೆ.

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/02/2015 ರಂದು ಸಮಯ ಸುಮಾರು ಬೆಳಗ್ಗೆ 6:00 ಗಂಟೆಗೆ ಮಂಗಳೂರು ನಗರದ ಹರಿಪದವು ಕ್ರಾಸ್ ಎಂಬಲ್ಲಿ ಫಿರ್ಯಾದುದಾರರಾದ ಡೆಲೋನ್ ಕೊಲಾಸೋ ರವರ ತಂದೆ ಅವರ ಬಾಬ್ತು ಸ್ಕೂಟರ್ ನಂಬ್ರ  KA-19-EH-9379 ನೇ ದಲ್ಲಿ ಸವಾರನಾಗಿದ್ದುಕೊಂಡು ಬೊಂದೆಲ್ ಕಡೆಯಿಂದ ಹರಿಪದವು ಕ್ರಾಸ್ ಕಡೆಗೆ ಹೋಗುವ ಡಿವೈಡರ್ ಬಳಿ ಸ್ಕೂಟರ್ ನಿಲ್ಲಿಸಿದಾಗ  KA-19-MA-403 ನೇ ನಂಬ್ರದ ಜೀಪಿನ ಚಾಲಕ ಶರ್ಬತ್ ಕಟ್ಟೆ ಕಡೆಯಿಂದ ವಿಮಾನ ನಿಲ್ದಾಣ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಜೀಪನ್ನು ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ಎಡಕಾಲು,ಎಡಕೈಗೆ, ಎಡಕಣ್ಣಿಗೆ ಹಾಗೂ ತಲೆಗೆ ಗಂಭಿರ ಸ್ವರೂಪದ ಗಾಯವಾಗಿ  A J ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/02/2015 ರಂದು ಸಮಯ ಸುಮಾರು 12:25 ಗಂಟೆಗೆ ಮಂಗಳೂರು ನಗರದ ಜ್ಯೋತಿ ಕಡೆಯಿಂದ ವಾಹನ ನಂಬ್ರ KA-19-AA-6254 ನೆ ದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಾದ ಶ್ರೀ ಯಶವಂತ್ ಕುಮಾರ್ ಎಸ್. ರವರ ರಸ್ತೆ ನಿರ್ಮಾಣ ಕೆಲಸಕ್ಕೆ ಅಡ್ಡಿ ಉಂಟು ಮಾಡಿರುತ್ತಾರೆ.

5.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-02-2015ರಂದು ಪಿರ್ಯಾಧಿದಾರರಾದ ಶ್ರೀ ಇಮ್ತಿಯಾಜ್ ಎಂಬವರು ಮೂರು ಕಾವೇರಿ ಎಂಬಲ್ಲಿಗೆ ಮಧ್ಯಾಹ್ನ ಸುಮಾರು 12 ಗಂಟೆಗೆ ಹೋಗಿದ್ದ ಸಮಯ ಮೂಲ್ಕಿ ಕಡೆಯಿಂದ ಕಟೀಲು ಕಡೆಗೆ ಕೆಎ-19-ಎಮ್.ಸಿ-8985 ನಂಬ್ರದ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಭರತ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ, ಮೂಡಬಿದ್ರೆ ಕಡೆಯಿಂದ ಮೂಲ್ಕಿ ಕಡೆಗೆ ಬರುತಿದ್ದ ಕೆಎ-19-ವಿ-3523 ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಅದರ ಸವಾರ ಹುಸೈನಾರ್ ಎಂಬಾತನು ಮೋಟಾರು ಸೈಕಲು ಸಮೇತ ರಸ್ತೆಗೆ ಬಿದ್ದು, ತಲೆ ಹಣೆ, ಮುಖಕ್ಕೆ ಗಂಭೀರ ತರದ ಗಾಯವಾಗಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಮಂಗಳೂರು ಫಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10-02-2015 ರಂದು ಮಂಗಳೂರು ತಾಲೂಕಿನ ಎಡಪದವು ಗ್ರಾಮದ ಪಾಲ್ಕನ್ ಎಂಬ ಹೆಸರಿನ ಕಪ್ಪುಕಲ್ಲಿನ ಕೋರೆಯಲ್ಲಿ ಅದರ ಮಾಲಕರಾದ ಮನೋಜ್, ಗಫೂರ್ ಮತ್ತು ಮ್ಯಾನೇಜರ್ ಕುಂಞ ರವರು ಎಂಬವರು ಕಾರ್ಮಿಕರಿಗೆ ಸೂಕ್ತ ರಕ್ಷಣಾ ಸಲಕರಣೇ ನೀಡದೇ ಹಾಗೂ ಮುಂಜಾಗೃತಾ ಕ್ರಮಗಳನ್ನು ಜರುಗಿಸದೇ ಕೋರೆಯಲ್ಲಿ ಸ್ವಚ್ಚತಾ ಕೆಲಸವನ್ನು ಮಾಡುವಂತೆ ತಿಳಿಸಿದ್ದರಿಂದ ಮಧ್ಯಾಹ್ನ ಸುಮಾರು 12-30 ಗಂಟೆ ಸಮಯಕ್ಕೆ ಸ್ವಚ್ಚತೆಯನ್ನು ಮಾಡುತ್ತಿದ್ದ ಹಕ್ಕಿಬುಲ್ಲಾ ಎಂಬವರ ಮೈಮೇಲೆ ಕಲ್ಲು ಹಾಗೂ ಮಣ್ಣು ಜರಿದು ಬಿದ್ದು ತೀವೃತರದ ಗಾಯಗೊಂಡು ಅಬೋದಾವಸ್ಥೆಯಲ್ಲಿ  ಮಂಗಳೂರು ನಿಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-01-2015 ರಂದು 22-00 ಗಂಟೆಯಿಂದ ದಿನಾಂಕ 12-01-2015ರಂದು 01-00 ಗಂಟೆಯ ಮದ್ಯೆ ಯಾರೋ ಕಳ್ಳರು ಪೋರಂ ಪಿಜಾ ಮಹಲ್ ಹೊರಗಡೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಪಿರ್ಯಾದುದಾರರಾದ ಶ್ರೀ ನುಥೇಟಿ ಮೋಹನ್ ರವರ ಆರ್. ಸಿ. ಮಾಲಕತ್ವದ 2004ನೇ ಮೋಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 30000/- ಬೆಲೆ ಬಾಳುವ AP 16 AL 5038 ನೊಂದಣಿ ಸಂಖ್ಯೆಯ HERO HONDA PASSION PLUS ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ರೇವತಿ ರವರ ವಾಸವಾಗಿರುವ ಪುಳಿತ್ತಡಿ ಎಂಬಲ್ಲಿ ಮನೆಯ ಬಳಿಯಲ್ಲಿರುವ ಹಟ್ಟಿಯಲ್ಲಿ 8 ದನಗಳನ್ನು ಸಾಕುತ್ತಿದ್ದು, ದಿನಾಂಕ  09-02-2015 ರಂದು ಹಗಲು ವೇಳೆಯಲ್ಲಿ ಮೇಯಲು ಬಿಟ್ಟಿದ್ದ ದನಗಳು ಮಧ್ಯಾಹ್ನದ ವೇಳೆ ಹಟ್ಟಿಗೆ ಬಂದು ಸೇರುತ್ತಿದ್ದು, ರಾತ್ರಿ ಸಮಯ ಸುಮಾರು 10-00 ಗಂಟೆಗೆ ದನಗಳಿಗೆ ನೀರು ಆಹಾರ ನೀಡಿದ್ದು, ಅಲ್ಲದೆ ರಾತ್ರಿ ಸುಮಾರು 1-00 ಗಂಟೆಗೆ ಬಂದು ನೋಡಿದಾಗ ಎಲ್ಲಾ ದನಗಳು ಹಟ್ಟಿಯಲ್ಲಿದ್ದು, ಬೆಳಿಗ್ಗೆ ಸಮಯ 05-00 ಗಂಟೆಗೆ ಹಾಲು ಕರೆಯಲು ಹಟ್ಟಿಗೆ ಬಂದು ನೋಡಿದಾಗ  8 ದನಗಳ ಪೈಕಿ 1 ದನವನ್ನು ( ಕೆಂಪು ಬಣ್ಣದ ಸುಮಾರು ಪ್ರಾಯ 2 ವರ್ಷ 4 ತಿಂಗಳ ಗರ್ಭಿಣಿ ದನ)   ಕಟ್ಟಿದ ಹಗ್ಗವನ್ನು ತುಂಡರಿಸಿ ದಿನಾಂಕ 10-02-2015 ರಂದು ರಾತ್ರಿ ಸಮಯ ಸುಮಾರು 02-00 ಗಂಟೆಯಿಂದ ಬೆಳಿಗ್ಗೆ 05-00 ಗಂಟೆಯ ಮಧ್ಯೆ ಯಾರೋ ಕಳ್ಳರು ದನವನ್ನು ಹಟ್ಟಿಯಿಂದ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ದನದ ಅಂದಾಜು ಮೌಲ್ಯ ಸುಮಾರು 20,000/-ರೂ. ಆಗಬಹುದು.

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ವಾಸುದೇವ್ ಪೂಜಾರಿ ರವರ ಮಗನಾದ ಪ್ರಸಾದ ಎಂಬವರು ಮುಡಿಪುವಿನ ಇನ್ಪೊಸಿಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ : 07.02.2015 ರಂದು ಬೆಳಿಗ್ಗೆ 10.00 ಗಂಟೆಗೆ ಕೆಲಸಕ್ಕೆಂದು ಹೋದವರು ಈವರೆಗೆಗೂ ಬಾರದೇ ಕಾಣೆಯಾಗಿರುವುದಾಗಿದೆ. ಕಾಣೆಯಾದವರ ಚಹರೆ ವಿವರ: 1)ಪ್ರಾಯ – 34 ವರ್ಷ, 2)ಬಣ್ಣ - ಗೋದಿ ಮೈ ಬಣ್ಣ, 3)ಉಡುಗೆ -ಆಕಾಶ ನೀಲಿ ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ, 4)ಬಾಷೆ- ಕನ್ನಡ, ತುಳು, ಹಿಂದಿ ಇಂಗ್ಲೀಷ.

No comments:

Post a Comment